ಯಕ್ಷಾಂಗಣದಿಂದ ಎ.ಕೆ.ನಾರಾಯಣ ಶೆಟ್ಟಿ-ಮಹಾಬಲ ಶೆಟ್ಟಿ ಸಂಸ್ಮರಣೆ

Friday, November 16th, 2018
yakshagana

ಮಂಗಳೂರು: ‘ಯಕ್ಷಗಾನ ತಾಳಮದ್ದಳೆ ಕಾರ್ಯಗಳಿಗೆ ಯಾವುದೇ ಪ್ರಾಯೋಜಕರಿಲ್ಲದ ಹೊತ್ತಿನಲ್ಲಿ ಸ್ವಂತ ದುಡಿಮೆಯ ಹಣದಿಂದ ಆ ಕಾಲದ ಮೇರು ಕಲಾವಿದರ ಕೂಟಗಳನ್ನು ಏರ್ಪಡಿಸುತ್ತಿದ್ದ ಹಿರಿಯರು ಇಂದಿನ ಸಂಘಟಕರಿಗೆ ಮಾದರಿ. ಅವರು ಯಕ್ಷಗಾನಕ್ಕಾಗಿ ಬದುಕಿದವರು, ತಮ್ಮ ಬದುಕನ್ನು ಆ ಕಲೆಗಾಗಿ ತೇದವರು’ ಎಂದು ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಪಳ್ಳಿ ರಮಾನಾಥ ಹೆಗ್ಡೆ ಹೇಳಿದ್ದಾರೆ. ಯಕ್ಷಾಂಗಣ ಮಂಗಳೂರು ಮತ್ತು ಕರ್ನಾಟಕ ಯಕ್ಷಭಾರತಿ ಪುತ್ತೂರು ವತಿಯಿಂದ ಕನ್ನಡ ರಾಜ್ಯೋತ್ಸವ ಕಲಾಸಂಭ್ರಮದ ಪ್ರಯುಕ್ತ ನಗರದ ಎಸ್ ಡಿ ಎಮ್ ಲಾ […]

ರಮಾನಾಥ ರೈಯವರು ಕಾಂಗ್ರೆಸ್​​ನಲ್ಲಿ‌ ಈಗ ಸಕ್ಕರೆ ಇಲ್ಲದ ಚಹಾದಂತಾಗಿದ್ದಾರೆ: ಹರಿಕೃಷ್ಣ ಬಂಟ್ವಾಳ

Friday, November 16th, 2018
harikrishna

ಮಂಗಳೂರು: ರಮಾನಾಥ ರೈಯವರು ಕಾಂಗ್ರೆಸ್ನಲ್ಲಿ‌ ಈಗ ಸಕ್ಕರೆ ಇಲ್ಲದ ಚಹಾದಂತಾಗಿದ್ದಾರೆ. ಅಧಿಕಾರ ಇಲ್ಲದೆ ಚಡಪಡಿಸುವ ಸ್ಥಿತಿಯಲ್ಲಿದ್ದಾರೆ ಎಂದು ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿಂದು ನಡೆದ ಸಭೆಯಲ್ಲಿ ವ್ಯಂಗ್ಯವಾಡಿದರು. ರಮಾನಾಥ ರೈ ಅವರು ಇತ್ತೀಚೆಗೆ ನಡೆದ ಪ್ರತಿಭಟನೆಯೊಂದರಲ್ಲಿ ಸಂಸದ ನಳಿನ್‌ಕುಮಾರ್ ಕಟೀಲು ಸತ್ತ ಹಾಗೆ. ಇನ್ನು ಅವರ ಶವ ಸಂಸ್ಕಾರ ಬಾಕಿ ಇದೆ ಎಂದು ಅವಾಚ್ಯವಾಗಿ ನಿಂದಿಸಿದ್ದಾರೆ. ಒಬ್ಬ ಜನಪ್ರತಿನಿಧಿಯ ಶವ ಸಂಸ್ಕಾರವನ್ನು‌ ನೋಡಬೇಕೆಂಬ ಹಸಿವು ಇರುವ ರಮಾನಾಥ ರೈ ಅವರು ಜಿಹಾದಿ […]

ವಿದ್ಯಾರ್ಥಿ ಸಿರಿ ಮನುಷ್ಯತ್ವದ ರೂಪದಲ್ಲಿಯೂ ಸಾಕಾರಗೊಳ್ಳಬೇಕು: ವಿನಯ ಪ್ರಸಾದ್​​

Friday, November 16th, 2018
vinaya-prasad

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ನಡೆಯುವ ಆಳ್ವಾಸ್ ವಿದ್ಯಾರ್ಥಿ ಸಿರಿ ವಿದ್ಯಾರ್ಥಿ ಸಾಹಿತ್ಯ-ಸಂಸ್ಕೃತಿ ಸಮ್ಮೇಳನವನ್ನು ಹಿರಿಯ ನಟಿ ವಿನಯ ಪ್ರಸಾದ್ ಇಂದು ಬೆಳಗ್ಗೆ ಮೂಡುಬಿದಿರೆಯಲ್ಲಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿ ಸಿರಿ ಅಂದರೆ ಬರೀ ಮಾರ್ಕ್ಸ್ ಮಟ್ಟಿಗೆ ಮಾತ್ರ ಅಲ್ಲ. ಮನುಷ್ಯತ್ವದ ರೂಪದಲ್ಲಿ ಕೂಡಾ ಅದು ಸಾಕಾರಗೊಳ್ಳಬೇಕು. ಮನೆಗೆ ಉಪಕಾರಿಗಳಾಗಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಈ ಸಂದರ್ಭದಲ್ಲಿ ಆಳ್ವಾಸ್ ವಿದ್ಯಾರ್ಥಿ ಸಿರಿಯ ರೂವಾರಿ ಡಾ.ಎಂ.ಮೋಹನ್ ಆಳ್ವ, ನುಡಿಸಿರಿಯ ಆಯೋಜನೆಯ ಬಗ್ಗೆ ಮಾತನಾಡಿದರು. ಕಾಸರಗೋಡಿನ ಚಿನ್ಮಯ […]

ವಿಶ್ವ ತುಳು ಸಮ್ಮೇಳನ-2018: ಡಾ.ವೀರೇಂದ್ರ ಹೆಗ್ಗಡೆ ಅವರಿಗೆ ಸಾಂಪ್ರದಾಯಿಕ ಆಹ್ವಾನ ಪತ್ರಿಕೆ ನೀಡಿಕೆ

Thursday, November 15th, 2018
veerendra-hegde

ಮಂಗಳೂರು: ಡಿಸೆಂಬರ್ 2009ರಲ್ಲಿ ಉಜಿರೆಯಲ್ಲಿ ನಡೆಸಲ್ಪಟ್ಟ ವಿಶ್ವ ತುಳು ಸಮ್ಮೇಳನ ತುಳುನಾಡ ಐತಿಹಾಸದಲ್ಲೇ ಸ್ವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಮಹಾಸಮ್ಮೇಳನವಾಗಿ ಮೂಡಿತ್ತು. ಪ್ರತೀಯೋರ್ವ ತುಳುವರ ಹಿರಿಮೆಯ ಸಮ್ಮೇಳನವೂ ಆಗಿತ್ತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಅಖಿಲ ಭಾರತ ತುಳು ಒಕ್ಕೂಟ ಇವುಗಳ ಸಾರಥ್ಯದಲ್ಲಿ ಮಂಗಳೂರು ಅಡ್ಯಾರ್‌ನಲ್ಲಿ ನಡೆಸಲ್ಪಟ್ಟ ವಿಶ್ವ ತುಳು ಸಮ್ಮೇಳನವೂ ಭಿನ್ನವಾಗಿಯೇ ಮೂಡಿತ್ತು. ಇದು ಸಾಗರೋತ್ತರ ದುಬಾಯಿನಲ್ಲಿ ಜರುಗುವ ಸಮ್ಮೇಳನ ಎಲ್ಲಕ್ಕೂ ಮೀರಿ ಮತ್ತೊಂದು ಮೈಲುಗಲ್ಲು ಆಗಿ ಮೂಡಲಿದೆ ಎನ್ನುವ ಆಶಯ ನನಗಿದೆ ಎಂದು ಶ್ರೀ ಕ್ಷೇತ್ರ […]

ಸಚಿವ ಸ್ಥಾನ ನೀಡಿದರೆ ಪ್ರಮಾಣಿಕವಾಗಿ ನಿರ್ವಹಿಸುತ್ತೇನೆ: ಅನಿತಾ ಕುಮಾರಸ್ವಾಮಿ

Thursday, November 15th, 2018
Anitha-kumarswamy

ಬೆಂಗಳೂರು: ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಶಾಸಕರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ವಿಧಾನಸೌಧದ ಸ್ಪೀಕರ್ ರಮೇಶ್ ಕುಮಾರ್ ಕಚೇರಿಯಲ್ಲಿ ತಮ್ಮ ಬೆಂಬಲಿಗರ ಜತೆಗೂಡಿ ಸರಿಯಾಗಿ 3.30ಕ್ಕೆ ಪ್ರಮಾಣ ವಚನ ಸ್ವೀಕರಿಸಿದರು. ಭಗವಂತ ಹಾಗೂ ಸತ್ಯ ನಿಷ್ಠೆ ಹೆಸರಲ್ಲಿ ಅನಿತಾ ಕುಮಾರಸ್ವಾಮಿ ರಾಮನಗರ ಶಾಸಕರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ರಮೇಶ್ ಕುಮಾರ್ ಪ್ರಮಾಣ ವಚನ ಬೋಧಿಸಿದರು.‌ ಪ್ರಮಾಣವಚನ ಸ್ವೀಕರಿಸಿದ ಬಳಿಕ‌ ಮಾತನಾಡಿದ ಅನಿತಾ ಕುಮಾರಸ್ವಾಮಿ, ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ.‌ ಒಂದು ವೇಳೆ ಸಚಿವ ಸ್ಥಾನ […]

ಇಂಡಿಯನ್​ ಪ್ರೀಮಿಯರ್​ ಲೀಗ್: ಈ ಮೂವರು ಸ್ಟಾರ್​ ಪ್ಲೇಯರ್ಸ್​ ಕೈಬಿಡಲು ಪ್ರಾಂಚೈಸಿಗಳ ನಿರ್ಧಾರ..!

Thursday, November 15th, 2018
manish-pandey

ಮುಂಬೈ: ಕಳೆದ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ದುಬಾರಿ ಬೆಲೆ ನೀಡಿ ಸ್ಟಾರ್ ಪ್ಲೇಯರ್ಸ್ ಖರೀದಿ ಮಾಡಿದ್ದ ಕೆಲ ಪ್ರಾಂಚೈಸಿಗಳು ಕೈಸುಟ್ಟುಕೊಂಡಿದ್ದು ಗೊತ್ತೇ ಇದೆ. ಇದೇ ಕಾರಣಕ್ಕಾಗಿ ಈ ಸಲ ಅವರನ್ನ ತಂಡದಿಂದ ಕೈಬಿಡಲು ಪ್ರಮುಖ ಪ್ರಾಂಚೈಸಿಗಳು ನಿರ್ಧಾರ ಮಾಡಿರುವ ಹಾಗೇ ಕಾಣಿಸುತ್ತದೆ. 2018ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅತಿ ದುಬಾರಿ ಬೆಲೆಗೆ ಬಿಕರಿಯಾಗಿದ್ದ ಕನ್ನಡಿಗರಾದ ಮನೀಷ್ ಪಾಂಡೆ, ಇಂಗ್ಲೆಂಡ್ನ ಬೆನ್ ಸ್ಟೋಕ್ಸ್ ಹಾಗೂ ಜಯದೇವ್ ಉನ್ಕದತ್ ಟೂರ್ನಿಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನು ಏನು ನೀಡಿಲ್ಲ. ಹೀಗಾಗಿ ಈ […]

ನನಗೆ ವೈಯಕ್ತಿಕವಾಗಿ ಮೀ ಟೂದಂತಹ ಅನುಭವಗಳಾಗಿಲ್ಲ: ಶುಭಾ ಪುಂಜಾ

Thursday, November 15th, 2018
shubha-punja

ಹುಬ್ಬಳ್ಳಿ: ಕನ್ನಡ ಚಿತ್ರರಂಗದಲ್ಲಿ ಕಳೆದ 12 ವರ್ಷಗಳಿಂದ ನಾನು ಇದ್ದೇನೆ. ನನಗೆ ವೈಯಕ್ತಿಕವಾಗಿ ಮೀ ಟೂದಂತಹ ಅನುಭವಗಳಾಗಿಲ್ಲ ಎಂದು ನಟಿ ಶುಭಾ ಪುಂಜಾ ಹೇಳಿಕೆ ನೀಡಿದ್ದಾರೆ. ನಗರದಲ್ಲಿಂದು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಮಾತನಾಡಿದ ಅವರು, ಮೀಟೂ ಬಗ್ಗೆ ಇರುವ ಆರೋಪ ಪ್ರತ್ಯಾರೋಪವನ್ನು ಚಲನಚಿತ್ರ ವಾಣಿಜ್ಯ ಮಂಡಳಿಯೇ ಬಗೆಹರಿಸುತ್ತದೆ. ಕನ್ನಡ ಫಿಲ್ಮ್ ಇಂಡಸ್ಟ್ರಿಯಲ್ಲಿ ನಾನು 10-12 ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. ನಿರ್ದೇಶಕರು, ನಿರ್ಮಾಪಕರು ಹಾಗೂ ಅಭಿಮಾನಿಗಳಿಂದ ಪ್ರೀತಿ, ಗೌರವ ಸಿಕ್ಕಿದೆ. ಹೀಗಾಗಿ ಕನ್ನಡ ಇಂಡಸ್ಟ್ರಿಯಲ್ಲಿ ನನಗೆ ಯಾವುದೇ […]

ಫ್ಯಾಷನ್​ ಡಿಸೈನರ್ ರನ್ನು ಕೊಚ್ಚಿ ಕೊಂದ ಮನೆಕೆಲಸದವರು..!

Thursday, November 15th, 2018
fasion-designer

ಡೆಲ್ಲಿ: ದೇಶದ ರಾಜಧಾನಿ ದೆಹಲಿಯಲ್ಲಿ ದಾರುಣ ಘಟನೆಯೊಂದು ಬೆಳಕಿಗೆ ಬಂದಿದೆ. ಮನೆಯಲ್ಲೇ ಕೆಲಸಮಾಡುತ್ತಿದ್ದ ಆಳುಗಳು ಫ್ಯಾಷನ್ ಡಿಸೈನರ್ ಒಬ್ಬರನ್ನ ಕೊಚ್ಚಿ ಕೊಲೆಮಾಡಿರುವ ಘಟನೆ ನಡೆದಿದೆ. ಹೌದು, ವಸಂತ್ಕುಂಜ್ ನಿವಾಸಿ 53 ವರ್ಷದ ಮಾಲಾ ಲಖಾನಿ ಫ್ಯಾಶನ್ ಡಿಸೈನರ್ನನ್ನು ಆಕೆಯ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಆಳುಗಳೇ ಕೊಚ್ಚಿ ಕೊಲೆಮಾಡಿದ್ದಾರೆ. ಇಷ್ಟೇ ಅಲ್ಲದೇ ಆಕೆಯ ಸಹಾಯಕ್ಕೆ ಬಂದ ಮನೆ ಕಾಯುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಬಹುದ್ದೂರ್ ಸಿಂಗ್ (42)ನನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಇನ್ನು ಈ ಸುದ್ದಿ ಪೊಲೀಸರಿಗೆ ತಿಳಿದಿದ್ದು, ಪೊಲೀಸರು […]

ಎಂಡೋಸಲ್ಫಾನ್‌ ಪೀಡಿತ ಪ್ರದೇಶಗಳ ಬಾವಿ ಹಾಗೂ ಬೋರ್‌ವೆಲ್‌ಗ‌ಳ ನೀರಿನ ಪರೀಕ್ಷೆಗೆ ಸೂಚನೆ

Thursday, November 15th, 2018
karnataka-3

ಮಂಗಳೂರು: ಎಂಡೋಸಲ್ಫಾನ್‌ ಪೀಡಿತ ಪ್ರದೇಶಗಳ ಬಾವಿ ಹಾಗೂ ಬೋರ್‌ವೆಲ್‌ಗ‌ಳ ನೀರಿನಲ್ಲಿ ಇನ್ನೂ ವಿಷಕಾರಿ ಅಂಶಗಳಿವೆಯೇ ಎಂಬುದನ್ನು ಪತ್ತೆಹಚ್ಚಲು ಜಂಟಿ ಸಮಿತಿ ರಚಿಸುವಂತೆ ವಿಧಾನ ಪರಿಷತ್‌ ಸರಕಾರಿ ಭರವಸೆಗಳ ಸಮಿತಿ ಅಧ್ಯಕ್ಷ ಕೆ.ಸಿ. ಕೊಂಡಯ್ಯ ಜಿಲ್ಲಾಧಿಕಾರಿಗೆ ಸೂಚಿಸಿದರು. ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಎಂಡೋ ಸಂತ್ರಸ್ತರಿಗೆ ಹಾಗೂ ಮೃತ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡುವ ಕುರಿತು ವಿಧಾನ ಪರಿಷತ್ತಿನ ಸರಕಾರಿ ಭರವಸೆಗಳ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ 92 ಗ್ರಾಮಗಳಲ್ಲಿ ಎಂಡೋ ಸಿಂಪಡಿಸಲಾಗಿದ್ದು, ಆ ಪ್ರದೇಶದ ಪ್ರತಿಯೊಂದು […]

ಸಹಕಾರಿ ಕ್ಷೇತ್ರದಲ್ಲಿ ದ.ಕ. ಜಿಲ್ಲೆ ವಿಶಿಷ್ಟ ಸಾಧನೆ ದೇಶಕ್ಕೆ ಮಾದರಿ: ಡಾ. ರಾಜೇಂದ್ರ ಕುಮಾರ್‌

Thursday, November 15th, 2018
milk

ಮಂಗಳೂರು: ಸಹಕಾರಿ ಕ್ಷೇತ್ರದಲ್ಲಿ ದ.ಕ. ಜಿಲ್ಲೆ ವಿಶಿಷ್ಟ ಸಾಧನೆ ಮಾಡಿದ್ದು, ದೇಶಕ್ಕೆ ಮಾದರಿಯಾಗಿದೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಅಧ್ಯಕ್ಷ ಡಾ. ಎಂ. ಎನ್‌. ರಾಜೇಂದ್ರ ಕುಮಾರ್‌ ಹೇಳಿದರು. ದ.ಕ. ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಮತ್ತು ದ.ಕ. ಜಿಲ್ಲಾ ಸಹಕಾರಿ ಯೂನಿಯನ್‌ ಮಂಗಳೂರು ವತಿಯಿಂದ ಕುಲಶೇಖರ ಡೇರಿ ಆವರಣದಲ್ಲಿ 65ನೇ ಸಹಕಾರ ಸಪ್ತಾಹದ ಅಂಗವಾಗಿ ಬುಧವಾರ ಆಯೋಜಿಸಿದ ಸಹಕಾರಿ ಮಾರಾಟ, ಸಂಸ್ಕರಣ ಮತ್ತು ಶೇಖರಣೆ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಶಾಸಕ ವೇದವ್ಯಾಸ […]