ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಕಾರ್ತಿಕ ಲಕ್ಷ ದೀಪೋತ್ಸವವು ಇಂದಿನಿಂದ ಆರಂಭ

Thursday, November 24th, 2016
laksha-deepotsava

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಕಾರ್ತಿಕ ಲಕ್ಷ ದೀಪೋತ್ಸವವು ಇಂದಿನಿಂದ ಆರಂಭವಾಗಲಿದೆ. ಶ್ರೀ ಮಂಜುನಾಥ ಸ್ವಾಮಿಯ ಹೊಸಕಟ್ಟೆ ಉತ್ಸವದ ಮೂಲಕ ಲಕ್ಷ ದೀಪೋತ್ಸವ ಪ್ರಾರಂಭವಾಗಲಿದೆ. ಧರ್ಮಸ್ಥಳದಲ್ಲಿರುವ ಎಸ್‌‌‌ಡಿಎಂ ಪ್ರೌಢಶಾಲಾ ಕ್ರೀಡಾಂಗಣದಲ್ಲಿ 39ನೇ ವರ್ಷದ ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ ಸಿಗಲಿದೆ. ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ವಸ್ತು ಪ್ರದರ್ಶನ ಉದ್ಘಾಟಿಸಲಿದ್ದಾರೆ. ನಂತರ ನ. 27ರಂದು ನಡೆಯುವ ಸರ್ವಧರ್ಮ ಸಮ್ಮೇಳನದ 84ನೇ ಅಧಿವೇಶನವು ಶಿರಹಟ್ಟಿಯ ಫಕೀರ ಸಿದ್ದರಾಮ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ನಡೆಯಲಿದೆ. […]

ಚುನಾವಣೆಗೆ ಸಿದ್ಧತೆ ಈಗಲೇ ಆರಂಭವಾಗಲಿ : ಬಿಜೆಪಿ ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ

Wednesday, November 23rd, 2016
bjp yuva morcha

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವಮೋರ್ಚಾ ವತಿಯಿಂದ ಎರಡನೇ ಕಾರ್ಯಕಾರಿಣಿ ಬುಧವಾರ ಮಂಗಳೂರಿನ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆಯಿತು. ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ಬಿಜೆಪಿ ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ದೇಶದಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಒಳ್ಳೆಯ ಆಡಳಿತ ದೇಶಕ್ಕೆ ದೊರೆತಿದೆ. ಕೇಂದ್ರದ ಯೋಜನೆಗಳನ್ನು ಜನತೆಗೆ ತಲುಪಿಸುವ ಕೆಲಸ ಕಾರ್ಯಕರ್ತರಿಂದ ಆಗಬೇಕು. ಅದರೊಂದಿಗೆ ಮುಂದಿನ ಚುನಾವಣೆಯ ದೃಷ್ಟಿಯಿಂದ ಈಗಲೇ ಸಿದ್ಧತೆ ಆರಂಭಿಸಬೇಕು ಎಂದರು. ಯುವಮೋರ್ಚಾ ಕಾರ್ಯಕರ್ತರು ಮನಸ್ಸು ಮಾಡಿದರೆ ಯಾವುದೇ ಬದಲಾವಣೆ ಸಾಧ್ಯ. ಪ್ರಸ್ತುತ […]

ಅದ್ದೂರಿ ಮದುವೆ ಬಗ್ಗೆ ಟೀಕಿಸುತ್ತಿದ್ದ ಸಿಎಂ ಸಿದ್ದರಾಮಯ್ಯ ಈ ದುಂದು ವೆಚ್ಚ ಮಾಡಿದ್ದು ಸರಿಯೇ: ಎಚ್.ಡಿ.ಕುಮಾರಸ್ವಾಮಿ

Wednesday, November 23rd, 2016
siddaramaiah

ಬೆಳಗಾವಿ: ಅದ್ದೂರಿ ಮದುವೆ ಎಂಬ ಕಾರಣಕ್ಕೆ ಬಿಜೆಪಿಯ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಪುತ್ರಿ ಬ್ರಹ್ಮಿಣಿ ಮದುವೆಯಿಂದ ದೂರ ಉಳಿದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅದೇ ಕಾರಣಕ್ಕೆ ತಮ್ಮ ಸಚಿವ ಸಂಪುಟದ ಸಹೋದ್ಯೋಗಿ ರಮೇಶ್ ಜಾರಕಿಹೊಳಿ ಅವರ ಪುತ್ರನ ಮದುವೆ ಸಂಭ್ರಮದಿಂದ ದೂರ ಉಳಿದಿದ್ದರು. ಆದರೆ ಇದೀಗ ಅದ್ದೂರಿ ಮದುವೆ ಹೋಗಲ್ಲ ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಜಾರಕಿಹೊಳಿ ಮಗನ ಮದುವೆಗೆ ಶುಭಾಶಯ ಹೇಳಲು ಖಾಸಗಿ ಹೆಲಿಕಾಪ್ಟರ್ ಬಳಸುವ ಮೂಲಕ ವಿವಾದಕ್ಕೆ ಸಿಲುಕಿದ್ದಾರೆ. ಸಿಎಂ ಅವರು […]

ಚಾಕಲೇಟ್ ಆಮಿಷವೊಡ್ಡಿ ಮಕ್ಕಳ ಅಪಹರಣಕ್ಕೆ ಯತ್ನ: ತಪ್ಪಿಸಿಕೊಂಡ ಬಾಲಕ

Wednesday, November 23rd, 2016
child-kidnaping

ಮಂಗಳೂರು: 2 ದಿನಗಳ ಹಿಂದೆಯಷ್ಟೇ ಕಲಬುರಗಿಯನ್ನು ಬೆಚ್ಚಿ ಬೀಳಿಸುವ ರೀತಿ ಕಿಡ್ನಾಪ್‌ ಪ್ರಕರಣವೊಂದು ನಡೆದಿತ್ತು. ಇದರ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ಒಂದು ವಾರದಿಂದ ಮಕ್ಕಳ ಅಪಹರಣಕಾರರ ಜಾಲವೊಂದು ಕರಾವಳಿ ಜಿಲ್ಲೆಯಾದ್ಯಂತ ಸುತ್ತಾಡುತ್ತಿದೆ ಎಂಬ ವಾಟ್ಸ್ಅಪ್ ಸಂದೇಶ ಜನರಲ್ಲಿ ಆತಂಕ ಮೂಡಿಸಿದ ಬೆನ್ನಲ್ಲೇ ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಾಲಕನೊಬ್ಬ ಅಪಹರಣಕಾರರಿಂದ ತಪ್ಪಿಸಿಕೊಂಡು ಪಾರಾದ ಘಟನೆ ನಡೆದಿದೆ. ಕರಿಯಂಗಳ ಗ್ರಾಮದ ಸಾಣೂರು ನಿವಾಸಿ ವಾಮನ ಎಂಬುವರ ಮಗ ನಿಖಿಲ್ […]

ದಾದಿಯರ ವಸತಿಗೃಹದಿಂದ ಬೀಗ ಮುರಿದು 14ಪವನ್‌ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯ ಬಂಧನ

Wednesday, November 23rd, 2016
Ibrahim mujamal

ಮಂಗಳೂರು: ದಾದಿಯರ ವಸತಿಗೃಹದಿಂದ ಬೀಗ ಮುರಿದು 14ಪವನ್‌ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಮಂಜೇಶ್ವರ ತಾಲೂಕಿನ ಬಾಯಾರುಪದವು ಕ್ಯಾಂಪ್ಕೋ ನಿವಾಸಿ ಇಬ್ರಾಹಿಂ ಮುಜಾಮಲ್ (20) ಎಂಬಾತನೇ ಬಂಧಿತ ಆರೋಪಿ. ಸುಬ್ರಹ್ಮಣ್ಯ, ಮಂಜೇಶ್ವರ ಅಂತಾರಾಜ್ಯ ಹೆದ್ದಾರಿಯ ಅಳಿಕೆ ಸರ್ಕಾರಿ ಆಸ್ಪತ್ರೆಯ ದಾದಿಯರ ವಸತಿಗೃಹದಲ್ಲಿ ಕಳ್ಳತನ ಬಳಿಕ ತಲೆಮರೆಸಿಕೊಂಡಿದ್ದ. ಪೊಲೀಸರು ತನಿಖೆ ಕೈಬಿಟ್ಟಿದ್ದಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ಊರಿಗೆ ಹಿಂದಿರುಗಿ ಕರ್ನಾಟಕದೆಡೆಗೆ ಸೋಮವಾರ ಆಗಮಿಸಿದ್ದಾಗ ಪೊಲೀಸರು ಕನ್ಯಾನದಲ್ಲಿ ಬಂಧಿಸಿದ್ದಾರೆ. ಕಳ್ಳತನ ಮಾಡಿದ್ದ ಹೆಚ್ಚಿನ ಬಂಗಾರವನ್ನು ಇಬ್ರಾಹಿಂ ತನ್ನ […]

ಮಂಗಳೂರು ಹಳೆ ಬಂದರು ಅಳಿವೆ ಬಾಗಿಲಲ್ಲಿ ತುಂಬಿರುವ ಹೂಳು ಹೊರ ತೆಗೆಯಲು ಹೂಳೆತ್ತುವ ಯಂತ್ರ

Wednesday, November 23rd, 2016
mangaluru

ಮಂಗಳೂರು: ಮಂಗಳೂರು ಹಳೆ ಬಂದರು ಅಳಿವೆ ಬಾಗಿಲಲ್ಲಿ ತುಂಬಿರುವ ಹೂಳು ಹೊರ ತೆಗೆಯಲು ಕೊನೆಗೂ ಯಂತ್ರ ಬಂದಿದೆ. ಮುಂದಿನ 90 ದಿನಗಳಲ್ಲಿ ಹೂಳೆತ್ತುವ ಕಾಮಗಾರಿ ಪೂರ್ಣಗೊಳ್ಳಲಿದೆ. ಹಳೆ ಬಂದರಿನಲ್ಲಿ ಹೂಳು ತುಂಬಿರುವ ಪರಿಣಾಮ ಅವಘಡಗಳು ಸಂಭವಿಸುತ್ತಿರುವ ಬಗ್ಗೆ ಸ್ಥಳೀಯರು ಶಾಸಕ ಜೆ.ಆರ್.ಲೋಬೊ ಅವರಿಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಮುಂಬೈನಿಂದ ಈ ಹೂಳೆತ್ತುವ ಯಂತ್ರವನ್ನು ತರಿಸಲಾಗಿದೆ. 99.50 ಲಕ್ಷ ರೂಪಾಯಿ ವೆಚ್ಚದ ಈ ಹೂಳೆತ್ತುವ ಕಾಮಗಾರಿಯೂ ನಿಗದಿತ 90 ದಿನಗಳ ಅವಧಿಗೆ ಮುನ್ನವೇ ಮುಗಿಯಲಿದೆ. ಸುಮಾರು ಎರಡು ತಿಂಗಳ […]

ಧರ್ಮಸ್ಥಳ ಲಕ್ಷದೀಪೋತ್ಸವ ಜನ ಸಂದಣಿಯಲ್ಲಿ ನಾಪತ್ತೆಯಾದವರ ಪತ್ತೆಗೆ ಒಸಿಎಸ್ ತಂತ್ರಜ್ಞಾನ

Wednesday, November 23rd, 2016
dharmasthala-lakshadeepa

ಬೆಳ್ತಂಗಡಿ: ಜನ ಸಂದಣಿಯಲ್ಲಿ ನಾಪತ್ತೆಯಾದವರ ಪತ್ತೆಗೆ ಮತ್ತು ಹೆಚ್ಚು ಜನಸಂದಣಿ ಇರುವ ಪ್ರದೇಶವನ್ನು ತಿಳಿಸಲು ಒಸಿಎಸ್ ಎಂಬ ಆಧುನಿಕ ತಂತ್ರಜ್ಞಾನವನ್ನು ಧರ್ಮಸ್ಥಳ ಲಕ್ಷದೀಪೋತ್ಸವದ ಸಂದರ್ಭದಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ. ಧರ್ಮಸ್ಥಳದಲ್ಲಿ ನ. 24 ರಿಂದ 28ರವರೆಗೆ ಲಕ್ಷದೀಪೋತ್ಸವದ ಅಂಗವಾಗಿ ನ. 27 ರಂದು ಭಾನುವಾರ ಸರ್ವಧರ್ಮ ಸಮ್ಮೇಳನ ಹಾಗೂ 28 ರಂದು ಸಾಹಿತ್ಯ ಸಮ್ಮೇಳನ ನಡೆಯಲಿದೆ. ಸೋಮವಾರ ರಾತ್ರಿ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ನಡೆಯಲಿದ್ದು, ನಾಡಿನೆಲ್ಲೆಡೆಯಿಂದ ಲಕ್ಷಾಂತರ ಮಂದಿ ಭಾಗವಹಿಸಲಿದ್ದಾರೆ. ಜನ ಸಂದಣಿಯಲ್ಲಿ ಕಾಣೆಯಾದವರ ಪತ್ತೆಗಾಗಿ ಮತ್ತು […]

ತಲಾಖ್‌ ಹೇಳುವ ಮೊದಲು ಒಂದುಗೂಡುವ ಅನೇಕ ಅವಕಾಶಗಳನ್ನು ಇಸ್ಲಾಂ ಒದಗಿಸಿದೆ : ಬಂಬ್ರಾಣ

Wednesday, November 23rd, 2016
shariyath

ಮಂಗಳೂರು: ತಲಾಖ್‌ ಕುರಿತು ಅನೇಕ ತಪ್ಪು ಕಲ್ಪನೆಗಳಿವೆ. ಅನಿವಾರ್ಯ ಸಂದರ್ಭ ಮಾತ್ರ ಶಾಸ್ತ್ರಬದ್ಧವಾಗಿ ಗಂಡ ಮತ್ತು ಹೆಂಡತಿ ಬೇರ್ಪಡಲು ಈ ಅವಕಾಶ ಒದಗಿಸಲಾಗಿದೆ. ಮೂರು ಬಾರಿ ತಲಾಖ್‌ ಹೇಳುವ ಮೊದಲು ಗಂಡ ಮತ್ತು ಹೆಂಡತಿಯನ್ನು ಒಟ್ಟುಗೂಡಿಸಲು ಅನೇಕ ಅವಕಾಶಗಳನ್ನು ಇಸ್ಲಾಂ ಒದಗಿಸಿದೆ ಎಂದು ಜ| ಬಿ.ಕೆ. ಅಬ್ದುಲ್‌ ಖಾದರ್‌ ಮುಸ್ಲಿಯಾರ್‌ ಖಾಸಿಮೀ ಬಂಬ್ರಾಣ ಹೇಳಿದರು. ಅವರು  ಮುಸ್ಲಿಮ್‌ ಸೆಂಟ್ರಲ್‌ ಕಮಿಟಿ ದ.ಕ. ಮತ್ತು ಉಡುಪಿ ಜಿಲ್ಲೆ ಹಾಗೂ ಉಭಯ ಜಿಲ್ಲೆಯ ವಿವಿಧ ಮುಸ್ಲಿಂ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಗರದ […]

ಡಿ.ವಿ.ಸದಾನಂದ ಗೌಡರ ಸಹೋದರ ಡಿ.ವಿ ಭಾಸ್ಕರ್‌ ನಿಧನ

Tuesday, November 22nd, 2016
bhashkar gowda

ಮಂಗಳೂರು: ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರ ಸಹೋದರ ಡಿ.ವಿ ಭಾಸ್ಕರ್‌ ಇಂದು ಕಾಮಾಲೆ ರೋಗದ  ಚಿಕತ್ಸೆ ಫಲಕಾರಿಯಾಗದೆ ನಗರದ ಕೆ.ಎಮ್‌.ಸಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ದೇವರ ಗುಂಡ ವೆಂಕಪ್ಪ ಗೌಡ ಹಾಗೂ ಕಮಲಮ್ಮ ಅವರ ಮೂರನೆ ಪುತ್ರನಾಗಿರುವ ಇವರು ಕಾಮಾಲೆ ರೋಗಕ್ಕೆ ತುತ್ತಾಗಿ 15 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ. ಭಾಸ್ಕರ್‌ ವಕೀಲರಾಗಿ ವೃತ್ತಿ ಜೀವನ ಪ್ರಾರಂಭಿಸಿದ್ದರು. ಕೆಲ ದಿನಗಳ ಬಳಿಕ ವಕೀಲ ವೃತ್ತಿ ಬಿಟ್ಟು ಕೃಷಿಯಲ್ಲಿ ತೊಡಗಿಕೊಂಡಿದ್ದರು. […]

ತಿಪ್ಪ ಗೊಂಡನಹಳ್ಳಿ ಜಲಾಶಯದ ಬಳಿ ಖಳನಟ ಉದಯ ತಿಥಿ ಕಾರ್ಯ

Tuesday, November 22nd, 2016
actor uday

ಮಾಗಡಿ: “ಮಾಸ್ತಿಗುಡಿ’ ಚಿತ್ರೀಕರ ಣದ ವೇಳೆ ಮೃತಪಟ್ಟ ಖಳನಟ ಉದಯ ಕುಟುಂಬಸ್ಥರಿಂದ ತಿಪ್ಪ ಗೊಂಡನಹಳ್ಳಿ ಜಲಾಶಯದ ಬಳಿ ತಿಥಿ ಕಾರ್ಯ ನಡೆಯಿತು. ಮೃತ ಉದಯ್‌ ಅವರ ಅಕ್ಕ ಸುಧಾ, ತಂಗಿ ಆಶಾ, ತಮ್ಮ ಸನತ್‌, ಭಾವ ಮುನಿರಾಜ್‌ ಹಾಗೂ ಉದಯ್‌ ಸ್ನೇಹಿತರು ಭಾಗಿಯಾಗಿ ಉದಯ್‌ ಆತ್ಮಕ್ಕೆ ಶಾಂತಿ ಸಿಗಲೆಂದು ತಿಥಿ ಕಾರ್ಯ ನಡೆಸಿದರು. ಮೃತ ಉದಯ್‌ ಭಾವ ಮುನಿರಾಜ್‌ ಮಾತನಾಡಿ, ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿಯೇ ಉದಯ್‌ ಅವರು ಮೃತಪಟ್ಟಿದ್ದರಿಂದ ಆ ಸ್ಥಳದಲ್ಲೇ ಉದಯ್‌ ಅವರ ತಿಥಿ ಕಾರ್ಯ ನೆರವೇರಿಸಿದರೆ […]