ನೋಟು ಬದಲಾವಣೆಗೆ ಆಗಮಿಸುವ ಜನರಿಗೆ 2 ದಿನಗಳ ಕಾಲ ಉಚಿತ ಪ್ರಯಾಣ: ಅಟೋ ಚಾಲಕ ಸಾಧಿಕ್

Wednesday, November 16th, 2016
Sadiq Puttur

ಪುತ್ತೂರು: ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಕಟಿಸಿರುವ 500 ಹಾಗೂ 1000 ರೂಪಾಯಿ ನೋಟು ಹಿಂತೆಗೆತದ ಬಳಿಕ ನೋಟು ಬದಲಾವಣೆಗೆ ಆಗಮಿಸುವ ಜನರಿಗೆ 2 ದಿನಗಳ ಕಾಲ ಉಚಿತ ಪ್ರಯಾಣಕ್ಕೆ ಮುಂದಾಗಿದ್ದಾರೆ ಪುತ್ತೂರಿನ ಅಟೋ ಚಾಲಕ ಸಾಧಿಕ್. ಈತ ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಕಂಪ ನಿವಾಸಿ. ಈಗ ಪುತ್ತೂರಿನಲ್ಲಿ ಅವರು ನಿಜವಾದ ಹೀರೋ. ದೈನಂದಿನ ಬದುಕಿಗೆ ದುಡಿದೇ ತಿನ್ನುವ ಇವರು, ಈಗ ಎರಡು ದಿನಗಳ ಕಾಲ ಉಚಿತ ಪ್ರಯಾಣಕ್ಕೆ ಮುಂದಾಗಿದ್ದಾರೆ. ಕಾರಣ ಇಷ್ಟೇ ನರೇಂದ್ರ […]

ಪಶ್ಚಿಮ ಘಟ್ಟದ ಪರಿಸರದಲ್ಲಿ 2 ದಶಕಗಳಿಂದ ಸಕ್ರಿಯರಾಗಿದ್ದ ನಾಲ್ವರು ನಕ್ಸಲೀಯರು ಶರಣು

Tuesday, November 15th, 2016
naxal-leaders

ಚಿಕ್ಕಮಗಳೂರು: ಪಶ್ಚಿಮ ಘಟ್ಟದ ಪರಿಸರದಲ್ಲಿ ಕಳೆದ 2 ದಶಕಗಳಿಂದ ಸಕ್ರಿಯರಾಗಿದ್ದ ನಾಲ್ವರು ಪ್ರಮುಖ ನಕ್ಸಲೀಯರು ನಕ್ಸಲ್ ಪ್ಯಾಕೇಜ್ ನಡಿ ಸೋಮವಾರ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಮುಂದೆ ಚಿಕ್ಕಮಗಳೂರಿನಲ್ಲಿ ಶರಣಾಗಿದ್ದಾರೆ. ನಕ್ಸಲ್ ಮುಖಂಡರಾದ ನೀಲಗುಣಿ ಪದ್ಮನಾಭ, ರಿಜ್ವಾನ್ ಬೇಗಂ, ರಾಜು, ಭಾರತಿ ಸೇರಿದಂತೆ ನಾಲ್ವರು ನಕ್ಸಲೀಯರು ಪತ್ರಕರ್ತೆ ಗೌರಿ ಲಂಕೇಶ್ ಹಾಗೂ ಎಕೆ ಸುಬ್ಬಯ್ಯ ಮುಂದಾಳತ್ವದಲ್ಲಿ ಚಿಕ್ಕಮಗಳೂರಿನಲ್ಲಿ ಶರಣಾಗಿದ್ದಾರೆ. ನಾಲ್ವರು ನಕ್ಸಲೀಯರು ಗೌರಿ ಲಂಕೇಶ್ ಜೊತೆ ಇಂದು ಮಧ್ಯಾಹ್ನ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದರು. ನಕ್ಸಲೀಯರಾದ ಪದ್ಮನಾಭ, ರಾಜು, ಭಾರತಿ […]

ನಾಡು-ನುಡಿ ಸಂಸ್ಕೃತಿಯ ಸಮ್ಮೇಳನ ಆಳ್ವಾಸ್ ನುಡಿಸಿರಿಗೆ ದಿನಗಣನೆ ಆರಂಭ

Tuesday, November 15th, 2016
alwas nudisiri

ಮಂಗಳೂರು: ಆಳ್ವಾಸ್ ಶಿಕ್ಷಣ ಸಂಸ್ಥೆ ಹಮ್ಮಿಕೊಳ್ಳುವ ನಾಡು-ನುಡಿಯ ಸಂಸ್ಕೃತಿಯ ಸಮ್ಮೇಳನ ಆಳ್ವಾಸ್ ನುಡಿಸಿರಿಗೆ ದಿನಗಣನೆ ಆರಂಭವಾಗಿದೆ. ಮೂಡಬಿದ್ರೆಯ ವಿದ್ಯಾಗಿರಿಯ ರತ್ನಾಕರವರ್ಣಿ ವೇದಿಕೆಯಲ್ಲಿ ಇದೇ ತಿಂಗಳ 18, 19 ಮತ್ತು 20ರಂದು ನಡೆಯುವ ಸಮ್ಮೇಳನ ಕರ್ನಾಟಕ: ನಾಳೆಗಳ ನಿರ್ಮಾಣ ಎಂಬ ಪರಿಕಲ್ಪನೆಯಡಿಯಲ್ಲಿ ಆಯೋಜನೆಗೊಂಡಿದೆ. ಸಮ್ಮೇಳನದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಾ. ಬಿ.ಎನ್. ಸುಮಿತ್ರಾ ಬಾಯಿ ವಹಿಸಲಿದ್ದಾರೆ. ಉದ್ಘಾಟನೆಯನ್ನು ಕವಿ, ಸಾಹಿತಿ ಡಾ. ಜಯಂತ್ ಕಾಯ್ಕಿಣಿ ನೆರವೇರಿಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮ್ಮೇಳನದ ರೂವಾರಿ ಡಾ. ಎಂ. ಮೋಹನ್ ಆಳ್ವ, ಮೂರು […]

ಕುಲ್ಕುಂದ ಶ್ರೀ ಬಸವೇಶ್ವರ ದೇವಳದ ವತಿಯಿಂದ ಗೋಪೂಜೆ

Tuesday, November 15th, 2016
Gopooje

ಸುಬ್ರಹ್ಮಣ್ಯ: ಇತಿಹಾಸ ಪ್ರಸಿದ್ಧ ಕುಲ್ಕುಂದ ಜಾನುವಾರು ಜಾತ್ರೆ ಪ್ರಯುಕ್ತ ಕಳೆದ ನಾಲ್ಕು ವರ್ಷಗಳಿಂದ ನಡೆದುಕೊಂಡು ಬಂದಂತೆ ಈ ಬಾರಿ ಕುಲ್ಕುಂದ ಶ್ರೀ ಬಸವೇಶ್ವರ ದೇವಳದ ವತಿಯಿಂದ ಗೋಪೂಜೆ ನಡೆಸಲಾಯಿತು. ಕಾರ್ತಿಕ ಹುಣ್ಣಿಮೆಯ ದಿನವಾದ ಸೋಮವಾರ ಕುಲ್ಕುಂದ ಬಸವೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಗೋಪೂಜೆ ನಡೆಯಿತು. ಈ ಮೂಲಕ ಇತಿಹಾಸ ಪ್ರಸಿದ್ಧ ಕುಲ್ಕುಂದ ಜಾನುವಾರು ಜಾತ್ರೆಗೆ ಚಾಲನೆ ನೀಡಲಾಯಿತು. ಪುರೋಹಿತರು ವಿವಿಧ ವೈದಿಕ ವಿಧಾನಗಳೊಂದಿಗೆ ಪುರೋಹಿತರು ಗೋಪೂಜೆ ನೆರವೇರಿಸಿದರು. ಪ್ರತಿವರ್ಷ ಕಾರ್ತಿಕ ಹುಣ್ಣಿಮೆಯ ದಿನ ಕುಲ್ಕುಂದ ಮಜಲಿನಲ್ಲಿ ಸಂಪ್ರದಾಯ ಬದ್ಧವಾಗಿ […]

ಬಿಜೆಪಿ ತನ್ನ ವಿರುದ್ಧ ಮಾಡಿರುವ ಆರೋಪದಲ್ಲಿ ಹುರುಳಿಲ್ಲ: ಯು. ಟಿ. ಖಾದರ್

Monday, November 14th, 2016
U-t-khadar

ಮಂಗಳೂರು: ತನ್ನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿರಂತರ ನಡೆಯುತ್ತಿರುವ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ವಿರುದ್ಧ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು. ಟಿ. ಖಾದರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಹಿತಕರ ಘಟನೆಯಲ್ಲಿ ನನ್ನ ಪಾತ್ರವಿದೆ ಎಂದು ಬಿಜೆಪಿ ನಾಯಕ, ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಆರೋಪಿಸಿದ್ದಾರೆ. ಆರೋಪದಲ್ಲಿ ಹುರುಳಿಲ್ಲ. ಅಹಿತಕರ ಘಟನೆ ಯಾರೇ ಮಾಡಿದರೂ ಖಂಡನೀಯ. ಶಾಂತಿಯನ್ನು ಬಯಸುವ ಯಾವ ನಾಗರಿಕನೂ ಇಂತಹ […]

ಉಳ್ಳಾಲ ಮತ್ತು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆಕ್ಷನ್ 144 ವಿಸ್ತರಣೆ

Monday, November 14th, 2016
Section-144

ಮಂಗಳೂರು: ಉಳ್ಳಾಲ ಮತ್ತು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಹಲ್ಲೆ ಪ್ರಕರಣಗಳಿಗೆ ಸಂಬಂಧಿಸಿ ಠಾಣಾ ವಾಪ್ತಿಯಲ್ಲಿ ವಿಧಿಸಲಾಗಿದ್ದ ಸೆಕ್ಷನ್ 144 ನಿಷೇಧಾಜ್ಞೆಯನ್ನು ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ವಿಸ್ತರಿಸಿರಲಾಗಿದೆ. ಅಲ್ಲದೆ ಈ ಪ್ರಕರಣಗಳನ್ನು ಬೇಧಿಸಲು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಚಂದ್ರಶೇಖರ್ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ನವೆಂಬರ್ 13ರ ಮಧ್ಯಾಹ್ನ 2 ಗಂಟೆಯಿಂದ ನವೆಂಬರ್ 16ರ ರಾತ್ರಿ 10 ಗಂಟೆಯ ವರೆಗೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಸೆ. 144 […]

ನ. 27 ರಂದು ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಕಾರ್ತಿಕ ಲಕ್ಷ ದೀಪೋತ್ಸವ

Monday, November 14th, 2016
Laksha deeposthsava

ಬೆಳ್ತಂಗಡಿ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಕಾರ್ತಿಕ ಲಕ್ಷ ದೀಪೋತ್ಸವ ನಿಮಿತ್ತ ನ. 27 ರಂದು ನಡೆಯುವ ಸರ್ವಧರ್ಮ ಸಮ್ಮೇಳನದ 84ನೇ ಅಧಿವೇಶನವು ಶಿರಹಟ್ಟಿಯ ಫಕೀರ ಸಿದ್ದರಾಮ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ನಡೆಯಲಿದೆ. ನಂತರ ನ. 28 ರಂದು ನಡೆಯುವ ಸಾಹಿತ್ಯ ಸಮ್ಮೇಳದ 84ನೇ ಅಧಿವೇಶನವು ಬೆಂಗಳೂರಿನ ಖ್ಯಾತ ಸಾಹಿತಿ ಎಂ.ಎನ್. ವ್ಯಾಸ ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ನ. 24ರಿಂದ 29ರ ವರೆಗೆ ಲಕ್ಷ ದೀಪೋತ್ಸವವು ಶ್ರೀ ಮಂಜುನಾಥ ಸ್ವಾಮಿಯ ಹೊಸಕಟ್ಟೆ ಉತ್ಸವದ […]

ನ್ಯಾಯಾಧೀಶ ಉಣ್ಣಿಕೃಷ್ಣನ್ ದೇಹದಲ್ಲಿ ಲಾಠಿಯಲ್ಲಿ ಹೊಡೆದ, ಬೂಟಿನಿಂದ ತುಳಿದ ಗುರುತು ಪತ್ತೆ: ಸುಳ್ಯ ಪೊಲೀಸರ ವಿರುದ್ದ ಪ್ರಕರಣ ದಾಖಲು

Monday, November 14th, 2016
Unnikrishnan

ಕಾಸರಗೋಡು: ಕಾಸರಗೋಡು ಪ್ರಥಮ ದರ್ಜೆ ನ್ಯಾಯಾಧೀಶ ವಿ ಕೆ ಉಣ್ಣಿಕೃಷ್ಣನ್ (45) ಸಾವು ಪ್ರಕರಣಕ್ಕೆ ಸಂಬಂಧಿಸಿ ವಿದ್ಯಾನಗರ ಪೊಲೀಸರು ತನಿಖೆಯನ್ನು ಇನ್ನಷ್ಟು ತೀವೃಗೊಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಲಭಿಸಿದ ವರದಿಯಲ್ಲಿ ಲಾಠಿಯಲ್ಲಿ ಹೊಡೆದ ಹಾಗು ಬೂಟಿನಿಂದ ತುಳಿದ ಹಲವು ಗುರುತುಗಳು ಪತ್ತೆಯಾಗಿರುವುದಾಗಿ ತಿಳಿಸಲಾಗಿದೆ. ತಾನು ಸುಳ್ಯಕ್ಕೆ ಹೋಗಿದ್ದ ವೇಳೆ ಅಲ್ಲಿ ಕೆಲವರು ನನಗೆ ಹಲ್ಲೆ ನಡೆಸಿದ್ದು, ಈ ಮಧ್ಯೆ ತನ್ನನ್ನು ಸುಳ್ಯ ಠಾಣೆಗೆ ಕೊಂಡೊಯ್ದಾಗ ಅಲ್ಲಿಯ ಪೊಲೀಸರು ಮಾರಣಾಂತಿಕ ಹಲ್ಲೆ ನಡೆಸಿರುವುದಾಗಿಯೂ ನಗರದ ಸಿ ಐ ಗೂ […]

ಮುಂದುವರಿದ ನೋಟಿನ ಪರದಾಟ, ನಿರಾಸೆ, ಪಿಕ್‌ಪಾಕೆಟ್

Monday, November 14th, 2016
Bank rush

ಕುಂಬಳೆ: ದೇಶದಲ್ಲಿ 500 ಮತ್ತು 1000 ರೂ.ಗಳ ಮುಖಬೆಲೆ ನೋಟುಗಳನ್ನು ಹಿಂತೆದುಕೊಂಡಂದಿನಿಂದ ಜನ ಸಾಮಾನ್ಯರ ಪರದಾಟ ಹೆಚ್ಚಾಗಿದೆ. ಮೂಲೆ ಮೂಲೆಗಳಲಲ್ಲಿಯೂ ಇದರ ಬಗ್ಗೆಯೇ ಚರ್ಚೆಗಳು ನಡೆಯುತ್ತಿದೆ. ಕುಂಬಳೆ, ಉಪ್ಪಳ, ಬಂದ್ಯೋಡು ಶಾಖೆಗಳಿರುವ ಎಲ್ಲಾ ಬ್ಯಾಂಕುಗಳಲ್ಲಿ ಶುಕ್ರವಾರವೂ ಜನಸಾಮಾನ್ಯರು ತಮ್ಮಲ್ಲಿರುವ ನೋಟಿನ ಬದಲಾವಣಿಗಾಗಿ ಭಾರೀ ಸಂಖ್ಯೆಯಲ್ಲಿ ಸರದಿ ಸಾಲಿನಲ್ಲಿ ಕಾಯುತ್ತಿರುವುದು ಕಂಡು ಬಂತು. ಕುಂಬಳೆ, ಉಪ್ಪಳದಲ್ಲಿ ಕಾರ್ಯಾಚರಿಸುತ್ತಿರುವ ಅಂಚೆಕಛೇರಿಯಲ್ಲಿಯೂ 2000 ರೂ. ನೋಟು ಲಭ್ಯವಿತ್ತು. ಮೂರು ದಿನಗಳಿಂದ ಚಿಲ್ಲರೆಗಳಿಲ್ಲದೆ ಪರದಾಡುತ್ತಿದ್ದ ಜನರು ಶನಿವಾರವೂ ಬ್ಯಾಂಕುಗಳಲ್ಲಿ ಮಾರುದ್ದ ಸರತಿ ಸಾಲಿನಲ್ಲಿ ನಿಲ್ಲಲಾಗದೆ ನಿರಾಸೆ ಅನುಭವಿಸಿದರು. […]

‘ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಯಕ್ಷಗಾನದ ಕೊಡುಗೆ ಬಹುಮುಖ್ಯವಾದುದು’

Monday, November 14th, 2016
Yakshagana

ಪೆರ್ಲ: ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಶ್ರೀಮಂತವಾಗಿಸುವಲ್ಲಿ ಯಕ್ಷ್ಷಗಾನದ ಕೊಡುಗೆ ಬಹಳಷ್ಟಿದೆ. ಇಂದಿಗೂ ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಯಕ್ಷಗಾನದಷ್ಟು ಸಮರ್ಥವಾಗಿ ದುಡಿಸಿಕೊಳ್ಳುವ ಕಲೆ ಮತ್ತೊಂದಿಲ್ಲ ಎಂದು ವಿಶ್ರಾಂತ ಪ್ರಾಧ್ಯಾಪಕ, ಚಿಂತಕ ಪಕಳಕುಂಜ ಶ್ಯಾಮ ಭಟ್ ಅಭಿಪ್ರಾಪಟ್ಟಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಾಯೋಜಕತ್ವದಲ್ಲಿ, ಅಪೂರ್ವ ಕಲಾವಿದರು ಸಂಸ್ಥೆಯ ಸಹಕಾರದೊಂದಿಗೆ ಪೆರ್ಲ ಶ್ರೀ ಸತ್ಯನಾರಾಯಣ ಮಂದಿರದ ಸಭಾಂಗಣದಲ್ಲಿ ಶನಿವಾರ ನಡೆದ ಕನ್ನಡ ಚಿಂತನೆ ಕಾರ್ಯಕ್ರಮದಲ್ಲಿ ’ಭಾಷೆ ಮತ್ತು ಯಕ್ಷಗಾನ’ ಎಂಬ ವಿಷಯದಲ್ಲಿ ಅವರು ವಿಶೇಷೋಪನ್ಯಾಸ ನೀಡಿ ಮಾತನಾಡಿದರು. ಭಾಷೆ […]