ಬಾವಿಯಲ್ಲಿ ಇಬ್ಬರು ಸಹೋದರರ ಮೃತ ದೇಹಗಳು ಪತ್ತೆ

Saturday, October 8th, 2016
kasargod

ಕಾಸರಗೋಡು: ಕಳೆದ ಒಂದು ದಿನದಿಂದ ನಾಪತ್ತೆಯಾಗಿದ್ದ ಚೆರ್ವತ್ತೂರು ಚೀಮೇನಿ ಚೆಲುವಕ್ಕೋಡ್ ನ ಸತೀಶ್ (40) ಮತ್ತು ಸಹೋದರ ಸಜಿತ್ (36) ಮೃತದೇಹಗಳು ಗುರುವಾರ ರಾತ್ರಿ ಬಾವಿಯಲ್ಲಿ ಪತ್ತೆಯಾಗಿವೆ. ಚೆರ್ವತ್ತೂರು ಚೀಮೇನಿ ಚೆಲುವಕ್ಕೋಡ್ ಮೂಲದ ಸತೀಶ್ ಬಸ್ ಚಾಲನೆ ಮಾಡುತ್ತಿದ್ದು. ಸಜಿತ್ ಲಾರಿ ಚಾಲಕನಾಗಿದ್ದ. ಇವರಿಬ್ಬರು ಕಳೆದು ಒಂದು ದಿನದಿಂದ ಕಾಣೆಯಾಗಿದ್ದರು. ಮನೆಯವರ ಹುಡುಕಾಟದಲ್ಲಿ ದಾರಿ ಮಧ್ಯೆ ಇರುವ ಬಾವಿಯಲ್ಲಿ ಇಬ್ಬರ ಮೃತ ದೇಹಗಳು ಪತ್ತೆಯಾಗಿದ್ದು. ಇವರ ಸಾವಿಗೆ ನಿಖರವಾದ ಕಾರಣಗಳು ತಿಳಿದು ಬಂದಿಲ್ಲ. ಸುದ್ದಿ ತಿಳಿದು ಸ್ಥಳಕ್ಕೆ […]

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಮಾಜಿ ಪ್ರಧಾನಿ ಹೆಚ್‌‌.ಡಿ. ದೇವೇಗೌಡ ಭೇಟಿ

Saturday, October 8th, 2016
kollur-shree-mookambika

ಉಡುಪಿ: ಜಿಲ್ಲೆಯ ಐತಿಹಾಸಿಕ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಮಾಜಿ ಪ್ರಧಾನಿ ಹೆಚ್‌‌.ಡಿ. ದೇವೇಗೌಡ ಭೇಟಿ ನೀಡಿದ್ದರು. ಪತ್ನಿ ಚೆನ್ನಮ್ಮ ಅವರ ಜೊತೆ ಆಗಮಿಸಿದ ಗೌಡರು ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ನವರಾತ್ರಿ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಇಂದು ಬೆಳಗ್ಗೆ ಶೃಂಗೇರಿಯಿಂದ ಕೊಲ್ಲೂರಿಗೆ ಆಗಮಿಸಿದ ವೇಳೆ ಮಾತನಾಡಿದ ಅವರು, ರಾಜಕೀಯ ಗೊಂದಲಕ್ಕೆ ಬಲಿಯಾದ ಕಾವೇರಿ ವಿವಾದಕ್ಕೆ ವಿಷಾಧ ವ್ಯಕ್ತಪಡಿಸಿದರು. ಮಹದಾಯಿ ಹೋರಾಟಕ್ಕೂ ತಮ್ಮ ಬೆಂಬಲ ಇದೆ ಎಂದು ತಿಳಿಸಿದರು. ಸರ್ವರಿಗೂ ನ್ಯಾಯಕ್ಕಾಗಿ ಹೋರಾಡುತ್ತೇನೆ, ತಮ್ಮ ಕೊನೆಯ […]

ಕಾಂಗ್ರೆಸ್ ವಿರುದ್ಧ ಘೋಷಣೆ: ರಾಹುಲ್ ಗಾಂಧಿ ಪ್ರತಿಕೃತಿ ದಹನ

Saturday, October 8th, 2016
yuva-morcha

ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರನ್ನು ರಕ್ತದ ದಲ್ಲಾಳಿ ಎಂದು ಹೇಳಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು, ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿ ರಾಹುಲ್ ಗಾಂಧಿ ಪ್ರತಿಕೃತಿಯನ್ನು ದಹನ ಮಾಡಿದರು. ಜಗತ್ತಿನ ಎಲ್ಲಾ ದೇಶಗಳು ಇತ್ತೀಚೆಗೆ ನಡೆದಂತಹ ಸರ್ಜಿಕಲ್ ಸ್ಟ್ರೈಕ್ ಘಟನೆಯ ಬಗ್ಗೆ ಸಹಮತ ವ್ಯಕ್ತಪಡಿಸಿ ಅಮೆರಿಕಾ, ರಷ್ಯಾ, ಚೀನಾದಂತಹ ದೇಶಗಳೇ ಪ್ರಧಾನಿಯವರ ಬಗ್ಗೆ ಶ್ಲಾಘನೆ ಮಾಡಿದರೆ ರಾಹುಲ್ […]

ಅಳ್ವಾಸ್ ಪಿಯು ಕಾಲೇಜಿನ ವಿದ್ಯಾರ್ಥಿ ಹಾಸ್ಟೆಲ್‌ನಿಂದ ಕಾಣೆ

Friday, October 7th, 2016
rithik

ಮಂಗಳೂರು: ಅಳ್ವಾಸ್ ಪಿಯು ಕಾಲೇಜಿನ ವಿದ್ಯಾರ್ಥಿ ಹಾಸ್ಟೆಲ್‌ನಿಂದ ಕಾಣೆಯಾಗಿರುವ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಣೆಯಾದ ವಿದ್ಯಾರ್ಥಿ ಬೆಂಗಳೂರು ಮಾರ್ತಳ್ಳಿ ನಿವಾಸಿ ಭಾಸ್ಕರ್ ಎಂಬುವರ ಪುತ್ರ ರಿತಿಕ್(17)ಎಂದು ತಿಳಿದುಬಂದಿದೆ. ಈತ ಪುತ್ತಿಗೆಯ ಸಹ್ಯಾದ್ರಿ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದ. ರಿತಿಕ್ ಬುಧವಾರ ಕಾಣೆಯಾಗಿದ್ದು, ಈ ಬಗ್ಗೆ ಹಾಸ್ಟೆಲ್ ವಾರ್ಡನ್ ಬಾಲಣ್ಣ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರಿತಿಕ್ ಹಾಸ್ಟೆಲ್‌ನಿಂದ ಹೊರಡುವ ಮುನ್ನ ಆಕಾಶ ನೀಲಿಬಣ್ಣದ ಶರ್ಟ್‌, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದ. ದೃಢಕಾಯ ಶರೀರದ ರಿತಿಕ್‌ […]

ಬಸ್ ನಿರ್ವಾಹಕ ದೇವದಾಸ್‌ರವರ ನಿವಾಸಕ್ಕೆ ಕೆಎಸ್ಆರ್‌ಟಿಸಿ ವರ್ಕರ್ಸ್‌ ಯೂನಿಯನ್‌ ಪದಾಧಿಕಾರಿಗಳು ಭೇಟಿ

Friday, October 7th, 2016
devadas-home

ಮಂಗಳೂರು: ಯುವತಿಯೊಂದಿಗೆ ಚಿಲ್ಲರೆ ವಿಚಾರದಲ್ಲಿ ನ್ಯಾಯ ಸಿಗದೆ ಅವಮಾನಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡ ಬಸ್ ನಿರ್ವಾಹಕ ದೇವದಾಸ್‌ರವರ ನಿವಾಸಕ್ಕೆ ಕೆಎಸ್ಆರ್‌ಟಿಸಿ ವರ್ಕರ್ಸ್‌ ಯೂನಿಯನ್‌ ಪದಾಧಿಕಾರಿಗಳು ಮತ್ತು ಆಲಂಕಾರು ವ್ಯಾಪ್ತಿಯ ಸಾಮಾಜಿಕ ಕಾರ್ಯಕರ್ತರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಈ ವೇಳೆ ದೇವದಾಸ್‌ರವರ ಪತ್ನಿ ಅಂಗನವಾಡಿ ಕಾರ್ಯಕರ್ತೆ ಉಷಾ ತನ್ನ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡುವಂತೆ ಮನವಿ ಮಾಡಿದರು. ನಾವು ಕೇವಲ ಏಳು ಸೆಂಟ್ಸ್ ಜಾಗದಲ್ಲಿ ಸಣ್ಣ ಮನೆ ಮಾಡಿ ಪತಿ ದೇವದಾಸ್‌ರವರ ಸಂಪಾದನೆಯಲ್ಲಿ ನಮ್ಮ ಜೀವನ ಸಾಗಿಸುತ್ತಿದ್ದೆವು. […]

ಮೀನು ಸಂರಕ್ಷಣಾ ಘಟಕಗಳು ವಿಷಕಾರಿ ಪದಾರ್ಥಗಳು ಇರುವ ಮೀನುಗಳನ್ನು ತಿನ್ನದಂತೆ ಎಚ್ಚರ ವಹಿಸಬೇಕು : ಯು.ಟಿ. ಖಾದರ್

Friday, October 7th, 2016
u-t-khadar

ಮಂಗಳೂರು: ಕೆಂಬೇರಿ ಮೀನಿನ ತಲೆ ಭಾಗ ತಿಂದು ಹಲವಾರು ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೀನುಗಾರಿಕಾ ಕಾಲೇಜಿನ ತಜ್ಞರು, ವಿಜ್ಞಾನಿಗಳು, ಆರೋಗ್ಯ, ಆಹಾರ ಸುರಕ್ಷತೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಸಭೆ ನಡೆಸಿ ಚರ್ಚಿಸಿದರು. ಕೆಂಬೇರಿ, ತೊಂದೆ ಎಂಬ ಹೆಸರಿನ ಮೀನುಗಳ ಕೆಲವು ತಳಿಗಳ ದೇಹದ ಕೆಲವು ಭಾಗಗಳಲ್ಲಿ ವಿಷಕಾರಿ ಪದಾರ್ಥಗಳು ಇರುವುದರಿಂದ ಅವುಗಳನ್ನು ತಿನ್ನದಂತೆ ಎಚ್ಚರ ವಹಿಸಬೇಕು ಹಾಗೂ ಸಂಬಂಧಪಟ್ಟವರು ಇಂತಹ […]

“ಬಣ್ಣ ಬಣ್ಣದ ಬದುಕು” ಕನ್ನಡ ಚಲನ ಚಿತ್ರದ ಧ್ವನಿಸುರುಳಿ ಬಿಡುಗಡೆ

Friday, October 7th, 2016
banna-bannada-baduku

ಮಂಗಳೂರು: ಕುಡಿಯುವ ನೀರು ಕೊಡುವುದಕ್ಕೆ ಯಾವುದೇ ಅಭ್ಯಂತರವಿಲ್ಲ. ಆದರೆ ಕೊಡುವಾಗ ನಮ್ಮಲ್ಲಿ ಇದೆಯಾ ಎಂಬುದು ಈಗಿನ ಪ್ರಶ್ನೆ. ಕಾವೇರಿ ವಿಷಯದಲ್ಲಿ ಕಾಡಿದ ಈ ಪ್ರಶ್ನೆ ನಮ್ಮ ನೆಲದ ನೇತ್ರಾವತಿಗೂ ಅನ್ವಯಿಸಬೇಕು. ನಮಗೇ ನೀರಿಲ್ಲದ ಪರಿಸ್ಥಿತಿ ಸೃಷ್ಟಿಸುವ ಎತ್ತಿನಹೊಳೆ ಯೋಜನೆ ಕುರಿತು ಕರಾವಳಿ ಜನತೆ ಎಚ್ಚೆತ್ತುಕೊಳ್ಳುವ ದಿನಗಳು ಎದುರಾಗಿವೆ ಎಂದು ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಮುತ್ತುರಾಮ್‌ ಕ್ರಿಯೇಷನ್ಸ್‌ ಕಾರ್ಕಳ ಲಾಂಛನದಲ್ಲಿ ತಯಾರಾದ ಕೃಷ್ಣ ನಾಯ್ಕ ಕಾರ್ಕಳ ನಿರ್ಮಾಣ ಹಾಗೂ ಇಸ್ಮಾಯಿಲ್‌ ಮೂಡುಶೆಡ್ಡೆ ನಿರ್ದೇಶನದ […]

ಹೆಜಮಾಡಿ ಟೋಲ್‌ ಸಂಗ್ರಹ ಕೇಂದ್ರ ಡಿಸೆಂಬರ್‌ ಕೊನೆಯ ವಾರದಲ್ಲಿ ಆರಂಭ: ಬಾಬು ರೆಡ್ಡಿ

Friday, October 7th, 2016
hejamadi-toll-gate

ಹಳೆಯಂಗಡಿ: ಹೆಜಮಾಡಿ ಟೋಲ್‌ ಸಂಗ್ರಹ ಕೇಂದ್ರ ಡಿಸೆಂಬರ್‌ ಕೊನೆಯ ವಾರದಲ್ಲಿ ಆರಂಭವಾಗಲಿದೆ ಎಂದು ಹೈದ್ರಾ ಬಾದ್‌ ಯುನೈಟೆಡ್‌ 18 ಯೋಜನಾ ಸಂಸ್ಥೆಯ ಆಡಳಿತ ನಿರ್ದೇಶಕ ಬಾಬು ರೆಡ್ಡಿ ಹೇಳಿದ್ದಾರೆ. ಗುರುವಾರ ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಹೆಜಮಾಡಿ ಟೋಲ್‌ಗೇಟಿನಲ್ಲಿ ನಾಲ್ಕು ಆ್ಯಂಬುಲೆನ್ಸ್‌ ಉಚಿತ ಸೇವೆ ನೀಡಲಿದೆ ಎಂದರು.

ಮಂಗಳೂರು ದಸರಾ: ನಗರದ ಅಂದ ಹೆಚ್ಚಿಸಿದ ವರ್ಣಮಯ ದೀಪಾಲಂಕಾರ

Thursday, October 6th, 2016
mangaluru-dasara

ಮಂಗಳೂರು: ಜನರ ದಸರಾ ಎಂದೇ ಪ್ರಸಿದ್ಧಿಯಾದ ಮಂಗಳೂರು ದಸರಾ ಸಂಭ್ರಮದಲ್ಲಿ ಕರಾವಳಿ ನಗರಿ ಮಿನುಗುತ್ತಿದೆ. ನಗರದ 8 ಕಿ.ಮೀ. ಪ್ರದೇಶದಲ್ಲಿ ನವರಾತ್ರಿಯ ರಾತ್ರಿಗಳಂತೂ ನಕ್ಷತ್ರಗಳ ಲೋಕ. ಆಕಾಶದಲ್ಲಿ ಮಿನುಗುತ್ತಿರುವ ತಾರೆಗಳೇ ಧರೆಯನ್ನೇ ಸ್ಪರ್ಶಿಸಿವೆಯೇನೋ ಎಂಬಂತೆ 20 ಲಕ್ಷ ವಿದ್ಯುತ್‌ ಬಲ್ಬ್‌‌ಗಳು ಇಡೀ ನಗರದ ಅಂದವನ್ನು ಇಮ್ಮಡಿಗೊಳಿಸಿವೆ. ಕುದ್ರೋಳಿಯ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರ ಮಂಗಳೂರು ದಸರಾದ ಕೇಂದ್ರ ಬಿಂದು ಎಂದೇ ಖ್ಯಾತಿ ಗಳಿಸಿದೆ. ಪ್ರಾರಂಭದಲ್ಲಿ ಬಿ.ಜನಾರ್ದನ ಪೂಜಾರಿಯವರ ನೇತೃತ್ವದಲ್ಲಿ ಆರಂಭಗೊಂಡ ಈ ದಸರಾ ವರ್ಷದಿಂದ ವರ್ಷಕ್ಕೆ ಜನಾಕರ್ಷಣೆ ಪಡೆಯುತ್ತಲೇ […]

ಆಳ್ವಾಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ನಾಟಕ ”ಮಹಾಮಾಯಿ” ಪ್ರದರ್ಶನ

Thursday, October 6th, 2016
alwas-ranga-adyayana

ಮೂಡಬಿದಿರೆ:ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಆಭಿನಯಿಸಿರುವ ಜಾನಪದ ನಾಟಕ ”ಮಹಾಮಾಹಿ” ಅಕ್ಟೋಬರ್ 04 ರಿಂದ 5,6,8,9 ರ ತನಕ, ಸಂಜೆ 2.45ಕ್ಕೆ ನುಡಿಸಿರಿ ವೇದಿಕೆ, ವಿದ್ಯಾಗಿರಿಯಲ್ಲಿ ಐದು ಪ್ರದರ್ಶನವನ್ನು ನೀಡಲಿದೆ. ಈಗಾಗಲೇ ಎರಡು ಪ್ರದರ್ಶನವನ್ನು ಅದ್ದೂರಿ ರಂಗಸಕ್ತರ ಸಮ್ಮುಖದಲ್ಲಿ ಪೂರೈಸಿದ್ದು ,ಇನ್ನೂ ಮೂರು ಪ್ರದರ್ಶನ ನಡೆಯಲಿದೆ. ಡಾ ಚಂದ್ರಶೇಖರ ಕಂಬಾರ ರಚನೆಯ , ಜೀವರಾಂ ಸುಳ್ಯ ನಿರ್ದೇಶನ, ಸಂಗೀತ, ರಂಗತಂತ್ರ, ರಂಗವಿನ್ಯಾಸ, ಬೆಳಕು ವಸ್ತ್ರವಿನ್ಯಾಸವನ್ನು ನೀಡಿದ್ದಾರೆ. ನಾಟಕ ವೀಕ್ಷಿಸಲು ಹೆಚ್ಚನ ಸಂಖ್ಯೆಯಲ್ಲಿ ರಂಗಸಕ್ತರು ಆಗಮಿಸಬೇಕು ಎಂದು ಆಯೋಜಕರು […]