ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ಬ್ಯಾರಿ ಭಾಷಾ ದಿನಾಚರಣೆ ಮತ್ತು ಭಾಷಾ ಸಪ್ತಾಹ

Tuesday, October 4th, 2016
beary-language

ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ನಗರದ ಅತ್ತಾವರದಲ್ಲಿರುವ ಕಚೇರಿಯಲ್ಲಿ ನಡೆದ ಬ್ಯಾರಿ ಭಾಷಾ ದಿನಾಚರಣೆ ಹಾಗೂ ಭಾಷಾ ಸಪ್ತಾಹ, ಪ್ರಚಾರ ಆಂದೋಲನ, ಪುಸ್ತಕ ಮಾರಾಟ ಜಾಥಾಕ್ಕೆ ಚಾಲನೆ ನೀಡಲಾಗಿದೆ. ಬ್ಯಾರಿ ದಿನಾಚರಣೆ, ಸಪ್ತಾಹಕ್ಕೆ ಚಾಲನೆ ನೀಡಿದ ದ. ಕ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಎಸ್.ಎಂ.ಆರ್. ರಶೀದ್ ಹಾಜಿ, ಜಿಲ್ಲೆಯಲ್ಲಿರುವ ಮದರಸ ಮತ್ತು ಮಸೀದಿಗಳಲ್ಲಿ ಶಿಕ್ಷಣ ಮತ್ತು ಧಾರ್ಮಿಕ ಉಪನ್ಯಾಸವನ್ನು ಬ್ಯಾರಿ ಭಾಷೆಯಲ್ಲೇ ನೀಡುವ ಮೂಲಕ ಬ್ಯಾರಿ ಭಾಷೆಯ ಅಭಿವೃದ್ಧಿಗೆ ಪ್ರಯತ್ನಗಳಾಗಬೇಕು. ಮದರಸ ಮತ್ತು […]

ಕಟೀಲು ದೇವಸ್ಥಾನದ ಆಡಳಿತ ಮೊಕ್ತೇಸರರ ಮನೆಗೆ ಮುಸುಕುಧಾರಿಗಳಿಂದ ದಾಳಿ

Tuesday, October 4th, 2016
vasudev-asranna-home

ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ವಾಸುದೇವ ಅಸ್ರಣ್ಣ ಅವರ ಮನೆಗೆ ಸೋಮವಾರ ತಡರಾತ್ರಿ ಎಂಟು ಮಂದಿ ಮುಸುಕುಧಾರಿಗಳ ತಂಡ ನುಗ್ಗಿ ಸುಮಾರು 55 ಲಕ್ಷ ರೂ. ಮೌಲ್ಯದ ನಗನಾಣ್ಯ ದೋಚಿ ಪರಾರಿಯಾದ ಘಟನೆ ನಡೆದಿದೆ. ಕಟೀಲು ದೇವಸ್ಥಾನದಲ್ಲಿ ರಾತ್ರಿ ಹುಲಿವೇಷಗಳ ವಿಶೇಷ ಪೂಜೆ ಹಾಗೂ ಕುಣಿತವಿದ್ದ ಕಾರಣ ರಾತ್ರಿ 12.10 ಕ್ಕೆ ವಾಸುದೇವ ಅಸ್ರಣ್ಣ ದೇವಸ್ಥಾನದ ಪಕ್ಕವೇ ಇರುವ ಮನೆಗೆ ದುಷ್ಕರ್ಮಿಗಳು ಬಂದಿದ್ದಾರೆ. ಮನೆಯಲ್ಲಿ ತಾಯಿ, ಪತ್ನಿ, ಸೊಸೆ, ಮಗಳು, ಅವರ ಮಕ್ಕಳು ಇದ್ದರು […]

ಇಸ್ಮಾಯಿಲ್‌ ಅವರನ್ನುಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ 7 ಮಂದಿ ಆರೋಪಿಗಳ ಬಂಧನ

Tuesday, October 4th, 2016
ismail-murder-case

ಮಂಗಳೂರು: ಕರಾವಳಿ ಕಾಂಗ್ರೆಸ್‌ ಅಲ್ಪ ಸಂಖ್ಯಾಕ ಘಟಕದ ಅಧ್ಯಕ್ಷ ಇಸ್ಮಾಯಿಲ್‌ ನೇಲ್ಯಮಜಲು (52) ಅವರನ್ನು ಸೆ. 23 ರಂದು ಸುಳ್ಯದ ಐವರ್ನಾಡು ಮಸೀದಿಯ ಬಳಿ ಬರ್ಬರವಾಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕು ಅಮ್ಮುಂಜೆ ಗ್ರಾಮದ ಕಳಾಯಿ ಮನೆಯ ಅಬ್ದುಲ್‌ ರಶೀದ್‌ ಯಾನೆ ಮುನ್ನಾ (32), ಮಂಗಳೂರು ತಾಲೂಕು ಸುರತ್ಕಲ್‌ ಕೃಷ್ಣಾಪುರ 8 ನೇ ಕ್ರಾಸ್‌ನ ಆಬ್ಟಾಸ್‌ ಯಾನೆ ಇಬು° ಅಬ್ಟಾಸ್‌ (32), ಪುತ್ತೂರು ತಾಲೂಕು ಕೆದಿಲದ ಉಮ್ಮರ್‌ […]

ಶ್ರೀಕೃಷ್ಣಮಠದ ಗರ್ಭಗುಡಿ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿರುವಾಗ ಪುರಾತನ ಕಲಾಕೃತಿ ಪತ್ತೆ

Tuesday, October 4th, 2016
udupi-shreekrishna-mata

ಉಡುಪಿ: ಶ್ರೀಕೃಷ್ಣಮಠದ ಗರ್ಭಗುಡಿ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿರುವಾಗ ಪುರಾತನ ಕಲಾಕೃತಿಯೊಂದು ಗೋಚರಕ್ಕೆ ಬಂದಿದೆ. ಇದು ಸುತ್ತುಪೌಳಿಯ ಮೇಲ್ಭಾಗದಲ್ಲಿ ಗೋಚರಿಸುತ್ತಿದೆ. ಆಕೃತಿ ಪಶ್ಚಿಮ ದಿಕ್ಕಿಗೆ ಮುಖ ಮಾಡಿದೆ. ಮಣ್ಣು ಮತ್ತು ಸುಣ್ಣದಿಂದ ರಚಿಸಲಾದ ಕಲಾಕೃತಿಯಂತೆ ತೋರುತ್ತಿದ್ದು, ಸುಮಾರು ಮೂರು ಅಡಿ ಎತ್ತರವಿದೆ. ಇದು ಗೋಡೆಯಲ್ಲಿ ರಚಿಸಿದ ಉಬ್ಬುಕೃತಿ. ಆ ಕೃತಿಯನ್ನು ಕಂಡಾಗ ವೇದವ್ಯಾಸರು ಮತ್ತು ಮಧ್ವಾಚಾರ್ಯರು ಎಂದು ಅಂದಾಜಿಸಬಹುದಾಗಿದೆ. ಮಣ್ಣಿನ ಆಕೃತಿಯಾದ ಕಾರಣ ಕೆಲವೆಡೆ ಹಾಳಾಗಿದೆ. ಹಾಳಾದ ಕಡೆ ಸಿಮೆಂಟ್‌ ತೇಪೆ ಹಾಕುವುದು ಬೇಡ ಎಂದು ಪರ್ಯಾಯ ಶ್ರೀಪೇಜಾವರ […]

ಮೀನಿನ ಪದಾರ್ಥ ತಿಂದು ಅಸ್ವಸ್ಥರಾದ ಪ್ರಕರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ: ಖಾದರ್‌

Tuesday, October 4th, 2016
u-t-khader

ಉಳ್ಳಾಲ: ಉಳ್ಳಾಲ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚೆಂಬೇರಿ ಮೀನಿನ ತಲೆಭಾಗವನ್ನು ಪದಾರ್ಥ ಮತ್ತು ಫ್ತೈ ಮಾಡಿ ತಿಂದು ಸುಮಾರು 150ಕ್ಕೂ ಹೆಚ್ಚು ಅಸ್ವಸ್ಥರಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್‌ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಚೆಂಬರಿಕ ಮೀನಿನ ತಲೆ ಭಾಗದ ಪದಾರ್ಥ ತಿಂದು ಉಳ್ಳಾಲ, ಅಂಬ್ಲಿಮೊಗರು, ಹರೇಕಳ, ಬಂಟ್ವಾಳ, ನಾಟೆಕಲ್‌ನ ಹಲವು ಕುಟುಂಬಗಳು ಸೇರಿದಂತೆ, ಉಳ್ಳಾಲದ ಫಿಶಮಿಲ್‌ವೊಂದರ ಕಾರ್ಮಿಕರು ಅಸ್ವಸ್ಥರಾಗಿದ್ದರು. ಅಸ್ವಸ್ಥರನ್ನು ಉಳ್ಳಾಲ […]

ಸಂಚಾರ ನಿಯಮ ಉಲ್ಲಂಘಿಸುವ ಪ್ರಕರಣಗಳು ಇನ್ನು ಮುಂದೆ ದಾಖಲೆ ಸಮೇತ ವ್ಯಾಟ್ಸ್‌ಆಪ್‌ ಹಾಗೂ ಫೇಸ್‌ಬುಕ್‌ಗೆ ಅಪ್‌ಲೋಡ್‌ ಆಗಲಿವೆ

Tuesday, October 4th, 2016
traffic-rul-violation-case

ಮಂಗಳೂರು: ರಸ್ತೆಯಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಸಂಚಾರ ನಿಯಮ ಉಲ್ಲಂಘಿಸುವ ಪ್ರಕರಣಗಳು ಇನ್ನು ಮುಂದೆ ದಾಖಲೆ ಸಮೇತ ದ.ಕ. ಜಿಲ್ಲಾ ಎಸ್‌ಪಿ ಕಚೇರಿಯ ವ್ಯಾಟ್ಸ್‌ಆಪ್‌ ಹಾಗೂ ಫೇಸ್‌ಬುಕ್‌ಗೆ ಅಪ್‌ಲೋಡ್‌ ಆಗಲಿವೆ. ಇಂತಹ ಸೌಲಭ್ಯವನ್ನು ದ.ಕ. ಜಿಲ್ಲೆಯ ಸಾರ್ವಜನಿಕರಿಗೆ ಪೊಲೀಸರು ಒದಗಿಸಿದ್ದಾರೆ. ಈ ಯೋಜನೆ ಅ.4ರಿಂದಲೇ ಜಾರಿಗೆ ಬರಲಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭೂಷಣ್‌ ಗುಲಾಬ್‌ರಾವ್‌ ಬೊರಸೆ ಅವರು ಸೋಮವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು. ನಮ್ಮ ಟ್ರಾಫಿಕ್‌ ಹೆಸರಿನ ವಾಟ್ಸ್‌ಆಪ್‌ 9480805300 ನಂಬರನ್ನು ಸಾರ್ವಜನಿಕರ ಉಪಯೋಗಕ್ಕೆ […]

ಶಕ್ತಿ ಸ್ವರೂಪಿಣಿಯಾದ ಜಗನ್ಮಾತೆಯ ಆರಾಧನೆ ಭರತಖಂಡದಲ್ಲಿ ಮಹತ್ವ ಪಡೆದಿದೆ: ಸಾಧ್ವಿ ಶ್ರೀಮಾತಾನಂದಮಯೀ

Monday, October 3rd, 2016
kasaragodu-dasara

ಕಾಸರಗೋಡು: ಸುಸ್ಥಿರ ಸಮಾಜ ನಿರ್ಮಾಣದಲ್ಲಿ ಸಾಹಿತ್ಯ ಬರಹಗಳ ಪಾತ್ರ ಮಹತ್ವದ್ದಾಗಿದ್ದು, ಅವುಗಳ ಪೋಷಣೆ, ಪ್ರೇರಣಾತ್ಮಕ ಕಾರ್ಯಕ್ರಮಗಳು ಅಗತ್ಯ. ಸಾಮಾಜಿಕ ಜೀವನದ ಮೇಲೆ ಹೆಚ್ಚು ಪ್ರಭಾವಶಾಲಿಯಾಗುವ ಬರಹಗಳು ಬೆಳವಣಿಗೆಗಳ ಕೈದೀವಿಗೆಗಳೆಂದು ಒಡಿಯೂರು ದತ್ತಾಂಜನೇಯ ಕ್ಷೇತ್ರದ ಸಾಧ್ವಿ ಶ್ರೀಮಾತಾನಂದಮಯೀ ಅಭಿಪ್ರಾಯವ್ಯಕ್ತಪಡಿಸಿದರು. ಕೋಟೆಕಣಿ ಶ್ರೀರಾಮನಾಥ ಸಾಂಸ್ಕೃತಿಕ ಭವನ ಸಮಿತಿ ನೇತೃತ್ವದಲ್ಲಿ ಭಾನುವಾರ ಸಂಜೆ ನಡೆದ ಕಾಸರಗೋಡು ದಸರಾ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಶ್ಯಾಮಲಾ ರವಿರಾಜ್ ಕುಂಬಳೆಯವರ ಅಮೃತಬಿಂದು ಕವನ ಸಂಕಲನ ಇಡುಗಡೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸಂಸ್ಕೃತಿ, ಪ್ರಕೃತಿಗಳು […]

ಕಿವಿಗೆ ಮೊಬೈಲ್ ಹೆಡ್‌ಫೋನ್ ಅಳವಡಿಸಿಕೊಂಡ ಯುವಕನಿಗೆ ಡೆಮೊ ರೈಲು ಬಡಿದು ಸ್ಥಳದಲ್ಲೇ ಸಾವು

Monday, October 3rd, 2016
jagat-hegde

ಕುಂದಾಪುರ: ಕಿವಿಗೆ ಮೊಬೈಲ್ ಹೆಡ್‌ಫೋನ್ ಅಳವಡಿಸಿಕೊಂಡು ರೈಲ್ವೆ ಟ್ರ್ಯಾಕ್ ಮೇಲೆ ನಡೆದು ಹೋಗುತ್ತಿದ್ದ ಯುವಕನಿಗೆ ಡೆಮೊ ರೈಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಕುಂದಬಾರಂದಾಡಿ ಸಮೀಪ ನಡೆದಿದೆ. ಬೆಂಗಳೂರಿನ ನಿವಾಸಿ ಜಗತ್ ಹೆಗ್ಡೆ(23) ಸಾವನ್ನಪ್ಪಿದ ದುರ್ದೈವಿಯಾಗಿದ್ದು, ಜಗತ್ ಕುಟುಂಬ ದೂರದ ಬೆಂಗಳೂರಿನಲ್ಲಿ ನೆಲೆಸಿದೆ. ಈತ ನಿನ್ನೆ ತನ್ನ ಅಜ್ಜಿಯನ್ನು ಬಿಡಲು ಬೆಂಗಳೂರಿನಿಂದ ಕುಂದಬಾರಂದಾಡಿಗೆ ಕಾರಿನಲ್ಲಿ ಬಂದಿದ್ದರು ಎನ್ನಲಾಗಿದೆ. ನಿನ್ನೆ ಸಂಜೆ ತನ್ನ ಅಜ್ಜಿಯನ್ನು ಮನೆಯಲ್ಲಿ ಬಿಟ್ಟು ರಾತ್ರಿ ಅದೇ ಕಾರಿನಲ್ಲಿ ಬೆಂಗಳೂರಿಗೆ ವಾಪಸ್ಸಾಗುವವರಿದ್ದರು. ಅಷ್ಟರಲ್ಲಿಯೇ ಸ್ವಲ್ಪ […]

ಮೀನು ತಿಂದು ಅಸ್ವಸ್ಥರಾದ ಕಾರ್ಮಿಕರು ಆಸ್ಪತ್ರೆಗೆ ದಾಖಲು

Monday, October 3rd, 2016
fish

ಮಂಗಳೂರು: ಮೀನು ತಿಂದು ಅಸ್ವಸ್ಥರಾದ ಸುಮಾರು 200 ಕಾರ್ಮಿಕರು ಆಸ್ಪತ್ರೆಗೆ ದಾಖಲಾದ ಘಟನೆ ಜಿಲ್ಲೆಯ ಉಳ್ಳಾಲದಲ್ಲಿ ನಡೆದಿದೆ. ಇಲ್ಲಿನ ಬರಾಕಾ ಮೀನಿನ ಕಾರ್ಖಾನೆಯ ಕಾರ್ಮಿಕರು ಸಹಿತ ನಾಟೆಕಲ್ ಹಾಗೂ ಉಳ್ಳಾಲದ ಮನೆಮಂದಿ ಅಸ್ವಸ್ಥರಾಗಿ ತೊಕ್ಕೊಟ್ಟು ಸಹಿತ ದೇರಳಕಟ್ಟೆಯ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಇವರ ಪೈಕಿ ಒಂದೇ ಮನೆಯ ನಾಲ್ವರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ. ಉಳ್ಳಾಲದಲ್ಲಿರುವ ಫಿಶ್ ಮಿಲ್‌‌ನಲ್ಲಿ ಇರುವ ಸುಮಾರು 300 ಕಾರ್ಮಿಕರು ಶುಕ್ರವಾರ ರಾತ್ರಿ ಊಟ ಮುಗಿಸಿ ಮಲಗುವ ವೇಳೆಗೆ ಅಸ್ವಸ್ಥಗೊಂಡಿದ್ದರು. ಊಟ ಮುಗಿದ ತಕ್ಷಣ […]

ಭಾಸ್ಕರ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು

Monday, October 3rd, 2016
baskar-shetty-murder-case

ಉಡುಪಿ: ಉದ್ಯಮಿ ಭಾಸ್ಕರ ಶೆಟ್ಟಿ ಹತ್ಯೆ ಪ್ರಕರಣದ ಸಾಕ್ಷ್ಯನಾಶ ಮಾಡಿದ್ದ ಆರೋಪದಲ್ಲಿ ಬಂಧಿತರಾಗಿದ್ದ ಇಬ್ಬರು ಆರೋಪಿಗಳಿಗೆ ಉಡುಪಿ ಜಿಲ್ಲಾ ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಶ್ರೀನಿವಾಸ ಭಟ್ಟ ಮತ್ತು ರಾಘವೇಂದ್ರ ಎಂಬುವವರು ಕೊಲೆ ಪ್ರಕರಣದ ಸಾಕ್ಷ್ಯನಾಶ ಮಾಡಿದ್ದ ಆರೋಪದಲ್ಲಿ ಬಂಧಿತರಾಗಿದ್ದರು. ಭಾನುವಾರ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ. ಶ್ರೀನಿವಾಸ್ ಭಟ್‌‌ ಕೊಲೆ ಪ್ರಕರಣದ ಮೂರನೇ ಆರೋಪಿಯಾಗಿರುವ ನಿರಂಜನ್ ಭಟ್‌‌ ಅವರ ತಂದೆಯಾಗಿದ್ದಾರೆ.ಇನ್ನು ರಾಘವೇಂದ್ರ ನಿರಂಜನ್ ಭಟ್‌‌ನ […]