ಧರ್ಮಸ್ಥಳ : ಸಮವಸರಣ ಪೂಜಾ ವೈಭವ

Saturday, December 12th, 2015
Dharmasthala

ಧರ್ಮಸ್ಥಳ : ಲಕ್ಷದೀಪೋತ್ಸವ ಸಂದರ್ಭದಲ್ಲಿ ಶುಕ್ರವಾರ ರಾತ್ರಿ ಮಹೋತ್ಸವ ಸಭಾ ಭವನದಲ್ಲಿ ಸಮವಸರಣ ಪೂಜಾ ವೈಭವವನ್ನು ಊರ-ಪರವೂರ ಶ್ರಾವಕ-ಶ್ರಾವಕಿಯರು ವೀಕ್ಷಿಸಿ ಪೂನ್ಯ ಸಂಚಯ ಮಾಡಿಕೊಂಡರು. ಉತ್ಸಾಹದಿಂದ ಭಾಗವಹಿಸಿದರು. ಬೀಡಿನಿಂದ (ಹೆಗ್ಗಡೆಯವರ ನಿವಾಸ) ಸಭಾ ಭವನಕ್ಕೆ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ತೀರ್ಥಂಕರರ ಭವ್ಯ ಮೆರವಣಿಗೆ ಬಳಿಕ ಮಹೋತ್ಸವ ಸಭಾ ಭವನದಲ್ಲಿ ಸಮವಸರಣ ಪೂಜೆ ನಡೆಯಿತು. ಪಂಚ ನಮಸ್ಕಾರ ಮಂತ್ರ ಪಠಣ, ಅಷ್ಟವಿಧಾರ್ಚನೆ ಪೂಜೆ, ಸಂಗೀತ ಪೂಜೆ ಇತ್ಯಾದಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಸಾಕ್ಷಾತ್ ಸಮವಸರಣವನ್ನು ಪ್ರತ್ಯಕ್ಷವಾಗಿ ವೀಕ್ಷಿಸಿದಂತಾಯಿತು. ಧರ್ಮಾಧಿಕಾರಿ […]

ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ: ಸಾಹಿತ್ಯ ಸಮ್ಮೇಳನದ ಉದ್ಘಾಟನೆ:

Thursday, December 10th, 2015
Darmasthala Deepotsava

ಧರ್ಮಸ್ಥಳ : ಲಕ್ಷದೀಪೋತ್ಸವ ಸಂದರ್ಭದಲ್ಲಿ ಗುರುವಾರ ಅಮೃತವರ್ಷಿಣಿ ಸಭಾಭವನದಲ್ಲಿ ಸಾಹಿತ್ಯ ಸಮ್ಮೇಳನದ ಎಂಬತ್ತಮೂರನೆ ಅಧಿವೇಶನವನ್ನು ಖ್ಯಾತ ಸಂಶೋಧಕ ಡಾ. ಷ. ಶೆಟ್ಟರ್ ಉದ್ಘಾಟಿಸಿ ಮಾತನಾಡಿದರು. ನಮ್ಮತನವನ್ನು ಧರ್ಮ ಮತ್ತು ಸಾಹಿತ್ಯದ ಮೇಲೆ ಹೇರುವುದು ಸರಿಯಲ್ಲ. ದೇಶಕ್ಕೆ ಸ್ವಾತಂತ್ರ್ಯ ದೊರಕಿದ ಬಳಿಕ ನಾವು ವಿಶಾಲ ಮನೋಭಾವವನ್ನು ಕಳೆದುಕೊಂಡು ಕುಬ್ಜರಾಗುತ್ತಿದ್ದೇವೆ. ಇಂದಿನ ವಿಚಿತ್ರವಾದ ಅಸಹಿಷ್ಣುತೆ ಎಲ್ಲಾ ಸಮಾಜದಲ್ಲಿಯೂ ಇದೆ. ಆದರೆ, ಅಲ್ಲಿ ಸಾಹಿತಿಗಳಿಲ್ಲ, ವಿಚಾರವಂತರಿದ್ದಾರೆ. ಧರ್ಮ ಗುರುಗಳಿಲ್ಲ, ರಾಜಕೀಯ ವ್ಯಕ್ತಿಗಳಿದ್ದಾರೆ. ಮುಕ್ತ ಮನಸ್ಸಿನಿಂದ ಇಂದು ಸಂಶೋಧನೆ ಮಾಡುವುದೇ ಅಪರಾಧವಾಗಿದೆ ಎಂದು […]

ಪಾವೂರು ಮರಳುಗಾರಿಕೆಯನ್ನು ನಿಯಂತ್ರಿಸಲು ಒತ್ತಾಯಿಸಿ ಪ್ರತಿಭಟನಾ ಧರಣಿ

Thursday, December 10th, 2015
Sand

ಮಂಗಳೂರು : ಪಾವೂರು ಗ್ರಾಮದ ಉಳಿಯ ದ್ವೀಪ (ಕುದ್ರು)ವಿನಲ್ಲಿ ವ್ಯಾಪಕ ಮರಳುಗಾರಿಕೆಯಿಂದ ಕುದ್ರುವಿನಲ್ಲಿರುವ ಮನೆಗಳು ನದಿ ಪಾಲಾಗುವ ಸಾಧ್ಯತೆಯಿದ್ದು ಈ ಮರಳುಗಾರಿಕೆಯನ್ನು ನಿಯಂತ್ರಿಸಲು ಆಗ್ರಹಿಸಿ ಡಿವೈಎಫ್‌ಐ ದ.ಕ. ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನಾ ಧರಣಿ ನಡೆಯಿತು. ಪ್ರತಿಭಟನಾ ಧರಣಿಯನ್ನು ಉದ್ಘಾಟಿಸಿ ಮಾತನಾಡಿದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಜಿಲ್ಲಾಡಳಿತದ ನಿಯಮಗಳನ್ನು ಗಾಳಿಗೆ ತೂರಿ ಮರಳುಗಾರಿಕೆ ನಡೆಯುತ್ತಿದ್ದು ಇದನ್ನು ಕಡಿವಾಣ ಹಾಕಲು ಜಿಲ್ಲಾಡಳಿತಕ್ಕೆ ಏಕೆ ಸಾಧ್ಯವಾಗುತ್ತಿಲ್ಲ? ಎಂದು ಪ್ರಶ್ನಿಸಿದರು. ಜಿಲ್ಲೆಯ ಜನಪ್ರತಿನಿಧಿಗಳ ಹಿಂಬಾಲಕರು ಮರಳುಗಾರಿಕೆಯನ್ನು ನಡೆಸುತ್ತಿದ್ದು […]

ಮಾಲಿನ್ಯ ನಿಯಂತ್ರಣಕ್ಕೆ ಆಧುನಿಕ ಉಪಕರಣಗಳ ಬಳಕೆ- ಶಾಸಕ ಬಾವಾ ಸೂಚನೆ

Thursday, December 10th, 2015
Moideen Bava

ಮ೦ಗಳೂರು : ಸುರತ್ಕಲ್, ಬೈಕಂಪಾಡಿ, ನವಮಂಗಳೂರು ವ್ಯಾಪ್ತಿ ಸೇರಿದಂತೆ ಕೈಗಾರಿಕೆಗಳಿಂದ ಮಾಲಿನ್ಯ ಸಂಭವಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ 2 ತಿಂಗಳೊಳಗೆ ವರದಿ ನೀಡುವಂತೆ ಮಂಗಳೂರು ಉತ್ತರ ಶಾಸಕ ಬಿ.ಎ. ಮೊಹಿದೀನ್ ಬಾವಾ ಅವರು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅವರು ಗುರುವಾರ ಬೈಕಂಪಾಡಿ ಕೈಗಾರಿಕಾ ಪ್ರದೇಶದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಭಾಂಗಣದಲ್ಲಿ ಉದ್ದಿಮೆಗಳಲ್ಲಿ ಮಾಲಿನ್ಯ ನಿಯಂತ್ರಣ-ಪರಿಸರ ಜಾಗೃತಿ ಮೂಡಿಸುವ ಸಂಬಂಧ ನಡೆದ ಸಭೆಯನು ಉದ್ಘಾಟಿಸಿ […]

ಮಣ್ಣಗುಡ್ಡೆ 64ನೇಯ ಗುರ್ಜಿ ದೀಪೋತ್ಸವ

Wednesday, December 9th, 2015
mannagudda-gurji

ಮಂಗಳೂರು : ಕನಿಕರಿಸುವ ಹೃದಯಕ್ಕಿಂತ ಕಣ್ಣೀರಿಡುವ ನಯನಗಳಿಗಿಂತ ಸಹಾಯ ನೀಡುವ ಕೈಗಳೇ ಮೇಲು ಎಂಬುದನ್ನು ಫ್ರೆಂಡ್ಸ್ ಬಲ್ಲಾಳ್‌ಬಾಗ್-ಬಿರುವೆರ್ ಕುಡ್ಲ ಸಂಘಟನೆ ತೋರಿಸಿಕೊಟ್ಟಿದೆ.64ನೇಯ ಗುರ್ಜಿ ದೀಪೋತ್ಸವದಲ್ಲಿ ನರರೋಗದಿಂದ ಬಳಲುತ್ತಿರುವ ಧನುಷ್ ಎಂಬ 2 ವರ್ಷದ ಮಗುವಿಗೆ ರೂಪಾಯಿ 50,000/-ಹಾಗೂ ಪಾರ್ಶ್ವವಾಯುವಿನಿಂದ ಬಳಲುತ್ತಿರುವ ರಾಜೇಶ್ ಬಂಗೇರರಿಗೆ ರೂಪಾಯಿ 25,000/- ಧನ ಸಹಾಯ ನೀಡುವ ಮೂಲಕ ಮಾನವೀಯ ಮೌಲ್ಯವನ್ನು ಫ್ರೆಂಡ್ಸ್ ಬಳ್ಳಾಲ್‌ಬಾಗ್ ಎತ್ತಿಹಿಡಿಯಿತು. ಮಂಗಳವಾರ ನಡೆದ ಮಣ್ಣಗುಡ್ಡೆ ಗುರ್ಜಿ ದೀಪೋತ್ಸವದಲ್ಲಿ ಫ್ರೆಂಡ್ಸ್ ಬಳ್ಳಾಲ್‌ಬಾಗ್-ಬಿರುವೆರ್ ಕುಡ್ಲ ಸಂಘಟನೆ ಮಾದರಿ ಕಾರ್ಯಕ್ರಮವೊಂದನ್ನು ಮಾಡಿ ಸರ್ವರ […]

ಕೋಟ ಶ್ರೀನಿವಾಸ ಪೂಜಾರಿ ನಾಮಪತ್ರ ಸಲ್ಲಿಕೆ

Monday, December 7th, 2015
Kota Poojary

ಮಂಗಳೂರು : ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಚುನಾವಣೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಕ್ಷೇತ್ರದಿಂದ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಹಾಲಿ ಸದಸ್ಯ, ಮಾಜಿ ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಇಂದು ಚುನಾವಣಾ ಅಧಿಕಾರಿಗಳಾದ ದ.ಕ.ಜಿಲ್ಲಾಧಿಕಾರಿಯವರಿಗೆ ತನ್ನ ನಾಮಪತ್ರವನ್ನು ಸಲ್ಲಿಸಿದರು. ಪಕ್ಷದ ಕೋಡಿಯಾಲಬೈಲ್ ಕಛೇರಿಯಲ್ಲಿ, ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಸಭೆ ಮತ್ತು ವಿಧಾನಪರಿಷತ್ತಿನ ವಿರೋಧಪಕ್ಷದ ಮುಖ್ಯ ಸಚೇತಕರುಗಳಾದ ಶ್ರೀ ಸುನೀಲ್ ಕುಮಾರ್, ಕ್ಯಾ|ಗಣೇಶ್ ಕಾರ್ಣಿಕ್, ಶಾಸಕ ಎಸ್.ಅಂಗಾರ, ಜಿಲ್ಲಾಧ್ಯಕ್ಷರುಗಳಾದ ಕೆ.ಪ್ರತಾಪಸಿಂಹ ನಾಯಕ್, ತಿಂಗಳೆ […]

ತಮಿಳುನಾಡು ಚೆನೈ ಮಹಾ ನೆರೆಯ ಬಗ್ಗೆ ಕದ್ರಿಯಲ್ಲಿ ಸಾಮೂಹಿಕ ಪ್ರಾರ್ಥನೆ

Monday, December 7th, 2015
Prarthane

ಮಂಗಳೂರು : ಚೆನೈ ಮಹಾ ನೆರೆಯ ದುರಂತದ ಸಂತ್ರಸ್ತರ ಕ್ಷೇಮಕ್ಕಾಗಿ ಹಾಗೂ ಲೋಕಕಲ್ಯಾಣಾರ್ಥಕ್ಕಾಗಿ ಶ್ರೀಕ್ಷೇತ್ರ ಕದ್ರಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಕಾರ್ತಿಕ ಸೋಮವಾರವಾದ ತಾ. ಡಿ.7ಶ್ರೀ ಎ.ಜೆ. ಶೆಟ್ಟಿಯವರ ನೇತೃತ್ವದಲ್ಲಿ ಕ್ಷೇತ್ರದ ತಂತ್ರಿಗಳಾದ ವಿಠಲದಾಸ ತಂತ್ರಿಗಳು, ಪ್ರಧಾನ ಅರ್ಚಕರಾದ ರಾಮಚಂದ್ರ ಅಡಿಗರು ಮಹಾರುದ್ರಾಭಿಷೇಕ ನೆರವೇರಿಸಿದರು. ಶ್ರೀ ಎಸ್. ಪ್ರದೀಪ ಕುಮಾರ ಕಲ್ಕೂರ ಅವರ ಮಾರ್ಗದರ್ಶನದಲ್ಲಿ ಜರಗಿದ ಈ ಪ್ರಾರ್ಥನೆಯ ಸಂದರ್ಭದಲ್ಲಿ ದೇಳದ ಆಡಳಿತ ಕಾರ‍್ಯನಿರ್ವಾಹಣಾಧಿಕಾರಿ ನಿಂಗಯ್ಯ, ಆಡಳಿತಾಧಿಕಾರಿ ಶ್ರೀನಿವಾಸ, ಪ್ರಭಾರ ಕಾರ್ಯನಿರ್ವಹಣಾಧಿಕಾರಿ ರಾಜು ಮೊಗವೀರ, ಕೃಷ್ಣ ಜನ್ಮೋತ್ಸವ […]

ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಪ್ರಾರಂಭ: ರಾಜ್ಯ ಮಟ್ಟದ ವಸ್ತು ಪ್ರದರ್ಶನ ಉದ್ಘಾಟನೆ

Monday, December 7th, 2015
Lakshadeepa

ಧರ್ಮಸ್ಥಳ : ಲಕ್ಷದೀಪೋತ್ಸವ ಸಂದರ್ಭದಲ್ಲಿ ಅಲ್ಲಿನ ಪ್ರೌಢಶಾಲಾ ವಠಾರದಲ್ಲಿ ಆಯೋಜಿಸಲಾದ ರಾಜ್ಯ ಮಟ್ಟದ ವಸ್ತು ಪ್ರದರ್ಶನವನ್ನು ಭಾನುವಾರ ದ.ಕ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಉದ್ಘಾಟಿಸಿದರು. ನಾವೆಲ್ಲರೂ ಜಾತಿ-ಮತ, ಭೇದ ಮರೆತು ಪರಸ್ಪರ ಪ್ರೀತಿ-ವಿಶ್ವಾಸದಿಂದ ದೇಶದ ಪ್ರಗತಿಗಾಗಿ ಸಂಘಟಿತ ಪ್ರಯತ್ನ ಮಾಡಬೇಕು ಎಂದು ದ.ಕ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಹೇಳಿದರು. ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಅಲ್ಲಿನ ಪ್ರೌಢಶಾಲಾ ವಠಾರದಲ್ಲಿ ಆಯೋಜಿಸಲಾದ ರಾಜ್ಯ ಮಟ್ಟದ ವಸ್ತು ಪ್ರದರ್ಶನವನ್ನು ಭಾನುವಾರ ಉದ್ಘಾಟಿಸಿ ಅವರು […]

ಧರ್ಮಸ್ಥಳದ ಎಲ್ಲಾ ವ್ಯವಹಾರಗಳು ಕಾನೂನು ಬದ್ಧವಾಗಿವೆ

Monday, December 7th, 2015
Laksha Deepotsava

ಧರ್ಮಸ್ಥಳ : ಲಕ್ಷದೀಪೋತ್ಸವದ ಪ್ರಾರಂಭದ ದಿನವಾದ ಭಾನುವಾರ ಉಜಿರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಬಂದ ಭಕ್ತಾದಿಗಳನ್ನು ಉದ್ದೇಶಿಸಿ ಅಮೃತವರ್ಷಿಣಿ ಸಭಾ ಭವನದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಧರ್ಮಸ್ಥಳದ ಎಲ್ಲಾ ವ್ಯವಹಾರಗಳು ಕಾನೂನು ರೀತಿಯಲ್ಲಿ ಕ್ರಮ ಬದ್ಧವಾಗಿವೆ. ಶ್ರೀ ಮಂಜುನಾಥ ಸ್ವಾಮಿ, ಧರ್ಮದೇವತೆಗಳು ಹಾಗೂ ಅಣ್ಣಪ್ಪ ಸ್ವಾಮಿಯ ಅನುಗ್ರಹದಿಂದ ಕ್ಷೇತ್ರದ ಎಲ್ಲಾ ಕಾರ್ಯಗಳು ನಿರ್ವಿಘ್ನವಾಗಿ ನಡೆಯುತ್ತಿವೆ. ಯಾವುದನ್ನೂ ನಾನು ಮಾಡುವುದಲ್ಲ. ದೇವರು ನನ್ನಿಂದ ಮಾಡಿಸುತ್ತಾರೆ ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಲಕ್ಷದೀಪೋತ್ಸವದ ಪ್ರಾರಂಭದ ದಿನವಾದ […]

ಸೌರ ವಿದ್ಯುತ್‌ ಘಟಕಗಳ ಅಳವಡಿಕೆಗೆ ಬ್ಯಾಂಕ್‌ಗಳ ವಿಶೇಷ ಸಾಲ ಅಗತ್ಯ

Monday, December 7th, 2015
Solar Systems

ಮಂಗಳೂರು: ಮನೆಗಳ ಮೇಲ್ಛಾವಣಿಗಳಲ್ಲಿ ಸೌರ ವಿದ್ಯುತ್‌ ಘಟಕಗಳ ಅಳವಡಿಕೆಗೆ ಬ್ಯಾಂಕ್‌ಗಳು ವಿಶೇಷ ಒತ್ತು ನೀಡಿ ಅಗತ್ಯ ಸಾಲ ಸೌಲಭ್ಯವನ್ನು ತ್ವರಿತಗತಿಯಲ್ಲಿ ಒದಗಿಸಲು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎ. ಬಿ. ಇಬ್ರಾಹಿಂ ಅವರು ಹೇಳಿದರು. ಸೌರಶಕ್ತಿ ಮೇಲ್ಛಾವಣಿ ಘಟಕ ಅಳವಡಿಕೆಯ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಜರಗಿದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು ಅರ್ಜಿ ಸಲ್ಲಿಸಿದ ಒಂದು ವಾರದೊಳಗೆ ಸಾಲ ಲಭ್ಯವಾಗುವಂತೆ ಬ್ಯಾಂಕ್‌ಗಳು ವಿಶೇಷ ಮುತುವರ್ಜಿ ವಹಿಸಬೇಕು ಹಾಗೂ ಬಡ್ಡಿದರವನ್ನೂ ಕಡಿಮೆ ಪ್ರಮಾಣದಲ್ಲಿ ವಿಧಿಸಬೇಕು ಎಂದು ಕೋರಿದರು. ಜಿಲ್ಲಾಧಿಕಾರಿ […]