ಪರಿಷತ್ ಸದಸ್ಯ ಐವನ್ ಡಿಸೋಜಾ ಅವರ ಮನೆಗೆ ಸೌರಶಕ್ತಿ ಮೇಲ್ಛಾವಣಿ

Friday, October 23rd, 2015
Ivan Solar

ಮಂಗಳೂರು : ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ತಮ್ಮ ಮನೆಗೆ ಸೌರಶಕ್ತಿ ಮೇಲ್ಛಾವಣಿಯನ್ನು ಅಳವಡಿಸಿದ್ದಾರೆ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಶಾಸಕ ಮೊಯಿದೀನ್ ಬಾವಾ ಬುಧವಾರ ಸೌರಶಕ್ತಿ ಮೇಲ್ಛಾವಣಿ ಘಟಕ ಅಳವಡಿಕೆಗೆ ಚಾಲನೆ ನೀಡಿದರು. ಪ್ರತಿದಿನ 47 ಯೂನಿಟ್ ವಿದ್ಯುತ್ ಉತ್ಪಾದನೆ ಮಾಡುವ ಶಕ್ತಿಯನ್ನು ಹೊಂದಿದೆ. ಸುಮಾರು 7.50 ಲಕ್ಷದಿಂದ 8 ಲಕ್ಷ ರೂಪಾಯಿ ತನಕ ವೆಚ್ಚ ಮಾಡಿ, ದಿನವೊಂದಕ್ಕೆ 47 ಯೂನಿಟ್ ವಿದ್ಯುತ್ ಉತ್ಪಾದನೆ ಮಾಡುವ ಘಟಕ ನಿರ್ಮಾಣ ಮಾಡಲಾಗಿದೆ. ಈ ಸೌರಶಕ್ತಿ ಘಟಕದಿಂದ ತಿಂಗಳಿಗೆ ತನ್ನ […]

ದ.ಕ.ಜಿಲ್ಲಾ ಪೊಲೀಸ್ ಫೇಸ್‌ಬುಕ್, ಟ್ವಿಟರ್ ಸೇರಿದಂತೆ ನೂತನ ವೆಬ್ ಸೈಟ್ ಗೆ ಚಾಲನೆ

Sunday, October 18th, 2015
Police website

ಮಂಗಳೂರು : ದ.ಕ.ಜಿಲ್ಲಾ ಪೊಲೀಸ್ ವತಿಯಿಂದ ಹೊಸ ತಂತ್ರಾಂಶಗಳಾದ ಫೇಸ್‌ಬುಕ್, ಟ್ವಿಟರ್ ಸೇರಿದಂತೆ ನೂತನ ವೆಬ್ ಸೈಟ್ ನ್ನು ಶನಿವಾರ ಎಸ್ಪಿ ಕಚೇರಿಯಲ್ಲಿ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಎಸ್.ಡಿ. ಅವರು ಚಾಲನೆ ನೀಡಿದರು. ದ.ಕ. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುವ ಅಪರಾಧ ಸೇರಿದಂತೆ ವಿವಿಧ ಸುದ್ದಿಗಳ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿದ್ದ ಜಿಲ್ಲಾ ಪೊಲೀಸ್ ಬ್ಲಾಗ್‌ನಲ್ಲಿ ಇದೀಗ ಸಮಗ್ರ ಮಾಹಿತಿಯನ್ನು ಅಳವಡಿಸಲಾಗಿದ್ದು, ಸಾರ್ವಜನಿಕರು ಕೂಡಾ ಇದರ ಸದುಪಯೋಗ ಪಡೆಯಬಹುದು ಎಂದು ಹೇಳಿದರು. […]

ಮನಾಪದ ಮಲೇರಿಯಾ ನಿಯಂತ್ರಣ ತಂತ್ರಾಂಶದ ಬಿಡುಗಡೆ

Sunday, October 18th, 2015
malaria software

ಮಂಗಳೂರು: ಮಂಗಳೂರು ಮೆಡಿಕಲ್‌ ರಿಲೀಫ್‌ ಸೊಸೈಟಿ, ಐ ಪಾಯಿಂಟ್‌ ಕನ್ಸಲ್ಟಂಟ್‌, ಕೋಟ್‌ ಕ್ರಾಫ್ಟ್‌ ಟೆಕ್ನಾಲಜಿ, ಕರ್ಣಾಟಕ ಬ್ಯಾಂಕ್‌, ಕಾರ್ಪೊರೇಶನ್‌ ಬ್ಯಾಂಕ್‌ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾದ ಮಲೇರಿಯಾ ನಿಯಂತ್ರಣ ತಂತ್ರಾಂಶವನ್ನು ಸಚಿವ ಯು.ಟಿ. ಖಾದರ್‌ ಶನಿವಾರ ಮನಪಾ ಸಭಾಂಗಣದಲ್ಲಿ ಬಿಡುಗಡೆಗೊಳಿಸಿದರು. ಮಲೇರಿಯಾ ನಿಯಂತ್ರಣ ತಂತ್ರಾಂಶ ಅಭಿವೃದ್ಧಿಪಡಿಸುವುದರ ಮೂಲಕ ಆರೋಗ್ಯವಂತ ಮಂಗಳೂರು ನಿರ್ಮಾಣಕ್ಕೆ ಮಂಗಳೂರು ಮಹಾನಗರ ಪಾಲಿಕೆ ದೇಶದಲ್ಲೇ ಪ್ರಥಮ ಹೆಜ್ಜೆ ಇರಿಸಿದೆ. ಮುಂದಿನ ಮೂರು ವರ್ಷದೊಳಗೆ ನಗರದಲ್ಲಿ ಮಲೇರಿಯಾ ಸಂಪೂರ್ಣ ನಿಯಂತ್ರಣವಾಗುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಸಚಿವ ಯು.ಟಿ. ಖಾದರ್‌ […]

ಕುದ್ರೋಳಿ : ಎತ್ತಿನಹೊಳೆ ಯೋಜನೆ ಕೈಬಿಡಲು ಪೂಜಾರಿ ಉರುಳು ಸೇವೆ

Saturday, October 17th, 2015
Poojary Urulu seva

ಮಂಗಳೂರು : ಎತ್ತಿನ ಹೊಳೆ ಯೋಜನೆ ಜಾರಿ ಮಾಡುವುದನ್ನು ವಿರೋಧಿಸಿ ಹಿರಿಯ ಕಾಂಗ್ರೆಸ್‌ ನಾಯಕ , ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅವರಿಂದು ಶುಕ್ರವಾರ ಕುದ್ರೋಳಿ ಶ್ರೀ ಗೋಕರ್ಣ ನಾಥೇಶ್ವರನಸನ್ನಿಧಿಯಲ್ಲಿ ಉರುಳು ಸೇವೆ ಮಾಡುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟಿಸಿದರು. ದೇವಸ್ತಾನದಲ್ಲಿ ನವರಾತ್ರಿ ಆಚರಣೆ ನಡೆಯುತ್ತಿದ್ದು,ಲೋಕಕಲ್ಯಾಣಾರ್ಥವಾಗಿ ಮತ್ತು ಎತ್ತಿನಹೊಳೆ ಯೋಜನೆ ಕೈಬಿಡಲು ಪೂಜಾರಿ ಅವರ ನೇತ್ರತ್ವದಲ್ಲಿ ಬ್ರಹ್ಮ ಕಲಶೋತ್ಸವವನ್ನೂ ನಡೆಸಲಾಗುತ್ತಿದೆ. ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಗೋಕರ್ಣನಾಥ ಕ್ಷೇತ್ರದಲ್ಲಿ ಶುಕ್ರವಾರ ದೇವಸ್ಥಾನದಲ್ಲಿ ಬ್ರಹ್ಮಕಲಶ ಜರಗಿತು. ಮಧ್ಯಾಹ್ನದ ವೇಳೆಗೆ […]

“ಪ್ರಗತಿ ಪಥ” ಕೇಂದ್ರ ಸರ್ಕಾರದ ಹೊಸ ಉಪಕ್ರಮಗಳ ಕಿರುನೋಟ ಬಿಡುಗಡೆ

Saturday, October 17th, 2015
Bjp pragati Patha

ಮಂಗಳೂರು : “ಪ್ರಗತಿ ಪಥ” ಕೇಂದ್ರ ಸರ್ಕಾರದ ಹೊಸ ಉಪಕ್ರಮಗಳ ಕಿರುನೋಟವನ್ನು ಬಿಜೆಪಿ ಜಿಲ್ಲಾಧ್ಯಕ್ಷರಾದ ಕೆ.ಪ್ರತಾಪ್ ಸಿಂಹ ನಾಯಕ್‌ರವರು ಶುಕ್ರವಾರ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಬಿಡುಗಡೆಗೊಳಿಸಿದರು. ಸಂಸದರಾದ ನಳಿನ್ ಕುಮಾರ್ ಕಟೀಲ್, ಕೃಷ್ಣ ಪಾಲೆಮಾರ್, ಮೋನಪ್ಪ ಭಂಡಾರಿ, ವಿಕಾಸ್ ಪುತ್ತೂರು, ಡಾ.ಭರತ್ ಶೆಟ್ಟಿ, ರುಕ್ಮಯ್ಯ ಪೂಜಾರಿ, ಉಮಾನಾಥ್ ಕೋಟ್ಯಾನ್, ರವಿಶಂಕರ್ ಮಿಜಾರ್, ಸುಧೀರ್ ಶೆಟ್ಟಿ ಕಣ್ಣೂರು, ಕಿಶೋರ್ ರೈ ಮುಂತಾದವರು ಉಪಸ್ಥಿತರಿದ್ದರು.

ನೇತ್ರಾವತಿ ನದಿ ಉಳಿಸಲು ವಿವಿಧ ಸಂಘಟನೆಗಳಿಂದ ಪಂಪ್‌ವೆಲ್‌ನಲ್ಲಿ ರಸ್ತೆ ತಡೆ ಚಳವಳಿ

Thursday, October 15th, 2015
Yethina Hole pumpwell

ಮಂಗಳೂರು : ರಾಜ್ಯ ಸರಕಾರ ಎತ್ತಿನ ಹೊಳೆ ಯೋಜನೆಗೆ ಮಣೆಹಾಕಿ ಜಿಲ್ಲೆಯ ಜನತೆಯನ್ನು ಮೋಸ ಮಾಡುತ್ತಿರುವುದರ ವಿರುದ್ದ ನೇತ್ರಾವತಿ ನದಿ ಸಂರಕ್ಷಣಾ ಒಕ್ಕೂಟ,ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಮಂಗಳೂರಿನ ಪಂಪ್‌ವೆಲ್‌ನಲ್ಲಿ ಇಂದು ಗುರುವಾರ ರಸ್ತೆ ತಡೆ ಚಳವಳಿ ನಡೆಸಲಾಯಿತು. ಬೆಳಗ್ಗೆ 10 ಗಂಟೆಯಿಂದ ಪಂಪ್‌ವೆಲ್‌ ಜಂಕ್ಷನ್‌ನಲ್ಲಿ ನಾಲ್ಕೂ ದಿಕ್ಕಿನ ರಸ್ತೆಗಳಲ್ಲಿ ಸಂಚಾರಕ್ಕೆ ತಡೆ ಉಂಟು ಮಾಡಿ ಸುಮಾರು 2 ಗಂಟೆಗಳ ಕಾಲ ಪ್ರತಿಭಟನೆ ನಡೆಸಲಾಯಿತು. ರಸ್ತೆ ತಡೆ ಚಳವಳಿ ಪ್ರತಿಭಟನೆಯಲ್ಲಿ ಸ್ವಾಮೀಜಿಗಳು, ಶಾಸಕರು , ಧಾರ್ಮಿಕ ಮುಖಂಡರು, ಕರಾವಳಿ […]

ಪ್ರಶಾಂತ್ ಕೊಲೆ ಆರೋಪಿಗಳ ಬಂಧನಕ್ಕೆ ಮುನೀರ್ ಕಾಟಿಪಳ್ಳ ಆಗ್ರಹ

Thursday, October 15th, 2015
prashanth Murder

ಮಂಗಳೂರು : ಭಜರಂಗದಳದ ಕಾರ್ಯಕರ್ತ, ಮೂಡಬಿದ್ರೆಯ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ. ನಡುಬೀದಿಯಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಗಳನ್ನು ಕೊಲೆಯಾದ ವಾರದ ನಂತರವೂ ಪತ್ತೆ ಹಚ್ಚಲು ಸಾಧ್ಯವಾಗದಿರುವುದು ನಾಗರಿಕ ವಲಯದಲ್ಲಿ ಭೀತಿಯ ವಾತಾವರಣವನ್ನು ಉಂಟು ಮಾಡಿದೆ. ಈ ಹಿಂದೆಯೂ ಕೋಮುದ್ವೇಷದಿಂದ ಎನ್ನಲಾದ ಸರಣಿ ಪ್ರತೀಕಾರದ ಕೊಲೆಗಳು ನಡೆದಿತ್ತು. ಆಗೆಲ್ಲ ಪ್ರಕರಣದ ಆಳಕ್ಕಿಳಿದು ಸೂತ್ರಧಾರಿಗಳನ್ನು ಕಂಡುಹಿಡಿಯುವಲ್ಲಿ ಪೊಲೀಸ್ ಇಲಾಖೆ ವಿಫಲವಾದುದರಿಂದ ಜಿಲ್ಲೆಯ ಜನತೆ ಅಪಾರವಾದ […]

‘ಕಲಾ ಕೊಂಕಣಿ’ ಚಿತ್ರಕಲಾ ಶಿಬಿರ ಸಮಾರೋಪ

Thursday, October 15th, 2015
Kala konkani

ಮಂಗಳೂರು : ಕೊಂಕಣಿ ಅಕಾಡೆಮಿ ಭಾಷೆಗಾಗಿ ಕೆಲಸ ಮಾಡುವಾಗ ಚಿತ್ರಕಲೆ ಕೂಡಾ ಭಾಷಾ ಬೆಳವಣಿಗೆಯ ಅಂಗ ಎಂದು ಭಾವಿಸಿ ಇಂಥ ಒಂದು ಶಿಬಿರವನ್ನು ಆಯೋಜಿಸಿದ್ದಾರೆ. ಕೊಂಕಣಿ ಕಲೆಯ ವಿವಿಧ ಚಿತ್ರಗಳನ್ನು ಕ್ಯಾಲೆಂಡರ್ ಮೂಲಕ ಮನೆಮನೆಗೆ ತಲುಪಿಸುವ, ಈ ಮೂಲಕ ಚಿತ್ರಕಲೆಯನ್ನು ಪ್ರಚುರಪಡಿಸುವ ಈ ಕೆಲಸ ಸ್ತುತ್ಯರ್ಹ ಎಂದು ಹಿರಿಯ ಕಲಾವಿದ ಗಣೇಶ ಸೋಮಯಾಜಿ ಅಬಿಪ್ರಾಯಪಟ್ಟರು. ಅವರು ಶಕ್ತಿನಗರದ ಕಲಾಂಗಣದಲ್ಲಿ ಬುಧವಾರ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಆಯೋಜಿಸಿರುವ ‘ಕಲಾ ಕೊಂಕಣಿ’ ಎಂಬ ಚಿತ್ರಕಲಾ ಶಿಬಿರದ ಸಮಾರೋಪ […]

ಮಂಗಳೂರು ಪ್ರೆಸ್‌ಕ್ಲಬ್: ಬ್ರಿಜೇಶ್‌ಗೆ ಬೀಳ್ಕೊಡುಗೆ

Thursday, October 15th, 2015
brijesh press club

ಮಂಗಳೂರು: ಮಂಗಳೂರು ಪ್ರೆಸ್‌ಕ್ಲಬ್‌ನ ಮ್ಯಾನೇಜರ್ ಆಗಿ ಕಳೆದು ಮೂರು ವರ್ಷಗಳಿಂದ ಕರ್ತವ್ಯದಲ್ಲಿದ್ದ ಬ್ರಿಜೇಶ್ ಅವರನ್ನು ಗುರುವಾರ ಬೀಳ್ಕೊಡಲಾಯಿತು. ಬ್ರಿಜೇಶ್ ಅವರಿಗೆ ಶಾಲು ಹೊದಿಸಿ ಫಲಪುಷ್ಪವಿತ್ತು ಗೌರವಿಸಿ ಮಾತನಾಡಿದ ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ, ಡಾ.ಅನಿಲ್ ರೊನಾಲ್ಡ್ ಫೆರ್ನಾಂಡಿಸ್, ಎಲ್ಲರೊಂದಿಗೆ ಅತ್ಯಂತ ಆತ್ಮೀಯವಾಗಿದ್ದುಕೊಂಡು ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದ ಬ್ರಿಜೇಶ್ ಅವರು ಬೇರೆಡೆ ಉದ್ಯೋಗ ದೊರೆತ ಹಿನ್ನೆಲೆಯಲ್ಲಿ ತೆರಳುತ್ತಿದ್ದಾರೆ. ಅವರ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಶುಭ ಹಾರೈಸಿದರು. ಮಾಜಿ ಮೇಯರ್ ಮಹಾಬಲ ಮಾರ್ಲ ಮಾತನಾಡಿ, ಒಳ್ಳೆಯ ಕೆಲಸಕ್ಕೆ ಸಮಾಜದಲ್ಲಿ ಉತ್ತಮ […]

ಪ್ರತ್ಯೇಕ ತುಳು ರಾಜ್ಯ ಅಸ್ತಿತ್ವಕ್ಕೆ ಕರಾವಳಿ ಸಜ್ಜು…

Thursday, October 15th, 2015
Punaruru

ಮಂಗಳೂರು : ತುಳು ರಾಜ್ಯದ ಅವಶ್ಯಕತೆ ಹಿಂದಿಗಿಂತ ಈಗ ಹೆಚ್ಚಾಗಿದೆ. ಅದಕ್ಕೆ ಈಗ ಹೆಚ್ಚಿನ ಬಲ ಕೂಡ ಬಂದಿದೆ ಮತ್ತು ಆಶ್ಚರ್ಯ ಎಂದರೆ ತುಳು ರಾಜ್ಯವಾದರೆ ತಾವು ಅದಕ್ಕೆ ಸೇರಲು ಸಿದ್ಧ ಎಂದು ಕಾಸರಗೋಡು ಜಿಲ್ಲೆಯಲ್ಲಿರುವ ತುಳು-ಕನ್ನಡಿಗರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅಷ್ಟಕ್ಕೂ ತುಳು ರಾಜ್ಯದ ನಿರ್ಮಾಣಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಧಾನವಾಗಿ ಕ್ರಾಂತಿಯಾಗುತ್ತದೆ. ಬಾರ್ಕೂರಿನಿಂದ ಹಿಡಿದು ಕಾಸರಗೋಡುವಿನ ತನಕ, ಶಿವಮೊಗ್ಗ ಮತ್ತು ಚಿಕ್ಕಮಗಳೂರಿನ ಕೆಲವು ಗ್ರಾಮಗಳು ಸೇರಿದರೆ ಪ್ರತ್ಯೇಕ ತುಳು ರಾಜ್ಯದ ನಿರ್ಮಾಣ ಕಷ್ಟವೇನಲ್ಲ. ಅಷ್ಟಕ್ಕೂ […]