`ಬರ್ಕೆ’ತುಳು ಚಿತ್ರ 14.02.2014 ರಂದು ತುಳುನಾಡಿನಾದ್ಯಂತ ಬಿಡುಗಡೆ.

Friday, February 14th, 2014
Barke

ಮಂಗಳೂರು: ಬರ್ಕೆ ಚಿತ್ರದ ಹೆಸರೆ ಹೇಳುವಂತೆ ಈ ಚಿತ್ರ ತುಳುನಾಡಿನ ಒಂದು ಭೂಗತ ಸಾಮ್ರಾಜ್ಯವನ್ನು ಅನಾವರಣಗೊಳಿಸುತ್ತದೆ, ಈ ಭೂಗತ ಸಾಮ್ರಾಜ್ಯದ ಹುಲಿಗಳು ತಮ್ಮ ಬದುಕನ್ನು ಬದಲಿಸಲು ಪ್ರಯತ್ನಿಸುವ ಇಂದು ಬೀಗ್ ಗೇಮ್ ಆ ಸಾಮ್ರಾಜ್ಯದ ನಿಜವಾದ ಹುಲಿ ಘರ್ಜನೆಯ ಪರಿಚಯವನ್ನು ಮಾಡಿಕೋಡುತ್ತದೆ. ಆ ಸಾಮ್ರಾಜ್ಯದ ಹೊರಾತಾಗಿ ನಮ್ಮಲ್ಲರ ಪ್ರೀತಿ ಈ ಹೃದಯ ಸಾಮ್ರಾಜ್ಯ, ಅದಕ್ಕಾಗಿ ಈ ಹುಲಿಗಳ ಸಾಮ್ರಾಜ್ಯದಲ್ಲಿ ತನ್ನ ಪ್ರೀತಿಗಾಗಿ ಬಂದ ಹುಡಿಗಿಯೋಬ್ಬಳು ತನ್ನ ಹೃದಯ ಸಾಮ್ರಾಜ್ಯವನ್ನು ಪಡೆಯುತ್ತಾಳೆ ಅಥವಾ ಆ ಸಾಮ್ರಾಜ್ಯದ ನಿಜವಾದ ಹುಲಿ […]

20ರೊಳಗೆ ಜಿಪಿಎಸ್ ಅಳವಡಿಕೆ ಕಷ್ಟ: ಸಚಿವ ರಾಮಲಿಂಗಾರೆಡ್ಡಿ

Thursday, February 13th, 2014
KSRTC

ಬೆಂಗಳೂರು: ಸಾರ್ವಜನಿಕ ಸಾರಿಗೆಯ ಎಲ್ಲ ವಾಹನಗಳಿಗೆ ಫೆ. 20ರ ಒಳಗೆ ಜಿಪಿಎಸ್ ಅಳವಡಿಕೆ ಕಷ್ಟ. ಆ ಬಗ್ಗೆ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ಸಾರ್ವಜನಿಕ ಸಂಚಾರದ ಅಂತಾರಾಷ್ಟ್ರೀಯ ಸಂಸ್ಥೆ(ಯುಐಟಿಪಿ) ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಪ್ರಥಮ ಯುಐಟಿಪಿ ಬಸ್ ವಿಚಾರಸಂಕಿರಣ’ ಉಯುಐಟಿಪಿದ್ಘಾಟಿಸಿ ಅವರು ಮಾತನಾಡಿದರು. ಹತ್ತು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿನ ಸಾರ್ವಜನಿಕ ಸಾರಿಗೆ ವಾಹನಗಳಿಗೆ ಫೆ. 20ರ ಒಳಗೆ ಜಿಪಿಎಸ್ ಅಳವಡಿಕೆ […]

ಪ್ರೇಮಾ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದ ರಾಮದಾಸ್

Thursday, February 13th, 2014
Ramadoss

ಬೆಂಗಳೂರು: ಮಾಜಿ ಸಚಿವ ರಾಮದಾಸ್ ಅವರ ಪ್ರೇಮ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದ್ದು, ಅವರು ಪ್ರೇಮಕುಮಾರಿ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯಗಳನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಲಾಗಿದೆ. ಮಾರ್ಚ್ 10, 2013ರಂದು ರಾಮದಾಸ್ ಅವರು ಸಚಿವರಾಗಿದ್ದ ವೇಳೆ ತಮ್ಮ ಸರ್ಕಾರಿ ಕಾರನ್ನು ಬಿಟ್ಟು, ಖಾಸಗಿ ಕಾರಿನಲ್ಲಿ ಪ್ರೇಮಕುಮಾರಿ ಅವರ ನಿವಾಸಕ್ಕೆ ತೆರಳಿ ಸುಮಾರು 1 ಗಂಟೆಯವರೆಗೆ ಮಾತುಕತೆ ನಡೆಸಿದ್ದಾರೆ. ಪ್ರೇಮಕುಮಾರಿ ಅವರ ಮನೆಯಲ್ಲಿ ನಡೆದ ಸಂಪೂರ್ಣ ‘ರಾಮಾ’ಯಣದ ವಿಡಿಯೋ ಮಾಧ್ಯಮಕ್ಕೆ ದೊರೆತ್ತಿದ್ದು, ವಿಡಿಯೋದಲ್ಲಿ ರಾಮದಾಸ್, ಪ್ರೇಮಕುಮಾರಿ […]

ನಕ್ಸಲರ ಜತೆ ಮಾತುಕತೆ ನಡೆಯುತ್ತಿದೆ, ವಿಫಲವಾದರೆ ಎಎನ್‌ಎಫ್ ಸಮಸ್ಯೆ ಪರಿಹರಿಸಲಿದೆ : ಕೆ.ಜೆ. ಜಾರ್ಜ್

Thursday, February 13th, 2014
KJ-George

ಮಂಗಳೂರು: ನಕ್ಸಲರು ಸಂಧಾನಕ್ಕೆ ಹಸಿರು ನಿಶಾನೆ ತೋರಿದ ಹಿನ್ನೆಲೆಯಲ್ಲಿಯೇ ನಕ್ಸಲರ ಪರವಾಗಿ ಸ್ವಯಂ ಸೇವಾಸಂಸ್ಥೆಗಳು ಸರ್ಕಾರದ ಜತೆ ಮಾತುಕತೆ ನಡೆಸುತ್ತಿವೆ. ಮಾತುಕತೆ ಫಲಪ್ರದವಾಗದೇ ಇದ್ದರೆ ನಕ್ಸಲ್ ನಿಗ್ರಹ ದಳದವರು ಸಮಸ್ಯೆ ಮಟ್ಟ ಹಾಕುತ್ತಾರೆ ಎಂದು ಗೃಹಸಚಿವ ಕೆ.ಜೆ.ಜಾರ್ಜ್ ಹೇಳಿದರು. ನಗರ ಸಹಾಯಕ ಪೊಲೀಸ್ ಕಮಿಷನರ್ ಕಚೇರಿ ಕಟ್ಟಡ ಉದ್ಘಾಟನೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು. ಅರಣ್ಯ ಪ್ರದೇಶದಲ್ಲಿ ಈಗ ಏಕಾ ಏಕಿ ಒಕ್ಕಲೆಬ್ಬಿಸಲು ಸಾಧ್ಯವಿಲ್ಲ. ಕಾಡಿನ ಮಧ್ಯೆ ಇರುವವರನ್ನು ಕಾಡಿನ ಅಂಚಿನಲ್ಲಿ ಪುನರ್ವಸತಿ ಮಾಡಲು ಅವಕಾಶ ಇದೆ […]

ಮಂಗಳೂರಿಗೆ 2 ಹೊಸ ರೈಲುಗಳ ಭಾಗ್ಯ !

Wednesday, February 12th, 2014
Manglore-Trains

ಹೊಸದಿಲ್ಲಿ: ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆಯಲ್ಲಿಂದು ಮಂಡಿಸಿರುವ 2014-15ರ ಸಾಲಿನ ಮಧ್ಯಾಂತ್ರ ರೈಲ್ವೆ ಬಜೆಟ್‌ನಲ್ಲಿ ಮಂಗಳೂರಿಗೆ ಎರಡು ಹೊಸ ರೈಲುಗಳ ಭಾಗ್ಯ ಒದಗಿ ಬಂದಿದೆ. ಈ ಎರಡು ಹೊಸ ರೈಲುಗಳೆಂದರೆ ಮಂಗಳೂರು – ಮಡಗಾಂವ್‌ ಇಂಟರ್‌ ಸಿಟಿ (ದಿನನಿತ್ಯ) ರೈಲು ಮತ್ತು ಮಂಗಳೂರು – ಕಾಚಿಗುಡ ರೈಲು. ಮಂಗಳೂರು – ಕಾಚಿಗುಡ ರೈಲು ಕೊಯಮುತ್ತೂರು, ರೆಣಿಂತಾ ಮತ್ತು ಗೂಟಿ ಮಾರ್ಗವಾಗಿ ಸಾಗಲಿದೆ. ಈ ಎರಡೂ ಹೊಸ ರೈಲುಗಳಿಗೆ ಸ್ವತಃ ಸಚಿವ ಖರ್ಗೆ ಅವರೇ ಫೆ.23 […]

ಕೇಂದ್ರ ಮಧ್ಯಂತರ ರೇಲ್ವೆ ಬಜೆಟ್ -2014 ಮಂಡನೆ

Wednesday, February 12th, 2014
Mallikarjun-karge

ನವದೆಹಲಿ: ಲೋಕಸಭೆಯಲ್ಲಿ ತೆಲಂಗಾಣ ಗದ್ದಲದ ನಡುವೆಯೇ ಯುಪಿಎ-2 ಸರ್ಕಾರದ ಮಧ್ಯಂತರ ಬಜೆಟ್ ಮಂಡನೆಯಾಗಿದೆ. ಬುಧವಾರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು 4 ತಿಂಗಳುಗಳಿಗಾಗಿ ಇರುವ ಮಧ್ಯಂತರ ಬಜೆಟ್‌ನ್ನು ಲೋಕಸಭೆಯಲ್ಲಿ ಮಂಡಿಸಿದ್ದು, ಖರ್ಗೆ ಅವರ ಪಾಲಿಗೆ ಇದು ಚೊಚ್ಚಲ ಬಜೆಟ್ ಮಂಡನೆಯಾಗಿದೆ. ಬಜೆಟ್ ಮಂಡನೆಗೆ ಮುನ್ನ “ಕಳಬೇಡ ಕೊಲಬೇಡ” ವಚನ ಪಠಿಸಿದ ಸಚಿವ ಖರ್ಗೆ , ದೇಶದ ಅಭಿವೃದ್ಧಿಗೆ ರೇಲ್ವೇ ವಿಕಾಸ ಅವಶ್ಯಕ ಎಂದು ಅಭಿಪ್ರಾಯ ಪಟ್ಟಿದ್ದಾರೆ. ರೇಲ್ವೆ ಬಜೆಟ್ ಮುಖ್ಯಾಂಶಗಳು ಜಮ್ಮು ಕಾಶ್ಮೀರದಲ್ಲಿ ಸಂಪರ್ಕ ಕಲ್ಪಿಸಲು […]

6 ಸೀಮಾಂಧ್ರ ಸಂಸದರ ಉಚ್ಚಾಟನೆ

Tuesday, February 11th, 2014
Six-simandhra

ನವದೆಹಲಿ: ಅಖಂಡ ಆಂಧ್ರಪ್ರದೇಶಕ್ಕೆ ಆಗ್ರಹಿಸಿ ಕಾಂಗ್ರೆಸ್ನ 6 ಸೀಮಾಂಧ್ರ ಸಂಸದರು ಸ್ವಪಕ್ಷದ ವಿರುದ್ಧವೇ ಅವಿಶ್ವಾಸ ಗೊತ್ತುವಳಿ ಮಂಡಿಸುವ ಪ್ರಸ್ತಾಪ ಹಿನ್ನೆಲೆಯಲ್ಲಿ ಆರು  ಸಂಸದರನ್ನು ಯುಪಿಎ ಸರ್ಕಾರ ಮಂಗಳವಾರ ಅಮಾನತುಗೊಳಿಸಿದೆ. ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆ ವಿರೋಧಿಸಿ ಸೀಮಾಂಧ್ರ ಸಂಸದರು ಉಭಯ ಸದನಗಳಲ್ಲಿ ವಿರೋಧಿಸುತ್ತಾ ಬಂದಿದ್ದರು. ಕಾಂಗ್ರೆಸ್ ವಿರುದ್ಧವೇ ಅವಿಶ್ವಾಸ ಗೊತ್ತುವಳಿ ಮಂಡಿಸಲು ಮುಂದಾಗಿದ್ದ ಹಿನ್ನೆಲೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ ಆರೋಪದಡಿಯಲ್ಲಿ ಕಾಂಗ್ರೆಸ್ನ ಸೀಮಾಂಧ್ರ ಸಂಸದರಾದ ರಾಯಪಾಟಿ ಸಾಂಬಶಿವರಾವ್, ಸಬ್ಬಮ್ ಹರಿ, ಲಗಡಪಾಟಿ ರಾಜಗೋಪಾಲ್, ಉಂಡವಲ್ಲಿ ಅರುಣ್ […]

ಮತ್ತೊಂದು ಹಗರಣದಲ್ಲಿ ಡಿಕೆಶಿ; ಹಿರೇಮಠ್ ಆರೋಪ

Tuesday, February 11th, 2014
DKC-Hiremath

ಬೆಂಗಳೂರು:  ಬೆಂಗಳೂರಿನ ವೈಯಾಲಿಕಾವಲ್ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ನೂರಾರು ಕೋಟಿ ರು. ಅವ್ಯವಹಾರ ನಡೆದಿದ್ದು, ಇದರಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ನೇರವಾಗಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಂಗಳವಾರ ಪ್ರೆಸ್‌ಕ್ಸಬ್‌ನಲ್ಲಿ ಪತ್ರಿಕೋಗೋಷ್ಠಿ ನಡೆಸಿದ ಸಮಾಜ ಪರಿವರ್ತನಾ ಸಮುದಾಯ ಟ್ರಸ್ಟ್‌ನ ಮುಖ್ಯಸ್ಥ ಎಸ್. ಆರ್. ಹಿರೇಮಠ್ ಶಿವಕುಮಾರ್ ವಿರುದ್ಧ ಈ ಗಂಭೀರ ಆರೋಪ ಮಾಡಿದ್ದಾರೆ. ಹಿಂದೆ ಎಸ್ಸೆಂ ಕೃಷ್ಣ ಸರ್ಕಾರದಲ್ಲಿ ಸಹಕಾರ ಸಚಿವರಾಗಿದ್ದ ಡಿಕೆಶಿ ವೈಯಾಲಿಕಾವಲ್ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ನೂರಾರು ಕೋಟಿ ರು. […]

ಸಂಸತ್‌ನಲ್ಲಿ ನಿಲ್ಲದ ತೆಲಂಗಾಣ ಗಲಾಟೆ

Tuesday, February 11th, 2014
Pranab-Mukherjee

ನವದೆಹಲಿ: ಸಂಸತ್ ಅಧಿವೇಶನದ ಕಲಾಪಗಳು ಪೋಲಾಗುತ್ತಿರುವ ನಡುವೆಯೇ ವಿವಾದಿತ ತೆಲಂಗಾಣ ವಿಧೇಯಕಕ್ಕೆ ಸೋಮವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಒಪ್ಪಿಗೆ ಸೂಚಿಸಿದ್ದಾರೆ. ಮಂಗಳವಾರ ರಾಜ್ಯಸಭೆಯಲ್ಲಿ ಮಸೂದೆ ಮಂಡನೆಯಾಗುವ ಸಾಧ್ಯತೆಯಿದೆ. ಸೋಮವಾರ ಒಂದೆಡೆ ಮಸೂದೆಗೆ ರಾಷ್ಟ್ರಪತಿಯವರು ಅಂಕಿತ ಹಾಕಿದರೆ, ಮತ್ತೊಂದೆಡೆ ರಾಜ್ಯಸಭೆ, ಲೋಕಸಭೆಯಲ್ಲಿ ಸದಸ್ಯರು ನಡೆಸಿದ ಗದ್ದಲ ಅತಿರೇಕಕ್ಕೆ ಹೋದವು. ತಾವು ಸದನದಲ್ಲಿದ್ದೇವೆ ಎಂಬುದನ್ನೂ ಸಂಸದರು ಮರೆತರು. ಈ ವರ್ತನೆಗೆ ತೀವ್ರ ಅಸಮಾಧಾನಗೊಂಡ ರಾಷ್ಟ್ರಪತಿ ಪ್ರಣಬ್ ಅವರು, ಸಂಸತ್‌ನಲ್ಲಿ ಹೇಗೆ ವರ್ತಿಸಬೇಕು ಎಂಬ ಬಗ್ಗೆ ಸಲಹೆ ನೀಡಿದರಾದರೂ, ಓಗೊಡದ ಸಂಸದರು […]

ಫಿಕ್ಸಿಂಗ್ ಹಗರಣದಲ್ಲಿ ಧೋನಿ

Tuesday, February 11th, 2014
Mahendra-Singh-Dhoni

ನವದೆಹಲಿ: ಐಪಿಎಲ್ ಮ್ಯಾಚ್‌ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣದಲ್ಲಿ ಮಹೇಂದ್ರ ಸಿಂಗ್ ಧೋನಿ ಕೂಡಾ ಭಾಗಿಯಾಗಿದ್ದಾರೆ ಎಂದು ಬುಕ್ಕಿಯೊಬ್ಬರು ಆರೋಪಿಸಿದ್ದಾರೆ. ಐಪಿಎಲ್ ಬೆಟ್ಟಿಂಗ್ ಹಗರಣದಲ್ಲಿ ಶ್ರೀನಿವಾಸನ್ ಅಳಿಯ ಗುರುನಾಥ್ ಮೇಯಪ್ಪನ್ ಆರೋಪಿ ಜತೆಗೆ  ಅವರು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಭಾಗವೂ ಹೌದು ಎನ್ನುವುದು ಸಾಬೀತಾಗಿದೆ ಎಂದು ಸುಪ್ರೀಂಕೋರ್ಟ್ ನೇಮಿಸಿದ ನ್ಯಾ. ಮುಕುಲ್ ಮುದ್‌ಗಲ್ ನೇತೃತ್ವದ ತ್ರಿಸದಸ್ಯ  ಸಮಿತಿ ಘೋಷಿಸಿದೆ . ಐಪಿಎಲ್ ಮ್ಯಾಚ್‌ಫಿಕ್ಸಿಂಗ್ ಬಗ್ಗೆ ಪ್ರಸ್ತುತ ಸಮಿತಿ ಸೋಮವಾರ 170 ಪುಟಗಳ ಸುದೀರ್ಘ ವರದಿಯನ್ನು ಸಲ್ಲಿಸಿತ್ತು. […]