ಮೊಯ್ಲಿ, ದಿಯೋರಾ, ಅಂಬಾನಿ ವಿರುದ್ಧ ಎಫ್‌ಐಆರ್‌ಗೆ ಸೂಚನೆ

Tuesday, February 11th, 2014
Arvind-Kejriwal

ನವದೆಹಲಿ: ಮುರಳಿ ದಿಯೋರಾ, ವೀರಪ್ಪ ಮೊಯ್ಲಿ, ವಿ.ಕೆ ಸಿಬಲ್ , ಮುಖೇಶ್ ಅಂಬಾನಿ ಮತ್ತು ರಿಲಾಯನ್ಸ್ ಇಂಡಸ್ಟ್ರೀಸ್ ವಿರುದ್ಧ ಎಫ್‌ಐಆರ್ ದಾಖಲಿಸಲು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸೂಚನೆ ನೀಡಿದ್ದಾರೆ. ಮಂಗಳವಾರ ದೆಹಲಿಯಲ್ಲಿ ಸುದ್ದಿಗೋಷ್ಠಿನ್ನುದ್ದೇಶಿಸಿ ಮಾತನಾಡಿದ ಅರವಿಂದ್ ಕೇಜ್ರಿವಾಲ್ ಅನಿಲ ಬೆಲೆ ಹೆಚ್ಚಳ ರಿಲಾಯನ್ಸ್ ಕಂಪನಿಯೇ ಕಾರಣ ಎಂದು ಹೇಳಿದ್ದಾರೆ. ರಿಲಾಯನ್ಸ್ ಕಂಪನಿ ಅನಿಲ ಬಾವಿ ಗುತ್ತಿಗೆಯ ವಿಚಾರದಲ್ಲಿ ಕೇಂದ್ರ ಗೋಲ್‌ಮಾಲ್ ನಡೆಸಿದೆ ಹಾಗು ರಿಲಾಯನ್ಸ್ ಕಂಪನಿ ದೇಶದಲ್ಲಿ ಅನಿಲವನ್ನು ಕೃತಕ ಸಂಗ್ರಹದಲ್ಲಿರಿಸಿದೆ […]

ಶಿಕ್ಷಣದಲ್ಲಿ ಕಲೆಯೂ ಅಗತ್ಯ: ವಿಶ್ವೇಶತೀರ್ಥ ಶ್ರೀ

Monday, February 10th, 2014
VishveshwaraTheertha

ಬೆಂಗಳೂರು: ಶಿಕ್ಷಣದಲ್ಲಿ ಜ್ಞಾನದ ಜತೆಗೆ ಕಲೆಯೂ ಇರಬೇಕು ಎಂದು ಪೇಜಾವರ ಅಧೋಕ್ಷಜ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ. ಶ್ರೀಸದ್ಗುರು ಮ್ಯೂಸಿಕ್ ಅಕಾಡೆಮಿನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಶತಗಾಯನ ಸಂಗೀತೋತ್ಸವದಲ್ಲಿ ಅವರು ಮಾತನಾಡಿದರು.  ಮಕ್ಕಳಿಗೆ ಸಂಗೀತ ಹಾಗೂ ಸಂಸ್ಕಾರಗಳನ್ನು ಕಲಿಸಿಕೊಡಬೇಕು. ಸಂಗೀತದಿಂದ ಮಕ್ಕಳ ಬುದ್ಧಿ ವಿಕಾಸ ಆಗುವ ಜತೆಗೆ ಹೃದಯ ಅರಳುತ್ತದೆ ಎಂದ ಅವರು, ಶಿಕ್ಷಣದಲ್ಲಿ ಜ್ಞಾನದ ಜತೆಗೆ ಕಲೆಯೂ ಇರಬೇಕು ಎಂದು ಅಭಿಪ್ರಾಯಪಟ್ಟರು. ಶತಗಾಯನ ಸಂಗೀತೋತ್ಸವವನ್ನು ಶ್ಲಾಘಿಸಿದ ಅವರು ಇದರಿಂದ ಕಿವಿಗೆ ಮಾತ್ರವಲ್ಲ ಕಣ್ಣಿಗೂ ಹಬ್ಬ ಎಂಬಂತಾಗಿದೆ ಎಂದರು. […]

ಗುಲಾಬಿ… ಬ್ಲ್ಯಾಕ್ ಮ್ಯಾಜಿಕ್

Monday, February 10th, 2014
Black-Rose

ಬೆಂಗಳೂರು: ಗ್ರೀನ್ ಹೌಸ್ ಅಥವಾ ಪಾಲಿಥೀನ್ ಹೌಸ್‌ನಲ್ಲಿ ಬೆಳೆಯುವ ಗುಲಾಬಿಗಿಂತ ಬಯಲಿನಲ್ಲಿ ಬೆಳೆಯುವ ಡಚ್ ತಳಿ ‘ಬ್ಲ್ಯಾಕ್ ಮ್ಯಾಜಿಕ್ ಗುಲಾಬಿ’ಗೆ ಈಗ ನಗರದಲ್ಲಿ ಎಲ್ಲಿಲ್ಲದ ಬೇಡಿಕೆ. ಪ್ರೇಮಿಗಳ ದಿನ, ವಿವಾಹ, ಆರತಕ್ಷತೆ ಸೇರಿದಂತೆ ಕಾರ್ಯಕ್ರಮಗಳಿಗೆ ಹೂ ಅಲಂಕಾರ-ಹಾರಗಳ ತಯಾರಿಯಲ್ಲಿ ಈ  ‘ಬ್ಲ್ಯಾಕ್ ಮ್ಯಾಜಿಕ್ ಗುಲಾಬಿ’ ಬಳಸಲಾಗುತ್ತದೆ. ಹಾಗಾಗಿ ಬೇರೆ ಗುಲಾಬಿಗಳಿಗೆ ‘ಬೆಲೆ’ಯೇ ಇಲ್ಲದಂತಾಗಿದೆ. ಈ ಹಿಂದೆ ಎಲ್ಲಾ ಕಾರ್ಯಕ್ರಮಗಳಿಗೂ ಪಾಲಿಥೀನ್ ಹೌಸ್‌ನಲ್ಲಿ ಬೆಳೆಯುವ ಗುಲಾಬಿ ಬಳಸುತ್ತಿದ್ದ ಆ ವ್ಯವಹಾರಿಕ ಜನ ಈಗ ಬೇರೆಡೆ ಮುಖಮಾಡಿರುವುದು ಪಾಲಿಥೀನ್ ಹೌಸ್‌ನಲ್ಲಿ […]

ಇನ್ಫೋಸಿಸ್, ಬಾಷ್‌ಗೆ ಜರ್ಮನಿ ಅಧ್ಯಕ್ಷ ಭೇಟಿ

Monday, February 10th, 2014
Infosys Company

ಬೆಂಗಳೂರು: ಜರ್ಮನಿಯ ಅಧ್ಯಕ್ಷ ಜೋಚಿಮ್ ಗಾವ್ಕ್ ಪ್ರತಿಷ್ಠಿತ ಇನ್ಫೋಸಿಸ್, ಬಾಷ್ ಕಂಪನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರೆ, ಅವರ ಪತ್ನಿ ಡೇನಿಯೇಲಾ ಶ್ಯಾಟ್ ಅವರು ಬಾಲಭವನದಲ್ಲಿ ಅನಾಥ ಮಕ್ಕಳೊಂದಿಗೆ ಚರ್ಚಿಸಿದರು. ನಗರದ ಆಡುಗೋಡಿಯಲ್ಲಿರುವ ಬಾಷ್ ಕೇಂದ್ರ ಕಚೇರಿಗೆ ಅವರು ಭೇಟಿ ನೀಡಿದ್ದರು. ಕೇಂದ್ರದಲ್ಲಿ ನಡೆಸುವ ಸಂಶೋಧನೆ, ತರಬೇತಿ ಹಾಗೂ ಉತ್ಪಾದಕ ಘಟಕಗಳನ್ನು ವೀಕ್ಷಿಸಿ ಬಾಷ್ ಅಧಿಕಾರಿಗಳಿಂದ ಮಾಹಿತಿ ಪಡೆದರು. ಕಳೆದ ಕೆಲ ದಶಕಗಳಿಂದಲೂ ಪ್ರತಿಭಾನ್ವಿತರನ್ನು ಪ್ರೋತ್ಸಾಹಿಸುವ ಹಾಗೂ ಉದ್ಯಮಗಳನ್ನು ಬೆಳೆಸುವ ನಿಟ್ಟಿನಲ್ಲಿ ಬಾಷ್ ಸಂಸ್ಥೆಯು ಉತ್ತಮ ಕೆಲಸ […]

ಯಾಂತ್ರಿಕ ಬದುಕಲ್ಲಿ ಸಂವೇದನೆ ವಿನಾಶ

Monday, February 10th, 2014
Nagathi-halli-chandrashekar

ಮೈಸೂರು: ಇಂದಿನ ಯಾಂತ್ರಿಕ ಬದುಕಿನಲ್ಲಿ ಭಾವಸಂವೇದನೆ ನಾಶವಾಗುತ್ತಿದೆ ಎಂದು ಹೆಸರಾಂತ ಲೇಖಕ ಹಾಗೂ ಚಿತ್ರನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ವಿಷಾದಿಸಿದರು. ಬೆಂಗಳೂರಿನ ಸ್ವರಸಂಕುಲ ಸಂಸ್ಥೆಯು ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಭಾವಧಾರೆ ಕನ್ನಡ ಭಾವಗೀತೆಗಳ ಗೀತಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯುನ್ಮಾನ ಮಾಧ್ಯಮಗಳು ಬಂದನಂತರ ಕೇಳುವ ಹಾಗೂ ಓದುವ ಸಂಸ್ಕೃತಿ ಕ್ಷೀಣಿಸುತ್ತಿದ್ದು, ಇಂತಹ ಯಾಂತ್ರಿಕ ಬದುಕಿನಿಂದಾಗಿ ಮನುಷ್ಯನ ಭಾವಸಂವೇದನೆಗಳು ನಾಶವಾಗುತ್ತಿವೆ. ಹಣ ಮಾಡಬೇಕು ಹಾಗೂ ಅಹೋ ರಾತ್ರಿಯಲ್ಲಿ ಶ್ರೀಮಂತನಾಗಬೇಕು ಎನ್ನುವುದರ ಚಿತ್ತವೇ ಪ್ರಮುಖವಾಗಿದೆ ಎಂದರು. […]

20ರೊಳಗೆ ಜಿಪಿಎಸ್ ಕಡ್ಡಾಯ

Monday, February 10th, 2014
GPS

ನವದೆಹಲಿ:  ಫೆ.20ರೊಳಗೆ ಜಿಪಿಎಸ್ ಸಾಧನ ಅಳವಡಿಸಿ. ಇದು ಕೇಂದ್ರ ಸರ್ಕಾರ ಸಾರ್ವಜನಿಕ ಸಾರಿಗೆ ವಾಹನಗಳಿಗೆ ನೀಡಿರುವ ಗಡುವು. 10 ಲಕ್ಷಕ್ಕಿಂತ ಅಧಿಕ ಜನಸಂಖ್ಯೆಯುಳ್ಳ ಪ್ರಮುಖ ನಗರಗಳಲ್ಲಿ ಸಂಚರಿಸುವ ವಾಹನಗಳು ಜಿಪಿಎಸ್ ವ್ಯವಸ್ಥೆ ಹೊಂದಿರಲೇಬೇಕು ಎಂದು ಕೇಂದ್ರ ಸಾರಿಗೆ ಸಚಿವಾಲಯ ಆದೇಶ ನೀಡಿದೆ. ಸಾರ್ವಜನಿಕ ಸಾರಿಗೆ ವಾಹನಗಳ ಮಾಲೀಕರು 20ರೊಳಗೆ ತಮ್ಮ ವಾಹನಗಳಲ್ಲಿ ಜಿಪಿಎಸ್(ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ) ಅಳವಡಿಸಬೇಕು. ತಪ್ಪಿದರೆ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದೂ ಸಚಿವಾಲಯ ಎಚ್ಚರಿಕೆ ನೀಡಿದೆ. ಈ ಹಿಂದೆ ಜಿಪಿಎಸ್ ಅಳವಡಿಕೆಗೆ […]

ಕಾಂಗ್ರೆಸ್- ಜೆಡಿಎಸ್ ಕಾರ್ಯಕರ್ತರ ಮಾರಾಮಾರಿ

Monday, February 10th, 2014
Congress-JDS

ಮೂಡಿಗೆರೆ: ಜೆಡಿಎಸ್ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ  ಘೋಷಣೆ ಕೂಗಿದ ಹಿನ್ನಲೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಸೋಮವಾರ ಬೆಳಿಗ್ಗೆ ಘರ್ಷಣೆ ನಡೆದಿದೆ. ಭೂಮಿ ಒತ್ತುವರಿ ತೆರವು ವಿರೋಧಿಸಿ ಮೂಡಿಗೆರಿ ತಾಲೂಕು ಬಲಿಗೆ ಎಂಬ ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಸಿಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ ಹಿನ್ನಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಜೆಡಿಎಸ್ ಕಾರ್ಯಕರ್ತರು ತಮ್ಮ ಘೋಷಣೆ ಮುಂದುವರೆಸಿದ […]

ಕೊನೆಗೂ ತೆಲಂಗಾಣಕ್ಕೆ ಸಿಕ್ಕಿತು ಕೇಂದ್ರದ ಸಮ್ಮತಿ

Saturday, February 8th, 2014
ಕೊನೆಗೂ ತೆಲಂಗಾಣಕ್ಕೆ ಸಿಕ್ಕಿತು ಕೇಂದ್ರದ ಸಮ್ಮತಿ

ನವದೆಹಲಿ: ಅಂತೂ ಇಂತೂ ಆಂಧ್ರ ಪ್ರದೇಶವನ್ನು ಇಬ್ಭಾಗ ಮಾಡುವ ತೆಲಂಗಾಣ ರಚನೆ ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಶುಕ್ರವಾರ ನಡೆದ ವಿಶೇಷ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.  ಹೈದರಾಬಾದ್ ಅನ್ನು ಕೇಂದ್ರಾಡಳಿತ ಪ್ರದೇಶ ಮಾಡುವುದಿಲ್ಲ ಎಂದಿರುವ ಕೇಂದ್ರ ಸರ್ಕಾರ ಜಂಟಿ ರಾಜಧಾನಿ ಮಾಡುವುದಾಗಿ ಹೇಳಿದೆ. ಕರಡು ಮಸೂದೆಯ ಬಹುತೇಕ ಅಂಶಗಳನ್ನು ಹಾಗೆಯೇ ಉಳಿಸಿಕೊಂಡಿರುವ ಕೇಂದ್ರ ಸರ್ಕಾರ, ಹೈದರಾಬಾದ್ ಅನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕು ಎಂಬ ಸೀಮಾಂಧ್ರ ಭಾಗದ ನಾಯಕರ ಒತ್ತಡಕ್ಕೆ ಮಣಿದಿಲ್ಲ. ಬದಲಾಗಿ […]

ಅಧಿಕಾರಿಗಳು ಹಣ ಕೇಳಿದರೆ ನಮಗೆ ಹೇಳಿ: ಸಚಿವ ಜಾರ್ಜ್

Saturday, February 8th, 2014
Mr-George

ಬೆಂಗಳೂರುಃ ‘ಮೇಲಿನವರಿಗೆ ಕೊಡಬೇಕು’ ಎಂದು ಯಾವುದೇ ಇಲಾಖೆ ಅಧಿಕಾರಿಗಳು ಹಣ ಸುಲಿಗೆ ಮಾಡಲು ಯತ್ನಿಸಿದರೆ ಕೊಡಬೇಡಿ, ನಮಗೆ ತಿಳಿಸಿ… ಉದ್ಯಮಿಗಳು ಹಾಗೂ ನಾಗರಿಕರಿಗೆ ಗೃಹ ಸಚಿವ ಕೆ.ಜೆ. ಜಾರ್ಜ್ ಮಾಡಿರುವ ಮನವಿ ಹಾಗೂ ಹೇಳಿರುವ ಕಿವಿಮಾತಿದು. ಕ್ಲಬ್, ಮನರಂಜನಾ ತಾಣಗಳಲ್ಲಿ ಮೇಲಿನವವರಿಗೆ ಹಣ ನೀಡಬೇಕು ಎಂದು ಸುಲಿಗೆ ಮಾಡುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ನಮಗೆ ಯಾರ ದುಡ್ಡು ಬೇಕಿಲ್ಲ, ಯಾರೂ ನಮಗೆ ದುಡ್ಡು ಕೊಡಬೇಕಿಲ್ಲ. ಅಂತಹ ಪದ್ಧತಿಯೂ ನಮ್ಮಲ್ಲಿಲ್ಲ. ಕೆಲವರು ನಮ್ಮ ಪಕ್ಕದಲ್ಲೇ ಇದ್ದು ಪೊಲೀಸರು, ಅಧಿಕಾರಿಗಳ […]

ಮಣಿಪುರದಲ್ಲಿ ಮೋದಿ ಆರ್ಭಟ

Saturday, February 8th, 2014
Narendra-Modi

ಮಣಿಪುರ: ಈಶಾನ್ಯ ವಿದ್ಯಾರ್ಥಿ ಹತ್ಯೆ ಪ್ರಕರಣ ದೇಶಕ್ಕೆ ನಾಚಿಕೆಗೇಡಾಗಿದೆ.ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ  ನರೇಂದ್ರ ಮೋದಿ ಅವರು ಹೇಳಿದ್ದಾರೆ. ಇಂದು ಮಣಿಪುರ ಸಮಾವೇಶದಲ್ಲಿ ಮಾತನಾಡಿದ ಅವರು ಈಶಾನ್ಯ ವಿದ್ಯಾರ್ಥಿ ಹತ್ಯೆ ಪ್ರಕರಣ ದೇಶಕ್ಕೆ ನಾಚಿಕೆಗೇಡದ ಸಂಗತಿ ಈಶಾನ್ಯ ಜನರಿಗೆ ಯುಪಿಎ ಸರಕಾರ ಸೂಕ್ತ ಭದ್ರತೆ ಒದಗಿಸದೇ ಇರುವುದೇ ಇದಕ್ಕೆ ಕಾರಣ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ ನಡೆಸಿದ ಮೋದಿ ಮಣಿಪುರದಲ್ಲಿ ಕಾಂಗ್ರೆಸ್‌ ನಾಯಕರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಇಂತಹವರನ್ನು ಮೊದಲು ಮಟ್ಟಹಾಕಬೇಕು ಎಂದು ಹೇಳಿದ್ದಾರೆ. ಇಲ್ಲಿನ ಜನತೆಗೆ […]