ಕುತೂಹಲ ಮೂಡಿಸಿದ ಗೌಡ-ಇಬ್ರಾಹಿಂ ಭೇಟಿ

Wednesday, February 5th, 2014
HD-Deve-Gowda

ಬೆಂಗಳೂರು:ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಭೇಟಿ ಮಾಡಿ ಸುಮಾರು ಒಂದು ಗಂಟೆಗಳ ಕಾಲ ಚರ್ಚೆ ನಡೆಸಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತೃತೀಯ ರಂಗ ಸ್ಥಾಪನೆಯತ್ತ ಹೆಚ್ಚು ಒಲವು ತೋರಿರುವ ಎಚ್.ಡಿ. ದೇವೇಗೌಡ ಅವರು ಈ ಸಂದರ್ಭದಲ್ಲಿ ಸಿ.ಎಂ. ಇಬ್ರಾಹಿಂ ಅವರನ್ನು ಭೇಟಿ ಮಾಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ದೇವೇಗೌಡ ಅವರು ಪ್ರಧಾನಿಯಾಗಿದ್ದಾಗ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಸಿ.ಎಂ. ಇಬ್ರಾಹಿಂ ಅವರು ಗೌಡರಿಗೆ […]

ಶಿವಮೊಗ್ಗದಲ್ಲೇ ಸ್ಪರ್ಧೆ: ಬಿಎಸ್‌ವೈ

Wednesday, February 5th, 2014
yeddyurappa

ಶಿಕಾರಿಪುರ: ಮಾತೃಪಕ್ಷಕ್ಕೆ ಮರಳಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೊನೆಗೂ ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದಲೇ ಕಣಕ್ಕಿಳಿಯಲು ತಯಾರಾಗಿದ್ದಾರೆ. ಬಿಜೆಪಿ ಹೈಕಮಾಂಡ್ ಹಾಗೂ ಬಿಜೆಪಿ ಜಿಲ್ಲಾ ಸಮಿತಿ ಸದಸ್ಯರು ಕಣಕ್ಕಿಳಿಯುವಂತೆ ಭಾರಿ ಒತ್ತಡ ಹಾಕುತ್ತಿದ್ದಾರೆ. ಹೀಗಾಗಿ ಸ್ಪರ್ಧಿಸುವ ಅನಿವಾರ್ಯತೆ ಎದುರಾಗಿದ್ದರಿಂದ ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಯಲು ತೀರ್ಮಾನಿಸಿದ್ದೇನೆ ಎಂದು ತಿಳಿಸಿದ್ದಾರೆ. ಮಂಗಳವಾರ ಶಿಕಾರಿಪುರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಹಿಂದಿನ ಎಲ್ಲ ಕಹಿ ಘಟನೆಗಳನ್ನು ಮರೆತು ಒಂದಾಗಿ, ಒಗ್ಗಟ್ಟಾಗಿ, ಸಾಮೂಹಿಕ ನಾಯಕತ್ವದಲ್ಲಿ ಲೋಕಸಭೆ ಚುನಾವಣೆ ಎದುರಿಸಲಾಗುವುದು. ರಾಜ್ಯಾದ್ಯಂತ […]

ಸುರತ್ಕಲ್ ನಲ್ಲಿ ಹಾಡಹಗಲೇ ಮಾರಕಾಸ್ತ್ರಗಳಿಂದ ಕಡಿದು ರೌಡಿಯ ಕೊಲೆ

Tuesday, February 4th, 2014
Prakash Murder

ಮಂಗಳೂರು : ರೌಡಿ ಶೀಟರ್ ಹಾಗೂ ಕೊಲೆ ಪ್ರಕರಣದ ಆರೋಪಿ ಪ್ರಕಾಶ್ (26) ಎಂಬಾತನನ್ನು ನಗರದ ಹೊರವಲಯದ ಸುರತ್ಕಲ್ ಪರಿಸರದಲ್ಲಿ ಹಾಡಹಗಲೇ ಮಾರಕಾಸ್ತ್ರಗಳಿಂದ ಕಡಿದು ಕೊಲೆಗೈದ ಘಟನೆ ಮಂಗಳವಾರ ಸಂಜೆ ನಡೆದಿದೆ. ಪ್ರಕಾಶ್ ಜೋಕಟ್ಟೆಯ ಶಿವರಾಜ್ ಕೊಲೆ ಪ್ರಕರಣದ ಆರೋಪಿ ಯಾಗಿದ್ದು, ಶಿವರಾಜ್ ಕೊಲೆ ಪ್ರಕರಣದಲ್ಲಿ ಆರು ತಿಂಗಳ ಹಿಂದೆ ಜಾಮೀನು ಪಡೆದಿದ್ದ. ಈತ ಪಣಂಬೂರು ಠಾಣೆಯಲ್ಲಿ ನೋಂದಣಿಗೆ ಸಹಿ ಮಾಡಲು ತನ್ನ ತಂದೆಯ ಜತೆ ಉಡುಪಿಯಿಂದ ಪಣಂಬೂರು ಠಾಣೆಗೆ ಆಗಮಿಸಿ ವಾಪಾಸಾಗುವ ಸಂದರ್ಭದಲ್ಲಿ ಸುರತ್ಕಲ್ ನ […]

ಸಂತ ಶಿಶುನಾಳ ಷರೀಫ ಸೇರಿ ಹಲವು ಪ್ರಶಸ್ತಿಗೆ ಆಯ್ಕೆ

Tuesday, February 4th, 2014
Umashree

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2012ನೇ ಸಾಲಿನ ವಿವಿಧ ಪ್ರಶಸ್ತಿಗಳಿಗೆ ಅರ್ಹರಾದವರನ್ನು ಆಯ್ಕೆ ಮಾಡಿದ್ದು, ಅವರ ಪಟ್ಟಿಯನ್ನು ಸಚಿವೆ ಉಮಾಶ್ರೀ ಅವರು ಸೋಮವಾರ ಬಿಡುಗಡೆ ಮಾಡಿದ್ದಾರೆ. ಆಯ್ಕೆಯಾದವರ ವಿವರ: ಸಂತ ಶಿಶುನಾಳ ಷರೀಫ ಪ್ರಶಸ್ತಿ- ಎಸ್. ಸೋಮಸುಂದರಂ, ಬೆಂಗಳೂರು; ಶ್ರೀನಿಜಗುಣ ಪುರಂದರ ಪ್ರಶಸ್ತಿ- ಪಂ. ಸಂಗಮೇಶ್ವರ ಗುರವ, ಧಾರವಾಡ; ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ- ಯು.ಭಾಸ್ಕರ ರಾವ್, ಬೆಂಗಳೂರು; ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ- ಡಾ.ಬಿ.ಎನ್.ಸುಮಿತ್ರಾಬಾಯಿ, ಬೆಂಗಳೂರು; ಕುಮಾರವ್ಯಾಸ ಪ್ರಶಸ್ತಿ- ಮಾರ್ಕಂಡೇಯ ಅವಧಾನಿ, ಶಿವಮೊಗ್ಗ. ಪ್ರತಿ ಪ್ರಶಸ್ತಿಯು […]

3ಕೆಜಿ ಚಿನ್ನ ಹೊಂದಿದ್ದ ಮಹಿಳೆ, ವ್ಯಕ್ತಿ ಬಂಧನ

Tuesday, February 4th, 2014
Hemant-Nimbalkar

ಬೆಂಗಳೂರು: ಚಿನ್ನದ ಗಟ್ಟಿ ಹಾಗೂ ಆಭರಣ ಸೇರಿದಂತೆ ಒಟ್ಟು 3 ಕೆ.ಜಿ. ಚಿನ್ನವನ್ನು ಅಕ್ರಮವಾಗಿ ಹೊಂದಿದ್ದ ವ್ಯಕ್ತಿಗಳಿಬ್ಬರನ್ನು ಮಹಾಲಕ್ಷಿ ಬಡಾವಣೆ ಪೊಲೀಸರು ಬಂಧಿಸಿದ್ದಾರೆ. ರಾಮನಗರ ಜಿಲ್ಲೆ ಕುರುಬರಹಳ್ಳಿಯ ಚೆಲುವರಾಜು ಮತ್ತು ಜಯಂತಿ ಬಂಧಿತರು. ಬಂಧಿತರಿಂದ 1 ಕೆ.ಜಿ. ತೂಕದ 1 ಚಿನ್ನದ ಗಟ್ಟಿ ಹಾಗೂ 2 ಕೆ.ಜಿ. ತೂಕದ ಚಿನ್ನಾಭರಣ ಸೇರಿದಂತೆ ಒಟ್ಟು 90 ಲಕ್ಷ ಮೌಲ್ಯದ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಅವರು ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು. ಮೂಲತಃ […]

ಪ್ರತಿಭಟನೆ: ಆಪ್ v/s ಬಿಜೆಪಿ

Tuesday, February 4th, 2014
App-BJP

ನವದೆಹಲಿ: ಆಮ್ ಆದ್ಮಿ ಸರ್ಕಾರ ಉರುಳಿಸಲು ಬಿಜೆಪಿ ನಾಯಕರು ಸಂಚು ರೂಪಿಸಿದ್ದಾರೆ ಎಂದು ನಿನ್ನೆಯಷ್ಟೆ ಆರೋಪಿಸಿದ್ದ ಆಮ್ ಆದ್ಮಿ ಪಕ್ಷ, ಈ ಸಂಬಂಧ ಇಂದು ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ. ಇದಕ್ಕೆ ಪ್ರತಿಯಾಗಿ ಪ್ರತಿಪಕ್ಷ ಬಿಜೆಪಿ ಸಹ ಆಪ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ದೆಹಲಿಯಲ್ಲಿ ಪ್ರತಿಭಟನೆಗಳ ಅಬ್ಬರ ಜೋರಾಗಿದೆ. ಬಿಜೆಪಿ ನಾಯಕ ಅರುಣ್ ಜೇಟ್ಲಿ ಅವರ ನಿವಾಸದ ಎದುರು ಪ್ರತಿಭಟನೆ ನಡೆಸುತ್ತಿದ್ದ ಆಪ್ ಕಾರ್ಯಕರ್ತರು, ಜೇಟ್ಲಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಇನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ […]

ಹಿರಿಯ ಐಎಎಸ್ ಅಧಿಕಾರಿಗಳಿಗೆ ಬಡ್ತಿ, ವರ್ಗ

Tuesday, February 4th, 2014
IAS

ಬೆಂಗಳೂರು: ಆರ್ಥಿಕ ವರ್ಷ ಅಂತ್ಯವಾಗುತ್ತಿದ್ದಂತೆ ಆಡಳಿತಕ್ಕೆ ಇನ್ನಷ್ಟು ಚುರುಕು ನೀಡುವ ಉದ್ದೇಶದಿಂದ ಹಿರಿಯ ಐಎಎಸ್ ಅಧಿಕಾರಿಗಳಿಗೆ ಬಡ್ತಿ ನೀಡುವುದರ ಜತೆಗೆ ಕೆಲವರನ್ನು ಆಯಕಟ್ಟಿನ ಸ್ಥಳಗಳಿಗೆ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಆದಾಯ ಸಂಗ್ರಹದಲ್ಲಿ ನಿರೀಕ್ಷಿತ ಪ್ರಗತಿ ಕಾಣದೇ ಇರುವುದರಿಂದ ಹಣಕಾಸು ವಿಭಾಗದ ಜವಾಬ್ದಾರಿಯನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಕೈಗೆ ನೀಡಲಾಗಿದೆ. ಇದಕ್ಕಾಗಿ ಕರ್ನಾಟಕ ನಗರ ಮೂಲ ಸೌಕರ್ಯ ಮತ್ತು ಹಣಕಾಸು ನಿಗಮದ ಅಧ್ಯಕ್ಷರಾಗಿದ್ದ ಎಲ್.ವಿ. ನಾಗರಾಜನ್ ಅವರನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ […]

ಸಿಎನ್‌ಆರ್ ರಾವ್, ಸಚಿನ್‌ಗೆ ‘ಭಾರತ ರತ್ನ’ ಪ್ರದಾನ

Tuesday, February 4th, 2014
Sachin-Tendulkar

ನವದೆಹಲಿ: ಖ್ಯಾತ ವಿಜ್ಞಾನಿ ಪ್ರೊಫೆಸರ್ ಸಿಎನ್‌ಆರ್ ರಾವ್ ಹಾಗೂ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರಿಗೆ ಮಂಗಳವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ ಪ್ರದಾನ ಮಾಡಿದರು. ರಾಷ್ಟ್ರಪತಿ ಭವನದ ದರ್ಬಾರ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇಶದ ಪ್ರಥಮ ಪ್ರಜೆ ಪ್ರಣಬ್ ಮುಖರ್ಜಿ ಅವರು, ದೇಶದ ಎರಡು ರತ್ನಗಳಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು. ಕ್ರೀಡಾ ಕ್ಷೇತ್ರದಲ್ಲಿನ ಅಪೂರ್ವ ಸಾಧನೆಗಾಗಿ […]

14 ಕ್ಷೇತ್ರಗಳಿಗೆ ಬಿಜೆಪಿ ಪಟ್ಟಿ ಸಿದ್ಧ; ಉಳಿದವು ಕಗ್ಗಂಟು

Monday, February 3rd, 2014
ಯಡಿಯೂರಪ್ಪ

ಬೆಂಗಳೂರು : ಮುಂಬರುವ ಲೋಕಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ಬಿಜೆಪಿ ನಾಯಕರು ಇಂದು ಕೋರ್ ಕಮಿಟಿ ಸಭೆ ನಡೆಸಿದ್ದಾರೆ. 28 ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಿಗೆ ಬಿಜೆಪಿ ಪಟ್ಟಿ ಸಿದ್ಧವಾಗಿದ್ದರೆ ಉಳಿದವು ತುಸು ಕಗ್ಗಂಟು ಎನಿಸಿದೆ. ಈ ಮಧ್ಯೆ, ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕಣಕ್ಕಿಳಿಸುವ ಸಂಬಂಧ ಗಹನವಾದ ಚರ್ಚೆಗಳು ನಡೆದವು. ಶಿವಮೊಗ್ಗದಿಂದ ಸ್ಪರ್ಧಿಸುವಂತೆ ಬಿಎಸ್ವೈ ಮೇಲೆ ಪಕ್ಷದ ರಾಜ್ಯ ಮುಖಂಡರೂ ಒತ್ತಡ ಹಾಕಿದ್ದಾರೆ. ಶಿವಮೊಗ್ಗದ ಸ್ಥಳೀಯರು ಮುಖಂಡರು ಹಿಂದಿನಿಂದಲೂ ಯಡಿಯೂರಪ್ಪ ಮೇಲೆ ಒತ್ತಡ ಹಾಕುತ್ತಿದ್ದು, ಚುನಾವಣೆಗೆ […]

ಬೆಂಗಳೂರು, ಮೈಸೂರು ನಡುವೆ ಸ್ಪೈಸ್ ಜೆಟ್ ವಿಮಾನ.

Monday, February 3rd, 2014
Spice jet

ಮೈಸೂರು: ಮೈಸೂರು ಮತ್ತು ಬೆಂಗಳೂರಿನ ನಡುವೆ ಸ್ಪೈಸ್ ಜೆಟ್ ವಿಮಾನಯಾನಕ್ಕೆ ಮೈಸೂರಿನ ಸಂಸದ ಎಚ್ ವಿಶ್ವನಾಥ್ ಅವರು ಚಾಲನೆ ನೀಡಿದರು. ಮೈಸೂರಿನಿಂದ ಚೆನ್ನೈ ತಲುಪುವ ಮುನ್ನ ಸ್ಪೈಸ್ ಜೆಟ್ ವಿಮಾನಗಳು ಬೆಂಗಳೂರಿನಲ್ಲಿ ನಿಲುಗಡೆಯಾಗಿ ನಂತರ ಚೆನ್ನೈ ತಲುಪಲಿದೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ಈ ಯಾನವನ್ನು ನಿಲ್ಲಿಸಲಾಗಿತ್ತು. ಬೆಂಗಳೂರು ಮೈಸೂರು ನಡುವೆ ವಿಮಾನಯಾನ ಮುಂದುವರಿಸುವಂತೆ ಐಟಿ ಕಂಪೆನಿ ಗಳಾದ ಇನ್ಫೋಸಿಸ್ ಮತ್ತು ವಿಪ್ರೋ ಗಳು ಬೇಡಿಕೆ ಮಂಡಿಸಿದ್ದವು. ಇದರಿಂದ ಪ್ರವಾಸೋದ್ಯಮವೂ ಅಭಿವೃದ್ಧಿ ಕಾಣಲಿದೆ ಎಂದು ವಿಶ್ವನಾಥ್ ಹೇಳಿದ್ದರು. ಮೈಸೂರಿನಲ್ಲಿ […]