ನಗರದ ನೆಹರೂ ಮೈದಾನದಲ್ಲಿ ಫಿಸಿಯೋಥೆರಪಿ ಕಾಲೇಜು ವಿದ್ಯಾರ್ಥಿಗಳ ಸಂಘಟನೆ ವತಿಯಿಂದ ಮೌನಾಚರಣೆ

Thursday, January 3rd, 2013
Medical students candle light vigil

ಮಂಗಳೂರು : ದಿಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ವಿರೋಧಿಸಿ ಹಾಗು ಮೃತಳ ಆತ್ಮಕ್ಕೆ ಶಾಂತಿ ಕೋರಿ ನಗರದ ವಿವಿಧ ಫಿಸಿಯೋಥೆರಪಿ ಕಾಲೇಜುಗಳ ವಿದ್ಯಾರ್ಥಿಗಳ ಸಂಘಟನೆ ವತಿಯಿಂದ ಜನವರಿ 2 ಬುಧವಾರ ನಗರದ ನೆಹರೂ ಮೈದಾನದಲ್ಲಿ ಮೊಂಬತ್ತಿ ಉರಿಸಿ ಎರಡು ನಿಮಿಷಗಳ ಕಾಲ ಮೌನ ಆಚರಿಸಲಾಯಿತು. ಈ ಸಂದರ್ಭ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯ ಅಭಿಲಾಷ್ ಮಾತನಾಡಿ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆಯನ್ನು ಆದಷ್ಟು ಬೇಗ ನೀಡಿ ಇಂತಹ ಪ್ರಕರಣಗಳು ನಾಗರೀಕ ಸಮಾಜದಲ್ಲಿ ಮರುಕಳಿಸಬಾರದು ಆಗ […]

ಲಂಚ ಸ್ವೀಕಾರ ಪಾವೂರು ಗ್ರಾಮ ಕರಣಿಕನ ಬಂಧನ

Thursday, January 3rd, 2013
Pavoor Village Accountant

ಮಂಗಳೂರು : ಮಂಗಳೂರು ತಾಲೂಕಿನ ಪಾವೂರು ಗ್ರಾಮ ಪಂಚಾಯತ್ ನ ಗ್ರಾಮ ಕರಣಿಕರನ್ನು ಲೋಕಾಯುಕ್ತ ಪೊಲೀಸರು ಸಾಕ್ಷಿ ಸಮೇತ ಬಂದಿಸಿರುವ ಘಟನೆ ಬುಧವಾರದಂದು ನಡೆದಿದೆ. ಬಳ್ಳಾರಿಯ ಮೂಲದ ಜೆ.ನಿಂಗೇಶ್ ಎಂಬವರೇ ಬಂದನಕ್ಕೊಳಗಾದ ಗ್ರಾಮ ಕರಣಿಕರಾಗಿದ್ದಾರೆ. ಪಾವೂರು ಗ್ರಾಮದ ಕಿಲ್ಲೂರಿನ ರಿತೇಶ್ ರೈ ಎಂಬುವವರು ಮರಣ ಪ್ರಮಾಣ ಪತ್ರದ ಅಗತ್ಯವಿದ್ದುದರಿಂದ ಪಾವೂರು ಗ್ರಾಮ ಪಂಚಾಯತ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪರಿಶೀಲಿಸಿದ ಗ್ರಾಮಕರಣಿಕರು ರಿತೇಶ್ ರವರ ಬಳಿ ಐದು ಸಾವಿರ ರೂಪಾಯಿಯ ಲಂಚದ ಬೇಡಿಕೆಯನ್ನಿಟ್ಟಿದ್ದು ನಂತರ ಮೂರು […]

ಹೋಂ ಸ್ಟೇ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಯಾಮರಾಮನ್ ಶರಣ್‌ರಾಜ್ ಬಂಧನ

Thursday, January 3rd, 2013
Sharan Raj

ಮಂಗಳೂರು : ಹೋಂ ಸ್ಟೇ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪತ್ರಕರ್ತರನ್ನು ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಕ್ಯಾಮರಾಮನ್ ಶರಣ್‌ರಾಜ್ ಬಂಧಿತ ಆರೋಪಿಯಾಗಿದ್ದಾರೆ. ಇವರನ್ನು ಬುಧವಾರ ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಒಂದು ದಿನ ಪೊಲೀಸ್ ಕಸ್ಟ್ಟಡಿಗೆ ಒಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಹೋಂ ಸ್ಟೇ ದಾಳಿ ಸಂದರ್ಭ ಕ್ಯಾಮರಾಮನ್ ಶರಣ್‌ರಾಜ್ ಸ್ಥಳಕ್ಕೆ ಸುದ್ದಿ ಸಂಗ್ರಹಕ್ಕಾಗಿ ತೆರಳಿದ್ದರು. ಆದರೆ ಘಟನೆ ಬಗ್ಗೆ ಮೊದಲೇ ಮಾಹಿತಿ ಇದ್ದರೂ ಸಕಾಲದಲ್ಲಿ ಪೊಲೀಸರಿಗೆ ಮಾಹಿತಿ ನೀಡದ ಕಾರಣಕ್ಕೆ ಅವರ ವಿರುದ್ಧ […]

ಜನವರಿ 3 ರಿಂದ ಮಂಗಳೂರಿನಿಂದ ದುಬೈ ಗೆ ಜೆಟ್‌ ಏರ್‌ವೇಸ್‌ ಹಾರಾಟ

Thursday, January 3rd, 2013
Jet airways

ಮಂಗಳೂರು : ದೇಶದ ಎರಡನೇ ಅತಿ ದೊಡ್ಡ ವಿಮಾನ ಯಾನ ಸಂಸ್ಥೆಯಾದ ಮುಂಬಯಿ ಮೂಲದ ಜೆಟ್ ಏರ್‌ವೇಸ್, ಜನವರಿ 3ರಿಂದ ಮಂಗಳೂರು-ದುಬೈ ಮಧ್ಯೆ ಹಾರಾಟ ಆರಂಭಿಸಲಿದೆ. ಮೊದಲ ಬಾರಿಗೆ ಜೆಟ್ ಏರ್‌ವೇಸ್‌ನ ಅಂತಾರಾಷ್ಟ್ರೀಯ ವಿಮಾನ ಮಂಗಳೂರಿನಿಂದ ದುಬಾಯಿಗೆ ಹಾರಾಟ ನಡೆಸಲು ಕ್ಷಣಗಣನೆ ಆರಂಭಗೊಂಡಿದೆ. ದುಬೈ ಹಾಗೂ ಮಂಗಳೂರು ನಡುವೆ ನೇರ ವಿಮಾನ ಯಾನವನ್ನು ಆರಂಭಿಸುವ ನಿಟ್ಟಿನಲ್ಲಿ ಅನೇಕ ವರ್ಷಗಳಿಂದ ಪ್ರಯತ್ನ ನಡೆಯುತ್ತಿತ್ತು. ಆದರೆ ಇದರ ಹಿಂದೆ ಏರ್ ಇಂಡಿಯಾ ವಿಮಾನ ಯಾನದ ಲಾಬಿ ಕೆಲಸ ಮಾಡುತ್ತಿತ್ತು ಎಂದು […]

ಸಚಿವ ಪೂಜಾರಿ ಕೊಲೆಯತ್ನ ತಪ್ಪಿತಸ್ಥರ ತನಿಖೆಗೆ ಸೂಚನೆ

Wednesday, January 2nd, 2013
Kota Shreenivaas Poojari

ಉಡುಪಿ : ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಮನೆಗೆ ಸೋಮವಾರ ತಡರಾತ್ರಿ ಬೈಕ್ ನಲ್ಲಿ ಬಂದ 6 ಮಂದಿ ದುಷ್ಕರ್ಮಿಗಳು ಮನೆಯೊಳಗೇ ಇದ್ದ ಸಚಿವರನ್ನು ಹೊರಗೆ ಬರುವಂತೆ ಸೂಚಿಸಿ, ಅವರ ಸರ್ಕಾರಿ ಕಾರನ್ನು ಹಾನಿ ಮಾಡಿರುವುದು ಖಂಡನೀಯವಾಗಿದ್ದು ಪ್ರಕರಣವನ್ನು ತನಿಖೆಗೆ ಒಳಪಡಿಸಿ, ಆರೋಪಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕೋಟದ ಬ್ರಹ್ಮಶ್ರೇಎ ನಾರಾಯಣ ಗುರುಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸತೀಶ್ ಪೂಜಾರಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪತ್ರಿಕಾ […]

ಬಿಜೆಪಿ ಮುಂದಿನ ಚುನಾವಣೆಗೆ ಸಾಕಸ್ಟು ಸಿದ್ದತೆ : ಸಿ. ಟಿ. ರವಿ

Wednesday, January 2nd, 2013
CT Ravi

ಮಂಗಳೂರು :ಬಿಜೆಪಿ ಪಕ್ಷವು ಮುಂದಿನ ಚುನಾವಣೆಗೆ ಸಾಕಸ್ಟು ಸಿದ್ದತೆಗಳನ್ನು ಮಾಡಿಕೊಂಡಿದ್ದು, ಮುಂದಿನ ಚುನಾವಣೆಯಲ್ಲೂ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ವಿಶ್ವಾಸ ತಮಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಮಂಗಳೂರಿನ ಪತ್ರಿಕಾ ಭವನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸರಕಾರದ 12.5 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣವಾಗಿರುವ ಪತ್ರಿಕಾ ಭವನದ ಸಭಾಂಗಣಕ್ಕೆ ಅವಶ್ಯ ಇರುವ ಸೀಲಿಂಗ್‌ ಮತ್ತು ವಿದ್ಯುತ್‌ ಜೋಡಣೆ ಕಾಮಗಾರಿಗೆ ಅವಶ್ಯ ನೆರವು ಒದಗಿಸುವುದಾಗಿ ಭರವಸೆ […]

ಧಾರ್ಮಿಕ ಕಟ್ಟು ಪಾಡುಗಳನ್ನು ಬದಿಗೊತ್ತಿದ ಮಂಗಳೂರಿನ ಶ್ರೀ ಗೋಕರ್ಣನಾಥ ದೇವಸ್ಥಾನ

Wednesday, January 2nd, 2013
Padapooja at Kudroli temple

ಮಂಗಳೂರು : ಮಂಗಳೂರು ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ದಲಿತ ಮಹಿಳೆಯೊಬ್ಬರ ಪಾದ ಪೂಜೆ ಹಾಗೂ ಅವರಿಂದಲೇ ಚಂಡಿಕಾ ಹೋಮದ ಎಲ್ಲಾ ಕಾರ್ಯಗಳನ್ನು ಮಾಡಿಸುವ ಮೂಲಕ ಜಾತಿಯ ಕಟ್ಟುಪಾಡು, ಧಾರ್ಮಿಕ ಕ್ಷೇತ್ರದಲ್ಲಿ ಲಿಂಗ ತಾರತಮ್ಯದ ಕಟ್ಟುಪಾಡುಗಳನ್ನು ದೂರ ಮಾಡುವ ಪ್ರಯತ್ನ ನಡೆಯಿತು. ಈ ಮೂಲಕ ದೇವಸ್ಥಾನಗಳು ಜಾತಿ ಕೇಂದ್ರಿತವಾಗಿರಬಾರದು ಹಾಗೂ ಮಹಿಳೆ ಎಂದೂ ಈ ಸಮಾಜಕ್ಕೆ ನಿಷಿದ್ಧವಲ್ಲ ಎಂಬ ಸಂದೇಶವನ್ನು ಮಂಗಳವಾರ ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಸಮಾಜಕ್ಕೆ ನೀಡಿದರು. ಮಂಗಳವಾರ ಬೆಳಗ್ಗೆ […]

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಅಧಿಕಾರ ಸ್ವೀಕಾರ

Tuesday, January 1st, 2013
Tingale Vikramarjuna Hegde

ಮಂಗಳೂರು : ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಉಡುಪಿ ಜಿಲ್ಲೆಯ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಸೋಮವಾರ ಮಂಗಳೂರಿನ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮೂರು ಜಿಲ್ಲೆಯಲ್ಲಿ 2013-14ನೇ ಸಾಲಿನಲ್ಲಿ ಯಾವ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಬಹುದು ಎಂಬುದರ ಬಗ್ಗೆ ಪ್ರಾಧಿಕಾರದ ಸದಸ್ಯರ ಜತೆ ಚರ್ಚಿಸಿ ಆ ಬಳಿಕ ನೀಲ ನಕಾಶೆಯನ್ನು ಸಿದ್ಧಪಡಿಸಿ ಸರಕಾರಕ್ಕೆ ಶೀಘ್ರದಲ್ಲಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು. ಗುಜರಾತ್ ನಲ್ಲಿ ಗೃಹ […]

ರಾಜ್ಯದಲ್ಲಿ ಮಹಿಳಾ ದೌರ್ಜನ್ಯ ತಡೆಗಟ್ಟಲು ಉನ್ನತ ಶಿಕ್ಷಣ ಇಲಾಖೆಯಲ್ಲಿ ಮಾರ್ಗಸೂಚಿ ರಚನೆ

Monday, December 31st, 2012
CT Ravi

ಮಂಗಳೂರು : ರಾಜ್ಯದಲ್ಲಿ ವಿದ್ಯಾರ್ಥಿನಿಯರು ಮತ್ತು ಮಹಿಳಾ ಸಿಬ್ಬಂದಿಗಳ ಮೇಲೆ ನಡೆಯತ್ತಿರುವ ದೌರ್ಜನ್ಯಗಳನ್ನು ತಡೆಯಲು ಉನ್ನತ ಶಿಕ್ಷಣ ಇಲಾಖೆಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ಹೇಳಿದರು. ಡಿಸೆಂಬರ್ 29 ಶನಿವಾರ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು ದಿಲ್ಲಿ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಮತ್ತು ಸಾವಿನ ಘಟನೆ ದೇಶದ ಆತ್ಮಸಾಕ್ಷಿ ಪ್ರಶ್ನಿಸುವಂಥದ್ದು. ಅತ್ಯಾಚಾರಿಗಳಿಗೆ ಕಠಿಣ ವಿಧಿಸಬೇಕು ಮತ್ತು ಆರು ತಿಂಗಳೊಳಗೆ ಪ್ರಕರಣ ಇತ್ಯರ್ಥಕ್ಕೆ ಕಾನೂನು ತಿದ್ದುಪಡಿ […]

ಉಡುಪಿ ಲಾಠಿಚಾರ್ಜ್ ವಿರೋಧಿಸಿ ಮಂಗಳೂರು ಸಿಪಿಐಎಂ ಕಾರ್ಯಕರ್ತರಿಂದ ಪ್ರತಿಭಟನೆ

Saturday, December 29th, 2012
CPIM Protest

ಮಂಗಳೂರು : ಗುರುವಾರ ಡಿಸೆಂಬರ್ 27 ರಂದು ಉಡುಪಿಯಲ್ಲಿ ಉಡುಪಿ ಮಠದ ಪಂಕಿ ಭೋಜನ ಹಾಗು ಕುಕ್ಕೆ ಶ್ರೀ ಕ್ಷೇತ್ರದ ಮಡೆ ಸ್ನಾನ ಪದ್ದತಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಜನರ ಮೇಲೆ ಅಮಾನುಷವಾಗಿ ಲಾಠಿಚಾರ್ಜ್ ನಡೆಸಿದನ್ನು ಖಂಡಿಸಿ ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಸಿಪಿಐ(ಎಂ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸಿಪಿಐ(ಎಂ)ನ ಜಿಲ್ಲಾಧ್ಯಕ್ಷ ಬಿ.ಮಾದವ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡುತ್ತಾ ಸರಕಾರವು ಅನಿಷ್ಟ ಪದ್ದತಿಗಳ ಆಚರಣೆಯ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ಮಾಡಿದವರ ಮೇಲೆ ಲಾಠಿ ಚಾರ್ಜ್ ಮಾಡಿ ಹಲ್ಲೆ ಮಾಡುವುದರ […]