ಕಾರಿಗೆ ಕೆಟಿಎಂ ಬೈಕ್ ಡಿಕ್ಕಿ: ಬೈಕ್ ಸವಾರ ಸಾವು

Wednesday, November 14th, 2018
nantoor

ಮಂಗಳೂರು: ನಗರದ ನಂತೂರು-ಕೆಪಿಟಿ ರಸ್ತೆಯಲ್ಲಿ ಕಾರಿಗೆ ಕೆಟಿಎಂ ಬೈಕ್ ಡಿಕ್ಕಿಯಾದ ಪರಿಣಾಮ ಸವಾರ ರಸ್ತೆಗೆ ಬಿದ್ದ ವೇಳೆ ಹಿಂದಿನಿಂದ ಬರುತ್ತಿದ್ದ ಬಸ್ ಸವಾರನ ಮೇಲೆ ಹರಿದ ಪರಿಣಾಮ ಆತ ಮೃತಪಟ್ಟ ಘಟನೆ ನಡೆದಿದೆ. ಕೋಣಾಜೆ ಇನ್ನೋಳಿ ನಿವಾಸಿ ವಿಲ್ಸನ್ (26) ಮೃತಪಟ್ಟ ಯುವಕ. ಸಹ ಸವಾರ ಮೆಂಡೋನ್ಸಾ (24) ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಬೈಕ್‌ನಲ್ಲಿ ಪದುವಾ ಸಮೀಪದಿಂದ ಕೆಪಿಟಿ ಕಡೆ ಹೋಗುತ್ತಿದ್ದಾಗ ಬೈಕ್ ಕಾರಿಗೆ ಡಿಕ್ಕಿಯಾಗಿ ಮಗುಚಿ ಬಿದ್ದಿದೆ. ಈ ವೇಳೆ ಇಬ್ಬರು ಕೂಡ ರಸ್ತೆಗೆ ಬಿದ್ದಿದ್ದು, […]

ಆಳ್ವಾಸ್ ಚಿತ್ರಸಿರಿ ವ್ಯಂಗ್ಯಚಿತ್ರಸಿರಿ, ಛಾಯಾಚಿತ್ರಸಿರಿ ಪ್ರಶಸ್ತಿ ಪ್ರದಾನ

Wednesday, November 14th, 2018
alwas

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಆಳ್ವಾಸ್ ನುಡಿಸಿರಿ 2018 ಅಂಗವಾಗಿ ನಡೆದ 2018ರ ಆಳ್ವಾಸ್ ಚಿತ್ರಸಿರಿ, ಛಾಯಾಚಿತ್ರಸಿರಿ ಹಾಗೂ ವ್ಯಂಗ್ಯಚಿತ್ರಸಿರಿ ರಾಜ್ಯಮಟ್ಟದ ಕಲಾಶಿಬಿರದ ಸಮಾರೋಪ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ವಿದ್ಯಾಗಿರಿ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ನಡೆಯಿತು. ಹಿರಿಯ ಚಿತ್ರಕಲಾವಿದ ಗಣೇಶ್ ಸೋಮಯಾಜಿ ಅವರಿಗೆ ಆಳ್ವಾಸ್ ಚಿತ್ರಸಿರಿ ಪ್ರಶಸ್ತಿ, ಹಿರಿಯ ಛಾಯಾಚಿತ್ರ ಕಲಾವಿದ ಎಸ್.ತಿಪ್ಪೇಸ್ವಾಮಿ ಮೈಸೂರು ಅವರಿಗೆ ಆಳ್ವಾಸ್ ಛಾಯಾಚಿತ್ರಸಿರಿ 2018 ಪ್ರಶಸ್ತಿ ಹಾಗೂ ಹಿರಿಯ ವ್ಯಂಗ್ಯಚಿತ್ರಕಾರ ಕೆ.ಆರ್ ಸ್ವಾಮಿ ಅವರಿಗೆ ಅಳ್ವಾಸ್ ವ್ಯಂಗ್ಯಚಿತ್ರಸಿರಿ […]

ಹತ್ತನೇ ವರ್ಷದ ಸಂಭ್ರಮದಲ್ಲಿ ತುಳುನಾಡು ರಕ್ಷಣಾ ವೇದಿಕೆ

Wednesday, November 14th, 2018
tulunadu

ಮಂಗಳೂರು: ತುಳುನಾಡು ರಕ್ಷಣಾ ವೇದಿಕೆ ಸ್ಥಾಪನೆಗೊಂಡು ಹತ್ತನೇ ವರ್ಷವಾಗಿದ್ದು, ಈ ಸಂಸ್ಥೆ ಹಲವಾರು ಜನಪರ ಕಾರ್ಯಕ್ರಮಗಳಿಂದ ಸಾಮಾಜಿಕ ರಂಗದಲ್ಲಿ ಹಲವಾರು ಕೊಡುಗೆಗಳನ್ನು‌ ನೀಡಿದೆ ಎಂದು ತುಳು ನಾಡು ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಹೇಳಿದರು. ಈ ಸಂಸ್ಥೆಯು ಕಾಸರಗೋಡು ಗಡಿ ಸಮಸ್ಯೆಯಿಂದ ಹಿಡಿದು ನೀರಿನ ಸಮಸ್ಯೆ, ನಗರಪಾಲಿಕೆಯ ಸಮಸ್ಯೆ, ಚಲನಚಿತ್ರ ಕ್ಷೇತ್ರದ ಸಮಸ್ಯೆಗಳ ವಿರುದ್ಧ ನಿರಂತರವಾಗಿ ಹೋರಾಟಗಳನ್ನು ನಡೆಸಿ ಜನರ ಆಶೋತ್ತರಗಳಿಗೆ ಸ್ಪಂದಿಸಿದೆ ಎಂದರು. ಈ ದಶಮಾನೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ನಗರದ ಪುರಭವನದಲ್ಲಿ 2019 […]

ಐಸಿಸಿ ಏಕದಿನ ರ‍್ಯಾಂಕಿಂಗ್: ನಂಬರ್​ 1 ಸ್ಥಾನದಲ್ಲಿ ಕೊಹ್ಲಿ, ಬುಮ್ರಾ

Tuesday, November 13th, 2018
virat-kohli

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಇಂದು ಏಕದಿನ ಶ್ರೇಯಾಂಕ ಪಟ್ಟಿ ರಿಲೀಸ್ ಮಾಡಿದ್ದು, ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ನಂಬರ್ 1ಸ್ಥಾನದಲ್ಲಿದ್ದು, ಬೌಲಿಂಗ್ ವಿಭಾಗದಲ್ಲಿ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬೂಮ್ರಾ ನಂಬರ್ ಸ್ಥಾನದಲ್ಲಿ ಮುಂದುವರೆದಿದ್ದಾರೆ. 899 ಅಂಕ ಪಡೆದಿರುವ ವಿರಾಟ್ ಕೊಹ್ಲಿ ನಂಬರ್ 1ಸ್ಥಾನ ಹಾಗೂ 871 ಅಂಕ ಹೊಂದಿರುವ ರೋಹಿತ್ ಶರ್ಮಾ ಬ್ಯಾಟಿಂಗ್ ವಿಭಾಗದಲ್ಲಿ ನಂಬರ್ 2 ಸ್ಥಾನದಲ್ಲಿದ್ದು, ನ್ಯೂಜಿಲೆಂಡ್ ಬ್ಯಾಟ್ಸ್ಮನ್ ರಾಸ್ ಟೇಲರ್ ತಮ್ಮ ವೃತ್ತಿ ಜೀವನದಲ್ಲಿ 3ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಉಳಿದಂತೆ […]

ಅನಂತ್‌ಕುಮಾರ್ ಬಗ್ಗೆ ಕೀಳುಮಟ್ಟದ ಪೋಸ್ಟ್‌ ಹಾಕಿದ್ದ ಫೇಸ್‌ಬುಕ್ ಪೇಜ್‌ ವಿರುದ್ಧ ಪೊಲೀಸರಿಗೆ ದೂರು!

Tuesday, November 13th, 2018
ananth-kumar

ಮಂಗಳೂರು: ಇಂದು ನಿಧನರಾಗಿರುವ ಕೇಂದ್ರ ಸಚಿವ ಅನಂತ್‌ಕುಮಾರ್ ಅವರ ಬಗ್ಗೆ ಕೀಳುಮಟ್ಟದ ಪೋಸ್ಟ್‌ ಹಾಕಿದ್ದ ಫೇಸ್‌ಬುಕ್ ಪೇಜ್‌ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ‘ಮಂಗಳೂರು ಮುಸ್ಲಿಮ್ಸ್‌’ ಎನ್ನುವ ಫೇಸ್‌ಬುಕ್ ಪೇಜ್‌, ಅನಂತ್‌ ಕುಮಾರ್ ಅವರ ಬಗ್ಗೆ ಕೀಳುಮಟ್ಟದ ಪೋಸ್ಟ್‌ ಅನ್ನು ತನ್ನ ಖಾತೆಯಲ್ಲಿ ಪ್ರಕಟಿಸಿತ್ತು. ಇದು ಭಾರಿ ಆಕ್ರೋಶಕ್ಕೆ ಗುರಿಯಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಮಂಗಳೂರು ದಕ್ಷಿಣದ ಪಾಂಡೇಶ್ವರ ಠಾಣೆ ಪೊಲೀಸರು ‘ಮಂಗಳೂರು ಮುಸ್ಲಿಮ್ಸ್‌’ ಫೇಸ್‌ಬುಕ್ ಪೇಜ್ ವಿರುದ್ಧ ಸ್ವಯಂ ಪ್ರೇರಿತ […]

ಕೋಟ್ಯಂತರ ರಾಮ ಭಕ್ತರು ಅಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ: ಎಂ.ಬಿ.ಪುರಾಣಿಕ್

Tuesday, November 13th, 2018
hindu-parishat

ಮಂಗಳೂರು: ಅಯೋಧ್ಯೆಯ ಶ್ರೀ ರಾಮಜನ್ಮ ಭೂಮಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಆರಂಭಗೊಂಡ ಆಂದೋಲನ ಹಲವಾರು ವರ್ಷಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬಂದಿದ್ದು, ಕೋಟ್ಯಂತರ ರಾಮ ಭಕ್ತರು ಅಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ ಎಂದು ವಿಶ್ವಹಿಂದೂ ಪರಿಷತ್ನ ಅಧ್ಯಕ್ಷ ಎಂ.ಬಿ.ಪುರಾಣಿಕ್ ಇಂದು ನಗರದ ವಿಶ್ವಶ್ರೀ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹೇಳಿದರು. ಕೇಂದ್ರ ಸರಕಾರ ಹಾಗೂ ಸಾಧುಸಂತರು ಈ ರಾಮಜನ್ಮ ಭೂಮಿಯ ನಿರ್ಮಾಣ ಕಾರ್ಯದ ಜವಾಬ್ದಾರಿಯನ್ನು ವಿಶ್ವಹಿಂದು ಪರಿಷತ್ಗೆ ಕೊಡಬೇಕೆಂದು ನಿರ್ಧಾರ ಕೈಗೊಂಡಿತು. ಆ ನಂತರ ವಿಶ್ವಹಿಂದು ಪರಿಷತ್ ರಾಮಜನ್ಮ […]

ನವೆಂಬರ್ 16 ರಿಂದ 18 ರವರೆಗೆ ನಡೆಯಲಿರುವ ‘ಆಳ್ವಾಸ್ ನುಡಿಸಿರಿ’ನ 15 ನೇ ಆವೃತ್ತಿ

Tuesday, November 13th, 2018
Alvas4

ಮಂಗಳೂರು: ಮೂಡಬಿದಿರೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಕರ್ನಾಟಕ ದರ್ಶನ: ಬಹುರೂಪಿ ಆಯಾಮಗಳು ಪರಿಕಲ್ಪನೆಯಲ್ಲಿ 15ನೇ ವರ್ಷದ “ಆಳ್ವಾಸ್‌ ನುಡಿಸಿರಿ’ ನ. 16ರಿಂದ 18ರ ವರೆಗೆ ಮೂಡಬಿದಿರೆ ಸುಂದರಿ ಆನಂದ ಆಳ್ವ ಆವರಣದಲ್ಲಿರುವ ರತ್ನಾಕರವರ್ಣಿ ವೇದಿಕೆಯಲ್ಲಿ ಸಂತ ಶಿಶುನಾಳ ಶರೀಫ ಸಭಾಂಗಣದಲ್ಲಿ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಸೋಮವಾರ ಮಾಹಿತಿ ನೀಡಿದ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, 16ರಂದು ಬೆಳಗ್ಗೆ 8.30ರಿಂದ ಮೆರವಣಿಗೆ ನಡೆಯಲಿದ್ದು, ಬರೋಡಾದ ಶಶಿಧರ ಶೆಟ್ಟಿ ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ ಸಹಕಾರ […]

ಜೈಲಿನ ಬಳಿಯೇ ಬೀಡುಬಿಟ್ಟ ರೆಡ್ಡಿ ಆಪ್ತ ಅಲಿಖಾನ್ ಅಂಡ್ ಟೀಂ!

Tuesday, November 13th, 2018
janardhan-reddy

ಬೆಂಗಳೂರು: ಆಂಬಿಡೆಂಟ್ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ರೆಡ್ಡಿ ಈಗಾಗಲೇ ಪರಪ್ಪನ ಅಗ್ರಹಾರ ಸೇರಿದ್ದಾರೆ. ಆದ್ರೆ ಜೈಲಿನ ಬಳಿಯೇ ರೆಡ್ಡಿ ಆಪ್ತ ಅಲಿಖಾನ್ ಅಂಡ್ ಟೀಂ ಬೀಡು ಬಿಟ್ಟಿದೆ. ನಂಬರ್ ಪ್ಲೇಟ್ ಇಲ್ಲದ ಬಿಳಿಯ ಬಣ್ಣದ ಇನೋವಾ ಕಾರಿನಲ್ಲಿ ಅಲಿಖಾನ್ ಅಂಡ್ ಟೀಂ ಬಂದಿದ್ದು, ಮಾಧ್ಯಮಗಳ ಕ್ಯಾಮರಾ ಕಂಡ ಕೂಡಲೇ ಅಲ್ಲಿಂದ ಕಾಲ್ಕಿತ್ತಿದ್ದಾರೆ. ರೆಡ್ಡಿ ಜೈಲಿಗೆ ಹೋದಾಗಲಿಂದಲೂ ಜೈಲ್ ಬಳಿಯೇ ಬೀಡು ಬಿಟ್ಟು ರೆಡ್ಡಿಗೆ ಊಟ, ತಿಂಡಿಯ ವ್ಯವಸ್ಥೆ ಮಾಡಿದ್ದಾರೆ. ಇಂದು ಜಾಮೀನು ಅರ್ಜಿ ವಿಚಾರಣೆ ನಡೆಯಲಿರುವ ಹಿನ್ನೆಲೆ […]

ಅನಂತಕುಮಾರ್ ನಿಧನಕ್ಕೆ ಸಚಿವ ಯು. ಟಿ. ಖಾದರ್ ಸಂತಾಪ

Tuesday, November 13th, 2018
u-t-khader

ಮಂಗಳೂರು: ಕೇಂದ್ರ ಸಚಿವ ಅನಂತಕುಮಾರ್ ನಿಧನಕ್ಕೆ ನಗರಾಭಿವೃದ್ಧಿ ಸಚಿವ ಯು. ಟಿ.‌ ಖಾದರ್ ಸಂತಾಪ ಸೂಚಿಸಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಧೀಮಂತ ನಾಯಕರಲ್ಲಿ ಅನಂತಕುಮಾರ್ ಒಬ್ಬರಾಗಿದ್ದರು. ನಾನು ಸಚಿವನಾಗಿ ಕೆಲಸ ಮಾಡಿದ್ದಾಗ ಹಲವಾರು ವಿಚಾರಗಳ ಬಗ್ಗೆ ಅನಂತಕುಮಾರ್ ಸಲಹೆ ನೀಡಿದ್ದಾರೆ. ಅನಂತ್ ಕುಮಾರ್ ಅಗಲಿಕೆ ದುಃಖ ತಂದಿದೆ. ಅವರ ಅಗಲಿಕೆ ರಾಜ್ಯಕ್ಕೆ ಭರಿಸಲಾರದ ನಷ್ಟ ಎಂದು ಅವರು ಹೇಳಿದ್ದಾರೆ.

ಹೋಲಿ ರೋಸರಿ ಕೆಥಡ್ರಲ್‌ನ 450ನೇ ವರ್ಷದ ಸಂಭ್ರಮಾಚರಣೆ ಉದ್ಘಾಟಿಸಲಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ

Tuesday, November 13th, 2018
Rosario

ಮಂಗಳೂರು : ದಿ ಹೋಲಿ ರೋಸರಿ ಕೆಥಡ್ರಲ್, ಬೋಳಾರ ಇದರ 450ನೇ ವರ್ಷದ ಸಂಭ್ರಮಾಚರಣೆಯನ್ನು ಕರ್ನಾಟಕದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಎಚ್. ಡಿ. ಕುಮಾರಸ್ವಾಮಿ, ನವೆಂಬರ್ 18, ರವಿವಾರದಂದು ಉದ್ಘಾಟಿಸಲಿದ್ದಾರೆ. ಈ ಸಮಾರಂಭ ನಗರದ ರೊಸಾರಿಯೋ ಕೆಥಡ್ರಲ್ ಗ್ರೌಂಡ್‌ನಲ್ಲಿ ಸಂಜೆ 6.30ಕ್ಕೆ ನಡೆಯಲಿದೆ. ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ವಂದನೀಯ ರೆ. ಡಾ. ಪೀಟರ್ ಪೌಲ್ ಸಲ್ದಾನ ಈ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಬಿಷಪ್ ಅತಿ ವಂದನೀಯ ರೆ. ಡಾ. ಅಲೋಶಿಯಸ್ ಪೌಲ್ ಡಿ’ಸೋಜ, […]