ನ.14ರಂದು ಕುಲಶೇಖರದ ಹಾಲಿನ ಡೈರಿಯಲ್ಲಿ 65ನೆ ಅಖಿಲ ಭಾರತ ಸಹಕಾರಿ ಸಪ್ತಾಹ ಉದ್ಘಾಟನೆ

Monday, November 12th, 2018
Nandini dairy

ಮಂಗಳೂರು : ನ.14ರಿಂದ 20ರವರೆಗೆ ಜಿಲ್ಲೆಯ ವಿವಿಧ ಸಹಕಾರಿ ಸಂಘಗಳ ಸಹಯೋಗದೊಂದಿಗೆ ನಡೆಯಲಿರುವ  65ನೆ ಅಖಿಲ ಭಾರತ ಸಹಕಾರಿ ಸಪ್ತಾಹದಲ್ಲಿ ನೂತನ ಹಾಲಿನ ಉತ್ಪನ್ನ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ. ರವಿರಾಜ ಹೆಗ್ಡೆ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಲಿಮಿಟೆಡ್ ವತಿಯಿಂದ ‘ಗ್ರಾಮೀಣಾಭಿವೃದ್ಧಿಗಾಗಿ ಸಹಕಾರ ಸಂಸ್ಥೆಗಳ ಮೂಲಕ ಉತ್ತಮ ಆಡಳಿತ ಮತ್ತು ಸರ್ವರನ್ನೊಳಗೊಂಡ ಬೆಳವಣಿಗೆ ’ಎಂಬ ಧ್ಯೇಯದೊಂದಿಗೆ ಈ ಬಾರಿಯ ಸಪ್ತಾಹ ನಡೆಯಲಿದೆ. […]

ಕ್ಯಾನ್ಸರ್​ ನನಗೆ ಹೊಸ ಜೀವನ ನೀಡಿದೆ: ಮನಿಷಾ ಕೊಯಿರಾಲ್

Monday, November 12th, 2018
manisha

ಮುಂಬೈ: ಅದೇಷ್ಟೊ ಜನ ಕ್ಯಾನ್ಸರ್ಗೆ ಬಲಿ ಆಗಿದ್ದಾರೆ. ಅಷ್ಟೇ ಏಕೆ ಇಂದು ಕೇಂದ್ರ ಸಚಿವ ಅನಂತಕುಮಾರ್ರನ್ನು ಬಲಿ ಪಡೆದಿದ್ದು ಈ ಮಹಾಮಾರಿ ರೋಗವೇ. ಇನ್ನು ಕೆಲ ಅದೃಷ್ಟವಂತರು ಅದೇ ಕ್ಯಾನ್ಸರ್ನಿಂದ ನರಳಿ ಹೊರ ಬಂದಿದ್ದಾರೆ. ಆ ಲಿಸ್ಟ್ನಲ್ಲಿ ಯುವರಾಜ್ ಸಿಂಗ್, ಮನಿಷಾ ಕೊಯಿರಾಲ್ ಸಹ ಇದ್ದಾರೆ. ಹೌದು, ಪ್ರಮುಖ ನಟಿ ಮನಿಶಾ ಕೊಯಿರಾಲಾ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದರು. ಆ ರೋಗಕ್ಕೆ ನರಳಿದ್ದರು. ಈಗ ಅವರು ಆರೋಗ್ಯದಿಂದ ಹೊರ ಬಂದು ಆರು ವರ್ಷ ಕಳೆದಿವೆ. ಈ ಹಿನ್ನೆಲೆಯಲ್ಲಿ ಅವರು […]

ಅನಂತಕುಮಾರ್ ಅವರ ನಿಧನಕ್ಕೆ ಬಿಜೆಪಿ ಉಪಾಧ್ಯಕ್ಷ ಜಿ.ಆನಂದ ಬಂಟ್ವಾಳ ಸಂತಾಪ ಸೂಚನೆ

Monday, November 12th, 2018
anand-bantwal

ಬಂಟ್ವಾಳ: ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಎಚ್.ಎನ್. ಅನಂತಕುಮಾರ್ ಅವರ ನಿಧನಕ್ಕೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಿ.ಆನಂದ ಬಂಟ್ವಾಳ ಅವರು ಸಂತಾಪ ಸೂಚಿಸಿದ್ದಾರೆ. ಇವರ ಅಕಾಲಿಕ ಮರಣ ಪಕ್ಷಕ್ಕೆ ತುಂಬಲಾರದ ನಷ್ಟ ವಾಗಿದೆ. ನನಗೆ ಅತೀವ ನೋವುಂಟು ಮಾಡಿದೆ ಎಂದು ಜಿ.ಆನಂದ ಅವರು ತಿಳಿಸಿದ್ದಾರೆ. ಬಂಟ್ವಾಳ ಕ್ಕೂ ಅನಂತ್ ಕುಮಾರ್ ಅವರಿಗೂ ಹಳೆಯ ಸಂಬಂಧ ವಿದೆ. 1983 ರಲ್ಲಿ ವಿದ್ಯಾರ್ಥಿ ಪರಿಷತ್ ರಾಜ್ಯ ಕಾರ್ಯದರ್ಶಿ ಯಾಗಿ ಅಯ್ಕೆ ಯಾದ ಸಂದರ್ಭದಲ್ಲಿ ಇವರು ಬಂಟ್ವಾಳ ಕ್ಕೆ ಆಗಮಿಸಿ ಸಂಘಟನೆಯನ್ನು […]

ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ಡಿ ವೇದವ್ಯಾಸ ಕಾಮತ್ ರಿಂದ ಅನಂತ ಕುಮಾರ್ ಗೆ ಅಂತಿಮ ನಮನ

Monday, November 12th, 2018
Ananth Kumar

ಮಂಗಳೂರು  : ಕೇಂದ್ರ ಸಚಿವ ಅನಂತ ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಬೆಂಗಳೂರಿನ ಬಸವನಗುಡಿಯಲ್ಲಿರುವ ಅನಂತ ಕುಮಾರ್ ಅವರ ಸ್ವಗೃಹದಲ್ಲಿ ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಹಾಗೂ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ , ಹೈಕೋರ್ಟ್ ವಕೀಲರಾದ ಎಸ್ ಪವನ್ ಚಂದ್ರ ಶೆಟ್ಟಿ ಪಡೆದು ಅಗಲಿದ ಮಹಾನ್ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು. ಭಾರತೀಯ ಜನತಾ ಪಾರ್ಟಿಯ ಹಿರಿಯ ಮುಖಂಡರಾಗಿದ್ದ, ಅಟಲ್ ಜಿ, ಅಡ್ವಾಣಿಜಿ, ನರೇಂದ್ರ […]

ನಾಲ್ಕು ಮಂದಿಗೆ ‘ಮಾಮ್ ಇನ್‌ಸ್ಪೈರ್ ಅವಾರ್ಡ್’ ಪ್ರದಾನ ನಿರಂತರ ಓದಿನಿಂದ ಬರಹಕ್ಕೆ ಗಟ್ಟಿತನ: ಎಂ.ರಘುರಾಮ್

Monday, November 12th, 2018
award

ಮಂಗಳೂರು: ಮಂಗಳೂರು ವಿಶ್ವ ವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿಗಳ ಹಳೆ ವಿದ್ಯಾರ್ಥಿಗಳ ಸಂಘ ‘ಮಾಮ್'(ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ) ವತಿಯಿಂದ ಕೊಡಮಾಡುವ ಪ್ರಥಮ ವರ್ಷದ `ಮಾಮ್ ಇನ್‌ಸ್ಪೈರ್ ಅವಾರ್ಡ್’ ಪ್ರದಾನ ಸಮಾರಂಭ ಶನಿವಾರ ನಗರದ ಬಿಜೈಯಲ್ಲಿರುವ ಆಡ್ ಐಡಿಯಾ ಕಚೇರಿಯಲ್ಲಿ ನಡೆಯಿತು. ಸ್ನಾತಕೋತ್ತರ ಮತ್ತು ಪದವಿ ವಿಭಾಗದಿಂದ ತಲಾ ಇಬ್ಬರು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಪದವಿ ವಿಭಾಗದಲ್ಲಿ ಉಜಿರೆ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿಯರಾದ ಪ್ರೀತಿ ಆರ್.ಭಟ್(ಪ್ರಥಮ), ಸುವರ್ಚಲಾ ಅಂಬೇಕರ್ ಬಿ.ಎಸ್.(ದ್ವಿತೀಯ), […]

ಮಹಿಂದ್ರಾ ವಾಹನ ಪಲ್ಟಿ: ಓರ್ವ ಪೊಲೀಸ್ ಪೇದೆ ಸಾವು!

Monday, November 12th, 2018
police

ವಿಜಯಪುರ: ಚಾಲಕನ ನಿಯಂತ್ರಣ ತಪ್ಪಿ ಮಹಿಂದ್ರಾ ವಾಹನ ಪಲ್ಟಿಯಾದ ಪರಿಣಾಮ ಓರ್ವ ಪೊಲೀಸ್ ಪೇದೆ ಸಾವನ್ನಪ್ಪಿದ ಘಟನೆ ಜಿಲ್ಲೆಯ ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯ ಬೊಮ್ಮನಜೋಗಿ ಕ್ರಾಸ್ ಬಳಿ ನಡೆದಿದೆ. ಘಟನೆಯಲ್ಲಿ ಚಾಲಕ ಮಂಜುಗೆ ಗಂಭೀರ ಗಾಯಗಳಾಗಿವೆ. ಇಂಡಿ ತಾಲೂಕಿನ ಅರ್ಜುಣಗಿ ಬಿಕೆ ಗ್ರಾಮದ ದ್ವಾರಕೀಶ್ ಹಣಮಂತ ದೇವಖಾತೆ ಮೃತಪಟ್ಟ ಪೊಲೀಸ್ ಪೇದೆ.ಇವರು ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ತಲೆಗೆ ಪೆಟ್ಟು ಹಾಗೂ ಕಾಲ್ಮುರಿತದಿಂದ ಗಾಯಗೊಂಡಿದ್ದ ಪೊಲೀಸ್ ಪೇದೆ, ಸಿಂದಗಿಯ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ […]

ಅನಂತ ಕುಮಾರ್ ಅವರ ನಿಧನ ರಾಜ್ಯಕ್ಕೆ ಅಪಾರ ನಷ್ಟವನ್ನುಂಟು ಮಾಡಿದೆ: ಕೋಟ ಶ್ರೀನಿವಾಸ ಪೂಜಾರಿ

Monday, November 12th, 2018
srinivas-poojary

ಮಂಗಳೂರು: ಬಿಜೆಪಿ ಮುಖಂಡ ಹಾಗೂ ಕೇಂದ್ರ ಸಚಿವರಾದ ಅನಂತ ಕುಮಾರ್ ಅವರ ನಿಧನ ರಾಷ್ಟ್ರ ಮತ್ತು ರಾಜ್ಯಕ್ಕೆ ಅಪಾರ ನಷ್ಟವನ್ನುಂಟು ಮಾಡಿದೆ ಎಂದು ರಾಜ್ಯ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ನಾನು ಅವರನ್ನು ಭೇಟಿಯಾದ ಸಂದರ್ಭ ಅವರು ವಿರೋಧವೇ ಇಲ್ಲದೆ ನೀನು‌ ಆಯ್ಕೆಯಾಗಿದ್ದಿ ನಿನಗೆ ಶುಭವಾಗಲಿ‌ ಎಂದಿದ್ದರು‌. ಇತ್ತೀಚೆಗೆ ಅಟಲ್ ಜೀಯವರ ಚಿತಾಭಸ್ಮವನ್ನು ಶ್ರೀರಂಗಪಟ್ಟಣದ ತ್ರಿವೇಣಿ ಸಂಗಮದಲ್ಲಿ ಬಿಡಲು ನಾನು ಯಡಿಯೂರಪ್ಪ, ಅನಂತ‌ ಕುಮಾರ್ ಅವರು ಒಟ್ಟಾಗಿದ್ದೆವು. ನೀರಿನ ಸೆಳೆತಕ್ಕೆ ಅವರು ಒಂದು ರೀತಿ […]

ಕಾರುಣ್ಯ’ದ ಕೈ ಹಿಡಿದ ವಿಶ್ವ ಬಂಟರ ಸಂಘ

Monday, November 12th, 2018
bantara-sangha

ಮಂಗಳೂರು: ಮಂಗಳೂರಿನ ಎಂ.ಫ್ರೆಂಡ್ಸ್ ಸಂಸ್ಥೆ ಕಳೆದ 2017 ಡಿಸೆಂಬರ್ ನಲ್ಲಿ ಮಹತ್ವದ ಯೋಜನೆಯೊಂದಕ್ಕೆ ಚಾಲನೆ ನೀಡಿತು. ಮಂಗಳೂರಿನಲ್ಲಿರುವ ಸರಕಾರಿ ವೆನ್ಲಾಕ್ ಜಿಲ್ಲಾಸ್ಪತ್ರೆಯ ರೋಗಿಗಳ ಜೊತೆಗಾರರಿಗೆ ದಿನನಿತ್ಯ ರಾತ್ರಿಯ ಡಿನ್ನರ್ ನೀಡುವ ಯೋಜನೆಯದು. ಈ ಯೋಜನೆಗೆ 2018 ಡಿಸೆಂಬರ್’ಗೆ ಒಂದು ವರ್ಷ ತುಂಬುತ್ತದೆ. ಎಂ.ಫ್ರೆಂಡ್ಸ್ ಸಂಸ್ಥೆಯಲ್ಲಿರುವ ಸದಸ್ಯರು ಹಾಗೂ ಊರ ಕೆಲವೊಂದು ದಾನಿಗಳಿಂದ ಮುಂದುವರೆಯುತ್ತಿದ್ದ ‘ಕಾರುಣ್ಯ’ ಯೋಜನೆಗೆ ಆರ್ಥಿಕ ಮುಗ್ಗಟ್ಟು ತಲೆದೋರಿದ ಸಂದರ್ಭ ಅದರ ಕೈ ಹಿಡಿದು ಮುಂದುವರೆಸುವಂತೆ ಪ್ರೇರೇಪಿಸಿದ್ದು ವಿಶ್ವ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ […]

ದರೋಡೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Monday, November 12th, 2018
arrested

ಮಂಗಳೂರು: ಜೋಕಟ್ಟೆ ರೈಲ್ವೆ ಟ್ರ್ಯಾಕ್ ಬಳಿ ಶುಕ್ರವಾರ ರಾತ್ರಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಫಝಲ್ ಖಾನ್ ಎಂಬವರನ್ನು ತಡೆದು ಚೂರಿ ತೋರಿಸಿ 10 ಸಾವಿರ ರೂ. ನಗದು ಹಾಗೂ 2 ಮೊಬೈಲ್ ಫೋನ್ಗಳನ್ನು ದೋಚಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಿ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಸಬಾ ಬೆಂಗ್ರೆಯ ನೌಶಾದ್ (25), ಮಹಮ್ಮದ್ ನೌಫಾಲ್ (31) ಬಂಧಿತ ಆರೋಪಿಗಳು. ಆರೋಪಿಗಳಿಂದ 1,500 ರೂ. ನಗದು, 3 ಮೊಬೈಲ್ ಫೋನ್ […]

ದೇವಸ್ಥಾನದ ಕೆರೆಯಲ್ಲಿ ಮಹಿಳೆವೋರ್ವಳ ಮೃತದೇಹ ಪತ್ತೆ..!

Monday, November 12th, 2018
devastana

ಪುತ್ತೂರು: ನಗರದ ಮಹಾಲಿಂಗೇಶ್ವರ ದೇವಸ್ಥಾನದ ಕೆರೆಯಲ್ಲಿ ಇಂದು ಮಹಿಳೆವೋರ್ವಳ ಮೃತದೇಹ ಪತ್ತೆಯಾಗಿದೆ. ಪುತ್ತೂರು ಮಹಾವೀರ ಆಸ್ಪತ್ರೆಯ ಬಳಿಯ ನಿವಾಸಿ ವಿಜಯಲಕ್ಷ್ಮಿ(55) ಮೃತಪಟ್ಟ ಮಹಿಳೆ. ಕೆರೆಯಲ್ಲಿ ತೇಲುತ್ತಿದ್ದ ವಿಜಯಲಕ್ಷ್ಮಿಯವರ ಮೃತದೇಹವನ್ನು ಮೇಲಕ್ಕೆತ್ತಿ ಸಂಬಂಧಿಕರಿಗೆ ಒಪ್ಪಿಸಲಾಗಿದೆ. ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.