ಅಕ್ರಮ ಗಾಂಜಾ ಸಾಗಾಟ ನಾಲ್ವರು ಆರೋಪಿಗಳ ಸೆರೆ

Saturday, March 2nd, 2013
ganja seized at Sullia

ಸುಳ್ಯ : ಶುಕ್ರವಾರ ಸಂಪಾಜೆ ಗ್ರಾಮದ ಕಲ್ಲುಗುಂಡಿ ಕೂಲಿ ಶೆಡ್ಡ್ ಬಳಿ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಜಾಲವನ್ನು ಜಿಲ್ಲಾ ಅಪರಾಧ ಪತ್ತೆ ದಳ ಮತ್ತು ಸುಳ್ಯ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಾಲ್ವರನ್ನು ಬಂಧಿಸಿ ಅವರ ಬಳಿಯಲ್ಲಿದ್ದ 1.100 ಕೆ.ಜಿ. ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಂಗಳೂರು ನಗರದ ಆಸುಪಾಸಿನ ಅವಿನಾಶ್‌(29), ಅರುಣ್‌ ಶೆಟ್ಟಿ(38), ನೆಲ್ಸನ್‌ ಡಿಸೋಜ(29) ಮತ್ತು ಪ್ರಥ್ವಿ ಆಳ್ವ(38) ಆರೋಪಿಗಳಾಗಿದ್ದಾರೆ. ಆರೋಪಿಗಳಿಂದ ರೂಪಾಯಿ  35049 ನಗದು, 6 ಮೊಬೈಲ್‌, 1 ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಂಗಳೂರಿನಲ್ಲಿ ನಡೆದ […]

ಗಾಂಜಾ ಮಾರಾಟ ಪ್ರಯತ್ನ ಗಾಂಜಾ ಸಹಿತ ಆರೋಪಿಗಳ ಬಂಧನ

Friday, February 22nd, 2013
Manipal drug peddlers

ಮಣಿಪಾಲ : ಮಣಿಪಾಲ ಮಣ್ಣಪಳ್ಳ ಕೆರೆ ಬಳಿ ಗುರುವಾರ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಮೂರು ಮಂದಿಯನ್ನು ಗಾಂಜಾ ಸಹಿತ  ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕು ದೇವರಹಳ್ಳಿ ನಿವಾಸಿ ಗೋವಿಂದ ಸ್ವಾಮಿ(37), ದಾವಣಗೆರೆ ಚೆನ್ನಗಿರಿ ತಾಲೂಕು ಬಿಆರ್ ಟಿ ಕಾಲನಿ ನಿವಾಸಿ ಅಣ್ಣಪ್ಪ(29), ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಕಣ್ಣೂರು ಗ್ರಾಮ ನಿವಾಸಿ ಧರ್ಮಪ್ಪ(50) ಎಂಬವರು ಆರೋಪಿಗಳಾಗಿದ್ದು, ಇವರನ್ನು  ಬಂಧಿಸಲಾಗಿದೆ. ಆರೋಪಿಗಳಿಂದ 70 ಸಾವಿರ ರೂ. ಮೌಲ್ಯದ 2,300 ಗ್ರಾಂ. ಗಾಂಜಾ, 2 […]

ಬ್ಯಾರಿ ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷರಿಗೆ ಕತ್ತಿಯಿಂದ ಕಡಿದು ಕೊಲೆಯತ್ನ

Friday, March 16th, 2012
Beary Sahitya Parishat New President Attacked

ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷ ರಹೀಂ ಉಚ್ಚಿಲ ಅವರನ್ನು ನಾಲ್ವರು ಮುಸುಕುಧಾರಿಗಳ ತಂಡ ಗುರುವಾರ ಮಧ್ಯಾಹ್ನ ಬ್ಯಾರಿ ಅಕಾಡೆಮಿ ಕಚೇರಿಯಲ್ಲಿ ಕತ್ತಿಯಿಂದ ಕಡಿದು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ, ಬ್ಯಾರಿ ಅಕಾಡೆಮಿ ಕಚೇರಿಯಲ್ಲಿ ಮಧ್ಯಾಹ್ನ 1.30ರ ವೇಳೆಗೆ ಕಚೇರಿಯ ಚೇಂಬರ್‌ನಲ್ಲಿ ಒಬ್ಬರೇ ಕುಳಿತಿದ್ದ ಸಂದರ್ಭದಲ್ಲಿ ಎರಡು ಮೋಟಾರ್‌ ಸೈಕಲ್‌ಗ‌ಳಲ್ಲಿ ಬಂದ ನಾಲ್ವರು ಮುಸುಕುಧಾರಿಗಳು ಈ ಕೃತ್ಯ ಎಸಗಿದ್ದಾರೆ. ಈ ಸಂದರ್ಭದಲ್ಲಿ ಹೊರಗೆ ಕಚೇರಿ ಸಹಾಯಕ ಸತೀಶ್‌ ರೈ ಮಾತ್ರ ಇದ್ದರು. ಅಪರಿಚಿತರು […]

ಹಣಕ್ಕಾಗಿ ವೈದ್ಯಕೀಯ ವಿದ್ಯಾರ್ಥಿ ಅಪಹರಣ

Friday, October 14th, 2011
Medical-Student Kidnap

ಉಳ್ಳಾಲ: ದೇರಳಕಟ್ಟೆಯ ವೈದ್ಯಕೀಯ ಕಾಲೇಜಿನಲ್ಲಿ ಇಂಟರ್ನ್ಶಿಪ್‌ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು ತಂಡವೊಂದು ಹಣಕ್ಕಾಗಿ ಬುಧವಾರ ತಡರಾತ್ರಿ ಅಪಹರಣ ನಡೆಸಿದ್ದು, ಗುರುವಾರ ಮುಂಜಾನೆ ಕೇರಳದ ಮಂಜೇಶ್ವರದ ಉದ್ಯಾವರದ ಬಳಿ ಜಖಂಗೊಳಿಸಿ ಬಿಟ್ಟಿದ್ದಾರೆ.   ದೇರಳಟ್ಟೆಯಲ್ಲಿ ನಿರ್ಮಾಣ ಹಂತದಲ್ಲಿರುವ ಕಾಂಪ್ಲೆಕ್ಸ್‌ ಒಂದರಿಂದ ವಿದ್ಯಾರ್ಥಿಯನ್ನು ಅಪಹರಿಸಲಾಗಿದ್ದು ಹಣಕ್ಕಾಗಿ ಈ ಅಪಹರಣ ನಡೆದಿದೆ ಎನ್ನಲಾಗಿದೆ. ಕಾಲೇಜಿನ ಎದುರಿಗಿರುವ ಫ್ಲಾಟ್‌ನಲ್ಲಿ ವಿದ್ಯಾರ್ಥಿ ವಾಸವಾಗಿದ್ದ. ವಿದ್ಯಾರ್ಥಿಯನ್ನು ಕೇರಳದ ತ್ರಿಶೂರ್‌ ನಿವಾಸಿ ಮಹಮ್ಮದ್‌ ನೆಬಿಲ್‌(23) ಎಂದು ಗುರುತಿಸಲಾಗಿದೆ. ನೆಬಿಲ್‌ನ ತಂದೆ ತಾಯಿ ವಿದೇಶದಲ್ಲಿ ಉದ್ಯೋಗದಲ್ಲಿದ್ದು ಕಾಂಪ್ಲೆಕ್ಸ್‌ ನ ಣಕಾಸಿನ ವ್ಯವಹಾರ ನೆಬಿಲ್‌ […]

ರಥಬೀದಿಯಲ್ಲಿ ರಾಮ ಮೂರ್ತಿಯ ಚಿನ್ನದ ಸರ ಕದ್ದ ಕಳ್ಳರು

Tuesday, October 4th, 2011
Rama-Mandira

ಮಂಗಳೂರು: ಮಂಗಳೂರು ರಥಬೀದಿಯ ಟೆಂಪಲ್‌ ಸ್ಕೇರ್ ನಲ್ಲಿರುವ ಶ್ರೀರಾಮ ಮಂದಿರ ದ ಕಿಟಿಕಿಯ ಸರಳುಗಳನ್ನು ಮುರಿದು ಒಳ ನುಗ್ಗಿದ ಕಳ್ಳರು ರಾಮ ಮೂರ್ತಿಯ ಮೇಲಿದ್ದ ಒಂದುವರೆ ಪವನು ತೂಕದ ಬಂಗಾರದ ಸರವನ್ನು ಅಪಹರಿಸಿದ ಘಟನೆ ರವಿವಾರ ರಾತ್ರಿ ನಡೆದಿದೆ. ಚಿನ್ನದ ಸರದ ಬೆಲೆ ಸುಮಾರು 24,500 ರೂ ಎಂದು ಅಂದಾಜಿಸಲಾಗಿದೆ. ಸೋಮವಾರ ಬೆಳಗ್ಗೆ ಮಂದಿರದ ಬಾಗಿಲನ್ನು ತೆರೆದಾಗ ಈ ಪ್ರಕರಣ ಬೆಳಕಿಗೆ ಬಂತು. ಮೆನೇಜರ್ ಮಂಗಲ್‌ದಾಸ್‌ ಗುಲ್ವಾಡಿ ಅವರು ಸಲ್ಲಿಸಿದ ದೂರಿನ ಆಧಾರದಲ್ಲಿ ಬಂದರು ಪೊಲೀಸರು ಕೇಸು […]

ಉಸಿರುಗಟ್ಟಿಸಿ ಬ್ಯಾಂಕ್ ಮ್ಯಾನೇಜರ್ ಕೊಲೆ

Monday, September 26th, 2011
BANK MANAGER

ಬೆಂಗಳೂರು : ಬ್ಯಾಂಕ್ ಮ್ಯಾನೇಜರ್ ಒಬ್ಬರನ್ನು ಅವರು ವಾಸವಾಗಿರುವ ಮನೆಯಲ್ಲೇ ಉಸಿರುಗಟ್ಟಿಸಿ ಹತ್ಯೆ ಮಾಡಿರುವ ಘಟನೆ ಶನಿವಾರ ರಾತ್ರಿ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಓರಿಯೆಂಟಲ್ ಬ್ಯಾಂಕ್ ನಲ್ಲಿ ಚೀಫ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪಡುಕೋಣೆ ಮೂಲದ ಶಂಕರ್ ಪೂಜಾರಿ (55) ಅವರ ಕೊಲೆ ನಡೆದಿರುವುದು ಬೆಳಕಿಗೆ ಬಂದಿದ್ದು, ಭಾನುವಾರ ರಾತ್ರಿ ವೇಳೆಗೆ ಕೊಲೆ ನಡೆದಿರಬಹುದು ಎಂದು ಡೆಪ್ಯುಟಿ ಕಮಿಷನರ್ ಸೋನಿಯಾ ನಾರಂಗ್ ತಿಳಿಸಿದ್ದಾರೆ. ಕೊಲೆಯನ್ನು ಪೂಜಾರಿಗೆ ಬಲ್ಲವರೇ ಮಾಡಿರಬಹುದೆಂದು ಶಂಕಿಸಲಾಗಿದ್ದು. ಹೊರಬಾಗಿಲಿಗೆ ಒಳಗಿನಿಂದ […]

ಪರಿಸರ ನಿಯಂತ್ರಣ ಮಂಡಳಿಯ ಉಪ ಅಧಿಕಾರಿ ಲೋಕಾಯುಕ್ತ ಬಲೆಗೆ

Friday, September 9th, 2011
Lokayukta Raid/ಲೋಕಾಯುಕ್ತ ಬಲೆಗೆ

ಉಡುಪಿ: ರಾಜ್ಯ ಪರಿಸರ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ರವಿಚಂದ್ರ ಕೆ. ಅವರು ಮಣಿಪಾಲದಲ್ಲಿ ಕೈಗಾರಿಕಾ ಘಟಕವನ್ನು ಸ್ಥಾಪನೆಯ ಪರವಾನಿಗೆಗೆ ಲಂಚ ಪಡೆಯುತ್ತಿದ್ದಾಗ ಉಡುಪಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ನಿಸರ್ಗ ಕೋಕನೆಟ್‌ ಇಂಡಸ್ಟ್ರೀಸ್‌ ಎಂಬ ಕೈಗಾರಿಕಾ ಘಟಕವನ್ನು ಸ್ಥಾಪನೆ ಮಾಡಲು ಕುಂದಾಪುರ ತಾಲೂಕು ಯೆಡ್ಯಾಡಿ-ಮತ್ಯಾಡಿ ಗ್ರಾಮದ ಗಣೇಶ್‌ ಆನಂದ ಅವರು ನಿರಾಕ್ಷೇಪಣಾ ಪತ್ರ ಕೋರಿ ಮಣಿಪಾಲದ ಕೈಗಾರಿಕಾ ಪ್ರದೇಶದಲ್ಲಿರುವ ಪರಿಸರ ಮಾಲಿನ್ಯ ಅಧಿಕಾರಿಯವರಿಗೆ ಆ.12ರಂದು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ರೂ.5,000 ಶುಲ್ಕ ಪಾವತಿಸಿದ್ದರು. ಪರಿಸರ ಮಾಲಿನ್ಯ […]

ಬೈಕ್‌ನಲ್ಲಿ ಬಂದು ಐರೋಡಿ ಜುವೆಲ್ಲರ್ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿಗಳು

Saturday, August 20th, 2011
Airody Jewllers/ ಐರೋಡಿ ಜುವೆಲ್ಲರ್

ಉಡುಪಿ: ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ನಗರದ ಮಸೀದಿ ರಸ್ತೆಯಲ್ಲಿರುವ ಐರೋಡಿ ಜುವೆಲ್ಲರ್ ಮೇಲೆ ಶುಕ್ರವಾರ ರಾತ್ರಿ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಬೈಕ್‌ನಲ್ಲಿ ಬಂದ ಯುವಕರು ಗುರುತು ಸಿಗದಂತೆ ಮುಖಕ್ಕೆ ಬಟ್ಟೆ ಧರಿಸಿದ್ದರು. ಒಬ್ಬ ಬೈಕ್‌ನಲ್ಲಿದ್ದರೆ ಇನ್ನೊಬ್ಬ ಒಳಗೆ ಪ್ರವೇಶಿಸಲು ಪ್ರಯತ್ನಿಸಿದ ತಡೆಯಲು ಯತ್ನಿಸಿದ ಕಾವಲುಗಾರ ವಿಠಲ ಎಂಬವರಿಗೂ ಗುಂಡು ಹಾರಿಸಿದ ಎನ್ನಲಾಗಿದೆ. ಘಟನೆಯಲ್ಲಿ ಒಳಗಿನ ಸಿಬಂದಿಗಳಿಗಾಗಲೀ, ಕಾವಲುಗಾರನಿಗಾಗಲೀ ಯಾವುದೇ ಅಪಾಯವಾಗಲಿಲ್ಲ. ಕಾವಲುಗಾರ ಬಗ್ಗಿದ ಕಾರಣ ಗುಂಡಿನೇಟಿನಿಂದ ಪಾರಾದ ಎನ್ನಲಾಗಿದೆ. ಪಿಸ್ತೂಲಿನಿಂದ ಹಾರಿಸಿದ ಗುಂಡಿನ ಏಟು […]

ಹುಟ್ಟು ಹಬ್ಬದ ಹೆಸರಿನಲ್ಲಿ ಗಾಂಜಾ ಪಾರ್ಟಿ ನಡೆಸುತ್ತಿರುವ ರೆಸಾರ್ಟ್

Monday, August 15th, 2011
Resort/ ರೆಸಾರ್ಟ್

ಉಳ್ಳಾಲ : ಉಚ್ಚಿಲದ ಬೀಚ್‌ ರಸ್ತೆಯ ಮಹಾರಾಣಿ ಫಾರ್ಮ್ ನಲ್ಲಿ ರೇವ್‌ ಪಾರ್ಟಿಯನ್ನು ನಡೆಸುತ್ತಿದ್ದ ಯುವಕರಿಗೆ ಸ್ಥಳೀಯ ಬಜರಂಗದಳದ ಕಾರ್ಯಕರ್ತರು ಹಲ್ಲೆ ನಡೆಸಿ ರೆಸಾರ್ಟ್‌ನ ಸೊತ್ತುಗಳನ್ನು ದ್ವಂಸ ಮಾಡಿದ್ದಾರೆ. ಪಾರ್ಟಿ ಹೆಸರಿನಲ್ಲಿ ಮಾದಕವಸ್ತು ಸೇವಿಸಿ ತಡರಾತ್ರಿವರೆಗೆ ಯುವಕರ ಗುಂಪೊಂದು ಮೋಜು ನಡೆಸುತ್ತಿತ್ತು. ಸ್ಥಳೀಯ ಬಜರಂಗದಳದ ಸುಮಾರು 30ಕ್ಕೂ ಅಧಿಕ ಸದಸ್ಯರ ತಂಡ ರೆಸಾರ್ಟ್‌ಗೆ ಬಂದು ವಿಚಾರಣೆ ನಡೆಸಿತ್ತು. ಈ ಸಂದರ್ಭದಲ್ಲಿ ಪಾರ್ಟಿಯಲ್ಲಿದ್ದ ಯುವಕರು ಉಡಾಫೆಯಾಗಿ ವರ್ತಿಸಿದ್ದು, ಇದರಿಂದ ಕೆರಳಿದ ಬಜರಂಗ ದಳದ ಕಾರ್ಯಕರ್ತರು ಪಾರ್ಟಿಯಲ್ಲಿ ನಿರತರಾಗಿದ್ದ ಯುವಕರ […]

ಲಂಚ ಸ್ವೀಕರಿಸಿದ ಇಬ್ಬರು ಅಧಿಕಾರಿಗಳಿಗೆ ನ್ಯಾಯಾಂಗ ಬಂಧನ

Saturday, August 13th, 2011
bribe officers/ ಲಂಚಾಧಿಕಾರಿ

ಮಂಗಳೂರು: ಅದಿರು ವ್ಯಾಪಾರಿಯಿಂದ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಅಧಿಕಾರಿ ವೀರಣ್ಣ ನಾಯಕ್‌ ಮತ್ತು ಲೆಕ್ಕ ಪರಿಶೋಧಕ ನರಸಿಂಹ ಅವರನ್ನು ಶುಕ್ರವಾರ ಜಿಲ್ಲಾ ಸೆಷನ್ಸ್‌ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯವು ಆ. 26 ರ ತನಕ ನ್ಯಾಯಾಂಗ ಬಂಧನ ವಿಧಿಸಿದೆ. ಗುರುವಾರ ಸಂಜೆ ಅದಿರು ವ್ಯಾಪಾರಿ ಅತ್ತಾವರದ ಮಹಮದ್‌ ಅವರ ದಾಖಲೆ ಪತ್ರಗಳ ಕ್ಲಿಯರೆನ್ಸ್‌ಗೆ 1.5 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗ ವೀರಣ್ಣ ನಾಯಕ್‌ ಮತ್ತು ನರಸಿಂಹ ಅವರನ್ನು ಲೋಕಾಯುಕ್ತ […]