ಹೊಸ ಹುಮ್ಮಸ್ಸಿನಲ್ಲಿ ಪಿವಿ ಸಿಂಧು, ಸೈನಾ ನೆಹ್ವಾಲ್

Tuesday, January 7th, 2020
sindhu-and-saina

ಕೌಲಾಲಂಪುರ : ಹೊಸ ವರ್ಷದ ಮೊದಲ ಸವಾಲಿಗೆ ಸಜ್ಜಾಗಿರುವ ಹಾಲಿ ವಿಶ್ವ ಚಾಂಪಿಯನ್ ಪಿವಿ ಸಿಂಧು, ಅನುಭವಿ ಷಟ್ಲರ್ ಸೈನಾ ನೆಹ್ವಾಲ್ ಶುಭಾರಂಭದ ನಿರೀಕ್ಷೆಯೊಂದಿಗೆ ಮಂಗಳವಾರ ದಿಂದ ಮಲೇಷ್ಯಾ ಮಾಸ್ಟರ್ಸ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಕಳೆದ ವರ್ಷ ಸ್ವಿಜರ್ಲೆಂಡ್ನ ಬಸೆಲ್ ನಲ್ಲಿ ವಿಶ್ವ ಚಾಂಪಿಯನ್ ಪಟ್ಟಕ್ಕೇರಿ ಐತಿಹಾಸಿಕ ಸಾಧನೆ ಮೆರೆದರೂ ಬಳಿಕ ಸತತ ಸೋಲುಗಳಿಂದ ಕಂಗೆಟ್ಟಿರುವ ಸಿಂಧು ಗೆಲುವಿನ ಹಾದಿಗೆ ಮರಳುವ ಹಂಬಲದಲ್ಲಿದ್ದಾರೆ. ಗಾಯದ ಸಮಸ್ಯೆ ಯಿಂದಾಗಿ ಕಳೆದ ನವೆಂಬರ್ನಲ್ಲಿ ಸಯ್ಯದ್ ಮೋದಿ ಇಂಟರ್ನ್ಯಾಷನಲ್ […]

ಮೂಡುಬಿದಿರೆ : 80ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‌ಷಿಪ್

Monday, January 6th, 2020
moodbidri

ಮೂಡುಬಿದಿರೆ : 2೦ಕಿಮೀ. ನಡಿಗೆಯಲ್ಲಿ ಕೂಟ ದಾಖಲೆ ನಿರ್ಮಿಸಿದ್ದ ಮಂಗಳೂರು ವಿವಿಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ನರೇಂದ್ರ ಪ್ರತಾಪ್ ನಾಲ್ಕನೇ ದಿನ 5 ಸಾವಿರ ಮೀ. ಓಟದಲ್ಲಿಯೂ ಕೂಟ ದಾಖಲೆ ನಿರ್ಮಿಸಿದ್ದಾರೆ. ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ 80ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‌ನ ನಾಲ್ಕನೇ ದಿನವಾದ ಭಾನುವಾರ ಪುರುಷರ ವಿಭಾಗದ 5 ಸಾವಿರ ಮೀಟರ್(5ಕಿ.ಮೀ.) ಓಟವನ್ನು 14ನಿಮಿಷ 17.77ಸೆಕೆಂಡ್ ನಲ್ಲಿ ಕ್ರಮಿಸಿದ ನರೇಂದ್ರ ಪ್ರತಾಪ್ ಸಿಂಗ್, ಪಂಜಾಬಿ ವಿವಿಯ ಸುರೇಶ್ ಕುಮಾರ್ (14 […]

ಅಂತಾರಾಷ್ಟ್ರೀಯ ಹಾಕಿಗೆ ಖ್ಯಾತ ಡಿಫೆಂಡರ್‌ ಸುನೀತಾ ಲಾಕ್ರ ವಿದಾಯ

Friday, January 3rd, 2020
sunitha

ನವದೆಹಲಿ : ಭಾರತೀಯ ವನಿತಾ ತಂಡದ ಖ್ಯಾತ ಡಿಫೆಂಡರ್‌ ಸುನೀತಾ ಲಾಕ್ರಾ ಅಂತಾರಾಷ್ಟ್ರೀಯ ಹಾಕಿಗೆ ಗುರುವಾರ ವಿದಾಯ ಘೋಷಿಸಿದರು. ಸತತವಾಗಿ ಕಾಡುತ್ತಿರುವ ಮಂಡಿನೋವಿನಿಂದಾಗಿ ತಾನು ಈ ಕಠಿನ ನಿರ್ಧಾರ ತೆಗೆದುಕೊಳ್ಳ ಬೇಕಾಯಿತು ಎಂದರು. ಇದರೊಂದಿಗೆ ಅವರ ಟೋಕಿಯೊ ಒಲಿಂಪಿಕ್ಸ್‌ ಕನಸು ಛಿದ್ರಗೊಂಡಿದೆ. “ಇಂದು ನನ್ನ ಬದುಕಿನ ಅತ್ಯಂತ ದುಃಖದ ದಿನ. ನಾನು ಅಂತಾರಾಷ್ಟ್ರೀಯ ಹಾಕಿಗೆ ವಿದಾಯ ಹೇಳುತ್ತಿದ್ದೇನೆ’ ಎಂದರು. ಸುನೀತಾ ಲಾಕ್ರಾ 2008ರಲ್ಲಿ ಮೊದಲ ಸಲ ಭಾರತ ತಂಡವನ್ನು ಪ್ರವೇಶಿಸಿದ್ದರು. 2018ರ ಏಶ್ಯನ್‌ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿ […]

ವಿಶ್ವ ಬ್ಲಿಟ್ಜ್ ಚೆಸ್ ಚಾಂಪಿಯನ್​ ಶಿಪ್​ : ಎರಡನೇ ಸ್ಥಾನದಲ್ಲಿ ಕೊನೆರು ಹಂಪಿ

Tuesday, December 31st, 2019
hampi

ಮಾಸ್ಕೋ : ಭಾರತದ ಗ್ರಾಂಡ್ ಮಾಸ್ಟರ್ ಕೊನೆರು ಹಂಪಿ ವಿಶ್ವ ರ್ಯಾಪಿಡ್ ಚೆಸ್ ಚಾಂಪಿಯನ್ಷಿಪ್ ಗೆಲುವಿನ ಬೆನ್ನಲ್ಲೇ ಮತ್ತೊಂದು ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಭಾನುವಾರ ಆರಂಭಗೊಂಡ ಮಹಿಳೆಯರ ವಿಶ್ವ ಬ್ಲಿಟ್ಜ್ ಚೆಸ್ ಚಾಂಪಿಯನ್ಷಿಪ್ನ ಮೊದಲ ದಿನ ಆಂಧ್ರ ಆಟಗಾರ್ತಿ ಕೊನೆರು ಹಂಪಿ 2ನೇ ಸ್ಥಾನ ಅಲಂಕರಿಸಿದ್ದಾರೆ. ರ್ಯಾಪಿಡ್ ಚೆಸ್ಗಿಂತ ವೇಗದ ಆಟವಾದ ಬ್ಲಿಟ್ಜ್ ಚೆಸ್ ಸ್ಪರ್ಧೆಯ ಎರಡು ದಿನಗಳ ಕೂಟದಲ್ಲಿ 32 ವರ್ಷದ ಹಂಪಿ ಮೊದಲ 5 ಸುತ್ತಿನ ಪಂದ್ಯಗಳ ಬಳಿಕ ಅಗ್ರಸ್ಥಾನದಲ್ಲಿದ್ದರು. ಬಳಿಕ ನಂತರದ 2 […]

ಬಿಎಫ್​ಸಿಗೆ ಎಟಿಕೆ ಆಘಾತ ಆಕರ್ಷಕ ಗೋಲು ಸಿಡಿಸಿದ ಡೇವಿಡ್ ವಿಲಿಯಮ್ಸ್

Thursday, December 26th, 2019
dewis

ಕೋಲ್ಕತ : ಏರಿಳಿತದ ಹಾದಿಯಲ್ಲಿ ಸಾಗಿ ರುವ ಹಾಲಿ ಚಾಂಪಿಯನ್ ಬೆಂಗಳೂರು ಎಫ್ಸಿ ತಂಡಕ್ಕೆ ಐಎಸ್ಎಲ್ ಫುಟ್ಬಾಲ್ ಟೂರ್ನಿಯ ಅಭಿಯಾನದಲ್ಲಿ ಇನ್ನೊಂದು ಸೋಲು ಎದುರಾಗಿದೆ. ಎರಡನೇ ಅವಧಿಯ ಆಟದಲ್ಲಿ ಡೇವಿಡ್ ವಿಲಿಯಮ್ಸ್ ಬಾರಿಸಿದ ಆಕರ್ಷಕ ಗೋಲಿಗೆ ಹಿನ್ನಡೆ ಕಂಡ ಬೆಂಗಳೂರು ಎಫ್ಸಿ ತಂಡ ಆತಿಥೇಯ ಎಟಿಕೆ ವಿರುದ್ಧ 0-1ರಿಂದ ಆಘಾತ ಎದುರಿಸಿದೆ. ಎಟಿಕೆ ವಿರುದ್ಧದ 10ನೇ ಪಂದ್ಯದಲ್ಲಿ ಬಿಎಫ್ಸಿ 2ನೇ ಸೋಲು ಕಂಡಿದೆ. ಸಾಲ್ಟ್ಲೇಕ್ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ರೋಚಕ ವಾಗಿದ್ದ ಮೊದಲ ಅವಧಿಯ ಆಟದಲ್ಲಿ […]

ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ : ಸ್ಟೀವ್ ಸ್ಮಿತ್ ಹಿಂದಿಕ್ಕಿ ಮತ್ತೆ ನಂ.1 ಸ್ಥಾನಕ್ಕೇರಿದ ವಿರಾಟ್ ಕೊಹ್ಲಿ

Wednesday, December 25th, 2019
Virat

ದುಬೈ : ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಬುಧವಾರ ನೂತನ ಟೆಸ್ಟ್‌ ರ‍್ಯಾಂಕಿಂಗ್ ಪಟ್ಟಿ ಪ್ರಕಟಿಸಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಅಗ್ರಸ್ಥಾನದಲ್ಲಿದ್ದ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್‌ ಸ್ಮಿತ್ ಅವರನ್ನು ಹಿಂದಿಕ್ಕಿ ಮತ್ತೆ ನಂ.1 ಸ್ಥಾನಕ್ಕೇರಿದ್ದಾರೆ. ರ‍್ಯಾಂಕಿಂಗ್‌ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದ ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್ ಗಿಂತ ಕೇವಲ 3 ಪಾಯಿಂಟ್ ಹಿಂದಿದ್ದರು. ಇತ್ತೀಚಿಗೆ ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಡೇ-ನೈಟ್ ಟೆಸ್ಟ್‌ನಲ್ಲಿ 136 ರನ್ ಬಾರಿಸುವ ಮೂಲಕ […]

ಧೋನಿ ಸಿಕ್ಸರ್ ದಾಖಲೆ ಮುರಿದ ಹಿಟ್‍ಮ್ಯಾನ್ ರೋಹಿತ್ ಶರ್ಮಾ

Wednesday, December 18th, 2019
dhoni-and-rohith-sharma

ವಿಶಾಖಪಟ್ಟಣಂ : ಟೀಂ ಇಂಡಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಭಾರತದ ನೆಲದಲ್ಲಿ ಸಿಡಿಸಿದ್ದ ಸಿಕ್ಸರ್ ದಾಖಲೆಯನ್ನು ಹಿಟ್‍ಮ್ಯಾನ್ ರೋಹಿತ್ ಶರ್ಮಾ ಮುರಿದಿದ್ದಾರೆ. ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ದಾಖಲೆ ಮಾಡಿದ್ದಾರೆ. ಏಕದಿನ ಪಂದ್ಯಗಳಲ್ಲಿ ಎಂ.ಎಸ್.ಧೋನಿ ಭಾರತದ ನೆಲದಲ್ಲಿ 186 ಸಿಕ್ಸರ್ ಸಿಡಿಸಿದರೆ, ಹಿಟ್‍ಮ್ಯಾನ್ ರೋಹಿತ್ 187 ಸಿಕ್ಸರ್ ದಾಖಲೆ ಬರೆದಿದ್ದಾರೆ. ಧೋನಿ 186 ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದರೆ, ರೋಹಿತ್ 116 ಇನ್ನಿಂಗ್ಸ್ ಗಳಲ್ಲಿ […]

3ನೇ ಸೌತ್‌ ಏಶ್ಯನ್‌ ಗೇಮ್ಸ್‌ನ ಆ್ಯತ್ಲೆಟಿಕ್‌ ಸ್ಪರ್ಧೆಯಲ್ಲಿ ಭಾರತಕ್ಕೆ 10 ಪದಕ

Wednesday, December 4th, 2019
Athletics

ಕಾಠ್ಮಂಡು : ಇಲ್ಲಿ ಸಾಗುತ್ತಿರುವ 13ನೇ ಸೌತ್‌ ಏಶ್ಯನ್‌ ಗೇಮ್ಸ್‌ನ ಆ್ಯತ್ಲೆಟಿಕ್‌ ಸ್ಪರ್ಧೆಯಲ್ಲಿ ಭಾರತೀಯ ಆ್ಯತ್ಲೀಟ್‌ಗಳು ಪ್ರಾಬಲ್ಯ ಸ್ಥಾಪಿಸಿದ್ದಾರೆ. ನಾಲ್ಕು ಚಿನ್ನ ಸಹಿತ 10 ಪದಕ ಗೆದ್ದು ಸಂಭ್ರಮಿಸಿದ್ದಾರೆ. ಅರ್ಚನಾ ಸುಶೀಂದ್ರನ್‌, ಎಂ. ಜಸ್ನಾ, ಸರ್ವೇಶ್‌ ಅನಿಲ್‌ ಕುಶಾರೆ ಮತ್ತು ಅಜಯ್‌ ಕುಮಾರ್‌ ಸರೋಜ್‌ ಆ್ಯತ್ಲೆಟಿಕ್ಸ್‌ ಸ್ಪರ್ಧೆಯ ಮೊದಲ ದಿನ ಚಿನ್ನ ಗೆದ್ದ ಸಾಧಕರಾಗಿದ್ದಾರೆ. ವನಿತೆಯರ 100 ಮೀ. ಓಟದಲ್ಲಿ ಅರ್ಚನಾ ಸುಶೀಂದ್ರನ್‌ 11.80 ಸೆ.ನಲ್ಲಿ ಗುರಿ ತಲುಪಿ ಗೇಮ್ಸ್‌ ನ ಅತೀವೇಗದ ಓಟಗಾರ್ತಿ ಎಂದೆನಿಸಿಕೊಂಡಿದ್ದಾರೆ. ಶ್ರೀಲಂಕಾದ […]

ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌ ಬ್ಯಾಡ್ಮಿಂಟನ್‌ : ಶ್ರೀಕಾಂತ್‌, ಸೌರಭ್‌ ಕ್ವಾರ್ಟರ್‌ ಫೈನಲ್‌ ಪ್ರವೇಶ

Friday, November 29th, 2019
Srikanth

ಲಕ್ನೋ : “ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌ ಬ್ಯಾಡ್ಮಿಂಟನ್‌” ಪಂದ್ಯಾವಳಿಯಲ್ಲಿ ಕೆ. ಶ್ರೀಕಾಂತ್‌ ಮತ್ತು ಸೌರಭ್‌ ವರ್ಮ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ. ಆದರೆ ಭಾರೀ ನಿರೀಕ್ಷೆ ಮೂಡಿಸಿದ್ದ ಲಕ್ಷ್ಯ ಸೇನ್‌ ಪರಾಭವಗೊಂಡಿದ್ದಾರೆ. ವನಿತಾ ಡಬಲ್ಸ್‌ ನಲ್ಲಿ ಯುವ ಆಟಗಾರ್ತಿಯರಾದ ಶಿಮ್ರಾನ್‌ ಶಿಂಗಿ-ರಿತಿಕಾ ಠಾಕರ್‌ ಕೂಡ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ. 3ನೇ ಶ್ರೇಯಾಂಕಿತ ಕೆ. ಶ್ರಿಕಾಂತ್‌ ತಮ್ಮದೇ ದೇಶದ ಪಿ.ಕಶ್ಯಪ್‌ ವಿರುದ್ಧ ಭಾರೀ ಹೋರಾಟ ನಡೆಸಿ 18-21, 22-20, 21-16 ಅಂತರದಿಂದ ಗೆದ್ದು ಮುನ್ನಡೆದರು. […]

ವಿಶ್ವಕಪ್‌ ಹಾಕಿ ಪಂದ್ಯಾವಳಿ-2023 : ಒಡಿಶಾ ಆತಿಥ್ಯ

Thursday, November 28th, 2019
Hockey

ಭುವನೇಶ್ವರ : ಪ್ರತಿಷ್ಠಿತ ವಿಶ್ವಕಪ್‌ ಹಾಕಿ ಪಂದ್ಯಾವಳಿಯ ಆತಿಥ್ಯ ಸತತ 2ನೇ ಸಲ ಭಾರತದ ಪಾಲಾಗಿದೆ. 2023ರ ಪುರುಷರ ವಿಭಾಗದ ವಿಶ್ವಕಪ್‌ ಪಂದ್ಯಗಳು ಒಡಿಶಾದ ಭುವನೇಶ್ವರ ಮತ್ತು ರೂರ್ಕೆಲಾದಲ್ಲಿ ನಡೆಯಲಿವೆ ಎಂದು ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಬುಧವಾರ ಘೋಷಿಸಿದರು. ಈ ಪಂದ್ಯಾವಳಿ 2023ರ ಜ. 13ರಿಂದ 29ರ ತನಕ ನಡೆಯಲಿದೆ. “ನಾವು 2018ರ ವಿಶ್ವಕಪ್‌ ಹಾಕಿ ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಿದ್ದೆವು. ಈಗ 2023ರಲ್ಲಿ ಮತ್ತೆ ಈ ಪ್ರತಿಷ್ಠಿತ ಕೂಟದ ಆತಿಥ್ಯ ಭಾರತದ್ದಾಗಿದೆ. ಈ ಸ್ಪರ್ಧೆಗಳು ಭುವನೇಶ್ವರ […]