ಜೈಲು ಶಿಕ್ಷೆಗೆ ಸೀಮಿತವಾದುದಲ್ಲ ಅದು ಸತ್‌ಪರಿವರ್ತನೆಯ ದಾರಿ : ರವೀಶ ತಂತ್ರಿ

Thursday, December 17th, 2015
Kasaragod subjail

ಮುಳ್ಳೇರಿಯ : ಜೈಲು ಶಿಕ್ಷೆ ಎಂಬುದು ಕೇವಲ ಶಿಕ್ಷೆಗೆ ಮಾತ್ರ ಸೀಮಿತವಾದ ಜಾಗವಲ್ಲ ಅದೊಂದು ಆತ್ಮಚಿಂತನೆಯೊಡಗೂಡಿ ಸತ್‌ಪರಿವರ್ತನೆಯ ದಾರಿಯಲ್ಲಿ ಮುನ್ನಡೆಯುವ ಸದವಕಾಶವಾಗಿರುತ್ತದೆ. ಹಾಗಾಗಿ ಜೈಲಿನಲ್ಲಿರುವ ಎಲ್ಲಾ ಕೈದಿಗಳು ಬಿಡುಗಡೆಯಾಗಿ ಬರುವಾಗ ಸನ್ನಡತೆಯಿಂದ ಸಮಾಜದಲ್ಲಿ ಗುರುತಿಸಿಕೊಂಡು ಉನ್ನತಿಗೇರಲು ಭಗವತ್‌ಶಕ್ತಿಗಳು ಆನುಗ್ರಹಿಸಿ ಜನ್ಮಸಾರ್ಥಕ್ಯಗೊಳಿಸಿಕೊಳ್ಳಲಿ ಎಂದು ಕುಂಟಾರು ಬ್ರಹ್ಮಶ್ರೀ ರವೀಶ ತಂತ್ರಿ ಅಭಿಪ್ರಾಯ ವ್ಯಕ್ತಪಡಿಸಿದರು. ಕಾಸರಗೋಡು ಜಿಲ್ಲಾ ಸ್ಪೆಶಲ್ ಸಬ್ ಜೈಲಿನಲ್ಲಿ ಜೈಲಿನ ವಾಚನಾಲಯಕ್ಕೆ ಸುಮಾರು 250 ರಷ್ಟು ಕನ್ನಡ ಪುಸ್ತಕಗಳು ಹಾಗೂ ಕನ್ನಡ ದಿನಪತ್ರಿಕೆಯನ್ನು ಕುಂಟಾರಿನ ಪರಿವರ್ತನಾ ಯುವಕ ಸಂಘದ […]

ಉದ್ಯೋಗ ಮೇಳ ಸಮಾರೋಪ- 12470 ಅಭ್ಯರ್ಥಿಗಳು ಭಾಗಿ

Saturday, November 21st, 2015
udyoga mela

ಮ0ಗಳೂರು : ಎರಡು ದಿನಗಳ ಕಾಲ ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ನಡೆದ ಮಂಗಳೂರು ಉದ್ಯೋಗ ಮೇಳವು ಶುಕ್ರವಾರ ಸಮಾಪನಗೊಂಡಿತು. ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಉದ್ಯೋಗಮೇಳದ ರುವಾರಿ, ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಈ ಉದ್ಯೋಗ ಮೇಳವು ಚಾರಿತ್ರಿಕವಾಗಿದ್ದು. ಉದ್ಯೋಗಾಂಕ್ಷಿಗಳ ಸ್ಪಂದನೆಯು ಅಭೂತಪೂರ್ವವಾಗಿದೆ ಎಂದರು. ಸಾಕಷ್ಟು ಉನ್ನತ ವಿದ್ಯಾಸಂಸ್ಥೆಗಳನ್ನು ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತೀವರ್ಷ ಒಂದು ಲಕ್ಷಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಕಲಿತು ಹೊರಗೆ ಬರುತ್ತಿದ್ದಾರೆ. ಉದ್ಯೋಗವು ಇವರ ಮುಂದೆ […]

ಬಂಟ್ವಾಳ ಘಟನೆ : ಜಿಲ್ಲೆಯಾದ್ಯಂತ ಭಾನುವಾರ ರಾತ್ರಿ 10-00 ಘಂಟೆಯ ವರೆಗೆ 144 ರಂತೆ ನಿಷೇದಾಜ್ಞೆ

Friday, November 13th, 2015
AB Ibrahim

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ದಿನಾಂಕ 12-11-2015 ರಂದು ನಡೆದ ಅಹಿತಕರ ಘಟನೆ ನಂತರ ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಾಗೂ ಜಿಲ್ಲೆಯಾದ್ಯಂತ ಶಾಂತಿಯುತ ವಾತಾವರಣ ಕಾಯ್ದುಕೊಳ್ಳುವ ಹಿನ್ನೆಲೆಯಲ್ಲಿ ದಿನಾಂಕ 12-11-2015 ರ ರಾತ್ರಿ 10-00 ಘಂಟೆಯಿಂದ ದಿನಾಂಕ 15-11-2015 ರ ರಾತ್ರಿ 10-00 ಘಂಟೆಯ ತನಕ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆ 1973 ರ ಸೆಕ್ಷನ್ 144 ರಂತೆ ನಿಷೇದಾಜ್ಞೆ ಆದೇಶ ಹೊರಡಿಸಲಾಗಿದೆ. ಇದರಂತೆ ಸದ್ರಿ […]

ಪುತ್ತೂರು ಕಾರಂತ ಬಾಲವನ: ಕಟ್ಟಡಗಳ ಸಂರಕ್ಷಣೆ – ತ್ವರಿತಗೊಳಿಸಲು ಕಾರ್ಯದರ್ಶಿಗಳ ಸೂಚನೆ

Thursday, November 5th, 2015
Karantha Balavana

ಮಂಗಳೂರು : ಪುತ್ತೂರು ಡಾ. ಶಿವರಾಮ ಕಾರಂತ ಬಾಲವನ ಅಭಿವೃದ್ಧಿಗೆ ಸರಕಾರದಿಂದ ನೇಮಕಗೊಂಡಿರುವ ಉನ್ನತ ಮಟ್ಟದ ಸಮಿತಿ ಸಭೆಯು ಬುಧವಾರ ಬಾಲವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಎನ್.ಎಸ್. ಚನ್ನಪ್ಪ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಚನ್ನಪ್ಪ ಗೌಡ, ಪುತ್ತೂರು ಡಾ. ಶಿವರಾಮ ಕಾರಂತ ಬಾಲವನ ಅಭಿವೃದ್ಧಿಗೆ 2015-16ರ ರಾಜ್ಯ ಬಜೆಟ್‌ನಲ್ಲಿ ಒಂದು ಕೋಟಿ ರೂ. ಹಣ ಘೋಷಣೆಯಾಗಿ ಬಿಡುಗಡೆಯಾಗಿದೆ. ಈ ಹಿನ್ನೆಯಲ್ಲಿ ಇಲಾಖೆಯ […]

ಪಟಾಕಿ/ ಸಿಡಿಮದ್ದುಗಳಿಂದ ಆಗುವ ಶಬ್ಬ ಮಾಲಿನ್ಯ ತಡೆಗಟ್ಟಿ

Tuesday, November 3rd, 2015
Diwali light

ಮಂಗಳೂರು : ಈ ವರ್ಷದ ದೀಪಾವಳಿ ಹಬ್ಬ ಸಮೀಪಿಸುತ್ತಿದ್ದು ಸಾರ್ವಜನಿಕ ಆಸ್ತಿ ಮತ್ತು ಆರೋಗ್ಯದ ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಶಬ್ಬ ಮಾಲಿನ್ಯ ನಿಯಂತ್ರಣದಲ್ಲಿಡುವ ಉದ್ದೇಶದಿಂದ ಪರಿಸರ ಸಂರಕ್ಷಣೆ ನಿಯಮಾವಳಿಗಳು 1999ರ ಅನ್ವಯ ಹಾಗೂ ಮಾನ್ಯ ಸರ್ವೊಚ್ಚ ನ್ಯಾಯಾಲಯದ ಆದೇಶ WP(C)72/98. 21.7.2005 ರಪ್ರಕಾರ 125DB (AL) ಅಥವಾ 145Db (C) pk ಕ್ಕಿಂತ (ಪಟಾಕಿ ಸಿದ್ಧಪಡಿಸುವ ಸ್ಥಳದಿಂದ 4 ಮೀಟರ್ ಅಂತರದಲ್ಲಿ ) ಹೆಚ್ಚು ಶಬ್ಧ ಮಡುವ ಪಟಾಕಿ ಹಾಗೂ ಸಿಡಿಮದ್ದುಗಳ ಮಾರಾಟ ಮಾಡುವುದಾಗಲಿ ಅಥವಾ […]

ಲಿಪ್ಫ್ ಕೊಟ್ಟು ರೇಪ್ ಆಂಡ್ ಮರ್ಡರ್ ಮಾಡಿದವನಿಗೆ ಮರಣದಂಡನೆ

Friday, October 30th, 2015
Rape Murder

ಮುಂಬೈ: ಟೆಕ್ಕಿ ಎಸ್ತರ್ ಅನೂಹ್ಯಾ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಆರೋಪಿ ಚಂದ್ರಬಾನ್ ಸನಾಪ್ ಗೆ ಮುಂಬೈ ಕೋರ್ಟ್ ಶುಕ್ರವಾರ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿ, ಇದು ಅತ್ಯಪರೂಪ ಪ್ರಕರಣವಾಗಿದ್ದು, ಆರೋಪಿಗೆ ಗಲ್ಲುಶಿಕ್ಷೆಯೇ ಸೂಕ್ತವಾದದ್ದು ಎಂದು ಅಭಿಪ್ರಾಯವ್ಯಕ್ತಪಡಿಸಿದೆ. 2014ರ ಜನವರಿ 5ರಂದು ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ ಅನೂಹ್ಯಾ ಮುಂಬೈಗೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ಲೋಕಮಾನ್ಯ ತಿಲಕ್ ರೈಲ್ವೆ ನಿಲ್ದಾಣದ ಬಳಿ ಅನೂಹ್ಯಳಿಗೆ ತಾನು ತನ್ನ ಬೈಕ್ ನಲ್ಲಿ ಲಿಫ್ಟ್ ಕೊಡುವುದಾಗಿ ತಿಳಿಸಿದ್ದ. ಸನಾಪ್ ಮಾತನ್ನು ನಂಬಿ ಬೈಕ್ ನಲ್ಲಿ […]

ಎಂ.ಎಸ್.ರುದ್ರೇಶ್ವರ ಸ್ವಾಮಿ ಅವರಿಗೆ ಮುದ್ದಣ ಕಾವ್ಯ ಪ್ರಶಸ್ತಿ

Tuesday, October 27th, 2015
Rudreshwara

ಮೂಡುಬಿದಿರೆ: ಕಾಂತಾವರ ಕನ್ನಡ ಸಂಘದ ಪಠೇಲ್ ಪುನರೂರು ವಾಸುದೇವರಾವ್ ಟ್ರಸ್ಟ್ ನ ಪ್ರಾಯೋಜಕತ್ವದ 2015ರ ಸಾಲಿನ ಪ್ರತಿಷ್ಠಿತ ಮುದ್ದಣ ಕಾವ್ಯ ಪ್ರಶಸ್ತಿ ಎಂ.ಎಸ್.ರುದ್ರೇಶ್ವರ ಸ್ವಾಮಿ ಅವರ ‘ಅವಳ ಕವಿತೆ’ ಎಂಬ ಕವನಸಂಕಲನ ಹಸ್ತಪ್ರತಿ ಯು ಗೆದ್ದುಕೊಂಡಿದೆ ಎಂದು ಸಂಘದ ಅಧ್ಯಕ್ಷ ಡಾ. ನಾ.ಮೊಗಸಾಲೆ ಘೋಷಿಸಿದ್ದಾರೆ. ಎಂ.ಎಸ್. ರುದ್ರೇಶ್ವರ ಸ್ವಾಮಿ ಅವರು ದಾವಣಗೆರೆ ಮೂಲದವರಾಗಿದ್ದು ಮೈಸೂರು ವಿ.ವಿಯಿಂದ ಸ್ನಾತಕೋತ್ತರ ಪದವಿ ಪಡೆದು ಅಂಚೆ ಇಲಾಖೆಯಲ್ಲಿ ದಕ್ಷ ಸೇವೆ ಸಲ್ಲಿಸಿದವರಾಗಿದ್ದು ಅದಕ್ಕಾಗಿ ಡಾಕ್ ಸೇವಾ ಪ್ರಶಸ್ತಿ ಪಡೆದಿದ್ದಾರೆ. ಸಹಾಯಕ ಪೋಸ್ಟ್ […]

ಮನಾಪದ ಮಲೇರಿಯಾ ನಿಯಂತ್ರಣ ತಂತ್ರಾಂಶದ ಬಿಡುಗಡೆ

Sunday, October 18th, 2015
malaria software

ಮಂಗಳೂರು: ಮಂಗಳೂರು ಮೆಡಿಕಲ್‌ ರಿಲೀಫ್‌ ಸೊಸೈಟಿ, ಐ ಪಾಯಿಂಟ್‌ ಕನ್ಸಲ್ಟಂಟ್‌, ಕೋಟ್‌ ಕ್ರಾಫ್ಟ್‌ ಟೆಕ್ನಾಲಜಿ, ಕರ್ಣಾಟಕ ಬ್ಯಾಂಕ್‌, ಕಾರ್ಪೊರೇಶನ್‌ ಬ್ಯಾಂಕ್‌ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾದ ಮಲೇರಿಯಾ ನಿಯಂತ್ರಣ ತಂತ್ರಾಂಶವನ್ನು ಸಚಿವ ಯು.ಟಿ. ಖಾದರ್‌ ಶನಿವಾರ ಮನಪಾ ಸಭಾಂಗಣದಲ್ಲಿ ಬಿಡುಗಡೆಗೊಳಿಸಿದರು. ಮಲೇರಿಯಾ ನಿಯಂತ್ರಣ ತಂತ್ರಾಂಶ ಅಭಿವೃದ್ಧಿಪಡಿಸುವುದರ ಮೂಲಕ ಆರೋಗ್ಯವಂತ ಮಂಗಳೂರು ನಿರ್ಮಾಣಕ್ಕೆ ಮಂಗಳೂರು ಮಹಾನಗರ ಪಾಲಿಕೆ ದೇಶದಲ್ಲೇ ಪ್ರಥಮ ಹೆಜ್ಜೆ ಇರಿಸಿದೆ. ಮುಂದಿನ ಮೂರು ವರ್ಷದೊಳಗೆ ನಗರದಲ್ಲಿ ಮಲೇರಿಯಾ ಸಂಪೂರ್ಣ ನಿಯಂತ್ರಣವಾಗುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಸಚಿವ ಯು.ಟಿ. ಖಾದರ್‌ […]

ಸೆಟ್ ಬ್ಯಾಕ್ ಇಲ್ಲದೆ ಕದ್ರಿ ಮೈದಾನದಲ್ಲಿ ನಿರ್ಮಾಣಗೊಂಡ ರಂಗ ವೇದಿಕೆ

Thursday, October 15th, 2015
dk ashoka

ಮಂಗಳೂರು: ಕದ್ರಿ ಮೈದಾನದಲ್ಲಿ ಸುಮಾರು 28ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ರಂಗಮಂದಿರದ ಕಟ್ಟಡಕ್ಕೆ  ಸೆಟ್ ಬ್ಯಾಕ್ ಇಲ್ಲ. ಅದು ಪಕ್ಕದ ಕೊರ‍್ದಬ್ಬು ದೈವದ ಆವರಣ ಗೋಡೆಗೆ ತಾಗಿಕೊಂಡೇ ನಿರ್ಮಾಣ ಗೊಂಡಿದೆ. ಅದರ ಹಿಂದೆ ಒಂದು ರೋಚಕ ಸ್ಫ್ಟೋರಿ ಇದೆ, ಮುಂದೆ ಓದಿ… ನನಗೆ ಕೊರ‍್ದಬ್ಬು ದೈವ ಏನೂ ಓಟು ಕೊಡುವುದಿಲ್ಲ. ಆದ್ದರಿಂದ ನಾನು ಅದನ್ನು ಕ್ಯಾರ್ ಮಾಡುವುದಿಲ್ಲ-ಹೀಗೆ ಹೇಳಿ ಮಂಗಳೂರಿನ ಮಹಾನಗರ ಪಾಲಿಕೆಯ ಸದಸ್ಯನೊಬ್ಬ ಅಹಂಕಾರ ಪ್ರದರ್ಶಿಸುತ್ತಾನೆ ಎಂದರೆ ಅದು ಡಿ.ಕೆ.ಅಶೋಕ್ ಅಲ್ಲದೆ ಬೇರೆ ಯಾರೂ ಇರಲಿಕ್ಕಿಲ್ಲ ಎನ್ನುವುದು ಮನಪಾದ ಎಲ್ಲರಿಗೂ ಗೊತ್ತು. ಅಷ್ಟಕ್ಕೂ […]

ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಸ್ಥಳಾಂತರ ಎಂಬ 40 ಕೋಟಿಗಳಷ್ಟು ಹೆಚ್ಚುವರಿ ಹೊರೆ ಬೇಕಿದೆಯೇ

Monday, September 14th, 2015
Dc Complex

ಮಂಗಳೂರು : ಯಾರಾದರೂ ಒಬ್ಬ ನಾಗರಿಕ ಬಂದು ನಿಮ್ಮ ಬಳಿ ದಯವಿಟ್ಟು ಜಿಲ್ಲಾಧಿಕಾರಿ ಕಚೇರಿಯನ್ನು ಮಂಗಳೂರಿನಿಂದ ಹೊರಗೆ ಎಲ್ಲಿಯಾದರೂ ದೂರ ಶಿಫ್ಟ್ ಮಾಡಿಬಿಡಿ. ನಮಗೆ ಇಲ್ಲಿ ಬರಲು ತುಂಬಾ ಕಷ್ಟವಾಗುತ್ತದೆ ಎಂದು ಬರೆದು ಕೊಟ್ಟಿದ್ದಾನಾ ಅಥವಾ ಮಂಗಳೂರು ಹೃದಯ ಭಾಗದಲ್ಲಿರುವ ಸ್ಟೇಟ್ ಬ್ಯಾಂಕ್ ಗೆ ಬಂದರೆ ಹೆಜ್ಜೆಗಳ ಅಂತರದಲ್ಲಿ ಸಿಗುವ ಅಷ್ಟೂ ಕಚೇರಿಗಳನ್ನು ತೆಗೆದು ಬೇರೆಡೆ ಹಾಕಿದರೆ ಅದಕ್ಕಿಂತ ಬೇರೆ ಉಪಕಾರ ಇಲ್ಲ ಎಂದು ಮಂಗಳೂರಿನ ನಾಗರಿಕನಿಗೆ ಅನಿಸುತ್ತಿದೆಯಾ? ಅಥವಾ ಪುತ್ತೂರು, ಬೆಳ್ತಂಗಡಿ, ಸುಳ್ಯ ದ ಜನರಿಗೆ […]