ಪ್ರವೀಣನ ಕ್ಷಮಾದಾನ ಅರ್ಜಿ ತಿರಸ್ಕೃತ, ಗಲ್ಲು ಶಿಕ್ಷೆ ಖಾಯಂ

Friday, April 5th, 2013
Praveen vaamanjur

ಮಂಗಳೂರು : ಒಂದೇ ಕುಟುಂಬದ ನಾಲ್ವರನ್ನು ಸಾಮೂಹಿಕ ಹತ್ಯೆ ಮಾಡಿದ್ದ ವಾಮಂಜೂರು ಪ್ರವೀಣನ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಿರಸ್ಕೃತಗೊಳಿಸಿದ್ದು ಈ ಮೂಲಕ ಸುಪ್ರೀಂಕೋರ್ಟ್ ವಿಧಿಸಿದ್ದ ಗಲ್ಲು ಶಿಕ್ಷೆ  ಖಾಯಂಗೊಂಡಿದೆ. ಆರೋಪಿ ಪ್ರವೀಣ 1993 ರ ಫೆಬ್ರವರಿ 23 ರಂದು ಹಣಕ್ಕಾಗಿ ತನ್ನ ಅತ್ತೆ ಅಪ್ಪಿ ಶೇರಿಗಾರ್ತಿ, ಆಕೆಯ ಮಗ ಗೋವಿಂದ, ಮಗಳು ಶಕುಂತಳಾ ಹಾಗೂ ಶಕುಂತಳಾರ ಪುತ್ರಿ ದೀಪಿಕಾಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದ. ಈತನಿಗೆ ಮಂಗಳೂರಿನ ಸೆಷನ್ಸ್‌ ನ್ಯಾಯಾಲಯ ಗಲ್ಲು ಶಿಕ್ಷೆಯನ್ನು ವಿಧಿಸಿತ್ತು. ನಂತರ […]

ನೇತ್ರಾವತಿ ನದಿಯಲ್ಲಿ ಮುಳುಗಿ ವ್ಯಕ್ತಿ ಸಾವು

Thursday, April 4th, 2013
ನೇತ್ರಾವತಿ ನದಿಯಲ್ಲಿ ಮುಳುಗಿ ವ್ಯಕ್ತಿ ಸಾವು

ಮಂಗಳೂರು : ನೇತ್ರಾವತಿ ನದಿಯಲ್ಲಿ ಕಪ್ಪೆಚಿಪ್ಪು ಹೆಕ್ಕಲು ಹೋದ ವ್ಯಕ್ತಿಯೊಬ್ಬರು  ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ಜೆಪ್ಪು ಮಹಾಕಾಳಿ ಪಡ್ಪು ರೈಲ್ವೆ ಬ್ರಿಡ್ಜ್ ಬಳಿ ನಡೆದಿದೆ.  ಜೆಪ್ಪು ನಿವಾಸಿ ಪೌಲ್ ಲೋಬೊ ಮೃತಪಟ್ಟವರಾಗಿದ್ದಾರೆ. 55 ವರ್ಷದವರಾದ ಪೌಲ್  ಬೋಟ್ ರಿಪೇರಿಯ ಕೆಲಸ ಮಾಡುತ್ತಿದ್ದು ಸ್ವಲ್ಪ ಸಮಯದಿಂದ ಮನೆಯಲ್ಲೇ ಉಳಿದುಕೊಂಡಿದ್ದರು. ಮೂಲಗಳ ಪ್ರಕಾರ ಗುರುವಾರ ಬೆಳಗ್ಗೆ  ಒಟ್ಟು ನಾಲ್ಕು ಜನ ನೇತ್ರಾವತಿ ನದಿಯಲ್ಲಿ  ಕಪ್ಪೆ ಚಿಪ್ಪು ಹೆಕ್ಕಲು ಹೋಗಿ ಬಳಿಕ ಇವರಲ್ಲಿ ಮೂವರು ಒಂದು ದಿಕ್ಕಿನಲ್ಲಿ ಮರಳಿದ್ದು […]

ಎಕ್ಕೂರಿನಲ್ಲಿ ಬಸ್-ಬೈಕ್ ಡಿಕ್ಕಿ, ಸ್ಥಳದಲ್ಲೇ ಮೃತಪಟ್ಟ ಸಹೋದರರು

Thursday, April 4th, 2013
Two brothers killed at Yekkur

ಮಂಗಳೂರು : ಎಕ್ಕೂರಿನಲ್ಲಿ ಇಂದು ಬೆಳಗ್ಗೆ ಖಾಸಗಿ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೆ ಮೃತಪಟ್ಟ ಘಟನೆ ನಡೆದಿದೆ. ತೊಕ್ಕೋಟಿನಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಶಾರದ ಬಸ್ ಬೈಕ್ ಗೆ ಡಿಕ್ಕಿ ಹೊಡೆದಿದ್ದು ಡಿಕ್ಕಿಯ ರಭಸಕ್ಕೆ ಸವಾರರಿಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಮೃತರನ್ನು ಉಮರ್ ರಶೀದ್, ಮಹಮ್ಮದ್ ನೌಶಾದ್ ಎಂದು ಗುರುತಿಸಲಾಗಿದ್ದು ಇವರಿಬ್ಬರು ತೊಕ್ಕೋಟಿನ ಮಹಮ್ಮದ್ ಎಂಬುವವರ ಮಕ್ಕಳಾಗಿದ್ದಾರೆ. ಉಮರ್ ರಶೀದ್ ಬಿ.ಕಾಂ ಪದವಿಧರನಾಗಿದ್ದು, ಮೆಡಿಕಲ್ ಶಾಪ್ ವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನೌಶಾದ್ […]

ಮಗುವಿನೊಂದಿಗೆ ತೆರಳಿದ ಮಹಿಳೆ ನಾಪತ್ತೆ, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು

Thursday, April 4th, 2013
Women daughter missing

ಬಂಟ್ವಾಳ : ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಸಾಣೂರು ಪದವಿನಲ್ಲಿ ಮಗಳೊಂದಿಗೆ ತೆರಳಿದ ಮಹಿಳೆಯೊಬ್ಬಳು ಕಾಣೆಯಾದ ಘಟನೆ ನಡೆದಿದೆ. ಕಾಣೆಯಾದ ಮಹಿಳೆ ಸಾಣುರು ಪದವಿನಲ್ಲಿನ ಬಾಬು ಪೂಜಾರಿಯವರ ಪತ್ನಿ ಮೋಹಿನಿ(೩೫) ಮತ್ತು ಮಗಳು ಮನೀಷಾ(೯) ಕೈಕಂಬದ ಬೀಡಿ ಕಾರ್ಮಿಕರ ಕಚೇರಿಗೆ ಹೋಗಿ ಬರುತ್ತೇನೆ ಎಂದು ಮಗಳು ಮನೀಷಾಳೊಂದಿಗೆ ತೆರಳಿದವರು ವಾಪಸ್ ಮನೆಗೂ ಬಾರದೆ ಕಾಣೆಯಾಗಿದ್ದಾರೆ. ಈಕೆಗೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ನರೇಂದ್ರ ಎಂಬವನ ಪರಿಚಯವಿದ್ದು ಆತನೊಂದಿಗೆ ತೆರಳಿರಬೇಕೆಂದು ಶಂಕಿಸಲಾಗಿದ್ದು, ಆಕೆಯ ಪತಿ ಬಂಟ್ವಾಳ ಗ್ರಾಮಾಂತರ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆ

ಎಪ್ರಿಲ್ 8 ರಂದು ಮೆಸ್ಕಾಂ ಎಂ.ಡಿ ಕಚೇರಿಗೆ ಮುತ್ತಿಗೆ : ವಿಜಯ ಹೆಗ್ಡೆ

Thursday, April 4th, 2013
Vijay Hegde

ಮಂಗಳೂರು :  ಯು.ಪಿ.ಸಿ.ಎಲ್ ಸ್ಥಾಪನೆಯಾದ ನಂತರ ನಿರಂತರ ವಿದ್ಯುತ್ ಸರಬರಾಜು ಮಾಡುವುದಾಗಿ ಹೇಳಿದ್ದು ಇದೀಗ ನಿರಂತರ ವಿದ್ಯುತ್ ಕಡಿತ, ಮೂರು ತಿಂಗಳಿಗೊಮ್ಮೆ ವಿದ್ಯುತ್ ದರ ಏರಿಕೆ ಮಾಡುತ್ತಿರುವುದಲ್ಲದೆ ರೈತರೊಂದಿಗೆ ಅಸಭ್ಯವಾಗಿ ವರ್ತಿಸಲಾಗುತ್ತಿದೆ. ಇದನ್ನು ಖಂಡಿಸಿ ಮೆಸ್ಕಾಂ ಎಂ.ಡಿ ಕಚೇರಿಗೆ ಎಪ್ರಿಲ್ 8 ರಂದು ಬೆಳಗ್ಗೆ 10.30ರ ವೇಳೆಗೆ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ವಿಜಯ ಹೆಗ್ಡೆ ಹೇಳಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, […]

ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಆರ್‌ಒ ಕಚೇರಿಯಲ್ಲಿ ಏಕಗವಾಕ್ಷಿ ಕೇಂದ್ರ ಸ್ಥಾಪನೆ

Thursday, April 4th, 2013
Ekagavaakshi Center

ಮಂಗಳೂರು : ಚುನಾವಣೆಯ ಸಂದರ್ಭಗಳಲ್ಲಿ ನಡೆಸುವ ವಿವಿಧ ಕಾರ್ಯಕ್ರಮಗಳಿಗೆ ಪರವಾನಗಿ ಪಡೆಯಲು ವಿವಿಧ ಇಲಾಖೆಗಳಿಗೆ ತೆರಳಿ ಅನುಮತಿಯನ್ನು ಪಡೆಯಬೇಕಾಗಿದ್ದು ಇದರಿಂದ ಸಮಾರಂಭಗಳು ವಿಳಂಭವಾಗುತ್ತವೆ ಎಂಬ ದೂರುಗಳು ಕೇಳಿಬರುತ್ತಿದ್ದ ಇದನ್ನು ತಪ್ಪಿಸಲು ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹರ್ಷ ಗುಪ್ತಾ ತಿಳಿಸಿದರು. ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಈ ವಿಚಾರವನ್ನು ತಿಳಿಸಿದರು.  ಏಕಗವಾಕ್ಷಿ ವ್ಯವಸ್ಥೆ ಯಲ್ಲಿ ವಿವಿಧ ಇಲಾಖೆಯ ಮುಖ್ಯಸ್ಥರನ್ನು ನೋಡೆಲ್‌ ಅಧಿಕಾರಿಯಾಗಿ ನೇಮಿಸಲಾಗುವುದಾಗಿ ಮತ್ತು  ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ  […]

ಆಸ್ತಿ ವಿವಾದ : ಚಿಕ್ಕಪ್ಪನಿಂದ ಕೊಲೆಯಾದ ಯುವಕ

Wednesday, April 3rd, 2013
Sullia Youth killed

ಸುಳ್ಯ : ಆಲೆಟ್ಟಿ ಗ್ರಾಮದ ಬೊಳ್ಳೂರು ಎಂಬಲ್ಲಿ ಆಸ್ತಿ ವಿವಾದದಿಂದಾಗಿ ಯುವಕನೋರ್ವ ಆತನ ಚಿಕ್ಕಪ್ಪನಿಂದಲೇ ಕೊಲೆಯಾದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. ಬೊಳ್ಳೂರು ಬೆಳ್ಳಂಪಾರೆಯ ಅಪ್ಪಯ್ಯ ನಾಯ್ಕ ಎಂಬವರ ಪುತ್ರ ಸದಾಶಿವ ನಾಯ್ಕ(೨೬) ಮೃತ ವ್ಯಕ್ತಿ ಯಾಗಿದ್ದು, ಈತ  ಹಾಗು ಈತನ ಚಿಕ್ಕಪ್ಪ ನಾರಾಯಣ ನಾಯ್ಕ ಈ ಇಬ್ಬರ ಕುಟುಂಬದ ನಡುವೆ ಆಸ್ತಿ ವಿಷಯವಾಗಿ ಆಗಾಗ್ಗೆ  ಕಲಹ ನಡೆಯುತ್ತಿದ್ದು ನಿನ್ನೆ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯಗೊಂಡಿದೆ. ಕೊಲೆ ಆರೋಪಿನಾರಾಯಣ ನಾಯ್ಕ ಸುಳ್ಯ ರೋಟರಿ ಶಾಲೆಯಲ್ಲಿ ಅಟೆಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಮಂಗಳವಾರ […]

ಕರ್ನಾಟಕ ರಾಜ್ಯ ಪೊಲೀಸ್‌ ಧ್ವಜ ಹಾಗೂ ಕಲ್ಯಾಣ ದಿನಾಚರಣೆ

Wednesday, April 3rd, 2013
Police Flag Day

ಮಂಗಳೂರು : ಪೊಲೀಸರು ಕಾನೂನಿನ ಬಗ್ಗೆ ಸ್ಪಷ್ಟ ಜ್ಞಾನ ಹೊಂದುವುದು ಆವಶ್ಯ. ಆಗ ಯಾವುದೇ ಕ್ಲಿಷ್ಟಕರ ಸನ್ನಿವೇಶಗಳನ್ನು ಸುಲಲಿತವಾಗಿ ನಿಭಾಯಿಸಲು ಸಾಧ್ಯ. ಇಲ್ಲವಾದರೆ ಮುಜುಗರದ ಸಂದರ್ಭ ಎದುರಿಸಬೇಕಾಗುತ್ತದೆ ಎಂದು ನಿವೃತ್ತ ಪೊಲೀಸ್‌ ಉಪಾಧೀಕ್ಷಕ ವಿಶ್ವನಾಥ ಪಂಡಿತ್‌ ಹೇಳಿದರು. ಅವರು  ಮಂಗಳವಾರ ನಗರದ ಡಿ.ಎ.ಆರ್‌. ಪೊಲೀಸ್‌ ಕವಾಯತು ಮೈದಾನದಲ್ಲಿ ಜರಗಿದ ಕರ್ನಾಟಕ ರಾಜ್ಯ ಪೊಲೀಸ್‌ ಧ್ವಜ ಹಾಗೂ ಕಲ್ಯಾಣ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ನಿವೃತ್ತರಾದ 61 ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬಂದಿಗಳನ್ನು  ಈ ಸಂದರ್ಭ ಸನ್ಮಾನಿಸಲಾಯಿತು.  ನಿವೃತ್ತ ಪೊಲೀಸರ ಕಲ್ಯಾಣ […]

ಉಡುಪಿ : ಕಿಡಿಗೇಡಿಗಳಿಂದ ನೇಜಾರ್ ನಲ್ಲಿ ಮಸೀದಿ ಮೇಲೆ ಕಲ್ಲೆಸೆತ

Wednesday, April 3rd, 2013
Nejar mosque

ಉಡುಪಿ : ನೇಜಾರ್ ಗ್ರಾಮದಲ್ಲಿ ಕೆಲವು ದಿನಗಳಿಂದ ಕೋಮು ದ್ವೇಷ ಕೆರಳಿಸುವ ಸಣ್ಣ ಪುಟ್ಟ ಘಟನೆಗಳು ನಡೆಯುತ್ತಿದ್ದು, ನಿನ್ನೆ ಈ ಹಿನ್ನಲೆಯಲ್ಲಿ ಕೆಲವು ಕಿಡಿಗೇಡಿಗಳು ನೇಜಾರ್ ನಲ್ಲಿರುವ ಮಸೀದಿಗೆ ಕಲ್ಲೆಸೆದಿದ್ದಾರೆ. ಮಂಗಳವಾರ ರಾತ್ರಿ ನೆಜಾರ್ ನಲ್ಲಿರುವ ವ್ಯಕ್ತಿಯೊಬ್ಬರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗುಪೊಂದು ಅನ್ಯಕೋಮಿನ ವ್ಯಕ್ತಿಯ   ಮೇಲೆ ಹಲ್ಲೆ ನಡೆಸಿ ಬಳಿಕ ಅದೇ ಗುಂಪು ಇಲ್ಲಿರುವ ಮಸೀದಿಯ ಮೇಲೂ ಕಲ್ಲೆಸೆದಿದ್ದಾರೆ.  ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತದಿಂದ ನೊಂದ ವ್ಯಕ್ತಿ ಆತ್ಮಹತ್ಯೆ

Wednesday, April 3rd, 2013
Man sucide at well

ಮಂಗಳೂರು : ಕೆಲ ತಿಂಗಳ ಹಿಂದೆ ನಡೆದ ಅಪಘಾತದಿಂದಾಗಿ ಖಿನ್ನತೆಗೆ ಒಳಗಾದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ನಗರದ ಬಿಕರ್ನಕಟ್ಟೆ ಬಳಿ ನಡೆದಿದೆ. ಕಳೆದ ಫೆಬ್ರವರಿ ೨೩ ರಂದು ವೆಲೇರಿ ಯನ್ ರೋಡ್ರಿಗಸ್ ಎಂಬವರು ಕಂಕನಾಡಿ ಬಳಿ ತನ್ನ ಇನ್ನೋವಾ ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ೧೨ ವರ್ಷದ  ಬಾಲಕಿಯೊಬ್ಬಳು ಇವರ ಕಾರಿನಡಿಗೆ ಬಿದ್ದು ಮೃತಪಟ್ಟಿದ್ದಳು. ರಸ್ತೆ ದಾಟುವಾಗ ಈ ಅಪಘಾತ ನಡೆದಿತ್ತು. ಈ ಅಪಘಾತದಿಂದ ವೆಲೇರಿಯನ್ ರವರು ಸಾಕಷ್ಟು ನೊಂದಿದ್ದು ಇದೆ ಕಾರಣದಿಂದ ನಿನ್ನೆ ಬೆಳಿಗ್ಗೆ […]