ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರ ವಿರುದ್ಧ ದ ಹೋರಾಟಕ್ಕೆ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಬೆಂಬಲ

Saturday, March 2nd, 2013
Sri Vishwesha Theertha Swamiji

ಉಡುಪಿ : ಮೂಡುಬಿದಿರೆ ಸಮೀಪದ ನಿಡ್ಡೋಡಿಯಲ್ಲಿ ಸರ್ಕಾರ ಸ್ಥಾಪಿಸಲುದ್ದೇಶಿಸಿರುವ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಗೆ ಸ್ಥಳೀಯರಿಂದ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿಯೇ ಶುಕ್ರವಾರ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ  ಸ್ಥಳೀಯ ಜನರ ಹೋರಾಟಕ್ಕೆ ತಾವು  ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು. ಶುಕ್ರವಾರ ಪೇಜಾವರ ಮಠದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿ ಸ್ಥಾಪನೆಯಾದ ವಿಶೇಷ ಆರ್ಥಿಕ ವಲಯದ ವಿರುದ್ಧ ಕೂಡ ನಾನು ದನಿಯೆತ್ತಿದ್ದೆ ಇದಕ್ಕೆ ಪ್ರತಿಯಾಗಿ ಕೆಲವು ರಾಜಕೀಯ ನಾಯಕರು ನನ್ನನ್ನು ಟೀಕಿಸಿದ್ದರು ಆದರೆ ನಾನು ಇವು ಯಾವುದರ […]

ಮಂಗಳೂರು ದಕ್ಷಿಣ ವಿಧಾನಸಭಾ ಕಚೇರಿಯಲ್ಲಿ ಜೆಡಿಎಸ್ ಸೇರಿದ ಬಿಜೆಪಿ ಕಾರ್ಯಕರ್ತರು

Saturday, March 2nd, 2013
BJP activists jion to JDS

ಮಂಗಳೂರು : ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಂತೆಯೇ ಪ್ರಮುಖ ರಾಜಕೀಯ ಪಕ್ಷಗಳು ಬೇರೆ ಪಕ್ಷಗಳಲ್ಲಿನ  ಕಾರ್ಯಕರ್ತರನ್ನು ತಮ್ಮತ್ತ ಸೇಳೆಯುವ ಕಡೆ  ಗಮನಹರಿಸಿವೆ. ಅದರಲ್ಲೂ ಮುಖ್ಯವಾಗಿ ಜೆಡಿಎಸ್ ಈ ವಿಷಯದಲ್ಲಿ ಮುಂದಿದೆ. ನಗರದ ಜೆಡಿಎಸ್ ಮಂಗಳೂರು ದಕ್ಷಿಣ ವಿಧಾನಸಭಾ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮರಕಡ ವಾರ್ಡ್ ಸಂಖ್ಯೆ 14ರ ಬಿಜೆಪಿ ಕಾರ್ಯಕರ್ತರಾದ ಪ್ರವೀಣ್ ಶೆಟ್ಟಿ, ಸುರೇಶ್ ಶೆಟ್ಟಿ, ರಾಜೇಶ್ ಶೆಟ್ಟಿ ಇವರ ನಾಯಕತ್ವದಲ್ಲಿ ಹಲವಾರು ಕಾರ್ಯಕರ್ತರು ಜೆಡಿಎಸ್ ಗೆ ಸೇರ್ಪಡೆಗೊಂಡರು. ಈ […]

ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ

Saturday, March 2nd, 2013
BJP’s election manifesto

ಮಂಗಳೂರು : ಕಾನೂನು ಮತ್ತು ನಗರಾಭಿವೃದ್ಧಿ ಸಚಿವ ಸುರೇಶ್‌ ಕುಮಾರ್‌ ಅವರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ, ಕಳೆದ ೫ ವರ್ಷಗಳಿಂದ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಸಾರ್ಥಕ ಸಾಧನೆಯನ್ನು ಬಿಜೆಪಿ ಮಾಡಿದೆ. ನಗರದ ರಸ್ತೆಗಳನ್ನು ಉನ್ನತದರ್ಜೆಗೇರಿಸುವಲ್ಲಿ ಆದ್ಯತೆಯ ಮೇರೆಗೆ ಈಗಾಗಲೇ 75 ಕಿ.ಮೀ. ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಿದೆ. 40 ಕಿ.ಮೀ. ರಸ್ತೆಯನ್ನು ಇಂಟರ್‌ಲಾಕ್‌ ರಸ್ತೆಯಾಗಿ ನಿರ್ಮಾಣ ಮಾಡಿದೆ. ಫ‌ುಟ್‌ಪಾತ್‌ ಹಾಗೂ ಚರಂಡಿ ನಿರ್ಮಾಣದ ಕಾಮಗಾರಿ ನಡೆಯತ್ತಿದೆ ಎಂದರು. ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ […]

ಅಕ್ರಮ ಗಾಂಜಾ ಸಾಗಾಟ ನಾಲ್ವರು ಆರೋಪಿಗಳ ಸೆರೆ

Saturday, March 2nd, 2013
ganja seized at Sullia

ಸುಳ್ಯ : ಶುಕ್ರವಾರ ಸಂಪಾಜೆ ಗ್ರಾಮದ ಕಲ್ಲುಗುಂಡಿ ಕೂಲಿ ಶೆಡ್ಡ್ ಬಳಿ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಜಾಲವನ್ನು ಜಿಲ್ಲಾ ಅಪರಾಧ ಪತ್ತೆ ದಳ ಮತ್ತು ಸುಳ್ಯ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಾಲ್ವರನ್ನು ಬಂಧಿಸಿ ಅವರ ಬಳಿಯಲ್ಲಿದ್ದ 1.100 ಕೆ.ಜಿ. ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಂಗಳೂರು ನಗರದ ಆಸುಪಾಸಿನ ಅವಿನಾಶ್‌(29), ಅರುಣ್‌ ಶೆಟ್ಟಿ(38), ನೆಲ್ಸನ್‌ ಡಿಸೋಜ(29) ಮತ್ತು ಪ್ರಥ್ವಿ ಆಳ್ವ(38) ಆರೋಪಿಗಳಾಗಿದ್ದಾರೆ. ಆರೋಪಿಗಳಿಂದ ರೂಪಾಯಿ  35049 ನಗದು, 6 ಮೊಬೈಲ್‌, 1 ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಂಗಳೂರಿನಲ್ಲಿ ನಡೆದ […]

ಕಾಂಗ್ರೆಸ್ : ಮಹಾನಗರ ಪಾಲಿಕೆ ಚುನಾವಣೆಯ ಪ್ರಣಾಳಿಕೆ ಬಿಡುಗಡೆ

Saturday, March 2nd, 2013
Congress election manifesto

ಮಂಗಳೂರು : ಕದ್ರಿಯ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಕಚೇರಿಯಲ್ಲಿ ಶುಕ್ರವಾರ ಮಂಗಳೂರು ಮಹಾನಗರ ಪಾಲಿಕೆಯ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯನ್ನು ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ರಾಜ್ಯದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಮಂಗಳೂರು ಒಂದು. ಈ ನಗರವನ್ನು ಬೆಂಗಳೂರಿನಂತೆ ಸಿಲಿಕಾನ್ ಸಿಟಿಯಾಗಿ ಅಭಿವೃದ್ಧಿ ಪಡಿಸಲು ಕಾಂಗ್ರೆಸ್ ಬದ್ಧವಾಗಿದೆ. ಮನಪಾ ಚುನಾವಣೆಗೆ ಸಂಬಂಧಿಸಿದಂತೆ ನಗರದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿ ನಾಗರಿಕ ಸೌಲಭ್ಯವನ್ನು ಒದಗಿಸಲು ಕಾಂಗ್ರೆಸ್ ಹೆಚ್ಚಿನ ಆಧ್ಯತೆ ನೀಡಲಿದೆ ಎಂದರು. […]

ಚುನಾವಣೆ ನೀತಿ ಸಂಹಿತೆ ಕಟ್ಟುನಿಟ್ಟಿನ ಪಾಲನೆಗೆ ಸೂಚನೆ

Saturday, March 2nd, 2013
dco election

ಮಂಗಳೂರು : ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆಯನ್ನು ಚುನಾವಣಾ ಆಯೋಗ ರೂಪಿಸಿದ್ದು, ಇವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ದ.ಕ. ಜಿಲ್ಲಾಧಿಕಾರಿ ಎನ್.ಪ್ರಕಾಶ್ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕೋರ್ಟ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಪ್ರಚಾರಕ್ಕಾಗಿ ಉಪಯೋಗಿಸುವ ವಾಹನಗಳ ನೋಂದಣಿ ಸಂಖ್ಯೆಯನ್ನು ಸಂಬಂಧಪಟ್ಟ ಚುನಾವಣಾಧಿಕಾರಿಗೆ ನೀಡಿ ಅವರಿಂದ ಅನುಮತಿ ಪತ್ರ ಬರೆದು ಅದನ್ನು ಉಪಯೋಗಿಸುತ್ತಿರುವ ವಾಹನದಲ್ಲಿ ಅಂಟಿಸಿ ಚುನಾವಣಾ ಪ್ರಚಾರ ಮಾಡಲು ಅವಕಾಶವಿದೆ, ಚುನಾವಣಾ ಪ್ರಚಾರಕ್ಕಾಗಿ ಅನುಮತಿ ಪಡೆದ ಧ್ವನಿ ವರ್ಧಕಗಳನ್ನು […]

ಸ್ವಚ್ಚ ತತ್ವಗಳು ಮತ್ತು ಶಾಂತಿಯುತ ಮೌಲ್ಯಗಳಿರುವುದು ಹಿಂದೂ ಧರ್ಮದಲ್ಲಿ: ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ

Friday, March 1st, 2013
Sahasra Chandika

ಉಪ್ಪಳ : ಶ್ರೀ ನಿತ್ಯಾನಂದ ಯೋಗಾಶ್ರಮ ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್, ಕೊಂಡೆವೂರು ಉಪ್ಪಳ ಇಲ್ಲಿ ನಡೆಯುವ ಸಹಸ್ರ ಚಂಡಿಕಾಯಾಗದ ಎರಡನೇ ದಿನದ ಧಾರ್ಮಿಕ ಕಾರ್ಯಕ್ರಮವನ್ನು ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀ ಪಾದಂಗಳವರು ಉದ್ಘಾಟಿಸಿದರು. ಬಳಿಕ ಆಶೀರ್ವಚಿಸಿದ ಶ್ರೀ ಪಾದಂಗಳವರು ಜಗತ್ತು ಇಂದು ಹಿಂದೂ ಧರ್ಮದ ಪ್ರಭಾವಕ್ಕೊಳಗಾಗಿದ್ದಾರದೆ. ಪಾಶ್ಚಾತ್ಯರು ಹಿಂದೂ ಧರ್ಮದ ತತ್ವಗಳನ್ನು ಮೆಚ್ಚಿ ಭಾರತಕ್ಕೆ ಬಂದು ಹಿಂದೂ ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸ್ಚಚ್ಚ ಧಾರ್ಮಿಕ ತತ್ತ್ವಗಳು ಮತ್ತು ಶಾಂತಿಯುತ ಜೀವನದ ಪರಮೋಚ್ಚ […]

ಜೀವನೋತ್ಸಾಹದಿಂದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ – ಶ್ರೀ.ಎಸ್ ಗಣೇಶ್ ರಾವ್

Friday, March 1st, 2013
Karavali College

ಮಂಗಳೂರು : ಜೀವನೋತ್ಸಾಹ ನಮ್ಮ ಜೀವನದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ಆತ್ಮವಿಶ್ವಾಸ, ಶ್ರದ್ಧೆ, ತ್ಯಾಗದಿಂದ ಜೀವನೋತ್ಸಾಹ ವೃದ್ಧಿಸುತ್ತದೆ ಮತ್ತು ಎಂತಹದೇ ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತದೆ. ಭಾರತ ದೇಶ ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧೀಜಿ, ಅಬ್ದುಲ್ ಕಲಾಂರಂತಹ ಮಹಾತ್ಮರುಗಳನ್ನು ಹೊಂದಿರುವ ಶ್ರೇಷ್ಠ ರಾಷ್ಟ್ರ. ಇಂದಿನ ಯುವ ಜನತೆ ಅಂತಹ ಮಹಾತ್ಮರ ಜೀವನವನ್ನು ಕುರಿತು ಕಲಿತು ಜೀರ್ಣಿಸುವುದಷ್ಟೇ ಅಲ್ಲ ಅವರನ್ನು ತಮ್ಮ ಬದುಕಿಗೆ  ಮಾದರಿಯಾಗಿರಿಸಿ ಆ ಮಹಾತ್ಮರು ದೇಶದ ಅಭಿವೃದ್ಧಿಯ ಬಗ್ಗೆ ಕಂಡ ಕನಸುಗಳನ್ನು ಸಾಕಾರಗೊಳಿಸುವ ರೂವಾರಿಗಳಾಗಬೇಕು ಎಂದು […]

ಬಂಟ್ವಾಳ : ಭಾರತೀಯ ಜನತಾಪಾರ್ಟಿಯ ಚುನಾವಣಾ ಪ್ರಚಾರ ಅಭಿಯಾನದ ಉದ್ಘಾಟನೆ

Friday, March 1st, 2013
Bantval Bjp Polls

ಬಂಟ್ವಾಳ : ಬಿ.ಸಿ.ರೋಡಿನ ಗಾಣದಪಡ್ಪುವಿನಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರುಮಂದಿರದ ಸಭಾಂಗಣದಲ್ಲಿ ಗುರುವಾರ ಸಂಜೆ ಭಾರತೀಯ ಜನತಾಪಾರ್ಟಿಯ ಚುನಾವಣಾ ಪ್ರಚಾರದ ಅಭಿಯಾನವನ್ನು ವಿಧಾನಪರಿಷತ್ ಸದಸ್ಯ ಮೋನಪ್ಪ ಭಂಡಾರಿಯವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ವಿವಿಧ ಯೋಜನೆಗಳಿಗೆ ಅನುದಾನ ಬಿಡುಗಡೆಯಾಗಿದ್ದು ಕಳೆದ ೫ ವರ್ಷಗಳಲ್ಲಿ ಬಿಜೆಪಿ ಈ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಂಡಿದೆ ಅದರಲ್ಲೂ ಮುಖ್ಯವಾಗಿ  ಈ ಅವಧಿಯಲ್ಲಿ ಅಭಿವೃದ್ಧಿಯಲ್ಲಿ ಬಂಟ್ವಾಳ ಪುರಸಭೆಯ ಪರಿಸರದ  ಚಿತ್ರಣವೇ ಬದಲಾಗಿದೆ ಎಂದು ಅವರು ಹೇಳಿದರು. ಬಂಟ್ವಾಳ ಪುರಸಭೆಯ 23 […]

ಕಾಂಗ್ರೆಸ್ ಆಡಳಿತಾವಧಿಯಲ್ಲಿ ಆಗದ ಅಭಿವೃದ್ಧಿ ಕಾರ್ಯಗಳು ಬಿಜೆಪಿ ಆಡಳಿತಾವಧಿಯಲ್ಲಿ ಸಾಕಾರಗೊಂಡಿದೆ : ಡಿ.ವಿ.ಎಸ್

Friday, March 1st, 2013
BJP Election Campaign

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಚುನಾವಣಾ ಹಿನ್ನಲೆಯಲ್ಲಿ ಮಂಗಳೂರು ಪುರಭವನದಲ್ಲಿ ಗುರುವಾರ ನಡೆದ ಬಿಜೆಪಿಯ ಚುನಾವಣಾ ಪ್ರಚಾರ ಅಭಿಯಾನವನ್ನು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಳೆದ ೨೫ ವರ್ಷಗಳಲ್ಲಿ ಆಗದ ಅಭಿವೃದ್ಧಿ ಕಾರ್ಯಗಳು ಕೇವಲ ೫ ವರ್ಷಗಳಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿ ಸಾಕಾರಗೊಂಡಿದೆ, ಕಳೆದ ೫ ವರ್ಷಗಳ ಆಡಳಿತದಲ್ಲಿ ಬಿಜೆಪಿ ರೂಪಾಯಿ ೫೨೦ ಕೋಟಿಯನ್ನು ಬಿಡುಗಡೆ ಮಾಡಿದೆ. ಆದರೆ ಈ ಹಿಂದಿನ ೨೫ ವರ್ಷಗಳ ಆಡಳಿತಾವಧಿಯಲ್ಲಿ ಕಾಂಗ್ರೆಸ್ […]