ಡ್ರಗ್ ದಂಧೆಯಿಂದ ಮಗಳನ್ನು ರಕ್ಷಿಸುವಂತೆ ಕೋರಿ ವಿಶ್ವ ಹಿಂದೂ ಪರಿಷತ್‌ ಗೆ ಮೊರೆ

Monday, December 27th, 2021
gracy-pinto

ಮಂಗಳೂರು : ಡ್ರಗ್ ದಂಧೆಯಿಂದ ಮಗಳನ್ನು ರಕ್ಷಿಸುವಂತೆ ಕೋರಿ ಮಂಗಳೂರಿನ ಕ್ರೈಸ್ತ ಮಹಿಳೆಯೊಬ್ಬರು ವಿಶ್ವ ಹಿಂದೂ ಪರಿಷತ್‌ ಮೊರೆ ಹೋಗಿದ್ದಾರೆ. ಮಂಗಳೂರಿನ ಬಿಜೈ ಬಳಿಯ ಗ್ರೇಸಿ ಪಿಂಟೋ ಎಂಬ ಮಹಿಳೆ ಸುರತ್ಕಲ್ ನಿವಾಸಿ ಶರೀಫ್ ಸಿದ್ದಿಕಿ ಎಂಬಾತನ ಡ್ರಗ್ಸ್‌ ದಂಧೆಗೆ ಮಗಳು ಬಿದ್ದಿದ್ದು ಇದೀಗ ಹೊರಕ್ಕೆ ಬರಲಾಗದೇ ಒದ್ದಾಡುತ್ತಿರುವುದಾಗಿ ದೂರು ನೀಡಿದ್ದಾರೆ. ಕಳೆದ ಮೂರು ವರ್ಷಗಳಿಂದ  ಆಕೆಯ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆಸಲಾಗುತ್ತಿದೆ. ಡ್ರಗ್ಸ್‌ ಕೊಟ್ಟು ಆಕೆಯನ್ನು ಬಳಸಿಕೊಳ್ಳಲಾಗುತ್ತಿದೆ. ಮಗಳು ಇದರಿಂದ ಹೊರಕ್ಕೆ ಬರಲು ಆಗುತ್ತಿಲ್ಲ. ಮಾನಸಿಕವಾಗಿ […]

ಸ್ಮಾರ್ಟ್ ಸಿಟಿ ‘ಕ್ಲೀನ್ ಬೀಚ್’ ಜಾಗೃತಿಗಾಗಿ ಓಟ ಹಾಗು ಸ್ವಚ್ಛತಾ ಕಾರ್ಯಕ್ರಮ

Sunday, December 26th, 2021
Beach-Clean

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಕ್ರೆಡೈ ಮಂಗಳೂರು ಮತ್ತು ಮಂಗಳೂರು ವಿವಿಯ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಸ್ಮಾರ್ಟ್ ಸಿಟಿ ‘ಕ್ಲೀನ್ ಬೀಚ್’ ಜಾಗೃತಿಗಾಗಿ ಓಟ ಹಾಗು ಸ್ವಚ್ಚತಾ ಕಾರ್ಯಕ್ರಮ ಡಿ.26 ರಂದು ಮಂಗಳೂರಿನ ಪಣಂಬೂರು ಬೀಚ್ ನಲ್ಲಿ ನಡೆಯಿತು. ಸಂಸದ ನಳಿನ್ ಕುಮಾರ್ ಕಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕರಾವಳಿ ಜಿಲ್ಲೆಯ ಸೌಂದರ್ಯ, ನಮ್ಮ […]

ಕೂಳೂರು ನಾಗನಕಲ್ಲುಗಳಿಗೆ ಹಾನಿ, ಪುನರ್ ಪ್ರತಿಷ್ಠಾಪನೆ ಮಾಡಿದ ಕುಟುಂಬಸ್ಥರು

Sunday, December 26th, 2021
Kulooru Naganakatte

ಮಂಗಳೂರು : ಇತ್ತೀಚಿಗೆ ಕೂಳೂರುವಿನಲ್ಲಿ ನಾಗನಕಲ್ಲುಗಳಿಗೆ ದುಷ್ಕರ್ಮಿಗಳು ಹಾನಿ ಮಾಡಿದ ಘಟನೆ ನಡೆದಿತ್ತು. ಇದರ ವಿರುದ್ಧ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ ಕೂಡ ನಡೆದಿತ್ತು. ಭಾನುವಾರ ಅದೇ ಸ್ಥಳದಲ್ಲಿ ನಾಗನ ಕಲ್ಲಿನ ಪುನರ್ ಪ್ರತಿಷ್ಠಾಪನೆ, ಆಶ್ಲೇಷ ಬಲಿ, ವಟು ಆರಾಧನೆ, ನವಕ ಪ್ರಧಾನ ಹೋಮ ಮತ್ತು ತಂಬಿಲ ಸೇವೆಯ ಕಾರ್ಯಕ್ರಮಗಳು ವೈದಿಕ ಮುಖೇನ ಧಾರ್ಮಿಕ ವಿಧಿವಿಧಾನಗಳ ಮೂಲಕ ನಡೆಯಿತು. ಈ ಕಾರ್ಯಕ್ರಮಕ್ಕೆ ಶಾಸಕರಾದ ಡಾ.ವೈ.ಭರತ್ ಶೆಟ್ಟಿ ಆಗಮಿಸಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಎಂಟನೇ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಲಾಂಛನದ ಬಿಡುಗಡೆ

Sunday, December 26th, 2021
chutuku Sahitya

ಮಂಗಳೂರು : ಜನವರಿ 30ರಂದು ಮಂಗಳೂರಿನ ತುಳು ಭವನದ ಸಿರಿ ಚಾವಡಿಯಲ್ಲಿ ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು, ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಸಂಯುಕ್ತವಾಗಿ ಆಯೋಜಿಸುತ್ತಿರುವ ಚುಟುಕು ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಎಂಟನೇ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಲಾಂಛನದ ಬಿಡುಗಡೆ ಸಮಾರಂಭ ಕೆನರಾ ಕಾಲೇಜಿನ ಸಭಾಂಗಣದಲ್ಲಿ  ಶನಿವಾರ ನಡೆಯಿತು. ಸಾಹಿತ್ಯ ಪೋಷಕ, ಸಂಘಟಕ ಗುರುಪ್ರಸಾದ್ ಕಡಂಬಾರ್ ಅವರು ಲಾಂಛನವನ್ನು […]

ಎನ್ಐಟಿಕೆ ವಿದ್ಯಾರ್ಥಿ ಸಾಲದ ಬಾಧೆಯಿಂದ ಆತ್ಮಹತ್ಯೆ

Sunday, December 26th, 2021
sourabh yadav

ಮಂಗಳೂರು :  ಎನ್ಐಟಿಕೆ ವಿದ್ಯಾರ್ಥಿಯೊಬ್ಬ ಸಾಲದ ಬಾಧೆಯಿಂದಾಗಿ ಆತ್ಮಹತ್ಯೆಗೆ ಶರಣಾದ ಘಟನೆ ಸುರತ್ಕಲ್ ನಲ್ಲಿ ನಡೆದಿದೆ. ಬಿಹಾರದ ಪಾಟ್ನಾ ಮೂಲದ ಸೌರವ್ ಕುಮಾರ್ ಯಾದವ್ (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಈತ ಎನ್ಐಟಿಕೆ ಕಾಲೇಜಿನಲ್ಲಿ ಬಿಟೆಕ್ನಲ್ಲಿ  ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ನಲ್ಲಿ ಎರಡನೇ ವರ್ಷದ ವ್ಯಾಸಂಗ ಮಾಡುತ್ತಿದ್ದ. ಸೌರಭ್, ತನ್ನ ಕೋಣೆಯಲ್ಲೇ ನೇಣು ಬಿಗಿದುಕೊಂಡಿದ್ದಾನೆ. ವಿದ್ಯಾಭ್ಯಾಸಕ್ಕಾಗಿ ಶೈಕ್ಷಣಿಕ ಸಾಲ ಪಡೆದಿದ್ದೆ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದೇನೆ ಎಂಬುದಾಗಿ ಡೆತ್ನೋಟ್ನಲ್ಲಿ ಬರೆದಿದ್ದ. ಸ್ಥಳಕ್ಕೆ ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. […]

ಮತಾಂತರ ಕಾಯ್ದೆಗೆ ವಿರೋಧ ಅನಗತ್ಯ : ಗೃಹ ಸಚಿವ

Saturday, December 25th, 2021
Araga-Jnanedra

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯಲಿರುವ ಕಾರ್ಯಕ್ರಮವೊಂದಕ್ಕೆ ಭೇಟಿ ನೀಡಿದ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ  ಶನಿವಾರ ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಮತಾಂತರ ಕಾಯ್ದೆ ವಿಧಾನ ಸಭೆಯಲ್ಲಿ ಪಾಸ್ ಆಗಿದೆ. ನಾವೆಲ್ಲರೂ ಪಕ್ಷ ಮೀರಿ ಈ ಬಗ್ಗೆ ಯೋಚನೆ ಮಾಡಬೇಕು. ನಾವು ಮತಾಂತರ ಕಾಯ್ದೆ ಏಕೆ ತಂದೆವು ಎಂದು ಯೋಚಿಸಬೇಕು.ಇದನ್ನು ನಿವಾರಿಸಲು ನಾವು ಈ ಕಾಯ್ದೆ ತಂದಿದ್ದೇವೆ. ಇದಕ್ಕೆ ವಿರೋಧ ಅನಗತ್ಯ ಎಂದರು. ಮತಾಂತರ ನಿಷೇಧ ವಿಧೇಯಕಕ್ಕೆ ಆಕ್ಷೇಪಣೆಗಳು ಸಹಜ. ಮುಂದಿನ […]

ತಲಪಾಡಿ ಒಳ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಯುವತಿಯರಿಗೆ ಕಿರುಕುಳ ನೀಡುತ್ತಿದ್ದ ಯುವಕನ ಬಂಧನ

Saturday, December 25th, 2021
mustafa

ಮಂಗಳೂರು  :  ತಲಪಾಡಿ ಒಳ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಯುವಕನೋರ್ವನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಶನಿವಾರ ನಡೆದಿದೆ. ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಹೊಸಬೆಟ್ಟು ನಿವಾಸಿ ಮುಸ್ತಫ(18) ಬಂಧಿತ ಆರೋಪಿ. ಈತ ಕಳೆದ ಶನಿವಾರ ಸ್ಕೂಟರ್ ನಲ್ಲಿ ಬಂದಿದ್ದ ಯುವಕನೋರ್ವ ತಲಪಾಡಿಯ ದೇವಿಪುರಕ್ಕೆ ತೆರಳುವ ಒಳ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿದ್ದ. ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದ ಸ್ಥಳೀಯರು ಆರೋಪಿಯ ಚಹರೆಯನ್ನು ಪತ್ತೆ ಹಚ್ಚಿದ್ದರು. ಇಂದು ಬಂಧಿತ […]

ಚರ್ಚ್‌ಗಳಲ್ಲಿ ಸರಳವಾಗಿ ಕ್ರಿಸ್ಮಸ್ ಆಚರಣೆ, ವಿದ್ಯುತ್‌ ದೀಪಗಳಿಂದ ಕಂಗೊಳಿಸಿದ ಚರ್ಚುಗಳು

Saturday, December 25th, 2021
Kanthi Church

ಮಂಗಳೂರು : ಸರಕಾರದ ಮಾರ್ಗಸೂಚಿಯಂತೆ ಚರ್ಚ್‌ಗಳಲ್ಲಿ ಸರಳವಾಗಿ ಕ್ರಿಸ್ಮಸ್ ಕಾರ್ಯಕ್ರಮವನ್ನು ಕ್ರೈಸ್ತ ಧರ್ಮೀಯರು ಆಚರಿಸಿದರು. ಮಂಗಳೂರು ನಗರದ ಚರ್ಚ್‌ಗಳು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಚರ್ಚ್‌ಗಳನ್ನು ಹಬ್ಬದ ಸಂಭ್ರಮದಲ್ಲಿ ವಿದ್ಯುತ್‌ ದೀಪಗಳಿಂದ ಕಂಗೊಳಿಸಿದೆ. ಚರ್ಚ್ ಆವರಣ, ಕ್ರೈಸ್ತರ ಮನೆಗಳು, ಪ್ರಮುಖ ಉದ್ಯಮ, ಅಂಗಡಿ, ಹೋಟೆಲ್‌ಗಳ ಎದುರು ಆಕರ್ಷಕ ಕ್ರಿಬ್‌ (ಗೋದಲಿ)ಗಳು, ಕ್ರಿಸ್ಮಸ್‌ ಟ್ರೀ ಮತ್ತು ಅಲಂಕೃತ ನಕ್ಷತ್ರ ಗಮನ ಸೆಳೆಯುತ್ತಿತ್ತು. ಶುಕ್ರವಾರ ರಾತ್ರಿ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಮತ್ತು ಬಲಿ ಪೂಜೆಗಳೊಂದಿಗೆ ಸಂಭ್ರಮದ ಕ್ರಿಸ್ಮಸ್‌ ಆಚರಣೆ […]

ಇಂಡಿಯನ್ ಡೆಂಟಲ್ ಅಸೋಸಿಯೇಷನ್ ದಕ್ಷಿಣ ಕನ್ನಡದ ಅಧ್ಯಕ್ಷರಾಗಿ ಡಾ.ಪದ್ಮರಾಜ್ ಹೆಗ್ಡೆ

Friday, December 24th, 2021
Dental Association

ಮಂಗಳೂರು : ಐ ಡಿ ಏ (ಇಂಡಿಯನ್ ಡೆಂಟಲ್ ಅಸೋಸಿಯೇಷನ್)  ದಕ್ಷಿಣ ಕನ್ನಡ ಬ್ರಾಂಚ್ ನ 2021 ಸಾಲಿನ ವಾರ್ಷಿಕ ಮಹಾಸಭೆಯು 23 ಡಿಸೆಂಬರ್ 2021 ರಂದು ನಗರದ ಹೋಟೆಲ್ ಮಾಯಾ ಇಂಟರ್ನ್ಯಾಷನಲ್ ನಲ್ಲಿ ನಡೆಯೆತು. ಇದರಲ್ಲಿ 2022 ರ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಯೆತು. 2022 ರ ಸಾಲಿನ ಅಧ್ಯಕ್ಷ ರಾಗಿ ಡಾ . ಪದ್ಮರಾಜ್ ಹೆಗ್ಡೆ ಅಧಿಕಾರ ವಹಿಸಿಕೊಂಡರು , ಕಾರ್ಯದರ್ಶಿ ಯಾಗಿ ಡಾ. ಭರತ್ ಪ್ರಭು , ಖಜಾಂಚಿ ಡಾ. ಪ್ರಸನ್ನ ಕುಮಾರ್ […]

ಪುಟಪಾತ್ ಗೆ ಅಡ್ಡಲಾಗಿ ವ್ಯಾಪಾರ, ವ್ಯಾಪಾರಿಗಳ ಸಾಮಾಗ್ರಿ ಮತ್ತು ಅಂಗಡಿ ತೆರವು

Friday, December 24th, 2021
petty Shop

ಮಂಗಳೂರು : ನಗರದ ಸ್ಟೇಟ್‌ಬ್ಯಾಂಕ್‌ನ ಬಳಿ ಪುಟಪಾತ್ ಗೆ ಅಡ್ಡಲಾಗಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳ ಸಾಮಾಗ್ರಿಗಳನ್ನು ಮತ್ತು ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಶುಕ್ರವಾರ ಬೆಳಿಗ್ಗೆ  ಪಾಲಿಕೆ ಅಧಿಕಾರಿಗಳು ನಡೆಸಿದರು. ಬುಧವಾರ ಪಾಲಿಕೆಯಲ್ಲಿ ನಡೆದ ಸಭೆಯಲ್ಲಿ ನಗರ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ಎಲ್ಲಾ ಗೂಡಂಗಡಿ ಗಳನ್ನು ತೆರವುಗೊಳಿಸಲು ಸೂಚನೆ ನೀಡಲಾಗಿತ್ತು. ಅದರಂತೆ ಗುರುವಾರ ಬೆಳಗ್ಗಿನಿಂದಲೇ ಕಂದಾಯ, ಆರೋಗ್ಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗವು ಕಾರ್ಯಾಚರಣೆ  ನಡೆಸಿದ್ದಾರೆ. ಸಾರ್ವಜನಿಕರು ನಡೆದಾಡುವ ಫುಟ್‌ಪಾತ್ ಅತಿಕ್ರಮಿಸಿ, ಗೂಡಂಗಡಿ ನಿರ್ಮಿಸಲಾಗಿದೆ […]