ಅನ್ಯಧರ್ಮದ ಯುವಕ ಮತ್ತು ಯುವತಿ ಮೇಲೆ ಬಸ್‌ನಲ್ಲಿ ಹಲ್ಲೆ, ನಾಲ್ವರ ಬಂಧನ

Saturday, December 11th, 2021
Bus Love

ಮಂಗಳೂರು : ನಗರದ ಸರ್ವೀಸ್ ಬಸ್ ನಿಲ್ದಾಣದಲ್ಲಿ ಶುಕ್ರವಾರ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಗೆ ಅವಾಚ್ಯವಾಗಿ ಬೈದು ಕೈಯಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿದೆ. ಬಂಧಿತರನ್ನು ಪ್ರಕಾಶ್, ರಾಘವೇಂದ್ರ, ರಂಜಿತ್, ಪವನ್ ಎಂದು ಗುರುತಿಸಲಾಗಿದೆ. ಅನ್ಯಧರ್ಮದ ಯುವಕ ಮತ್ತು ಯುವತಿ ಬಸ್‌ನಲ್ಲಿ ಕುಳಿತುಕೊಂಡಿದ್ದ ಸಂದರ್ಭದಲ್ಲಿ 5-6 ಮಂದಿ ಐಡಿ ಪ್ರೂಫ್ ಕೇಳಿ ಅವರ ಮನೆಯವರ ಬಗ್ಗೆ ವಿಚಾರಿಸಿ ಅವಾಚ್ಯ ಶಬ್ಧಗಳಿಂದ ಬೈದು ಕೈಗಳಿಂದ ಹಲ್ಲೆ ನಡೆಸಿದ್ದಾರೆ. ಮಾತ್ರವಲ್ಲದೆ ಯುವತಿಯ ಗೌರವಕ್ಕೆ ಧಕ್ಕೆ ಬರುವ ರೀತಿಯಲ್ಲಿ ವರ್ತಿಸಿದ್ದ […]

ನಮ್ಮನ್ನು ನಿರ್ವಹಿಸಿಕೊಂಡರೆ ಒತ್ತಡ ನಿರ್ವಹಣೆಯ ಪ್ರಶ್ನೆಯಿಲ್ಲ: ಮಮತಾ ಆಚಾರ್

Saturday, December 11th, 2021
mamatha-achar

ಮಂಗಳೂರು: ನಾವು ಒತ್ತಡವನ್ನು ನಿರ್ವಹಿಸುವ ಬದಲು  ನಮ್ಮನ್ನು ನಾವು ಚೆನ್ನಾಗಿ ನಿರ್ವಹಿಸಿಕೊಂಡರೆ ಒತ್ತಡದ ಸಮಸ್ಯೆಯೇ ಉದ್ಭವವಾಗುವುದಿಲ್ಲ, ಎಂದು ಖ್ಯಾತ ಆಪ್ತ ಸಮಾಲೋಚಕಿ ಶ್ರೀಮತಿ ಮಮತಾ ಆಚಾರ್ ಅಭಿಪ್ರಾಯಪಟ್ಟರು. ನಗರದ  ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಇತ್ತೀಚೆಗೆ ಪ್ರಥಮ ಪದವಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಶುದ್ಧ ಗಾಳಿ, ಉತ್ತಮ ಆಹಾರ, ಸಾಕಷ್ಟು ನೀರು, ಧ್ಯಾನ, ವ್ಯಾಯಾಮ, ಸಮಯ ನಿರ್ವಹಣೆ ನಮ್ಮನ್ನು ಒತ್ತಡದಿಂದ ದೂರವಿಡಬಲ್ಲವು. ಮುಕ್ತವಾಗಿ ಮಾತನಾಡಬಹುದಾದ ಹಳೆಯ ಸ್ನೇಹಿತರು, ಹವ್ಯಾಸಗಳೂ ನಮಗೆ ನೆರವಾಗಬಲ್ಲವು. “ಮನಸ್ಸು ಹರಿಯುವ ನೀರಿನಂತೆ […]

ದ.ಕ-ಉಡುಪಿ ಸ್ಥಳೀಯಾಡಳಿತ ವಿಧಾನ ಪರಿಷತ್‌ ಚುನಾವಣೆ, ಶೇ. 99.55 ಮತದಾನ

Friday, December 10th, 2021
kota-srinivasa-poojary

ಮಂಗಳೂರು : ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ವಿಧಾನ ಪರಿಷತ್‌ನ  ಚುನಾವಣೆ ಇಂದು ಶಾಂತಿಯುತವಾಗಿ ನಡೆದಿದ್ದು, ಶೇ. 99.55 ಮತದಾನವಾಗಿದೆ. ದ.ಕ. ಜಿಲ್ಲೆಯ 231 ಹಾಗೂ ಉಡುಪಿ ಜಿಲ್ಲೆಯ 158 ಸಹಿತ ಉಭಯ ಜಿಲ್ಲೆಗಳ ಒಟ್ಟು 389 ಮತಗಟ್ಟೆಗಳಲ್ಲಿ ಒಟ್ಟು 6040 ಮತದಾರರಲ್ಲಿ ಸಂಜೆ 4 ಗಂಟೆಯ ವೇಳೆಗೆ 6013 ಮಂದಿ ಮತದಾನ ಮಾಡಿದ್ದಾರೆ. ದ.ಕ. ಜಿಲ್ಲೆಯ 3290 ಗ್ರಾ.ಪಂ. ಸದಸ್ಯರು, ಮಂಗಳೂರು ಮಹಾನಗರ ಪಾಲಿಕೆಯ 60 ಸದಸ್ಯರು, ನಗರ ಸಭೆಯ 62, ಪುರಸಭೆಯ 50, ಪಟ್ಟಣ […]

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾ ಷಷ್ಠಿ, ಬ್ರಹ್ಮ ರಥೋತ್ಸವ

Friday, December 10th, 2021
Kukke-Subrahmanya

ಸುಬ್ರಹ್ಮಣ್ಯ:  ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾ ಷಷ್ಠಿ ಉತ್ಸವದ ಪ್ರಯುಕ್ತ ಬ್ರಹ್ಮ ರಥೋತ್ಸವ ಸಂಭ್ರಮ ಸಡಗರದಿಂದ ನಡೆಯಿತು. ಗುರುವಾರ ಬೆಳ್ಳಗೆ 6.58ರ ವೃಶ್ಚಿಕ ಲಗ್ನ ಸುಮೂಹರ್ತದಲ್ಲಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರು ರಥಾರೂಢರಾಗಿ  ಬ್ರಹ್ಮ ರಥೋತ್ಸವ ಮುನ್ನ ವಿವಿಧ ವೈದಿಕ ಕಾರ್ಯ ಹಾಗೂ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಮಹಾಪೂಜೆ ನೇರವೇರಿದ ಬಳಿಕ ಬ್ರಹ್ಮ ರಥೋತ್ಸವ ಸಂಭ್ರಮದಿಂದ ನಡೆಯಿತು.  ಬೆಳ್ಳಗೆ 6.58 ವೃಶ್ಚಿಕ ಲಗ್ನದಲ್ಲಿ ಸುಬ್ರಹ್ಮಣ್ಯ ದೇವರು ಬ್ರಹ್ಮ ರಥದಲ್ಲಿ, ಉಮಾಮಹೇಶ್ವರ ದೇವರು ಪಂಚಮಿ ರಥದಲ್ಲಿ ಆರೂಢರಾಗಿ ಬಳಿಕ […]

ಸೋಲುವ ಭೀತಿಯಿಂದ ಕಾಂಗ್ರೆಸ್ ಒಳಒಪ್ಪಂದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಟೀಕೆ

Friday, December 10th, 2021
Nalinkumar-Kateel

ಮಂಗಳೂರು : ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ 15ಕ್ಕಿಂತಲೂ ಅಧಿಕ ಸ್ಥಾನ ಗೆಲ್ಲುವ ವಿಶ್ವಾಸವಿದೆ. ಯಾವುದೇ ಪಕ್ಷದ ಜತೆ ಒಳ ಒಪ್ಪಂದ ಅಗತ್ಯ ಇಲ್ಲ. ಕಾಂಗ್ರೆಸ್ ಸೋಲಿನ ಭೀತಿಯಲ್ಲಿದೆ. ಹಾಗಾಗಿ ಒಳ ಒಪ್ಪಂದದ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹೇಳಿದರು. ಗುರುವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು `ಬಿಜೆಪಿ ಎಲ್ಲ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಿ ಸಂಘಟನಾತ್ಮಕವಾಗಿ ಎದುರಿಸಿದೆ. ರಾಜ್ಯದಲ್ಲಿ ಇತ್ತೀಚೆಗೆ ನಡೆದ ಉಪ ಚುನಾವಣೆ ಸಹಿತ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಮೇಲುಗೈ […]

ಡಿ.11 : ಕನ್ನಡ ಸಾಹಿತ್ಯ ಪರಿಷತ್ ನೂತನ ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಪದಗ್ರಹಣ

Thursday, December 9th, 2021
chutuku

ಮಂಗಳೂರು : ಇತ್ತೀಚೆಗೆ ನಡೆದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಭಾರೀ ಅಂತರದಿಂದ ಗೆಲುವು ಸಾಧಿಸಿರುವ ಲೇಖಕ ಸಂಘಟಕ ಉಪನ್ಯಾಸಕ ಡಾ.ಎಂ.ಪಿ ಶ್ರೀನಾಥ್ ಅವರ ಪದಗ್ರಹಣ ಕಾರ್ಯಕ್ರಮವು ಡಿಸೆಂಬರ್ 11ನೇ ತಾರೀಕು ಶನಿವಾರ ಸಂಜೆ 4 ಗಂಟೆಗೆ ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ ಎಂದು ಪದಗ್ರಹಣ ಸಮಿತಿಯ ಗಣೇಶ್ ಹೆಬ್ಬಾರ್ ಅವರು ಬುಧವಾರ ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ […]

ಪತ್ನಿ ಮಕ್ಕಳು ಮತಾಂತರವಾಗುವ ಆತಂಕದಿಂದ ಅವರನ್ನು ಕೊಂದು ನೇಣಿಗೆ ಶರಣಾದ ಡ್ರೈವರ್

Wednesday, December 8th, 2021
morgansgate-suicide

ಮಂಗಳೂರು : ಪತ್ನಿ ಮಕ್ಕಳು  ಮತಾಂತರವಾಗುವ ಆತಂಕದಿಂದ  ಅವರಿಗೆ  ಫ್ರೈಡ್ ರೈಸ್ ನಲ್ಲಿ ವಿಷ ಹಾಕಿ ತಿನ್ನಿಸಿ ಪತಿಯೂ ಆತ್ಮ ಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ಮೊರ್ಗನ್ಸ್ ಗೇಟ್ ಗೇಟ್ ನಲ್ಲಿ ಬುಧವಾರ ನಡೆದಿದೆ. ನಾಗೇಶ್ ಶೇರಿಗುಪ್ಪಿ (30),ಆತನ ಪತ್ನಿ ವಿಜಯಲಕ್ಷ್ಮಿ( 26), ಸಪ್ನ (8) ಮತ್ತು ಸಮರ್ಥ್ (4) ಸಾವಿಗೀಡಾದವರು. ಮೂಲತಃ ಬಾಗಲಕೋಟೆ ಬೀಳಗಿಯ ಸುನಗ್ ಗ್ರಾಮದವರಾಗಿದ್ದ ಕುಟುಂಬ ಕಳೆದ ೮ ವರ್ಷಗಳಿಂದ ಮಂಗಳೂರಿನಲ್ಲಿ ನೆಲೆಸಿತ್ತು. ನಾಗೇಶ್ ಶೇರಿಗುಪ್ಪ ಬರೆದ  ಡೆತ್ ನೋಟ್ ನಲ್ಲಿ ನೂರ್ […]

ನಳಿನ್ ಕುಮಾರ್ ಕಟೀಲ್ ಮೊದಲು ಕಾಂಗ್ರೆಸ್ ಕಾರ್ಯಕರ್ತರಾಗಿದ್ದರು, ಅವರು ಮತ್ತೆ ಮರಳಿ ಕಾಂಗ್ರೆಸ್​ ಪಕ್ಷಕ್ಕೆ ಬರಲಿ

Tuesday, December 7th, 2021
Khader

ಮಂಗಳೂರು : ಕಾಂಗ್ರೆಸ್ ಕಾರ್ಯಕರ್ತರನ್ನು ಬಿಜೆಪಿಗೆ ಸೇರಿಸಿ ಎಂದು ಕರೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮೊದಲು‌ ಕಾಂಗ್ರೆಸ್ ಕಾರ್ಯಕರ್ತರಾಗಿದ್ದರು. ಮತ್ತೆ ಅವರು ಕಾಂಗ್ರೆಸ್ಗೆ ಬರಲಿ ಎಂದು ಮಾಜಿ ಸಚಿವ ಯು ಟಿ ಖಾದರ್ ಅಹ್ವಾನ ನೀಡಿದ್ದಾರೆ ಖಾದರ್ ಮತ್ತು ರಮಾನಾಥ ರೈ ಹೊರತುಪಡಿಸಿ ಉಳಿದ ಕಾಂಗ್ರೆಸ್ ಕಾರ್ಯಕರ್ತರನ್ನು ಬಿಜೆಪಿಗೆ ಸೇರಿಸಿ ಎಂದು ಕರೆ ನೀಡಿದ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಳಿನ್ ಕುಮಾರ್ ಕಟೀಲ್ ಅವರು ಮೊದಲು ಕಾಂಗ್ರೆಸ್ […]

ದೇವರ ದರ್ಶನ‌ ಪಡೆದು, ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಕ

Tuesday, December 7th, 2021
saligrama

ಉಡುಪಿ : ಸರಿಯಾದ ಕೆಲಸವಿಲ್ಲದೆ ಮಾನಸಿಕವಾಗಿ ನೊಂದುಕೊಂಡು ಕುಗ್ಗಿ ಹೋಗಿದ್ದ ಯುವಕನೊಬ್ಬ ದೇವಸ್ಥಾನವೊಂದರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಉಡುಪಿ ಜಿಲ್ಲೆಯ ಪಾಂಡೇಶ್ವರದ ಯಡಬೆಟ್ಟು ನಿವಾಸಿ ಸುನೀಲ್ ಮೊಗವೀರ ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಉಡುಪಿ ಸಾಲಿಗ್ರಾಮದ ಗುರುನರಸಿಂಹ ದೇವಸ್ಥಾನದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಗಳವಾರ  ಸಾಲಿಗ್ರಾಮದ ಗುರುನರಸಿಂಹ ದೇವಸ್ಥಾನದಲ್ಲಿ ದರ್ಶನ‌ ಪಡೆದ ಬಳಿಕ ಈತ, ಅಲ್ಲಿನ ದೇವಸ್ಥಾನದ ಕೆರೆಗೆ ಹಾಕಲಾಗಿದ್ದ ಕಬ್ಬಿಣದ ಬೇಲಿಯನ್ನು ದಾಟಿ ಹಾರಿದ್ದಾನೆ. ಸ್ಥಳೀಯರು ಕೂಡಲೇ ನೆರವಿಗೆ ಧಾವಿಸಿದರೂ ಆತನನ್ನು ಉಳಿಸಿಕೊಳ್ಳಲು […]

ಜನರು ತೋರಿಸಿದ  ಪ್ರೀತಿ,ವಿಶ್ವಾಸಕ್ಕೆ ನಾನು ಸದಾ ಖುಣಿ- ಹರೇಕಳ ಹಾಜಬ್ಬ

Tuesday, December 7th, 2021
Harekala-Hajabba

ಕಡಬ : ಜನರು ತೋರಿಸಿದ  ಪ್ರೀತಿ,ವಿಶ್ವಾಸಕ್ಕೆ ನಾನು ಸದಾ  ಖುಣಿಯಾಗಿದ್ದೇನೆ ಎಂದು  ಪದ್ಮಶ್ರೀ ವಿಜೇತ ಹರೇಕಳ ಹಾಜಬ್ಬ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘ ,ಕಡಬ ತಾಲೂಕು ಪತ್ರಕರ್ತ ಸಂಘ ,ಎಸ್.ಡಿ. ಎಂ.ಸಿ.ದ.ಕ.ಜಿ.ಪಂ. ಕಿರಿಯ ಪ್ರಾಥಮಿಕ ಶಾಲೆ ಪಿಜಕ್ಕಳ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದ ಲ್ಲಿಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶಿಕ್ಷಣ ಸಂತ ಹರೇಕಳ ಹಾಜಬ್ಬ ಅವರಿಗೆ ಸನ್ಮಾನ ಮತ್ತು ಸಂವಾದ ಕಾರ್ಯಕ್ರಮ , ಪಿಜಕಳ ಶಾಲೆಯ ಮಕ್ಕಳಿಗೆ ಕುದುರೆಮುಖ ಕಬ್ಬಿಣ ಹಾಗೂ ಅದಿರು […]