ಸಂಪ್ರದಾಯ ಮುರಿದು ಪಲ್ಲಕ್ಕಿ ಹೊತ್ತ ಶಾಸಕ ಹರೀಶ್ ಪೂಂಜಾ, ತಪ್ಪುಕಾಣಿಕೆ ಹಾಕಿ ಕ್ಷಮೆ ಯಾಚಿಸಿದ ಯುವಕರು

Thursday, November 25th, 2021
Harish-Poonja

ಬೆಳ್ತಂಗಡಿ :  ಲಾಯಿಲ ಶ್ರೀ ವೆಂಕಟರಮಣ ದೇವಸ್ಥಾನದ ಪಲ್ಲಕ್ಕಿಗೆ ಸಂಪ್ರದಾಯ ಮೀರಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೆಗಲು ಕೊಟ್ಟ ಪ್ರಸಂಗ ಇದೀಗ ಹೊಸ ತಿರುವು ಪಡದಿದೆ. ಹರೀಶ್ ಪೂಂಜಾರಂತೆ ತಮಗೂ ಪಲ್ಲಕ್ಕಿ ಹೊರಲು ಅವಕಾಶ ನೀಡಬೇಕು ಎಂಬ ದಲಿತ ಸಮುದಾಯದ ಒತ್ತಾಯಮಾಡಿದ್ದರೆ,  ಪಲ್ಲಕ್ಕಿ ಹೊರಲು ಶಾಸಕರನ್ನು ಕರೆತಂದ ಯುವಕರು ದೇವಸ್ಥಾನದಲ್ಲಿ ತಪ್ಪುಕಾಣಿಕೆ ಹಾಕಿ ಕ್ಷಮೆ ಯಾಚಿಸಿದ ಪ್ರಸಂಗವೂ ನಡೆದಿದೆ. ವಿವಾದದ ಹಿನ್ನೆಲೆಯಲ್ಲಿ ಉತ್ಸವದ ಕೊನೆಯ ದಿನವಾದ (ಮಕ್ಕಳ ಹಬ್ಬ) ಬುಧವಾರ ರಾತ್ರಿ ನಡೆಯಬೇಕಿದ್ದ ದೇವರ ಪಲ್ಲಕ್ಕಿಯ […]

ಉಗ್ರರಿಗೆ ಹಣ ಕಳುಹಿಸುತ್ತಿದ್ದ ಮಂಗಳೂರಿನ ದಂಪತಿಗಳಿಗೆ ಹತ್ತು ವರ್ಷ ಕಠಿಣ ಶಿಕ್ಷೆ

Thursday, November 25th, 2021
Ayesha Banu

ಮಂಗಳೂರು  : ಭಯೋತ್ಪಾದಕ ಸಂಘಟನೆಯ ಜತೆ ಸಂಪರ್ಕ ಹೊಂದಿ ಹಲವಾರು ಉಗ್ರರಿಗೆ ನೆರವು ನೀಡುತ್ತಿದ್ದ ಮಂಗಳೂರಿನ ದಂಪತಿಗೆ ಇದೀಗ 10 ವರ್ಷಗಳ ಶಿಕ್ಷೆಯಾಗಿದೆ. ಜುಬೇರ್ ಹುಸೇನ್ (42), ಆತನ ಪತ್ನಿ ಆಯೇಷಾ ಬಾನು (39) ಶಿಕ್ಷೆಗೊಳಗಾದವರು. ಇವರು ನಿಷೇಧಿತ ಸಿಮಿ, ಇಂಡಿಯನ್ ಮುಜಾಹಿದೀನ್ ಸಂಘಟನೆಗಳಿಗೆ ಹಣ ಭಾರತದಿಂದ ಹಣ ಸಂಗ್ರಹಿಸಿ ಕಳುಹಿಸಿಕೊಡುತ್ತಿದ್ದರು. ಮಂಗಳೂರು ಮೂಲದ ಈ ದಂಪತಿ ಛತ್ತೀಸ್‌ಗಢ ರಾಯಪುರದಲ್ಲಿ ಸದ್ಯ ವಾಸವಾಗಿದ್ದರು. ಆರಂಭದಲ್ಲಿ ಮಂಗಳೂರಿನಿಂದಲೇ ತಮ್ಮ ಕುಕೃತ್ಯ ನಡೆಸುತ್ತಿದ್ದ ಇವರು ನಂತರ ರಾಯಪುರದಲ್ಲಿ ಸಿಕ್ಕಿಬಿದ್ದಿದ್ದರು. ಇವರ ಜತೆ […]

ಈಶ್ವರಮಂಗಲ : ಪೋಟೋಗ್ರಾಫರ್‌ ಒಬ್ಬರನ್ನು ಹತ್ಯೆಗೈದು ಅರಣ್ಯ ಇಲಾಖೆಗೆ ಸೇರಿದ ಜಮೀನಿನಲ್ಲಿ ಹೂತು ಹಾಕಿದ ಮಾವ

Wednesday, November 24th, 2021
Jagadish Shetty

ಸುಳ್ಯ  : ಪೋಟೋಗ್ರಾಫರ್‌ ಒಬ್ಬರನ್ನು ಹತ್ಯೆಗೈದು ಅರಣ್ಯ ಇಲಾಖೆಗೆ ಸೇರಿದ ಜಮೀನಿನಲ್ಲಿ ಹೂತು ಹಾಕಿರುವ ಘಟನೆ, ನಾಪತ್ತೆಯಾದ ಐದು ದಿನಗಳ ಬಳಿಕ  ಸುಳ್ಯ ತಾಲೂಕಿನ ಈಶ್ವರಮಂಗಲದಲ್ಲಿ  ನ.24 ರಂದು ಬೆಳಕಿಗೆ ಬಂದಿದೆ. ಕೊಲೆಯಾದವರನ್ನು  ಮಂಗಳೂರು ಹೊರವಲಯ ಕೂಳೂರು ಸಮೀಪದ ಶಿವನಗರ ನಿವಾಸಿ ದಿ. ಶಂಭು ಶೆಟ್ಟಿಯವರ ಪುತ್ರ , ಪ್ರಸ್ತುತ ಮೈಸೂರಿನ ಸುಬ್ರಹ್ಮಣ್ಯ ನಗರ ನಿವಾಸಿ ಯಾಗಿರುವ  ಜಗದೀಶ್ ಶೆಟ್ಟಿ (58ವ) ಎಂದು ಗುರುತಿಸಲಾಗಿದೆ. ಜಗದೀಶ್ ಶೆಟ್ಟಿ ತನ್ನ ಕೃಷಿ ಜಮೀನು ನೋಡಲು ಮೈಸೂರಿನಿಂದ ಪುತ್ತೂರಿಗೆ ಆಗಮಿಸಿ  […]

7 ಅಭ್ಯರ್ಥಿಗಳ 13 ನಾಮಪತ್ರಗಳು ಕ್ರಮಬದ್ಧ, ಹಿಂಪಡೆಯಲು ನ.26 ರ ವರೆಗೆ ಅವಕಾಶ

Wednesday, November 24th, 2021
nomination Fie

ಮಂಗಳೂರು  :  ಕರ್ನಾಟಕ ವಿಧಾನ ಪರಿಷತ್ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಮತಕ್ಷೇತ್ರದ ಚುನಾವಣೆಗೆ ಸ್ಪರ್ಧೆ ಬಯಸಿ ಒಟ್ಟು 8 ಮಂದಿ ಅಭ್ಯರ್ಥಿಗಳು 14 ನಾಮಪತ್ರ ಸಲ್ಲಿಸಿದ್ದರು. ಅವುಗಳ ಪರಿಶೀಲನೆ ನ.24ರ ಬುಧವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿಯ ಸಭಾಂಗಣದಲ್ಲಿ ನಡೆಯಿತು. ಅವುಗಳಲ್ಲಿ 13 ನಾಮಪತ್ರಗಳು ಕ್ರಮಬದ್ಧವಾಗಿದ್ದು, ಒಬ್ಬರು ಪಕ್ಷೇತರ ಅಭ್ಯರ್ಥಿಯ ನಾಮಪತ್ರ ತಿರಸ್ಕತಗೊಂಡಿದೆ. 13 ನಾಮಪತ್ರಗಳು ಕ್ರಮಬದ್ಧ: ಸಲ್ಲಿಕೆಯಾಗಿದ್ದ ಒಟ್ಟು 14 ನಾಮಪತ್ರಗಳಲ್ಲಿ 7 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. ಅದರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ […]

8 ವರ್ಷದ ಬಾಲಕಿಯ ಅತ್ಯಾಚಾರ ಗೈದು ಚರಂಡಿಗೆಸೆದ ನಾಲ್ವರ ಬಂಧನ

Wednesday, November 24th, 2021
Parari Murder

ಮಂಗಳೂರು : ಉಳಾಯಿಬೆಟ್ಟು ಪರಾರಿ ಎಂಬಲ್ಲಿನ ಟೈಲ್ಸ್ ಫ್ಯಾಕ್ಟರಿಯ ಆವರಣದಲ್ಲಿ ರವಿವಾರ ನಡೆದ 8 ವರ್ಷದ ಬಾಲಕಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆಗೈದಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ. ಜಯ್ ಸಿಂಗ್(21), ಮುಕೇಶ್ ಸಿಂಗ್(20), ಮನೀಶ್ ತಿರ್ಕಿ(33) ಹಾಗೂ ಮುನೀಮ್ ಸಿಂಗ್ (20) ಬಂಧಿತ ಆರೋಪಿಗಳಾಗಿದ್ದಾರೆ. ಜಯ್ ಸಿಂಗ್, ಮುಕೇಶ್ ಸಿಂಗ್ ಹಾಗೂ ಮನೀಶ್ ತಿರ್ಕಿ ಪರಾರಿಯಲ್ಲಿರುವ […]

ಮಂಗಳೂರು ಸ್ಮಾರ್ಟ್ ಸಿಟಿ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ

Wednesday, November 24th, 2021
ACB raid

ಮಂಗಳೂರು : ಆದಾಯಕ್ಕಿಂತ ಹೆಚ್ಚಿನ ಆರೋಪ ಹೊತ್ತಿರುವ ಮಂಗಳೂರು ಸ್ಮಾರ್ಟ್ ಸಿಟಿ ಅಧಿಕಾರಿಯಾಗಿರುವ ಕೆ.ಎಸ್.ಲಿಂಗೇಗೌಡ ಅವರ ಮನೆ ಮೇಲೆ ಇಂದು ಮುಂಜಾನೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಉರ್ವದಲ್ಲಿರುವ ಲಿಂಗೇ ಗೌಡ ಮನೆಗೆ ಇಂದು ಬೆಳಗ್ಗೆ ದಾಳಿ ಮಾಡಿದ ಏಳು ಮಂದಿ ಎಸಿಬಿ ಅಧಿಕಾರಿಗಳ ತಂಡ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಮಂಗಳೂರು ಮಹಾನಗರ ಪಾಲಿಕೆಯ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿದ್ದ  ಅವರು ಹಲವು ವರ್ಷಗಳಿಂದ ಮಂಗಳೂರಿನಲ್ಲೇ ಬೇರೆ ಬೇರೆ ಹುದ್ದೆಯಲ್ಲಿ  ಸೇವೆ ನಿರ್ವಹಿಸಿದ್ದರು, ಲಿಂಗೇಗೌಡರ ವಿರುದ್ಧ […]

ಮುರುಡೇಶ್ವರ ಶಿವನ ವಿಗ್ರಹ ದ ಶಿರವನ್ನು ಕತ್ತರಿಸಿದ ಫೋಟೊ ವೈರಲ್, ದೇವಸ್ಥಾನದ ಭದ್ರತೆ ಇನ್ನಷ್ಟು ಬಿಗಿ

Tuesday, November 23rd, 2021
Murudeshwara-Shiva-Statue

ಭಟ್ಕಳ  : ಅತ್ಯಂತ ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಕರ್ನಾಟಕದ ಪ್ರಸಿದ್ಧ ಯಾತ್ರಾತಾಣಗಳಲ್ಲಿ ಒಂದಾದ ಉತ್ತರ ಕನ್ನಡದ ಮುರುಡೇಶ್ವರ ದ ಬೃಹತ್ ಈಶ್ವರ ಪ್ರತಿಮೆ ಚಿತ್ರ  ಕುಖ್ಯಾತ ಉಗ್ರ ಸಂಘಟನೆಯ ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ಇದು ಉಗ್ರ ಸಂಘಟನೆಯ ದಾಳಿ ಸಂಚು ಎಂದು ಹೇಳಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಮುರುಡೇಶ್ವರ ಶಿವನ ವಿಗ್ರಹ ದ ಶಿರವನ್ನು ಕತ್ತರಿಸಿದಂತೆ ಎಡಿಟ್ ಮಾಡಲಾದ ಫೋಟೊವನ್ನು ಉಗ್ರ ಸಂಘಟನೆ ‘ಐಸಿಸ್’(ISIS)ನ ಪತ್ರಿಕೆಯಲ್ಲಿ ಪ್ರಕಟಿಸಲಾಗಿದ್ದು, ಈ ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ […]

ಪತ್ರಕರ್ತನ ಮೇಲೆ ಹಲ್ಲೆ, ದ.ಕ. ಪತ್ರಕರ್ತರ ಸಂಘದಿಂದ ಪೊಲೀಸ್ ಆಯುಕ್ತರಿಗೆ ಮನವಿ

Tuesday, November 23rd, 2021
Journalist-Attack

ಮಂಗಳೂರು : ಖಾಸಗಿ ಟಿವಿ ವಾಹನಿಯೊಂದರ ಪತ್ರಕರ್ತರ ಮೇಲೆ ನಿನ್ನೆ ನಡೆದ  ಹಲ್ಲೆಯನ್ನು ಖಂಡಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ  ಇಂದು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ಪತ್ರಕರ್ತನ ಮೇಲೆ ಹಲ್ಲೆ ಮಾಡಿರುವ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಹಾಗೂ ಈ ರೀತಿಯ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮನವಿ ಪತ್ರವನ್ನು ಪತ್ರಕರ್ತರ ನಿಯೋಗವು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರಿಗೆ ಸಲ್ಲಿಸಿತು. […]

ಕನಕದಾಸ ಸಾಹಿತ್ಯದ ವೈಚಾರಿಕತೆಯ ಚರ್ಚೆ ನಡೆಯಲಿ: ಎ.ವಿ ನಾವಡ

Tuesday, November 23rd, 2021
kanaka-Jayanthi

ಮಂಗಳೂರು: ಕನಕ ಸಾಹಿತ್ಯವನ್ನು ಕನ್ನಡ ಸಾಹಿತ್ಯದ ಸೊತ್ತು ಎಂದು ಮಾತ್ರ ಭಾವಿಸದೆ ವೈಚಾರಿಕ ಮಾದರಿ ಎಂದು ಭಾವಿಸಿ, ಚರಿತ್ರೆ ಅಧ್ಯಯನ ಸೇರಿದಂತೆ ಇತರ ಅಧ್ಯಯನ ಶಿಸ್ತುಗಳ ಮೂಲಕ ಕನಕ ಸಾಹಿತ್ಯವನ್ನು ಜಗತ್ತಿನುದ್ದಕ್ಕೂ ವಿಸ್ತರಿಸುವ ಕಾರ್ಯ ಆಗಬೇಕು ಎಂದು ವಿದ್ವಾಂಸ ಪ್ರೊ.ಎ.ವಿ ನಾವಡ ಅಭಿಪ್ರಾಯಪಟ್ಟಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ಕನಕದಾಸ ಅಧ್ಯಯನ ಪೀಠ ಹಾಗೂ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯ ಸಭಾಂಗಣದಲ್ಲಿ ಮಂಗಳವಾರ ನಡೆದ ಕನಕ ಜಯಂತಿ ಪ್ರಯುಕ್ತ ವಿಶೇಷ ಉಪನ್ಯಾಸ ಮತ್ತು […]

ಖಾಸಗಿ ಟಿವಿ ಚಾನೆಲ್ ವರದಿಗಾರನ ಮೇಲೆ ವಕೀಲರಿಂದ ಹಲ್ಲೆ

Tuesday, November 23rd, 2021
yadunandan

ಮಂಗಳೂರು : ಖಾಸಗಿ ಟಿವಿ ಚಾನೆಲ್ ಒಂದರ ವರದಿಗಾರನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ವಕೀಲ ಯದುನಂದನ್ ಎಂದು ಗುರುತಿಸಲಾಗಿದೆ. ಹಲ್ಲೆಗೊಳಗಾದ ಸುಖ್ ಪಾಲ್ ಪೊಳಲಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಸೋಮವಾರ ಸಂಜೆಯ ವೇಳೆ ಘಟನೆ ನಡೆದಿದ್ದು, ಉರ್ವಾ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದ್ದು, ಠಾಣೆಯಲ್ಲಿ ಪ್ರತಿದೂರು ಕೂಡ ದಾಖಲಾಗಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ. ಮಂಗಳೂರು […]