ಪಂಚಾಯತ್ ರಾಜ್ ಜಿಲ್ಲಾಮಟ್ಟದ ಜಾಗೃತಿ ಕಾರ್ಯಕ್ರಮ.

Monday, October 4th, 2010
ಪಂಚಾಯತ್ ರಾಜ್ ಜಿಲ್ಲಾಮಟ್ಟದ ಜಾಗೃತಿ ಕಾರ್ಯಕ್ರಮ

ಮಂಗಳೂರು : ಪಂಚಾಯತ್ ರಾಜ್ ಕುರಿತು ಗ್ರಾಮ ಸಭಾ ವರ್ಷಾಚರಣೆ 2009-10 ರ ಅಂಗವಾಗಿ ಜಿಲ್ಲಾ ಮಟ್ಟದ ಜಾಗೃತಿ ಕಾರ್ಯಕ್ರಮ ದ.ಕ ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ಇಂದು ಬೆಳಿಗ್ಗೆ 11.30ಕ್ಕೆ ನಡೆಯಿತು. ಜಾಗೃತಿ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ. ಸಂತೋಷ್ ಕುಮಾರ್ ಭಂಡಾರಿ ದೀಪಬೆಳಗಿಸುವುದರ ಮೂಲಕ ನೆರವೇರಿಸಿದರು. ಪಂಚಾಯತ್ ರಾಜ್ ನ ವಿವಿಧ ಮಜಲುಗಳ ಬಗ್ಗೆ ಜನರಿಗೆ ತಿಳುವಳಿಕೆ ಇದ್ದರೆ, ಸರಕಾರ ರೂಪಿಸುವ ವಿವಿಧ ಸವಲತ್ತುಗಳನ್ನು ಪಡೆಯಲು ಸಾಧ್ಯ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿದ […]

ಪಾಂಡೇಶ್ವರದಲ್ಲಿ ಸುಸಜ್ಜಿತ ಅಗ್ನಿಶಾಮಕ ಕೇಂದ್ರ : ಜೀಜಾ ಮಾಥವನ್ ಹರಿಸಿಂಗ್.

Monday, October 4th, 2010
ಜೀಜಾ ಮಾಥವನ್ ಹರಿಸಿಂಗ್ ಪಾಂಡೇಶ್ವರ ಅಗ್ನಿಶಾಮಕ ಕೇಂದ್ರಕ್ಕೆ ಭೇಟಿ

ಮಂಗಳೂರು: 1942ರಲ್ಲಿ ಸ್ಥಾಪಿತವಾದ ಮಂಗಳೂರಿನ ಪಾಂಡೇಶ್ವರ ಅಗ್ನಿಶಾಮಕ ಕೇಂದ್ರವನ್ನು ಹೊಸ ವಿನ್ಯಾಸದೊಂದಿಗೆ 8 ಅಗ್ನಿಶಾಮಕ ವಾಹನಗಳನ್ನು ಇರಿಸುವಂತೆ ಇನ್ನು ಒಂದು ವರ್ಷದೊಳಗೆ ನವೀಕರಿಸಲಾಗುವುದು ಎಂದು ರಾಜ್ಯ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಅಗ್ನಿಶಾಮಕ ದಳ ಬೆಂಗಳೂರು ಇವರು ಹೇಳಿದರು. ಅವರು ಕದ್ರಿ ಅಗ್ನಿ ಶಾಮಕ ಕೇಂದ್ರಕ್ಕೆ ಬೇಟಿ ನೀಡಿದ ಬಳಿಕ, ಪಾಂಡೇಶ್ವರ ಅಗ್ನಿ ಶಾಮಕ ಕೇಂದ್ರಕ್ಕೆ ಭೇಟಿ ನೀಡಿದರು. ಅಲ್ಲಿ ಅಗ್ನಿ ಶಾಮಕ ಸಿಬ್ಬಂದಿಗಳಿಂದ ಗೌರವವಂದನೆ ಸ್ವೀಕರಿಸಿದ ಬಳಿಕ ಅಗ್ನಿ ಶಾಮಕ ಕೇಂದ್ರದ ಪರಿಶೀಲನೆ ನಡೆಸಿದರು. ಮಂಗಳೂರಿಗೆ […]

ಕಟ್ಟಡ ನಿರ್ಮಾಣ ಹಾಗೂ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಿಟಿಯು ಮನವಿ

Monday, October 4th, 2010
ಕಟ್ಟಡ ನಿರ್ಮಾಣ ಕಾರ್ಮಿಕರ ಪ್ರತಿಭಟನೆ

ಮಂಗಳೂರು : ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರಿಗೆ ಸಿಗುವ ಪಿಂಚಣಿಯನ್ನು ಮುನ್ನೂರರಿಂದ ಒಂದು ಸಾವಿರಕ್ಕೆ ಹೆಚ್ಚಿಸಬೇಕು, ಕಟ್ಟಡ ಕಾರ್ಮಿಕರ ಮಕ್ಕಳು ಎಸ್.ಎಸ್.ಎಲ್.ಸಿ ನಂತರದ ವಿದ್ಯಾಬ್ಯಾಸಕ್ಕೆ ವಿದ್ಯಾರ್ಥಿ ವೇತನ ನೀಡಬೇಕು, ಕಟ್ಟಡ ನಿರ್ಮಾಣ ಕೆಲಸಗಳಿಗೆ ಬೇಕಾಗುವ ಸಾಮಾಗ್ರಿಗಳ ಖರೀದಿಗೆ, ಸಾಲ ನೀಡುವ ಬದಲು ಸಹಾಯಧನ ನೀಡಬೇಕು ಎಂಬ ವಿವಿಧ ಬೇಡಿಕೆಗಳನ್ನು ಮುಂದಿಟ್ಟು, ಬೆಂದೂರ್ ವೆಲ್ ನಲ್ಲಿರುವ ಸಹಾಯಕ ಕಾರ್ಮಿಕ ಆಯುಕ್ತರ ಕಛೇರಿಯ ಮುಂಭಾಗದಲ್ಲಿ ಇಂದು ಬೆಳಿಗ್ಗೆ ಸಿಐಟಿಯು ಸಂಘಟನೆ, ಬೃಹತ್ ಪ್ರತಿಭಟನಾ ರ್ಯಾಲಿಯನ್ನು ನಡೆಸಿತು. ಜ್ಯೋತಿ ಮಹಿಳಾ […]

ಮಂಗಳೂರಿನಾದ್ಯಂತ ಗಾಂಧೀ ಜಯಂತಿ ಆಚರಣೆ

Saturday, October 2nd, 2010
ಮಂಗಳೂರಿನಾದ್ಯಂತ ಗಾಂಧೀ ಜಯಂತಿ ಆಚರಣೆ

ಮಂಗಳೂರು : ಭಾರತ ಸೇವಾದಳದ  ಜಿಲ್ಲಾ ಸಮಿತಿ ವತಿಯಿಂದ  ಪುರಭವನದಲ್ಲಿ  ಗಾಂಧಿ ಜಯಂತಿಯನ್ನು ಆಚರಿಸಲಾಯಿತು. ಜ್ಯೋತಿ ವೃತ್ತದಿಂದ ಮೆರವಣಿಗೆಯಲ್ಲಿ ಬಂದ ವಿದ್ಯಾರ್ಥಿಗಳು ಹಾಗೂ ಗಣ್ಯರು ಪುರಭವನದ ಮುಂಭಾಗದ ಗಾಂಧಿ ಪ್ರತಿಮೆಗೆ ಹಾರಾರ್ಪಣೆ ಮೂಲಕ ಗೌರವ ಸಲ್ಲಿಸಿದರು. ಸಂಸದ ನಳಿನ್ ಕುಮಾರ್ ಕಟೀಲು, ಡಿ.ಸಿ ಪೊನ್ನುರಾಜ್, ಪೊಲೀಸ ಕಮಿಷನರ್ ಸೀಮಂತ ಕುಮಾರ ಸಿಂಗ್, ದ.ಕ ಎಸ್.ಪಿ,  ಶಾಸಕ ಯುಟಿ ಖಾದರ್,   ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ , ಸುಧಾಕರ ರಾವ್ ಪೇಜಾವರ್ ಮತ್ತಿತರರುಗಾಂಧೀ ಪ್ರತಿಮೆಗೆ ಹಾರಾರ್ಪಣೆ ಗೈದು […]

ದಂಡುಪಾಳ್ಯ ಗ್ಯಾಂಗ್ ನ 11 ಮಂದಿಗೆ ಮರಣದಂಡನೆ

Friday, October 1st, 2010
ದಂಡುಪಾಳ್ಯ ಗ್ಯಾಂಗ್

ಬೆಂಗಳೂರು : ವಿಚಿತ್ರ ರೀತಿಯಲ್ಲಿ ಕೊಲೆ, ದರೋಡೆ, ಅತ್ಯಾಚಾರ ವನ್ನು ನಡೆಸುತ್ತಿದ್ದ ದಂಡುಪಾಳ್ಯ ಗುಂಪಿನ 11 ಮಂದಿಗೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಚ್.ಆರ್.ಶ್ರೀನಿವಾಸ್  ರವರು ಗುರುವಾರ ಮರಣದಂಡನೆ ಶಿಕ್ಷೆ ವಿಧಿಸಿದ್ದಾರೆ. ಕೃಷ್ಣ, ಹನುಮ ಅಲಿಯಾಸ್ ದೊಡ್ಡಹನುಮ, ಮುನಿಕೃಷ್ಣ, ವೆಂಕಟರಮಣ, ತಿಮ್ಮ ಅಲಿಯಾಸ್ ಕೋತಿ ತಿಮ್ಮ, ವೆಂಕಟೇಶ್ ಅಲಿಯಾಸ್ ಚಂದ್ರ, ಮುನಿಕೃಷ್ಣ ಅಲಿಯಾಸ್ ಕೃಷ್ಣ, ನಲ್ಲ ತಿಮ್ಮ ಅಲಿಯಾಸ್ ತಿಮ್ಮ, ಚಿಕ್ಕಮುನಿಯಪ್ಪ ಅಲಿಯಾಸ್ ಮುನಿಯಪ್ಪ, ಕ್ರಿಸಂದು, ಲಕ್ಷ್ಮಿ ಮರಣದಂಡನೆಗೆ ಒಳಗಾದವರು. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ 34ನೇ ವಿಶೇಷ ನ್ಯಾಯಾಲಯದ […]

ಲೋಕಾಯುಕ್ತ ಬಲೆಗೆ ಬಿದ್ದ ಬಿಬಿಎಂಪಿ ಸದಸ್ಯ

Friday, October 1st, 2010
ಲೋಕಾಯುಕ್ತ ಬಲೆಗೆ ಬಿದ್ದ ಬಿಬಿಎಂಪಿ ಸದಸ್ಯ

ಬೆಂಗಳೂರು :  ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪುತ್ರ, ಬಿಬಿಎಂಪಿ ಸದಸ್ಯ ಜಗದೀಶ್ ನಾಯ್ಡು ಕೆಐಎಡಿಬಿ ಪ್ರಕರಣದ ಸಾಕ್ಷಿದಾರೊಬ್ಬರಿಗೆ ಗಾಂಧಿನಗರದ ಕಚೇರಿಯಲ್ಲಿ ಒಂದು ಲಕ್ಷ ರೂಪಾಯಿ ಲಂಚ ನೀಡುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಗುರುವಾರ ನಡೆದಿದೆ. ಲೋಕಾಯುಕ್ತ ಪೊಲೀಸರು ದಿಢೀರನೆ ನಡೆಸಿದ ಕಾರ್ಯಾಚರಣೆಯಲ್ಲಿ ಕಟ್ಟಾ ಜಗದೀಶ್ ನಾಯ್ಡು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವುದು ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ರಾಜಕೀಯ ಭವಿಷ್ಯದ ಮೇಲೆ ಪರಿಣಾಮ ಬೀರಿದೆ. ಬುಧವಾರ ಬಿಬಿಎಂಪಿ ಸಭೆಯಲ್ಲಿ  ಜಗದೀಶ್ ನಾಯ್ಡುವನ್ನು […]

ಅಯೋದ್ಯೆಯ ವಿವಾದಿತ ಸ್ಥಳದ ತೀರ್ಪು ಅಲಹಾಬಾದ್ ಹೈಕೋರ್ಟಿನಿಂದ ಪ್ರಕಟ

Thursday, September 30th, 2010
ಅಲಹಾಬಾದ್ ಹೈಕೋರ್ಟ್

ಲಖನೌ  : ರಾಮಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ವಿವಾದದ ತೀರ್ಪು ಹೊರಬಿದ್ದಿದೆ. 60 ವರ್ಷಗಳ ವಿವಾದಿತ 2.7 ಎಕರೆ ಭೂಮಿಯನ್ನು  ಮೂರು ವಿಭಾಗಗಳನ್ನಾಗಿ ಮಾಡಿ ಮೂರು ಅರ್ಜಿದಾರರಿಗೆ ಹಂಚಲು  ಅಲಹಾಬಾದ್ ಹೈಕೋರ್ಟಿನ ಮೂರು ನ್ಯಾಯ ಮೂರ್ತಿಗಳ ಪೀಠ ಸೂಚಿಸಿದೆ. ರಾಮಲಲ್ಲಾನ ವಿಗ್ರಹ ಇರುವ ಇರುವ ಸ್ಥಳ ರಾಮಮಂದಿರ ನಿರ್ಮಾಣಕ್ಕೆ ಬಿಡಬೇಕು ಇನ್ನುಳಿದ ಒಂದು ಭಾಗವನ್ನು ಸುನ್ನಿ ವಕ್ಫ್ ಮಂಡಳಿ ಮತ್ತು  ಮೂರನೇ ಒಂದು ಭಾಗವನ್ನು ನಿರ್ಮೋಹಿ ಅಖಾಡಕ್ಕೆ ನೀಡಬೇಕು ಎಂದು ಹೇಳಿದೆ. ನ್ಯಾಯಮೂರ್ತಿಗಳಾದ ಸಿಬಘತ್ ಉಲ್ಲಾ ಖಾನ್, […]

ಅಯೋಧ್ಯೆಯ ಐತಿಹಾಸಿಕ ತೀರ್ಪಿಗಾಗಿ ಕಾತರಗೊಂಡ ದೇಶದ ಜನತೆ

Thursday, September 30th, 2010
ಅಯೋಧ್ಯೆಯ ಐತಿಹಾಸಿಕ ತೀರ್ಪು

ನವ ದೆಹಲಿ : ಹದಿನೆಂಟು ವರ್ಷದ ಹಿಂದೆ ನೆಲ ಸಮ ಗೊಂಡ ಅಯೋಧ್ಯೆಯ ವಿವಾದಿತ ರಾಮಜನ್ಮಭೂಮಿ-ಬಾಬ್ರಿ ಮಸೀದಿಗೆ ಸಂಬಧಿಸಿದ ಪ್ರಕರಣಕ್ಕೆ ಇಂದು ಅಲಹಾಬಾದ್‌ ನ್ಯಾಯಾಲಯ ತೀರ್ಪು ನೀಡಲಿದೆ. ಈ  ಐತಿಹಾಸಿಕ ತೀರ್ಪಿಗಾಗಿ  ದೇಶದ ಜನತೆ ಕಾತರರಾಗಿದ್ದಾರೆ. ಅಲಹಾಬಾದ್‌ನ ಲಕ್ನೋ ಪೀಠದ ನ್ಯಾಯಮೂರ್ತಿ ಧರಮ್ ವೀರ್ ಶರ್ಮಾ, ಎಸ್‌.ಯು ಖಾನ್ ಹಾಗೂ ಸುಧೀರ್ ಅಗರ್‌ವಾಲ್ ತೀರ್ಪು ಪ್ರಕಟಿಸಲಿದ್ದು,  ಈ ಹಿನ್ನೆಲೆಯಲ್ಲಿ ಭಾರಿ ಬಿಗಿ ಭದ್ರತೆಯನ್ನು ವಹಿಸಲಾಗಿದೆ. ನ್ಯಾಯಾಲಯದ ಆವರಣದ ಸುತ್ತಲಿನ ಪ್ರದೇಶಕ್ಕೆ ನಿರ್ಭಂಧ ಹೇರಲಾಗಿದೆ. ಹಿಂಸಾಚಾರ ಭುಗಿಲೇಳುವ ಸಾಧ್ಯತೆಗಳಿಂದಾಗಿ […]

ಅಯೋಧ್ಯೆಯ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ತೀರ್ಪು ಸೆಪ್ಟೆಂಬರ್ 30 ಕ್ಕೆ

Tuesday, September 28th, 2010
ರಾಮ ಜನ್ಮಭೂಮಿ - ಬಾಬ್ರಿ ಮಸೀದಿ

ನವದೆಹಲಿ : ಅಯೋಧ್ಯೆಯ ರಾಮ ಜನ್ಮಭೂಮಿ – ಬಾಬ್ರಿ ಮಸೀದಿ ತೀರ್ಪು ಮುಂದೂಡಲು ರಮೇಶ್ ಚಂದ್ರ ತ್ರಿಪಾಠಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ತ್ರಿಸದಸ್ಯ ವಿಶೇಷ ಪೀಠವು ಸೆಪ್ಟೆಂಬರ್ 30ರಂದು ಗುರುವಾರ ತನ್ನ ಮಹತ್ವದ ತೀರ್ಪನ್ನು ಪ್ರಕಟಿಸಲಿದೆ. ಸೆಪ್ಟೆಂಬರ್ 24ರಂದು ಅಲಹಾಬಾದ್ ಹೈಕೋರ್ಟ್ ಪ್ರಕಟಿಸಬೇಕಿದ್ದ ತೀರ್ಪಿನ ತಾತ್ಕಾಲಿಕ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತೆರವುಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ, ಅಫ್ತಾಬ್ ಆಲಂ ಮತ್ತು ಕೆ.ಎಸ್. ರಾಧಾಕೃಷ್ಣನ್ ನೇತೃತ್ವದ ಸರ್ವೋಚ್ಚ ನ್ಯಾಯಾಲಯದ […]

ವೈಶಾಲಿ ಕಾಸರವಳ್ಳಿ ಅಂತಿಮ ಯಾತ್ರೆ

Tuesday, September 28th, 2010
ವೈಶಾಲಿ ಕಾಸರವಳ್ಳಿ

ಬೆಂಗಳೂರು  : ಕನ್ನಡ ಚಿತ್ರರಂಗದಲ್ಲಿ ಬೆಳ್ಳಿ ಪರದೆ ಮತ್ತು  ಕಿರುತೆರೆ ಲೋಕಕ್ಕೆ ಅಪಾರ ಸೇವೆ ಸಲ್ಲಿಸಿದ ಹಿರಿಯ ನಟಿ  ವೈಶಾಲಿ ಕಾಸರವಳ್ಳಿ ಅವರ ಅಂತ್ಯಸಂಸ್ಕಾರ ಇಂದು ಸಂಜೆ ನಾಲ್ಕು ಗಂಟೆಗೆ ಬನಶಂಕರಿಯ ಚಿತಾಗಾರದಲ್ಲಿ ನಡೆಯಲಿದೆ. ವೈಶಾಲಿ ಕಾಸರವಳ್ಳಿ ದೀರ್ಘ ಕಾಲದ ಅನಾರೋಗ್ಯದಿಂದ ಚೇತರಿಸದೆ ಸೋಮವಾರ ನಿಧನರಾಗಿದ್ದಾರೆ. ರಂಗಭೂಮಿಯಲ್ಲಿ ಬಹಳಷ್ಟು ಸಾಧನೆ ಮಾಡಿದ್ದ ವೈಶಾಲಿ ಕಾಸರವಳ್ಳಿ ನಿರ್ದೇಶಕಿ, ವಸ್ತ್ರವಿನ್ಯಾಸಕಿ ನಟಿಯೂ ಆಗಿದ್ದರು, ಪತಿ, ಖ್ಯಾತ ನಿರ್ದೇಶಕ ಗಿರೀಶ ಕಾಸರವಳ್ಳಿ, ಪುತ್ರಿ ಅನನ್ಯ ಹಾಗೂ ಪುತ್ರ ಅಪೂರ್ವ ಅವರನ್ನು ಅಗಲಿದ್ದಾರೆ. […]