ಮಾಸಾವಧಿಯ ಯೋಗ ಶಿಬಿರ ಸಮಾರೋಪ

Tuesday, October 19th, 2021
Yoga

ಮಂಗಳೂರು : ಜವಾಹರ್ ನವೋದಯ ವಿದ್ಯಾಲಯ, ಮುಡಿಪು ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಯೋಗ ವಿಜ್ಞಾನ ವಿಭಾಗಗಳು ಜಂಟಿಯಾಗಿ ವಿದ್ಯಾಲಯದಲ್ಲಿ ಆಯೋಜಿಸಿದ್ದ ತಿಂಗಳಾವಧಿಯ ಯೋಗ ಶಿಬಿರದ ಸಮಾರೋಪ ಸಮಾರಂಭ ಇತ್ತೀಚೆಗೆ ನಡೆಯಿತು. ಮುಖ್ಯ ಅತಿಥಿ ಮಂಗಳೂರು ವಿವಿ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ, ಜೀವನದಲ್ಲಿ ಉನ್ನತ ಸ್ಥಾನ ತಲುಪಲು ಸೂಕ್ತ ಮನೋಭಾವ, ಶಿಸ್ತುಬದ್ಧ ಜೀವನ ಅಗತ್ಯ. ಇದನ್ನು ಸಾಧಿಸಲು ಯೋಗ ಸಹಕಾರಿ, ಎಂದರು. ಮಾನವ ಪ್ರಜ್ಞೆ ಮತ್ತು ಯೋಗ ವಿಜ್ಞಾನ ವಿಭಾಗದ ಮುಖ್ಯಸ್ಥ ಕೆ ಕೃಷ್ಣ ಶರ್ಮ, […]

ಕಣ್ಣಿಗೆ ಬಟ್ಟೆ ಕಟ್ಟಿ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವೃದ್ಧ

Monday, October 18th, 2021
Muthappa Shetty

ಉಪ್ಪಿನಂಗಡಿ : ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ವೃದ್ಧನೋರ್ವ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಗೇರುಕಟ್ಟೆಯ ಪರಪ್ಪು ನಿವಾಸಿ ಮುತ್ತಪ್ಪ ಶೆಟ್ಟಿ (70) ಎಂದು ಗುರುತಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯಿಂದ ಉಪ್ಪಿನಂಗಡಿಗೆ ಬಸ್ಸಿನಲ್ಲಿ ಬಂದು ನೇತ್ರಾವತಿ ನದಿ ಸೇತುವೆ ಮೇಲಿಂದ ಮುತ್ತಪ್ಪ ಹಾರಿದ್ದಾರೆ. ತಕ್ಷಣ ಸ್ಥಳೀಯ ನಿವಾಸಿಗಳು ರಕ್ಷಣೆಗಾಗಿ ನದಿಗೆ ಹಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗವಷ್ಟರಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು […]

ಅಕ್ಟೋಬರ್ 25ರಿಂದ 1ರಿಂದ 5ನೇ ತರಗತಿ ಶಾಲೆ ಆರಂಭ

Monday, October 18th, 2021
school re open

ಮಂಗಳೂರು : ಕೊರೋನಾ ಮಹಾಮಾರಿಯಿಂದ ಮುಚ್ಚಲಾಗಿದ್ದ ಶಾಲೆಗಳ ಆರಂಭ ಕ್ರಮವಾಗಿ ನಡೆಯುತ್ತಿದ್ದು ಇದೀಗ ಅಕ್ಟೋಬರ್ 25ರಿಂದ 1ರಿಂದ 5ನೇ ತರಗತಿ ಶಾಲೆ ಆರಂಭ ಆಗಲಿದೆ. ರಾಜ್ಯದಲ್ಲಿ ಕೊರೋನಾ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳ ಆರಂಭಕ್ಕೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ನೀಡಿದ್ದರಿಂದ ಶಾಲೆ ಆರಂಭಿಸುವುದಕ್ಕೆ ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಇನ್ನು ಶಾಲೆಗಳ ಆರಂಭ ಕುರಿತಂತೆ ರಾಜ್ಯ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಅದರಂತೆ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರ ಅನುಮತಿ ಕಡ್ಡಾಯ. ಮಕ್ಕಳಿಗೆ ಶಾಲೆ ಹಾಜರಾತಿ ಕಡ್ಡಾಯವಿಲ್ಲ. ಶಿಕ್ಷಕರು ಮತ್ತು […]

ಮೀನಿನ ಖಾದ್ಯ ಕಿರು ಉದ್ದಿಮೆಗಳಿಗೆ 10 ಲಕ್ಷ ಸಹಾಯಧನ

Monday, October 18th, 2021
Fish chatni

ಮಂಗಳೂರು : ಆತ್ಮ ನಿರ್ಭರ ಭಾರತ ಅಭಿಯಾನದ ಭಾಗವಾಗಿ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ ಕಾರ್ಯಕ್ರಮದಡಿ ವೈಯಕ್ತಿಕ ಕಿರು ಉದ್ದಿಮೆಗಳಿಗೆ 10 ಲಕ್ಷ ರೂ.ಗಳ ಸಹಾಯಧನ ಪಡೆಯಲು ಅವಕಾಶವಿದೆ. ಯೋಜನೆಯಡಿ ಮೀನಿನ ಖಾದ್ಯಗಳಾದ ಚಟ್ನಿ ಪುಡಿ, ಉಪ್ಪಿನಕಾಯಿ, ಚಕ್ಕುಲಿ, ಸೆಂಡಿಗೆ, ಚಿಪ್ಸ್, ರೋಟಿ, ಇತ್ಯಾದಿಗಳನ್ನು ತಯಾರಿಸುವುದು, ಮೀನನ್ನು ಭಾಗಗಳಾಗಿ ಮಾಡಿ ಫಿಲ್ಲೆಟ್ಸ, ಸ್ಟೀಕ್ಸ್ ಮಾದರಿಯಲ್ಲಿ ಶೀತಲೀಕರಿಸಿ, ಮಾರಾಟ ಮಾಡುವುದು, ಮೀನನ್ನು ಉಪ್ಪು ಹಾಕಿ ಅಥವಾ ಉಪ್ಪಿಲ್ಲದೇ ಆಧುನಿಕ ರೀತಿಯಲ್ಲಿ ಒಣಗಿಸುವುದು ಹಾಗೂ ಇವುಗಳನ್ನು ಆಕರ್ಷಕ […]

ಅರ್ಥಪೂರ್ಣ ಕನ್ನಡ ರಾಜ್ಯೋತ್ಸವ ಆಚರಣೆಗೆ ಸಿದ್ದತೆ ಮಾಡಿಕೊಳ್ಳಲು ಜಿಲ್ಲಾಧಿಕಾರಿ ಸೂಚನೆ

Monday, October 18th, 2021
kannada Rajyotsava

ಮಂಗಳೂರು : ಜಿಲ್ಲೆಯಲ್ಲಿ ಕೋವಿಡ್ ಸೋಂಕು ತಹಬದಿಗೆ ಬಂದಿದೆ, ಆದರೆ, ಸಂಪೂರ್ಣವಾಗಿ ಹೋಗಿಲ್ಲ. ಈ ಅಂಶವನ್ನು ಪರಿಗಣನೆಗೆ ತೆಗೆದುಕೊಂಡು ಮುಂಬರುವ ನವೆಂಬರ್ ಒಂದರಂದು ಕನ್ನಡ ರಾಜ್ಯೋತ್ಸವವನ್ನು ಎಚ್ಚರಿಕೆ ಹಾಗೂ ಮುಂಜಾಗ್ರತಾ ಕ್ರಮಗಳನ್ನೊಳಗೊಂಡಂತೆ ಅರ್ಥಪೂರ್ಣವಾಗಿ ಆಚರಿಸಲು ಸಂಬಂಧಿಸಿದ ಅಧಿಕಾರಿಗಳು ಈಗಿನಿಂದಲೇ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಅವರು ಅ.18ರ ಸೋಮವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಕುರಿತಂತೆ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ […]

ತೌಡುಗೋಳಿ ಶ್ರೀ ದುರ್ಗಾ ದೇವಿ, ಅಯ್ಯಪ್ಪಸ್ವಾಮಿ ಕ್ಷೇತ್ರದಲ್ಲಿ ಆಯುಧಪೂಜೆ

Thursday, October 14th, 2021
Thoudugoli-Ayudhapooje

ಮಂಗಳೂರು : ತೌಡುಗೋಳಿ ಶ್ರೀ ದುರ್ಗಾ ದೇವಿ, ಅಯ್ಯಪ್ಪಸ್ವಾಮಿ ಕ್ಷೇತ್ರದಲ್ಲಿ ನಡೆದ ಆಯುಧಪೂಜೆಯಲ್ಲಿ  ಕರ್ನಾಟಕ ಸರಕಾರದ ಅರೆ ಅಲೆಮಾರಿ ಹಗೂ ಅಲೆಮಾರಿ ನಿಗಮದ ಅಧ್ಯಕ್ಷರಾದ ಕೆ ರವೀಂದ್ರ ಶೆಟ್ಟಿ ಉಳಿದೊಟ್ಟು ಭಾಗವಹಿಸಿದರು. ಕ್ಷೇತ್ರದ ಪ್ರಧಾನ ಅರ್ಚಕರಾದ ಗೋವಿಂದ ಗುರುಸ್ವಾಮಿ ಯವರು ವಾಹನಗಳಿಗೆ ಪೂಜೆ ನೆರವೇರಿಸಿದರು. ಈ ಸಂದರ್ಭ ಶಿವಪ್ರಸಾದ್ ತೌಡುಗೋಳಿ ಸಾಹಿತ್ಯದಲ್ಲಿ ಮೆಗಾ ಮೀಡಿಯಾ ಎಂಟರ್‌ ಟೈನ್‌ಮೆಂಟ್ಸ್‌ ನಿಮಿಸಿದ ಸಂತೋಷ್‌ ಪುಚ್ಚೇರ್‌ ಹಾಡಿದ ʼಕಣ್ಣ್‌ ನಿಲಿಕೆ ತುವೋಡು ಅಪ್ಪೆ ದುರ್ಗಾ ದೇವಿನ್‌ʼ ಹಾಡನ್ನು ಕರ್ನಾಟಕ ಸರಕಾರದ ಅರೆ […]

ಶ್ರೀ ಕ್ಷೇತ್ರ ತೌಡುಗೋಳಿ ʼಕಣ್ಣ್‌ ನಿಲಿಕೆ ತುವೋಡು ಅಪ್ಪೆ ದುರ್ಗಾ ದೇವಿನ್‌ʼ ಹಾಡು ರಿಲೀಸ್‌

Thursday, October 14th, 2021
Thoudugoli-Song

ಮಂಗಳೂರು : ವಿಜಯ ದಶಮಿಯ ಈ ಶುಭ ಸಂದರ್ಭದಲ್ಲಿ ತೌಡುಗೋಳಿ ಶ್ರೀ ದುರ್ಗಾದೇವಿ ಕ್ಷೇತ್ರದ ಕುರಿತಾದ ಭಕ್ತಿ ಪ್ರಧಾನ ಹಾಡು ಬಿಡುಗಡೆ ಮಾಡುವ ಅವಕಾಶ ಒದಗಿ ಬಂದಿರುವುದು ನನಗೆ ತಾಯಿ ದುರ್ಗಾದೇವಿ ಒದಗಿಸಿದ ಪುಣ್ಯ ಎಂದು ಕರ್ನಾಟಕ ಸರಕಾರದ ಅರೆ ಅಲೆಮಾರಿ ಹಾಗೂ ಅಲೆಮಾರಿ ನಿಗಮದ ಅಧ್ಯಕ್ಷರಾದ ಕೆ ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದರು. ಅವರು ಶಿವಪ್ರಸಾದ್ ತೌಡುಗೋಳಿ ಸಾಹಿತ್ಯದಲ್ಲಿ ಮೆಗಾ ಮೀಡಿಯಾ ಎಂಟರ್‌ ಟೈನ್‌ಮೆಂಟ್ಸ್‌ ನಿಮಿಸಿದ ಸಂತೋಷ್‌ ಪುಚ್ಚೇರ್‌ ಹಾಡಿದ ʼಕಣ್ಣ್‌ ನಿಲಿಕೆ ತುವೋಡು ಅಪ್ಪೆ […]

ದಸರಾ ಹೆಸರಲ್ಲಿ ಜನರ ತೆರಿಗೆ ಹಣ ಲೂಟಿ – ಸುನೀಲ್‌ ಕುಮಾರ್ ಬಜಾಲ್

Tuesday, October 12th, 2021
Dasara Protest

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯು ದಸರಾ ಹಬ್ಬಕ್ಕೆ ದಾರಿ ದೀಪಾಲಂಕಾರಕ್ಕಾಗಿ 38 ಲಕ್ಷ ಹಣವನ್ನು ಪೋಲು ಮಾಡುತ್ತಿರುವ ಹಿಂದೆ ಬಿಜೆಪಿ ಪಕ್ಷದ ವೋಟ್ ಬ್ಯಾಂಕ್ ರಾಜಕಾರಣವು ಅಡಗಿದೆ ಮಾತ್ರವಲ್ಲ ಇದು ಜನತೆಯ ತೆರಿಗೆಯ ಹಣವನ್ನು ದಸರಾ ಹೆಸರಲ್ಲಿ ಲೂಟಿ ಮಾಡಲು ಹೊರಟಿದೆ ಎಂದು ಸಿಪಿಐಎಂ ಪಕ್ಷದ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಇಂದು ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಮುಂಭಾಗದಲ್ಲಿ ಸಮಾನ ಮನಸ್ಕ ಸಂಘಟನೆ, ಪಕ್ಷಗಳ ಒಕ್ಕೂಟದ ಆಶ್ರಯದಲ್ಲಿ ನಡೆದ ಪ್ರತಿಭಟನೆಯನ್ನು […]

ಉಲ್ಲಾಳ ಉರೂಸ್ : ಕೋವಿಡ್ ಸ್ಥಿತಿ-ಗತಿ ಪರಿಶೀಲಿಸಿ, ಸರಕಾರದ ಅನುಮತಿ ಪಡೆದು ಕ್ರಮ-ಜಿಲ್ಲಾಧಿಕಾರಿ

Tuesday, October 12th, 2021
Uroos

ಮಂಗಳೂರು : ಕೋವಿಡ್-19 ಸೋಂಕಿನ ಮುಂಬರುವ ಸ್ಥಿತಿ ಗತಿಗಳನ್ನು ಪರಾಮರ್ಶಿಸಿ, ಸರಕಾರದ ಪೂರ್ವಾನುಮತಿ ತೆಗೆದುಕೊಂಡು ಈ ಬಾರಿ ಡಿಸೆಂಬರ್ 23 ರಿಂದ ಜನವರಿ 19 ರ ವರೆಗೆ ಉಲ್ಲಾಳ ಉರುಸ್ ನಡೆಸುವ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ತಿಳಿಸಿದರು. ಅವರು ಅ.12ರ ಮಂಗಳವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಉಲ್ಲಾಳ ಉರುಸ್ ಆಚರಣೆ ಸಂಬಂಧ ಪೂರ್ವಭಾವಿಯಾಗಿ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉರುಸ್ ಆಚರಣೆಗೆ ಸಂಬಂಧ ಇನ್ನೂ ಎರಡು ತಿಂಗಳ ಕಾಲಾವಕಾಶವಿದೆ, ಒಂದು ತಿಂಗಳ […]

ಕುದ್ರೋಳಿಗೆ ಸಿಎಂ ಭೇಟಿ: ಭದ್ರತಾ ಕಾರಣಗಳಿಗಾಗಿ ಮಧ್ಯಾಹ್ನ 3 ರಿಂದ ಸಂಜೆ 7 ಗಂಟೆಯ ವರೆಗೆ ಭಕ್ತರ ಪ್ರವೇಶಕ್ಕೆ ನಿರ್ಬಂಧ

Tuesday, October 12th, 2021
Kudroli Dasara

ಮಂಗಳೂರು : ನಗರದ ಕುದ್ರೋಳಿಯ ಗೋಕರ್ಣನಾಥೇಶ್ವರ ದೇವಾಲಯದಲ್ಲಿ ನಡೆಯುತ್ತಿರುವ ಮಂಗಳೂರು ದಸರಾ ಮಹೋತ್ಸವಕ್ಕೆ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಅ.13ರ ಬುಧವಾರ ಸಂಜೆ ಆಗಮಿಸುತ್ತಿದ್ದಾರೆ. ಭದ್ರತೆ ಹಾಗೂ ವಿಶೇಷ ತಯಾರಿಗಳನ್ನು ಕೈಗೊಳ್ಳಬೇಕಾದ ಹಿನ್ನಲೆಯಲ್ಲಿ ಅ.13ರ ಮಧ್ಯಾಹ್ನ 3 ರಿಂದ ಸಂಜೆ 7 ಗಂಟೆಯವರೆಗೆ ಆಗಮಿಸುವ ಭಕ್ತಾಧಿಗಳಿಗೆ ಅನಾನುಕೂಲವಾಗಲಿದೆ. ರಾತ್ರಿ 7 ರಿಂದ ಎಂದಿನಂತೆ ದರುಶನಕ್ಕೆ ಅವಕಾಶವಿದೆ. ಭದ್ರತಾ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ನಾಗರೀಕರು ಸಹಕರಿಸುವಂತೆ ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.