ಮಹಿಳೆಯಿದ್ದ ಕಾರಿನ ಟಯರ್ ಬದಲಿಸಿದ ಸಂಚಾರಿ ಠಾಣಾ ಪೊಲೀಸರು

Monday, July 26th, 2021
Tire-change

ಮಂಗಳೂರು: ಮಹಿಳೆ ಮತ್ತು ಮಗುವಿದ್ದ ಕಾರಿನ ಟಯರ್ ಪಂಕ್ಚರ್ ಆಗಿದ್ದು, ಇದನ್ನು ಗಮನಿಸಿದ ನಾಗುರಿ ಸಂಚಾರಿ ಠಾಣಾ ಪೊಲೀಸರು ಬೇರೆ ಟಯರ್ ಅಳವಡಿಸಿ ಮಾನವೀಯತೆ ಮೆರೆದರು. ಕುಂದಾಪುರ ಮೂಲದ ಮಹಿಳೆ ನಾಗುರಿ ಕಡೆಯಿಂದ ಮಂಗಳೂರು ನಗರದ ಕಡೆಗೆ ಎಳೆಯ ಮಗುವಿನ ಜೊತೆಗೆ ಕಾರಿನಲ್ಲಿ ತೆರಳುವ ಸಂದರ್ಭ ಪಂಪ್ವೆಲ್ ಬಳಿ ಟಯರ್ ಪಂಕ್ಚರ್ ಆಗಿತ್ತು. ಇದೇ ಸಂದರ್ಭ ಹೈವೇ ಪ್ಯಾಟ್ರಲ್ ಸ್ಥಳದಲ್ಲಿದ್ದು, ಮಹಿಳೆಯ ಅಸಹಾಯಕತೆಯನ್ನು ಗಮನಿಸಿದ ಸಂಚಾರಿ ಪೊಲೀಸರು ತಕ್ಷಣ ಕಾರಿನತ್ತ ಧಾವಿಸಿ ಟಯರನ್ನು ಬದಲಿಸಿ ಮಾನವೀಯತೆ ಮೆರೆದರು. […]

ಪ್ರಕೃತಿ ವಿಕೋಪದಿಂದ ನಷ್ಟ; ಶಾಸಕ ಡಾ.ಭರತ್ ಶೆಟ್ಟಿ ಪರಿಶೀಲನೆ; ರಸ್ತೆ ನಿರ್ಮಾಣಕ್ಕೆ ಜಾಗ ಬಿಟ್ಟುಕೊಡಲು ಮನವಿ

Monday, July 26th, 2021
Bharath-Shetty

ಮಂಗಳೂರು : ನಗರ ಉತ್ತರ ವಿಧಾನಸಭಾ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಕುಂಜತ್ತಬೈಲ್ ವಾರ್ಡಿನ ಅತ್ರೆಬೈಲ್ ಏರಿಯಾದಲ್ಲಿ ಭಾರೀ ಮಳೆಯ ಕಾರಣ ಫಲ್ಗುಣಿ ನದಿ ತೀರ ಪ್ರದೇಶದಲ್ಲಿ ಮಣ್ಣು ಕುಸಿದಿದ್ದು, ಕೃಷಿಭೂಮಿ ಹಾಗೂ ಮನೆಗಳಿಗೆ ಹಾನಿ ಸಂಭವಿಸಿತ್ತು. ಪ್ರಕೃತಿ ವಿಕೋಪದಿಂದ ನಷ್ಟಕ್ಕೊಳಗಾದ ಪ್ರದೇಶಗಳಿಗೆ ಶಾಸಕ ಡಾ.ವೈ ಭರತ್ ಶೆಟ್ಟಿ ಭೇಟಿ ನೀಡಿದರು. ಅತ್ರೆಬೈಲಿಗೆ ಹೋಗುವ ನಾಗರಿಕರಿಗೆ ಸೂಕ್ತವಾದ ರಸ್ತೆ ಇಲ್ಲ. ಇಲ್ಲಿ ಉತ್ತಮ ರಸ್ತೆಯನ್ನು ಮಾಡಲು ತಾವು ತಯಾರಿದ್ದು, ಜನರು ರಸ್ತೆಗೆ ಜಾಗ ಬಿಟ್ಟುಕೊಟ್ಟರೆ ರಸ್ತೆ ನಿರ್ಮಾಣಕ್ಕೆ ಆದಷ್ಟು […]

ಸಮಯಪ್ರಜ್ಞೆಯನ್ನು ತೋರಿದ ರೈಲಿನ ಚಾಲಕ ಸಿಬ್ಬಂದಿಗಳಿಗೆ ನಗದು ಬಹುಮಾನ ಘೋಷಣೆ

Sunday, July 25th, 2021
Railway Staffs

ಮಂಗಳೂರು : ರೈಲು ಸಂಖ್ಯೆ 01134 ಮಂಗಳೂರು ಜಂಕ್ಷನ್-ಛತ್ರಪತಿ ಶಿವಾಜಿ ಟರ್ಮಿನಸ್ ಮುಂಬಯಿ ರೈಲಿನ ಲೋಕೋ ಪೈಲಟ್, ಸಹಾಯಕ ಲೋಕೋ ಪೈಲಟ್ ಮತ್ತು ಗಾರ್ಡ್ ಗಳ ಸಮಯಪ್ರಜ್ಞೆ, ತ್ವರಿತ ಕಾರ್ಯಾಚರಣೆಯನ್ನು ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಗಜಾನನ ಮಲ್ಯರವರು ಶ್ಲಾಘಿಸಿದ್ದಾರೆ. ಅವರ ಉತ್ತಮ ಕಾರ್ಯವನ್ನು ಗುರ್ತಿಸಿ ಅವರಿಗೆ ನಗದು ಬಹುಮಾನವನ್ನು ಘೋಷಿಸಿದ್ದಾರೆ. ದಿನಾಂಕ 23.7.2021 ರಂದು ಬೆಳಿಗ್ಗೆ ಸುಮಾರು 6.10 ಕ್ಕೆ ಕುಲೇಮ್ ನಿಂದ ಕ್ಯಾಸೆಲ್ ರಾಕ್ ಕಡೆಗೆ ಈ ರೈಲನ್ನು ಓಡಿಸುತ್ತಿರುವಾಗ ದೂಧ್ಸಾಗರ್- ಸೋನಾಲಿಮ್ […]

ರಾಜ್ಯದಲ್ಲೇ ಮೊದಲಬಾರಿಗೆ ಆರಂಭಗೊಂಡ ಬ್ಯಾರಿ ಜಾನಪದ ಕಲೆಗಳ ಕೋರ್ಸ್ ಯಶಸ್ವೀ : ರಹೀಂ ಉಚ್ಚಿಲ್

Sunday, July 25th, 2021
Rahim-Uchil

ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ) ಮಂಗಳೂರು ಇದರ ಆಶ್ರಯದಲ್ಲಿ ‘ಬ್ಯಾರಿ ದಫ್, ಕೋಲ್ಕಲಿ, ಒಪ್ಪನೆ ಪಾಟ್, ಕೈಕೊಟ್ಟ್ ಪಾಟ್ ಜಾನಪದ ಕಲೆಗಳ ಕೋರ್ಸ್ ತರಬೇತಿಯ ಪ್ರಮಾಣ ಪತ್ರ ವಿತರಣಾ ಹಾಗೂ ಪ್ರತಿಭಾ ಪ್ರದರ್ಶನ ಸಮಾರಂಭ ಕಾರ್ಯಕ್ರಮವು ಶನಿವಾರ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಮಾಫೇಯಿ ಸೆಂಟರ್ ಏರಿಕ್ ಮಥಾಯಸ್ ಸಭಾಂಗಣದಲ್ಲಿ ನಡೆಯಿತು. ದಫ್, ಕೋಲ್ಕಲಿ ಬಾರಿಸೋ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಉದ್ಘಾಟಕರಾಗಿ ಆಗಮಿಸಿದ್ದ ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ […]

ಒಬ್ಬ ಶಾಸಕನ ಹಿಂದೆ ಜನ ಓಡಾಡುವುದಕ್ಕಿಂತಲೂ, ಪಕ್ಷದ ಹಿಂದೆ ಹೋಗಿ : ರಾಜೇಶ್ ನಾಯ್ಕ್ ಉಳಿಪ್ಪಾಡಿ

Sunday, July 25th, 2021
Bantwal MLA

ಬಂಟ್ವಾಳ  : ಒಬ್ಬ ಶಾಸಕನ ಹಿಂದೆ ಜನ ಓಡಾಡುವುದಕ್ಕಿಂತಲೂ ಪಕ್ಷದ ಹಿಂದೆ ಕಾರ್ಯಕರ್ತರು ಹೋದಾಗ ಪಕ್ಷ ಗಟ್ಟಿಯಾಗಲು ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಬಂಟ್ವಾಳದಲ್ಲಿ ಬಿಜೆಪಿಯನ್ನು ಬಲಿಷ್ಠ ಪಡಿಸುವ ದೃಷ್ಟಿಯಿಂದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಲಹೆ ಪಡೆದು ಕೆಲಸ ಮಾಡಲಾಗುತ್ತಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು. ಅವರು ಬಿಸಿರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಬಿಜೆಪಿ ಮಂಡಲದ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಪಕ್ಷವನ್ನು ಬಲಪಡಿಸಿದಾಗ ಮಾತ್ರ ಕಾರ್ಯಕರ್ತರಿಗೆ ಅಧಿಕಾರ ಸಿಗುತ್ತದೆ, ಅಮೂಲಕ […]

ಆಪತ್ಕಾಲದಲ್ಲಿ ಜೀವಂತವಾಗಿರಲಿಕ್ಕಾದರೂ ಸಾಧನೆ ಮಾಡಿ ! – ಪೂ. ರಮಾನಂದ ಗೌಡ

Sunday, July 25th, 2021
Guru Poornima

ಮಂಗಳೂರು : ಅಡಚಣೆಯ ಸಮಯದಲ್ಲಿ ನಮಗೆ ಸಹಾಯವಾಗಬೇಕು; ಅದಕ್ಕಾಗಿ ನಾವು ಬ್ಯಾಂಕಿನಲ್ಲಿ ಹಣ ಇಡುತ್ತೇವೆ. ಅದರಂತೆ ಆಪತ್ಕಾಲದ ಸಮಯದಲ್ಲಿ ಸಹಾಯವಾಗಬೇಕೆಂದು ಸಾಧನೆಯ ಸಂಗ್ರಹವು ನಮ್ಮ ಸಂಗ್ರಹದಲ್ಲಿರುವುದು ಅಗತ್ಯವಿದೆ. ಇದರಿಂದಲೇ ಆಪತ್ಕಾಲದ ಸಮಯದಲ್ಲಿ ನಮಗೆ ಸಹಾಯವಾಗುತ್ತದೆ. ಭಗವಾನ ಶ್ರೀಕೃಷ್ಣನು ‘ನ ಮೆ ಭಕ್ತಃ ಪ್ರಣಶ್ಯತಿ’, ಅಂದರೆ ‘ನನ್ನ ಭಕ್ತರ ನಾಶ ಎಂದಿಗೂ ಆಗುವುದಿಲ್ಲ’, ಎಂಬ ವಚನವನ್ನು ಭಕ್ತರಿಗೆ ನೀಡಿದ್ದಾರೆ. ಆದ್ದರಿಂದ ನಾವು ಸಾಧನೆಯನ್ನು ಹೆಚ್ಚಿಸಿ ದೇವರ ಭಕ್ತರಾಗಬೇಕು. ಈ ಹಿಂದೆ ಆನಂದಪ್ರಾಪ್ತಿಗಾಗಿ ಸಾಧನೆಯನ್ನು ಮಾಡಿ, ಎಂದು ನಾವು ಹೇಳುತ್ತಿದ್ದೆವು; ಆದರೆ […]

ಕಂದಾಯ ಸಚಿವ ಆರ್ ಅಶೋಕ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ

Sunday, July 25th, 2021
Ashok-Flood-Area

ಬೆಂಗಳೂರು  : ಅತಿವೃಷ್ಠಿಯಿಂದ ಹಾನಿಗೊಳಗಾಗಿರುವ ಹಾಸನ ಜಿಲ್ಲೆಯ ದೊಣಿಗಲ್‍ಗೆ ಕಂದಾಯ ಸಚಿವ ಆರ್ ಅಶೋಕ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅಶೋಕ, “ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸುವಂತೆ ಸೂಚನೆ ನೀಡಿದ್ದೇನೆ. ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡುವಂತೆ ಮತ್ತು ರಸ್ತೆ ದುರಸ್ತಿ ಕಾರ್ಯಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದೇನೆ. ಎನ್‍ಡಿಆರ್‍ಎಫ್ ನಿಧಿಯಡಿ ಪರಿಹಾರ ನೀಡುವಂತೆ ಡಿಸಿಗಳಿಗೆ ಆದೇಶಿಸಲಾಗಿದೆ. ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಸಚಿವರು ಮತ್ತು ಅಧಿಕಾರಿಗಳೊಂದಿಗೆ ನಿರಂತರ […]

ತಮ್ಮನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಅಣ್ಣ

Sunday, July 25th, 2021
Rafeeq

ಕಾಸರಗೋಡು : ಸೀತಾಂಗೋಳಿಯ ಮುಗು ಎಂಬಲ್ಲಿ ತಮ್ಮನನ್ನು ಅಣ್ಣ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಕೊಲೆಗೀಡಾದವರನ್ನು ಮುಗು ಉರ್ಮಿಯ ಅಬ್ದುಲ್ಲ ಮುಸ್ಲಿಯಾರ್ ರವರ ಪುತ್ರ ನಿಸಾರ್ (29) ಎಂದು ಗುರುತಿಸಲಾಗಿದೆ. ಸಹೋದರ ರಫೀಕ್ (31)ನನ್ನು ಬದಿಯಡ್ಕ ಠಾಣಾ ಪೊಲೀಸರು ಬಂಧಿಸಿದ್ದಾರೆ. ನಿಸಾರ್‌‌ನನ್ನು ಕೂಡಲೇ ಕುಂಬಳೆಯ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ. ಬದಿಯಡ್ಕ ಠಾಣಾ ಪೊಲೀಸರು ಘಟನಾ ಸ್ಥಳಕ್ಕಾಮಿಸಿದ್ದು ತನಿಖೆ ನಡೆಸುತ್ತಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯದ ದೇವರ ದರ್ಶನಕ್ಕೆ ಬಂದಿದ್ದ ಭಕ್ತರ ಬ್ಯಾಗ್ ಕಳವು

Saturday, July 24th, 2021
Kukke Subrahmanya

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ದೇವರ ದರ್ಶನಕ್ಕೆ ಬಂದಿದ್ದ ಭಕ್ತರ ಬ್ಯಾಗೊಂದನ್ನು ಉಪಹಾರ ಸೇವಿಸುತ್ತಿದ್ದ ವೇಳೆ ಕಳ್ಳತನ ಮಾಡಿರುವ ಘಟನೆ ನಡೆದಿದೆ. ಅದರಲ್ಲಿ ಸುಮಾರು 17 ಲಕ್ಷ ರೂ. ಮೌಲ್ಯದ ಸ್ವತ್ತುಗಳಿತ್ತು ಎನ್ನಲಾಗಿದೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಗ್ರಾಮದ ಬೈರಲಿಂಗೇನ ಹಳ್ಳಿಯ ಗಂಗಮ್ಮ ಮತ್ತು ಮನೆಯವರು ಜು.20ಕ್ಕೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ಖಾಸಗಿ ವಸತಿಗೃಹದಲ್ಲಿ ಉಳಿದಿದ್ದರು. ಮರು ದಿನ ಬೆಳಗ್ಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ದರ್ಶನ ಪಡೆದು ರಥ ಬೀದಿಯ ಖಾಸಗಿ ಹೋಟೆಲ್ವೊಂದರಲ್ಲಿ ಉಪಹಾರ ಸೇವಿಸಿದ್ದಾರೆ. ಈ […]

ಮಂಗಳೂರು ನಗರ ಪೊಲೀಸ್ ಕಮಿಶನರೇಟ್ ನ ಶ್ವಾನ ಸುಧಾ ಇನ್ನಿಲ್ಲ

Saturday, July 24th, 2021
Dog-Sudha

ಮಂಗಳೂರು: ಹಲವಾರು ಅಪರಾಧ ಕೃತ್ಯಗಳಲ್ಲಿ ಆರೋಪಿಗಳ ಪತ್ತೆಯಲ್ಲಿ ಪ್ರಮುಖ ಪಾತ್ರ ವಹಿಸಿದ ನಗರ ಪೊಲೀಸ್ ಕಮಿಶನರೇಟ್ ನ ಶ್ವಾನದಳದ ಸದಸ್ಯೆ ಸುಧಾ ಮೃತಪಟ್ಟಿದೆ. ಡೊಬರ್ ಮನ್ ಶ್ವಾನ 2011 ಮಾರ್ಚ್ 15 ರಂದು ಜನಿಸಿತ್ತು. 2013 ಏ.2ರಂದು ಸೇವೆಗೆ ಸೇರಿತ್ತು. ಸಂದೀಪ್ ಎಂಬವರು ಈ ಶ್ವಾನದ ನಿರ್ವಹಣೆ ಮಾಡುತ್ತಿದ್ದರು. ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್ ಮೊದಲಾದ ಹಿರಿಯ ಅಧಿಕಾರಿಗಳು ಮೃತ ಶ್ವಾನಕ್ಕೆ ಅಂತಿಮ ನಮನ ಸಲ್ಲಿಸಿದರು.