ಸುಳ್ಯದಲ್ಲಿ ಪ್ರಾಕೃತಿಕ ವಿಕೋಪ ಪರಿಹಾರ ಯೋಜನೆಯಡಿ ಫಲಾನುಭವಿಗಳಿಗೆ ಚೆಕ್ ವಿತರಣೆ

Thursday, July 8th, 2021
S Angara

ಸುಳ್ಯ  : ಪ್ರಾಕೃತಿಕ ವಿಕೋಪ ಪರಿಹಾರ ಯೋಜನೆ ಮತ್ತು ರಾಷ್ಟೀಯ ಕುಟುಂಬ ನೆರವು ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಚೆಕ್ ವಿತರಣೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆಯಿತು. ಸಚಿವ ಎಸ್.ಅಂಗಾರ ಫಲಾನುಭವಿಗಳಿಗೆ ಚೆಕ್ ವಿತರಿಸಿ ಮಾತನಾಡಿ ಕೋವಿಡ್ ಕಾಲದಲ್ಲಿ ಜನರು ಎಚ್ಚರಿಕೆಯಿಂದ ಇರಬೇಕಾಗಿದೆ. ಕೊರೋನಾ ನಿಯಮಗಳನ್ನು ಪಾಲನೆ ಮಾಡುವ ಮೂಲಕ ಕೋವಿಡ್ ಮುಕ್ತ ತಾಲೂಕುವನ್ನಾಗಿ ಮಾಡಬೇಕು. ಗ್ರಾಮ ಪಂಚಾಯಿತಿಗಳ ಮೂಲಕ ಲಸಿಕೆ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಸಭೆಯಲ್ಲಿ ಹರೀಶ್ ಕಂಜಿಪಿಲಿ, ವೆಂಕಟ್ ವಳಲಬೆ, ತಹಸೀಲ್ದಾರ್ […]

ಒಡಿಯೂರಿನಲ್ಲಿ ‘ಮನೆಗೊಂದು ಶ್ರೀಗಂಧದ ಗಿಡ ಶ್ರೀಗಂಧ ಬೆಳೆಯೋಣ’ ಯೋಜನೆಯ ಆರಂಭೋತ್ಸವ

Thursday, July 8th, 2021
odiyuru

ವಿಟ್ಲ: ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸಂಭ್ರಮ – 2021ರ ಪ್ರಯುಕ್ತ ಒಡಿಯೂರು ಗುರುದೇವದತ್ತ ಸಂಸ್ಥಾನದಲ್ಲಿ‌ನಡೆದ ‘ಮನೆಗೊಂದು ಶ್ರೀಗಂಧದ ಗಿಡ ಶ್ರೀಗಂಧ ಬೆಳೆಯೋಣ’ ಯೋಜನೆಯ ಆರಂಭೋತ್ಸವವನ್ನು ದೀಪ ಬೆಳಗಿಸುವ ಮೂಲಕ ಜು.8 ರಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಚಾಲನೆ ನೀಡಿ ಆಶೀರ್ವಚನ ನೀಡಿದರು. ಬಳಿಕ ಮಾತನಾಡಿದ ಅವರು ಹಣ್ಣು ಹಂಪಲಿನ ಗಿಡಗಳನ್ನು‌ ನೆಟ್ಟು ಪ್ರಾಣಿ ಪಕ್ಷಿಗಳಿಗೆ ಆಹಾರ ಒದಗಿಸಲು ಸಹಕರಿಸುವುದರೊಂದಿಗೆ ಔಷದೀಯ ಗಿಡಗಳನ್ನು ಬೆಳೆಸುವ ಯೋಚನೆ ಇದೆ. ಪ್ರಕೃತಿಯನ್ನು ಗುರುವಾಗಿ ಕಂಡದ್ದು ಭಗವಾನ್ ದತ್ತಾತ್ರೇಯ. ನಿಮ್ಮ […]

ಕೇಂದ್ರ ಸಂಪುಟದಲ್ಲಿ ಸಹಕಾರಿ ಸಚಿವಾಲಯ ಸ್ಥಾಪನೆ ಸ್ವಾಗತಾರ್ಹ : ಕೊಡವೂರು ರವಿರಾಜ ಹೆಗ್ಡೆ

Thursday, July 8th, 2021
Raviraja Hegde

ಮಂಗಳೂರು  : ಕೇಂದ್ರ ಸಂಪುಟದಲ್ಲಿ ಪ್ರಥಮ ಬಾರಿ ಸಹಕಾರಿ ಸಚಿವಾಲಯ ಸ್ಥಾಪಿಸಿದ್ದು, ಸಹಕಾರಿ ಕ್ಷೇತ್ರದ ಬೆಳವಣಿಗೆ ದೃಷ್ಟಿಯಿಂದ ಸ್ವಾಗತಾರ್ಹ ಮತ್ತು ಅಭಿನಂದನೀಯ. 97ನೇ ಸಂವಿಧಾನಿಕ ತಿದ್ದುಪಡಿಯಂತೆ ರಾಜ್ಯಗಳ ಸಹಕಾರಿ ಕಾಯ್ದೆಯಲ್ಲಿ ಪುನರಪಿ ಸಂಘಗಳ ಸ್ವಾಯತ್ತತೆ ಮತ್ತು ಸ್ವ್ವಾವಲಂಬನೆಗೆೆ ಹೆಚ್ಚಿನ ಒತ್ತು ನೀಡುವ ಅವಶ್ಯಕತೆವಿದೆಯೆಂದು ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷರಾದ ಶ್ರೀ ಕೊಡವೂರು ರವಿರಾಜ ಹೆಗ್ಡೆಯವರು ತಿಳಿಸಿದ್ದಾರೆ. ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಸಂಸದರಾದ ಶೋಭಾ ಕರಂದ್ಲಾಜೆ ಕೇಂದ್ರ ಮಂತ್ರಿ ಮಂಡಲಕ್ಕೆ ಸ್ಥಾನ ಪಡೆದಿರುವುದಕ್ಕೆ ಅಭಿನಂದನೆ ಸಲ್ಲಿಸಿರುತ್ತಾರೆ.

ಬಿಜೆಪಿ ಪರ ಜನತೆಯ ವಿಶ್ವಾಸ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಸಂತಸ

Thursday, July 8th, 2021
Nalin Kumar

ಮಂಗಳೂರು : ರಾಜ್ಯದ ಮತದಾರರು ಬಿಜೆಪಿ ಪರವಾಗಿದ್ದಾರೆ ಎನ್ನುವುದನ್ನು ಬೆಳಗಾವಿ ಲೋಕಸಭೆ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ ಮತ್ತೊಮ್ಮೆ ಸಾಬೀತು ಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವದ ಮೇಲೆ ವಿಶ್ವಾಸ ಇರಿಸಿದ ಜನತೆ ಬಿಜೆಪಿಗೆ ಅಭೂತಪೂರ್ವ ಗೆಲುವು ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದಾರೆ. ರಾಜ್ಯದಲ್ಲಿ ಈ ಹಿಂದೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳನ್ನು ಗೆಲ್ಲುವ ಮೂಲಕ ಪಾರಮ್ಯ ಮೆರೆದಿತ್ತು. ಈ […]

ಬೆಲೆಯೇರಿಕೆಯ ವಿರುದ್ಧ ಬೀದಿಗಿಳಿದ ಬೀದಿಬದಿ ವ್ಯಾಪಾರಸ್ಥರು

Thursday, July 8th, 2021
street-vendors

ಮಂಗಳೂರು  : ಪೆಟ್ರೋಲ್ ಡೀಸೆಲ್ ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ವಿಪರೀತ ಬೆಲೆಯೇರಿಕೆಯನ್ನು ವಿರೋಧಿಸಿ ಮಂಗಳೂರು ನಗರದ ಬೀದಿಬದಿ ವ್ಯಾಪಾರಸ್ಥರೂ ಕೂಡ ಬೀದಿಗಿಳಿದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇಂದು ನಗರದ ಸ್ಟೇಟ್ ಬ್ಯಾಂಕ್ ಬಳಿ ಹಾಗೂ ಲೇಡಿಗೋಷನ್ ಬಳಿಯಲ್ಲಿ ಬೀದಿಬದಿ ವ್ಯಾಪಾರಸ್ಥರು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳ ವಿರುದ್ದ ಘೋಷಣೆಗಳನ್ನು ಕೂಗುವ ಮೂಲಕ ಬಿತ್ತಿಚಿತ್ರ ಹಿಡಿದು ಪ್ರತಿಭಟಿಸಿದರು. ಬೆಲೆಯೇರಿಕೆಯ ವಿರುದ್ದ CPIM ಮಂಗಳೂರು ನಗರದಾದ್ಯಂತ ಹಮ್ಮಿಕೊಂಡ ವಾರಾಚರಣೆಯ ಭಾಗವಾಗಿ ಬೀದಿಬದಿ ವ್ಯಾಪಾರಸ್ಥರೂ ಕೂಡ […]

ಖಡ್ಸಲೆಗೆ ಕಾಂಗ್ರೆಸ್ಸಿನಿಂದ ಅಪಮಾನ : ಸುನಿಲ್ ಕುಮಾರ್ ಖಂಡನೆ

Thursday, July 8th, 2021
SunilKumar

ಕಾರ್ಕಳ : ತುಳುನಾಡಿನ ದೈವಾರಾಧನೆಯು ಬಹು ಹಿಂದಿನ ಕಾಲದಿಂದಲೂ ಕಟ್ಟು ಕಟ್ಟಲೆಗಳನ್ನೊಳಗೊಂಡು ನಡೆದು ಬರುತ್ತಿರುವ ಧಾರ್ಮಿಕ ಆಚರಣೆ. ಇದರಲ್ಲಿ ದೈವಗಳು ನುಡಿ ಕೊಡುವ ಖಡ್ಸಲೆ (ದೈವದ ಖಡ್ಗ) ಇದಕ್ಕೆ ಅದರದೇ ಆದ ವಿಶಿಷ್ಟ ಪ್ರಾದಾನ್ಯತೆ ಇದೆ. ದೈವಾರಾಧನೆಗೆ ಒಂದು ಶಕ್ತಿ ಇದೆ. ಆ ಖಡ್ಸಲೆಯಲ್ಲಿ ಕೊಡುವ ನುಡಿಯನ್ನು ಇಡೀ ತುಳುನಾಡು ಪಾಲನೆ ಮಾಡಿಕೊಂಡು ಬರುತ್ತಿದೆ. ಇಂತಹ ಪ್ರಾಮುಖ್ಯತೆ ಹೊಂದಿರುವ ಖಡ್ಸಲೆಯನ್ನು ಒಂದು ರಾಜಕೀಯ ವೇದಿಕೆಯಲ್ಲಿ ರಾಜಕೀಯ ಮುಖಂಡರಿಗೆ ಸ್ಮರಣಿಕೆಯಾಗಿ ಕೊಟ್ಟಿರುವುದು ಕಾಂಗ್ರೆಸ್ ಪಕ್ಷದ ದಿವಾಳಿತನ, ಕಾಂಗ್ರೆಸ್ ಪಕ್ಷ […]

ಕಸದರಾಶಿ ತುಂಬಿದ್ದ ಬ್ಲ್ಯಾಕ್ ಸ್ಪಾಟನ್ನು ಸ್ವಚ್ಛಗೊಳಿಸಿ “ಸೆಲ್ಫಿ ಸ್ಪಾಟ್” ಆಗಿ ಪರಿವರ್ತನೆ

Thursday, July 8th, 2021
Kodikal

ಮಂಗಳೂರು  : ಸ್ವಚ್ಛತೆ ಬಗ್ಗೆ ಪ್ರತಿಯೊಬ್ಬ ನಾಗರಿಕರಲ್ಲಿ ಅರಿವಿರಬೇಕು ಸಾರ್ವಜನಿಕ ಸ್ಥಳದಲ್ಲಿ ಕೆಲವರು ಪ್ರತಿನಿತ್ಯ ಕಸವನ್ನು ಎಸೆದು ಬ್ಲ್ಯಾಕ್ ಸ್ಪಾಟನ್ನಾಗಿಸಿ ಪರಿಸರವನ್ನು ಮಲಿನಗೊಳಿಸುತ್ತಿದ್ದಾರೆ. ಅಂತಹ ಒಂದು ಸ್ಥಳವನ್ನು ಸ್ವಚ್ಛಗೊಳಿಸಿ ಸಮಾಜಕ್ಕೆ ಸುಂದರ ಸಂದೇಶಕೊಡುವ ಪರಿಸರ ಸಂರಕ್ಷಣೆಯ ವರ್ಣರಂಜಿತ ಚಿತ್ರ ಬಿಡಿಸಿ ಸೆಲ್ಫಿ ಸ್ಪಾಟಾಗಿ ಪರಿವರ್ತಿಸಲು ಮ.ನ.ಪಾ ಸದಸ್ಯ ಕಿರಣ್ ಕುಮಾರ್ ರವರೊಂದಿಗೆ ಕೈ ಜೋಡಿಸಿದ ಶ್ರೀ ನಾಗಬ್ರಹ್ಮ ತರುಣ ವೃಂದ(ರಿ.)ಕೋಡಿಕಲ್. ಹಾಗೂ”pixncil” ಎಂಬ ಖ್ಯಾತ ಕಲಾವಿದರ ತಂಡದ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಮಂಗಳೂರು ಉತ್ತರ ಶಾಸಕ ಡಾ. […]

ಸಿಡಿಲು ಬಡಿದು ಮನೆಗೆ ಹಾನಿ, ಇಯರ್ ಫೋನ್ ಹಾಕಿ ಪಾಠಕೇಳುತ್ತಿದ್ದ ವಿದ್ಯಾರ್ಥಿನಿಗೆ ಆಘಾತ

Wednesday, July 7th, 2021
Bantwal Thunder

ಬಂಟ್ವಾಳ : ಸಿಡಿಲು ಬಡಿದು ಮನೆಗೆ ಹಾನಿಯಾಗಿ,  ಅಲ್ಲೇ  ಆನ್ಲೈನ್ ಕ್ಲಾಸ್ ನಲ್ಲಿದ್ದ ವಿದ್ಯಾರ್ಥಿನಿಯೊರ್ವಳು ಆಘಾತಕ್ಕೆ ಒಳಗಾದ  ಘಟನೆ ಬಂಟ್ವಾಳ ತಾಲೂಕಿನ ವೀರಕಂಬ ಗ್ರಾಮದ ಕಲ್ಮಲೆ ಎಂಬಲ್ಲಿ ಬುಧವಾರ ಸಂಜೆ ನಡೆದಿದೆ. ಕಲ್ಮಲೆ ನಿವಾಸಿ ರಘರಾಮ ಶೆಟ್ಟಿ ಅವರ ಮನೆಗೆ ಸಂಜೆ ವೇಳೆ ಸಿಡಿಲು ಬಡಿದು  ಮನೆಯ ಸಂಪೂರ್ಣ ಬಿರುಕುಬಿಟ್ಟಿದ್ದು, ವಿದ್ಯುತ್ ಮೀಟರ್ ಹಾಗೂ ವಯರ್ ಗಳು ಸಂಪೂರ್ಣ ಕೆಟ್ಟುಹೋಗಿದೆ. ಘಟನೆಯಿಂದ ಸುಮಾರು 1 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎನ್ನಲಾಗಿದೆ. ರಘುರಾಮ ಅವರ ಮಗಳು ಪ್ರಜಿತ ಅವರಿಗೆ […]

ಒಂದೇ ಸ್ಥಳದಲ್ಲಿ ಇಬ್ಬರು ಮೃತ್ಯು, ಒಬ್ಬರು ಕೆರೆಯಲ್ಲಿ ಮುಳುಗಿದರೆ, ಇನ್ನೊಬ್ಬರಿಗೆ ಹೃದಯಾಘಾತ

Wednesday, July 7th, 2021
jokim

ಮಂಗಳೂರು : ಪಂಜಿಮೊಗರು ಸಮೀಪದ ಮಾಯಿಲ ಎಂಬಲ್ಲಿ ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ ವ್ಯಕ್ತಿಯೊಬ್ಬರು ಪತ್ನಿ ಮತ್ತು ಪುತ್ರನ ಎದುರಲ್ಲೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಅವರನ್ನು ರಕ್ಷಿಸಲು ಮುಂದಾದ ಮತ್ತೊಬ್ಬ ವ್ಯಕ್ತಿಯು ಹೃದಯಾಘಾತದಿಂದ ಮೃತಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ. ಪಂಜಿಮೊಗರು ಸಮೀಪದ ಅಂಬಿಕಾನಗರದ ನಿವಾಸಿ ಜೋಕಿಂ ಮಸ್ಕರೇನಸ್ (58) ಮೃತಪಟ್ಟ ಮೀನುಗಾರ. ಕೆರೆಯಲ್ಲಿ ಜೋಕಿಂ ಮೀನು ಹಿಡಿಯುತ್ತಿದ್ದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದರು. ತಕ್ಷಣ ಅಲ್ಲೇ ಇದ್ದ ಶೇಷಪ್ಪ (50) ಎಂಬವರು ಮಸ್ಕರೇನಸ್‌ರನ್ನು ರಕ್ಷಿಸಲು ಮುಂದಾದರು. ಆದರೆ ಈ ಆಘಾತದಿಂದ ಶೇಷಪ್ಪ […]

ಮಂಗಳೂರು ಉತ್ತರದ ಇನ್ನರ್‌ ವೀಲ್‌ ಕ್ಲಬ್‌ನ ನೂತನ ಅಧ್ಯಕ್ಷೆಯಾಗಿ ಡಾ. ಭಾರತಿ ಪ್ರಕಾಶ್‌

Wednesday, July 7th, 2021
Bharathi

ಮಂಗಳೂರು: ಮಂಗಳೂರು ಉತ್ತರದ ಇನ್ನರ್‌ ವೀಲ್‌ ಕ್ಲಬ್‌ನ ಪದಗ್ರಹಣ ಸಮಾರಂಭದಲ್ಲಿ  2020-21 ಸಾಲಿನ ಅಧ್ಯಕ್ಷೆ ನಿರ್ಮಲಾ ಪೈ ಅವರು ನೂತನ ಅಧ್ಯಕ್ಷೆ, ವಿಶ್ವವಿದ್ಯಾನಿಲಯ ಕಾಲೇಜಿನ ಸೂಕ್ಷ್ಮಾಣುಜೀವಿಶಾಸ್ತ್ರ ವಿಭಾಗದ ಮುಖ್ಯಸ್ಥೆಯೂ ಆಗಿರುವ ಡಾ. ಭಾರತಿ ಪ್ರಕಾಶ್‌ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿ, ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ಮಹಿಳೆಯರು ಸಮಾಜದಲ್ಲಿನ ವಿಲಕ್ಷಣಗಳನ್ನು ಎದುರಿಸುವಷ್ಟು ಬಲಶಾಲಿಯಾಗಬೇಕು ಎಂದರಲ್ಲದೆ ಇನ್ನರ್‌ ವೀಲ್‌ ಕ್ಲಬ್‌ನ ಹೊಸ ತಂಡವನ್ನು ಅಭಿನಂದಿಸಿದರು. ಗೌರವಾನ್ವಿತ ಅತಿಥಿ ಮಂಗಳೂರು ಉತ್ತರದ ರೋಟರಿ ಕ್ಲಬ್‌ನ ಪಿಡಿಜಿ […]