ಎರಡು ತಿಂಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದ ಮಹಿಳೆ ಸಾವು

Sunday, June 27th, 2021
Akshatha

ಪುತ್ತೂರು: ಎರಡು ತಿಂಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದ ಬಾಣಂತಿ  ಅನಾರೋಗ್ಯದಿಂದ  ತಾಲೂಕಿನ ಕೃಷ್ಣ ನಗರದಲ್ಲಿ ಮೃತಪಟ್ಟಿದ್ದಾರೆ. ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸಿಬ್ಬಂದಿ ದಿಲೀಪ್ ಅವರ ಪತ್ನಿ ಅಕ್ಷತಾ ನಾಯ್ಕ(23)ಮೃತಪಟ್ಟವರು. ಹೆರಿಗೆ ಬಳಿಕ ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಅಕ್ಷತಾ ಪುತ್ತೂರು ನ್ಯಾಯಾಲಯದಲ್ಲಿ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸಂಬಂಧಿಸಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದಿದ್ದರು.

ಆಕಾಶವಾಣಿ ಯಾವತ್ತೂ ದ್ವೀಪದಂತೆ ಕೆಲಸ ಮಾಡಿಲ್ಲ : ಕೇಶವ ಮೂರ್ತಿ

Sunday, June 27th, 2021
Keshava-Murthy

ಮಂಗಳೂರು: ಆಕಾಶವಾಣಿ ಯಾವತ್ತೂ ದ್ವೀಪದಂತೆ ಕೆಲಸ ಮಾಡಿಲ್ಲ, ಮಾಡುವುದೂ ಇಲ್ಲ. ವ್ಯವಸ್ಥೆ ಮತ್ತು ಜನರ ನಡುವಿನ ಸೇತುವೆಯಂತೆ ಕೆಲಸ ಮಾಡುವುದರಿಂದಲೇ, ರೇಡಿಯೋಗೆ ದೇಶದ ಜನರ ನಾಡಿಮಿಡಿತ ಅರಿಯಲು ಸಾಧ್ಯವಾಗಿದೆ, ಎಂದು ಹಾಸನ ಆಕಾಶವಾಣಿಯ ಹಿರಿಯ ಕಾರ್ಯಕ್ರಮ ನಿರ್ಮಾಪಕ ಕೇಶವ ಮೂರ್ತಿ ಹೇಳಿದ್ದಾರೆ. ವಿಶ್ವವಿದ್ಯಾನಿಲಯ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಆನ್‌ಲೈನ್‌ನಲ್ಲಿ ಶನಿವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1980 ರ ದಶಕದ ವರೆಗೂ ವಿದ್ಯುನ್ಮಾನ ಮಾಧ್ಯಮ ಕ್ಷೇತ್ರದಲ್ಲಿ ಪಾರುಪತ್ಯ ಸಾಧಿಸಿದ್ದ ಆಕಾಶವಾಣಿ, ಹೊಸತನಕ್ಕೂ ಒಗ್ಗಿಕೊಂಡಿದೆ. ಯೂ […]

ಕಾಳಜಿಯ ಕೊರತೆಯಿಂದ ಪಶ್ಚಿಮಘಟ್ಟದ ನಾಶವಾಗಿದೆ : ದಿನೇಶ್ ಹೊಳ್ಳ

Sunday, June 27th, 2021
Dinesh-Holla

ಮಂಗಳೂರು  : ಇರುವೆ ಗೆದ್ದಲುಗಳು ನಾಶವಾಗಿ ಸಾಗರದ ಮೀನುಗಳೂ ನಾಶವಾಗುತ್ತವೆ.ಜೇನುಹುಳದ ಸಂತತಿಯ ನಾಶವಾಗಿ ಸಂಪನ್ಮೂಲಗಳ ಅವನತಿಯಾಗುತ್ತಿದೆ’ ಎಂದು ಜನಪ್ರಿಯ ಪರಿಸರ ಅಧ್ಯಯನಕಾರ ಸಾಹಿತಿ ದಿನೇಶ್ ಹೊಳ್ಳ ಅವರು ಹೇಳಿದರು. ಅವರು ಶನಿವಾರ, ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಮಂಗಳೂರಿನಲ್ಲಿ ವೆಬಿನಾರ್ ಮೂಲಕ ನಡೆದ ‘ಪ್ರಕೃತಿಯ ಪಥದಲ್ಲಿ’ ವಿಷಯದಲ್ಲಿ ಉಪನ್ಯಾಸ ನೀಡುತ್ತಾ ಮಾತನಾಡಿದರು. “ಗಿರಿಯ ಕಲ್ಲನು ಕಡಿವ ಧನದಾಸೆಗೆ ದೇಗುಲದ ಕಲ್ಲಿಗೆ ಮಾತ್ರ ನಮಿಸುವ ಮನದಾಸೆಗೆ” ಎಂದು ಮನುಜನ ಸ್ವಾರ್ಥವನ್ನು ಮಾರ್ಮಿಕವಾಗಿ ಬಣ್ಣಿಸಿದ ಅವರು, ‘ರಕ್ಷಣಾ […]

ಬಸ್ ದರ ಏರಿಸುವ ಮೂಲಕ ಜನರಿಂದ ಮತ್ತೊಂದು ಸುಲಿಗೆ

Sunday, June 27th, 2021
Udupi City Bus

ಉಡುಪಿ : ಪೆಟ್ರೋಲ್ ಗ್ಯಾಸ್, ದಿನಸಿ ಬೆಲೆ ಏರಿಕೆಯಿಂದ ತತ್ತರಿಸಿದ ಜನಸಾಮಾನ್ಯರನ್ನು ಬಸ್ ದರ ಏರಿಸುವ ಮೂಲಕ ಸರಕಾರ ಸುಲಿಗೆ ಮಾಡುತ್ತಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಆರೋಪಿಸಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಬಸ್ ಮಾಲಕರಿಗೆ, ಚಾಲಕರಿಗೆ ಹಾಗೂ ನಿರ್ವಾಹಕರಿಗೆ ಸರಕಾರ ಯಾವುದೇ ಆರ್ಥಿಕ ನೆರವು ನೀಡಲ್ಲ ಎಂದು  ಸಮಿತಿ ಹೇಳಿದೆ. ಖಾಸಗಿ ಬಸ್ ಟಿಕೇಟು ದರ 13ರೂ. ಇದ್ದದ್ದು ಮೊದಲ ಅಲೆ ನಂತರ ಶೇ.50 ಪ್ರಯಾಣಿಕರಿಗೆ ಅವಕಾಶ ನೀಡಿ ಕೊರೊನಾ ಮಾರ್ಗಸೂಚಿ ಅನುಸರಿಸಿ ಬಸ್ ಓಡಿಸಿದಾಗ 20 ರೂ. ಆಗಿತ್ತು. ಲಾಕ್‌ಡೌನ್ […]

ಕೇರಳದಲ್ಲಿ ಕನ್ನಡ ಸಂಪೂರ್ಣ ನಿರ್ನಾಮ, ಮಂಜೇಶ್ವರದ ಗ್ರಾಮಗಳ ಕನ್ನಡದ ಹೆಸರುಗಳ ಮಲಯಾಳೀಕರಣ

Saturday, June 26th, 2021
Kerala-Kannada

ಮಂಜೇಶ್ವರ : ಕೇರಳದಲ್ಲಿ ಕನ್ನಡವನ್ನು ಸಂಪೂರ್ಣ ನಿರ್ನಾಮ ಮಾಡ ಹೊರಟಿರುವ ಪಿಣರಾಯಿ ಸರಕಾರ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಹಾಗೂ ಅಲ್ಲಿನ ಕೆಲವು ಗ್ರಾಮಗಳ ಕನ್ನಡದ ಹೆಸರುಗಳನ್ನು ಮಲಯಾಳಂ ಭಾಷೆಗೆ ಬದಲಾಯಿಸಿ ನಾಮಫಲಕಗಳನ್ನು ಅಳವಡಿಸುತ್ತಿದೆ. ಕೇರಳ ಸರ್ಕಾರದ ಈ ನಡೆಯನ್ನು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಖಂಡಿಸಿದೆ. `ಮಧೂರು-ಮಧುರಮ್, ಮಲ್ಲ-ಮಲ್ಲಮ್, ಕಾರಡ್ಕ-ಕಡಗಮ್, ಬೇದಡ್ಕ-ಬೆಡಗಮ್, ಪಿಲಿಕುಂಜೆ-ಪಿಲಿಕುನ್ನು, ಆನೆಬಾಗಿಲು-ಆನೆವಾಗಿಲ್, ಮಂಜೇಶ್ವರ-ಮಂಜೇಶ್ವರಮ್, ಹೊಸದುರ್ಗ-ಪುದಿಯಕೋಟ, ಕುಂಬಳೆ-ಕುಂಬ್ಳಾ, ಸಸಿಹಿತ್ಲು-ಶೈವಲಪ್, ನೆಲ್ಲಿಕುಂಜ-ನೆಲ್ಲಿಕುನ್ನಿ’ ಇವುಗಳ ಮೂಲ ಹೆಸರನ್ನೆ  ಬದಲಾಯಿಸಿ ಕನ್ನಡದ ಕುರುಹು ಕೂಡ ಇರಬಾರದು ಎನ್ನುವುದು ಪಿಣರಾಯಿ ಸರಕಾರದ ನಡೆಯಾಗಿದೆ ಎಂದು […]

ಕಾಂಗ್ರೆಸ್ ನಲ್ಲಿ ಸಿಎಂ ಆಗಲು ಮೂವರು ಸ್ಪರ್ಧಿಗಳಿದ್ದಾರೆ : ಸಚಿವ ಬಿ.ಸಿ ಪಾಟೀಲ್

Saturday, June 26th, 2021
bc Pateel

ಉಡುಪಿ: ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಗಾದಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ನಡುವೆ ಕಾಂಗ್ರೆಸ್ ನಾಯಕ ಜಿ. ಪರಮೇಶ್ವರ್ ಇದ್ದಾರೆ ಎಂದು ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ. ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಕಾಂಗ್ರೆಸ್ಸಿನಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯ ಮಾತ್ರ ಸಿಎಂ ಸ್ಪರ್ಧಿಗಳಲ್ಲ. ಜಿ. ಪರಮೇಶ್ವರ್ ಕೂಡ ಸಿಎಂ ಕ್ಯಾಂಡಿಡೇಟ್. ದಲಿತ ಸಿಎಂ ಆಗಬೇಕು ಎಂದು ಪರಮೇಶ್ವರ್ ಸದ್ದಿಲ್ಲದೆ ತಯಾರಿ ನಡೆಸುತ್ತಿದ್ದಾರೆ ಎಲ್ಲರೂ ಸಿಎಂ ಸ್ಥಾನಕ್ಕೆ ಸ್ಪರ್ಧೆ ಮಾಡುವುದು ತಪ್ಪಲ್ಲ, ಕೂಸು […]

ವಾರಾಂತ್ಯ ಕರ್ಫ್ಯೂ : ಬ್ಯಾರಿಕೇಡ್​​​ಗಳನ್ನು ಹಾಕಿ ಬಂದೋಬಸ್ತ್

Saturday, June 26th, 2021
commissioner

ಮಂಗಳೂರು : ಶುಕ್ರವಾರ  ರಾತ್ರಿಯಿಂದ ಸೋಮವಾರ ಬೆಳಗ್ಗೆ 7 ರ ವರೆಗೆ ಇರುವ ವಾರಾಂತ್ಯ ಕರ್ಫ್ಯೂಗೆ ಮಂಗಳೂರು ನಗರ ಭಾಗದಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ನಗರ ಹೊರ ಭಾಗದಲ್ಲಿ ಜನರ ಓಡಾಟ ನಡೆಸುತ್ತಿದ್ದು, ಆ ಪ್ರದೇಶಗಳಲ್ಲಿಯೂ ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಹೇಳಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂಗೆ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ. ‌ ಶುಕ್ರವಾರ  ರಾತ್ರಿಯಿಂದ ಸೋಮವಾರ ಬೆಳಗ್ಗೆ 7 ರ […]

ಅಂತಾರಾಷ್ಟ್ರೀಯ ಮಾದಕ ವಿರೋಧಿ ದಿನಾಚರಣೆ, ಮಂಗಳೂರಲ್ಲಿ 354 ಕೆಜಿ ಮಾದಕ ವಸ್ತುಗಳ ನಾಶ

Saturday, June 26th, 2021
drugs

ಮಂಗಳೂರು : ಅಂತಾರಾಷ್ಟ್ರೀಯ ಮಾದಕ ವಿರೋಧಿ ದಿನಾಚರಣೆ ಹಿನ್ನೆಲೆ ಮಂಗಳೂರು ಕಮಿಷನರೇಟ್ ಹಾಗೂ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವ್ಯಾಪ್ತಿಯಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ  ಸುಮಾರು  50 ಪ್ರಕರಣಗಲ್ಲಿ ವಶಪಡಿಸಿಕೊಳ್ಳಲಾದ 354 ಕೆಜಿ ಮಾದಕ ದ್ರವ್ಯ ವಸ್ತುಗಳನ್ನು ಮುಲ್ಕಿ ಕೊಲನಾಡ್ ಜಂಕ್ಷನ್ ಸಮೀಪದ ಬಯೋ ಮೆಡಿಕಲ್ ವೇಸ್ಟ್ ಟ್ರೀಟ್‌ಮೆಂಟ್ ರೂಮ್‌ನಲ್ಲಿ ಶನಿವಾರ ನಾಶಪಡಿಸಲಾಯಿತು. ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಮಾದಕ ವಸ್ತು ವಿರೋಧಿ ದಿನದ ಪ್ರಯುಕ್ತ ನಡೆಸಿದ ಕಾರ್ಯಾಚರಣೆ ಹಾಗೂ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಂಡ […]

ಕಾನೂನುಬಾಹಿರವಾಗಿ ಮಸೀದಿಗೆ ಮಂಜೂರು ಮಾಡಿದ ಜಾಗ ವಾಪಾಸ್ ಪಡೆದ ಸರಕಾರ

Saturday, June 26th, 2021
masjid

ಉಡುಪಿ : ವಕ್ಫ್ ಬೋರ್ಡ್ ಮೂಲಕ 2018ರಲ್ಲಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಕೊಡವೂರು ಪಳ್ಳಿಜಿಡ್ಡದ ಕಲ್ಮತ್ ಮಸೀದಿಗೆ ಮಂಜೂರು ಮಾಡಲಾದ ಕೊಡವೂರು ಗ್ರಾಮದ ಸರ್ವೆ ನಂ 53/6ರಲ್ಲಿ 0.67 ಸೆಂಟ್ಸ್ ಜಾಗವನ್ನು ವಾಪಸ್  ಪಡೆದು ಜೂ.22ರಂದು ಸರಕಾರದ ಹೆಸರಿಗೆ ಅಧಿಸೂಚನೆ ಹೊರಡಿಸಲಾಗಿದೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ. ಕಂದಾಯ ಸಚಿವ ಆರ್.ಅಶೋಕ್ ಸೂಚನೆ ಮೇರೆಗೆ ಉಡುಪಿ ಜಿಲ್ಲಾಧಿಕಾರಿ ಸಲ್ಲಿಸಿರುವ ವರದಿಯಂತೆ ಮರಳಿ ವಶಕ್ಕೆ ಪಡೆಯಲಾಗಿದೆ. ಮಸೀದಿಗೆ ಈ ಜಾಗವನ್ನು ಮಂಜೂರು ಮಾಡಿರುವ ಬಗ್ಗೆ ಸ್ಥಳೀಯವಾಗಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಕಂದಾಯ ಸಚಿವರನ್ನು […]

ಫಲ್ಗುಣಿ ನದಿಗೆ ಸೇರುತ್ತಿರುವ ಕಪ್ಪು ಬಣ್ಣದ ಕಲುಷಿತ ನೀರು, ಮಂಗಳೂರಿನ ಜನರು ಇದೇ ನೀರನ್ನು ಕುಡಿಯುತ್ತಿದ್ದಾರೆ !

Friday, June 25th, 2021
Palguni-water

ಮಂಗಳೂರು : ಮಂಗಳೂರು ತಾಲೂಕಿನ ಪಚ್ಚನಾಡಿ ಮತ್ತು ಮಂದಾರ ಗ್ರಾಮದ ಸಾರ್ವಜನಿಕರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಾಯವಾಣಿ ಮೂಲಕ ಸಂಪರ್ಕಿಸಿ ಪಾಲ್ಗುಣಿ ನದಿಗೆ ಕಪ್ಪು ಬಣ್ಣದ ಕಲುಷಿತ ನೀರು ಬಿಡಲಾಗಿದ್ದು, ಮಂಗಳೂರಿನ ಜನರಿಗೆ ಕುಡಿಯುವ ನೀರನ್ನು ಪೂರೈಸಲು ಫಾಲ್ಗುಣಿ ನದಿಯ ನೀರನ್ನು ಬಳಸಲಾಗುತ್ತಿರುವುದಾಗಿ ಸಂಬಂಧಪಟ್ಟವರಿಗೆ ದೂರನ್ನು ನೀಡಿದ್ದರು. ಆದರೆ ಸಾರ್ವಜನಿಕರು ನೀಡಿರುವ ದೂರಿನ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಂಡಿರುವುದಿಲ್ಲವೆಂದು ತಿಳಿಸಿರುವುದರಿಂದ ಸದರಿ ಸ್ಥಳಕ್ಕೆ ಭೇಟಿ ನೀಡಲು ಅಧ್ಯಕ್ಷರು ಮತ್ತು ಪ್ರಧಾನ ಜಿಲ್ಲಾ ಮತ್ತು ಸತ್ರ […]