ಗಾಂಜಾ ಸಾಗಾಟ ಬೃಹತ್‌‌ ಜಾಲ ಬೇಧಿಸಿದ ಪೊಲೀಸರು, ನಾಲ್ವರು ಆರೋಪಿಗಳ ಬಂಧನ

Wednesday, May 26th, 2021
Ganja

ಮಂಗಳೂರು : ಮೂಡುಬಿದಿರೆ ಪೊಲೀಸ್‌ ಠಾಣಾ ಪಿಎಸ್‌ಐ ಸುದೀಮ್‌‌ ಹಾಗೂ ಸಿಬ್ಬಂದಿಗಳು ಹಾಗೂ ದಕ್ಷಿಣ ಉಪವಿಭಾಗ ಸ್ಕ್ವಾಡ್‌‌ ಸಿಬ್ಬಂದಿಗಳು ಉಳ್ಳಾಲ ವ್ಯಾಪ್ತಿಯಲ್ಲಿ ಖಚಿತ ಮಾಹಿತಿಯ ಮೇರೆಗೆ ಮೂಡುಬಿದಿರೆ ಪೊಲೀಸ್‌ ಠಾಣೆಯಲ್ಲಿ ದಾಖಲಾದ ದರೋಡೆ ಪ್ರಕರಣದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಕಾಸರಗೋಡು ನಿವಾಸಿ ಮಹಮ್ಮದ್ ಫಾರೂಕ್ (24) , ಕಾಸರಗೋಡಿನ ಮಂಜೇಶ್ವರ ನಿವಾಸಿ ಮೊಯಿದ್ದಿನ್ ನವಾಸ್ (34), ಕುಶಾಲನಗರ ನಿವಾಸಿ ಸೈಯದ್ ಮಹಮ್ಮದ್(31) ಹಾಗೂ ಮಂಗಳೂರಿನ ಮುಡಿಪು ನಿವಾಸಿ ಮಹಮ್ಮದ್ ಅನ್ಸಾರ್ (23) ಎಂದು ಗುರುತಿಸಲಾಗಿದೆ. ಆರೋಪಿಗಳು […]

ಲಾಕ್ ಡೌನ್ : ಶಾಮಿಯಾನ ಹಾಕಿ ಸಾಮೂಹಿಕ ನಮಾಜ್ ಯತ್ನ, ಪ್ರಕರಣ ದಾಖಲು

Wednesday, May 26th, 2021
namaz

ಮಂಗಳೂರು  : ಮಸೀದಿಯೊಂದರ ಕಾರ್ಯದರ್ಶಿಯ ಉಸ್ತುವಾರಿಯಲ್ಲಿ ಮಂಜನಾಡಿ ಗ್ರಾಮದಲ್ಲಿ 200 ಜನರನ್ನು ಸೇರಿಸಿ ಶಾಮಿಯಾನ  ಹಾಕಿ ಸಾಮೂಹಿಕ ನಮಾಜ್‌ಗೆ ತಯಾರಿ ನಡೆಸುತ್ತಿದ್ದಾಗ ಕೊಣಾಜೆ ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕರೊನಾ ನಿಯಂತ್ರಣ ನಿಟ್ಟಿನಲ್ಲಿ ಚರ್ಚ್, ದೈವ-ದೇವಸ್ಥಾನ, ಮಸೀದಿ, ಮಂದಿರಗಳನ್ನು ಬಂದ್ ಮಾಡಲಾಗಿದೆ. ಮಸೀದಿಗಳನ್ನು ಬಂದ್ ಮಾಡಿ ಸಾಮೂಹಿಕ ನಮಾಜ್‌ನಿಂದ ದೂರ ಇರುವಂತೆ ಉನ್ನತ ಧರ್ಮಗುರುಗಳು ಸೂಚನೆ ನೀಡಿದ್ದಾರೆ. ಆದರೆ ಮಂಜನಾಡಿ ಗ್ರಾಮದ ಮಸೀದಿಯೊಂದರ ಕಾರ್ಯದರ್ಶಿಯ ಉಸ್ತುವಾರಿಯಲ್ಲಿ ಕಳೆದ  ಶುಕ್ರವಾರ ಮಧ್ಯಾಹ್ನ 200 ಜನರನ್ನು ಸೇರಿಸಿ ಸಾಮೂಹಿಕ ನಮಾಜ್‌ಗೆ ಶಾಮಿಯಾನ ಸಹಿತ ವ್ಯವಸ್ಥೆ ಮಾಡಲಾಗಿತ್ತು. ಈ ಬಗ್ಗೆ […]

ಪಿಎಮ್ ಕೇರ್ ಫಂಡ್‌ದಿಂದ ರಾಜ್ಯಕ್ಕೆ ಬಂದಿರುವ ವೆಂಟಿಲೇಟರಗಳನ್ನುಕೂಡಲೇ ಉಪಯೋಗಿಸಿ

Wednesday, May 26th, 2021
ventilator

ಮಂಗಳೂರು : ವೆಂಟಿಲೇಟರ್ ಗಳ ಸೌಲಭ್ಯ ಸಿಗುವುದಕ್ಕೆ ಆಗುತ್ತಿರುವ ತೊಂದರೆ ಯ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಇಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಆರೋಗ್ಯ ಸಹಾಯ ಸಮಿತಿಯ ವತಿಯಿಂದ ಇಮೇಲ್ ಮೂಲಕ ಮನವಿ ಸಲ್ಲಿಸಲಾಯಿತು. ಇಂದು ಇಡೀ ರಾಜ್ಯ ಕೊರೋನಾ 2ನೇ ಅಲೆಗೆ ತತ್ತರಿಸಿ ಜಿಲ್ಲೆ, ತಾಲೂಕು ಸ್ಥರದ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ, ವೆಂಟಿಲೇಟರ ಸಿಗದೇ ಕೊರೋನಾ ರೋಗಿಗಳ ಮೃತ್ಯು ಪ್ರಮಾಣವು ಹೆಚ್ಚಾಗುತ್ತಿದೆ. ಇಂತಹ ಗಂಭೀರ ಪರಿಸ್ಥಿತಿಯನ್ನು ಎದುರಿಸಲು ರಾಜ್ಯಕ್ಕೆ ೮ ತಿಂಗಳ ಮೊದಲೇ ಪಿಎಮ್ ಕೇರ್ […]

ಮಂಗಳೂರು : ಗ್ರಾಮ ಪಂಚಾಯಿತಿ ಕಚೇರಿಯ ಸಮೀಪ ಮಾಸ್ಕ್ ಹಾಕಲು ಹೇಳಿದ ಪಿಡಿಒ ಕಪಾಳಕ್ಕೊಡೆದ ಯುವಕರು

Tuesday, May 25th, 2021
Rajendra Shetty

ಮಂಗಳೂರು : ಮಲ್ಲೂರ್ ಗ್ರಾಮ ಪಂಚಾಯಿತಿ ಸಮೀಪ ಅಲೆದಾಡುತ್ತಿದ್ದ  ಐದು ಮಂದಿ ಯುವಕರಿಗೆ  ಮಾಸ್ಕ್ ಧರಿಸುವಂತೆ ಹೇಳಿದ್ದಕ್ಕೆ ಸಾರ್ವಜನಿಕ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮೇಲೆ  ಮೇ 25 ರ ಮಂಗಳವಾರ ದಂದು  ಕಪಾಳಕ್ಕೊಡೆದು ಹಲ್ಲೆ ಮಾಡಲಾಗಿದೆ ಎಂದು ದೂರು ನೀಡಲಾಗಿದೆ. ಪಿಡಿಒ ರಾಜೇಂದ್ರ ಶೆಟ್ಟಿ ಅವರು ಗ್ರಾಮ ಪಂಚಾಯಿತಿ ಕಚೇರಿಯ ಸಮೀಪದಲ್ಲಿದ್ದ ಐದು ಮಂದಿ ಯುವಕರಿಗೆ ಮಾಸ್ಕ್  ಧರಿಸಿ ಕೋವಿಡ್ -19 ಮಾರ್ಗಸೂಚಿಗಳನ್ನು ಪಾಲಿಸುವಂತೆ ಕೇಳಿದ್ದರು ಎಂದು ಹೇಳಲಾಗಿದೆ. ಆದರೆ ಅಬೂಬಕರ್  ಎಂಬ ವ್ಯಕ್ತಿ  ಇತರ ನಾಲ್ವರೊಂದಿಗೆ ಸೇರಿ  ಪಿಡಿಒ ಮುಖದ ಮೇಲೆ  ಹಲ್ಲೆ […]

ಮೃತ್ಯುಂಜಯ ನದಿಯಲ್ಲಿ ಪ್ರವಾಹಕ್ಕೆ ಸಿಲುಕಿದ ಪಿಕಪ್ ವಾಹನ

Tuesday, May 25th, 2021
pickup vehicle

ಬೆಳ್ತಂಗಡಿ: ನದಿ ದಾಟುತಿದ್ದ ವೇಳೆ ಏಕಾಏಕಿ ಉಂಟಾದ ಪ್ರವಾಹಕ್ಕೆ ಪಿಕಪ್ ವಾಹನವೊಂದು ಕೊಚ್ಚಿಕೊಂಡು ಹೋದ ಘಟನೆ ಮಂಗಳವಾರ ಸಂಜೆ ಕಕ್ಕಿಂಜೆ ಸಮೀಪದ ಚಿಬಿದ್ರೆಯ ಮೃತ್ಯುಂಜಯ ನದಿಯಲ್ಲಿ ನಡೆದಿದೆ. ನದಿ ದಾಟಿ ಹೋದ ಪಿಕಪ್ ಹಿಂದೆ ಬರುತ್ತಿದ್ದಾಗ ನದಿಯ ನಡುವೆ ಹೋಗುತ್ತಿದ್ದ ವೇಳೆ ಏಕಾಏಕಿ ನೀರು ಉಕ್ಕಿ ಬಂದಿದ್ದು, ನಿಯಂತ್ರಣ ತಪ್ಪಿದ ಪಿಕಪ್  ವಾಹನ ಮಗುಚಿ ಬಿದ್ದಿದ್ದು, ಸ್ಥಳೀಯರು ಪಿಕಪ್ ಗೆ ಹಗ್ಗ ಹಾಕಿ ನೀರಿನಲ್ಲಿ ಕೊಚ್ಚಿಕೊಂಡು ಹೋಗದಂತೆ ತಡೆದರು.  

75 ವರ್ಷಗಳ ಹಿಂದೆ ನಿರ್ಮಾಣ ಗೊಂಡ ರಸ್ತೆಗೆ ರೂ 30ಲಕ್ಷ ವೆಚ್ಚದ ಕಾಂಕ್ರಿಟೀಕರಣ

Tuesday, May 25th, 2021
Rayi Road

ಬಂಟ್ವಾಳ: ಇಲ್ಲಿನ ರಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 75 ವರ್ಷಗಳ ಹಿಂದೆ ನಿರ್ಮಾಣ ಗೊಂಡ ರಾಯಿ-ಕೈತ್ರೋಡಿ ಗ್ರಾಮೀಣ ರಸ್ತೆಗೆ ರೂ 30ಲಕ್ಷ ವೆಚ್ಚದಲ್ಲಿ ಕಾಂಕ್ರಿಟೀಕರಣ ಕಾಮಗಾರಿ ಸೋಮವಾರ ಆರಂಭಗೊಂಡಿದೆ. ಈ ಹಿಂದೆ ಸ್ಥಳೀಯ ನಿವಾಸಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ದಿವಂಗತ ಕೆ.ಸಂತೋಷ್ ಕುಮಾರ್ ಭಂಡಾರಿ ಸಹಿತ ಮಾಜಿ ಸಚಿವ ಬಿ.ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲು ಇವರ ಪ್ರತ್ಯೇಕ ಅನುದಾನದಲ್ಲಿ ಮೂರು ಬಾರಿ ಡಾಂಬರೀಕರಣ ಮತ್ತು ತೇಪೆ ಡಾಂಬರೀಕರಣ ಕಾಮಗಾರಿ ನಡೆದಿದೆ. ಉಳಿದಂತೆ […]

ಕೋವಿಡ್ ನಿಯಂತ್ರಣ ಹಾಗೂ ನಿರ್ವಹಣಾ ಕಾರ್ಯದಲ್ಲಿ ಆರೋಗ್ಯ ಇಲಾಖೆಯ ಕಾರ್ಯ ಮಹತ್ವದ್ದು: ವಿ. ಪೊನ್ನುರಾಜ್

Tuesday, May 25th, 2021
Ponnuraj

ಮಂಗಳೂರು : ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ವೈದ್ಯಕೀಯ ಸಿಬ್ಬಂದಿಗಳು ವಿಳಂಬವಿಲ್ಲದೇ ಶೀಘ್ರದಲ್ಲಿ ತಮ್ಮ ತಮ್ಮ ಕಾರ್ಯಗಳನ್ನು ನಿರ್ವಹಿಸಿದಾಗ ಮಾತ್ರ ಕೋವಿಡ್ ಸೋಂಕು ಹತೋಟಿಗೆ ತರಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ. ಪೊನ್ನುರಾಜ್ ತಿಳಿಸಿದರು. ಅವರು ಇಂದು ನಗರದ ಜಿಲ್ಲಾ ಪಂಚಾಯತ್‍ನ ಕೆಸ್ವಾನ್ ವೀಡಿಯೋ ಕಾನ್ಫ್‍ರೆನ್ಸ್ ಹಾಲ್‍ನಲ್ಲಿ ಕೋವಿಡ್ -19 ನಿಯಂತ್ರಣ ಮತ್ತು ನಿರ್ವಹಣೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿ, ದೈನಂದಿನ ಸ್ವ್ಯಾಬ್ ಸಂಗ್ರಹ, ಅವುಗಳ ರವಾನೆ, ಪರೀಕ್ಷೆಯ ಫಲಿತಾಂಶ ನಂತರದಲ್ಲಿ ಸೋಂಕು ದೃಢಪಟ್ಟವರ ಪ್ರಾಥಮಿಕ […]

ಕನ್ನಡದಲ್ಲಿ ಪ್ರಮಾಣ ಸ್ವೀಕರಿಸಿದ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ

Monday, May 24th, 2021
Manjeshwara MLA Asraf

ಮಂಜೇಶ್ವರ: ಕೇರಳ ವಿಧಾನಸಭೆಗೆ ಆಯ್ಕೆಯಾದ ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಇಂದು (ಸೋಮವಾರ) ನಡೆಯಿತು. ಈ ಸಂದರ್ಭದಲ್ಲಿ ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕೆ.ಎಂ ಅಶ್ರಫ್ ಕನ್ನಡ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿ ಕನ್ನಡತನ ಮೆರೆದಿದ್ದಾರೆ. ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಬಹುಪಾಲು ಮಂದಿ ಕನ್ನಡಿಗರಿದ್ದಾರೆ. ಈ ಜಿಲ್ಲೆ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಗಡಿಗೆ ಹೊಂದಿ ಕೊಂಡಿರುವುದರಿಂದ ಕನ್ನಡ ಭಾಷೆಯ ಪ್ರಭಾವ ಇಲ್ಲಿ ಹೆಚ್ಚು. ಭೌಗೋಳಿಕವಾಗಿ ಕೇರಳಕ್ಕೆ ಸೇರಿದ್ದರೂ ಕೂಡ […]

ಯುವಕರ ಚಿಕನ್ ಟಿಕ್ಕಾ ಪಾರ್ಟಿಗೆ ರೈಡ್ ಮಾಡಿ, ಚಿಕನ್ ತಿಂದ ಪೊಲೀಸರು

Monday, May 24th, 2021
kasaragod Chicken Party

ಕಾಸರಗೋಡು  : ಯುವಕರ ಗುಂಪೊಂದು ಗುಂಪೊಂದು  ಮೇ 23 ರ ಭಾನುವಾರ ನಗರದಲ್ಲಿ ದಲ್ಲಿ ಚಿಕನ್ ಟಿಕ್ಕಾ ಪಾರ್ಟಿ ಆಯೋಜಿಸಿತ್ತು. ಲಾಕ್‌ಡೌನ್ ನಿರ್ಬಂಧಗಳನ್ನು ಕಡೆಗಣಿಸಿ ಪಾರ್ಟಿ ಮಾಡಿದ್ದರಿಂದ ಪೊಲೀಸರು ರೇಡ್ ಮಾಡಿದ್ದರು, ಪೊಲೀಸರನ್ನು ಕಂಡು ಯುವಕರ ಗುಂಪು ಟಿಕ್ಕಾ ಮತ್ತು ದ್ವಿಚಕ್ರ ವಾಹನಗಳನ್ನು ಬಿಟ್ಟು ಪರಾರಿಯಾದರು. ಯುವಕರ ಗುಂಪು ಪರಾರಿಯಾದ ತಕ್ಷಣ ಪೊಲೀಸರು  ಬಿಸಿ ಬಿಸಿಯಾಗಿದ್ದ ಚಿಕನ್ ಟಿಕ್ಕಾಗಳನ್ನು ತಿಂದು ಮುಗಿಸಿ  ನಂತರ ದ್ವಿಚಕ್ರ ವಾಹನವನ್ನು ಮಿನಿ ಟ್ರಕ್‌ನಲ್ಲಿ ಲೋಡ್ ಮಾಡುವ ಮೂಲಕ ಪೊಲೀಸ್ ಠಾಣೆಗೆ ಕೊಂಡು ಹೋದ ಘಟನೆ ನಡೆದಿದೆ. ಕೇರಳದಲ್ಲಿ ಮೇ 8 ರಿಂದ ವಾರಾಂತ್ಯದ […]

ಸ್ಥಳೀಯರಿಗೆ ಅನ್ಯಾಯ, ಎಂಆರ್‌ಪಿಎಲ್‌ ನೇಮಕಾತಿ ಪ್ರಕ್ರಿಯೆ ತಡೆಹಿಡಿಯಲು ಸಂಸದರ ಸೂಚನೆ

Monday, May 24th, 2021
naveen Andra

ಮಂಗಳೂರು: ಎಂಆರ್‌ಪಿಎಲ್‌ನ ನೇಮಕಾತಿಯಲ್ಲಿ ಸ್ಥಳೀಯರಿಗೆ ಅವಕಾಶ ನೀಡಲಿಲ್ಲ ಎಂದು ಆಕ್ಷೇಪಿಸಿ ದೂರುಗಳು ಬಂದ ಹಿನ್ನಲೆಯಲ್ಲಿ    ಸಂಸದ ನಳಿನ್‌ಕುಮಾರ್‌ ಕಟೀಲು ಅವರು ಎಂಆರ್‌ಪಿಎಲ್‌ನ ಆಡಳಿತ ನಿರ್ದೇಶಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಇತ್ತೀಚೆಗೆ ನಡೆದ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿಯುವಂತೆ ಅವರು ನಿರ್ದೇಶಿಸಿದ್ದಾರೆ. ಎಂಆರ್‌ಪಿಎಲ್‌ 200 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆದಿದ್ದು, ಈ ನೇಮಕಾತಿಯಲ್ಲಿ ಕರ್ನಾಟಕ ಹಾಗೂ ಸ್ಥಳೀಯ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಸಂಸದರ ಅಧ್ಯಕ್ಷತೆಯಲ್ಲಿ ಎಂಆರ್‌ಪಿಎಲ್‌ನ ಆಡಳಿತ ನಿರ್ದೇಶರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಲಾಯಿತು. […]