ಕೇರಳ ವಿಧಾನಸಭಾ ಚುನಾವಣೆ : ಕಾಸರಗೋಡು ಎಲ್‌‌ಡಿಎಫ್ -3 ಯುಡಿಎಫ್ -2 ಕ್ಷೇತ್ರಗಳಲ್ಲಿ ಗೆಲುವು

Sunday, May 2nd, 2021
Kasaragod

ಕಾಸರಗೋಡು : ಕೇರಳ  ವಿಧಾನಸಭಾ ಚುನಾವಣೆಯಲ್ಲಿ ಕಾಸರಗೋಡಿನ ಐದು ಕ್ಷೇತ್ರಗಳಲ್ಲಿ ಮೂರರಲ್ಲಿ ಸಿಪಿಎಂ ನೇತೃತ್ವದ ಎಲ್‌‌ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್  ಎರಡು  ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ತೀವ್ರ ಪೈಪೋಟಿ ಇದ್ದ ಮಂಜೇಶ್ವರದಲ್ಲಿ ಯುಡಿಎಫ್ ಕ್ಷೇತ್ರವನ್ನು ಉಳಿಸಿಕೊಂಡಿದ್ದು, ಕಾಸರಗೋಡು ಕ್ಷೇತ್ರದಲ್ಲಿ ಯುಡಿಎಫ್ ಅಧಿಪತ್ಯ ಮುಂದುವರಿಸಿದರೆ. ಉದುಮ, ಕಾಞ0ಗಾಡ್ ಮತ್ತು ತೃಕ್ಕರಿಪುರದಲ್ಲಿ ಎಲ್‌ಡಿಎಫ್ ಗೆಲುವು ಸಾಧಿಸಿದೆ. ಮಂಜೇಶ್ವರದಲ್ಲಿ ಬಿಜೆಪಿಯ ಕೆ.ಸುರೇಂದ್ರನ್ ಅವರನ್ನು 1,143 ಮತಗಳ ಅಂತರದಿಂದ ಸೋಲು ಅನುಭವಿಸಿದರು. ಎಣಿಕೆಯ ಎಲ್ಲಾ ಸುತ್ತುಗಳಲ್ಲೂ ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ ಅಶ್ರಫ್ ಮುನ್ನಡೆ ಕಾಯ್ದುಕೊಂಡು ಬಂದಿದ್ದು, ಅಂತಿಮವಾಗಿ ಸಣ್ಣ […]

ಈಜಲು ಹೋದ ಮೂವರು ಯುವಕರು ಹೊಳೆಯಲ್ಲಿ ಮುಳುಗಿ ಮೃತ್ಯು

Sunday, May 2nd, 2021
Shirva

ಶಿರ್ವ : ಈಜಲು ಹೋದ ಮೂವರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ರವಿವಾರ ಸಂಜೆ ಮೂಡುಬೆಳ್ಳೆ ಗ್ರಾಮದ ಪಾಂಬೂರು ಕಬೆಡಿ ಎಂಬಲ್ಲಿ ನಡೆದಿದೆ. ಮೃತರನ್ನು ಶಂಕರಪುರ ಸುಭಾಸ್‌ನಗರದ ಕ್ವಾಲ್ವಿನ್ ಕಸ್ತಲಿನೋ(21), ಜಾಬಿರ್(18), ರಿಝ್ವಾನ್(28) ಎಂದು ಗುರುತಿಸಲಾಗಿದೆ. ಕಬೆಡಿ ಎಂಬಲ್ಲಿ ಯುವಕರು ಹೊಳೆಯಲ್ಲಿ ಈಜುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಬಳಿಕ ಮುಳುಗು ತಜ್ಞರು ಯುವಕರ ಮೃತ ದೇಹ ಮೇಲಕ್ಕೆ ಎತ್ತಿದ್ದಾರೆ ಎಂದು ವರದಿಯಾಗಿದೆ. ಇನ್ನು ಸ್ಥಳಕ್ಕೆ ಶಿರ್ವ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ತ್ಯಾಜ್ಯದ ಪ್ಲಾಸ್ಟಿಕ್ ಬ್ಯಾಗನ್ನು ನೇತ್ರಾವತಿ ನದಿಗೆ ಎಸೆದ ಪ್ರಕರಣ, ಕೇಸು ದಾಖಲು

Saturday, May 1st, 2021
garbage

ಮಂಗಳೂರು :  ನೇತ್ರಾವತಿ ಸೇತುವೆಯಲ್ಲಿ ಕಾರು ನಿಲ್ಲಿಸಿ ತ್ಯಾಜ್ಯದ ಪ್ಲಾಸ್ಟಿಕ್ ಬ್ಯಾಗನ್ನು ನದಿಗೆ ಎಸೆಯುತ್ತಿದ್ದನ್ನು ಹಿಂಬದಿಯಲ್ಲಿದ್ದ ಇನ್ನೊಂದು  ಕಾರಿನವರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದನ್ನು ಗಮನಿಸಿ  ಮಂಗಳೂರು ಮಹಾನಗರ ಪಾಲಿಕೆಯ ಹಿರಿಯ ಆರೋಗ್ಯ ನಿರೀಕ್ಷಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಿ  ಕೆ.ಎ. 03 ಎನ್‌ಬಿ 4648 ಸಂಖ್ಯೆಯ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾ.ಹೆ.66ರ ಉಳ್ಳಾಲ ಸೇತುವೆಯಲ್ಲಿ ಶನಿವಾರ ಕಾರು ನಿಲ್ಲಿಸಿ ನದಿಗೆ ತ್ಯಾಜ್ಯ ಎಸೆಯುತ್ತಿದ್ದ ಶೈಲಜಾ ನಾಯಕ್, ರಚನಾ ನಾಯಕ್, ಸುಶೀಲಾ ಎಂಬವರ ವಿರುದ್ಧ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ […]

ದಂಡ ಕಟ್ಟಲು ಸೂಚಿಸಿದ ಟ್ರಾಫಿಕ್‌‌ ಎಸ್‌ಐಗೆ ಅವಾಜ್‌ ಹಾಕಿದ ಮಹಿಳೆ

Saturday, May 1st, 2021
woman

ಉಡುಪಿ : ಮಹಿಳೆಯೊಬ್ಬರು ಕಾರು ಚಲಾಯಿಸುವಾಗ ಮೊಬೈಲ್‌ನಲ್ಲಿ ಮಾತನಾಡಿದ್ದಕ್ಕೆ ದಂಡ ಕಟ್ಟಲು ಸೂಚಿಸಿದ ಟ್ರಾಫಿಕ್‌‌ ಎಸ್‌ಐಗೆ ಅವಾಜ್‌ ಹಾಕಿರುವ ಘಟನೆ ಉಡುಪಿಯ ಕ್ಲಾಕ್‌ ಟವರ್‌ ಬಳಿ ನಡೆದಿದೆ. ಮೊಬೈಲ್‌ನಲ್ಲಿ ಮಾತನಾಡುತ್ತಾ ಕಾರು ಚಲಾಯಿಸುತ್ತಿದ್ದ ಮಹಿಳೆಯನ್ನು ತಡೆದ ಟ್ರಾಫಿಕ್‌ ಎಸ್‌ಐ, ಕಾರನ್ನು ಬದಿಗೆ ನಿಲ್ಲಿಸಿ ಮಾತನಾಡಲು ಸೂಚಿಸಿದ್ದಾರೆ. ಅಲ್ಲದೇ ಮಾಡಿದ ತಪ್ಪಿಗೆ ದಂಡ ಕಟ್ಟಲು ಹೇಳಿದ್ದು, ಈ ವೇಳೆ ಮಹಿಳೆ, “ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದೀರಿ” ಎಂದು ಹೇಳಿದ್ದಾಳೆ. ಕೊರೊನಾ ಎಮರ್ಜೆನ್ಸ್‌ ಲಾಕ್‌ಡೌನ್‌ ಸಂದರ್ಭ ಅನಗತ್ಯವಾಗಿ ತಿರುಗಾಡುತ್ತಾ, ರಸ್ತೆ ನಿಯಮವನ್ನು ಉಲ್ಲಂಘಿಸಿದರೆ ಸುಮ್ಮನಿರುವುದಿಲ್ಲ” […]

ಪುತ್ತೂರಿನಲ್ಲಿ ಸಾಕು ನಾಯಿಗೂ ಮಾಸ್ಕ್‌ ತೊಡಿಸಿ ಪೇಟೆಗೆ ಬಂದ ವ್ಯಕ್ತಿ

Saturday, May 1st, 2021
dog Mask

ಪುತ್ತೂರು :  ಪೇಟೆಗೆ ಬಂದಾಗ ತಮ್ಮ ಜತೆ ಕರೆ ತಂದಿದ್ದ ಸಾಕು ನಾಯಿಗೂ ಮಾಸ್ಕ್‌ ತೊಡಿಸಿ ದ್ವಿಚಕ್ರ ವಾಹನದಲ್ಲಿ ಕರೆತಂದ ಘಟನೆ ಪುತ್ತೂರು ನಗರದಲ್ಲಿ ನಡೆದಿದೆ. ಪ್ರವೀಣ್‌ ಎಂಬವರು ಗುರುವಾರ ಬೆಳಗ್ಗೆ ಪುತ್ತೂರು ನಗರಕ್ಕೆ ದ್ವಿಚಕ್ರ ವಾಹನದಲ್ಲಿ ಬಂದಾಗ ನಾಯಿ ಮರಿಯನ್ನೂ ಕೂರಿಸಿಕೊಂಡು ಬಂದಿದ್ದರು. ಚೆಕ್‌ಪೋಸ್ಟ್‌ನಲ್ಲಿದ್ದ ಪೊಲೀಸರು ಇದನ್ನು ಗಮನಿಸಿದ್ದರು. ತಾವು ಮಾಸ್ಕ್‌ ಧರಿಸಿದ್ದಲ್ಲದೆ ನಾಯಿ ಮರಿಗೂ ಮಾಸ್ಕ್‌ ಹಾಕಿದ್ದರು. ನಮ್ಮ ಸುರಕ್ಷತೆ ಬಗ್ಗೆ ಕಾಳಜಿ ವಹಿಸುತ್ತಿರುವಾಗ ಸಾಕುಪ್ರಾಣಿಗಳ ಬಗೆಗೂ ಕಾಳಜಿ ವಹಿಸಬೇಕಲ್ಲವೇ? ಇದು ನಮ್ಮ ಜವಾಬ್ದಾರಿಯಲ್ಲವೇ ಎಂದು ಹೇಳಿದರು.

ಅಜ್ಜಿಬೆಟ್ಟುವಿನಲ್ಲಿ ಯುವಕನಿಗೆ ಚೂರಿ ಇರಿದ ಪ್ರಕರಣ, ಇಬ್ಬರ ಬಂಧನ

Saturday, May 1st, 2021
Bantwala Police

ಬಂಟ್ವಾಳ: ಬಿ.ಸಿ.ರೋಡ್ ಬಳಿಯ ಅಜ್ಜಿಬೆಟ್ಟು ಕ್ರಾಸ್ ನಲ್ಲಿ ಯುವಕನೋರ್ವನಿಗೆ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಟ್ವಾಳ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿ.ಸಿ.ರೋಡ್ ಕೈಕಂಬ ಸಮೀಪದ ಪರ್ಲ್ಯ ನಿವಾಸಿಗಳಾದ ಇಮ್ರಾನ್ ಮತ್ತು ಸಫ್ವಾನ್ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಬ್ರಹ್ಮರಕೋಟ್ಲು ನಿವಾಸಿ ಮನೋಜ್ ಸಪಲ್ಯ ಎಂಬವರಿಗೆ ಎ. 4ರಂದು ರಾತ್ರಿ ಬಿ.ಸಿ.ರೋಡ್ ಬಳಿಯ ಅಜ್ಜಿಬೆಟ್ಟು ಕ್ರಾಸ್ ನಲ್ಲಿ ಸ್ಕೂಟರ್ ನಲ್ಲಿ ಬಂದ ಇಬ್ಬರು ಚೂರಿಯಿಂದ ಇರಿದು ಪರಾರಿಯಾಗಿದ್ದರು ಎಂದು ದೂರು ದಾಖಲಾಗಿತ್ತು. ಚೂರಿ […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ 664 ಮಂದಿಗೆ ಕೊರೊನಾ ಸೋಂಕು, ನಾಲ್ವರ ಸಾವು

Wednesday, April 28th, 2021
Corona

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ 664 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹಾಗೆಯೇ 256 ಮಂದಿ ಸೋಂಕಿತರು ಬುಧವಾರ ಗುಣಮುಖರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ವರದಿಯಾದ 664 ಕೊರೊನಾ ವೈರಸ್‌ ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 42,729 ಕ್ಕೆ ಏರಿಕೆಯಾಗಿದೆ. ಈ ಪೈಕಿ 4694 ಪ್ರಕರಣಗಳು ಪ್ರಸ್ತುತ ಸಕ್ರಿಯವಾಗಿವೆ. ಒಟ್ಟು 7,29,742 ಮಾದರಿಗಳನ್ನು ಪರೀಕ್ಷಿಸಲಾಗಿದ್ದು ಅದರಲ್ಲಿ 687013 ಮಾದರಿಗಳು ನೆಗೆಟಿವ್‌‌ ಆಗಿದೆ. ಬುಧವಾರ 256 ಜನರು ಗುಣಮುಖರಾಗಿದ್ದು […]

ಮೋದಿ ಸಾಯಬೇಕು ಎಂದಿದ್ದ ವ್ಯಕ್ತಿಯ ಪತ್ನಿಯನ್ನು ಪದಮುಕ್ತಗೊಳಿಸಿದ ಬ್ಯಾರಿ ಸಾಹಿತ್ಯ ಅಕಾಡೆಮೆ

Wednesday, April 28th, 2021
Modi

ಮಂಗಳೂರು: ಪ್ರಧಾನಿ ಮೋದಿಯವರ ಬಗ್ಗೆ ವ್ಯಕ್ತಿಯೊಬ್ಬರು ಫೇಸ್ ಬುಕ್ ನಲ್ಲಿ ನರಕಯಾತನೆ ಅನುಭವಿಸಿ ಸಾಯುವಂತಾಗಲು ಎಲ್ಲರು ಪ್ರಾರ್ಥಿಸಬೇಕು ಎಂದು ಅವಹೇಳಕಾರಿ ಪೋಸ್ಟ್ ಮಾಡಿರುವ ಹಿನ್ನೆಲೆಯಲ್ಲಿ ಆತನ ಪತ್ನಿಯನ್ನು ಸದಸ್ಯೆ ಸ್ಥಾನದಿಂದ ಪದಮುಕ್ತಗೊಳಿಸಿದ ಘಟನೆ  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯಲ್ಲಿ ನಡೆದಿದೆ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಪತ್ರ ಮುಖೇನ ನಫೀಸಾ ಮಿಸ್ರಿಯಾ ಅವರಿಗೆ ಅಕಾಡೆಮಿ ಸದಸ್ಯತ್ವದಿಂದ ಪದಮುಕ್ತಗೊಳಿಸಿರುವ ಬಗ್ಗೆ ಆದೇಶ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಫೇಸ್ಬುಕ್ ಪೇಜ್ನಲ್ಲಿ ಕಾಂಗ್ರೆಸ್ ಮುಖಂಡರು ಎನ್ನಲಾದ ಲುಕ್ಮಾನ್ ಅಡ್ಯಾರ್ ಅವಹೇಳನಕಾರಿ ಪೋಸ್ಟ್ […]

ಕಲ್ಲಡ್ಕ ಡಾ| ಪ್ರಭಾಕರ ಭಟ್‌ರವರ ವಿಡಿಯೋ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿ ಕಿಡಿಗೇಡಿಗಳು, ದೂರು

Wednesday, April 28th, 2021
Prabhakara Bhat

ಬಂಟ್ವಾಳ:  ಆರೆಸ್ಸೆಸ್ ಮುಖಂಡ ಕಲ್ಲಡ್ಕ ಡಾ| ಪ್ರಭಾಕರ ಭಟ್‌ರವರ ಕುರಿತು ಅವಹೇಳಕಾರಿ ವೀಡಿಯೋವೊಂದನ್ನು ಸೃಷ್ಟಿಸಿ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ ಎಂದು ಆರೋಪಿಸಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಕುರಿತು ಭಜರಂಗದಳದ ಜಿಲ್ಲಾ ಸಹ ಸಂಚಾಲಕ ಗುರುರಾಜ್ ಬಂಟ್ವಾಳ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳ ಪತ್ತೆಗೆ ಆಗ್ರಹಿಸಿದ್ದಾರೆ. ಯಾವುದೋ ಆ್ಯಪ್‌ನ ಸಹಾಯದಿಂದ ಹಿಂದಿ ಹಾಡಿಗೆ ಅವರ ಮುಖದ ಮೂಲಕ ಅಭಿನಯ ಮಾಡುವ ರೀತಿಯಲ್ಲಿ ವಿಡಿಯೋದಲ್ಲಿ ಚಿತ್ರಿಸಲಾಗಿದೆ ಎಂದು ದೂರು ನೀಡಲಾಗಿದೆ.

ಕೊರೊನಾ ಸೋಂಕಿನಿಂದ ಇಂಡಿಯಾ ಆಸ್ಪತ್ರೆಯಲ್ಲಿ ಮೃತರಾದ ವೈದ್ಯೆ 8 ತಿಂಗಳ ಹಿಂದೆಯಷ್ಟೇ ಮದುವೆಯಾದ್ದರು

Wednesday, April 28th, 2021
Indiana

ಮಂಗಳೂರು: ಕೇರಳ ಮೂಲದ ಯುವ ವೈದ್ಯೆ ಕೊರೊನಾ ಸೋಂಕಿನಿಂದ ಇಂಡಿಯಾನ ಆಸ್ಪತ್ರೆ ಯಲ್ಲಿ ಮೃತಪಟ್ಟಿದ್ದಾರೆ. ನಗರದ ಪಂಪ್ ವೆಲ್ ಬಳಿಯ ಇಂಡಿಯಾನ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಹಿಳೆಗೆ ಇತ್ತೀಚೆಗೆ ಕೊರೊನಾ ಸೋಂಕು ತಗುಲಿತ್ತು‌. ಈ ಹಿನ್ನೆಲೆಯಲ್ಲಿ  ಆಕೆಯನ್ನು ಅದೇ ಆಸ್ಪತ್ರೆಯಲ್ಲಿ  ದಾಖಲಿಸಲಾಗಿತ್ತು. ಆದರೆ ಅವರು ಉಸಿರಾಟದ ಸಮಸ್ಯೆಯಿಂದ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಬೆಳಗ್ಗೆ ಮೃತಪಟ್ಟಿದ್ದಾರೆ. ದೇರಳಕಟ್ಟೆಯಲ್ಲಿರುವ ಕಣಚೂರು ಆಸ್ಪತ್ರೆಯಲ್ಲಿಯೂ ಆಕೆ ವೈದ್ಯೆಯಾಗಿ ಸೇವೆ ಸಲ್ಲಿಸಿದ್ದರು. ವೈದ್ಯೆಗೆ ವಿವಾಹವಾಗಿ ಕೇವಲ 8 ತಿಂಗಳಾಗಿದ್ದು, ಪತಿ-ಪತ್ನಿ ಇಬ್ಬರೂ ಇಂಡಿಯಾನ ಆಸ್ಪತ್ರೆಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದರು‌. […]