ವೃದ್ಧನನ್ನು ಅಪಹರಿಸಿ ಕೊಲೆ, ನಾಲ್ವರು ಆರೋಪಿಗಳ ಬಂಧನ

Tuesday, November 3rd, 2020
Palliyabba

ಮಂಗಳೂರು : ಇರಾ ಗ್ರಾಮದ ಮೂಳೂರು  ಡಬಲ್ ರೋಡ್ ನಿರ್ಜನ ಪ್ರದೇಶದ ಗುಡ್ಡ ಜಾಗದಲ್ಲಿ 71 ವರ್ಷದ ವೃದ್ಧನನ್ನು ಅಪಹರಿಸಿ ಕೊಲೆಗೈದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಕೋಣಾಜೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಂಗಳೂರಿನ ಮಲಾರ್ನ ಪಳ್ಳಿಯಬ್ಬ (71) ಎಂಬ ವೃದ್ಧರೊಬ್ಬರನ್ನು ಅ. 29ರಂದು ಅಪಹರಿಸಿ ಇರಾ ಗ್ರಾಮದ ಮೂಳೂರು ಡಬಲ್ ರೋಡ್ ನಿರ್ಜನ ಪ್ರದೇಶದ ಗುಡ್ಡ ಜಾಗದಲ್ಲಿ ಕೊಲೆ ಮಾಡಿ ಮೃತದೇಹವನ್ನು ಹೊಂಡ ತೆಗೆದು ಮುಚ್ಚಲಾಗಿತ್ತು. ಈ ಕೊಲೆ ಪ್ರಕರಣ ನಿನ್ನೆ ಬೆಳಕಿಗೆ ಬಂದಿದ್ದು, ಈ […]

ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಯೋದ್ಯೆ ರಾಮ ಮಂದಿರ ಭೇಟಿ

Tuesday, November 3rd, 2020
Pejavar Seer

ಉಡುಪಿ :  ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ  ರವಿವಾರ ಟ್ರಸ್ಟ್ ಸಭೆಯಲ್ಲಿ ಭಾಗವಹಿಸಿದ ನಂತರ ಸೋಮವಾರ ಅಯೋಧ್ಯೆಯಲ್ಲಿ ರಾಮಲಲ್ಲಾನ ದರ್ಶನ ಪಡೆದ ರಲ್ಲದೇ ಬಳಿಕ ರಾಮಮಂದಿರ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಭರದಿಂದ ನಡೆಯುತ್ತಿರುವ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿದರು. ಅಯೋದ್ಯೆ ರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ಕಾರ್ಯಾಲಯಕ್ಕೂ ಶ್ರೀಗಳು ಭೇಟಿ ನೀಡಿದರು. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ವಿಶ್ವಸ್ಥರೂ ಆಗಿರುವ ಅವರು ಇದೀಗ ಅಯೋಧ್ಯೆಗೆ ತೆರಳಿದ್ದು, ರವಿವಾರ ಟ್ರಸ್ಟ್ ಸಭೆಯಲ್ಲಿ ಭಾಗವಹಿಸಿದ ನಂತರ ಜನ್ಮಭೂಮಿಗೆ […]

ಚಿಕ್ಕಮಗಳೂರು ಪೊಲೀಸರ ಭರ್ಜರಿ ಬೇಟೆ – ಭಾರಿ ಪ್ರಮಾಣದ ಖೋಟಾ ನೋಟು ವಶ

Monday, November 2nd, 2020
Counterfeit note

ವಿಟ್ಲ: ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಠಾಣಾ ವ್ಯಾಪ್ತಿಯ ಹಾಂದಿ ಸರ್ಕಲ್ ಬಳಿ ಅನುಮಾನಾಸ್ಪದವಾಗಿ ಬರುತ್ತಿದ್ದ ಪುತ್ತೂರು ನೋಂದಣಿಯ ಮಾರುತಿ ಕಾರನ್ನು ತಡೆದ ಪೊಲೀಸರ ತಂಡ ತನಿಖೆ ನಡೆಸಿದಾಗ ಬರೋಬ್ಬರಿ 5,5೦ಲಕ್ಷ (500ರ ನೋಟುಗಳು) ನಕಲಿ ನೋಟುಗಳು ಪತ್ತೆಯಾಗಿದೆ. ಕಾರಿನಲ್ಲಿದ್ದ ಬೆಳ್ತಂಗಡಿಯ ಸಂತೋಷ್ ಮತ್ತು ಸುರತ್ಕಲ್ ನ ನಝೀರ್ ಎಂಬಿಬ್ಬರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಅಂತರ್ರಾಜ್ಯ ಖೋಟಾನೋಟು ಜಾಲ ಬೆಳಕಿಗೆ ಬಂದಿದೆ. ದೇಶದ್ರೋಹ ಪ್ರಕರಣದ ಕಿಂಗ್ ಪಿನ್ ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಕರಾಯಿ […]

ತುಳು ಅಕಾಡೆಮಿಯಲ್ಲಿ ಸ್ಥಾನ ಮಾನ ನೀಡದಿದ್ದರೆ ಆಡಿಯೋ ವೈರಲ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದರು : ಕತ್ತಲ್ ಸಾರ್

Monday, November 2nd, 2020
Kattalsar

ಮಂಗಳೂರು: ತುಳುನಾಡು ಟ್ರಸ್ಟ್’ ಸ್ಥಾಪಕಾಧ್ಯಕ್ಷ ಜಿ.ವಿ.ಎಸ್.ಉಳ್ಳಾಲ್ ನನ್ನ ಆಡಿಯೋ ಮಾಡಿಕೊಂಡು  ವಯ್ಯಕ್ತಿಕ ಹಗೆ ಸಾಧಿಸಿದ್ದಾರೆ ಎಂದು  ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಹೇಳಿದ್ದಾರೆ. ಜಿ.ವಿ.ಎಸ್.ಉಳ್ಳಾಲ್ ಮತ್ತು ಅವರ ಪತ್ನಿ ವಿದ್ಯಾಶ್ರೀ ಉಲ್ಲಾಳ್ ತುಳು ಅಕಾಡೆಮಿಯಲ್ಲಿ ಅಧಿಕೃತ ಸ್ಥಾನ ಮಾನಕ್ಕಾಗಿ ಬೇಡಿಕೆ ಇಟ್ಟಿದ್ದರು ಅದು ಸಾಧ್ಯವಿಲ್ಲಾ ಎಂದಿದ್ದಕ್ಕೆ ನಿಮ್ಮ ಆಡಿಯೋ ವೈರಲ್ ಮಾಡುತ್ತೇನೆ ಎಂದು ಬೆದರಿಕೆ  ಹಾಕಿದ್ದರು ಎಂದು  ಕತ್ತಲ್ ಸಾರ್ ಹೇಳಿದ್ದಾರೆ. ವಿದ್ಯಾಶ್ರೀ ಉಲ್ಲಾಳ್ ಕಾಂಗೆಸ್ಸ್ ಪಕ್ಷದವರು, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅವರು ತುಳು ಅಕಾಡೆಮಿಯಲ್ಲಿ ಸದಸ್ಯರಾಗಿದ್ದರು.  ಜಿ.ವಿ.ಎಸ್.ಉಳ್ಳಾಲ್  ನನ್ನನ್ನು ಶ್ವಾನ ವನ್ನು […]

ನಿಮಿಷಾಂಬಾ ದೇವಿಯ ಮಹಿಮೆ

Monday, November 2nd, 2020
nimishambha

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ನಿಮಿಷಾಂಬ ದೇವಾಲಯ ಪುರಾಣ ಪ್ರಸಿದ್ಧ ದೈವ ಕ್ಷೇತ್ರವಾಗಿದೆ. ಕಾವೇರಿ ನದಿಯ ತಟದಲ್ಲಿ ಗಂಜಾಂ ಎಂಬ ಗ್ರಾಮದಲ್ಲಿ ನಿಮಿಷಾಂಬ ದೇವಿಯು ಭಕ್ತರನ್ನು ಉದ್ಧರಿಸುತ್ತಿದ್ದಾಳೆ, ಈ ದೇಗುಲದಲ್ಲಿ ಶ್ರೀಚಕ್ರ ಸಹಿತ ಶ್ರೀ ನಿಮಿಷಾಂಬಾದೇವಿ ಇರುವುದು ವಿಶೇಷ, ಇದರ ಜೊತೆಗೆ ಗಣಪತಿ, ಸೂರ್ಯದೇವ, ಮುಕ್ತಿಕಾಶ್ವೇರ ಸ್ವಾಮಿ, ಲಕ್ಷ್ಮೀನಾರಾಯಣ ಸ್ವಾಮಿಯ ಸನ್ನಿಧಿಗಳು ಕಂಡುಬರುತ್ತದೆ. ಮೈಸೂರಿನ ರಾಜ […]

ದಿನ ಭವಿಷ್ಯ : ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ಅವರಿಂದ ದ್ವಾದಶ ರಾಶಿ ಫಲಗಳ ಮಾರ್ಗದರ್ಶನ

Monday, November 2nd, 2020
Manjunatha

ಶ್ರೀ ಮಂಜುನಾಥ ಸ್ವಾಮಿಯ ಸ್ಮರಣೆ ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್  ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ಸಂಗಾತಿಯೊಡನೆ ಪ್ರೇಮದ ಮನಸ್ಥಿತಿಯಲ್ಲಿರುವಿರಿ. ಮನೋವೇದನೆ ಗಳಿಂದ ಕಷ್ಟಗಳು ಹೆಚ್ಚಾಗಲಿದೆ. ಸ್ನೇಹದಲ್ಲಿ ವ್ಯವಹಾರ ಮಾಡುವುದು ಬೇಡ ಇದು ವಿಕೋಪಕ್ಕೆ ತಿರುಗುವ ಸಾಧ್ಯತೆ ಇದೆ. ಬಂಡವಾಳದ ಸಮಸ್ಯೆಗಳಿಂದ ನಿಮ್ಮ ಯೋಜನೆಗಳು ನಕಾರಾತ್ಮಕ ಫಲಿತಾಂಶ ತರಲಿದೆ. ಆರೋಗ್ಯದ ಹಿತದೃಷ್ಟಿಯಿಂದ ಉತ್ತಮ ಆಹಾರ ಸೇವನೆಗೆ ಒತ್ತು […]

ಮನ:ಶಾಂತಿಗಾಗಿ ಆಯೋಜಿಸುವ ಕಾರ್ಯಕ್ರಮಕ್ಕೆ ಕಾನೂನಿನ ರಕ್ಷಣೆ ಯಾವತ್ತೂ ಇದ್ದೇ ಇರುತ್ತದೆ – ಹಿರಿಯ ನ್ಯಾಯಾಧೀಶೆ ಎ. ಜಿ. ಶಿಲ್ಪಾ

Monday, November 2nd, 2020
kssap

ಮಂಗಳೂರು  : ನಾನು ನ್ಯಾಯಾಧೀಶಳಾಗಿ ಕಾನೂನನ್ನು ಪ್ರತಿನಿಧಿಸುತ್ತೇನೆ. ಕಡಿಮೆ ಮಾತನಾಡಿದಷ್ಟು ಹೆಚ್ಚು ಗೌರವ ಎಂದುಕೊಂಡಿದ್ದೇನೆ. ಆದರೆ ಭಾಷೆ ಮತ್ತು ಕಾನೂನಿನ ವಿಚಾರ ಬಂದಾಗ ನಾನು ಮಾತನಾಡಲೇ ಬೇಕಿದೆ. ಭಾಷೆ ಎಂಬುದು ಮಾನವ ಕುಲಕ್ಕೆ ಮಾತ್ರ ಸೀಮಿತವಾಗಿದೆ. ಮಗುವಿನ ತೊದಲು ನುಡಿಯಿಂದ ತಾಯಿ ಸಂಗೀತವನ್ನು ಆಲಿಸುತ್ತಾಳೆ. ಆ ಸಂಗೀತದಿಂದ ತನ್ನ ನೋವನ್ನು ಮರೆಯುತ್ತಾಳೆ. ಭಾಷೆ ಎಂಬುದು ಒಂದು ಒಲವಿನ ಸಂಸ್ಕೃತಿ ಇದ್ದಂತೆ ಎಂದು ಹಿರಿಯ ನ್ಯಾಯಾಧೀಶೆ/ದ.ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ. ಜಿ. ಶಿಲ್ಪಾ […]

ಮಂಗಳೂರು ನೆಹರೂ ಮೈದಾನಿನಲ್ಲಿ 65ನೇ ಕನ್ನಡ ರಾಜ್ಯೋತ್ಸವ

Sunday, November 1st, 2020
Kannada Rajyotsava

ಮಂಗಳೂರು : ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಂಗಳೂರು  ನೆಹರೂ ಮೈದಾನದಲ್ಲಿ  65ನೇ ಕನ್ನಡ ರಾಜ್ಯೋತ್ಸವದ  ಧ್ವಜಾರೋಹಣ ನೆರವೇರಿಸಿ ಬಳಿಕ ಗೌರವ ವಂದನೆ ಸ್ವೀಕರಿಸಿದರು. ಬಳಿಕ ಮಾತನಾಡಿದ  ಅವರ ಪೂರ್ತಿ ಸಂದೇಶ ಇಲ್ಲಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ, ಈ ದಿನ ಆಚರಿಸುತ್ತಿರುವ 65ನೇ ಕನ್ನಡ ರಾಜ್ಯೋತ್ಸವದ ಸುಸಂದರ್ಭದಲ್ಲಿ, ತಮ್ಮೆಲ್ಲರಿಗೂ ಜಿಲ್ಲಾಡಳಿತದ ಪರವಾಗಿ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕನ್ನಡವೇ ಧನ ಧಾನ್ಯ, ಕನ್ನಡವೇ ಮನೆ ಮಾನ್ಯ, ಕನ್ನಡವೇ ಎನಗಾಯ್ತು ಕಣ್ಣು –ಕಿವಿ-ಬಾಯಿ.. ಇದು ಮುತ್ಸದ್ಧಿ ನೇತಾರ, ಸಂವಿಧಾನ […]

‘ಕೋಟಿ ಚೆನ್ನಯ್ಯ ವಿಮಾನ ನಿಲ್ದಾಣ’ ಎಂದು ಹೆಸರಿಡಬೇಕು ಎಂದು ಅದಾನಿ ಕಂಪೆನಿಗೆ ಮನವಿ

Sunday, November 1st, 2020
Mithun Rai

ಮಂಗಳೂರು : ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ ಚೆನ್ನಯ್ಯ ವಿಮಾನ ನಿಲ್ದಾಣ’ ಎಂದು ಹೆಸರಿಡಬೇಕು ಎಂಬುದಾಗಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅದಾನಿ ಸಂಸ್ಥೆಯ ಅಧ್ಯಕ್ಷ ಗೌತಮ್ ಅದಾನಿ ಅವರಿಗೆ ಆಗ್ರಹಿಸಿದ್ದಾರೆ. ಈ ಕುರಿತು ಮಿಥುನ್ ರೈ ಅವರು ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ “ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆ ನಿಮ್ಮ ಕೈಗೆ ಬಂದಿರುವುದರಿಂದ ಅದಕ್ಕೆ ಅದಾನಿ ವಿಮಾನ ನಿಲ್ದಾಣ ಎಂದು ಹೆಸರು ಇಡುವುದಲ್ಲ, ಅದಕ್ಕೆ ಕೋಟಿ ಚೆನ್ನಯ್ಯ ವಿಮಾನ […]

ಕಾಸರಗೋಡು ಜಿಲ್ಲೆಯಲ್ಲಿ ನವಂಬರ್ 15 ರ ತನಕ 144 ನಿಷೇಧಾಜ್ಞೆ ವಿಸ್ತರಣೆ

Saturday, October 31st, 2020
Sajith Babu

ಕಾಸರಗೋಡು : ಜಿಲ್ಲೆಯಲ್ಲಿ  ಅಕ್ಟೋಬರ್ 3 ರಿಂದ ಜಾರಿಯಲ್ಲಿರುವ 144 ನಿಷೇಧಾಜ್ಞೆಯನ್ನು ನವಂಬರ್ 15 ರ ತನಕ ವಿಸ್ತರಿಸಿ ಜಿಲ್ಲಾಧಿಕಾರಿ ಡಾ .ಡಿ ಸಜಿತ್ ಬಾಬು ಆದೇಶ ಹೊರಡಿಸಿದ್ದಾರೆ. ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖ ಆಗದ ಕಾಣದ ಹಿನ್ನಲೆಯಲ್ಲಿ ಇನ್ನೂ 15 ದಿನಗಳ ಕಾಲ ನಿಷೇಧಾಜ್ಞೆಯನ್ನು ವಿಸ್ತರಿಸಲಾಗಿದೆ. ಮಂಜೇಶ್ವರ, ಕುಂಬಳೆ, ಬದಿಯಡ್ಕ, ಕಾಸರಗೋಡು, ವಿದ್ಯಾನಗರ, ಮೇಲ್ಪರಂಬ, ಬೇಕಲ, ಹೊಸದುರ್ಗ, ನೀಲೇಶ್ವರ, ಚಂದೇರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪರಪ್ಪ, ಒಡೆಯಂಚಾಲ್, ಪನತ್ತಡಿ ಪೇಟೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಸ್ತರಿಸಲಾಗಿದೆ. ಸೋಂಕು ನಿಯಂತ್ರಣದ […]