ಮುಡಿಪು ಭಾಗದಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದವರು ಶಾಸಕ ಯು.ಟಿ.ಖಾದರ್ ಸಂಬಂಧಿಗಳು !

Monday, October 19th, 2020
Rajesh Naik

ಮಂಗಳೂರು: ಮಾಜಿ ಸಚಿವರಾದ ಬಿ.ರಮಾನಾಥ ರೈ  ಆರೋಪಕ್ಕೆ ಉತ್ತರಿಸಿದ ಬಂಟ್ವಾಳ ಶಾಸಕ ಉಳಿಪಾಡಿಗುತ್ತು ರಾಜೇಶ್ ನಾಯ್ಕ್,  ನಾನು ಕೆಂಪು ಕಲ್ಲು ಗಣಿಗಾರಿಕೆ ಮಾಡುತ್ತಿಲ್ಲ. ನನ್ನ ಸಂಬಂಧಿಕರು ಕೂಡಾ ಅಂತಹ ವ್ಯವಹಾರದಲ್ಲಿ ತೊಡಗಿಸಿಕೊಂಡಿಲ್ಲಎಂದು ಹೇಳಿದ್ದಾರೆ. ಅವರು ಸೋಮವಾರ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮುಡಿಪು ಪ್ರದೇಶ ಬಂಟ್ವಾಳ ತಾಲೂಕು ಸರಹದ್ದಿನಲ್ಲಿದ್ದರೂ ಮಂಗಳೂರು ವಿಧಾನ ಸಭಾ ಕ್ಷೇತ್ರಕ್ಕೆ ಒಳಪಟ್ಟಿದೆ. ಅದು ನನ್ನ ಕ್ಷೇತ್ರದಲ್ಲಿ ಇಲ್ಲ,  ಬಿ.ರಮಾನಾಥ ರೈಯವರು ಸುದ್ದಿಗೋಷ್ಠಿಯಲ್ಲಿ ಆಡಳಿತ ಪಕ್ಷದ ಶಾಸಕರೊಬ್ಬರು ಅಕ್ರಮ ಕೆಂಪು ಕಲ್ಲು ಗಣಿಗಾರಿಕೆಯಲ್ಲಿ ತೊಡಗಿದ್ದಾರೆ. […]

ಕಾಳಿ ಚರಣ್ ಮಹಾರಾಜ್ ಸ್ವಾಮೀಜಿ ಮೂಡುಬಿದಿರೆ ಸಾವಿರ ಕಂಬದ ಬಸದಿಗೆ ಭೇಟಿ

Monday, October 19th, 2020
Kali charan swamiji

ಮಂಗಳೂರು: ಶಿವ ತಾಂಡವ ಸ್ತೋತ್ರ ಖ್ಯಾತಿಯ ಕಾಳಿ ಚರಣ್ ಮಹಾರಾಜ್ ಸ್ವಾಮೀಜಿ  ರವಿವಾರ ಮೂಡುಬಿದಿರೆ ತಾಲೂಕಿನ ಇತಿಹಾಸ ಪ್ರಸಿದ್ಧ ಸಾವಿರ ಕಂಬದ ಬಸದಿಗೆ  ಭೇಟಿ ನೀಡಿದರು. ಸಾವಿರ ಕಂಬದ ಬಸದಿಯ ಚಂದ್ರನಾಥ ಸ್ವಾಮಿ ಆಲಯ ಕ್ಷೇತ್ರಪಾಲ ದೇವರು, ನಾಗಾಲಯಗಳಿಗೆ ಭೇಟಿ ನೀಡಿ ದರ್ಶನ ಪಡೆದರು. ಬಸದಿಯ ವಾಸ್ತು ಶಿಲ್ಪಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಕಾಳಿ ಚರಣ್ ಮಹಾರಾಜ್ ಸ್ವಾಮೀಜಿಯವರು ಬಸದಿಯ ವಾಸ್ತು ವೈಭವಕ್ಕೆ ಬೆರಗಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಪ್ರಸಾದ್ ಕುಮಾರ್, ಜವನೆರ್ ಬೆದ್ರ ಸಂಘಟನೆಯ […]

ಪ್ರೀತಿಸಿ ಮದುವೆಯಾಗಿದ್ದ ಜೋಡಿಗೆ ರಾಡ್ ನಿಂದ ಹಲ್ಲೆ, ಪತ್ನಿ ಸಾವು, ಪತಿ ಗಂಭೀರ

Sunday, October 18th, 2020
Triveni Vinod

ಕೊಪ್ಪಳ: ಪ್ರೀತಿಸಿ ಮದುವೆಯಾಗಿದ್ದ ಜೋಡಿ ಮೇಲೆ ಅಪರಿಚಿತರು ದಾಳಿ ನಡೆಸಿ ಪತ್ನಿ ಸಾವನ್ನಪ್ಪಿದ್ದು, ಗಂಭೀರಾವಾಗಿ ಗಾಯಗೊಂಡಿರುವ ಪತಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ಆರು ತಿಂಗಳ ಹಿಂದೆ  ಪ್ರೀತಿಸಿ ಮದುವೆಯಾಗಿದ್ದ ಜೋಡಿ ಮೇಲೆ  ಈ ರೀತಿ ಭಯಾನಕ ದಾಳಿ ನಡೆದಿದೆ. ಘಟನೆಯಲ್ಲಿ ತ್ರಿವೇಣಿ (35) ಸ್ಥಳದಲ್ಲಿ ಮೃತರಾಗಿದ್ದು, ಪತಿ ವಿನೋದ್ (30) ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ನಿವಾಸಿಯಾಗಿದ್ದ ದಂಪತಿ ಆರು ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರು ಬ್ಯಾಂಕ್ ಉದ್ಯೋಗಿಗಳಾಗಿದ್ದು, ಕಾರಟಗಿಯಲ್ಲಿ ವಾಸವಾಗಿದ್ದರು. […]

ಬೆಳ್ತಂಗಡಿ ತಾಲೂಕಿನಲ್ಲಿ ಗಬ್ಬದ ಹಸುವಿನ ಮೇಲೆ ಚಿರತೆ ದಾಳಿ

Sunday, October 18th, 2020
leapored

ಬೆಳ್ತಂಗಡಿ : ಚಿರತೆಯೊಂದು ಬೆಳ್ತಂಗಡಿ ತಾಲೂಕಿನ ಕರಿಮಣೇಲು ಗ್ರಾಮದಲ್ಲಿ ಗಬ್ಬದ ಹಸುವಿನ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ಮೂರು ದಿನಗಳ ಹಿಂದೆ  ಹೋರಿಯನ್ನು ಹಟ್ಟಿಯಿಂದ ಹೊತ್ತೊಯ್ದು ತಿಂದು ಹಾಕಿತ್ತು. ಇದೀಗ ಶನಿವಾರ ರಾತ್ರಿ ಮತ್ತೆ ಖಂಡಿಗ ನಿವಾಸಿ ಜಯರಾಮ್ ಶೆಟ್ಟಿಯರ ತೋಟದಲ್ಲಿ ಗಬ್ಬದ ಹಸುವಿಗೆ ಆಕ್ರಮಣ ಮಾಡಿ ಗಾಯಗೊಳಿಸಿದೆ. ಸ್ಥಳಕ್ಕೆ ಭೇಟಿ ನೀಡಿರುವ ವೇಣೂರು ಅರಣ್ಯ ಇಲಾಖೆಯ ಅಧಿಕಾರಿಗಳು ಬೋನ್ ಅಳವಡಿಸಿ ಶೀಘ್ರ ಚಿರತೆಯನ್ನು ಪತ್ತೆ ಮಾಡುವ ಭರವಸೆಯನ್ನು ಗ್ರಾಮಸ್ಥರಿಗೆ ನೀಡಿದ್ದಾರೆ. ಆದರೆ ಇಲ್ಲಿನ ಜನತೆ ಮಾತ್ರ […]

ಕುಕ್ಕೆ ಸುಬ್ರಹ್ಮಣ್ಯ ಮಠದ ಬಳಿ ಬೆಂಗಳೂರು ಮೂಲದ ಯುವಕ ಆತ್ಮಹತ್ಯೆ

Sunday, October 18th, 2020
Ranganath

ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ದ ಉತ್ತರಾದಿ ಮಠದ ಬಳಿ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಮದ್ಯಾಹ್ನ ಸಂಭವಿಸಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಬೆಂಗಳೂರು ಮೂಲದ ರಂಗನಾಥ್ (25) ಎಂದು ಗುರುತಿಸಲಾಗಿದೆ. ಈತ ವಾರದ ಹಿಂದೆ ಮನೆ ಬಿಟ್ಟು ಸುಬ್ರಹ್ಮಣ್ಯಕ್ಕೆ ಬಂದಿದ್ದ ಎಂದು ತಿಳಿದು ಬಂದಿದೆ. ಈತನ ಆತ್ಮಹತ್ಯೆ ಗೆ ಕಾರಣ ಏನೆಂದು ತಿಳಿದು ಬಂದಿಲ್ಲ. ಮೃತ ದೇಹವನ್ನು ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯಲಾಗಿದೆ. ಘಟನಾ ಸ್ಥಳಕ್ಕೆ ಸುಬ್ರಹ್ಮಣ್ಯ ಪೋಲಿಸರು ಭೇಟಿ ನೀಡಿ […]

ಬಿಜೆಪಿ ಶಾಸಕರೊಬ್ಬರ ಸಂಬಂಧಿ ಮುಡಿಪು ಬಳಿ ಗಣಿಗಾರಿಕೆ ನಡೆಸುತ್ತಿರುವುದು ವಿಪರ್ಯಾಸ : ರಮಾನಾಥ ರೈ

Sunday, October 18th, 2020
Ramanatha Rai

ಮಂಗಳೂರು: ಮುಡಿಪು ಸಮೀಪ ನಡೆಯುತ್ತಿರುವ ಅಕ್ರಮ ರೆಡ್ ಬಾಕ್ಸೈಟ್ ಗಣಿಗಾರಿಕೆಯ ತನಿಖೆಯನ್ನು ರಾಜ್ಯದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ನೇತೃತ್ವದಲ್ಲಿ ಸಮಿತಿ ರಚಿಸಿ, ತನಿಖೆ ಕೈಗೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಬಿ ರಮಾನಾಥ ರೈ  ಹೇಳಿದ್ದಾರೆ . ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಅವರು  ಮುಡಿಪು, ಬಾಳೆಪುಣಿ, ಇನೋಳಿ ಸೇರಿದಂತೆ ಕೇರಳದ ಗಡಿ ಭಾಗದ ರೆಡ್ ಬಾಕ್ಸೈಟ್ ಗಣಿಗಾರಿಕೆಯಲ್ಲಿ ಸ್ಥಳೀಯರೊಂದಿಗೆ ಕೇರಳ, ತಮಿಳುನಾಡು, ಆಂಧ್ರ ಪ್ರದೇಶದ ಧಂದೆಕೋರರು ಇದ್ದಾರೆ. ಇವರು ಅಧಿಕಾರಿಗಳ ಮೇಲೆ […]

ಮಹತೋಭಾರ ಮಂಗಳಾದೇವಿ ದೇವಸ್ಥಾನದ ನವರಾತ್ರಿ ಮಹೋತ್ಸವ

Sunday, October 18th, 2020
Mangaladevi

ಮಂಗಳೂರು: ಮಹತೋಭಾರ ಮಂಗಳಾದೇವಿ ದೇವಸ್ಥಾನದ ನವರಾತ್ರಿ ಮಹೋತ್ಸವವು ಅಕ್ಟೋಬರ್ 17 ರಿಂದ ಆರಂಭಗೊಂಡಿದೆ. ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚು ಜನಸಂದಣಿ ಸೇರದಂತೆ ಉತ್ಸವದ ಸಮಯ ಬದಲಾವಣೆ ಮಾಡಲಾಗಿದೆ. ಸಾರ್ವಜನಿಕ ಅನ್ನಸಂತರ್ಪಣೆ ಇರುವುದಿಲ್ಲ ಎಂದು ಎಂದು ಆಡಳಿತ ಮೊಕ್ತೇಸರ ಪಿ.ರಮಾನಾಥ ಹೆಗ್ಡೆ ಹೇಳಿದ್ದಾರೆ. ಮಹಾನವಮಿಯಂದು ಚಂಡಿಕಾಹೋಮ, ವಾಹನ ಪೂಜೆ (ಆಯುಧ ಪೂಜೆ), ರಾತ್ರಿ ದೊಡ್ಡ ವಿಶೇಷ ರಂಗಪೂಜೆ ನಂತರ ಸಣ್ಣ ರಥೋತ್ಸವ ನೆರವೇರಿಸಲಾಗುವುದು. ವಿಜಯದಶಮಿಯಂದು ಬೆಳಿಗ್ಗೆ ತೆನೆ ಹಬ್ಬದ ಅಂಗವಾಗಿ 8 ಗ್ರಾಮದ ಜನರಿಗೆ ತೆನೆ ನೀಡುವ ಪದ್ಧತಿ […]

ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ನೂತನ ಮೇಳ 27ರಿಂದ ಆರಂಭ

Saturday, October 17th, 2020
Patla Mela

ಮಂಗಳೂರು: ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದಲ್ಲಿ ನೂತನ ಮೇಳ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವಠಾರದಲ್ಲಿ ಯಕ್ಷಗಾನ ಪ್ರದರ್ಶನದೊಂದಿಗೆ ಉದ್ಘಾಟನೆಗೊಳ್ಳಲಿದೆ. ನವೆಂಬರ್‌ 27ರಿಂದ ಮೇಳ ತಿರುಗಾಟ ಆರಂಭಿಸಲಿದೆ. ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ.ಶಶೀಂದ್ರ ಕುಮಾರ್ ಮಾತನಾಡಿ, ನಮ್ಮ ಕ್ಷೇತ್ರದ ವತಿಯಿಂದ ಈ ಬಾರಿಯಿಂದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಎಂಬ ನೂತನ ಯಕ್ಷಗಾನ ಮೇಳ ತಿರುಗಾಟ ನಡೆಸಲಿದೆ. ಅಕ್ಟೋಬರ್ 26 ವಿಜಯದಶಮಿ‌ಯಂದು […]

ಮಂಗಳೂರು ದಸರಾ ಮಹೋತ್ಸವಕ್ಕೆ ಕೋವಿಡ್ ವಾರಿಯರ್ ಡಾ.ಆರತಿ ಕೃಷ್ಣ ಚಾಲನೆ

Saturday, October 17th, 2020
Kudroli dasara

ಮಂಗಳೂರು: ಮಂಗಳೂರು ದಸರಾ ಮಹೋತ್ಸವಕ್ಕೆ ಕೋವಿಡ್ ವಾರಿಯರ್ ಆಗಿ ಕಾರ್ಯನಿರ್ವಹಿಸಿದ ಎನ್ಆರ್ಐ ಫೋರಂನ ಮಾಜಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಇಂದು ಮಧ್ಯಾಹ್ನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಚಾಲನೆ ನೀಡಿದರು. ನವದುರ್ಗಾ, ಗಣಪತಿ ಹಾಗೂ ಶಾರದಾ ಮಾತೆಯ ಮೂರ್ತಿಯ ಪ್ರತಿಷ್ಠಾಪನೆಯ ಬಳಿಕ ಡಾ‌.ಆರತಿ ಕೃಷ್ಣ ದೀಪ ಬೆಳಗಿಸಿ ಚಾಲನೆ ನೀಡಿದರು. ಈ ಬಾರಿ ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ದಸರಾ ಮಹೋತ್ಸವವು ‘ನಮ್ಮ ದಸರಾ ನಮ್ಮ ಸುರಕ್ಷೆ’ ಎಂಬ ಘೋಷ ವಾಕ್ಯದಡಿ ಆಚರಣೆಯಾಗಲಿದೆ. ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ […]

ತೀಥ೯ ಸ್ವರೂಪಿಣಿಯಾಗಿ ಉಕ್ಕಿ ಹರಿದ ಕಾವೇರಿ ಜೀವ ನದಿ

Saturday, October 17th, 2020
Tala Kavery

ಮಡಿಕೇರಿ : ಕಾವೇರಿ ಶನಿವಾರ ಬೆಳಗ್ಗೆ ಕನ್ಯಾ  ಲಗ್ನದಲ್ಲಿ 7 ಗಂಟೆ 04 ನಿಮಿಷಕ್ಕೆ ಬ್ರಹ್ಮಗಿರಿ ತಪ್ಪಲಿನ ಪವಿತ್ರ ತಾಣದಲ್ಲಿ ತೀಥ೯ ಸ್ವರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಿದ್ದಾಳೆ. ಗೋಪಾಲ್ ಕೃಷ್ಣ ಆಚಾರ್ ನೃತೃತ್ವದಲ್ಲಿಬ್ರಹ್ಮಕುಂಡಿಕೆಯ ಬಳಿ ವಿವಿಧ ಪೂಜಾ ಕೈಂಕರ್ಯ ನೆರವೇರಿದ್ದು,  ಈ ಬಾರಿ ಕೊರೊನಾ ಹಿನ್ನೆಲೆ ತಲಕಾವೇರಿ ಕ್ಷೇತ್ರದಲ್ಲಿ ಕೇವಲ 500-600 ಭಕ್ತರಿಂದ ಮಾತ್ರ ಕಾವೇರಿ ತೀರ್ಥೋದ್ಭವ ದಶ೯ನಕ್ಕೆ ಅವಕಾಶ ನೀಡಲಾಗಿತ್ತು. ತೀರ್ಥೋದ್ಭವದ ವೇಳೆ ಜೈಜೈ ಮಾತಾ,ಕಾವೇರಿ ಮಾತೆ ಎಂಬ ಉದ್ಘೋಷದ ಕೇಳಿ ಬಂತು. ಭಾಗಮಂಡಲದ ಭಗಂಡೇಶ್ವರ ದೇಗುಲದಲ್ಲೂ […]