ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಂಜಾನ್ ವೃತ ಆಚರಣೆ

Tuesday, May 14th, 2019
Ramzan

ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಂಜಾನ್ ಮೊದಲ ದಿನದ ಆಚಣೆಯನ್ನು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅಗಮಿಸಿದ ಉದ್ಯಮಿ ಅಬುಲಾಲ್ ಪುತ್ತಿಗೆ ಆಳ್ವಾಸ್ ಕಾಲೇಜಿನಲ್ಲಿ ಸರ್ವ ಧರ್ಮವನ್ನು ಗೌರವಿಸುವ ಸಂಸ್ಥೆ ಅದ್ದರಿಂದ ಇಲ್ಲಿನ ವಿದ್ಯಾರ್ಥಿಗಳು ಪುಣ್ಯವಂತರು. ನಾವೆಲ್ಲರು ಸಮಾಜದಲ್ಲಿ ಬೆರೆತು ಬಾಳುವುದರ ಜೊತೆಗೆ ಸಮಾಜದ ಉನ್ನತಿಗೆ ಶ್ರಮಿಸಬೇಕು. ಎಲ್ಲರನ್ನು ಗೌರವಿಸಿ, ಎಲ್ಲ ಧರ್ಮವನ್ನು ಗೌರವಿಸುವ ಪ್ರಜೆಗಳಾಬೇಕೆಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೆಜಿಂಗ್ ಟ್ರಸ್ಟೀ ವಿವೇಕ್ ಆಳ್ವ, ಉದ್ಯಮಿ ಮುಸ್ತಾಪ, ಇಂಜಿನಿಯರ್ ಮೊಹಮ್ಮದ್ ಶರೀಫ್, ಸಿ.ಎಚ್. […]

ಲಂಚ ಸ್ವೀಕರಿಸಿದ ಕೊಕ್ಕಡ ಗ್ರಾಪಂ ಅಧ್ಯಕ್ಷ ಅಮಾನತು

Monday, May 13th, 2019
sebastian

ಮಂಗಳೂರು : ಕೊಕ್ಕಡ ಗ್ರಾಪಂ ಅಧ್ಯಕ್ಷ ವಿ.ಜೆ.ಸೆಬಾಸ್ಟಿಯನ್ ಅವರ ಅಧ್ಯಕ್ಷ ಸ್ಥಾನ ಮತ್ತು ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧೀನ ಕಾರ್ಯದರ್ಶಿ ಹಾಗೂ ಉಪ ನಿರ್ದೇಶಕ ಮುಬಾರಕ್ ಅಹ್ಮದ್ ಆದೇಶ ಹೊರಡಿಸಿದ್ದಾರೆ. 2017-18ನೇ ಸಾಲಿನಲ್ಲಿ ನಡೆಸಿರುವ ವಿವಿಧ ಕಾಮಗಾರಿಗಳ ಹಣಕಾಸು ಮಂಜೂರು ಮಾಡಲು ಗುತ್ತಿಗೆದಾರ ಉಮರ್ ಅಲಿಯಾಸ್, ಇಬ್ರಾಹೀಂ ಎಂಬವರಿಗೆ 50 ಸಾವಿರ ರೂ. ಲಂಚ ನೀಡುವಂತೆ ವಿ.ಜೆ.ಸೆಬಾಸ್ಟಿಯನ್ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ 20 ಸಾವಿರ […]

ದೈವ ಪಾತ್ರಿಯ ಮೇಲೆ ಹಲ್ಲೆ ನಡೆಸಿದ ಯುವಕರು

Monday, May 13th, 2019
Patri

ಮಂಗಳೂರು : ದೈವ ಪಾತ್ರಿಯೊಬ್ಬರ ತಲೆ ಬೋಳಿಸಿ ಹಲ್ಲೆ ನಡೆಸಿದ ಘಟನೆ ಮಂಗಳೂರಿನ ನಗರದ ಬಿಕರ್ನಕಟ್ಟೆ ಎಂಬಲ್ಲಿ ನಡೆದಿದ್ದು, ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ದೈವಪಾತ್ರಿಯೊಬ್ಬರಿಗೆ ಮಹಿಳೆಯರೂ ಸಹಿತ ಕೂದಲನ್ನು ಬಲವಂತವಾಗಿ ಕತ್ತರಿಸಿ ಹಲ್ಲೆ ನಡೆಸಿರುವುದು ದಾಖಲಾಗಿದೆ. ಇಲ್ಲಿಯ ಸ್ಥಳೀಯ ದೈವ ಪಾತ್ರಿ ಲೋಕೇಶ್ ಪೂಜಾರಿ ಅವರ ಮೇಲೆ ಈ ಹಲ್ಲೆ ನಡೆಸಲಾಗಿದ್ದು, ದೈವದ ನರ್ತನ ಸೇವೆ ನಡೆದ ಬಳಿಕ ಕೆಲವರು ಸೇರಿ ಈ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಲೋಕೇಶ್ ಅವರಿಗೆ […]

ಕದ್ರಿ ಶ್ರೀ ಮಂಜುನಾಥ ದೇವರಿಗೆ ಸಂಭ್ರಮದ ಬ್ರಹ್ಮಕಲಶಾಭಿಷೇಕ

Saturday, May 11th, 2019
Kadri Manjunatha

ಮಹಾನಗರ: ಕದ್ರಿ ಮಠಾಧೀಶ ಶ್ರೀ ರಾಜಾ ನಿರ್ಮಲ ನಾಥ್‌ ಜೀ ಅವರ ಉಪಸ್ಥಿತಿ ಯಲ್ಲಿ ದೇರೆ ಬೈಲ್‌ ಬ್ರಹ್ಮಶ್ರೀ ವಿಟಲದಾಸ್‌ ತಂತ್ರಿಯವರ ನೇತೃತ್ವದಲ್ಲಿ ಕದ್ರಿ ಶ್ರೀ ಮಂಜುನಾಥ ದೇವರಿಗೆ  ಬೆಳಗ್ಗೆ 7 ಗಂಟೆಯಿಂದಲೇ ಕಲಶಾಭಿಷೇಕ ಪ್ರಾರಂಭವಾಗಿ, 9.35ರ ಮಿಥುನ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ ಗುರುವಾರ ನಡೆಯಿತು. ಬಳಿಕ ಪ್ರಾಚೀನ ಮೂರ್ತಿಗಳಿಗೆ ವಿಶೇಷ ಕಲಶಾಭಿಷೇಕ, ಅವಸ್ರುತ ಬಲಿ ಜರಗಿ ಶ್ರೀ ದೇವರಿಗೆ ಮಹಾ ಪೂಜೆ ನಡೆ ಯಿತು. ಸಹಸ್ರಾರು ಭಕ್ತರು ಬ್ರಹ್ಮಕಲ ಶಾಭಿಷೇಕವನ್ನು ಕಣ್ತುಂಬಿಕೊಂಡು ಶ್ರೀ ದೇವರ ದರ್ಶನ ಪಡೆದರು. […]

ಪಲಿಮಾರು ಮಠದ ಉತ್ತರಾಧಿಕಾರಿಯಾಗಿ ಶೈಲೇಶ ಉಪಾಧ್ಯಾಯ

Saturday, May 11th, 2019
Palimaru

ಉಡುಪಿ: ಶ್ರೀ ಪಲಿಮಾರು ಮಠದ ಉತ್ತರಾಧಿಕಾರಿಯಾಗಿ ನಿಯುಕ್ತಿಗೊಳ್ಳಲಿರುವ ವಟು ಶೈಲೇಶ ಉಪಾಧ್ಯಾಯ ಅವರು ಶುಕ್ರವಾರ ಪ್ರಾತಃಶುಭಕಾಲದಲ್ಲಿ ಸನ್ಯಾಸಾಶ್ರಮವನ್ನು ಸ್ವೀಕರಿಸಿದರು. ಗುರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಶಿಷ್ಯನಿಗೆ ಪ್ರಣವ ಮಂತ್ರೋಪದೇಶವನ್ನು ನೀಡಿದರು. ಅಕ್ಷಯ ತೃತೀಯಾದ ಶುಭ ದಿನ ಆರಂಭವಾದ ಶಿಷ್ಯ ಸ್ವೀಕಾರ ಪ್ರಕ್ರಿಯೆಯ ಭಾಗವಾಗಿ ಗುರು ವಾರ ರಾತ್ರಿ ಶಾಕಲ ಮಂತ್ರದ ಹೋಮ ನಡೆಯಿತು. ಶಾಸ್ತ್ರದಂತೆ ಉಪವಾಸವಿದ್ದು ಜಾಗರಣೆ ಮಾಡಿದ ಶೈಲೇಶರು ಪ್ರಾತಃಕಾಲ ಸನ್ಯಾಸಾಶ್ರಮವನ್ನು ಸ್ವೀಕರಿಸಿದರು. ಇದಕ್ಕೆ ಪೂರ್ವಭಾವಿಯಾಗಿ ರಾತ್ರಿ ನಡೆದ ಹೋಮದ ಅಗ್ನಿಯನ್ನು ಉಳಿಸಿಕೊಂಡು ಶುಕ್ರವಾರ ಬೆಳಗ್ಗೆ […]

ತಲೆಮೇಲೆ ಪೈಪ್​ ಬಿದ್ದು ಎಂಆರ್‌ಪಿಎಲ್‌ ಗುತ್ತಿಗೆ ಕಾರ್ಮಿಕ ಸಾವು

Monday, May 6th, 2019
mrpl vakil kumar

ಮಂಗಳೂರು : ನಗರದ ಎಂಆರ್‌ಪಿಎಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗುತ್ತಿಗೆ ಕಾರ್ಮಿಕ ಒಬ್ಬನ ಮೇಲೆ ಪೈಪ್‌ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಉತ್ತರಪ್ರದೇಶದ ಕುಶಿನಗರ ಮೂಲದ ಹಾಗೂ ಪ್ರಸ್ತುತ ಜೋಕಟ್ಟೆ ನಿವಾಸಿಯಾದ ವಕೀಲ್‌ಕುಮಾರ್ (37) ಮೃತ ಕಾರ್ಮಿಕ. ಕುತ್ತೆತ್ತೂರು ಎಂಆರ್‌ಪಿಎಲ್‌ನಲ್ಲಿ ‘ಆಕಾಶ್ ಇಂಜಿನಿಯರಿಂಗ್’ ಎಂಬ ಗುತ್ತಿಗೆ ಕಂಪನಿಯಲ್ಲಿ ಶೆಡೌನ್ ಕೆಲಸಕ್ಕೆ ನಿರ್ವಹಿಸುತ್ತಿದ್ದ ವಕೀಲ್ ಕುಮಾರ್ ಶನಿವಾರ 12:30ಕ್ಕೆ ಪಿಪಿಪಿಎಫ್‌ಸಿಸಿ ಯೂನಿಟ್‌ನಲ್ಲಿ ಕೆಲಸ ನಿರ್ವಹಿಸುವ ವೇಳೆ ಪೈಪ್‌ವೊಂದು ತುಂಡಾಗಿ ಅವರ ತಲೆಯ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ನಂತರ ಅವರನ್ನು […]

ಕಾರುಗಳ ನಡುವೆ ಡಿಕ್ಕಿ 5 ಮಂದಿಗೆ ಗಾಯ

Monday, May 6th, 2019
Nelyadi

ಮಂಗಳೂರು : ಆ್ಯಂಬುಲೆನ್ಸ್ಗೆ ಸೈಡ್ ಕೊಡುವ ಸಂದರ್ಭದಲ್ಲಿ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಕೊಕ್ಕಡ ಎಂಬಲ್ಲಿ ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿ ಅಪಘಾತದಲ್ಲಿ ಐದು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಎರಡು ಕಾರುಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಎರಡೂ ಕಾರಿನ ಮುಂಭಾಗ ತೀವ್ರವಾಗಿ ಜಖಂಗೊಂಡಿವೆ. ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸುತ್ತಿದ ಮಾರುತಿ ಸ್ವಿಫ್ಟ್ ಡಿಸೈರ್ ಹಾಗೂ ಪುತ್ತೂರಿನ ಮಾರುತಿ ಸೆಲರಿಯೋ ಅಪಘಾತಕ್ಕೊಳಗಾಗಿವೆ. ಅತೀ ವೇಗದಲ್ಲಿ ಕಾರು ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಲಂಚ ಪಡೆಯುತ್ತಿದ್ದಾಗ ಗ್ರಾಮ ಕರಣಿಕ ಎಸಿಬಿ ಬಲೆಗೆ

Sunday, May 5th, 2019
VA

ಬೆಳ್ತಂಗಡಿ : ಲಂಚ ಪಡೆಯುತ್ತಿದ್ದ ವೇಳೆ ಗ್ರಾಮ ಕರಣಿಕ ಮತ್ತು ಆತನ ಸಹಾಯಕ ಎಸಿಬಿ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಘಟನೆಬೆಳ್ತಂಗಡಿ ಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕು ಕಚೇರಿಯಲ್ಲೇ ಲಂಚ ಪಡೆಯುತ್ತಿದ್ದ ಕಡಿರುದ್ಯಾವರ- ಮಿತ್ತಬಾಗಿಲು ಗ್ರಾಮ ಕರಣಿಕ ಮತ್ತು ಸಹಾಯಕ ಭ್ರಷ್ಟಾಚಾರ ನಿಗ್ರಹ ದಳ ಬಲೆಗೆ ಬಿದ್ದಿದ್ದಾರೆ. ಎಸಿಬಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಗ್ರಾಮ ಕರಣಿಕ ಮಂಜುನಾಥ್ ಮತ್ತು ಸಹಾಯಕ ರಮೇಶ್ ನಾಯ್ಕ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಆರ್.ಟಿ.ಸಿ ಯೊಂದರ ಹೆಸರು ಬದಲಾವಣೆಗಾಗಿ ಲಂಚ […]

ಕನ್ನಡ ಸಾಹಿತ್ಯ ಪರಿಷತ್- ಸಂಸ್ಮರಣಾ ದಿನಾಚರಣೆ

Sunday, May 5th, 2019
sahitya parishath

ಮಂಗಳೂರು  : ಕನ್ನಡ ಸಾಹಿತ್ಯ ಪರಿಷತ್ತು- ಸಂಸ್ಮರಣಾ ದಿನಾಚರಣೆಯನ್ನುಇತ್ತೀಚೆಗೆದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದಆಚರಿಸಲಾಯ್ತು. ನಗರದ ಬಿಎಡ್. ಕಾಲೇಜು ಸಭಾಂಗಣದಲ್ಲಿ ಜರಗಿದ ಸಮಾರಂಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಅಧ್ಯಕ್ಷಎಸ್. ಪ್ರದೀಪಕುಮಾರಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯಕ್ಷಗಾನ ಪ್ರಸಂಗಕರ್ತಅರ್ಥದಾರಿ ಪೊಳಲಿ ನಿತ್ಯಾನಂದಕಾರಂತ ಪಾಲ್ಗೊಂಡಿದ್ದರು, ವೇದಿಕೆಯಲ್ಲಿ ಸಾಹಿತ್ಯ ಪರಿಷತ್ತಿನ ಮಂಗಳೂರು ತಾಲೂಕುಘಟಕಾಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಬಿ. ಶೆಟ್ಟಿ,ಜನಾರ್ದನ ಹಂದೆ, ಶ್ರೀಮತಿ ಶಾರದಮ್ಮ ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಅನನ್ಯ ಸಾಹಿತ್ಯದ ಮೂಲಕ ಪ್ರಸಿದ್ಧರಾದ ನೂರಾರು ಮಂದಿ […]

ಧರ್ಮಸ್ಥಳದಲ್ಲಿ ನಲ್ವತ್ತೆಂಟನೇ ವರ್ಷದ ಉಚಿತ ಸಾಮೂಹಿಕ ವಿವಾಹ ವೈಭವ

Friday, May 3rd, 2019
mass-marriage

ಉಜಿರೆ: ನಾಡಿವ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಬುಧವಾರ ಮದುವೆಯ ಸಂಭ್ರಮ – ಸಡಗರ. ಸಂದರ್ಭ ನಲ್ವತ್ತೆಂಟನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ. ಸಂಜೆ ಗಂಟೆ 6.48 ಕ್ಕೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಅಮೃತವರ್ಷಿಣಿ ಸಭಾ ಭವನದಲ್ಲಿ 102 ಜೋಡಿ ವಧು-ವರರು ಮಂಗಲಸೂತ್ರ ಧಾರಣೆಯೊಂದಿಗೆ ಗೃಹಸ್ಥಾಶ್ರಮಕ್ಕೆ ಪಾದಾರ್ಪಣೆ ಮಾಡಿದರು. ಬೆಳಿಗ್ಗೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬೀಡಿನಲ್ಲಿ (ತಮ್ಮ ನಿವಾಸದಲ್ಲಿ) ವಧುವಿಗೆ ಸೀರೆ, ರವಿಕೆ, ಹಾಗೂ ವರನಿಗೆ ಶಾಲು, ಧೋತಿ ನೀಡಿ ಹರಸಿದರು. ನೂತನ ವಧು-ವರರ ಜೋಡಿ ಹೆಗ್ಗಡೆಯವರಿಗೆ ಫಲ […]