ಹಾಲಿನ ಡೈರಿಗಳ ಸಂಖ್ಯೆಯನ್ನು ಹೆಚ್ಚಿಸಲು ಮಧ್ಯಂತರ ಬಜೆಟ್ ನಲ್ಲಿ ಆದ್ಯತೆ
Thursday, February 1st, 2024ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ 2024-25ನೇ ಸಾಲಿನ ಮಧ್ಯಂತರ ಬಜೆಟ್ ಮಂಡಿಸಿದ್ದು, ದೇಶದಲ್ಲಿ ಹಾಲು ಮತ್ತು ಡೈರಿ ಉತ್ಪಾದನೆಯನ್ನು ಹೆಚ್ಚಿಸುವ ಯೋಜನೆಯನ್ನು ಪ್ರಕಟಿಸಿದ್ದಾರೆ. ಭಾರತ ವಿಶ್ವದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಿಸುವ ರಾಷ್ಟ್ರವಾಗಿದೆ. ಆದರೆ ಕಡಿಮೆ ಉತ್ಪಾದಕತೆ ಹೊಂದಿದೆ. ಹೀಗಾಗಿ ಡೈರಿಗಳ ಸಂಖ್ಯೆಯನ್ನು ಹೆಚ್ಚಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹಣಕಾಸು ಸಚಿವೆ ಹೇಳಿದ್ದಾರೆ. 2022-23ರಲ್ಲಿ ಭಾರತದ ಹಾಲಿನ ಉತ್ಪಾದನೆಯು 230.58 ಮಿಲಿಯನ್ ಟನ್‌ಗಳಿಗೆ ಅಂದರೆ ಶೇ. 4 ರಷ್ಟು ಏರಿಕೆಯಾಗಿದೆ. […]