ರಮಾನಾಥ ರೈ ಕಾರ್ಯಕ್ರಮದಲ್ಲಿ ಮೋದಿ ಪರ ಘೋಷಣೆ..!

Monday, May 7th, 2018
ramanath-rai

ಮಂಗಳೂರು: ಸಚಿವ ರಮಾನಾಥ ರೈ ಕಾರ್ಯಕ್ರಮದಲ್ಲಿ ಮೋದಿ ಪರ ಘೋಷಣೆ ಕೂಗಲಾಗಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದೆ. ಬಂಟ್ವಾಳ ತಾಲೂಕಿನ ಕರೋಪಾಡಿಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ರಮಾನಾಥ ರೈ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಕೆಲವು ಕಾರ್ಯಕರ್ತರು ಸಚಿವ ರಮಾನಾಥ ರೈ ಅವರನ್ನು ಅಡ್ಡಗಟ್ಟಿ ಮೋದಿ‌ ಎಂದು ಘೋಷಣೆ ಕೂಗಿದ್ದಾರೆ. ಮೋದಿ ಎಂದು ಘೋಷಣೆ ಕೂಗಿದ ವೇಳೆ ಸಚಿವ ರಮಾನಾಥ ರೈ ಏನೂ ಪ್ರತಿಕ್ರಿಯಿಸದೆ ಮೌನವಾಗಿ ನಿಂತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.

ಚುನಾವಣೆಗೆ ಮುನ್ನ ನೀಡಿದ ಭರವಸೆ ಬಗ್ಗೆ ಹೇಳಲು ಮೋದಿಯಲ್ಲಿ ಏನೂ ಉಳಿದಿಲ್ಲ: ರಣದೀಪ್ ಸುರ್ಜೇವಾಲ

Monday, May 7th, 2018
randeep

ಮಂಗಳೂರು: 2014ರಲ್ಲಿ ಮೋದಿ ಮಂಗಳೂರಿನಲ್ಲಿ ನೀಡಿದ ಭರವಸೆಯನ್ನು ಈಡೇರಿಸಿಲ್ಲ. ಚುನಾವಣೆಗೆ ಮುನ್ನ ನೀಡಿದ ಭರವಸೆ ಬಗ್ಗೆ ಹೇಳಲು ಮೋದಿಯಲ್ಲಿ ಏನೂ ಉಳಿದಿಲ್ಲ ಎಂದು ಎಐಸಿಸಿ ವಕ್ತಾರ ರಣದೀಪ್ ಸುರ್ಜೇವಾಲ ಟೀಕಿಸಿದರು. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜುಮ್ಲಾ ಹೇಳಿಕೆಗಳಿಗೆ ಈಗ ಅವರು ಕುಖ್ಯಾತಿ ಪಡೆದಿದ್ದಾರೆ. ಘರ್ ಘರ್ ಮೋದಿ ಈಗ ಬೈ ಬೈ ಮೋದಿ ಆಗಿ ಬದಲಾಗಿದೆ. ಕರ್ನಾಟಕಕ್ಕೆ ಅವರು ಮೋಸ, ವಂಚನೆ ಮಾಡಿದ್ದಾರೆ ಎಂದು ಆರೋಪ ಮಾಡಿದರು. ರಾಜ್ಯದ ಯೋಜನೆಗಳನ್ನು ತಪ್ಪಿಸುವುದು ಬಿಜೆಪಿಯ ಡಿಎನ್ಎ ಆಗಿದೆ. […]

ಬಿಜೆಪಿ ಅಭ್ಯರ್ಥಿ ಪರ ಮುಂಬೈ ಲೋಕಸಭಾ ಸದಸ್ಯ ಪ್ರಚಾರ

Monday, May 7th, 2018
gopal-shetty

ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಪರ ಇಂದು ಮುಂಬೈ ಲೋಕಸಭಾ ಸದಸ್ಯ ಗೋಪಾಲ ಶೆಟ್ಟಿ ಪ್ರಚಾರ ನಡೆಸಿದರು. ಕರಾವಳಿಯಿಂದ ಮುಂಬೈಗೆ ಹೋಗಿ ನೆಲೆಸಿ ಅಲ್ಲಿ ಬಿಜೆಪಿಯಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಗೋಪಾಲ ಶೆಟ್ಟಿ ಬಿಜೆಪಿ ಪರ ಮತಯಾಚನೆ ತವರು ಜಿಲ್ಲೆಗೆ ಆಗಮಿಸಿದ್ದಾರೆ. ಮಂಗಳೂರಿನ ಕಂಕನಾಡಿ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಪರ ಮತಯಾಚನೆ ಮಾಡಿದರು. ಮನೆ ಮನೆಗೆ ತೆರಳಿ ಪ್ರಚಾರ ನಡೆಸುವ ವೇಳೆ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ […]

ದಕ್ಷಿಣ ಕನ್ನಡ ಜಿಲ್ಲೆಯ ‘ಬಿಜೆಪಿ’ ಪ್ರಣಾಳಿಕೆ ಬಿಡುಗಡೆ

Monday, May 7th, 2018
nalin-kumar

ಮಂಗಳೂರು: ಸಂಸದ ನಳಿನ್ ಕುಮಾರ್ ಕಟೀಲ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ನಗರದ ಬಿಜೆಪಿ ಕಚೇರಿಯಲ್ಲಿ ಉತ್ತರ ಪ್ರದೇಶ ಸಚಿವ ಮಹೇಂದ್ರ ಸಿಂಗ್ ಸಮ್ಮುಖದಲ್ಲಿ ಸಂಸದರು ಪ್ರಣಾಳಿಕೆ ಬಿಡುಗಡೆ ಮಾಡಿದರು. ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ಸಂಸದರು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೇವೆ. ಮುಂದೆ ಅಧಿಕಾರಕ್ಕೆ ಬಂದರೆ ಜಿಲ್ಲೆಯಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾರ್ಯದ ಬಗ್ಗೆ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದ್ದೇವೆ. ಎತ್ತಿನಹೊಳೆ ಯೋಜನೆಗೆ ನಮ್ಮ ವಿರೋಧವಿದೆ ಎಂದು ತಿಳಿಸಿದರು.

ಕಾಂಗ್ರೆಸ್‌ ಅನ್ನು ಕರ್ನಾಟಕದ ಜನತೆ ತಿರಸ್ಕರಿಸುವುದು ನಿಶ್ಚಿತ : ನರೇಂದ್ರ ಮೋದಿ

Sunday, May 6th, 2018
modi mangaluru

ಮಂಗಳೂರು : ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ದೋಷಿಗಳಿಗೆ ಮರಣ ದಂಡನೆ ವಿಧಿಸುವ ಸುಗ್ರೀವಾಜ್ಞೆಗೆ ನಾವು ಅನುಮೋದನೆ ನೀಡಿದ್ದೇವೆ. ನಮ್ಮ ಸರ್ಕಾರ ಬಡವರು ಮತ್ತು ನಿರ್ಲಕ್ಷಿತರ ಸೇವೆಗೆ ಸಮರ್ಪಿತವಾಗಿದೆ. ಅವರ ಬ್ಯಾಂಕ್‌ ಖಾತೆಗಳನ್ನು ತೆರೆಯುವ ಮೂಲಕ ಅವರನ್ನು ಸಬಲೀಕರಣಗೊಳಿಸುವಲ್ಲಿ ಮಹತ್ವದ ಹೆಜ್ಜೆಯಿಟ್ಟಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಶನಿವಾರ  ಮಂಗಳೂರಿನ ನೆಹರೂ ಮೈದಾನಿನಲ್ಲಿ  ಬಿಜೆಪಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನೋಟು ಅಮಾನ್ಯೀಕರಣದ ಆಘಾತದಿಂದ ಕಾಂಗ್ರೆಸ್‌ ಇನ್ನೂ ಹೊರ ಬಂದಿಲ್ಲ. ಕಾಂಗ್ರೆಸ್‌ ಸುಳ್ಳನ್ನೇ ಹಬ್ಬಿಸುತ್ತದೆ. ಯಾರಾದರೂ ಸತ್ಯ […]

ಕಾಂಗ್ರೆಸ್ ಬಿಜೆಪಿಗೆ ವ್ಯತ್ಯಾಸ ಇಲ್ಲ: ಸುನೀಲ್ ಕುಮಾರ್ ಬಜಾಲ್

Saturday, May 5th, 2018
sunil Kumar

ಮಂಗಳೂರು  : ಮಂಗಳೂರಿನ ಸರ್ವಾಂಗೀಣ ಅಭಿವೃದ್ಧಿಗೆ ಕಾಂಗ್ರೆಸ್ ಬಿಜೆಪಿ ಕೊಡುಗೆ ಶೂನ್ಯ. ಕಳೆದೆರಡು ಅವಧಿಯಲ್ಲಿ ಈ ವಿಧಾನ ಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಿಜೆಪಿಯ ಯೋಗೀಶ್ ಭಟ್ ಹಾಗೂ ಕಾಂಗ್ರೆಸ್‌ನ ಜೆ.ಆರ್.ಲೋಬೋ ಇವರಿಬ್ಬರ ಆಡಳಿತಾವಧಿಯಲ್ಲಿ ಅಭಿವೃದ್ಧಿಯ ಕೊರತೆ, ಜನಸಾಮಾನ್ಯರ ಸಂಕಷ್ಟಗಳ ಯಥಾಸ್ಥಿತಿ, ಸರಕಾರಿ ಆಸ್ಪತ್ರೆಗಳ ಕಡೆಗಣನೆ, ಮುಕ್ತಿ ಕಾಣದ ಒಳಚರಂಡಿ ವ್ಯವಸ್ಥೆ ಹೀಗೆ ಕ್ಷೇತ್ರದ ಜನರ ಬಗ್ಗೆ ನೀರಾ ಶಕ್ತಿಯನ್ನು ಹೊಂದಿದೆ. ಆದ್ದರಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಆಡಳಿತಕ್ಕೆ ಯಾವುದೇ ವ್ಯತ್ಯಾಸ ಇಲ್ಲ ಎಂದು ಮಂಗಳೂರು ನಗರ ದಕ್ಷಿಣ […]

ಜೆ.ಆರ್.ಲೋಬೊ ರವರ ಜನಪ್ರಿಯತೆಯನ್ನು ಸಹಿಸದೇ ವಿರೋಧ ಪಕ್ಷದಿಂದ ವಾಮಾಚಾರ : ಮಹಾಬಲ ಮಾರ್ಲ

Saturday, May 5th, 2018
jr lober

ಮಂಗಳೂರು : ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯ ಹರಿಕಾರ, ಜೆ.ಆರ್. ಲೋಬೊ ರವರನ್ನು ಶಾಸಕರನ್ನಾಗಿ ಈ ಕ್ಷೇತ್ರದ ಜನತೆ ಆಯ್ಕೆ ಮಾಡಿದರು. ಕಳೆದ 5 ವರ್ಷಗಳ ಅವಧಿಯಲ್ಲಿ ಮಂಗಳೂರು ನಗರದಲ್ಲಿ ಜೆ.ಆರ್. ಲೋಬೊ ಮಾಡಿದ ಅಭಿವೃದ್ಧಿಯು ಜನಮನ್ನಣೆಯನ್ನು ಗಳಿಸಿದೆ. ಇವರ ಜನಪರ ಒಲವನ್ನು ಅರಿತ ಮತ್ತು ಸೋಲಿನ ಭೀತಿಯಿಂದ ಮತ್ತು ಇವರ ಜನಪ್ರಿಯತೆಯನ್ನು ಸಹಿಸದ ವಿರೋಧಿಗಳು ಜೆ.ಆರ್. ಲೋಬೊ ವಿರುದ್ದ ವಾಮಾಚಾರ ಮಾಡುವ ಮೂಲಕ ಅವರು ವಿಕೃತ ಮನಸನ್ನು ತೊರ್ಪಡಿಸಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ನಂದಿಗುಡ್ಡದ […]

ಗೆದ್ದೇ ಗೆಲ್ಲುವೆವು – ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಮತ ಬೇಟೆ

Saturday, May 5th, 2018
merihill

ಮಂಗಳೂರು : ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಾ. ಭರತ್ ಶೆಟ್ಟಿ ವೈ. ವಾಮಂಜೂರು ಸುತ್ತಮುತ್ತ ಭರ್ಜರಿ ಪ್ರಚಾರ ಮಾಡಿದ್ರು. ಆಟೋರಿಕ್ಷಾ ಪಾರ್ಕ್, ಬಸ್ಸು ನಿಲ್ದಾಣ, ಅಂಗಡಿ, ಹೋಟೆಲ್ , ಕ್ಯಾಂಟೀನ್‌ ಸೇರಿದಂತೆ ಇನ್ನಿತರ ಸಾರ್ವಜನಿಕ ಸ್ಥಳಗಳಿಗೆ ತೆರಳಿ ಮತಯಾಚನೆ ಮಾಡಿದರು. ತಮ್ಮ ಬಳಿಗೆ ಬಂದ ಅಭ್ಯರ್ಥಿಯನ್ನ ಜನರೂ ಕೂಡ ಆತ್ಮೀಯವಾಗಿ ಬರಮಾಡಿಕೊಂಡರು. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರೊಂದಿಗೆ ಪ್ರಚಾರಕ್ಕೆ ಹೊರಟ ಭರತ್‌ ಶೆಟ್ಟಿ ಮತಯಾಚನೆಯೇ ವಾಮಂಜೂರಿನಲ್ಲಿ ಕೆಲಕ್ಷಣ ಜನಾಕರ್ಷಣೆಯ ಕೇಂದ್ರವಾಗಿತ್ತು. ಅಭ್ಯರ್ಥಿ ಹೋದಲೆಲ್ಲ ಜನ ಮುತ್ತಿಕೊಂಡು […]

ಕಾಂಗ್ರೆಸ್, ಬಿಜೆಪಿಯಿಂದ ಕಾರ್ಯಕರ್ತರ ಒಪ್ಪಿಗೆ ಇಲ್ಲದೆ ಅಭ್ಯರ್ಥಿಗಳ ಆಯ್ಕೆ – ಶ್ರೀಕರ ಪ್ರಭು

Saturday, May 5th, 2018
sreekar-prabhu

ಮಂಗಳೂರು  : ಈ ಬಾರಿಯ ವಿಧಾನ ಸಭಾ ಚುನಾವಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದಿಂದ ನಿಷ್ಠಾವಂತ ಕಾರ್ಯಕರ್ತರ ಅಭಿಪ್ರಾಯ ಪಡೆಯದೇ ಅಭ್ಯರ್ಥಿಗಳ ಆಯ್ಕೆ ಮಾಡಿರುವುದು ತನ್ನ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾದ ಶ್ರೀಕರ ಪ್ರಭು ಅವರು ತಮ್ಮ ಚುನಾವಣಾ ಕಾರ್ಯಾಲಯದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ತಿಳಿಸಿದರು. ಇದರಿಂದ ಕೆಲವು ನಾಯಕರುಗಳ ಸ್ವಾರ್ಥಕ್ಕೆ ಕಾರ್ಯಕರ್ತರನ್ನು ಕಡೆಗಣಿಸಿರುವುದರಿಂದ ಆ ಪಕ್ಷಗಳಲ್ಲಿ ಅಸಮಾಧಾನ ಶುರುವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ನುಡಿದರು. ಈಗ […]

ದರೋಡೆಗೆ ಸಂಚು ರೂಪಿಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Saturday, May 5th, 2018
arrested

ಮಂಗಳೂರು: ವಾಹನ, ಲಾರಿ ಚಾಲಕರ ದರೋಡೆಗೆ ಸಂಚು ರೂಪಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಉಳ್ಳಾಲ ಮಿಲ್ಲತ್ ನಗರದ ಫಲಾಲ್ ಮಂಜಿಲ್ ನಿವಾಸಿ ಮೊಹಮ್ಮದ್ ಅರ್ಪಾಜ್ (19), ಉಳ್ಳಾಲ ಮುಕ್ಕಚೇರಿ ನಿವಾಸಿ ಮೊಹಮ್ಮದ್ ಸುಹೈಲ್ (27) ಬಂಧಿತ ಆರೋಪಿಗಳು. ಬಂಧಿತರಿಂದ ದರೋಡೆಗೆ ಬಳಸಲು ಇರಿಸಿದ್ದ ಮಾರಕಾಯುಧ ಮತ್ತು ಖಾರದ ಪುಡಿಯನ್ನು ವಶಪಡಿಸಿಕೊಳ್ಳಲಾಗಿದೆ. ಮೇ 4ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಮತ್ತು ಸಿಬ್ಬಂದಿ ಗಸ್ತು ಮಾರಿಪಳ್ಳ ವ್ಯಾಪ್ತಿಯಲ್ಲಿ ತಿರುಗುತ್ತಿದ್ದ ವೇಳೆ ರೊಟ್ಟಿ ಗುಡ್ಡೆಯ […]