ಭಾರತದಲ್ಲಿ ಮಹಿಳೆಗೆ ದೇವತೆಯ ಸ್ಥಾನ: ನಳಿನ್ ಕುಮಾರ್ ಕಟೀಲ್

Tuesday, March 8th, 2022
Women's Day

ಮಂಗಳೂರು : ಮಹಿಳೆಗೆ ದೇವತೆಯ ಸ್ಥಾನ ನೀಡಿರುವ ಜಗತ್ತಿನ ಏಕೈಕ ರಾಷ್ಟ್ರ ಭಾರತ, ಹೆಣ್ಣನ್ನು ಮಾತೃ ಸ್ವರೂಪಿಯಾಗಿ ಕಾಣುವ ಈ ದೇಶದಲ್ಲಿ ಅವಳಿಗೆ ಸ್ವಾತಂತ್ರ್ಯದೊಂದಿಗೆ ಸಮಾನತೆಗೂ ಹೆಚ್ಚಿನ ಗೌರವವನ್ನು ನೀಡಲಾಗಿದೆ ಎಂದು ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಅಭಿಪ್ರಾಯಪಟ್ಟರು. ಅವರು ಮಾ.8ರ ಮಂಗಳವಾರ ನಗರದ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಅಂತರಾಷ್ಟ್ರೀಯ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳಾ ಸಬಲೀಕರಣಕ್ಕೆ ದೇಶದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ, ಆ ಮೂಲಕ ಉತ್ತಮ ಸಮಾಜ […]

ಚುನಾಯಿತ ಪ್ರತಿನಿಧಿಗಳ ಗೌರವಧನವನ್ನು ಹೆಚ್ಚಿಸಸಲು ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ಆಗ್ರಹ

Tuesday, March 8th, 2022
Manjunatha Bhandary

ಮಂಗಳೂರು  : ವಿಧಾನ ಪರಿಷತ್ತಿನ ಶಾಸಕರಾದ ಮಂಜುನಾಥ ಭಂಡಾರಿಯವರು ಇಂದು ನಡೆದ ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ನಿಯಮ 330ರ ಅಡಿಯಲ್ಲಿ ಚುನಾಯಿತ ಪ್ರತಿನಿಧಿಗಳ ಗೌರವಧನವನ್ನು ಹೆಚ್ಚಿಸಬೇಕೆಂದು ಆಗ್ರಹಿಸಿರು. ಅಧಿವೇಶನದಲ್ಲಿ ಮಾತನಾಡಿದ ಅವರು ‘ಪ್ರಜಾ ಪ್ರಭುತ್ವದಲ್ಲಿ ಗ್ರಾಮ ಪಂಚಾಯತಿಯೇ ತಳಹದಿ. ಆ ತಳಹದಿಯನ್ನು ನಾವು ಬಲಿಷ್ಠವಾಗಿಸಿದರೆ ಮಾತ್ರ ಮಾಹಾತ್ಮ ಗಾಂಧೀಜಿಯವರು ಕಂಡ ಗ್ರಾಮ ಸ್ವರಾಜ್ಯದ ಕನಸು ನನಸಾಗುವುದು. ಆದರೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮೀಸಲಾತಿ ಪ್ರಕಾರ ಶೇಕಡ 50 ರಷ್ಟು ಮಹಿಳೆಯರು ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ […]

ಕರ್ನಾಟಕ ಯಕ್ಷಗಾನ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ ಪಟ್ಟಿ ಬಿಡುಗಡೆ

Monday, March 7th, 2022
Yakshagana Academy

ಬೆಂಗಳೂರು  : ಕರ್ನಾಟಕ ಯಕ್ಷಗಾನ ಅಕಾಡೆಮಿಯು ಸರ್ಕಾರದ ನಿಯಮಾನುಸಾರ ಒಬ್ಬ ಗಣ್ಯರನ್ನು ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ ಹಾಗೂ 5 ಜನ ಗಣ್ಯರನ್ನು ವಾರ್ಷಿಕ ಗೌರವ ಪ್ರಶಸ್ತಿಗೆ ಹಾಗೂ 10 ಜನ ಗಣ್ಯರನ್ನು ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲು ಅವಕಾಶವಿದ್ದು, ಅದರಂತೆ ಆಯ್ಕೆ ಮಾಡಲು ಕರ್ನಾಟಕ ಯಕ್ಷಗಾನ ಅಕಾಡೆಮಿಯು ದಿನಾಂಕ: 20.02.202 ರಂದು ಟಿ.ಆರ್.ಸಿ.ಸಭಾಭವನ, ಶಿರಸಿ ಇಲ್ಲಿ ಜರುಗಿದ ಸರ್ವ ಸದಸ್ಯರ ಸಭೆಯಲ್ಲಿ ಕೆಳಕಂಡ ಗಣ್ಯರನ್ನು ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ ಹಾಗೂ ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. […]

ಸವ೯ಸ್ಪಶಿ೯ ಸವ೯ವ್ಯಾಪಿ ಅಭಿವೃದ್ಧಿಪರ ಬಜೆಟ್ – ಕೆ ಪ್ರತಾಪಸಿಂಹ ನಾಯಕ್

Friday, March 4th, 2022
prathapa-simha

ಮಂಗಳೂರು : ಕನಾ೯ಟಕದ ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಯವರು ಸಮಗ್ರ ಕನಾ೯ಟಕ ಮತ್ತು ಸಮಾಜದ ಎಲ್ಲಾ ವಗ೯ಗಳನ್ನು ಗಮನದಲ್ಲಿ ಇಟ್ಟುಕೊಂಡು ಒಳ್ಳೆಯ ಪ್ರಗತಿಪರ ಬಜೆಟ್ ಮಂಡಿಸಿದ್ದಾರೆ. ತಮ್ಮ ಚೊಚ್ಚಲ ಬಜೆಟ್ನಲ್ಲಿ ಕೃಷಿ, ನೀರಾವರಿ, ಗ್ರಾಮೀಣ ಅಭಿವೃದ್ಧಿ, ಆರೋಗ್ಯ, ಶಿಕ್ಷಣ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೆ ಒತ್ತು ನೀಡಿದ್ದಾರೆ. ಕೋರೊನಾ ಸಂಕಷ್ಟದಿಂದ ಹೊರಬರಲು ಪ್ರಯತ್ನಿಸುತ್ತಿರುವ ಆಥಿ೯ಕತೆಯ ಇತಿಮಿತಿಯಲ್ಲಿ ಇದು ಅತ್ಯುತ್ತಮ ಬಜೆಟ್. ಕರಾವಳಿಯ ಅಭಿವೃದ್ಧಿಯ ದೃಷ್ಟಿಯಿಂದ ದೀರ್ಘಕಾಲಿಕ ಮತ್ತು ಜನೋಪಯೋಗಿ ಯೋಜನೆ ಒಳಗೊಂಡಿದೆ ಎಂದು ವಿಧಾನ […]

ತುಳುವಿನ ರಕ್ಷಣೆ, ಸಂಸ್ಕೃತಿ, ದೇಶದ ರಕ್ಷಣೆ: ಪ್ರೊ. ಪಿ ಎಲ್ ಧರ್ಮ

Friday, March 4th, 2022
dharma

ಮಂಗಳೂರು: ತುಳು ಭಾಷೆಯ ಸೊಗಡು ಅರಿಯಬೇಕಾದರೆ ಇತರ ಭಾಷೆಗಳನ್ನೂ ತಿಳಿದುಕೊಳ್ಳಬೇಕು. ಯುವ ಜನತೆ ತುಳು ಮಾತನಾಡದಿದ್ದರೆ ಭಾಷೆಯ ಉಳಿವಿನ ಮಾತು ಭಾಷಣಗಳಿಗೆ ಸೀಮಿತವಾಗುತ್ತದೆ, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ (ಪರೀಕ್ಷಾಂಗ) ಪ್ರೊ. ಪಿ ಎಲ್ ಧರ್ಮ ಅಭಿಪ್ರಾಯಪಟ್ಟರು. ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ತುಳು ಸ್ನಾಕೋತ್ತರ ಅಧ್ಯಯನ ವಿಭಾಗಗಳು ಜಂಟಿಯಾಗಿ ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಗುರುವಾರ ʼಕೆಡ್ಡಸ ಮಿನದನʼ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ […]

ಬಜೆಟ್ ಅತ್ಯಂತ ನಿರಾಶಾದಾಯಕ – ಮಂಜುನಾಥ ಭಂಡಾರಿ

Friday, March 4th, 2022
Manjunatha Bhandary

ಮಂಗಳೂರು  : ಈ ವರ್ಷದ ರಾಜ್ಯ ಬಜೆಟ್ ಅತ್ಯಂತ ನಿರಾಶಾದಾಯಕವಾಗಿದೆ. ಗ್ರಾಮ ಪಂಚಾಯತಿಗೆ ಕೊಡುವಂತಹ ಅನುದಾನ ಹಾಗೂ ಗ್ರಾಮ ಪಂಚಾಯತಿ ಸದಸ್ಯರ ಗೌರವಧನ ಮತ್ತು ಇತರ ಭತ್ಯೆಗಳನ್ನು ಹೆಚ್ಚಿಸಬೇಕೆಂದು ಚುನಾಯಿತ ಪ್ರತಿನಿಧಿಗಳಾದ ನಾವು ಸರಕಾರದ ಮುಂದಿಟ್ಟ ಬೇಡಿಕೆಯನ್ನು ನಿರ್ಲಕ್ಷಿಸಿದ್ದಕ್ಕೆ ಅತ್ಯಂತ ಬೇಸರವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಮಾರ್ಗಸೂಚಿಯಂತೆ ಶೈಕ್ಷಣಿಕ ಕ್ಷೇತ್ರದಲ್ಲಿ ಯಾವುದೇ ಮಹತ್ವದ ಘೋಷಣೆಯಾಗಿಲ್ಲ ಹಾಗೂ ಈಗಾಗಲೇ ಇದ್ದ ಸರಕಾರಿ ಕಾಲೇಜುಗಳನ್ನು ನಡೆಸಲು ಸಾಧ್ಯವಾಗದ ಸರಕಾರ ಹಳೆಯ ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳ ಹೆಸರನ್ನು ಕರ್ನಾಟಕ […]

ತುಳುನಾಡಿಗೆ ಮಾರಕವಾದ ಅವೈಜ್ಙಾನಿಕ ಬಜೆಟ್‌

Friday, March 4th, 2022
shailesh RJ

ಬೆಳ್ತಂಗಡಿ : ತುಳುನಾಡಿನ ಜೀವನಾಡಿಗೆ ಮಾರಕವಾದ ಅವೈಜ್ಙಾನಿಕ ಎತ್ತಿನಹೊಳೆ ಯೋಜನೆಗೆ ಕರ್ನಾಟಕ ರಾಜ್ಯ ಬಜೆಟ್‌ನಲ್ಲಿ 3000 ಕೋಟಿ ರೂಪಾಯಿ ಮೀಸಲಿರಿಸಿದ್ದು ಖಂಡನೀಯ. ಈ ಮೂಲಕ ತುಳುನಾಡನ್ನು ಬರಡು ಭೂಮಿಯಾಗಿಸುವ ವ್ಯವಸ್ಥಿತ ಷಡ್ಯಂತ್ರವನ್ನು ಮುಂದುವರಿಸಿದ್ದು ತುಳುವರಿಗೆ ಎಚ್ಚರಿಕೆ ಗಂಟೆಯಾಗಿದೆ. ತುಳುವರ ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟದಲ್ಲಿ ನುಸುಳಿ ನಾಟಕವಾಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರು ಮತ್ತು ಶಾಸಕರು ಈ ಕೂಡಲೇ ತಮ್ಮ ಶಾಸಕ/ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ತಮ್ಮ ಬದ್ಧತೆಯನ್ನು ನಾಡಿನ ಜನಕ್ಕೆ ತೋರಿಸಬೇಕು. ನಿರಂತರವಾಗಿ ತುಳುನಾಡಿನ ನೆಲ, […]

ಮಾರ್ಚ್12 ರಂದು ಜಪ್ಪು ಮಹಾಕಾಳಿಪಡ್ಪು `ಮಹಾಕಾಳಿ ನೇಮೋತ್ಸವ’

Friday, March 4th, 2022
Mahakali

ಮಂಗಳೂರು : ಜಪ್ಪು ಗ್ರಾಮದ ಮಹಾಕಾಳಿ ಪಡ್ಡುವಿನ ಮಹಾಕಾಳಿ ನೇಮೋತ್ಸವವು ಮಾರ್ಚ 12 ರ ಶನಿವಾರ ಸಂಜೆ ಭಂಡಾರ ಬಂದು ರಾತ್ರಿ 7 ರಿಂದ ನಡೆಯಲಿರುವುದು. ತಾ:11-03-2022ನೇ ಶುಕ್ರವಾರ ಸಂಜೆ ಗಂಟೆ 7-15ಕ್ಕೆ ಪೂಜೆ ಕಳೆದ ಮಹಾಕಾಳಿಯ ಫೋಟೋ ದೇವಸ್ಥಾನದಿಂದ ಮೆರವಣಿಗೆಯಲ್ಲಿ ಉತ್ಸವ ನಡೆಯುವ ಜಾಗಕ್ಕೆ ಹೊರಡುವುದು. ಗಂಟೆ 7-30ಕ್ಕೆ ಪ್ರಸಾದ ಹಾರಿಸುವುದು, ತದನಂತರ ಸ್ಥಳ ಶುದ್ದೀಕರಣ, ಗಣಹೋಮ, ಬ್ರಹ್ಮರ ಗುಂಡ ಶುದ್ದೀಕರಣ ಇತ್ಯಾದಿ ನಡೆಯಲಿದೆ. ತಾ. 12-03-2022ನೇ ಶನಿವಾರ ಸಂಜೆ ಗಂಟೆ 5-00ಕ್ಕೆ ಸರಿಯಾಗಿ ದೇವಸ್ಥಾನದಿಂದ ಭಂಡಾರ […]

ಚೊಚ್ಚಲ ಆಯವ್ಯಯ ಮಂಡಿಸುವ ಮುನ್ನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬೊಮ್ಮಾಯಿ

Friday, March 4th, 2022
cm-temple

  ಬೆಂಗಳೂರು: ತಮ್ಮ ಚೊಚ್ಚಲ ಆಯವ್ಯಯ ಮಂಡಿಸುವ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ನಿವಾಸದ ಸಮೀಪದ ಶ್ರೀಕಂಠೇಶ್ವರ ದೇವಾಲಯ ದಲ್ಲಿ ಪೂಜೆ ಸಲ್ಲಿಸಿದರು. ದೇವಾಲಯದ ಹೊರಗೆ ಮುಖ್ಯಮಂತ್ರಿ ಯವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಕಾಯುತ್ತಿದ್ದ ಪೌರ ಕಾರ್ಮಿಕ ಮಹಿಳೆಯರ ಬೇಡಿಕೆಯನ್ನು ಮನ್ನಿಸಿ, ಅವರೊಂದಿಗೆ ಫೋಟೋ ತೆಗೆಸಿಕೊಂಡರು. ನಂತರ ಅವರ ಕಷ್ಟ ಸುಖ ಆಲಿಸಿದರು. ಜಲ ಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ಜೊತೆಗಿದ್ದರು.

ಅಮೃತ ಕೌಶಲ್ಯ ತರಬೇತಿ’ಯಡಿ 36 ಸಾವಿರಕ್ಕೂ ಹೆಚ್ಚು ಯುವಕರಿಗೆ ಉದ್ಯೋಗ: ಡಾ. ಅಶ್ವತ್ಥನಾರಾಯಣ

Thursday, March 3rd, 2022
Amruta Kushlya

ಮಂಗಳೂರು : ಯುವಜನರಿಗೆ ಉಜ್ವಲ ಉದ್ಯೋಗಾವಕಾಶಗಳನ್ನು ದೊರಕಿಸಿ ಕೊಡಲಿರುವ `ಅಂತಾರಾಷ್ಟ್ರೀಯ ವಲಸೆ ಕೇಂದ್ರ’ ದ ಮಂಗಳೂರು ಪ್ರಾದೇಶಿಕ ಕಚೇರಿಯನ್ನು  ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಮಾ.3ರ ಗುರುವಾರ ಎ.ಜೆ. ಇನಿಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಕಾಲೇಜಿನಲ್ಲಿ  ವರ್ಚುಯಲ್ ರೂಪದಲ್ಲಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ಆವರಣದಲ್ಲಿ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ಏರ್ಪಡಿಸಿದ್ದ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, `ಮೇಕ್ ಇಂಡಿಯಾ ಕೇಪಬಲ್’ ಕಾರ್ಯಕ್ರಮದಡಿ ಇಂಗ್ಲೀಷ್ ಲ್ಯಾಬ್ ಕೇಂದ್ರವನ್ನೂ ಲೋಕಾರ್ಪಣೆ […]