ಸೈನಿಕರ ಸಮವಸ್ತ್ರ ಇತರರು ಧರಿಸಕೂಡದು

Monday, March 7th, 2016
Kasaragod DC

ಕಾಸರಗೋಡು: ಸಾರ್ವಜನಿಕರು ಹಾಗೂ ಸೆಕ್ಯೂರಿಟಿ ನೌಕರರು ಸಹಿತ ಇತರ ಯಾರೇ ಆಗಲಿ ಸೈನಿಕರ ಸಮವಸ್ತ್ರಗಳನ್ನು, ಸೈನಿಕ ಮಾದರಿಯ ಬಟ್ಟೆಬರೆಗಳನ್ನು ಧರಿಸಕೂಡದೆಂದು ಕಾಸರಗೋಡು ನೂತನ ಜಿಲ್ಲಾಧಿಕಾರಿ ಇ.ದೇವದಾಸನ್ ತಿಳಿಸಿದ್ದಾರೆ. ಪಂಜಾಬ್‌ನ ಪಠಾಣ್ ಕೋಟ್ ವಾಯುಸೇನಾ ಕೇಂದ್ರಗಳಿಗೆ ಇತ್ತೀಚೆಗೆ ಭಯೋತ್ಪಾದಕರು ಆಕ್ರಮಣ ನಡೆಸಿದ ಹಿನ್ನೆಲೆಯಲ್ಲಿ ದೇಶದಾದ್ಯಂತ ಈ ಕ್ರಮ ಕೈಗೊಳ್ಳಲಾಗಿದೆ. ಅದರ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲೂ ಈ ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಯೋಜನೆ ರೂಪಿಸಲಾಗಿದೆ. ಅನಧಿಕೃತವಾಗಿ ಸೈನಿಕರ ಸಮವಸ್ತ್ರ ಧರಿಸುವುದು, ಅಂತಹ ಸಮವಸ್ತ್ರಗಳನ್ನು ಮಾರಾಟ ಮಾಡುವುದು ಮುಂತಾದವುಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ […]

ಗ್ರಾಮೀಣ ಬ್ಯಾಂಕ್‌ನಿಂದ ಸರಳವಾಗಿ ಸಾಲ ವಿತರಣೆ

Monday, March 7th, 2016
Graminabank

ಕಾಸರಗೋಡು: ಕೇರಳ ಗ್ರಾಮೀಣ ಬ್ಯಾಂಕ್ ತನ್ನ ಸಾಲ ಯೋಜನೆಗಳನ್ನು ಗ್ರಾಹಕ ಸ್ನೇಹಿಯಾಗಿಸುವ ಉದ್ದೇಶದೊಂದಿಗೆ ಕೆ.ಜಿ.ಬಿ. ಸಮಗ್ರ ಪ್ಲಸ್ ಎಂಬ ಒಂದು ನೂತನ ಸಾಲ ಯೋಜನೆಗೆ ಚಾಲನೆ ನೀಡಿದೆ. ಒಂದು ಲಕ್ಷ ರೂಪಾಯಿಗಿಂತ ಹೆಚ್ಚಿನ ಆರ್ಥಿಕ ನೆರವನ್ನು ಗರಿಷ್ಠ 15 ವರ್ಷಗಳ ದೀರ್ಘಾವಧಿಯ ಮರುಪಾವತಿ ಸೌಲಭ್ಯದಲ್ಲಿ ಈ ಸಾಲವನ್ನು ಪಡೆಯಬಹುದು. ಆರಂಭದ ಐದು ವರ್ಷ ಬಡ್ಡಿ ದರ ಕೇವಲ ಶೇ.10.50 ಆಗಿದ್ದು, ಅನಂತರ ಬಡ್ಡಿ ದರದಲ್ಲಿ ಸ್ವಲ್ಪ ಹೆಚ್ಚಳವನ್ನು ನಿಗದಿಗೊಳಿಸಲಾಗಿದೆ. ಬ್ಯಾಂಕಿಗೆ ನೀಡಬೇಕಾದ ದಾಖಲೆಗಳೂ ಅತ್ಯಂತ ಸರಳವಾಗಿದೆ. ಕೃಷಿಗೆ […]

ಯುವಕನನ್ನು ಅಪಹರಿಸಿ ಬತ್ತಲೆಗೊಳಿಸಿದ ಪ್ರಕರಣ, ಪ್ರಮುಖ ಆರೋಪಿ ಸೆರೆ

Sunday, March 6th, 2016
youth beaten

ಮಂಗಳೂರು: ಮಂಗಳೂರು ಸಿಸಿಬಿ ಪೊಲೀಸರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನೀರುಮಾರ್ಗದಿಂದ ಯುವಕನೊಬ್ಬನನ್ನು ಅಪಹರಿಸಿ ಆತನನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿ, ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯನ್ನು ಬೋಳೂರು ಪರಪ್ಪು ನಿವಾಸಿ ಜಯಪ್ರಕಾಶ್ ಅಲಿಯಾಸ್ ಜೆ.ಪಿ (24) ಎಂದು ಗುರುತಿಸಲಾಗಿದೆ. ಫೆಬ್ರವರಿ 13ರಂದು ಬೆಳಗ್ಗೆ ಮಂಗಳೂರು ನಗರದ ನೀರುಮಾರ್ಗದ ಯುವಕನ್ನು ರಿಕ್ಷಾವೊಂದರಲ್ಲಿ ಬಲತ್ಕಾರವಾಗಿ ಅಪಹರಿಸಿಕೊಂಡು ಎಂಬಲ್ಲಿಗೆ ಕರೆದುಕೊಂಡು ಹೋಗಿ ಅಕ್ರಮ ಬಂಧನದಲ್ಲಿರಿಸಿ ಆತನಿಗೆ ಅಮಾನುಷ ರೀತಿಯಲ್ಲಿ ಹಲ್ಲೆ ನಡೆಸಿ ಆತನಲ್ಲಿದ್ದ ನಗದು […]

ಕಾಂಗ್ರೆಸ್ ಕಾರ್ಯಕರ್ತನ ನಿಗೂಢ ಸಾವು

Sunday, March 6th, 2016
Congress worker

ಕಾಸರಗೋಡು: ಕಾಂಗ್ರೆಸ್ ಕಾರ್ಯಕರ್ತನ ಮೃತದೇಹ ಮನೆಯೊಳಗೆ ಮೃತಪಟ್ಟಿ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಾವಿನಲ್ಲಿ ನಿಗೂಢತೆ ಉಂಟಾದ ಹಿನ್ನೆಲೆಯಲ್ಲಿ ಮೃತದೇಹವನ್ನು ಹೆಚ್ಚಿನ ಮರಣೋತ್ತರ ಪರೀಕ್ಷೆಗಾಗಿ ಪೆರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಉದುಮ ಮಾಂಗಾಡ್ ಮೇಲ್ಬಾರ ಕಾಲನಿ ನಿವಾಸಿ ಬಾಲಕೃಷ್ಣನ್ ಅವರ ಪುತ್ರ ಚಂದ್ರನ್(40) ಮೃತಪಟ್ಟವರು. ಚಂದ್ರನ್ ಶನಿವಾರ ರಾತ್ರಿ ತೃಕ್ಕನ್ನಾಡ್ ಕ್ಷೇತ್ರ ಆರಾಟು ಮಹೋತ್ಸವಕ್ಕೆ ತೆರಳಿದ್ದರು. ಮನೆಯ ಇತರರು ಬೇರೆಡೆಗೆ ಕಾರ್ಯಕ್ರಮ ನಿಮಿತ್ತ ತೆರಳಿದ್ದರು. ಆದಿತ್ಯವಾರ ಬೆಳಗ್ಗೆ ಅವರು ಮನೆಗೆ ಮರಳಿದಾಗ ಚಂದ್ರನ್ ಮನೆಯೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಕಂಡು […]

ಮಂದಬುದ್ಧಿಯ ಬಾಲಕಿಯನ್ನು ಬಳಸಿ ವೇಶ್ಯಾವಾಟಿಕೆ : ತಾಯಿ ಸಹಿತ ಮೂವರ ಸೆರೆ

Sunday, March 6th, 2016
girl Rape

ಕಾಸರಗೋಡು: ಮಂದ ಬುದ್ಧಿಯ ಬಾಲಕಿಯನ್ನು ಬಳಸಿ ವೇಶ್ಯಾವಾಟಿಕೆ ನಡೆಸಿ ಹಣ ಸಂಪಾದಿಸಲು ಹೊರಟ ತಾಯಿ ಸಹಿತ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕೊಚ್ಚಿಯ ಮರೈನ್ ಡ್ರೈವ್‌ನಲ್ಲಿರುವ ಆಡಂಬರ ಪ್ಲಾಟ್‌ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆದಿದೆ. ಸೆರೆಗೀಡಾದವರೆಲ್ಲಾ ಕೊಲ್ಲಂ ಕೊಟ್ಟಾರಕ್ಕರ ಪರಿಸರ ನಿವಾಸಿಗಳಾಗಿದ್ದಾರೆ. ಕೊಚ್ಚಿ ಕೇಂದ್ರೀಕರಿಸಿ ಪ್ರಾಯ ಪೂರ್ತಿಯಾಗದ ಹಾಗೂ ಮಂದಬುದ್ಧಿಯ ಬಾಲಕಿಯನ್ನು ಬಳಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಕೂಡಲೇ ಕಲ್ಲಿಕೋಟೆ ನಿವಾಸಿಯಾದ ಮೀನು ವ್ಯಾಪಾರಿಯೆಂದು ತಿಳಿಸಿ ವೇಶ್ಯಾವಾಟಿಕೆ ದಂಧೆಯ ರೂವಾರಿಗಳನ್ನು ಪೊಲೀಸರು ಸಂಪರ್ಕಿಸಿದ್ದಾರೆ. ಈ […]

ನಾಥ ಪಂಥ ಮಾನವ ಜನ್ಮದ ಧರ್ಮ ದೀಪಿಕಾ : ನಿತ್ಯಾನಂದ ಸ್ವಾಮೀಜಿ

Sunday, March 6th, 2016
jogi-mutt

ಮಂಗಳೂರು : ನಾಥ ಪಂಥ ಮಾನವ ಜನ್ಮದ ಧರ್ಮ ದೀಪಿಕಾ. ಪಂಥದ ಝಂಡಿಯಾತ್ರೆಯ ಹಿಂದೆ ರಾಷ್ಟ್ರೀಯತೆ, ಸಮಗ್ರತೆಯ ಚಿಂತನೆ ಇದೆ ಎಂದು ಚಿಕ್ಕಮಗಳೂರು ಶ್ರೀ ವೇದವಿಜ್ಞಾನ ಕೇಂದ್ರದ ಶ್ರೀ ಕೆ.ಎಸ್. ನಿತ್ಯಾನಂದ ಸ್ವಾಮೀಜಿ ನುಡಿದರು. ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠ ಪರ್ಯಾಯ ರಾಜ ಪಟ್ಟಾಭಿಷೇಕ ಮಹೋತ್ಸವದಂಗವಾಗಿ ಜೋಗಿ ಮಠ ಪರಿಸರದ ಶ್ರೀ ಸಿದ್ಧಗುರು ಸುಂದರನಾಥ ವೇದಿಕೆಯಲ್ಲಿ ನಡೆದ ನಾಲ್ಕನೇ ದಿನದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಪ್ರಚಾರವಿಲ್ಲದ ಪಂಥ ನಾಥಪಂಥ. ಸರಳ ಬದುಕು ಹೇಳಿಕೊಡುವ […]

ವಿವಾಹ ವಿಚ್ಛೇದನ ಕೋರಿ ನಟಿ ಪ್ರೇಮಾ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ

Saturday, March 5th, 2016
prema

ಬೆಂಗಳೂರು : ನಟಿ ಪ್ರೇಮಾ ವಿವಾಹ ವಿಚ್ಛೇದನ ಕೋರಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಬುಧವಾರ(ಮಾರ್ಚ್ 02) ಅರ್ಜಿ ಸಲ್ಲಿಸಿದ್ದಾರೆ. ಕೊಡಗು ಮೂಲದ ಪ್ರೇಮಾ ಅವರು 2006ರಲ್ಲಿ ತಮ್ಮ ಸಮುದಾಯದವರೇ ಆದ ಉದ್ಯಮಿ ಜೀವನ್ ಅಪ್ಪಚ್ಚು ಅವರನ್ನು ವರಿಸಿದ್ದರು. 1995ರಲ್ಲಿ ಶಿವರಾಜ್ ಕುಮಾರ್ ಅಭಿನಯದ ಸವ್ಯಸಾಚಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಉಪೇಂದ್ರ ನಿರ್ದೇಶನದ ‘ಓಂ’ ಚಿತ್ರದ ಮಾಧುರಿ ಪಾತ್ರದ ಮೂಲಕ ಮನೆ ಮಾತಾದರು. ನಮ್ಮೂರ ಮಂದಾರ ಹೂವೇ,ಯಜಮಾನ ಸೇರಿದಂತೆ ಅನೇಕ ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದಾರೆ. […]

ಶಿವರಾತ್ರಿಯ ನಡುರಾತ್ರಿ ಕೋಟಿ ಸೂರ್ಯ ಪ್ರಕಾಶನಾದ ಪರಶಿವನು ಶಿವಲಿಂಗದಿಂದ ಸ್ವಯಂಭೂವಾಗಿ ಉದ್ಭವಿಸಿದ

Saturday, March 5th, 2016
shiva

ಮಂಗಳೂರು : ಹಿಮಾಲಯ ಪರ್ವತಗಳಲ್ಲೇ ಪವಿತ್ರವಾದ ಶಿವನ ಸ್ಥಾನ ಇರುವ ಪರ್ವತ ಕೈಲಾಸ. ಶಿವ ಲಯಕರ್ತ, ಭಕ್ತಿ ದೇವರು. ಶಿವನ ಮಗ ಕುಮಾರ ವೀರಭದ್ರ-ಕೆಟ್ಟ ಪಾಪಗಳನ್ನು ನಾಶಮಾಡುವವನು. ಕೆಟ್ಟ ಮನಸ್ಥಿತಿಯುಳ್ಳವನನ್ನು ಛೇದನಮಾಡುವುದು ಶಿವನ ಸೇನಾಧಿಪತಿ ವೀರಭದ್ರೇಶ್ವರ. ಗಣಪತಿ ವಿಘ್ನ ನಿವಾರಕ. ದಕ್ಷಿಣಾಕಾರ ಮತ್ತು ಆರ್ಧಸುತ್ತು ಪ್ರದಕ್ಷಿಣೆ ಶಿವ ದೇವಾಲಯದಲ್ಲಿ ಮಾತ್ರ. ಶಿವನು ಸ್ಮಶಾನಾವಾಸಿಯಾದ ಕಾರಣ ನಮಗೆ ಬಂದ ದೃಷ್ಟಿಯನ್ನು ಶಿವನು ತೆಗೆಯುವನು ಎಂಬ ನಂಬಿಕೆ. ಮಹಾ ಶಿವರಾತ್ರಿಯಂದು ನಡುರಾತ್ರಿ ಕೋಟಿ ಸೂರ್ಯ ಪ್ರಕಾಶನಾದ ಪರಶಿವನು ಶಿವಲಿಂಗದಿಂದ ಸ್ವಯಂಭೂವಾಗಿ […]

ಕುಂಬಳೆ ಪಂಚಾಯತಿನಲ್ಲಿ ಉಚಿತ ಸೈಕಲ್ ವಿತರಣೆ

Saturday, March 5th, 2016
kumble cycle

ಕುಂಬಳೆ : ಕುಂಬಳೆ ಗ್ರಾಮ ಪಂಚಾಯತಿನಲ್ಲಿ 2015-16 ರ ಯೋಜನೆಯ ಫಂಡಿನಿಂದ ಎಸ್‌ಎಸ್‌ಎಲ್‌ಸಿ ಕಲಿಯುತ್ತಿರುವ ಎಸ್‌ಟಿಎಸ್‌ಸಿ ವಿದ್ಯಾರ್ಥಿಗಳಿಗೆ ಬುಧವಾರ ಉಚಿತ ಸೈಕಲ್ ವಿತರಿಸುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಝಾಕ್ ಉದ್ಘಾಟಿಸಿದರು. ಕುಂಬಳೆ ಪಂಚಾಯತು ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದಭ ಎಸ್‌ಟಿ ಮಹಿಳೆಯರಿಗೆ ನಡೆಸಿದ ಫ್ಯಾಶನ್ ಡಿಸೈನಿಂಗ್ ತರಬೇತಿಯ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಪಂಚಾಯತು ಉಪಾಧ್ಯಕ್ಷೆ ಗೀತಾ ಶೆಟ್ಟಿ, ಸ್ಥಾಯಿ ಸಮಿತಿ ಚೆಯರ್‌ಮೆನ್ ಅಹ್ಮದ್ ಅಲಿ, ಸದಸ್ಯ ವಿ.ಪಿ.ಅಬ್ದುಲ್ ಖಾದರ್, ರಮೇಶ್ […]

ಸೋಲಿನ ಬಗ್ಗೆ ನಿರಾಸೆ ಬೇಡ, ಪ್ರತಾಪಸಿಂಹ ನಾಯಕ್

Monday, February 29th, 2016
bjp Bantwal

ಬಂಟ್ವಾಳ: ಕಾರ್ಯಕರ್ತರು ವಿಶ್ವಾಸವನ್ನು ಬೆಳೆಸಿಕೊಂಡು, ಒಗ್ಗಟ್ಟಾಗಿ ಕೆಲಸ ಮಾಡಿಕೊಂಡು ಮುಂದಿನ ಚುನಾವಣೆಯನ್ನು ಎದುರಿಸಿ ಎಂದು ಬಿ.ಜೆ.ಪಿ ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್ ಅವರು ಕರೆ ನೀಡಿದರು. ಅವರು ಬಿ.ಸಿರೋಡ್ ಬಿ.ಜೆ.ಪಿ ಕಛೇರಿಯಲ್ಲಿ ನಡೆದ ಸಜಿಪ ಮುನ್ನೂರು ಜಿ.ಪಂ. ಕ್ಷೇತ್ರದ ಕಾರ್ಯಕರ್ತರ ಅವಲೋಕನ ಸಭೆಯಲ್ಲಿ ಮಾತನಾಡಿದರು. ಸೋಲಿನ ಬಗ್ಗೆ ಗೊಂದಲ ಮತ್ತು ನಿರಾಸೆ ಬೇಡ ಮುಂದಿನ ಚುನಾವಣೆಯ ದೃಷ್ಟಿಯಿಂದ ಸೋಲನ್ನು ಸವಾಲಾಗಿ ಸ್ವೀಕರಿಸಿ ಗೆಲುವಿಗಾಗಿ ಶ್ರಮಿಸಿ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ಬಿಜೆಪಿ ಅಧ್ಯಕ್ಷ ಜಿ.ಆನಂದ ವಹಿಸಿದ್ದರು. ವೇದಿಕೆಯಲ್ಲಿ ಪಕ್ಷದ […]