ಕುಂಬಳೆ ಪೊಲೀಸರಿಂದ ಗಾಂಜಾ ಸಹಿತ ವ್ಯಕ್ತಿಯ ಬಂಧನ

Tuesday, February 9th, 2016
Sharath Kumar

ಕುಂಬಳೆ: 470 ಗ್ರಾಂ ಗಾಂಜಾ ಸಹಿತ ಸುಳ್ಯ ಕಾಂತಮಂಗಿಲದ ದೇವರಾಯ ಎಂಬವರ ಪುತ್ರ ಶರತ್ ಕುಮಾರ್(54)ನನ್ನು ಶಿರಿಯಾ ಪರಿಸರದಿಂದ ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಭಾನುವಾರ ಸಂಜೆ ಕುಂಬಳೆ ಸಿ.ಐ ಅನೂಪ್ ಕುಮಾರ್ ಗಸ್ತು ತಿರುಗುತ್ತಿದ್ದಾಗ ಸಂಶಯಾಸ್ಪದವಾಗಿ ಶರತ್ ಕುಮಾರನನ್ನು ವಶಕ್ಕೆ ತೆಗೆಯಲಾಯಿತು.ಬಳಿಕ ನಡೆಸಿದ ತಪಾಸಣೆಯಲ್ಲಿ 470 ಗ್ರಾಂ ಗಾಂಜಾ,700 ರೂ.ನಗದು ಪತ್ತೆಹಚ್ಚಲಾಗಿದೆ.ಈ ಹಿನ್ನೆಲೆಯಲ್ಲಿ ಬಂಧಿಸಿ ದೂರು ದಾಖಲಿಸಲಾಗಿದ್ದು ಶರತ್ ಕುಮಾರ್ ನ ವಿರುದ್ದ ಸುಳ್ಯ ಠಾಣೆಯಲ್ಲಿ 2011 ರಲ್ಲಿ ಗಾಂಜಾ ಸಾಗಾಟ ಆರೋಪದ ದೂರು ದಾಖಲಿಸಲಾಗಿತ್ತೆಂದು ತಿಳಿದುಬಂದಿದೆ.

ಕುಂಬಳೆ: ಕಲಾಪರ್ವಂ ವಿಶೇಷ ಕಾರ್ಯಕ್ರಮ

Tuesday, February 9th, 2016
Kalaparvam

ಕುಂಬಳೆ: ವಿಧ್ಯೆಯ ಮೂಲಕ ಉನ್ನತ ಸ್ಥಾನಮಾನಗಳಿಗೆ ತಲಪಿದಾಗ ಕಲಿತ ಶಾಲೆ,ಕಲಿಸಿದ ಅಧ್ಯಾಪಕರು,ಹೆತ್ತವರನ್ನು ಮರೆಯುವುದು ಕಲಿತ ವಿಧ್ಯೆಯ ಅವನತಿಗೆ ಕಾರಣವಾಗುತ್ತದೆ. ನಮ್ಮ ವ್ಯಕ್ತಿತ್ವ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸಿದ ಸಂದರ್ಭಗಳು ಬದುಕಿನ ಕೊನೆ ತನಕ ನೆನಪಿದ್ದು,ಕೈಲಾದ ಸಹಾಯ ಮಾಡುವ ಅನುಭೂತಿ ನಮ್ಮಲ್ಲಿರಬೇಕೆಂದು ಮಲೆಯಾಳಂ ಚಿತ್ರರಂಗದ ಹಿರಿಯ ನಟ ಅಬು ಸಲೀಂ ಅಭಿಪ್ರಾಯ ವ್ಯಕ್ತಪಡಿಸಿದರು. ಕುಂಬಳೆ ಕೇಂದ್ರೀಕೃತ ಮಾನವ ಸಂಪನ್ಮೂಲ ಅಭಿವೃದ್ದಿ ಕಾಲೇಜಿನಲ್ಲಿ ನಡೆದ ಕಲಾಪರ್ವಂ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡುತ್ತಿದ್ದರು. ಇತರ ವಿಷಯಗಳಿಗಿಂತ ವ್ಯತ್ಯಸ್ಥವಾಗಿ ಮಾನವ […]

ಜಾನಪದ ಪರಿಷತ್ತು ಗಡಿನಾಡ ಘಟಕ ನೂತನ ಪದಾಧಿಕಾರಿಗಳ ಘೋಷಣೆ

Monday, February 8th, 2016
Janapada Parishattu

ಕುಂಬಳೆ: ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕಕ್ಕೆ ಮುಂದಿನ ಮೂರು ವರ್ಷಗಳ ಕಾಲಾವಧಿಗೆ ನೂತನ ಸಮಿತಿಗೆ ರೂಪು ನೀಡಿ ಬೆಂಗಳೂರಿನ ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಟಿ.ತಿಮ್ಮೇ ಗೌಡ (ಭಾ.ಸ.ಸೇ)ಆದೇಶ ಹೊರಡಿಸಿದ್ದಾರೆ. ಗಡಿನಾಡ ಘಟಕದ ಅಧ್ಯಕ್ಷರಾಗಿ ಕೇಶವ ಪ್ರಸಾದ ನಾಣಿತ್ತಿಲು, ಉಪಾಧ್ಯಕ್ಷರಾಗಿ ಬಾಲಕೃಷ್ಣ ಅಗ್ಗಿತ್ತಾಯ ಹಾಗೂ ಪ್ರೊ.ಎ.ಶ್ರೀನಾಥ್,ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಹಮಾನ್ ಸುಬ್ಯಯ್ಯಕಟ್ಟೆ, ಕಾರ್ಯದರ್ಶಿಗಳಾಗಿ ಕೇಳು ಮಾಸ್ಟರ್ ಅಗಲ್ಪಾಡಿ ಹಾಗೂ ಪುರುಷೋತ್ತಮ ಭಟ್ ಕೆ,ಖಜಾಂಜಿಯಾಗಿ ರವಿ.ನಾಯ್ಕಾಪು ಮತ್ತು ಸದಸ್ಯರಾಗಿ ಆಯಿಷಾ ಎ.ಎ.ಪೆರ್ಲ,ವಿಜಯಾ ಸುಬ್ರಹ್ಮಣ್ಯ,ವಸಂತಕುಮಾರ್ ಸಿ.ಕೆ,ಜಯಪ್ರಕಾಶ ಪಜಿಲ,ಪದ್ಮರಾಜ […]

ಸಹಾಯದ ನಿರೀಕ್ಷೆಯಲ್ಲಿ ಸೀತಾಂಗೋಳಿಯ ಬಡ ಕುಟುಂಬ

Monday, February 8th, 2016
P Mohammed

ಕುಂಬಳೆ: ಮನೆಯಲ್ಲಿ ಕಾಡುವ ಬಡತನ. ತನ್ನ ಮೂರು ಮಕ್ಕಳು ಮತ್ತು ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಲಾಗದ ಹತಾಶೆ. ಜತೆಯಲ್ಲಿ ಲಿವರ್ ಸಂಬಂಧೀ ಖಾಯಿಲೆಯ ನೋವು. ಇದು ಸೀತಾಂಗೋಳಿ ಸಮೀಪದ ಎಕೆಜಿ ನಗರ ನಿವಾಸಿ ಪಿ.ಮಹಮ್ಮದ್(50) ಅವರ ದುಸ್ಥಿತಿ. ಪಿ.ಮಹಮ್ಮದ್ ಅವರು ಕಳೆದ ಮೂರು ವರ್ಷಗಳಿಂದ ಪಿತ್ತಕೋಶ ಸಂಬಂಧೀ ಕಾಯಿಲೆಗೆ ತುತ್ತಾಗಿ ದಯನೀಯ ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ಇದ್ದ ಹಣವನ್ನೆಲ್ಲಾ ಈಗಾಗಲೇ ಚಿಕಿತ್ಸೆಗಾಗಿ ಖರ್ಚು ಮಾಡಿದ್ದು, ಮುಂದಿನ ಚಿಕಿತ್ಸೆಗೆ ಹಣವಿಲ್ಲದೆ ಸಹಾಯವನ್ನು ಯಾಚಿಸುತ್ತಿದ್ದಾರೆ. ಎರಡು ಹೆಣ್ಣು ಮಕ್ಕಳು, ಒಬ್ಬ ಮಗ ಹಾಗೂ […]

ದಾಸರ ಕೀರ್ತನೆಗಳ ಕಂಪನ್ನು ಮನೆ ಮನೆಗೆ ಮುಟ್ಟಿಸಬೇಕು

Monday, February 8th, 2016
Vishnumurty Temple

ಬದಿಯಡ್ಕ: ವೇದ, ಉಪನಿಷತ್ತುಗಳಲ್ಲಿ ಬರುವ ಜಠಿಲವಾದ ವಿಷಯಗಳನ್ನು ಸರಳವಾಗಿ ಕೀರ್ತನೆಗಳ ಮೂಲಕ ಜನ ಸಾಮಾನ್ಯರಿಗೂ ತಿಳಿಯುವಂತೆ ತಿಳಿದು ಹೇಳಿದವರು ಪುರಂದರ ದಾಸರು. ಜಗತ್ತಿನ ಎಲ್ಲಾ ಆಗು ಹೋಗುಗಳನ್ನು ತಮ್ಮ ಕೀರ್ತನೆಯಲ್ಲಿ ಅಳವಡಿಸಿಕೊಂಡಿದ್ದಾರೆ ಎಂದು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆಯಾಗಿದ್ದ ನಿವೃತ್ತ ಪ್ರಾಧ್ಯಾಪಕಿ ಡಾ.ಯು.ಮಹೇಶ್ವರಿ ಅವರು ಹೇಳಿದರು. ಕೂಡ್ಲು ವಿಷ್ಣುಮಂಗಲ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಜರಗಿದ ಪುರಂದರ ದಾಸರ ಆರಾಧನಾ ಮಹೋತ್ಸವದಂಗವಾಗಿ ಪುರಂದರದಾಸರ ಸಾಹಿತ್ಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು. ದಾಸ ಪರಂಪರೆಯಲ್ಲಿ ಶ್ರೇಷ್ಠರೆನಿಸಿರುವ […]

ವರ್ಕಾಡಿ ಚರ್ಚ್ : ವೆಲಂಕಣಿ ಆರೋಗ್ಯ ಮಾತೆಯ ಬೆಳ್ಳಿ ಮಹೋತ್ಸವ ಸಂಪನ್ನ

Monday, February 8th, 2016
Vorkady church

ಮಂಜೇಶ್ವರ : ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನಲ್ಲಿ 1910ರಲ್ಲಿ ಸ್ಥಾಪಿಸಲ್ಪಟ್ಟ ಯೇಸು ಕ್ರಿಸ್ತರ ತಿರುಹೃದಯಕ್ಕೆ ಸಮರ್ಪಿಸಲಾದ ವರ್ಕಾಡಿ ದೇವಾಲಯದಲ್ಲಿ ಆರೋಗ್ಯ ಮಾತೆ(ವೆಲಂಕಣಿ) ಪುಣ್ಯಕ್ಷೇತ್ರದ ಸ್ಥಾಪನೆಯ ಬೆಳ್ಳಿ ಮಹೋತ್ಸವ ಹಾಗೂ ಸಮೂಹ ದಿನದ ೩೦ನೇ ವಾರ್ಷಿಕೋತ್ಸವವು ವರ್ಕಾಡಿ ಚರ್ಚ್‌ನಲ್ಲಿ ವಿಜೃಂಭಣೆಯಿಂದ ಜರುಗಿದುವು. ಬಲಿಪೂಜೆಗೆ ಮಂಗಳೂರು ಸಂತ ಜೋಸೆಫರ ಸೆಮಿನರಿಯ ಮುಖ್ಯಸ್ಥರಾದ ವಂದನೀಯ ಸ್ವಾಮಿ ಜೋಸೆಫ್ ಮಾರ್ಟಿಸ್ ಅವರು ನೇತೃತ್ವ ನೀಡಿದರು. ವರ್ಕಾಡಿ ಚರ್ಚ್‌ನ ಪೂರ್ವ ಧರ್ಮಗುರುಗಳಾದ ಅತಿ ವಂದನೀಯ ಪೀಟರ್ ಸೆರಾವೋ, ಅತಿ ವಂದನೀಯ ಡೆನ್ನಿಸ್, ಭಗಿನಿ ರೀಟಾ […]

ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಮೂರ್ತಿಗೆ ಪಾದಾಭಿಷೇಕ.

Saturday, February 6th, 2016
Padapooje

ಧರ್ಮಸ್ಥಳ : ರತ್ನಗಿರಿಯಲ್ಲಿರುವ ಭಗವಾನ್ ಬಾಹುಬಲಿ ಮೂರ್ತಿಗೆ 216 ಕಲಶಗಳಿಂದ ಪಾದಾಭಿಷೇಕ ಗುರುವಾರ ನಡೆಯಿತು. ಮಂಗಲ ಪ್ರವಚನ ನೀಡಿದ ಕಾರ್ಕಳದ ಲಲಿತಕೀರ್ತಿ ಭಟ್ಟಾರಕರು ಮಾತನಾಡಿ, ಬಾಹುಬಲಿ ನೀಡಿದ ತ್ಯಾಗ, ಅಹಿಂಸೆ ಮತ್ತು ಶಾಂತಿಯ ಸಂದೇಶ ಸಾರ್ವಕಾಲಿಕ ಮೌಲ್ಯ ಹೊಂದಿದ್ದು ಆದರ್ಶ ಹಾಗೂ ಅನುಕರಣೀಯವಾಗಿದೆ ಎಂದರು. ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆ ಹೊಂದಿರುವ ಧರ್ಮಸ್ಥಳದಲ್ಲಿ ಚತುರ್ವಿಧ ದಾನಗಳನ್ನು ವೀರೇಂದ್ರ ಹೆಗ್ಗಡೆಯವರು ಚಾಚೂ ತಪ್ಪದೆ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು […]

ಮನೆ ಕೆಲಸದ ಯುವತಿಯನ್ನು ಗರ್ಭವತಿ ಮಾಡಿದ ಯಜಮಾನ

Saturday, February 6th, 2016
Harishchandra bhut

ಮಂಗಳೂರು: 19 ವರ್ಷದ ಯುವತಿಯನ್ನು 56 ವರ್ಷದ ವ್ಯಕ್ತಿಯೋರ್ವ ಬೆದರಿಸಿ ಅತ್ಯಾಚಾರ ಎಸಗಿದ ಘಟನೆ ಬಜ್ಪೆ ಸಮೀಪದ ಕಟೀಲಿನಲ್ಲಿ ನಡೆದಿದ್ದು, ಪರಿಣಾಮ ಆಕೆ ಗರ್ಭವತಿಯಾಗಿರುವ ಸಂಗತಿಯೊಂದು ತಡವಾಗಿ ಬೆಳಕಿಗೆ ಬಂದಿದೆ. ಅತ್ಯಾಚಾರ ಎಸಗಿದ ಆರೋಪಿಯನ್ನು ಕಟೀಲು ದೇವಸ್ಥಾನದ ಸಿಬ್ಬಂದಿ ಹರಿಶ್ಚಂದ್ರರಾವ್ ಯಾನೆ ಅಪ್ಪುಭಟ್ ಎಂದು ಗುರುತಿಸಲಾಗಿದೆ. ಈತನ ಮನೆಗೆ ಕೆಲಸಕ್ಕೆಂದು ಬರುತ್ತಿದ್ದ ಮನೆ ಸಮೀಪದ ಯುವತಿಯನ್ನು ಬೆದರಿಸಿ ಆ ಬಳಿಕ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಈಗ ಈ ಯುವತಿ ಆರು ತಿಂಗಳ ಗರ್ಭಿಣಿಯಾಗಿದ್ದಾಳೆ. ಈತನ ಕೃತ್ಯದಿಂದ […]

ಅನಧಿಕೃತವಾಗಿ ಸಾಗಿಸಲಾಗುತಿದ್ದ 15 ಲಕ್ಷ ರೂ. ಮೌಲ್ಯದ ಬೆಳ್ಳಿ ಹಾಗೂ 94 ಸಾವಿರ ರೂ. ನಗದು ಪತ್ತೆ

Saturday, February 6th, 2016
Cash and Silver

ಮಂಜೇಶ್ವರ: ಕರ್ನಾಟಕ ಸಾರಿಗೆ ಬಸ್ಸಿನಲ್ಲಿ ಯಾವುದೇ ದಾಖಲೆ ಪತ್ರಗಳಿಲ್ಲದೆ ಸಾಗಿಸಲಾಗುತಿದ್ದ ಸುಮಾರು 15ಲಕ್ಷ ರೂ. ಮೌಲ್ಯದ ಬೆಳ್ಳಿ ಹಾಗೂ 94 ಸಾವಿರ ರೂ. ನಗದನ್ನು ಮಂಜೆಶ್ವರ ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ತಮಿಳ್ನಾಡು ಚೆನ್ನೈ ನಿವಾಸಿ ಮಹಾಲಿಂಗ (50) ಎಂಬಾತನನ್ನು ಸೆರೆ ಹಿಡಿಯಲಾಗಿದೆ. ಶನಿವಾರದಂದು ಬೆಳಿಗ್ಗೆ ಸುಮಾರು ಹನ್ನೊಂದು ಘಂಟೆಗೆ ವಾಹನ ತಪಾಸಣೆಯಲ್ಲಿ ನಿರತರಾಗಿದ್ದ ವಾಮಂಜೂರು ಚೆಕ್ ಪೋಸ್ಟ್ ಅಬಕಾರಿ ಪೊಲೀಸರು ಆ ದಾರಿಯಾಗಿ ಬಂದ ಮಂಗಳೂರಿನಿಂದ ಕಾಸರಗೋಡಿಗೆ ತೆರಳುತಿದ್ದ ಕರ್ನಾಟಕ ಸಾರಿಗೆ ಬಸ್ಸನ್ನು […]

ನೈಜ ಶಿಕ್ಷಣ ನೀಡುವಲ್ಲಿ ವಿದ್ಯಾಲಯಗಳು ಸೋತಿರುವುದು ಗಂಭೀರ ವಿಷಯ : ಸಜೀವ್ ಮರೋಳಿ

Saturday, February 6th, 2016
STA

ಮಂಜೇಶ್ವರ: ವಿದ್ಯಾಭ್ಯಾಸದ ಮಹತ್ವವನ್ನು ಅರಿತು ಹಿರಿಯ ತಲೆಮಾರಿನವರು ಗ್ರಾಮೀಣ ಪ್ರದೇಶಗಳಲ್ಲಿ ಆರಂಭಿಸಿದ ವಿದ್ಯಾಲಯಗಳು ದಾಖಲೆ ವರ್ಷಗಳಷ್ಟು ಕಾಲ ಸೇವಾ ತತ್ಪರವಾಗಿರುವುದು ವಿಧ್ಯೆಯ ಮಹತ್ವದ ಸಾಧನೆಯನ್ನು ಪ್ರತಿಬಿಂಬಿಸುತ್ತದೆ. ಶಿಕ್ಷಣ ಇಂದು ವ್ಯಾಪಾರೀಕರಣಗೊಂಡು ನೈಜ ಶಿಕ್ಷಣ ನೀಡುವಲ್ಲಿ ಸೋತಿರುವುದು ಗಂಭೀರ ವಿಷಯವಾಗಿದ್ದು, ಈ ನಿಟ್ಟಿನಲ್ಲಿ ಸೇವಾ ಮನೋಭಾವದಿಂದ ಶಿಕ್ಷಣ ಎಲ್ಲೆಡೆ ವ್ಯಾಪಿಸುವಲ್ಲಿ ಅಹರ್ನಿಶಿ ಕಾರ್ಯವೆಸಗುತ್ತಿರುವ ವಿದ್ಯಾಲಯಗಳು ನೈಜ ಅರ್ಥದ ದೇಗುಲಗಳೆಂದು ಮಲಬಾರ್ ದೇವಸ್ವಂ ಬೋರ್ಡ್ ಅಧ್ಯಕ್ಷ ಸಜೀವ್ ಮರೋಳಿ ಅಭಿಪ್ರಾಯ ವ್ಯಕ್ತಪಡಿಸಿದರು. ಮಂಜೇಶ್ವರದ ಪ್ರಸಿದ್ದ ಎಸ್ ಎ ಟಿ ಶಾಲಾ […]