ಬಿಜೆಪಿ ಕಾರ್ಯಕರ್ತನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

Tuesday, February 15th, 2022
jyotish

ಕಾಸರಗೋಡು : ಯುವಕನೋರ್ವನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಾಸರಗೋಡಿನಲ್ಲಿ ಪತ್ತೆಯಾಗಿದೆ. ಅಣ೦ಗೂರು ಜೆ.ಪಿ.ಕಾಲನಿ ನಿವಾಸಿ ಜ್ಯೋತಿಷ್ (35) ಮೃತ ಯುವಕ. ಮನೆ ಸಮೀಪದ ಮರ ವೊಂದರ ರೆಂಬೆಯಲ್ಲಿ ಕುತ್ತಿಗೆಗೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಇಂದು ಬೆಳಗ್ಗೆ ಮೃತದೇಹ  ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ರಾತ್ರಿ ಮನೆಯಲ್ಲಿ ಮಲಗಿದ್ದ ಜ್ಯೋತಿಷ್ ಇಂದು ಬೆಳಗ್ಗೆ ಮನೆಯವರು ಗಮನಿಸಿದಾಗ ನಾಪತ್ತೆ ಯಾಗಿದ್ದು, ಹುಡುಕಾಡಿದಾಗ ಮೃತದೇಹ ಪತ್ತೆಯಾಗಿದೆ. ಬಿಜೆಪಿ ಕಾರ್ಯಕರ್ತನಾಗಿದ್ದ ಜ್ಯೋತಿಷ್ ಬಂಗ್ರಗುಡ್ಡೆ ಯ ಸಿನಾನ್, ಸೂರ್ಲು ವಿನ ರಿಷಾದ್ ಹಾಗೂ ಕೊಲೆ ಪ್ರಕರಣದ […]

ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇಂಟರ್ನ್ ವಿದ್ಯಾರ್ಥಿ ಸಾವು

Monday, February 14th, 2022
Nagesh

ಮಂಗಳೂರು : ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಅರೆವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದ ವಿದ್ಯಾರ್ಥಿಯೊಬ್ಬ ವಿಶ್ರಾಂತಿ ವೇಳೆ ನಿದ್ರಿಸುತ್ತಿದ್ದಾಗ ಮೃತಪಟ್ಟ ಘಟನೆ ವರದಿಯಾಗಿದೆ. ಮೃತರನ್ನು ಉಪ್ಪಿನಂಗಡಿ ನಿವಾಸಿ , ನಾಗೇಶ್(23) ಎಂದು ಗುರುತಿಸಲಾಗಿದೆ. ಹೃದಯಾಘಾತದಿಂದ ನಾಗೇಶ್ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಅರೆವೈದ್ಯಕೀಯ ಇಂಟರ್ನ್ ವಿದ್ಯಾರ್ಥಿಯಾಗಿದ್ದು , ಫೆ.13 ರ ರಾತ್ರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು, ಆಸ್ಪತ್ರೆಯ ವಿಶ್ರಾಂತಿ ಕೊಠಡಿಯಲ್ಲಿ ಮಲಗಿದ್ದಾಗ ಸಾವನ್ನಪ್ಪಿದ್ದಾರೆ.

 ಅನಿಲ ಟ್ಯಾಂಕರುಗಳು ರಾತ್ರಿ ಸಂಚರಿಸುವಂತಿಲ್ಲ, ನಿಗಾಕ್ಕೆ ಜಿಲ್ಲಾಧಿಕಾರಿ ಸೂಚನೆ

Monday, February 14th, 2022
LPG

ಮಂಗಳೂರು :- ನಿಗದಿ ಪಡಿಸಿರುವ (ಹಗಲು) ವೇಳೆಯಲ್ಲಿಯೇ ಅನಿಲ ಟ್ಯಾಂಕರುಗಳು ಸಂಚರಿಸುವ ಬಗ್ಗೆ ಅಧಿಕಾರಿಗಳು ನಿಗಾವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಸಂಬಂಧಿಸಿದ ಇಲಾಖೆಗಳಿಗೆ ಸೂಚಿಸಿದರು. ಅವರು ಫೆ.14ರ ಸೋಮವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಬಿಕ್ಕಟ್ಟು ಪರಿಹಾರ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯನ್ನು ಹಾದೂಹೋಗುವ ಹೆದ್ದಾರಿಗಳಲ್ಲಿ ಗ್ಯಾಸ್ ಟ್ಯಾಂಕರುಗಳ ಅಸುರಕ್ಷಿತ ಚಾಲನೆ ಪ್ರಯಾಣಿಕರಿಗೆ ತೊಂದರೆಯುಂಟು ಮಾಡುತ್ತದೆ, ಅಲ್ಲದೇ ಅದು ಸಾರ್ವಜನಿಕರ ಸುಗಮ ಸಂಚಾರಕ್ಕೂ ಅನಾನುಕೂಲವಾಗುತ್ತದೆ, ಒಂದು ವೇಳೆ […]

ಮಹಾಕಾಳಿಪಡ್ಪು ಭಾರತೀ ವಾಚ್ ವರ್ಕ್ಸ್ ನ ಜೆ.ಚಂದ್ರಶೇಖರ್ ನಿಧನ

Monday, February 14th, 2022
j Chandrashekar

ಮಂಗಳೂರು : ಜಪ್ಪು ಮಹಾಕಾಳಿಪಡ್ಪು ಭಾರತೀ ವಾಚ್ ವರ್ಕ್ಸ್ ಇದರ ಮಾಲಕ ಜೆ.ಚಂದ್ರಶೇಖರ್ (82) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಬೆಳಿಗ್ಗೆ ನಿಧನರಾಗಿದ್ದಾರೆ. 1967ರಲ್ಲಿ ವಾಚ್ ವರ್ಕ್ಸ್ ಆರಂಭಿಸಿದ ಇವರು ಮೊದಲು ಮಂಗಳೂರಿನ ಕೆನರಾ ವಾಚ್ ವರ್ಕ್ಸ್ ನಲ್ಲಿ ತನ್ನ ವೃತ್ತಿ ಆರಂಭಿಸಿದರು. ಬಳಿಕ 1977ರಲ್ಲಿ ಸ್ವತ: ತಾವೇ ಜಪ್ಪು ಮಹಾಕಾಳಿಪಡ್ಪು ನಲ್ಲಿ  ಭಾರತೀ ವಾಚ್ ವರ್ಕ್ಸ್ ಸಂಸ್ಥೆ ಸ್ಥಾಪಿಸಿ ತನ್ನ ವೃತ್ತಿ ನಿರ್ವಹಿಸಿದ್ದರು. ಮಂಗಳೂರಿನ ಜಪ್ಪು ಪಟ್ನ, ನಂತರ ಎಕ್ಕೂರು ಇಲ್ಲಿ ಸ್ವಂತ ಮನೆಯಲ್ಲಿ ನೆಲೆಸಿದ್ದರು. ಇತ್ತೀಚಿಗೆ […]

ಮರಳು ಸಾಗಾಣಿಕೆ ಲಾರಿ ‌ಮಾಲೀಕರಿಂದ ಹಣ ಪಡೆದಿಲ್ಲ ಎಂದು‌ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಿದ ಶಾಸಕ ಹರತಾಳು ಹಾಲಪ್ಪ

Saturday, February 12th, 2022
Haratalu Halappa

ಧರ್ಮಸ್ಥಳ : ಮರಳು ಸಾಗಾಣಿಕೆ ಲಾರಿ ‌ಮಾಲೀಕರಿಂದ ಹಣ ಪಡೆದಿಲ್ಲ ಎಂದು‌ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಿದ್ದೇನೆ‌ ಎಂದು‌ ಶಾಸಕ ಹರತಾಳು ಹಾಲಪ್ಪ ಮಾಧ್ಯಮಗಳಿಗೆ ತಿಳಿಸಿದರು. ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಆರೋಪ ಹಾಗೂ ಆಹ್ವಾನದ ಹಿನ್ನೆಲೆ, ಸವಾಲು ಸ್ವೀಕರಿಸಿದ ಶಾಸಕ ಹರತಾಳು ಹಾಲಪ್ಪ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಿ ಮಾತನಾಡಿದರು. ಮಾಜಿ ಶಾಸಕರ ಆಹ್ವಾನದಂತೆ‌ ಆರು ದಿನಗಳ‌ ಮೊದಲೇ ಅವರಿಗೆ ತಿಳಿವಳಿಕೆ ಪತ್ರದ ಮೂಲಕ ನೋಟಿಸ್ ನಿಡಿ ಇಂದಿಗೆ ದಿನ ನಿಗದಿಪಡಿಸಲಾಗಿತ್ತು. ಅವರು ದಿನಾಂಕ […]

ಹಿಜಾಬ್ ವಿವಾದದ ನಂತರ, ಮುಸ್ಲಿಂ ವಿದ್ಯಾರ್ಥಿಗಳು ತರಗತಿಯೊಳಗೆ ನಮಾಜ್ ಮಾಡುತ್ತಿರುವ ವಿಡಿಯೋ ವೈರಲ್

Saturday, February 12th, 2022
nawaz

ಮಂಗಳೂರು: ಹಿಜಾಬ್ ವಿವಾದದ ನಂತರ ಕಡಬ ತಾಲೂಕಿನ ಅಂಕತ್ತಡ್ಕದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಲವು ಮುಸ್ಲಿಂ ವಿದ್ಯಾರ್ಥಿಗಳು ತರಗತಿಯೊಳಗೆ ನಮಾಜ್ ಮಾಡುತ್ತಿರುವ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 5 ಮತ್ತು 7 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಫೆಬ್ರುವರಿ 4 ರಂದು ತರಗತಿಯೊಳಗೆ ನಮಾಜ್ ಮಾಡಿದ್ದರು. ಆ ವಿಡಿಯೋ ಕ್ಲಿಪ್ ವೈರಲ್ ಆದ ನಂತರ ಸ್ಥಳೀಯ ನಿವಾಸಿಗಳು ಅದನ್ನು ವಿರೋಧಿಸಿದರು. ಮಾಹಿತಿ ತಿಳಿದ ತಕ್ಷಣ ಶಿಕ್ಷಣ ಇಲಾಖೆ ಅಧಿಕಾರಿಗಳು ಶುಕ್ರವಾರ ಶಾಲೆಗೆ ಭೇಟಿ […]

ಆತ್ಮನಿರ್ಭರ ಕೇಂದ್ರ ಬಜೆಟ್ – ಜಿಲ್ಲಾ ಬಿಜೆಪಿ

Saturday, February 12th, 2022
nirmala-seetharaman

ಮಂಗಳೂರು  : ಗೌರವಾನ್ವಿತ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ರವರು ಮಂಡಿಸಿದ ಬಜೆಟ್ ಸ್ವಾತಂತ್ರ್ಯೋತ್ತರದ 100 ವರ್ಷಗಳ ಭಾರತ ಎಂಬ ದೂರದೃಷ್ಟಿ ಸಾಧಿಸುವ ಗುರಿಯನ್ನು ಬಜೆಟ್ ಹೊಂದಿದೆ: ಈ ಬಜೆಟ್ ಮುಂದಿನ 25 ವರ್ಷಗಳಲ್ಲಿ ಭಾರತದ ಸಮಗ್ರ ಪ್ರಗತಿಯ ನೀಲನಕ್ಷೆಯನ್ನು ಹಾಕಲು ಪ್ರಯತ್ನಿಸುತ್ತದೆ. ಭಾರತವು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸುತ್ತದೆ. ಕಳೆದ 2ವರ್ಷಗಳಲ್ಲಿ ಸವಾಲುಗಳನ್ನು ಎದುರಿಸಿ ಆರೋಗ್ಯ ಮೂಲಸೌಕರ್ಯಗಳ ಸುಧಾರಣೆ ಭಾರತವು ಪ್ರಬಲ ಸ್ಥಾನದಲ್ಲಿದೆ. ಆರ್ಥಿಕತೆಯ ಚೇತರಿಕೆಯು ಭಾರತದ ಬಲವಾದ ಸ್ಥಿತಿಸ್ಥಾಪಕತ್ವವನ್ನು ಪ್ರತಿಬಿಂಬಿಸುತ್ತದೆ. ಪ್ರಸಕ್ತ […]

ಗೊಮಟೇಶ್ವರ ಸ್ವಾಮಿಯ ಬಗ್ಗೆ ಅಶ್ಲೀಲ ಹೇಳಿಕೆ, ಧರ್ಮಸ್ಥಳ ಪೋಲಿಸ್ ಠಾಣೆಯಲ್ಲಿ ದೂರು

Saturday, February 12th, 2022
Bahubali

ಬೆಳ್ತಂಗಡಿ : ಜೈನ ಧರ್ಮದ ಆರಾಧ್ಯ ದೇವರಾದ ಗೊಮಟೇಶ್ವರ ಸ್ವಾಮಿಯ ಬಗ್ಗೆ ಅಶ್ಲೀಲ , ಅವಹೇಳನಕಾರಿಯಾಗಿ  ಸಂದರ್ಶನವೊಂದರಲ್ಲಿ ಆಯುಬ್ ಖಾನ್ ಹೇಳಿಕೆ ನೀಡಿದ್ದು ಜೈನ ಧರ್ಮದ ಧಾರ್ಮಿಕ ಭಾವನೆಗಳಿಗೆ ನೋವು ಉಂಟಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉಳಿದ ಸಮುದಾಯಗಳಂತೆ ಜೈನಧರ್ಮವು ಧಾರ್ಮಿಕ ಪರಂಪರೆ ಹಾಗೂ ಭಗವಾನ್ ಮಹಾವೀರರ ವಾಣಿಯಂತೆ ಬದುಕು ಮತ್ತು ಬದುಕಲು ಬಿಡು ಎನ್ನುವ ತತ್ವ-ಸಿದ್ಧಾಂತ ದೊಂದಿಗೆ ಎಲ್ಲಾ ಧರ್ಮದವರೊಂದಿಗೆ ಸಾಮರಸ್ಯದಿಂದ ಬಾಳುತ್ತಿರುವ ಆಹಿಂಸಾಮಯ ಜೈನ ಧರ್ಮವಾಗಿದೆ.  ಜೈನ ಧರ್ಮದ ಭಗವಾನ್ ಬಾಹುಬಲಿಯ ಸಂದೇಶಗಳ ಆದ ಹಿಂಸೆಯಿಂದ […]

ಟಿಕ್ ಟಾಕ್ ಖ್ಯಾತಿಯ ಕಮಲಜ್ಜಿ ನಿಧನ

Thursday, February 10th, 2022
kamalajji

ಬಂಟ್ವಾಳ : ಅನಂತಾಡಿ ಗ್ರಾಮದ ಮಾಮೇಶ್ವರ ಸಂಕೇಶ ನಿವಾಸಿ ಟಿಕ್ ಟಾಕ್ ಕಮಲಜ್ಜಿ ಯಾನೆ ಕಮಲ(85) ರವರು ಬುಧವಾರ ಸಂಜೆ ನಿಧನರಾಗಿದ್ದಾರೆ. ಟಿಕ್ ಟಾಕ್ ನ ಹಾಸ್ಯ ವಿಡಿಯೋಗಳಲ್ಲಿ ಕಾಣಿಸಿಕೊಂಡು ಅಪಾರ ಅಭಿಮಾನಿ ವರ್ಗವನ್ನು ಪಡೆದಿದ್ದ, ಅವರು ಕಳೆದ ಒಂದುವಾರದಿಂದ ಅನಾರೋಗ್ಯ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಇಂದು ಸಂಜೆ ನಿಧನರಾಗಿದ್ದಾರೆ. ಮೃತರು ಆರು ಗಂಡು, ಮೂವರು ಹೆಣ್ಣು ಮಕ್ಕಳು, ಮೊಮ್ಮಕ್ಕಳು ಸಹಿತ ಅಪಾರ ಬಂಧುಗಳನ್ನು, ಅಭಿಮಾನಿಗಳನ್ನು ಅಗಲಿದ್ದಾರೆ. ಪ್ರಸೂತಿ ತಜ್ಞೆಯಾಗಿದ್ದ ಇವರು ಪರೋಪಕಾರ […]

‘ಬುಲ್ ಶಿಟ್’ ಎಂದು ಶಿಕ್ಷಕಿಯನ್ನು ಅವಮಾನಿಸಿದ ಹಿಜಾಬ್ ಹಾಕಿದ ವಿದ್ಯಾರ್ಥಿನಿ

Thursday, February 10th, 2022
Hijab student

ಕಾರ್ಕಳ:  ಕಾರ್ಕಳದ ಕಾಲೇಜೊಂದರಲ್ಲಿ ನಡೆದ ಗಲಾಟೆಯ ವಿಡಿಯೋ ಇದೀಗ ವೈರಲ್‌ ಆಗಿದ್ದು ಹಿಜಾಬ್ ಹಾಕಿದ ವಿದ್ಯಾರ್ಥಿನಿಯೊಬ್ಬಳು ಶಿಕ್ಷಕಿಯನ್ನು ಅವಮಾನಿಸಿರುವುದು ಬಯಲಾಗಿದೆ. ಮಂಗಳವಾರ (ಫೆ.8) ಎಂಜಿಎಂ ಕಾಲೇಜಿನಲ್ಲಿ ನಡೆದ ಘಟನೆಯ ವಿಡಿಯೋ ಇದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಈ ವಿಡಿಯೋದಲ್ಲಿ, ಹಿಜಾಬ್‌, ಬುರ್ಖಾ ಹಾಕಿಕೊಂಡು ಬಂದ ಕೆಲ ವಿದ್ಯಾರ್ಥಿನಿಯರು ಕಾಲೇಜಿನಲ್ಲಿ ಗಲಾಟೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ನಯನಾ ಎಂಬ ಶಿಕ್ಷಕಿ ಮಕ್ಕಳನ್ನು ತಣ್ಣಗಾಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಯಾರೂ ಗಲಾಟೆ ಮಾಡಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಈ […]