ಪುತ್ತೂರು ಜೋಡಿ ಆತ್ಮಹತ್ಯೆ ಪ್ರೀತಿಗೆ ಯುವಕನ ತಾಯಿಯೇ ವಿಲನ್ ಆದಳು !

Saturday, December 29th, 2012
Chetan Navya

ಮಂಗಳೂರು : ಪರಸ್ಪರ ಪ್ರೀತಿಸುತ್ತಿದ್ದ ಜೋಡಿಯೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ತಾಜಾ ಘಟನೆ ಪುತ್ತೂರು ಪೇಟೆಯ ಹೊರವಲಯದ ಚಿಕ್ಕಮುಡ್ನೂರು ಗ್ರಾಮದ ಕರ್ಮಲ ಎಂಬಲ್ಲಿಂದ ಬೆಳಕಿಗೆ ಬಂದಿದೆ. ಪರಸ್ಪರ ಪ್ರೀತಿಸುತ್ತಿದ್ದ ಅವರ ವಿವಾಹಕ್ಕೆ ಯುವಕನ ಮನೆಯವರು ವಿರೋಧ ವ್ಯಕ್ತಪಡಿಸಿರುವುದೇ ಆತ್ಮಹತ್ಯೆಗೆ ಕಾರಣ ಎನ್ನುವ ಮಾತುಗಳೇ ಜಾಸ್ತಿಯಾಗಿ ಕೇಳಿ ಬರುತ್ತಿದೆ. ಚಿಕ್ಕಮುಡ್ನೂರು ಗ್ರಾಮದ ಕರ್ಮಲ ನಿವಾಸಿ ರುಕ್ಮಯ್ಯ ಗೌಡ ಅವರ ಪುತ್ರ ಚೇತನ್ (26) ಮತ್ತು ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ನಿವಾಸಿ ವಿಶ್ವನಾಥ ಗೌಡ ಅವರ ಪುತ್ರಿ ನವ್ಯ […]

ಕರಾವಳಿಯ ಜೆಡಿಎಸ್ ನಲ್ಲಿ `ಸದಾ’ ಹೊಸ ಸಂಚಲನ

Friday, December 28th, 2012
Sadananda Shetty

ಮಂಗಳೂರು : ರಾಜ್ಯದ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ನಾನಾ ಪಕ್ಷಗಳ ರಾಜಕೀಯ ಕಸರತ್ತು ಆರಂಭಗೊಂಡಿದೆ. ಅದರಲ್ಲೂ ಜೆಡಿಎಸ್ ಈ ನೆಲೆಯಲ್ಲಿ ಒಂದು ಹೆಜ್ಜೆ ಮುಂದಡಿ ಇಟ್ಟಿದೆ. ಮುಂಬರುವ ಚುನಾವಣೆಯಲ್ಲಿ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಉದ್ಯಮಿ ಎ. ಸದಾನಂದ ಶೆಟ್ಟಿ ಅವರನ್ನು ಘೋಷಿಸಿದೆ. ಈ ಮೂಲಕ ರಾಜ್ಯದಲ್ಲೇ ಜೆಡಿಎಸ್ ತನ್ನ ಮೊದಲ ಅಭ್ಯರ್ಥಿ ಘೋಷಣೆಯಾದಂತಾಗಿದೆ. ಅದು ಕೂಡ ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಈ ಅಂತಿಮ ನಿರ್ಧಾರವನ್ನು ವನ್ನು […]

ಮೋಹಕ ಬೆಡಗಿ ತ್ರಿಷಾ ಕೃಷ್ಣನ್ ಕನ್ನಡಕ್ಕೆ ಎಂಟ್ರಿ

Thursday, December 27th, 2012
Trisha Krishnan

ತಮಿಳು , ತೆಲುಗು, ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ ನಟಿ ತ್ರಿಷಾ ಕೃಷ್ಣನ್ ಚೊಚ್ಚಲ ಕನ್ನಡ ಚಿತ್ರ ‘ರಮ್’ ನಲ್ಲಿ ಅಭಿನಯಿಸುತ್ತಿದ್ದಾಳೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ‘ರಮ್’ ಇದೊಂದು ತ್ರಿಭಾಷಾ ಚಿತ್ರವಾಗಿದ್ದು ಕನ್ನಡ ಸೇರಿದಂತೆ ತೆಲುಗು, ತಮಿಳಿನಲ್ಲೂ ಚಿತ್ರ ಏಕಕಾಲಕ್ಕೆ ಸೆಟ್ಟೇರಲಿದೆ. ಜನವರಿ 2013ಕ್ಕೆ ಸೆಟ್ಟೇರಲಿರುವ ಈ ಚಿತ್ರದ ಟೈಟಲ್ RUM (ರಂಭೆ ಊರ್ವಶಿ ಮೇನಕೆ). ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಚಿತ್ರದ ಪಾತ್ರವರ್ಗದ ಬಗ್ಗೆ ಚಿತ್ರತಂಡ ಇನ್ನೂ ಏನನ್ನು ಹೇಳಿಲ್ಲ. ಟಾಲಿವುಡ್ ಟಾಪ್ […]

ಹಾಸ್ಯ ಘಟನೆಗಳು

Saturday, December 22nd, 2012
Fun Movement

ಕಿಲಾಡಿ ನಂ.786

Thursday, December 20th, 2012
Khiladi 786

ಅಕ್ಷಯ್ ಕುಮಾರ್ ಅವರ ಅಭಿನಯದ ಸಿನಿಮಾಗಳು ತಿಂಗಳಿಗೊಂದು ರಿಲೀಸ್ ಆಗುತ್ತಿವೆ. ಕಳೆದ ಎರಡು ತಿಂಗಳಲ್ಲಿ ರೌಡಿ ರಾಥೋಡ್, ಓ ಮೈಗಾಡ್ ಸಿನಿಮಾಗಳು ರಿಲೀಸ್ ಆಗಿ ಬಾಕ್ಸ್ ಆಫೀಸ್‌ನಲ್ಲಿ ಗೆದ್ದಿದ್ದವು. ಈಗ ಕಿಲಾಡಿ 786 ಬಂದಿದೆ. ಇಲ್ಲೂ ಅವರು ಪ್ರೇಕ್ಷಕರನ್ನು ನಗಿಸುವ, ರಂಜಿಸುವ ಕೆಲಸ ಮಾಡಿದ್ದಾರೆ. ಇಲ್ಲಿ ಅವರು ಪಂಜಾಬಿ ಡಾನ್ ಮಗನಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಹೀರೊ ನ ಫ್ಯಾಮಿಲಿಗೆ ರೌಡಿಸಂ ನಂಟಿದೆ ಎಂಬ ಕಾರಣಕ್ಕೆ ವಧು ಕೊಡಲು ಯಾರೂ ಮುಂದೆ ಬರುವುದಿಲ್ಲ. ಹಾಗಾಗಿ ಇಂಡಿಯಾದಲ್ಲಿ ಹೆಣ್ಣು ಸಿಗಲಿಲ್ಲ […]

ಸೈನ್ಸ್ ಆನ್ಸರ್ ಭೂಮಿಗೆ ಪ್ರಳಯ ಬರೋದೆ ಇಲ್ಲ !

Monday, December 10th, 2012
Doomsday

ಮಂಗಳೂರು :ಬಹಳಷ್ಟು ಮಂದಿ ಕಾಲಜ್ಞಾನಿಗಳು, ಕಣಿ ಜ್ಯೋತಿಷಿಗಳು ಹಾಗೂ ಪೊಳ್ಳು ವಿಜ್ಞಾನಿಗಳು ಈ ವರ್ಷದ ಡಿಸೆಂಬರ್ 21ರಂದು ಭೂಮಿ ಪ್ರಳಯಕ್ಕೆ ಆಹುತಿಯಾಗಲಿದೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ. ಮೆಸೊ ಅಮೆರಿಕನ್ ದೀರ್ಘ ಲೆಕ್ಕಾಚಾರದ ಕ್ಯಾಲೆಂಡರ್ ನ 5125 ವರ್ಷ ಚಕ್ರವು ಡಿಸೆಂಬರ್ 21 ರಂದು ಕೊನೆಯಾಗಲಿರುವುದೇ ಈ ವದಂತಿಗೆ ಕಾರಣ. ಪ್ರಳಯದ ಕುರಿತಾಗಿ ಭವಿಷ್ಯ ನುಡಿಯುವವರು ಕಪ್ಪುರಂಧ್ರ, ಕ್ಷುದ್ರಗ್ರಹ, ಧೂಮಕೇತು ಅಥವಾ ಅರಿವಿಗೆ ಬರದ ವಿಶ್ವದ ಸಾಧ್ಯತೆಗಳೊಂದಿಗೆ ಭೂಮಿಯು ಘರ್ಷಣೆಗೊಳಪಡುವುದರಿಂದಾಗಿ ಈ ವಿನಾಶ ಸಂಭವಿಸಲಿದೆ ಎಂದು ವಾದಿಸುತ್ತಾರೆ. ಬೃಹತ್ […]

ಲೋಕಲ್ ಹುಡುಗನ `ಕುಸಾಲ್ ಗ್’ ಚಿತ್ರ

Monday, December 10th, 2012
Kusaalugu Movie

ಮಂಗಳೂರು : ಈಗ ಕೋಸ್ಟಲ್ ವುಡ್ ನಲ್ಲಿ ಕಿರುಚಿತ್ರಗಳ ಜಮಾನ ಶುರುವಾಗಿದೆ. ತಮ್ಮದೇ ಪುಟ್ಟ ಬಂಡವಾಳ ಒಟ್ಟು ಸೇರಿಸಿ ಗ್ರಾಮೀಣ ಕಲಾವಿದರನ್ನು ಒಟ್ಟು ಹಾಕಿಕೊಂಡು ತುಳು ಭಾಷೆಯಲ್ಲಿ ಕಿರುಚಿತ್ರ ನಿರ್ಮಾಣ ಮಾಡುವ ಕೆಲಸ ನಡೆಯುತ್ತಿದೆ. ಈ ಪಟ್ಟಿಯಲ್ಲಿ ಸಂತೋಷ್ ಎಂ. ಪುಚ್ಚೇರ್ ಅವರ ನಿರ್ದೇಶನದ `ಕುಸಾಲ್ ಗ್’ ಸೇರಿಕೊಳ್ಳುತ್ತದೆ. ಕೋಸ್ಟಲ್ ವುಡ್ ಚಿತ್ರನಗರಿಯಲ್ಲಿ ಈಗ ನಿಧಾನವಾಗಿ ಬಣ್ಣದ ಹೊಳಪು ಕಾಣಿಸಿಕೊಳ್ಳುತ್ತಿದೆ. ವರ್ಷಕ್ಕೆ ಒಂದು ಅಥವಾ ಅರ್ಧ ಚಿತ್ರಗಳಲ್ಲಿ ಕಾಲ ಕಳೆಯುತ್ತಿದ್ದ ಕೋಸ್ಟಲ್ ವುಡ್ ಖಜಾನೆಗೆ ಈಗ ಭರ್ಜರಿ […]

ಚೆನೈ ಚಿತ್ರ ಮಂದಿರಗಳಲ್ಲಿ ಯೋಗರಾಜ್ ಭಟ್ ಡ್ರಾಮಾ ತೆರೆಗೆ

Saturday, December 8th, 2012
Drama

ಬೆಂಗಳೂರು :ಬಾಕ್ಸ್ ಆಫೀಸ್ ನಲ್ಲಿ ಗೆದ್ದ ಯೋಗರಾಜ್ ಭಟ್ ರ ಹೊಸ ಚಿತ್ರ ‘ಡ್ರಾಮಾ’ ಚೆನೈ ನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ನಮ್ಮವು ಸಣ್ಣ ಬಜೆಟ್ ಚಿತ್ರಗಳು. ಪರಭಾಷಾ ಚಿತ್ರಗಳ ನಡುವೆ ಪೈಪೋಟಿ ಮಾಡುವುದು ಕಷ್ಟ ಎಂದು ಬಂಡಲ್ ಬಿಡುತ್ತಿದ್ದವರಿಗೆ ಯೋಗರಾಜ್ ಭಟ್ ನಿರ್ದೇಶನದ ‘ಡ್ರಾಮಾ’ ಚಿತ್ರ ಹೊಸ ದಾರಿ ತೋರಿಸಿದೆ. ಚೆನ್ನೈನ ವಿರುಗಂಬಾಕಂನ ಆರ್ಕಾಟ್ ರಸ್ತೆಯಲ್ಲಿರುವ ಫೇಮ್ ನ್ಯಾಶನಲ್ ಮಲ್ಟಿಫ್ಲೆಕ್ಸ್ ಚಿತ್ರಮಂದಿರದಲ್ಲಿ ‘ಡ್ರಾಮಾ’ ಬಿಡುಗಡೆಯಾಗಿದೆ. ಡಿಸೆಂಬರ್ 7ರಂದು ಬಿಡುಗಡೆಯಾಗಿರುವ ಈ ಚಿತ್ರ ಪ್ರತಿದಿನ 12 ಗಂಟೆಗೆ ಒಂದು […]

“ತೆಲಿಕೆದ ಬೊಳ್ಳಿ” ದೇವದಾಸ್ ಕಾಪಿಕಾಡ್ ಜೊತೆ ಸಂದರ್ಶನ

Thursday, December 6th, 2012
Telikeda Bolli

ಮಂಗಳೂರು :ಸೆಂಟ್ರಲ್ ಸಿನಿಮಾಸ್ ಬ್ಯಾನರ್ ನಡಿಯಲ್ಲಿ ಸುಮಿತ್ ಕಾಮತ್ ಅರ್ಪಿಸುವ ತುಳು ಚಲನಚಿತ್ರ `ತೆಲಿಕೆದ ಬೊಳ್ಳಿ’ ಡಿಸೆಂಬರ್ 6 ರಂದು ಬಿಡುಗಡೆಗೊಳ್ಳಲಿದೆ. ಪಿ.ಎಚ್ ವಿಶ್ವನಾಥ್ ನಿರ್ದೇಶನದಲ್ಲಿ ದೇವದಾಸ್ ಕಾಪಿಕಾಡ್ ಅವರ ಕಥೆ-ಸಂಭಾಷಣೆ-ಚಿತ್ರಕಥೆಯಲ್ಲಿ ಮೂಡಿಬಂದಿರುವ ಈ ಚಿತ್ರ ಅದ್ದೂರಿ ಬಜೆಟ್ ನಲ್ಲಿ, ಹೊಚ್ಚ ಹೊಸ ಮಾದರಿಯಲ್ಲಿ ನಿರ್ಮಿಸಲಾಗಿದೆ ಎಂದು ದೇವದಾಸ್ ಕಾಪಿಕಾಡ್ ಹೇಳಿದರು. ಸುಧೀರ್ ಕಾಮತ್ ಹಾಗೂ ಶರ್ಮಿಳ ದೇವದಾಸ್ ಕಾಪಿಕಾಡ್ ಚಿತ್ರದ ನಿರ್ಮಾಪಕರಾಗಿದ್ದು, ಗುರುಕಿರಣ್ ರವರ ಸಂಗೀತವಿದೆ, ಮದನ್ ಹರಿಣಿಯವರ ನೃತ್ಯ ಸಂಯೋಜನೆಯಿದೆ. ಆರ್. ಮಂಜುನಾಥ್ ರವರು […]

ಮಂಗಳೂರು ವಿಶ್ವ ವಿದ್ಯಾಲಯದ ಪ್ರಾಧ್ಯಾಪಕಿ ಅನಿತಾ ರವಿಶಂಕರ್ ಲೋಕಾಯುಕ್ತ ಬಲೆಗೆ

Wednesday, December 5th, 2012
Mangalore University Professor

ಮಂಗಳೂರು :ಮಂಗಳೂರು ವಿಶ್ವ ವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ. ಅನಿತಾ ರವಿಶಂಕರ್ ರವರನ್ನು ಲಂಚ ಸ್ವೀಕಾರದ ಹಿನ್ನಲೆಯಲ್ಲಿ ಮಂಗಳವಾರ ಬಂಧಿಸಿದ್ದಾರೆ. ಪ್ರಾಧ್ಯಾಪಕಿ ಅನಿತಾ ರವಿಶಂಕರ್ ಪಿಎಚ್‌ಡಿ ಆಕಾಂಕ್ಷಿ ವಿದ್ಯಾರ್ಥಿಗಳಿಂದ ತಲಾ 5 ಸಾವಿರ ರೂಪಾಯಿಗಳನ್ನು ಸ್ವೀಕರಿಸುತ್ತಿದ್ದರೆನ್ನಲಾಗಿದೆ. ಈ ಹಿನ್ನಲೆಯಲ್ಲಿ ಪಿಎಚ್‌ಡಿ ಆಕಾಂಕ್ಷಿ ಪ್ರೇಮ ಡಿಸೋಜ ಎಂಬವರು ಪಿಎಚ್‌ಡಿಗಾಗಿ ವಿದ್ಯಾರ್ಥಿಗಳಿಂದ ಲಂಚ ಸ್ವೀಕರಿಸುವ ಉಪನ್ಯಾಸಕರಿಗೆ ಸರಿಯಾಗಿ ಪಾಠ ಕಲಿಸಬೇಕೆಂದು ಈ ಬಗ್ಗೆ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಪ್ರೇಮ ಅವರಿಗೆ ಧ್ವನಿ […]