ವಿಶೇಷ ಹೂಡಿಕೆ ವಲಯ (SIR) ಕುರಿತು ಚರ್ಚೆಗೆ ಗುಜರಾತ್‌ ಭೇಟಿ: ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌

Friday, July 16th, 2021
Jagadish Shetter

ಗಾಂಧಿನಗರ : ಗುಜರಾತ್‌ ರಾಜ್ಯದ ಕೈಗಾರಿಕಾ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿರುವ ವಿಶೇಷ ಹೂಡಿಕೆ ವಲಯ (ಎಸ್‌ಐಆರ್‌) ದ ಕುರಿತು ಗುಜರಾತ್‌ ಸರಕಾರದೊಂದಿಗೆ ಚರ್ಚೆ ನಡೆಸಲು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದೇವೆ ಎಂದು ಮಾನ್ಯ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಶ್ರೀ ಜಗದೀಶ್‌ ಶೆಟ್ಟರ್‌ ಹೇಳಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾಗಿರುವ ಧೋಲೇರಾ (SIR) ದೇಶದ ಮೊದಲ ವ್ಯವಸ್ಥಿತವಾಗಿ ಯೋಜನೆ ಮಾಡಿ ನಿರ್ಮಿಸಲಾಗುತ್ತಿರುವ ವಿಶೇಷ ಹೂಡಿಕೆ ವಲಯ. ದೇಶದ ಮೊದಲ […]

ಮಂಗಳೂರು ಉತ್ತರದ ಇನ್ನರ್‌ ವೀಲ್‌ ಕ್ಲಬ್‌ನ ನೂತನ ಅಧ್ಯಕ್ಷೆಯಾಗಿ ಡಾ. ಭಾರತಿ ಪ್ರಕಾಶ್‌

Wednesday, July 7th, 2021
Bharathi

ಮಂಗಳೂರು: ಮಂಗಳೂರು ಉತ್ತರದ ಇನ್ನರ್‌ ವೀಲ್‌ ಕ್ಲಬ್‌ನ ಪದಗ್ರಹಣ ಸಮಾರಂಭದಲ್ಲಿ  2020-21 ಸಾಲಿನ ಅಧ್ಯಕ್ಷೆ ನಿರ್ಮಲಾ ಪೈ ಅವರು ನೂತನ ಅಧ್ಯಕ್ಷೆ, ವಿಶ್ವವಿದ್ಯಾನಿಲಯ ಕಾಲೇಜಿನ ಸೂಕ್ಷ್ಮಾಣುಜೀವಿಶಾಸ್ತ್ರ ವಿಭಾಗದ ಮುಖ್ಯಸ್ಥೆಯೂ ಆಗಿರುವ ಡಾ. ಭಾರತಿ ಪ್ರಕಾಶ್‌ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿ, ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ಮಹಿಳೆಯರು ಸಮಾಜದಲ್ಲಿನ ವಿಲಕ್ಷಣಗಳನ್ನು ಎದುರಿಸುವಷ್ಟು ಬಲಶಾಲಿಯಾಗಬೇಕು ಎಂದರಲ್ಲದೆ ಇನ್ನರ್‌ ವೀಲ್‌ ಕ್ಲಬ್‌ನ ಹೊಸ ತಂಡವನ್ನು ಅಭಿನಂದಿಸಿದರು. ಗೌರವಾನ್ವಿತ ಅತಿಥಿ ಮಂಗಳೂರು ಉತ್ತರದ ರೋಟರಿ ಕ್ಲಬ್‌ನ ಪಿಡಿಜಿ […]

ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರಿಗೆ 2 ಕೋಟಿ ದಂಡ ವಿಧಿಸಿದ ನ್ಯಾಯಾಲಯ

Tuesday, June 22nd, 2021
Devegowda

ಬೆಂಗಳೂರು  : ನಂದಿ ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ಎಂಟರ್‌ ಪ್ರೈಸಸ್‌ (ನೈಸ್‌) ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಆಧಾರ ರಹಿತ ಆರೋಪ ಮಾಡಿದ್ದಾರೆ ಎಂದು ಸಂಸ್ಥೆ ಹೂಡಿದ್ದ ಮಾನನಷ್ಟ ಪ್ರಕರಣದಲ್ಲಿ ದೇವೇಗೌಡರಿಗೆ ಹಿನ್ನಡೆಯಾಗಿದೆ. ದೇವೇಗೌಡರು ತಾವು ಮಾಡಿದ್ದ ಆರೋಪವನ್ನು ಸಮರ್ಥಿಸಿಕೊಳ್ಳುವಲ್ಲಿ ವಿಫಲರಾಗಿದ್ದು, ಮಾಜಿ ಪ್ರಧಾನಿಗೆ ಬೆಂಗಳೂರು ಸಿಟಿ ಸಿವಿಲ್‌ ನ್ಯಾಯಾಲಯವು 2 ಕೋಟಿ ರೂಪಾಯಿ ದಂಡ ವಿಧಿಸಿದೆ. ದೇವೇಗೌಡರು 2011ರಲ್ಲಿ ಖಾಸಗಿ ಸುದ್ದಿ ಮಾಧ್ಯಮಕ್ಕೆ ನೀಡಿದ್ದ ಸಂದರ್ಶನದಲ್ಲಿ ನೈಸ್‌ ಸಂಸ್ಥೆಯ ವಿರುದ್ದ ಆರೋಪ ಮಾಡಿದ್ದರು. ನೈಸ್‌ ಸಂಸ್ಥೆಯು […]

ಪೋಲಿಸರ ಕೈಗೆ ಸಿಕ್ಕಿ ಬಿದ್ದ ಗಾಂಜಾ ವ್ಯಾಪಾರ ಮಾಡುತಿದ್ದ ಸಾಫ್ಟ್ ವೇರ್ ಉದ್ಯೋಗಿ ಯುವತಿ

Friday, June 18th, 2021
Renuka

ಬೆಂಗಳೂರು : ಚನ್ನೈನಲ್ಲೇ ಸಾಫ್ಟ್ ವೇರ್ ಉದ್ಯೋಗಿ ಯುವತಿಯೊಬ್ಬಳು ಪ್ರಿಯಕರನ ಮಾತು ಕೇಳಿ  ಗಾಂಜಾ ವ್ಯಾಪಾರಕ್ಕೆ ಕೈ ಹಾಕಿ ಬೆಂಗಳೂರಿನಲ್ಲಿ ಪೋ ಲಿಸರ ಕೈಗೆ ಸಿಕ್ಕಿ ಹಾಕಿ ಕೊಂಡಿದ್ದಾಳೆ. ಆಂಧ್ರಪ್ರದೇಶ ಶ್ರೀಕಾಕುಳಂನ ರೇಣುಕಾ(25) ಚೆನೈನಲ್ಲಿ ಎಂಜಿನಿಯರಿಂಗ್ ಮಾಡುವಾಗ ಕಡಪದ ಸಿದ್ದಾರ್ಥ್ ಜೊತೆಗೆ ಲವ್ ಆಗಿತ್ತು. ವಿದ್ಯಾಭ್ಯಾಸ ಮುಗಿದ ಬಳಿಕ ಸಿದ್ಧಾರ್ಥ್ ತವರು ರಾಜ್ಯಕ್ಕೆ ಹೋಗಿದ್ದ. ಯುವತಿ ರೇಣುಕಾ ಚನ್ನೈನಲ್ಲೇ ಸಾಫ್ಟ್ ವೇರ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಳು. ಪ್ರೀತಿಗಾಗಿ ಪೋಷಕರನ್ನ ದೂರಮಾಡಿ ಪ್ರಿಯತಮನಿಗಾಗಿ ಯುವತಿ ಗಾಂಜಾ ಮಾರಾಟಕ್ಕಿಳಿದ್ದಳು. ಹಣದಾಸೆಗೆ ಪ್ರಿಯತಮೆಯನ್ನೂ ಗಾಂಜಾ ಮಾರಾಟಕ್ಕೆ ಇಳಿಸಿದ್ದ. […]

ಕಾಂಗ್ರೆಸ್ ಹೇಳೋರು ಕೇಳೋರು ಇಲ್ಲದ ಪಕ್ಷ, ಅವರು ಪಾಕಿಸ್ತಾನದ ಪರ ಮಾತಾಡ್ತಾರೆ : ಕೆ.ಎಸ್. ಈಶ್ವರಪ್ಪ ಆರೋಪ

Tuesday, June 15th, 2021
ks-eshwarappa

ಶಿವಮೊಗ್ಗ: ಕಾಂಗ್ರೆಸ್ ಹೇಳೋರು ಕೇಳೋರು ಇಲ್ಲದ ಪಕ್ಷ ಹಾಗಾಗಿ ದಿಗ್ವಿಜಯ್ ಸಿಂಗ್, ಸಿದ್ದರಾಮಯ್ಯ ಹಾಗೂ ಜಮೀರ್ ಅಹಮದ್‍ ರವರುಗಳು ಪಾಕಿಸ್ತಾನದ ಪರ  ಮಾತಾಡ್ತಾರೆ  ಎಂದು ಸಚಿವ ಕೆ.ಎಸ್. ಈಶ್ವರಪ್ಪ ಆರೋಪ ಮಾಡಿದ್ದಾರೆ. ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸಚಿವರು, ಈ ದೇಶದ ಗೋವಿನ ಬಗ್ಗೆ, ದೇಶದ ಭೂಮಿ ಕಾಶ್ಮೀರದ ಬಗ್ಗೆ ಗೌರವವಿಲ್ಲದ ಜನ ಕಾಂಗ್ರೆಸ್‍ನವರು. ಹೀಗಾಗಿಯೇ ಅವರು ಏನು ಬೇಕಾದರೂ ಹೇಳುತ್ತಾರೆ. ಆದರೆ ಬಿಜೆಪಿಯವರಿಗೆ ಹೇಳೋರು ಕೇಳೋರು ಇದ್ದಾರೆ ಎಂದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೋವುಗಳನ್ನು ಪೂಜೆ ಮಾಡುತ್ತೇವೆ. ಅದೇ ರೀತಿ […]

ಅಂಗವೈಕಲ್ಯವಿದೆ ಎಂದು ಜನಿಸಿರುವ ಮಗುವನ್ನು ಆಸ್ಪತ್ರೆಯ ನೀರಿನ ತೊಟ್ಟಿಗೆ ಹಾಕಿದ ದಂಪತಿ

Sunday, June 13th, 2021
infant

ಚಾಮರಾಜನಗರ : ಅಂದಾಜು 6 ದಿನದ ಗಂಡು ಶಿಶುವನ್ನು ಅಂಗವೈಕಲ್ಯ ಹೊತ್ತುಕೊಂಡು ಜನಿಸಿರುವ ಕಾರಣ ಹೆತ್ತವರು  ಮಗುವನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ ಖಾಸಗಿ ಆಸ್ಪತ್ರೆಯ ಖಾಲಿ ನೀರಿನ ತೊಟ್ಟಿಯಲ್ಲಿ ಎಸೆದ ಘಟನೆ  ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕಾಮಗೆರೆಯ ಹೋಲಿ ಕ್ರಾಸ್ ಆಸ್ಪತ್ರೆಯಲ್ಲಿ ನಡೆದಿದೆ. ಅಂದಾಜು 6 ದಿನದ ಗಂಡು ಶಿಶು ಇದಾಗಿದ್ದು, ಕರುಳಬಳ್ಳಿ ಕತ್ತರಿಸದೇ ಹಾಗೆ ಬಿಟ್ಟಿದ್ದು ಕಂಡುಬಂದಿದೆ. ಆಸ್ಪತ್ರೆ ಶವಾಗಾರದ ಬಳಿ ಪ್ಲಾಸ್ಟಿಕ್ ಕವರಿನಲ್ಲಿ ಶಿಶು ಶವ ಪತ್ತೆಯಾಗಿದೆ. ಸಿಬ್ಬಂದಿ ಹೋದಾಗ ದುರ್ನಾತ […]

ಬಡ್ಡಿಯವನಿಂದ ಸಾಲಪಡೆದು ಕಿರುಕುಳ ತಾಳಲಾರದೆ ಮಹಿಳೆ ಮನೆಯಲ್ಲೇ ಆತ್ಮಹತ್ಯೆ

Saturday, June 12th, 2021
Gowramma

ಶಿವಮೊಗ್ಗ: ಬಡ್ಡಿಯವನಿಂದ ಸಾಲಪಡೆದು  ಮರು ಪಾವತಿಸಿದರೂ  ಕಿರುಕುಳ ತಾಳಲಾರದೆ ಮನನೊಂದ ಮಹಿಳೆ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಸಿದ್ಲಿಪುರ ಗ್ರಾಮದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಗೌರಮ್ಮ (55) ಎಂದು ಗುರುತಿಸಲಾಗಿದೆ. ಗೌರಮ್ಮ ಪತಿ ಮಲ್ಲಿಕಾರ್ಜುನಪ್ಪ ಇದೇ ಗ್ರಾಮದ ಲಂಕೇಶ್ ನಾಯ್ಕ್ ನಿಂದ 10 ರೂ. ಬಡ್ಡಿಯಂತೆ 20 ಸಾವಿರ ರೂ ಸಾಲ ಪಡೆದಿದ್ದರು. ಈ 20 ಸಾವಿರ ರೂ. ಹಣ ನೀಡುವಾಗ ಲಂಕೇಶ್ ನಾಯ್ಕ ಬಡ್ಡಿಯ ಹಣ 2 ಸಾವಿರ ಕಡಿತಗೊಳಿಸಿ ಕೊಟ್ಟಿದ್ದನಂತೆ. ಬಡ್ಡಿ ಕೊಟ್ಟ […]

ಸಿಎಂ ಬದಲಾವಣೆ ಊಹಾಪೋಹಕ್ಕೆ ಇಂದು ಫುಲ್ ಸ್ಟಾಪ್: ಆರ್ ಅಶೋಕ

Sunday, June 6th, 2021
R Ashoka

ಬೆಂಗಳೂರು : ಇಂದಿಗೂ ಮುಂದೆಯೂ ಯಡಿಯೂರಪ್ಪನವರೇ ನಮ್ಮ ನಾಯಕರು. ಅವರ ನಾಯಕತ್ವದಲ್ಲೇ ಪಕ್ಷ ಈ ಸಾಧನೆ ಮಾಡಿದೆ. ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಕಂದಾಯ ಸಚಿವ ಆರ್‌ ಅಶೋಕ ತಿಳಿಸಿದರು. ಸಿಎಂ ಪ್ರತಿಕ್ರಿಯೆ ಕುರಿತ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಪದೇ, ಪದೇ ಸಿಎಂ ಬದಲಾವಣೆ‌ ಎಂಬ ಮಾತುಗಳು ಕೇಳಿ ಬರುತಿರುವುದರಿಂದ ಮುಖ್ಯ ಮಂತ್ರಿಗಳ ಮನಸಿಗೆ ನೋವಾಗಿದೆ. ದೇಶದಲ್ಲೇ ಎಲ್ಲಾ ಸಿಎಂಗಳಿಗಿಂತ ಹೆಚ್ಚು ಕ್ರಿಯಾಶೀಲರಾಗಿ‌ ಜನಪರ‌ ಕಾಳಜಿಯಿಟ್ಟುಕೊಂಡು ಮುಖ್ಯಮಂತ್ರಿಗಳು ಕಾರ್ಯ ನಿರ್ವಹಿಸಿದ್ದಾರೆ. ಹಗಲು ರಾತ್ರಿ ಕೆಲಸ […]

ಅಕ್ರಮ ದಂಧೆ – ‘ಮುಂಗಾರು ಮಳೆ-2’ ಚಿತ್ರದ ನಟಿ ನೇಹಾ ಶೆಟ್ಟಿ ತಂದೆಯ ಬಂಧನ

Saturday, June 5th, 2021
Neha-Shetty

ಬೆಂಗಳೂರು:  ನಗರದಲ್ಲಿ ಜೂಜು ಅಡ್ಡೆನಿರ್ಮಿಸಿ ಕಾನೂನು ಬಾಹಿರ ಕೃತ್ಯ ಆರೋಪದಡಿಯಲ್ಲಿ ‘ಮುಂಗಾರು ಮಳೆ-2’ ಚಿತ್ರದ ನಟಿ ನೇಹಾ ಶೆಟ್ಟಿ ತಂದೆ ಹರಿರಾಜ್ ಶೆಟ್ಟಿಯನ್ನು ಸಿಸಿಬಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಹರಿರಾಜ್ ಶೆಟ್ಟಿಯನ್ನು ನಗರದ ಪ್ರಮುಖ ಜೂಜುಕೋರ ಅಂತಾ ಗೂಂಡಾ ಕಾಯ್ದೆಯಡಿ ಬಂಧನ ಮಾಡಲಾಗಿದೆ.  ಹರಿರಾಜ ಶೆಟ್ಟಿ ವಿರುದ್ಧ ಇಲ್ಲಿತನಕ 13 ಕೇಸ್‍ಗಳು ದಾಖಲಾಗಿದೆ. ಬೆಂಗಳೂರಿನಲ್ಲಿ ಪೂಲ್ ಎನ್, ರಿ ಕ್ರಿಯೇಷನ್ ಕ್ಲಬ್ ಹೆಸರಿನಲ್ಲಿ ಹತ್ತಾರು ಕಡೆ ನಡೆಸ್ತಿದ್ದ, ಗೇಮ್ ಗಳು ಬ್ಯಾನ್ ಇರುವ ಸ್ಕಿಲ್ ಗೇಮ್, ವೀಡಿಯೋ ಗೇಮ್ […]

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಗೆ ಸಜ್ಜಾದ ಭೂಮಾಫಿಯಾ

Wednesday, June 2nd, 2021
Rohini-Sindhoori

ಮೈಸೂರು: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರನ್ನು ವರ್ಗಾವಣೆ ಮಾಡಬೇಕೆನ್ನುವ ರಾಜಕೀಯ ನಾಯಕರ ಪ್ರಯತ್ನ ತೆರೆಮರೆಯಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿದ್ದು, ಇದರ ಹಿಂದೆ ಭೂಮಾಫಿಯಾ ಕೈವಾಡ ಶಂಕೆ ಕೇಳಿಬಂದಿದೆ. ಕರೊನಾ ನಡುವೆಯೂ ಭೂ ಅಕ್ರಮದ ದೂರುಗಳಿಗೆ ಸಂಬಂಧಿಸಿದ ಫೈಲ್ಗಳನ್ನು ವಿಲೇವಾರಿ ಮಾಡುವ ಪ್ರಯತ್ನಕ್ಕೆ ರೋಹಿಣಿ ಸಿಂಧೂರಿ ಕೈಹಾಕಿ ಭೂಗಳ್ಳರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ರಿಯಲ್ ಎಸ್ಟೇಟ್ ಉದ್ಯಮಿಗಳ ಹಿಂದೆಯೂ ರೋಹಿಣಿ ಬಿದ್ದಿದ್ದಾರೆ. ಹೀಗಾಗಿ ಅಕ್ರಮದಲ್ಲಿ ಭಾಗಿಯಾಗಿರುವವರ ಎದೆಯಲ್ಲಿ ನಡುಕು ಶುರುವಾಗಿದ್ದು, ಕ್ರಮಕ್ಕೂ ಮುನ್ನವೇ ಅವರನ್ನು ವರ್ಗಾವಣೆ ಮಾಡಿಸುವ ಪ್ರಯತ್ನ […]