ಬೆಳ್ತಂಗಡಿ ಕೆಎಸ್ಆರ್ ಟಿಸಿ ಬಸ್ಸಿಗೆ ಕಾರು ಡಿಕ್ಕಿ ಇಬ್ಬರು ಸ್ಥಳದಲ್ಲೇ ಸಾವು

Monday, August 6th, 2018
Belthangady Accident

ಮಂಗಳೂರು : ಬೆಳ್ತಂಗಡಿ ತಾಲೂಕಿನ ಕೌಕ್ರಾಡಿ ಬಳಿ ಬೆಂಗಳೂರು ಕಡೆ ತೆರಳುತ್ತಿದ್ದ ಕೆಎಸ್ಆರ್ ಟಿಸಿ ಬಸ್ಸಿಗೆ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ತೀವ್ರತೆಯಿಂದ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು ಕಾರಿನಲ್ಲಿದ್ದ ಧರ್ಮಸ್ಥಳ ನಿವಾಸಿಗಳಾದ ದಿನೇಶ್(32) ಹಾಗೂ ಸಂದೇಶ್(30) ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಈ ಇಬ್ಬರು ತೀವ್ರವಾಗಿ ಗಾಯಗೊಂಡು ನರಳಾಡುತ್ತಿದ್ದರು. ಅವರನ್ನು ಸ್ಥಳೀಯ ಯುವಕರು ಹರಸಾಹಸಪಟ್ಟು ಕಾರಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ದಿನೇಶ್ ಮತ್ತು ಸಂದೇಶ ಅಸುನೀಗಿದ್ದಾರೆ. […]

ಶಿರೂರು ಮೂಲ ಮಠದ ಬೆಲೆಬಾಳುವ ಸೊತ್ತುಗಳು ಉಡುಪಿಗೆ

Thursday, August 2nd, 2018
Shiroor math

ಉಡುಪಿ :  ಹಿರಿಯಡ್ಕ ಸಮೀಪದ ಶಿರೂರು ಮೂಲ ಮಠದಲ್ಲಿದ್ದ ಬೆಲೆಬಾಳುವ, ಅಮೂಲ್ಯ ಸೊತ್ತುಗಳನ್ನು ಸುರಕ್ಷತೆಯ ದೃಷ್ಠಿಯಿಂದ ದ್ವಂದ್ವ ಮಠವಾದ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಇಂದು ಪೊಲೀಸರ ಸಮ್ಮುಖದಲ್ಲಿ ಉಡುಪಿಯ ಶಿರೂರು ಮಠಕ್ಕೆ ತಂದು ಅಲ್ಲಿನ ಲಾಕರ್‌ನಲ್ಲಿರಿಸಿದರು. ಶಿರೂರು ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಜು.19ರಂದು  ಮೃತಪಟ್ಟ ನಂತರ ತನಿಖೆಯ ಹಿನ್ನೆಲೆಯಲ್ಲಿ ಪೊಲೀಸರು ಶಿರೂರು ಮೂಲ ಮಠವನ್ನು ತಮ್ಮ ಸುಪರ್ದಿಗೆ ಪಡೆದು ಬಿಗಿ ಭದ್ರತೆಯನ್ನು ಒದಗಿಸಿದ್ದರು. ತೀರಾ ಗ್ರಾಮೀಣ ಪ್ರದೇಶವಾದ ಶಿರೂರಿನ ಮೂಲಮಠದಲ್ಲಿರುವ ಬೆಲೆಬಾಳುವ ಹಲವು […]

26 ಸಚಿವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ

Tuesday, July 31st, 2018
Incharge

ಬೆಂಗಳೂರು :  ಕಾಂಗ್ರೆಸ್ ಮತ್ತು ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ತಿಂಗಳ ನಂತರ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿದ್ದಾರೆ. ಖಾತೆ ಹಂಚಿಕೆ ಬಳಿಕ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದರಿಂದ ಮತ್ತು ಸಚಿವ ಸ್ಥಾನ ಪಡೆದುಕೊಂಡ ಸಚಿವರಲ್ಲೂ ಹಲವರು ಗೊಂದಲ ಹೊಂದಿದ್ದರಿಂದ ಸಿಎಂ ಕುಮಾರಸ್ವಾಮಿ ಅವರು ಜಿಲ್ಲಾ ಉಸ್ತುವಾರಿ ಸಚಿವರ ನೇಮಕವನ್ನು ಮುಂದೂಡುತ್ತಾ ಬಂದಿದ್ದರು. ಇಂದು ಸಂಜೆ ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿ, ಪಟ್ಟಿ […]

2019ರ ವಿಶ್ವಕಪ್​ ಟೂರ್ನಿ..ಕೊಹ್ಲಿ ಪಡೆಯಲ್ಲಿ ಇವರೆಲ್ಲ ಸ್ಥಾನ ಪಡೆಯೋ ಸಾಧ್ಯತೆ!

Wednesday, July 25th, 2018
team-india

ಮುಂಬೈ: ಇಂಗ್ಲೆಂಡ್ನಲ್ಲಿ ನಡೆಯಲಿರುವ ಬಹುನೀರಿಕ್ಷಿತ 2019ರ ಏಕದಿನ ವಿಶ್ವಕಪ್ ಟೂರ್ನಿಗೆ ಈಗಾಗಲೇ ಎಲ್ಲ ತಂಡಗಳು ಭರದ ತಯಾರಿ ನಡೆಸಿದ್ದು, ಟೀಂ ಇಂಡಿಯಾ ಕೂಡ ಅದರಿಂದ ಹೊರತಾಗಿಲ್ಲ. ಅದಕ್ಕಾಗಿ ಕೆಲವೊಂದು ಪರೀಕ್ಷೆಗೆ ತಂಡ ಒಳಗಾಗಿದೆ. ಈ ಹಿಂದಿನ ಸರಣಿಗಳಲ್ಲಿ ಆಟಗಾರರು ನೀಡಿರುವ ಪ್ರದರ್ಶನದ ಆಧಾರದ ಮೇಲೆ ಈ ಎಲ್ಲ ಆಟಗಾರರು ಇಂಗ್ಲೆಂಡ್ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ಗಾಗಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿ ಕಾಣುತ್ತಿವೆ. ಈಗಾಗಲೇ ಈ ಹಿಂದಿನ ಅನೇಕ ಸರಣಿಗಳಲ್ಲಿ ಉತ್ತಮ ಜೊತೆಯಾಟ ನೀಡಿರುವ ಶಿಖರ್ […]

ರಾಜ್ಯದ ಎಲ್ಲ ಅಂಗನವಾಡಿಗಳಲ್ಲಿ ಬಯೋಮೆಟ್ರಿಕ್‌ ಹಾಜರಾತಿ ಕಡ್ಡಾಯ: ಸಚಿವೆ ಜಯಮಾಲಾ

Wednesday, July 25th, 2018
jayamala

ಮಂಗಳೂರು: ಅಂಗನವಾಡಿ ವ್ಯವಸ್ಥೆ ಪಾರದರ್ಶಕವಾಗಿಸಲು ರಾಜ್ಯದ ಎಲ್ಲ ಅಂಗನವಾಡಿಗಳಲ್ಲಿ ಬಯೋಮೆಟ್ರಿಕ್‌ ಹಾಜರಾತಿ ಕಡ್ಡಾಯ ಗೊಳಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಜಯಮಾಲಾ ಹೇಳಿದರು. ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಮಂಗಳವಾರ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲ ಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿಗಳ ಇಲಾಖಾ ಕಾರ್ಯಕ್ರಮಗಳ ಪ್ರಗತಿ ಪರಿಶೀಲನ ಸಭೆಯಲ್ಲಿ ಅವರು ಮಾತನಾಡಿದರು. ಅಂಗನವಾಡಿ ಕಾರ್ಯಕರ್ತೆಯರನ್ನು ಇಲಾಖೆಯ ಕೆಲಸಗಳಿಗೆ ಬಿಟ್ಟು ಅನ್ಯ ಕೆಲಸಗಳಿಗೆ ಬಳಸುವಂತಿಲ್ಲ. […]

ಗಾಳಿ ಮಳೆಗೆ ಬೆಚ್ಚಗೆ ಮಲಗಬೇಕಾದ ಆ ಪುಟಾಣಿಗಳು, ಭಿಕ್ಷೆ ಬೇಡುತ್ತಾ ತಿರುಗುತ್ತಾರೆ

Tuesday, July 24th, 2018
Beggars

ಮಂಗಳೂರು : ಬೆಚ್ಚನೆಯ ಹೊದಿಕೆ ಹಾಕಿ, ಹಾಲು ಬ್ರೆಡ್ಡು ತಿಂದು ಹಾಯಾಗಿ ಮಲಗುವ ಮಕ್ಕಳು ಇಂದು ಭಿಕ್ಷಾಟನೆಗೆ ಇಳಿದಿದ್ದಾರೆ. ಪೌಷ್ಟಿಕಾಂಶವಿಲ್ಲದೆ, ಆಹಾರ ವಿಲ್ಲದೆ, ತಮ್ಮ ಭವಿಷ್ಯವನ್ನೇ ನಷ್ಟಮಾಡಿಕೊಳ್ಳುತ್ತಿದ್ದಾರೆ. ಶ್ರೀಮಂತರ ಮಕ್ಕಳೇನೋ ಬಣ್ಣ ಬಣ್ಣದ ಬಟ್ಟೆಗಳನ್ನು ಹಾಕಿ ಶಾಲೆಗೆ ಹೋಗುತ್ತಾರೆ. ಅವರು ಕೆಮ್ಮಿದರೆ ಜೌಷಧಿಕೊಡಲು ಪಾಲಕರು ಜೊತೆಯಲ್ಲಿಯೇ ಇರುತ್ತಾರೆ. ಅದರೆ ಭಿಕ್ಷುಕ ಮಕ್ಕಳಿಗೆ? ಹಸಿವಿಗಾಗಿ ಆ ಪುಟ್ಟ ಮಕ್ಕಳು ಗೋಗರೆಯುವುದನ್ನು ನೀವು ನೋಡಿದರೆ ನಿಮ್ಮ ಮನ ಕರಗದೆ ಇರಲಾರದು. ಗಾಳಿ ಮಳೆಗೆ ಬೆಚ್ಚಗೆ ಮಲಗಬೇಕಾದ ಆ ಪುಟಾಣಿಗಳು ನಡುಗುತ್ತಾ […]

ಶಿರೂರು ಶ್ರೀಗಳಿಗೆ ತನ್ನದೇ ಎರಡು ಮಕ್ಕಳಿದ್ದಾರೆ, ಅವರು ಮಧ್ವ ಪರಂಪರೆಯನ್ನು ಧಿಕ್ಕರಿಸಿ ಮೆರೆದ ಸ್ವಾಮೀಜಿ

Sunday, July 22nd, 2018
Shiroor seer

ಉಡುಪಿ : ಶಿರೂರು ಲಕ್ಷ್ಮೀವರ ಶ್ರೀಗಳ ಮೂಲ ಹೆಸರು ಹರೀಶ್ ಆಚಾರ್ಯ. ಹೆಬ್ರಿ ಬಳಿಯ ಮಡಾಮಕ್ಕಿ ಅವರ ಹುಟ್ಟೂರು. ಮಠ ಸಂಸ್ಕೃತಿ, ಮಧ್ವ ಪರಂಪರೆಯನ್ನು ಮೀರಿ ಬೆಳೆದ ಯತಿಯೆಂದರೆ ಅದು ಶಿರೂರು ಲಕ್ಷ್ಮೀವರ ಶ್ರೀಗಳು. ಕಳೆದ ಮೇ ತಿಂಗಳಲ್ಲಿ ಶಿರೂರು ಮೂಲ ಮಠದಿಂದ ನಾಲ್ಕು ದನಗಳ ಕಳವು ಆಗುತ್ತದೆ. ಆ ಬಗ್ಗೆ ಪೊಲೀಸರಿಗೂ ದೂರು ಹೋಗುತ್ತದೆ. ಅದರೆ ಶಿರೂರು ಲಕ್ಷ್ಮೀವರ ಶ್ರೀಗಳು ಅಮೇಲೆ ಇಟ್ಟ ದಿಟ್ಟ ಹೆಜ್ಜೆ ಎಂದರೆ ತಾವೇ ಸ್ಚತ: ಕಾನೂನು ಪಾಲಕರಂತೆ ರಾತ್ರಿ ವೇಳೆ […]

ಸಿಎ-ಸಿಪಿಟಿಯಲ್ಲಿ ಆಳ್ವಾಸ್ ಅತ್ಯುತ್ತಮ ಸಾಧನೆ

Saturday, July 21st, 2018
alwas-clg

ಮೂಡುಬಿದಿರೆ: ಆಳ್ವಾಸ್ ಪಿಯು ಕಾಲೇಜಿನ 147 ಮಂದಿ ವಿದ್ಯಾರ್ಥಿಗಳು ಸಿಎ-ಸಿಪಿಟಿ ಪರೀಕ್ಷೆ ಬರೆದಿದ್ದು, ಅದರಲ್ಲಿ 74 ಮಂದಿ ತೇರ್ಗಡೆ ಹೊಂದಿದ್ದಾರೆ. 9ಮಂದಿ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಆಳ್ವಾಸ್ ವಿದ್ಯಾರ್ಥಿಗಳಾದ ಅಶ್ವಿನಿ ಶೆಣೈ, ನೂತನ್ ಬಿ.ಯು, ಶುಭಕರ್ ಎ.ಚೌಗಲೆ, ಹರ್ಷಿತ್ ವಿ., ರಕ್ಷಾ ರಮೇಶ್ ಶೆಟ್ಟಿ, ಹರ್ಷಿತ್ ವೈ, ಶ್ರೇಯಾ ಡಿ., ಸುಕ್ಷ್ಮಾ ಎಸ್.ಆಚಾರ್ಯ, ಭರತ್ ಗಜಾನನ ಹೆಗ್ಡೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು. ವಿದ್ಯಾರ್ಥಿಗಳಾ ಸಾಧನೆಗೆ ಆಳ್ವಾಸ್ ಶಿಕ್ಷಣ […]

ಸದ್ಯದಲ್ಲೇ 100 ರೂ. ಮುಖಬೆಲೆಯ ಹೊಸ ನೋಟ ಜಾರಿಗೆ..!

Thursday, July 19th, 2018
currency

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಸದ್ಯದಲ್ಲೇ 100 ರೂ. ಮುಖಬೆಲೆಯ ಹೊಸ ನೋಟನ್ನು ಜಾರಿಗೆ ತರಲಿದೆ. ಈಗಿರುವ 100 ರೂ. ನೋಟಿಗಿಂತಲೂ ಚಿಕ್ಕದ್ದಾಗಿ, 10 ರೂ. ನೋಟಿಗಿಂತ ಕೊಂಚ ದೊಡ್ಡದಾಗಿರುವ ನೋಟನ್ನು ಆರ್ಬಿಐ ಪರಿಚಯಿಸಿದೆ. ಹೊಸ ನೋಟನ್ನು ಜಾರಿಗೆ ತರುತ್ತಿರುವ ಆರ್ಬಿಐ ಹಳೆಯ ನೂರರ ನೋಟನ್ನು ಹಿಂಪಡೆಯುವ ಯೋಚನೆ ಇಲ್ಲ ಎಂದು ತಿಳಿಸಿದೆ. ಈಗಾಗಲೇ ಹೊಸ ನೋಟಿನ ವಿನ್ಯಾಸ ಅಂತಿಮವಾಗಿದ್ದು, ಮುದ್ರಣ ಕಾರ್ಯ ಸದ್ದಿಲ್ಲದೇ ನಡೆಯುತ್ತಿದೆ. ಮುಂದಿನ ತಿಂಗಳು ಇಲ್ಲವೇ ಸೆಪ್ಟೆಂಬರ್ ನಲ್ಲಿ ಹೊಸ ನೋಟು ಜನಸಾಮಾನ್ಯರ […]

ಉಳ್ಳಾಲದಲ್ಲಿ ಸುಮಾರು 41 ಮನೆಗಳು ಹಾನಿ.. ಪರ್ಯಾಯ ನಿವೇಶನ ಗುರುತಿಸಿ ನೀಡಲು ಖಾದರ್ ಆದೇಶ

Tuesday, July 17th, 2018
u-t-kadher

ಮಂಗಳೂರು: ಉಳ್ಳಾಲ, ಸೋಮೇಶ್ವರ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಲ್ಲಿ ಕಡಲಕೊರೆತ ತೀವ್ರಗೊಂಡು ಸುಮಾರು 41 ಮನೆಗಳು ಸಂಪೂರ್ಣ ಹಾನಿಗೊಂಡಿದ್ದು, ಇವರಿಗೆ ಪರ್ಯಾಯ ನಿವೇಶನ ಗುರುತಿಸಿ ನೀಡಲು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ. ಖಾದರ್ ಆದೇಶಿಸಿದ್ದಾರೆ. ಅವರು ಈ ಬಗ್ಗೆ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿ, ಕಡಲ್ಕೊರೆತದಿಂದ ಹೆಚ್ಚು ಅಪಾಯದಲ್ಲಿರುವ ಇಲ್ಲಿನ ನಿವಾಸಿಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಮುಂದಿನ 15 ದಿನದಲ್ಲಿ ಸೂಕ್ತವಾದ ನಿವೇಶನ ಗುರುತಿಸಿ, ಮಂಜೂರುಗೊಳಿಸಬೇಕು ಎಂದು ಮಂಗಳೂರು ತಹಸೀಲ್ದಾರ್ಗೆ ತಿಳಿಸಿದರು. ಉಳ್ಳಾಲ, ಸೋಮೇಶ್ವರ, ಸಸಿಹಿತ್ಲು […]