ಖೆಡ್ಡಾಕ್ಕೆ ಬಿದ್ದ ಅಭಯಚಂದ್ರ ಜೈನ್ ? ನಿಮಗಿದು ಗೊತ್ತೇ ?

Friday, April 27th, 2018
Abhayachandra Jain

ಮಂಗಳೂರು : ತಾವೇ ತೋಡಿದ ಖೆಡ್ಡಾಕ್ಕೆ ತಾವೇ ಬಿದ್ದಂತೆ ಎಂಬ ಹಳೆಯ ಮಾತಿದೆ. ಭಾರೀ ಬುದ್ಧಿವಂತಿಕೆ ತೋರಿಸಿ ಲಾಭ ಮಾಡಲು ಹೋಗಿ ತಾವೇ ಗುಂಡಿಗೆ ಬೀಳುವ ಜನರಿದ್ದಾರೆ. ಮಾಜಿ ಸಚಿವ ಅಭಯಚಂದ್ರ ಜೈನ್ ಅವರ ವಿಚಾರದಲ್ಲಿ ಈಗ ಹೀಗೆಯೋ ಆದಂತಿದೆ. ಕಳೆದೆರಡು ಮೂರು ತಿಂಗಳಿನಿಂದ ಮೂಡಬಿದಿರೆಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಹವಾ ಭಾರೀ ಜೋರಾಗಿತ್ತು. ಈಗ ಕಾಂಗ್ರೆಸ್ ಹವಾ ಠುಸ್ ಆಗಿದೆ. ಕಾಂಗ್ರೆಸ್ ಪರವಾಗಿದ್ದ ಯುವಕರ ಗುಂಪು ತಂಢಾ ಹೊಡೆದಿದೆ. ಇದಕ್ಕೆ ಕಾರಣ ಯುವಕಾಂಗ್ರೆಸ್ ಮುಖಂಡ […]

ಮಂಗಳೂರಿನಲ್ಲಿ ಎಂಇಪಿಯ ಪ್ರಣಾಳಿಕೆ ಬಿಡುಗಡೆ

Thursday, April 26th, 2018
mangaluru

ಮಂಗಳೂರು: ಆಲ್ ಇಂಡಿಯಾ ಮಹಿಳಾ ಎಂಪವರ್‌ಮೆಂಟ್ ಪಾರ್ಟಿಯ ಪ್ರಣಾಳಿಕೆಯನ್ನು ಎಂಇಪಿ ಮಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಪಿ.ಎಂ. ಅಹಮ್ಮದ್ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ದೀನ ದಲಿತರ ಬಡವರ ವಿರುದ್ಧ ನಡೆಯುವ ಶೋಷಣೆ ಹಾಗೂ ಮಹಿಳೆಯರ ಶೋಷಣೆ ವಿರುದ್ಧ ಸಮಾಜದಲ್ಲಿ ಕೈಜೋಡಿಸಲು ಎಂಇಪಿ ಪಕ್ಷಕ್ಕೆ ಮತ ನೀಡಬೇಕು. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಸುಮಾರು 125 ಹಾಸಿಗೆಗಳ ವ್ಯವಸ್ಥಿತ ಸರ್ಕಾರಿ ಆಸ್ಪತ್ರೆ ನಿರ್ಮಾಣವಾಗಬೇಕು. ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಣ ಉತ್ತಮ ರೀತಿಯಲ್ಲಿ ನಡೆಯಲು ಶಿಕ್ಷಕರ ನೇಮಕಾತಿಯಾಗಬೇಕು. ಉತ್ತರ […]

ಬಿಜೆಪಿಯ ‘ನಮ್ಮ ಮನೆ ಬಿಜೆಪಿ ಮನೆ’ ಅಭಿಯಾನಕ್ಕೆ ಕಾಂಗ್ರೆಸ್ ವಿರೋಧ

Wednesday, April 25th, 2018
ivan-douza

ಮಂಗಳೂರು: ಬಿಜೆಪಿಯು ಎ.25ರಂದು ರಾಜ್ಯಾದ್ಯಂತ ಹಮ್ಮಿಕೊಂಡಿರುವ ‘ನಮ್ಮ ಮನೆ ಬಿಜೆಪಿ ಮನೆ’ ಅಭಿಯಾನವು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಈ ಬಗ್ಗೆ ಚುನಾವಣಾಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಹೇಳಿದರು. ಪಕ್ಷದ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಮನೆಯ ಮೇಲಿನ ಬಿಜೆಪಿ ಧ್ವಜವನ್ನು ಚುನಾವಣಾ ಆಯೋಗ ತೆರವುಗೊಳಿಸಿದ್ದರಿಂದ ಅಸಮಾಧಾನಗೊಂಡ ಬಿಜೆಪಿಯು ಎ.25ರಂದು ರಾಜ್ಯಾದ್ಯಂತ ‘ನಮ್ಮ ಮನೆ ಬಿಜೆಪಿ ಮನೆ’ ಅಭಿಯಾನ ಹಮ್ಮಿಕೊಂಡಿದೆ. ಅಂದು ಮನೆಯ ಮೇಲೆ […]

ಕುಂದಾಪುರದ ಕಾಂಗ್ರೆಸ್ ಅಭ್ಯರ್ಥಿ ರಾಕೇಶ್ ಮಲ್ಲಿ ನಾಮಪತ್ರ ಸಲ್ಲಿಕೆ

Saturday, April 21st, 2018
rakesh-malli

ಕುಂದಾಪುರ : ಕಾಂಗ್ರೆಸ್ ಅಭ್ಯರ್ಥಿ ರಾಕೇಶ್ ಮಲ್ಲಿ ಅವರು ಇಂದು ನಾಮಪತ್ರ ಸಲ್ಲಿಸಿದ್ದಾರೆ. ಕುಂದಾಪುರ ಸಹಾಯಕ ಆಯುಕ್ತರ ಮೂಲಕ ಉಡುಪಿಯ ಕುಂದಾಪುರದ ಮಿನಿವಿಧಾನ ಸೌಧದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ಸಂದರ್ಭ ದಲ್ಲಿ ಶಾಸ್ತ್ರೀ ಸರ್ಕಲ್‌ನಿಂದ ಮಿನಿವಿಧಾನ ಸೌಧದವರೆಗೆ ಬೃಹತ್ ಮೆರವಣಿಗೆ ಹಾಗೂ ಸಾವಿರಾರು ಕಾರ್ಯಕರ್ತರಿಂದ ಪಾದಯಾತ್ರೆ ನಡೆಯಿತು.

ದಕ್ಷಿಣ ಕನ್ನಡದ 8 ವಿಧಾನ ಸಭಾ ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳಲ್ಲಿ ಬಂಟ ಸಮುದಾಯಕ್ಕೆ ಟಿಕೇಟು

Saturday, April 21st, 2018
Bjp 4 bunts

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಪಾಳಯದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಜಿಲ್ಲೆಯ ಎಲ್ಲಾ 8 ವಿಧಾನ ಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಬಿಜೆಪಿ ಘೋಷಿಸಿದ್ದು 8 ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳಲ್ಲಿ ಜಿಲ್ಲೆಯ ಪ್ರಭಾವಿ ಬಂಟ ಸಮುದಾಯಕ್ಕೆ ಬಿಜೆಪಿ ವರಿಷ್ಠರು ಟಿಕೆಟ್ ನೀಡಿರುವುದು ಅಸಮಾಧಾನಕ್ಕೆ ಕಾರಣವಾಗಿದ್ದು ಜಿಲ್ಲೆಯ ಕಮಲ ಪಾಳಯದಲ್ಲಿ ಬಂಡಾಯ ಸ್ಪೋಟಗೊಳ್ಳುವ ಪರಿಸ್ಥಿತಿ ಸೃಷ್ಠಿಯಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಹರೀಶ್ ಪೂಂಜಾ, ಬಂಟ್ವಾಳ ಕ್ಷೇತ್ರಕ್ಕೆ ರಾಜೇಶ್ ನಾಯ್ಕ್‌ ಉಳಿಪಾಡಿಗುತ್ತು, ಮಂಗಳೂರು ವಿಧಾನ ಸಬಾ […]

ಮಂಗಳೂರು ನೂತನ ಪೊಲೀಸ್‌‌ ಕಮೀಷನರ್‌ ಆಗಿ ವಿಪುಲ್‌ ಕುಮಾರ್‌ ಅಧಿಕಾರ ಸ್ವೀಕಾರ

Thursday, April 19th, 2018
vipul-kumar

ಮಂಗಳೂರು: ನಗರದ ನೂತನ ಪೊಲೀಸ್ ಕಮೀಷನರ್ ಆಗಿ ನೇಮಕಗೊಂಡಿರುವ ಐಪಿಎಸ್ ಅಧಿಕಾರಿ ವಿಪುಲ್ ಕುಮಾರ್ ಅವರು ನಿನ್ನೆ ಅಧಿಕಾರ ಸ್ವೀಕರಿಸಿದರು. ವಿಪುಲ್ ಕುಮಾರ್ ಅವರಿಗೆ ನಗರ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಬೇರೆ ವರ್ಗಾವಣೆಗೊಂಡಿರುವ ಮಂಗಳೂರು ಪೊಲೀಸ್ ಕಮೀಷನರ್‌ ಟಿ.ಆರ್.ಸುರೇಶ್ ಅಧಿಕಾರ ಹಸ್ತಾಂತರಿಸಿದರು. 1999ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ವಿಪುಲ್ ಕುಮಾರ್ ಕರ್ನಾಟಕ ಪೊಲೀಸ್ ಅಕಾಡೆಮಿ ಮೈಸೂರು ಇದರ ನಿರ್ದೇಶಕ ಮತ್ತು ಐಜಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ದ.ಕನ್ನಡದಲ್ಲಿ 2013ರಲ್ಲಿ ನೆಲ ಕಚ್ಚಿದ್ದ ಬಿಜೆಪಿ… ಈ ಬಾರಿ ಮತ್ತೆ ಅರಳಲು ಹರಸಾಹಸ!

Monday, April 16th, 2018
BJP

ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಒಂದಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕೋಮು ದ್ವೇಷದ ರಾಜಕಾರಣದೊಂದಿಗೆ ಈಗಾಗಲೇ ಚುನಾವಣಾ ಪ್ರಚಾರ ಆರಂಭವಾಗಿದ್ದು, ಮತ ಸೆಳೆಯುವ ಪ್ರಯತ್ನವನ್ನು ನಾಯಕರು ಮಾಡುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ದ್ವೇಷದ ರಾಜಕಾರಣ ಇಲ್ಲದೇ ರಾಜಕಾರಣ ನಡೆಯುವುದಿಲ್ಲವೇನೋ ಎಂಬ ಪರಿಸ್ಥಿತಿ ಇದೆ. ಇದು ಪ್ರತಿ ಚುನಾವಣೆಯಲ್ಲೂ ಸಾಮಾನ್ಯವಾಗಿದ್ದು, ಆದ್ದರಿಂದ ಈ ಚುನಾವಣೆಯಲ್ಲೂ ಅದು ಮುಂದುವರಿದಿದೆ. ಬಿಜೆಪಿಯ ಪ್ರಬಲ ಕೋಟೆ ಎಂದೇ ಕರೆಯಲ್ಪಡುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ […]

ಸೌದಿ ಅರೇಬಿಯಾದಲ್ಲಿ ಕಾಂಗ್ರೆಸ್ ಸಭೆ

Thursday, April 12th, 2018
saudi-arabia

ಮಂಗಳೂರು: ಸೌದಿ ಅರೇಬಿಯಾದಲ್ಲಿ ನೆಲೆಸಿರುವ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರ ಸಭೆಯು ಕಾರ್ಯದರ್ಶಿ ಹ್ಯಾರಿಸ್ ಬೈಕಂಪಾಡಿ ನೇತೃತ್ವದಲ್ಲಿ ಜರಗಿತು. ಜೀವನೋಪಾಯಕ್ಕಾಗಿ ದೇಶ ಬಿಟ್ಟು ವಿದೇಶದಲ್ಲಿ ನಾವು ದುಡಿಯುತ್ತಿದ್ದರೂ ದೇಶದ ಹಿತ ಚಿಂತನೆಯಿಂದ ದೇಶಕ್ಕೆ ತೆರಳಿ ಮತದಾನ ಮಾಡುವ ಕೆಲಸವನ್ನು ನಾವೆಲ್ಲರೂ ಮಾಡಬೇಕು. ಚುನಾವಣೆಯಲ್ಲಿ ಮತದಾನ ಮಾಡುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಯೋಗ್ಯ ಜನಪ್ರತಿನಿಧಿಯನ್ನು ಆಯ್ಕೆ ಮಾಡುವುದಾಗಿದೆ. ಈ ಹಿನ್ನೆಲೆಯಲ್ಲಿ ದೇಶದ ಹಿತದೃಷ್ಟಿಯಿಂದ ಮತ್ತು ಎನ್‌ಆರ್‌ಐಗಳ ಭವಿಷ್ಯದ ದೃಷ್ಟಿಯಿಂದ ಮುಂದಿನ ಕರ್ನಾಟಕ ವಿಧಾನಸಭಾ […]

ಕಾಂಗ್ರೆಸ್‌ ಉಪವಾಸ ಸತ್ಯಾಗ್ರಹ…ನಾಯಕರ ಉಪಹಾರ ಸೇವನೆ ಫೋಟೋ ಹರಿಬಿಟ್ಟ ಬಿಜೆಪಿ!

Monday, April 9th, 2018
delhi-congress-2

ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಉಪವಾಸ ನಿರಶನ ಕೈಗೊಂಡಿದೆ. ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ನೇತೃತ್ವದ ರಾಜ್‌ಘಾಟ್‌ನಲ್ಲಿ ಕೈ ನಾಯಕರು ಸತ್ಯಾಗ್ರಹ ನಡೆಸಿದರು. ದಲಿತರ ಮೇಲಿನ ದೌರ್ಜನ್ಯ ತಡೆ ಹಾಗೂ ಸಂಸತ್ತಿನ ಕಲಾಪ ಸರಿಯಾಗಿ ನಿರ್ವಹಣೆ ಸೇರಿದಂತೆ ಹಲವು ವಿಷಯಗಳಲ್ಲಿ ಕೇಂದ್ರ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದೆ. ದೆಹಲಿಯಲ್ಲಿ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗಿತು. ಈ ವೇಳೆ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ […]

ಇಂದಿನಿಂದ ಐಪಿಎಲ್‌ ಅಬ್ಬರ ಶುರು… ಮೊದಲ ಪಂದ್ಯದಲ್ಲೇ ಹಾಲಿ-ಮಾಜಿ ಚಾಂಪಿಯನ್ಸ್‌ ಫೈಟ್‌‌!

Saturday, April 7th, 2018
rohith

ಮುಂಬೈ: ಕ್ರಿಕೆಟ್ ಅಭಿಮಾನಿಗಳ ಭಾವಾವೇಶ, ಮನರಂಜನೆ, ಉತ್ಸುಕತೆಗೆ ಕಾರಣವಾದ ಐಪಿಎಲ್ ಟಿ-20 ಟೂರ್ನಿ ಇಂದಿನಿಂದ ಆರಂಭಗೊಳ್ಳಲಿದ್ದು, ವಿಶ್ವದ ಶ್ರೀಮಂತ ಟಿ-20 ಟೂರ್ನಿಯ 11ನೇ ಆವೃತ್ತಿಗೆ ಮುಂಬೈನಲ್ಲಿ ಇಂದು ಸಂಜೆ ವಿದ್ಯುಕ್ತ ಚಾಲನೆ ಸಿಗಲಿದೆ. ಕ್ರಿಕೆಟಿಗರಿಗೆ ಬದುಕು ಕಟ್ಟಿಕೊಟ್ಟ, ಅವಕಾಶಗಳ ಹೆಬ್ಬಾಗಿಲು ತೆರೆಯುವಂತೆ ಮಾಡಿದ, ಖ್ಯಾತಿ-ಕೀರ್ತಿ ತಂದುಕೊಟ್ಟ, ವಿವಾದಗಳಿಂದಲೂ ಸದ್ದು ಮಾಡಿದ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌)ನ 11ನೇ ಆವೃತ್ತಿಯ ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಹಾಗೂ ಮಾಜಿ ಚಾಂಪಿಯನ್ ಚೆನ್ನೈ ಸೂಪರ್‌ ಕಿಂಗ್ಸ್ ತಂಡಗಳು ಸೆಣಸಾಟ […]