ಉದ್ಯೋಗ ಮೇಳ ಸಮಾರೋಪ- 12470 ಅಭ್ಯರ್ಥಿಗಳು ಭಾಗಿ

Saturday, November 21st, 2015
udyoga mela

ಮ0ಗಳೂರು : ಎರಡು ದಿನಗಳ ಕಾಲ ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ನಡೆದ ಮಂಗಳೂರು ಉದ್ಯೋಗ ಮೇಳವು ಶುಕ್ರವಾರ ಸಮಾಪನಗೊಂಡಿತು. ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಉದ್ಯೋಗಮೇಳದ ರುವಾರಿ, ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಈ ಉದ್ಯೋಗ ಮೇಳವು ಚಾರಿತ್ರಿಕವಾಗಿದ್ದು. ಉದ್ಯೋಗಾಂಕ್ಷಿಗಳ ಸ್ಪಂದನೆಯು ಅಭೂತಪೂರ್ವವಾಗಿದೆ ಎಂದರು. ಸಾಕಷ್ಟು ಉನ್ನತ ವಿದ್ಯಾಸಂಸ್ಥೆಗಳನ್ನು ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತೀವರ್ಷ ಒಂದು ಲಕ್ಷಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಕಲಿತು ಹೊರಗೆ ಬರುತ್ತಿದ್ದಾರೆ. ಉದ್ಯೋಗವು ಇವರ ಮುಂದೆ […]

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ಅಧ್ಯಕ್ಷರಾಗಿ ಜಗನ್ನಾಥ ಶೆಟ್ಟಿ

Tuesday, November 17th, 2015
Jaganantha Shetty

ಬಂಟ್ವಾಳ : ಸೌತ್ ಕೆನರಾ ಫೋಟೋಗ್ರಾಫರ್ಸ್  ಅಸೋಶಿಯೇಶನ್ ದ.ಕ ಜಿಲ್ಲೆ-ಉಡುಪಿ ಜಿಲ್ಲೆ ಇದರ ನೂತನ ಅಧ್ಯಕ್ಷರಾಗಿ ಜಗನ್ನಾಥ ಶೆಟ್ಟಿ ಮಂಗಳೂರು ಆಯ್ಕೆಯಾಗಿದ್ದಾರೆ. ಸಲಹಾ ಸಮಿತಿ ಸಂಚಾಲಕರಾಗಿ ವಿಠಲ ಚೌಟ ಮಂಗಳೂರು , ಉಪಾಧ್ಯಕ್ಷರುಗಳಾಗಿ ವಿಲ್ಸನ್ ಜಾರ್ಜ್ ಗೊನ್ಸಾಲ್ವಿಸ್ ಬೆಳ್ತಂಗಡಿ , ಶ್ರೀಧರ ಶೆಟ್ಟಿಗಾರ್ ಉಡುಪಿ, ಪ್ರಧಾನ ಕಾರ್ಯದರ್ಶಿ ಮಧು ಮಂಗಳೂರು, ಕೋಶಾಧಿಕಾರಿ ದಯಾನಂದ ಬಂಟ್ವಾಳ್, ಜತೆ ಕಾರ್ಯದರ್ಶಿ ಗಳಾಗಿ ದತ್ತಾತ್ರೇಯ ಕಾರ್ಕಳ, ವಿನೋದ್ ಕಾಂಚನ್ ಕಾಪು, ಸಂಘಟನಾ ಕಾರ್ಯದರ್ಶಿಯಾಗಿ ಸತೀಶ್ ಕೊಂಡಾಡಿ ಬ್ರಹ್ಮಾವರ, ಅಭಯಚಂದ್ರ ಮೂಡಬಿದರೆ, ಸಾರ್ವಜನಿಕ ಸಂಪರ್ಕಾಧಿಕಾರಿ ಭಕ್ತಪ್ರಸಾದ್ […]

ರಾಜ್ಯದ ಸಾಂಸ್ಕೃತಿಕ ಪರಂಪರೆಗಳ ಪ್ರಾತಿನಿಧಿಕ ಕೇಂದ್ರವಾಗಿ ಜಾನಪದ ವಿವಿ. ಬೆಳೆಯಬೇಕು : ಹೆಗ್ಗಡೆ ಸಲಹೆ.

Sunday, November 15th, 2015
Veerendra Hegde

ಉಜಿರೆ: ಮೂಲಭೂತ ಸೌಕರ್ಯ, ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಸರ್ಕಾರ ಹಾಗೂ ದಾನಿಗಳ ಸಹಕಾರದೊಂದಿಗೆ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವನ್ನು ರಾಜ್ಯದ ಸಾಂಸ್ಕೃತಿಕ ಪರಂಪರೆಗಳ ಪ್ರಾತಿನಿಧಿಕ ಕೇಂದ್ರವಾಗಿ ಬೆಳೆಸಬೇಕು. ಜನರ ವಿಶ್ವವಿದ್ಯಾಲಯವಾಗಿ ಬೆಳೆಯಬೇಕು, ಬೆಳಗಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸಲಹೆ ನೀಡಿದರು. ಹಾವೇರಿಯ ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಯಾಗಿ ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ಡಾ. ಕೆ. ಚಿನ್ನಪ್ಪಗೌಡ ಭಾನುವಾರ ಧರ್ಮಸ್ಥಳದಲ್ಲಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಹಾಗೂ ಮಾರ್ಗದರ್ಶನ ಪಡೆದರು. […]

ಎಸ್‌ಎಸ್‌ಎಫ್ ಜಿಲ್ಲಾಧ್ಯಕ್ಷ ನ ವಿರುದ್ಧ ದೌರ್ಜನ್ಯಕ್ಕೊಳಗಾದ ಅತ್ತಿಗೆಯಿಂದ ಕಮೀಷನರ್ ಅವರಿಗೆ ದೂರು ದಾಖಲು!

Sunday, November 15th, 2015
Afil Yakub Sahadi

ಮಂಗಳೂರು : ಅಫಿಲ್ ಯಾಕೂಬ್ ಸಹದಿ, ಈ ಹೆಸರನ್ನು ನೀವು ಕೇಳಿರಬಹುದು. ಯಾಕೆಂದರೆ ಅಫಿಲ್ ಯಾಕೂಬ್ ಸಹದಿ ಮುಸ್ಲಿಂ ಸಮುದಾಯದ ಒಬ್ಬ ದೊಡ್ಡ ವಿದ್ವಾಂಸ. ಅವನು ಪ್ರವಚನ ಮಾಡಲು ನಿಂತ ಎಂದರೆ ಕೇಳುತ್ತಿದ್ದವರಿಗೆ ಇವನು ನಮ್ಮ ಸಂಬಂಧಿಯೊ, ಅಣ್ಣನೊ, ತಮ್ಮನೊ ಆಗಿದ್ದಲ್ಲಿ ಎಷ್ಟು ಒಳ್ಳೆಯದಿತ್ತು ಎಂದು ಅನಿಸದೇ ಇರಲಾರದು. ಅಷ್ಟು ಪಾಂಡಿತ್ಯ, ನಿರರ್ಗಳ ಮತ್ತು ಯಾರೂ ತಲೆದೂಗುವಂತಹ ವಾಕ್ ಪಟುತ್ವ. ಅಫಿಲ್ ಯಾಕೂಬ್ ಸಹದಿ ಕಳೆದ ಎಂಟು ವರ್ಷಗಳಿಂದ ಹರೇಕಳ ಬೈತಾರ್ ಜುಮಾಮಸೀದಿಯಲ್ಲಿ ಖತೀಬನಾಗಿ ಕೆಲಸ ಮಾಡುತ್ತಿದ್ದಾನೆ. […]

ಹರೀಶ್‌ ಪೂಜಾರಿ ಹತ್ಯೆ ದುಷ್ಕರ್ಮಿಗಳ ಪತ್ತೆಗೆ ವಿಶೇಷ ತಂಡ

Saturday, November 14th, 2015
Rai Cheque

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಎಲ್ಲ ಅವಶ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ. ಬಂಟ್ವಾಳದಲ್ಲಿ ಹರೀಶ್‌ ಪೂಜಾರಿ ಅವರನ್ನು ಹತ್ಯೆ ಮಾಡಿರುವ ಹಾಗೂ ಶಮೀವುಲ್ಲ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ದುಷ್ಕರ್ಮಿಗಳ ಪತ್ತೆಗೆ ವಿಶೇಷ ಪೊಲೀಸ್‌ ತಂಡ ರಚಿಸಲಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ. ಬಿ.ಸಿ. ರೋಡಿನಲ್ಲಿ ಗುರುವಾರ ಸಂಭವಿಸಿರುವ ಅಹಿತಕಾರಿ ಘಟನೆಗಳು ಹಾಗೂ ಶುಕ್ರವಾರ ನಡೆದಿರುವ ಬಂದ್‌ ಹಿನ್ನೆಲೆಯಲ್ಲಿ ನಗರದ ಸರ್ಕಿಟ್‌ಹೌಸ್‌ನಲ್ಲಿ ಪತ್ರಿಕಾಗೋಷ್ಠಿ […]

ಬಂಟ್ವಾಳ ಘಟನೆ : ಜಿಲ್ಲೆಯಾದ್ಯಂತ ಭಾನುವಾರ ರಾತ್ರಿ 10-00 ಘಂಟೆಯ ವರೆಗೆ 144 ರಂತೆ ನಿಷೇದಾಜ್ಞೆ

Friday, November 13th, 2015
AB Ibrahim

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ದಿನಾಂಕ 12-11-2015 ರಂದು ನಡೆದ ಅಹಿತಕರ ಘಟನೆ ನಂತರ ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಾಗೂ ಜಿಲ್ಲೆಯಾದ್ಯಂತ ಶಾಂತಿಯುತ ವಾತಾವರಣ ಕಾಯ್ದುಕೊಳ್ಳುವ ಹಿನ್ನೆಲೆಯಲ್ಲಿ ದಿನಾಂಕ 12-11-2015 ರ ರಾತ್ರಿ 10-00 ಘಂಟೆಯಿಂದ ದಿನಾಂಕ 15-11-2015 ರ ರಾತ್ರಿ 10-00 ಘಂಟೆಯ ತನಕ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆ 1973 ರ ಸೆಕ್ಷನ್ 144 ರಂತೆ ನಿಷೇದಾಜ್ಞೆ ಆದೇಶ ಹೊರಡಿಸಲಾಗಿದೆ. ಇದರಂತೆ ಸದ್ರಿ […]

‘ಸವ್ಯಸಾಚಿ’ ಪುನರೂರು – ಕೃತಿ ಅನಾವರಣ

Thursday, November 12th, 2015
punaruru Book

ಮಂಗಳೂರು : ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರ ಬದುಕು, ಚಿತ್ರಣವನ್ನೊಳಗೊಂಡ ‘ಸವ್ಯಸಾಚಿ ಪುನರೂರು’ ಪುಸ್ತಕದ ಬಿಡುಗಡೆ ಸಮಾರಂಭವು ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ಗುರುವಾರದಂದು ಬೆಳಿಗ್ಗೆ ನಡೆಯಿತು. ಪುಸ್ತಕವನ್ನು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಬಿಡುಗಡೆಗೊಳಿಸಿ, ಮಾತನಾಡಿದರು. ಪುನರೂರು ಬದುಕಿನ ಚಿತ್ರಣ ತೆರೆದ ಪುಸ್ತಕವಾಗಿದೆ, ಅವರ ಸೈದ್ದಾಂತಿಕ ನಿಲೆಯು ಪ್ರತಿಯೊಬ್ಬರ ಆದರ್ಶ ಆಗಬೇಕು, ಮನೆ ಮನದಲ್ಲಿ ಹರಿಕೃಷ್ಣ ಪುನರೂರುರವರ ಪರಿಚಯ ಕೃತಿಯು ಅಚ್ಚಾಗಲಿ, ಮುಂದಿನ ಯುವ ಪೀಳಿಗೆಗೆ ಅವರ ಆದರ್ಶವು ದಾರಿ ದೀಪವಾಗಬೇಕು, ಕೃತಿಕಾರರ ಶ್ರಮ […]

ಯಶಸ್ವಿಯಾಗಿ ಜರುಗಿದ ‘ಭುರ್ಗ್ಯಾಂಲಿ ಮಝಾ’

Tuesday, November 10th, 2015
Burgyali Maza

ಮಂಗಳೂರು : ಕೊಂಕಣಿ ಪ್ರಚಾರ ಸಂಚಾಲನವು ಮಕ್ಕಳ ದಿನಾಚರಣೆಯ ಸಲುವಾಗಿ ಆಚರಿಸಿದ ‘ಭುರ್ಗ್ಯಾಂಲಿ ಮಝಾ’ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು. 09.11.15ರಂದು ಕೊಂಕಣಿ ಅಕಾಡೆಮಿ ಮತ್ತು ಮಾಂಡ್ ಸೊಭಾಣ್ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಈ ಸಂಭ್ರಮವು 11 ಪ್ರಾಥಮಿಕ ಮತ್ತು 9 ಪ್ರೌಢಶಾಲೆಗಳ 403 ವಿದ್ಯಾರ್ಥಿಗಳಿಂದ ವಿವಿಧ ಪ್ರತಿಭಾ ಪ್ರದರ್ಶನ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸ್ವರೂಪ ಅಧ್ಯಯನ ಕೇಂದ್ರದ ನಿರ್ದೇಶಕ ಗೋಪಾಡ್ಕರ್ ಅವರು ಜೋಕಾಲಿಯನ್ನು ಇಳಿಸುವ ಮುಖಾಂತರ ವಿಶಿಷ್ಟವಾಗಿ ಉದ್ಘಾಟಿಸಿದರು. ವಿದ್ಯಾರ್ಥಿಗಳನ್ನು ಮಾರ್ಕುಗಳ ಗುಲಾಮರನ್ನಾಗಿಸುವ ಬದಲು ಅವರ […]

ಆಳ್ವಾಸ್ ನುಡಿಸಿರಿ 2015ರ ಸರ್ವಾಧ್ಯಕ್ಷರಾಗಿ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರೀ

Thursday, November 5th, 2015
Venkatachala

ಮೂಡುಬಿದಿರೆ : ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡುಬಿದಿರೆ ನಡೆಸಿಕೊಂಡು ಬರುತ್ತಿರುವ ನಾಡು-ನುಡಿ-ಸಂಸ್ಕೃತಿಯ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಆಳ್ವಾಸ್ ನುಡಿಸಿರಿ. ಈ ಸಮ್ಮೇಳನವನ್ನು ಕಳೆದ 12 ವರ್ಷಗಳಿಂದ ಕನ್ನಡ ಬಾಂಧವರ ಸಹಕಾರದಿಂದ ನಿರಂತರವಾಗಿ ಸಂಘಟಿಸಿಕೊಂಡು ಬರುವ ಮೂಲಕ ನಾಡಿನಾದ್ಯಂತ ನಾಡು-ನುಡಿಯ ಎಚ್ಚರವನ್ನು, ಸಂಸ್ಕೃತಿ ಪ್ರೀತಿ-ಗೌರವಗಳನ್ನು ವೃದ್ಧಿಸಲು ಸಾಧ್ಯವಾಗಿದೆ. ಕನ್ನಡಿಗರ ಹೆಮ್ಮೆಯ ಈ ಕಾರ್ಯಕ್ರಮವು ಈ ವರ್ಷ ನವೆಂಬರ್ 26, 27, 28 ಮತ್ತು 29 (ಗುರುವಾರ, ಶುಕ್ರವಾರ, ಶನಿವಾರ ಮತ್ತು ಆದಿತ್ಯವಾರ) ನೇ ದಿನಾಂಕಗಳಂದು […]

ಕರಾವಳಿ ಜಿಲ್ಲೆಯಾದ್ಯಂತ’ರೈಟ್ ಬೊಕ್ಕ ಲೆಫ್ಟ್’ ಬಿಡುಗಡೆ

Thursday, November 5th, 2015
Right Bokka Left

ಮಂಗಳೂರು: ಮಂಗಳಾಂಬಿಕಾ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾದ ಕಲ್ಲಡ್ಕ ಚಂದ್ರಶೇಖರ ರೈ ನಿರ್ಮಾಣದಲ್ಲಿ ಯತೀಶ್ ಆಳ್ವ ನಿರ್ದೇಶನದ ’ರೈಟ್ ಬೊಕ್ಕ ಲೆಫ್ಟ್’ ತುಳು ಸಿನಿಮಾದ ಬಿಡುಗಡೆ ಸಮಾರಂಭವು ಮಂಗಳೂರಿನ ಜ್ಯೋತಿ ಥಿಯೇಟರ್‌ನಲ್ಲಿ ಗುರುವಾರ ಜರಗಿತು. ಸಮಾರಂಭವನ್ನು ಕಲ್ಲಡ್ಕ ಪರಮೇಶ್ವರಿ ರೈ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಚಲನಚಿತ್ರ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ತುಳು ಸಿನಿಮಾರಂಗದಲ್ಲಿ ರೈಟ್ ಬೊಕ್ಕ ಲೆಫ್ಟ್ ಸಿನಿಮಾ ಶತದಿನವನ್ನು ಆಚರಿಸಲಿ ಎಂದರು. ನ್ಯಾಯವಾದಿ ಕೆ.ಎಸ್.ಕಲ್ಲೂರಾಯ ಅವರು ಮಾತನಾಡಿ ತುಳುವಿನಲ್ಲಿ ಸದಭಿರುಚಿಯ […]