ತಹಶೀಲ್ದಾರರು ವಿಚಾರಣೆ ನಡೆಸದೇ ಸ್ಮಶಾನ ಜಮೀನು ನೀಡುವುದಾಗಿ ಕಡತವನ್ನು ನಿರ್ಮಿಸಿದ್ದರು

Wednesday, October 14th, 2015
crematorium

ಮಂಗಳೂರು : ಅತ್ತಾವರ ಗ್ರಾಮದ ಸ.ನಂ. 251/1 ರಲ್ಲಿ 0.26 ಎಕ್ರೆ ವಿಸ್ತೀರ್ಣದ ಜಮೀನನ್ನು ಮುಸ್ಲಿಂ ಜನಾಂಗದವರಿಗೆ ಸ್ಮಶಾನಕ್ಕಾಗಿ ಕಾದಿರಿಸುವ ಬಗ್ಗೆ ಕೋರಿ ಮುಹಿಯುದ್ದೀನ್ ಜುಮ್ಮಾ ಮಸೀದಿ ಇವರು ತಹಶೀಲ್ದಾರರು ಮಂಗಳೂರು ಇವರಿಗೆ ಅರ್ಜಿಯನ್ನು ಸಲ್ಲಿಸಿರುತ್ತಾರೆ. ಅದರಂತೆ ತಹಶೀಲ್ದಾರರು ಪ್ರಸ್ತಾವನೆ ತಯಾರಿಸಿದ್ದು, ಈ ಬಗ್ಗೆ ವಿಶ್ವ ಹಿಂದು ಪರಿಶತ್, ಕಟೀಲ್ ದಿನೇಶ್ ಪೈ ಹಾಗೂ ಅತ್ತಾವರ ಗ್ರಾಮದ ಗ್ರಾಮಸ್ಥರು ಆಕ್ಷೇಪಣೆ ಸಲ್ಲಿಸಿದ್ದು, ತಹಶೀಲ್ದಾರರು ಈ ಬಗ್ಗೆ ವಿಚಾರಣೆ ನಡೆಸದೇ ಕಡತವನ್ನು ಸಲ್ಲಿಸಿದ್ದು ಈ ಆಕ್ಷೇಪಣೆಗಳ ಬಗ್ಗೆ ಸಹಾಯಕ […]

ಎತ್ತಿನಹೊಳೆ ಯೋಜನೆ ವಿರುದ್ಡ ಪಂಪ್ ವೆಲ್ ಸರ್ಕಲ್ ನಲ್ಲಿ ಅ.15 ರಂದು ರಸ್ತೆ ತಡೆ

Monday, October 12th, 2015
Yethinahole Horata

ಮಂಗಳೂರು: ಎತ್ತಿನಹೊಳೆ ಯೋಜನೆಯನ್ನು ದ.ಕ ಜಿಲ್ಲೆಯ ಜನತೆ ತೀವ್ರವಾಗಿ ವಿರೋದಿಸುತ್ತಿದ್ದರೂ ರಾಜ್ಯ ಸರಕಾರ ಕಡೆಗಣಿಸಿದುದ್ದರಿಂದ ಅ.15 ರಂದು ಮಂಗಳೂರಿನ ಪಂಪ್ ವೆಲ್ ನಲ್ಲಿ ರಸ್ತೆ ತಡೆ ಮತ್ತು ಜೈಲ್ ಭರೋ ನಡೆಸಲಾಗುವುದು ಎಂದು ನೇತ್ರಾವತಿ ನದಿ ಸಂರಕ್ಷಣಾ ಒಕ್ಕೂಟದ ಅಧ್ಯಕ್ಷ ಡಾ.ನಿರಂಜನ್ ರೈ ತಿಳಿಸಿದ್ದಾರೆ. ಅವರು ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಆ ದಿನ ಬೆಳಿಗ್ಗೆ 10.30ಕ್ಕೆ ಪಂಪ್ ವೆಲ್ ನಲ್ಲಿ ರಸ್ತೆ ತಡೆ ಹಮ್ಮಿಕೊಳ್ಳಲಾಗಿದೆ. ಈ ಹೋರಾಟದಲ್ಲಿ ಪಕ್ಷ ಬೇದ ಮರೆತು ಎಲ್ಲರೂ ಒಟ್ಟಾಗ ಬೇಕೆಂದು ಅವರು […]

ಮತೀಯತೆ ಜಾತೀಯತೆ ಜನ ಚಳುವಳಿಗೆ ಮಾರಕ : ಮುನೀರ್ ಕಾಟಿಪಳ್ಳ

Monday, October 12th, 2015
dyfi

ಮಂಗಳೂರು : ಜಿಲ್ಲೆಯ ಆಡಳಿತ ಮಾಫಿಯಾಗಳ ನಿಯಂತ್ರಣದಲ್ಲಿದೆ. ಕೈಗಾರಿಕೆಗಳು ಜನರ ಬದುಕನ್ನು ನರಕಕ್ಕೆ ತಳ್ಳುತ್ತಿದೆ. ಅಕ್ರಮ ಮರಳುಗಾರಿಕೆ, ಜೂಜು ಕೇಂದ್ರಗಳು, ಬ್ಲೇಡ್ ಕಂಪೆನಿಗಳು ಬಡವರ ರಕ್ತ ಹೀರುತ್ತಿದೆ. ಇವುಗಳ ವಿರುದ್ಧ ಜನಪರ ಚಳುವಳಿಯನ್ನು ತೀವ್ರಗೊಳಿಸಲು ಜಿಲ್ಲೆಯಲ್ಲಿ ನಡೆಯುತ್ತಿರುವ ಮತೀಯ ಸಂಘರ್ಷಗಳು ತೊಡಕಾಗುತ್ತಿದೆ ಎಂದು DYFI ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಕಳವಳ ವ್ಯಕ್ತಪಡಿಸಿದರು. ಅವರು ನಗರದ ಬೋಳಾರದ AGK ಭವನದಲ್ಲಿ DYFI ಮಂಗಳೂರು ನಗರ ಸಮಿತಿ ಹಮ್ಮಿಕೊಂಡಿದ್ದ ನಗರ ಮಟ್ಟದ ಯುವಜನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಭಾರತದ ಸಂವಿಧಾನ […]

ಹಜ್‌ಯಾತ್ರೆಯ ಮೊದಲ ತಂಡ ಮಂಗಳೂರಿಗೆ ವಪಾಸ್

Tuesday, September 29th, 2015
Haj pilgrims

ಮಂಗಳೂರು : ಹಜ್‌ ನಿರ್ವಹಣಾ ಸಮಿತಿ ಮಂಗಳೂರು ಇದರ ವತಿಯಿಂದ ಪವಿತ್ರ ಹಜ್‌ಯಾತ್ರೆ ಕೈಗೊಂಡಿದ್ದ ಕರ್ನಾಟಕದ ಹಜ್ ಯಾತ್ರಾರ್ಥಿಗಳ ಮೊದಲ ತಂಡ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಸೋಮವಾರ ಆಗಮಿಸಿತು. ದ.ಕನ್ನಡ, ಉಡುಪಿ, ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ 666 ಮಂದಿ ಹಜ್‌ಯಾತ್ರೆ ಕೈಗೊಂಡಿದ್ದರು. ವಿಮಾನ ನಿಲ್ದಾಣದಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಕುಟುಂಬದ ಸದಸ್ಯರು ಯಾತ್ರಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡರು. ವಸತಿ, ಊಟ, ಪ್ರಯಾಣದ ವ್ಯವಸ್ಥೆ ಉತ್ತಮವಾಗಿತ್ತು. ಮಂಗಳೂರು ಹಜ್‌ ನಿರ್ವಹಣಾ ಸಮಿತಿ ನಮ್ಮ ಬಗ್ಗೆ ಹೆಚ್ಚಿನ ಕಾಳಜಿ […]

ಮಂಗಳೂರು ನಾಗೂರಿ ಮೂಲದ ವಿಕ್ಟರ್ ಮೆಂಡೋನ್ಸಾ ಮುಂಬಯಿಯಲ್ಲಿ ನಿಧನ

Tuesday, September 29th, 2015
Victor

ಮಂಗಳೂರು : ಅಂಧೇರಿ ಪೂರ್ವದ ಸಾಕಿನಾಕ ಅಲ್ಲಿನ ಚಕ್ರ ಹೊಟೇಲ್‌ನಲ್ಲಿ ಕ್ಯಾಪ್ಟನ್ ಆಗಿ ನೌಕರಿಯಲ್ಲಿದ್ದ ಮಂಗಳೂರಿನ ಅವಿವಾಹಿತ ವಿಕ್ಟರ್ ಮೆಂಡೋನ್ಸಾ (68.) ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಕಂಕನಾಡಿ ಅಲ್ಲಿನ ನಾಗೂರಿ ನಿವಾಸಿ ಎನ್ನಲಾದ ಜೋಸೆಫ್ ಮೆಂಡೋನ್ಸಾರ ಪುತ್ರ ವಿಕ್ಟರ್ ಸುಮಾರು ಮೂರುವರೆ ದಶಕಗಳಿಂದ ಸಾಕಿನಾಕ ಅಲ್ಲಿನ ಹೆಸರಾಂತ ಹೊಟೇಲು ಚಕ್ರ ಇದರಲ್ಲಿ ಕ್ಯಾಪ್ಟನ್ ಆಗಿ ಸೇರಿದ್ದರು. ಇತ್ತೀಚೆಗೆ ಅನಾರೋಗ್ಯದಿಂದ ಅಸಾಯಕರೆಣಿಸಿ ಅಸ್ವಸ್ಥರಾಗಿ ಬಳಲುತ್ತಿದ್ದ ವಿಕ್ಟರ್ ಅವರನ್ನು ಮರೋಲ್‌ನಾಕಾ ಅಲ್ಲಿನ ಮುಕುಂದ್ […]

ಅನೈತಿಕ ಪೊಲೀಸ್‌ಗಿರಿ ವಿರುದ್ಧ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಪಾದಯಾತ್ರೆ

Tuesday, September 29th, 2015
Youth Congress padayatre

ಮಂಗಳೂರು : ನಗರದ ಲಾಲ್ ಭಾಗ್ ನಲ್ಲಿರುವ ಗಾಂಧಿ ಪ್ರತಿಮೆ ಬಳಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಜಿಲ್ಲೆಯಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಅನೈತಿಕ ಪೊಲೀಸ್‌ಗಿರಿ ವಿರುದ್ಧ ಆಯೋಜಿಸಿರುವ ಬೃಹತ್ ಪಾದಯಾತ್ರೆಯನ್ನು ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಚಾಲನೆ ನೀಡಿದರು. ಕೋಮು ಪ್ರಚೋದನೆ ಮತ್ತು ಕೋಮುವಾದವನ್ನು ಬುಡಸಹಿತ ಕಿತ್ತು ಹಾಕಲು ಸಂಕಲ್ಪ ಮಾಡುವಂತೆ ಯುವಕರಿಗೆ ಕರೆ ನೀಡಿದರು. ಜಿಲ್ಲೆ ಶಾಂತಿ ಹಾಗು ಸೌಹಾರ್ಧತೆಯ ನೆಲೆಯಲ್ಲಿ ಹಿಂದೂ ಮುಸ್ಲೀಮರನ್ನು ಒಗ್ಗೂಡುವಂತೆ ಮಾಡಿದೆ. ಅದನ್ನು […]

ಯೋಗಾಶ್ರಮದ ಕಾರ್ಯಕರ್ತರ ಸಮರ್ಪಣಾ ಭಾವ ಅನನ್ಯ -ಮಾಣಿಲ ಶ್ರೀಗಳು

Tuesday, September 29th, 2015
ಯೋಗಾಶ್ರಮದ ಕಾರ್ಯಕರ್ತರ ಸಮರ್ಪಣಾ ಭಾವ ಅನನ್ಯ -ಮಾಣಿಲ ಶ್ರೀಗಳು

ಉಪ್ಪಳ : ಮಾರ್ಚ್ 21ರಿಂದ 29 ರ ವರೆಗೆ ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಲೋಕಕಲ್ಯಾಣಾರ್ಥ ಸಂಭ್ರಮದಿಂದ ನಡೆದ ಬೃಹತ್ ಗಾಯತ್ರೀ ಘೃತ ಸಂಪ್ರಾಪ್ತಿ ಮಹಾಯಾಗ ಮತ್ತು ಚತುರ್ವೇದ ಸಂಹಿತಾ ಯಾಗ ದ ಕಾರ್ಯಕರ್ತರ ಅಭಿನಂದನೆ ಮತ್ತು ಅವಲೋಕನಾ ಸಭೆ ಯು ಆದಿತ್ಯವಾರ ಯೋಗಾಶ್ರಮದಲ್ಲಿ ನಡೆಯಿತು. ಸಾನ್ನಿಧ್ಯ ವಹಿಸಿದ್ದ ಮಾಣಿಲ ಶ್ರೀಧಾಮದ ಪರಮ ಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ’ ಇಲ್ಲಿನ ಕಾರ್ಯಕರ್ತರ ಸಮರ್ಪಣಾ ಭಾವ ಅನನ್ಯವಾದುದು, ಅಪರೂಪದಲ್ಲಿ ಕಾಣಸಿಗುವ ಸಾತ್ವಿಕ ಮನೋಭಾವನೆಯ ಸೇವಾಗುಣದಿಂದ […]

ಧಾಮಿ೯ಕ ಆಚರಣೆಯಿಂದ ಸಾಮಾಜಿಕ ನೆಮ್ಮದಿ: ಶ್ರೀನಿವಾಸ ಪೂಜಾರಿ

Friday, September 18th, 2015
Bunts Ganeshotsava

ಮಂಗಳೂರು : ಗಣೇಶೋತ್ಸವದಂತಹ ಸಾಮೂಹಿಕ ಆಚರಣೆಗಳಿಂದ ಸಾಮಾಜಿಕ ನೆಮ್ಮದಿ ಲಭಿಸಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಪೂಜಾರಿ ಅವರು ಹೇಳಿದರು. ಶ್ರೀ ಸಿದ್ಧಿವಿನಾಯಕ ಪ್ರತಿಷ್ಟಾನ ಹಾಗೂ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಮಂಗಳೂರಿನ ಬಂಟ್ಸ್ ಹಾಸ್ಟೆಲ್‌ನ ಓಂಕಾರನಗರದಲ್ಲಿ ನಡೆಯುತ್ತಿರುವ ಸಾವ೯ಜನಿಕ ಶ್ರೀ ಗಣೇಶೋತ್ಸವದ ಮೊದಲ ದಿನದ ಧಾಮಿ೯ಕ ಸಭೆಯಲ್ಲಿ ಅವರು ಮಾತನಾಡಿದರು. 1970 ರ ದಶಕದಲ್ಲಿ ಭೂ ಮಸೂದೆ ಕಾನೂನು ಜಾರಿಯಾದಾಗ ಅವಿಭಜಿತ ದ.ಕ.ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಭೂಮಿಯನ್ನು ಕಳೆದುಕೊಂಡ ಬಂಟ ಸಮುದಾಯದವರು ಇದನ್ನು […]

ಪರಶುರಾಮ ಸೃಷ್ಟಿಯ ದ.ಕ.ಜಿಲ್ಲೆಯಲ್ಲಿ ಶ್ರೀ ಗಣೇಶನ ಆರಾಧನೆಗೆ ಹೆಚ್ಚಿನ ಮಹತ್ವವಿದೆ : ಶ್ರೀಧರ ಶೆಟ್ಟಿ

Friday, September 18th, 2015
Bunts Ganeshotsava

ಮಂಗಳೂರು : ಪರಶುರಾಮ ಸೃಷ್ಟಿಯ ದ.ಕ.ಜಿಲ್ಲೆಯಲ್ಲಿ ಶ್ರೀ ಗಣೇಶನ ಆರಾಧನೆಗೆ ಹೆಚ್ಚಿನ ಮಹತ್ವವಿದ್ದು, ನಮ್ಮ ಸಂಸ್ಕೃತಿ ಪರಂಪರೆಗೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿರುವ ಬಂಟ ಸಮಾಜ ಆಯೋಜಿಸುತ್ತಿರುವ ಶ್ರೀಗಣೇಶೋತ್ಸವ ಯಶಸ್ವಿಯಾಗಿ ನೆರವೇರಲಿ ಎಂದು ಎ.ಬಿ.ಶೆಟ್ಟಿ ದಂತ ವೈದ್ಯಕೀಯ ಕಾಲೇಜಿನ ನಿವೃತ್ತ ಡೀನ್ ಡಾ.ಎನ್.ಶ್ರೀಧರ ಶೆಟ್ಟಿ ಅವರು ಹೇಳಿದರು. ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನದ ಆಶ್ರಯದಲ್ಲಿ ಮಂಗಳೂರಿನ ಬಂಟ್ಸ್ ಹಾಸ್ಟೆಲ್‌ನ ಓಂಕಾರ ನಗರದಲ್ಲಿ ನಡೆಯಲಿರುವ ಸಾರ್ವಜನಿಕ ಶ್ರೀಗಣೇಶೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಧ್ವಜಾರೋಹಣ ನೆರವೇರಿಸಿದ ಬ್ರಿ.ಚಂದ್ರಶೇಖರ ಶೆಟ್ಟಿ ಅವರು ಮಾತನಾಡಿ […]

‘ದಬಕ್ ದಬಾ ಐಸಾ’ ತುಳು ಚಿತ್ರಕ್ಕೆ ಮುಹೂರ್ತ

Wednesday, September 16th, 2015
dabak daba isa

ಮಂಗಳೂರು: ಜಯಕಿರಣ ಫಿಲಂಸ್ ನಿರ್ಮಾಣದ ರೋಹನ್ ಫಿಲಂಸ್ ಅರ್ಪಿಸಿ ಪ್ರಕಾಶ್ ಪಾಂಡೇಶ್ವರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ‘ದಬಕ್ ದಬಾ ಐಸಾ’ ತುಳು ಚಲನ ಚಿತ್ರದ ಮುಹೂರ್ತ ಸಮಾರಂಭವು ಬಿಜೈ ಬಟ್ಟಗುಡ್ಡದಲ್ಲಿರುವ ಜಯಕಿರಣ ಕಚೇರಿಯಲ್ಲಿ ಸೋಮವಾರ ಜರಗಿತು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಶುಭಾರಂಭಗೈದರು. ತುಳುವಿನಲ್ಲೀಗ ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಗಳು ನಿರ್ಮಾಣವಾಗುತ್ತಿದೆ. ಚಿತ್ರ ನಿರ್ಮಿಸುವವರು ಉತ್ತಮ ಗುಣಮಟ್ಟದ ಚಿತ್ರಗಳನ್ನು ನೀಡಿದರೆ ಮಾತ್ರ ಪ್ರೇಕ್ಷಕರು ಸ್ವೀಕರಿಸುತ್ತಾರೆ. ಹೀಗಾಗಿ […]