ಲೋಕಪಾಲ ಆಯ್ಕೆ ಸಮಿತಿ ಅಧ್ಯಕ್ಷ ನ್ಯಾ.ಥಾಮಸ್ ರಾಜಿನಾಮೆ

Tuesday, March 4th, 2014
Justice-KT-Thomas

ನವದೆಹಲಿ: ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ಲೋಕಪಾಲ ಆಯ್ಕೆ ಮತ್ತು ಹುಡಕಾಟ ಸಮಿತಿಯ ಅಧ್ಯಕ್ಷ ನ್ಯಾಯಮೂರ್ತಿ ಕೆ.ಟಿ.ಥಾಮಸ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎಂದು ಸೋಮವಾರ ವರದಿಗಳು ತಿಳಿಸಿವೆ. ಕಳೆದ ವಾರವಷ್ಟೆ ಲೋಕಪಾಲರ ಆಯ್ಕೆ ಪ್ರಕ್ರಿಯೆಯಲ್ಲಿ ತಾವು ಪಾಲ್ಗೊಳ್ಳಬೇಕು ಎಂಬ ಕೇಂದ್ರ ಸರ್ಕಾರದ ಆಹ್ವಾನವನ್ನು ಹಿರಿಯ ವಕೀಲ ಫಾಲಿ ನಾರಿಮನ್ ಅವರು ತಿರಸ್ಕರಿಸಿದ್ದರು. ಅಲ್ಲದೆ ಲೋಕಪಾಲ ಹುಡುಕಾಟ ಸಮಿತಿಯನ್ನು ಅರ್ಥಹೀನ ಮತ್ತು ಹಾಸ್ಯಾಸ್ಪದ ಎಂದು ಕರೆದಿದ್ದರು. ಇದೀಗ ಸಮತಿಯ ಅಧ್ಯಕ್ಷರೇ ರಾಜಿನಾಮೆ ನೀಡಿರುವುದರಿಂದ […]

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆಯಾಗಿ ಜಯಮಾಲ?

Tuesday, March 4th, 2014
Jayalalitha

ಬೆಂಗಳೂರು: ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆಯಾಗಿ ಹಿರಿಯ ನಟಿ ಡಾ. ಜಯಮಾಲ ಅವರು ನೇಮಕವಾಗುವುದು ಬಹುತೇಕ ಖಚಿತವಾಗಿದೆ. ಜಯಮಾಲ ಅವರ ನೇಮಕಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮತಿ ಸೂಚಿಸಿದ್ದು, ಈ ಸಂಬಂಧ ಒಂದೆರಡು ದಿನಗಳಲ್ಲಿ ಸರ್ಕಾರದ ಅಧಿಕೃತ ಅದೇಶ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ. ಈ ಹಿಂದೆ ಬಿಜೆಪಿ ಸರ್ಕಾರ ವಿಧಾನ ಪರಿಷತ್ ಸದಸ್ಯರೂ ಆಗಿರುವ ನಟ ತಾರಾ ಅವರನ್ನು ಚಲನಚಿತ್ರ ಅಕಾಡೆಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ, […]

ವಿವಾದದ ನಡುವೆ ಬಿತ್ತು ಎತ್ತಿನಹೊಳೆಗೆ ಅಡಿಗಲ್ಲು

Tuesday, March 4th, 2014
Yettinaholege

ಮಂಗಳೂರು: ಬಂದ್ ಹಾಗೂ ಪ್ರತಿಭಟನೆ ನಡುವೆಯೇ ವಿವಾದಿತ ಎತ್ತಿನಹೊಳೆ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಎತ್ತಿನಹೊಳೆ ಯೋಜನೆ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಬಂದ್ ಆಚರಿಸಿದರೆ, ಚಿಕ್ಕಬಳ್ಳಾಪುರದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ಕಪ್ಪು ಪಟ್ಟಿ ಹಾಗೂ ಖಾಲಿ ಪೈಪುಗಳನ್ನು ಪ್ರದರ್ಶಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಲಾಯಿತು. ಈ ವೇಳೆ 50ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಿ, ಬಿಡುಗಡೆ ಮಾಡಲಾಗಿದೆ. ಚಿಕ್ಕಬಳ್ಳಾಪುರ ನಗರದ ಹೊರ ವಲಯದ ಬಿ.ಬಿ. ರಸ್ತೆಯಲ್ಲಿರುವ (ಆದಿಚುಂಚನಗಿರಿ ಶಾಖಾ […]

ಮೆಟ್ರೋ ಪ್ರಯಾಣಿಕರಿಗೆ ಬೆಲೆ ಏರಿಕೆ ಬಿಸಿ

Saturday, March 1st, 2014
Petrol

ಬೆಂಗಳೂರು: ಪೀಣ್ಯದಿಂದ ಮಲ್ಲೇಶ್ವರಂನ ಸಂಪಿಗೆ ರಸ್ತೆವರೆಗಿನ ‘ನಮ್ಮ ಮೆಟ್ರೋ’ ಸಂಚಾರಕ್ಕೆ ಚಾಲನೆ ನೀಡಿದ ಬೆನ್ನಲ್ಲೇ ಬಿಎಂಆರ್‌ಸಿಎಲ್, ಮೆಟ್ರೋ ಪ್ರಯಾಣಿಕರಿಗೆ ಬೆಲೆ ಏರಿಕೆಯ ಶಾಕ್ ನೀಡಿದೆ. ಮೆಟ್ರೋ ಪ್ರಯಾಣ ದರ ಏರಿಕೆ ಬಗ್ಗೆ ಶನಿವಾರ ಬಿಎಂಆರ್‌ಸಿಎಲ್ ಪ್ರಕಟಣೆ ಹೊರಡಿಸಿದ್ದು, ಎಂಜಿ ರಸ್ತೆ ಮತ್ತು ಬೈಯಪ್ಪನಹಳ್ಳಿ ನಡುವಿನ ಮಾರ್ಗದಲ್ಲಿನ ಪ್ರಮಾಣ ದರವನ್ನು 2 ರುಪಾಯಿ ಹೆಚ್ಚಿಸಲಾಗಿದೆ. ಮೆಟ್ರೋ ನೂತನ ದರ ಇಂದಿನಿಂದಲೇ ಜಾರಿಗೆ ಬಂದಿದ್ದು, ಎಂ.ಜಿ.ರಸ್ತೆ ಮತ್ತು ಬೈಯಪ್ಪನಹಳ್ಳಿ ನಡುವೆ ಈ ಮುಂಚೆ 15 ರುಪಾಯಿ ಇದ್ದ ಪ್ರಯಾಣ ದರ […]

ದ.ಕ.: ಕಾಂಗ್ರೆಸ್‌ ಅಭ್ಯರ್ಥಿ ಸ್ಥಾನಕ್ಕೆ ಮೂವರಿಂದ ನಾಮಪತ್ರ

Saturday, March 1st, 2014
ದ.ಕ.: ಕಾಂಗ್ರೆಸ್‌ ಅಭ್ಯರ್ಥಿ ಸ್ಥಾನಕ್ಕೆ ಮೂವರಿಂದ ನಾಮಪತ್ರ

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಆಯ್ಕೆಗೆ ಅವಕಾಶ ನೀಡುವ ಕುರಿತಂತೆ ಮೂವರು ಸ್ಪರ್ಧಾಕಾಂಕ್ಷಿಗಳು ಶುಕ್ರವಾರ ಮಧ್ಯಾಹ್ನ ದ.ಕ. ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದು, ಮೂರೂ ನಾಮಪತ್ರಗಳು ಸ್ವೀಕೃತವಾಗಿವೆ. ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ. ಜನಾರ್ದನ ಪೂಜಾರಿ, ಕೇಂದ್ರ ಸಚಿವ ವೀರಪ್ಪ ಮೊಯಿಲಿ ಅವರ ಪುತ್ರ ಹರ್ಷ ಮೊಯಿಲಿ ಹಾಗೂ ಕಾಂಗ್ರೆಸ್‌ ಅಲ್ಪಸಂಖ್ಯಾಕ ಘಟಕದ ರಾಜ್ಯ ಉಪಾಧ್ಯಕ್ಷ ಕಣಚೂರು ಮೋನು ನಾಮಪತ್ರ ಸಲ್ಲಿಸಿದ್ದು, ಅಂತಿಮ ಕಣದಲ್ಲಿದ್ದಾರೆ. ಶುಕ್ರವಾರ ಮಧ್ಯಾಹ್ನ 12ರಿಂದ ನಾಮಪತ್ರ […]

ಜನರಲ್ ವಿ.ಕೆ.ಸಿಂಗ್ ಬಿಜೆಪಿಗೆ ಸೇರ್ಪಡೆ

Saturday, March 1st, 2014
VK-Singh

ನವದೆಹಲಿ: ಭೂಸೇನೆ ನಿವೃತ್ತ ಮುಖ್ಯಸ್ಥ ಜನರಲ್ ವಿ.ಕೆ.ಸಿಂಗ್ ಅವರು ಶನಿವಾರ ಅಧಿಕೃತವಾಗಿ ಭಾರತೀಯ ಜನತಾ ಪಕ್ಷವನ್ನು ಸೇರಿದ್ದಾರೆ. ಇಂದು ನವದೆಹಲಿಯಲ್ಲಿರುವ ಬಿಜೆಪಿ ಕಚೇರಿಗೆ ಆಗಮಿಸಿದ ವಿ.ಕೆ.ಸಿಂಗ್ ಅವರನ್ನು ಬಿಜೆಪಿ ರಾಷ್ಟ್ರಾದ್ಯಕ್ಷ ರಾಜನಾಥ್ ಸಿಂಗ್ ಅವರು ಹೂಗುಚ್ಛವನ್ನು ನೀಡುವ ಮೂಲಕ ಪಕ್ಷಕ್ಕೆ ಬರ ಮಾಡಿಕೊಂಡರು. ಇದಕ್ಕೂ ಮೊದಲು ಇಂಡಿಯಾ ಗೇಟ್ ಬಳಿ ಇರುವ ಅಮರ್ ಜವಾನ್ ಜ್ಯೋತಿ ಮೆಮೋರಿಯಲ್ಗೆ ಭೇಟಿ ನೀಡಿದ್ದ ವಿ.ಕೆ.ಸಿಂಗ್ ಅವರು ಅಲ್ಲಿ ನೆರೆದಿದ್ದ ಸುದ್ದಿಗಾರರೊಂದಿಗೆ ಮಾತನಾಡಿ, ತಾವು ಬಿಜೆಪಿ ಪಕ್ಷವನ್ನು ಸೇರುತ್ತಿರುವ ಕುರಿತು ಹೇಳಿಕೆ […]

ತೆಲಂಗಾಣ ವಿಧೇಯಕಕ್ಕೆ ರಾಷ್ಟ್ರಪತಿಗಳ ಅಂಕಿತ

Saturday, March 1st, 2014
Pranab-Mukherjee

ನವದೆಹಲಿ: ಆಂಧ್ರ ಪ್ರದೇಶವನ್ನು ವಿಭಜಿಸಿ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಮಾಡುವ ವಿಧೇಯಕಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಶನಿವಾರ ಅಂಕಿತ ಹಾಕಿದ್ದಾರೆ. ಸಂಸತ್ತಿನ ಉಭಯ ಕಲಾಪಗಳಲ್ಲಿ ಭಾರಿ ಗದ್ದಲಕ್ಕೆ ಕಾರಣವಾಗಿದ್ದ ನೂತನ ತೆಲಂಗಾಣ ರಾಜ್ಯ ರಚನೆ ವಿಧೇಯಕಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸಹಿ ಹಾಕಿದ್ದು, ಅಧಿಕೃತವಾಗಿ ದೇಶದ 29ನೇ ರಾಜ್ಯವಾಗಿ ತೆಲಂಗಾಣ ಉದಯವಾಗಿದೆ. ಫೆಬ್ರವರಿ 18ರಂದು ನಡೆದ ಲೋಕಸಭೆ ಕಲಾಪದಲ್ಲಿ ಅನುಮೋದನೆ ಪಡೆದಿದ್ದ ವಿಧೇಯಕಕ್ಕೆ ಕೊಂಚ ತಡವಾಗಿ ರಾಜ್ಯಸಭೆಯಲ್ಲಿ ಅಂಗೀಕಾರ ನೀಡಲಾಗಿತ್ತು. ಸೀಮಾಂಧ್ರ ಸಂಸದರ […]

ಸರ್ಕಾರದಿಂದ ಚಿಕಿತ್ಸಾ ವೆಚ್ಚ ಪಾವತಿ: ಉಮಾಶ್ರೀ

Saturday, March 1st, 2014
Umashree

ಬೆಂಗಳೂರು: ರಂಗಕರ್ಮಿ ಮತ್ತು ಹಿರಿಯ ಚಿತ್ರ ನಟ ಸಿ.ಆರ್. ಸಿಂಹ ಅವರ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಸಿಂಹ ಅವರ ಇದುವರೆಗಿನ ವೈದ್ಯ ಚಿಕಿತ್ಸಾ ವೆಚ್ಚವನ್ನು ಸರ್ಕಾರದಿಂದಲೇ ಭರಿಸಲಾಗುವುದು ಎಂದು ಹೇಳಿದ್ದಾರೆ. ಸಿಂಹ ಅವರ ನಿಧನ ವಾರ್ತೆ ಕೇಳಿ ನನಗೆ ದಿಗ್ಭ್ರಮೆಯಾಗಿದೆ. ಅವರ ಅಗಲಿಕೆಯಿಂದ ಕನ್ನಡ ಕಲಾ ಜಗತ್ತು ಒಬ್ಬ ಮೇರು ಪ್ರತಿಭೆಯನ್ನು ಕಳೆದುಕೊಂಡಂತಾಗಿದೆ. ನಟರಂಗದ ಮೂಲಕ ಕನ್ನಡ ರಂಗಭೂಮಿಗೆ ಹೊಸ ಆಯಾಮವನ್ನು ನೀಡಿದ್ದ ಸಿಂಹ, ಕನ್ನಡ ಚಿತ್ರರಂಗದಲ್ಲಿ […]

ಮಾರ್ಚ್8 ರಂದು ಆಕಾಂಕ್ಷಾ ಚಿತ್ರಕಲಾ ಪ್ರದರ್ಶನ

Saturday, March 1st, 2014
Art-Exhibition

ಬೆಂಗಳೂರು: ಮಾರ್ಚ್ 8 ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ 50 ಮಹಿಳೆಯರ  ಚಿತ್ರಕಲಾ ಪ್ರದರ್ಶನ ನಡೆಯಲಿದೆ. ಮಾರ್ಚ್ 8, 2014 ಸಂಜೆ 3 ಗಂಟೆಗೆ ಡಾ. ಚೂಡಾಮಣಿ ನಂದಗೋಪಾಲ್ (ಡೀನ್- ಹ್ಯುಮಾನಿಟೀಸ್ ಆ್ಯಂಡ್ ಸೋಷ್ಯಲ್ ಸಯನ್ಸ್ , ಜೈನ್ ಯುನಿವರ್ಸಿಟಿ) ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಡಾ. ಪುಷ್ಪಾ ದ್ರಾವಿಡ್(ಖ್ಯಾತ ಕಲಾವಿದೆ), ಡಾ. ಜಯಾ ನರೇಂದ್ರ ( ಖ್ಯಾತ ಸ್ತ್ರೀರೋಗ ತಜ್ಞೆ), ಪದ್ಮಶ್ರೀ ಶಶಿ ದೇಶಪಾಂಡೆ ( ಖ್ಯಾತ ಸಾಹಿತಿ), ಅಶ್ವಿನಿ ನಾಚಪ್ಪ ( […]

ಹೆಚ್ಚಿನ ಚಿಕಿತ್ಸೆಗಾಗಿ ನಟ ಅಂಬರೀಷ್ ಸಿಂಗಾಪುರಕ್ಕೆ ಶಿಫ್ಟ್

Saturday, March 1st, 2014
Ambarish

ಬೆಂಗಳೂರು: ನಟ ಹಾಗೂ ವಸತಿ ಸಚಿವ ಅಂಬರೀಷ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿತ್ತು. ಆದರೂ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಸಿಂಗಾಪುರಕ್ಕೆ ಶನಿವಾರ ಸ್ಥಳಾಂತರಿಸಲಾಗಿದೆ. ಅಂಬರೀಷ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಸಿಂಗಾಪುರಕ್ಕೆ ಕರೆದೊಯ್ಯಲು ಖ್ಯಾತ ನಟ ಚಿತ್ರನಟ ರಜನಿಕಾಂತ್ ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅಂಬರೀಷ್ ಅವರನ್ನು ಇಂದು ಬೆಳಗ್ಗೆ 6.45ರ ಸುಮಾರಿಗೆ ವಿಕ್ರಂ ಆಸ್ಪತ್ರೆಯಿಂದ ಸಿಂಗಾಪುರಕ್ಕೆ ಕರೆದೊಯ್ಯೂಲಾಗಿದೆ. ಅಂಬರೀಷ್ ಅವರ ಜೊತೆಗೆ ಪತ್ನಿ ಸುಮಲತಾ, ಹಾಗೂ ವಿಕ್ರಂ ಆಸ್ಪತ್ರೆಯ ಇಬ್ಬರು ವೈದ್ಯರ ತಂಡ ಇಂದು ಬೆಳಗ್ಗೆ ವಿಶೇಷ […]