ಅಸಭ್ಯ ವರ್ತನೆ ಬಸ್ ಪರವಾನಗಿ ರದ್ದು : ಆರ್‌ಟಿಒ

Saturday, December 22nd, 2012
RTO C Mallikarjuna

ಮಂಗಳೂರು :ಮಂಗಳೂರು ಆರ್‌ಟಿಒ ಸಿ.ಮಲ್ಲಿಕಾರ್ಜುನ ರವರು ಶುಕ್ರವಾರ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ವತಿಯಿಂದ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಿದ್ದ ರಸ್ತೆ ಸುರಕ್ಷತೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಬಸ್ ನಲ್ಲಿ ಬಸ್ ನಿರ್ವಾಹಕ ಹಾಗೂ ಚಾಲಕ ಪ್ರಯಾಣಿಕರೊಂದಿಗೆ ಲೈಂಗಿಕ ಕಿರುಕುಳ ಅಥವಾ ಅಸಭ್ಯವಾಗಿ ವರ್ತಿಸಿದರೆ ಅಂತಹ ಬಸ್‌ಗಳ ಪರವಾನಗಿಯನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಲಾವುದು ಎಂದು ಅವರು ಎಚ್ಚರಿಕೆ ನೀಡಿದರು. ದಿಲ್ಲಿಯ ಬಸ್‌ನಲ್ಲಿ ಸಾಮೂಹಿಕ ಅತ್ಯಾಚಾರದ ಅಮಾನವೀಯ ಕೃತ್ಯದ ಬಗ್ಗೆ ಉಲ್ಲೇಖಿಸಿ ಮಾತನಾಡಿದ ಅವರು, ಮಂಗಳೂರು […]

ಉತ್ಸವಗಳು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಅನಾವರಣಗೊಳಿಸುತ್ತವೆ : ಸಿ.ಟಿ. ರವಿ

Saturday, December 22nd, 2012
Karavali Utsav 2012

ಮಂಗಳೂರು :ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಶುಕ್ರವಾರ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ಹಬ್ಬ ಕರಾವಳಿ ಉತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ದಕ್ಷಿಣ ಕನ್ನಡ ಜಿಲ್ಲೆಯು ಹಲವು ಸಾಂಸ್ಕೃತಿಕ ಆಚರಣೆಗಳನ್ನು ಹೊಂದಿರುವ ಪ್ರದೇಶವಾಗಿದ್ದು ಉತ್ಸವಗಳು ನಮ್ಮಲ್ಲಿ ಸಾಮುದಾಯಿಕ ಪ್ರಜ್ಞೆಯನ್ನು ಜಾಗೃತಗೊಳಿಸುತ್ತವೆ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಅನಾವರಣಗೊಳಿಸುತ್ತವೆ. ಈ ಉದ್ದೇಶದಿಂದಲೇ ನಮ್ಮ ಪೂರ್ವಿಕರು ಉತ್ಸವಗಳನ್ನು ಆಯೋಜಿಸಿದ್ದಾರೆ ಎಂದು ಅವರು ಹೇಳಿದರು. […]

ಸುಳ್ಯದ ರಂಗಮನೆಯಲ್ಲಿ 3 ದಿನಗಳ ಕಾಲ ನಡೆಯಲಿರುವ ದಕ್ಷಿಣ ಕನ್ನಡ ಜಿಲ್ಲಾ ನಾಟಕೋತ್ಸವ

Friday, December 21st, 2012
DK District Natakotsava

ಮಂಗಳೂರು :ಡಿಸೆಂಬರ್ 22ರಿಂದ 25ರ ವರೆಗೆ ದಕ್ಷಿಣ ಕನ್ನಡ ಜಿಲ್ಲಾ ನಾಟಕೋತ್ಸವ ಸುಳ್ಯದ ರಂಗಮನೆಯಲ್ಲಿ, ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಹಾಗು ಶಿವಮೊಗ್ಗದ ರಂಗಾಯಣ ಮತ್ತು ರಂಗಮನೆ ಸುಳ್ಯ ಇವರ ಸಂಯುಕ್ತ ಆಶ್ರಯದಲ್ಲಿ ಮೂರು ದಿನಗಳ ಕಾಲ ನಾಟಕೋತ್ಸವ ನಡೆಯಲಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಶೀನಾ ನಾಡೋಳಿಯವರು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ನಾಟಕೋತ್ಸವದಲ್ಲಿ ಪ್ರತಿದಿನ ರಂಗಭೂಮಿಯಲ್ಲಿ ದಶಕದಿಂದ ತೊಡಗಿಸಿಕೊಂಡಿರುವ ಹವ್ಯಾಸಿ ಹಾಗೂ ವೃತ್ತಿಪರ ರಂಗತಂಡಗಳಿಂದ ನಾಟಕ ಪ್ರದರ್ಶನ ಹಾಗೂ ರಂಗಗೀತೆ ಗಾಯನ […]

ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ ಕಷ್ಟ ಸಾಧ್ಯ ಮನಪಾ ಆಯುಕ್ತ

Friday, December 21st, 2012
Dr Harish Kumar

ಮಂಗಳೂರು :ಪ್ಲಾಸ್ಟಿಕ್ ನ್ನು ನಿಷೇಧಿಸಿ ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿದೆಯಾದರೂ ಇದನ್ನು ಸಂಪೂರ್ಣವಾಗಿ ನಿಷೇಧಿಸುವ ಮತ್ತು ಇದಕ್ಕೆ ಸೂಕ್ತವಾದ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಶ್ರಮದಾಯಕವಾದ ಕೆಲಸ ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಡಾ.ಹರೀಶ್ ಕುಮಾರ್ ಅಭಿಪ್ರಾಯಪಟ್ಟರು. ಪತ್ರಿಕಾಭವನದಲ್ಲಿ ಗುರುವಾರ ನಡೆದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಈ ಹಿಂದಿನ ಜಿಲ್ಲಾಧಿಕಾರಿಯವರು ನಗರದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವಂತೆ ಕಾನೂನು ಜಾರಿಗೊಳಿಸಿ ಆದೇಶ ನೀಡಿದ್ದರೂ ಇದನ್ನು ಜಾರಿಗೊಳಿಸಲು ನ್ಯಾಯಾಲಯದ ತೀರ್ಮಾನ ಬರಬೇಕಿದೆ ಎಂದರು. ಪ್ಲಾಸ್ಟಿಕ್ ಕೈ ಚೀಲಗಳಿಗೆ […]

ಕೇಂದ್ರ ಸರಕಾರದ ಬ್ಯಾಂಕಿಂಗ್ ಕಾನೂನು ತಿದ್ದುಪಡಿ ಮಸೂದೆ ವಿರೋಧಿಸಿ ಪ್ರತಿಭಟನೆ

Friday, December 21st, 2012
Banking Bill

ಮಂಗಳೂರು :ಗುರುವಾರ ಬಲ್ಮಠದಲ್ಲಿರುವ ಕೆನರಾ ಬ್ಯಾಂಕ್‌ ಎದುರು ಅಖಿಲ ಭಾರತ ಬ್ಯಾಂಕ್ ನೌಕರರರ ಸಂಘ, ಅಖಿಲ ಭಾರತೀಯ ಬ್ಯಾಂಕ್ ಅಧಿಕಾರಿಗಳ ಅಸೋಸಿಯೇಶನ್ ಮತ್ತು ಬ್ಯಾಂಕ್ ನೌಕರರ ಒಕ್ಕೂಟ ಜಂಟಿಯಾಗಿ ಬೃಹತ್ ಪ್ರತಿಭಟನೆ ನಡೆಸಿದರು. ಲೋಕಸಭೆಯಲ್ಲಿ ಮಂಡಿಸಿದ ಬ್ಯಾಂಕಿಂಗ್ ತಿದ್ದುಪಡಿ ವಿಧೇಯಕ, ಬ್ಯಾಂಕ್‌ಗಳ ವಿಲೀನ, ದೊಡ್ಡ ಉದ್ದಿಮೆದಾರರಿಗೆ ಖಾಸಗಿ ಬ್ಯಾಂಕ್ ಸ್ಥಾಪಿಸಲು ಪರವಾನಗಿ ನೀಡುವ ವಿರುದ್ಧ ಈ ಪ್ರತಿಭಟನೆಯನ್ನು ನಡೆಸಲಾಯಿತು. ಈ ಸಂದರ್ಭ ಮಾತನಾಡಿದ ಕರ್ನಾಟಕ ಬ್ಯಾಂಕಿಂಗ್ ನೌಕರರ ಸಂಘದ ಕಾರ್ಯದರ್ಶಿ ಪಿ.ಆರ್.ಕಾರಂತ್ ಮಾತನಾಡಿ, ಬ್ಯಾಂಕಿಂಗ್ ಕಾನೂನು ತಿದ್ದುಪಡಿಯಿಂದ […]

ಚುನಾವಣಾ ಗೆಲುವು, ಕರಾವಳಿಯಲ್ಲಿ ಬಿಜೆಪಿ ಸಂಭ್ರಮಾಚರಣೆ

Thursday, December 20th, 2012
BJP Vijayotsav

ಮಂಗಳೂರು :ಗುಜರಾತ್ ವಿಧಾನ ಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಸತತ ಮೂರನೇ ಬಾರಿ ಜಯಭೇರಿ ಭಾರಿಸಿದೆ ಈ ಹಿನ್ನಲೆಯಲ್ಲಿ ಮಂಗಳೂರು ಬಿಜೆಪಿ ಕಚೇರಿ ಮುಂಭಾಗದಲ್ಲಿ ನೆರೆದ ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರು ಪಟಾಕಿ ಸಿಡಿಸಿ, ಸಿಹಿತಿಂಡಿ ಹಂಚುವುದದರ ಮೂಲಕ ಸಂಭ್ರಮ ಆಚರಿಸಿದರು. ಬಿಜೆಪಿ ನಗರಸಮಿತಿ ಅಧ್ಯಕ್ಷರಾದ ಶ್ರೀಕರ ಪ್ರಭು ಮಾತನಾಡಿ, ನರೇಂದ್ರ ಮೋದಿ ದೇಶ ಕಂಡ ಅಪರೂಪದ ರಾಜಕಾರಣಿಯಾಗಿದ್ದು, ತಮ್ಮ ಅಭಿವೃದ್ದಿ ಕಾರ್ಯಗಳಿಂದಲೇ ಗುಜರಾತಿನ ಹಾಗೂ ದೇಶದ ಜನರ ಮನಸ್ಸನ್ನು ಗೆದ್ದಿದ್ದಾರೆ. ವಿರೋಧ […]

ಮುರಿದುಬಿದ್ದ ನಟಿ ಪೂಜಾಗಾಂಧಿ ಮದುವೆ ನಿಶ್ಚಿತಾರ್ಥ

Thursday, December 20th, 2012
Pooja Gandhi

ಬೆಂಗಳೂರು :ಮಳೆ ಹುಡುಗಿಯಾಗಿ ಮಿಂಚಿ, ರಾಜಕಾರಣದಲ್ಲಿಯೂ ಛಾಪು ಮೂಡಿಸುತ್ತಿರುವ ನಟಿ ಪೂಜಾ ಗಾಂಧಿ ಮದುವೆ ನಿಶ್ಚಿತಾರ್ಥ ನವೆಂಬರ್ 15ರಂದು ರಿಯಲ್ ಎಸ್ಟೇಟ್ ಉದ್ಯಮಿ ಆನಂದ್ ಗೌಡ ಅವರೊಂದಿಗೆ ನೆರವೇರಿತ್ತು ಆದರೆ ಇದೀಗ ಮದುವೆ ನಿಶ್ಚಿತಾರ್ಥ ಒಂದೇ ತಿಂಗಳಲ್ಲಿ ಮುರಿದುಬಿದ್ದಿದೆ. ನಿಶ್ಚಿತಾರ್ಥ ಮುರಿದು ಬೀಳಲು ಕಾರಣಗಳೇನೆಂಬುದು ಇನ್ನೂ ಖಚಿತವಾಗಿಲ್ಲ. ಆದರೆ ಪೂಜಾ ಗಾಂಧಿ ತಾಯಿಗೆ ಹಣದಾಸೆ ಜಾಸ್ತಿ, ಹೀಗಾಗಿ ತಾನು ದೂರ ಸರಿದಿರುವುದಾಗಿ ಆನಂದ ಗೌಡ ಅವರು ಮಾಧ್ಯಮಗಳಿಗೆ ಹೇಳಿರುವುದು ಒಂದು ಕಡೆಯಾದರೆ, ಇದೇ ವೇಳೆ, ಈ ಕುರಿತು […]

ಕಿಲಾಡಿ ನಂ.786

Thursday, December 20th, 2012
Khiladi 786

ಅಕ್ಷಯ್ ಕುಮಾರ್ ಅವರ ಅಭಿನಯದ ಸಿನಿಮಾಗಳು ತಿಂಗಳಿಗೊಂದು ರಿಲೀಸ್ ಆಗುತ್ತಿವೆ. ಕಳೆದ ಎರಡು ತಿಂಗಳಲ್ಲಿ ರೌಡಿ ರಾಥೋಡ್, ಓ ಮೈಗಾಡ್ ಸಿನಿಮಾಗಳು ರಿಲೀಸ್ ಆಗಿ ಬಾಕ್ಸ್ ಆಫೀಸ್‌ನಲ್ಲಿ ಗೆದ್ದಿದ್ದವು. ಈಗ ಕಿಲಾಡಿ 786 ಬಂದಿದೆ. ಇಲ್ಲೂ ಅವರು ಪ್ರೇಕ್ಷಕರನ್ನು ನಗಿಸುವ, ರಂಜಿಸುವ ಕೆಲಸ ಮಾಡಿದ್ದಾರೆ. ಇಲ್ಲಿ ಅವರು ಪಂಜಾಬಿ ಡಾನ್ ಮಗನಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಹೀರೊ ನ ಫ್ಯಾಮಿಲಿಗೆ ರೌಡಿಸಂ ನಂಟಿದೆ ಎಂಬ ಕಾರಣಕ್ಕೆ ವಧು ಕೊಡಲು ಯಾರೂ ಮುಂದೆ ಬರುವುದಿಲ್ಲ. ಹಾಗಾಗಿ ಇಂಡಿಯಾದಲ್ಲಿ ಹೆಣ್ಣು ಸಿಗಲಿಲ್ಲ […]

ಎಂಡೋಸಲ್ಫಾನ್ ಬಾಧಿತರಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಎಬಿವಿಪಿ ಪ್ರತಿಭಟನೆ

Thursday, December 20th, 2012
ABVP Protest

ಮಂಗಳೂರು :ಎಂಡೋಸಲ್ಫಾನ್ ಬಾಧಿತರಿಗೆ ಸೂಕ್ತ ರೀತಿಯ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸಬೇಕೆಂದು ಒತ್ತಾಯಿಸಿ ಬುಧವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವಿಭಾಗ ವತಿಯಿಂದ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಕೊಕ್ಕಡ ಗ್ರಾಮದ ಎಂಡೋಸಲ್ಫಾನ್ ಹೋರಾಟ ಸಮಿತಿಯ ಅಧ್ಯಕ್ಷ ಶ್ರೀಧರ್ ಮಾತನಾಡಿ, 1980ರಿಂದ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 92 ಗ್ರಾಮಗಳಲ್ಲಿ ಎಂಡೋಸಲ್ಫಾನನ್ನು ಹೆಲಿಕಾಫ್ಟರ್ ಮುಖಾಂತರ ಸಿಂಪಡನೆ ಮಾಡಲಾಯಿತು.1980ರ ಸಂದರ್ಭದಲ್ಲಿ ಗೇರು ಬೆಳೆಗೆ ನುಸಿ ಬಾಧೆ ಪ್ರಾರಂಭವಾದ ಸಂದರ್ಭದಲ್ಲಿ ಕೇರಳ ಗೇರು ಬೀಜ ನಿಗಮ […]

ವಿವಿಧ ಕಾರ್ಮಿಕ ಸಂಘಟನೆಗಳಿಂದ ಬೆಲೆಯೇರಿಕೆ ವಿರೋಧಿಸಿ ಜೈಲ್ ಭರೋ ಚಳುವಳಿ

Thursday, December 20th, 2012
jail bharo

ಮಂಗಳೂರು :ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಿವಿಧ ಕಾರ್ಮಿಕ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಮಿಕರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಜೈಲ್‌ ಭರೋ ಚಳವಳಿ ನಡೆಸಿದರು. ಸಿಐಟಿಯು, ಎಐಟಿಯುಸಿ, ಬಿಎಂಎಸ್‌, ಎಐಸಿಸಿಟಿಯು, ಇಂಟಕ್‌, ಎಚ್‌ಎಂಎಸ್‌ ಮೊದಲಾದ ವಿವಿಧ ಸಂಘಟನೆಗಳಿಗೆ ಸೇರಿದ ಕಾರ್ಮಿಕರು ಹಾಗು ಮುಖಂಡರುಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸಿಪಿಐಎಂ ಜಿಲ್ಲಾಧ್ಯಕ್ಷ ಹಾಗೂ ಸಿಐಟಿಯು ರಾಜ್ಯಾಧ್ಯಕ್ಷ ಬಿ.ಮಾದವ ರವರು ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬಹುರಾಷ್ಟ್ರೀಯ ಕಂಪನಿಗಳು ಹಾಗೂ ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳ ಜತೆ ಸೇರಿಕೊಂಡು […]