ಮಾಡೂರಿನ ವ್ಯಕ್ತಿಯ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆ

Wednesday, May 15th, 2019
Lokesh-body

ಮಂಗಳೂರು  : ಕೋಟೆಕಾರ್ ಸಮೀಪದ ಮಾಡೂರಿನಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರ ಮೃತದೇಹ ರಾ.ಹೆ.66ರ ಉಳ್ಳಾಲ ನೇತ್ರಾವತಿ ನದಿಯಲ್ಲಿ ಮೇ 15 ರ ಬುಧವಾರ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಕೋಟೆಕಾರ್ ಸಮೀಪದ ಮಾಡೂರಿನ ಲೋಕೇಶ್ ಎಂದು ಗುರುತಿಸಲಾಗಿದೆ. ಇವರು ಕಳೆದ ಮೂರು ದಿನದ ಹಿಂದೆ ಕಾಣೆಯಾಗಿದ್ದು, ನದಿಗೆ ಹಾರಿ ಆತ್ಮಹತ್ಯೆಗೈದಿರಬೇಕು ಎಂದು ಶಂಕಿಸಲಾಗಿದೆ. ಕೃತ್ಯಕ್ಕೆ ಕಾರಣ ಏನು ಎಂದು ತಿಳಿದು ಬಂದಿಲ್ಲ. ಮೃತದೇಹ ಸಂಪೂರ್ಣವಾಗಿ ಊದಿಕೊಂಡಿದ್ದು ಗುರುತು ಪತ್ತೆಯಾಗ್ದ ಸ್ಥಿತಿಯಲ್ಲಿದೆ. ಉಳ್ಳಾಲ ನೇತ್ರಾವತಿ ಸೇತುವೆಯಡಿ ಮೃತದೇಹ ತೇಲುವುದನ್ನು ಕಂಡ ಸಾರ್ವಜನಿಕರು […]

ಮಳೆಗಾಗಿ ಮುಸ್ಲಿಮರಿಂದ ಸಾಮೂಹಿಕ ಪ್ರಾರ್ಥನೆ

Wednesday, May 15th, 2019
Prayer

ಮಂಗಳೂರು : ರಂಜಾನ್ ಮಾಸದಲ್ಲಿ ದಕ್ಷಿಣ ಕನ್ನಡದ ಬರಗಾಲದ ಛಾಯೆ ಆವರಿಸಿದ್ದು ಜನ ನೀರಿಗಾಗಿ ಪರದಾಡುತ್ತಿದ್ದಾರೆ  ಹೀಗಾಗಿ ಮುಸ್ಲಿಮರು ಬುಧವಾರ ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ಮಾಡಿದರು. ನೆಹರೂ ಮೈದಾನದಲ್ಲಿ ಬುಧವಾರ ಬೆಳಗ್ಗೆ 7 ಗಂಟೆಗೆ ಮುಸ್ಲಿಮರು ಶೇಖ್ ಸಕೀಬ್ ಸಲೀಂ ಉಮ್ರಿ ಅವರ ನೇತೃತ್ವದಲ್ಲಿ ಪ್ರಾರ್ಥನೆ ಮಾಡಿದರು. ರಂಜಾನ್ ಮಾಸದಲ್ಲಿ ಪ್ರಾರ್ಥನೆ ಸಲ್ಲಿಸಿದರೆ ಈಡೇರುತ್ತದೆ ಎಂದು ಎಲ್ಲರು ಒಟ್ಟಿಗೆ ಸೇರಿ ಪ್ರಾರ್ಥನೆ ಸಲ್ಲಿಸಿರುವರು. ಅಲ್ಲಾಹು ಮನಸ್ಸು ಮಾಡಿದರೆ ಮಳೆ ಬರುವುದು. ಮಳೆ ಬಂದರೂ ಕಷ್ಟ ಬರದೇ ಇದ್ದರೂ […]

ನೀರುಮಾರ್ಗದ ಅನಂತ ಪದ್ಮನಾಭ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜೆಗೆ ಬಂದ ನವಿಲು

Wednesday, May 15th, 2019
Peacock

ಮಂಗಳೂರು : ಮಂಗಳೂರು ಹೊರವಲಯದ ನೀರುಮಾರ್ಗದ ಅನಂತ ಪದ್ಮನಾಭ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಉತ್ಸವದ ಸಂದರ್ಭದಲ್ಲಿ ದೇವರಿಗೆ ಅರ್ಪಿಸಿದ ಧ್ವಜಸ್ತಂಭಕ್ಕೆ ತೈಲಧಿವಾಸ ಪೂಜೆಯಲ್ಲಿ ಸುಬ್ರಹ್ಮಣ್ಯನ ವಾಹನ ನವಿಲು ಪ್ರತ್ಯಕ್ಷವಾಗಿ ಭಕ್ತರಲ್ಲಿ ಅಚ್ಚರಿಯನ್ನು ಮೂಡಿಸಿದೆ. ಸೋಮವಾರ ನವಿಲು ಯಾವುದೇ ಅಳುಕಿಲ್ಲದೇ ಭಕ್ತರ ಜೊತೆ ಪೂಜೆಯಲ್ಲಿ ಭಾಗಿಯಾಗಿ ಅಚ್ಚರಿ ಮೂಡಿಸಿದೆ. ದೇವರ ಪೂಜೆ ಸಂದರ್ಭದಲ್ಲಿ ನವಿಲು ದೇಗುಲದ ಒಳಭಾಗದ ಅಂಗಣದಲ್ಲಿ ಪ್ರದಕ್ಷಿಣೆ ಹಾಕಿದ್ದಲ್ಲದೆ, ಜನರ ಜೊತೆಯೇ ನಡೆದುಬಂದಿದ್ದು ಅಚ್ಚರಿಗೆ ಕಾರಣವಾಗಿದೆ. ಅಲ್ಲದೇ, ಸುಬ್ರಹ್ಮಣ್ಯನಿಗೆ ಗರ್ಭಗುಡಿಯಲ್ಲಿ ಪೂಜೆ ನಡೆಯುತ್ತಿದ್ದಾಗ ಮುಂಭಾಗದಲ್ಲಿ ನವಿಲು ನಿಂತಿರುವುದು […]

ಶ್ರೀ ಕ್ಷೇತ್ರ ಕದ್ರಿಯಲ್ಲಿ ಮಳೆ, ಬೆಳೆಗಾಗಿ ಸೀಯಳಾಭಿಷೇಕ

Tuesday, May 14th, 2019
Shiyalabhisheka

ಮಂಗಳೂರು  : ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಕಲ್ಕೂರ ಪ್ರತಿಷ್ಠಾನ, ಹತ್ತು ಸಮಸ್ತರು, ಸಾರ್ವಜನಿಕ ಸಂಘಸಂಸ್ಥೆಗಳ ಸಹಯೋಗದಲ್ಲಿ ಮೇ 14, ಮಂಗಳವಾರದಂದು ಬೆಳಿಗ್ಗೆ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಎ.ಜೆ. ಶೆಟ್ಟಿಯವರ ನೇತೃತ್ವದಲ್ಲಿ ಲೋಕಕಲ್ಯಾಣಾರ್ಥ, ಸುಭಿಕ್ಷೆ ಮಳೆ, ಬೆಳೆ, ಫಲಪ್ರಾಪ್ತಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಸೀಯಾಳಾಭಿಷೇಕ ನಡೆಸಲಾಯಿತು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷಎಸ್. ಪ್ರದೀಪ ಕುಮಾರ ಕಲ್ಕೂರ ಉಪಸ್ಥಿತರಿದ್ದರು. ಊರಹತ್ತು ಸಮಸ್ತರು, ಜನ ಪ್ರತಿನಿಧಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿಕಲ್ಕೂರ ಪ್ರತಿಷ್ಠಾನವು ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಸಂದರ್ಭ […]

ಸದಸ್ಯರ ಆರ್ಥಿಕ ಸಾಕ್ಷರತೆಯು ಸಹಕಾರ ಸಂಸ್ಥೆಗಳ ಗುರಿ – ಹರೀಶ್‌ಆಚಾರ್

Tuesday, May 14th, 2019
Vishwa Karmabank

ಮಂಗಳೂರು  : ಸಹಕಾರಿ ಸಂಸ್ಥೆಗಳು ಕೇವಲ ಲಾಭಗಳಿಸುವ ಉದ್ದೇಶದಿಂದ ಕೆಲಸ ಮಾಡುವುದಲ್ಲ. ಸಹಕಾರಿ ಸಂಸ್ಥೆಗಳಿಗೆ ಸಾಮಾಜಿಕ ಜವಾಬ್ದಾರಿಯೂ ಇದೆ. ಸದಸ್ಯರ ಅಗತ್ಯತೆಗೆ ತಕ್ಕಂತೆ ಸಮುದಾಯ ಅಭಿವೃದ್ಧಿಯ ರಚನಾತ್ಮಕ ಕಾರ್ಯಕ್ರಮಗಳನ್ನು ಯೋಜಿಸಬೇಕು. ಸದಸ್ಯರಲ್ಲಿ ಆರ್ಥಿಕ ಶಿಸ್ತು ಮತ್ತು ಯೋಜನೆಯ ಬಗ್ಗೆ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಸಹಕಾರಿ ಸಂಸ್ಥೆಗಳು ಮಾಡಬೇಕಾಗಿದೆ ಎಂದು ವಿಶ್ವಕರ್ಮ ಸಹಕಾರ ಬ್ಯಾಂಕ್‌ನ ಅಧ್ಯಕ್ಷರಾದ ಶ್ರೀ ಹರೀಶ್‌ಆಚಾರ್ ಹೇಳಿದರು. ಅವರು ವಿಶ್ವಕರ್ಮ ಸಹಕಾರ ಬ್ಯಾಂಕ್‌ನ ೪೩ನೇ ಸ್ಥಾಪನಾ ದಿನಾಚರಣೆಯಕಾರ್ಯಕ್ರಮದಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸೌತ್ […]

ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ವಿಜಯನಗರ ಕಾಲದ ಶಾಸನ ಬೆಳಕಿಗೆ

Tuesday, May 14th, 2019
Shasana

ಮಂಗಳೂರು  : ಬೆಳ್ತಂಗಡಿ ತಾಲೂಕಿನ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ತೀವ್ರ ನಿರ್ಲಕ್ಷಕ್ಕೆ ಒಳಗಾಗಿದ್ದ ವಿಜಯನಗರ ಸಾಮ್ರಾಜ್ಯದ ಅಮೂಲ್ಯ ಶಿಲಾಶಾಸನವೊಂದು ಬೆಳಕಿಗೆ ಬಂದಿದೆ. ಮಧ್ಯದಲ್ಲಿ ತುಂಡರಿಸಲ್ಪಟ್ಟ ಈ ಜೀರ್ಣಗೊಂಡ ಶಾಸನವನ್ನು ಈಗ ಕಬ್ಬಿಣದ ಪಂಜರ ಒಂದರಲ್ಲಿಟ್ಟು ಸಂರಕ್ಷಿಸಿಡಲಾಗಿದೆ. ಆಳೆತ್ತರದ ಶಿಲಾ ಫಲಕದ ಮೇಲೆ ಸುಮಾರು ನಲ್ವತ್ತಏಳು ದೀರ್ಘಪಂಕ್ತಿಗಳಲ್ಲಿ ಇದನ್ನು ಬರೆಯಲಾಗಿದೆ. ಕನ್ನಡ ಭಾಷೆ ಹಾಗೂ ಕನ್ನಡ ಲಿಪಿಯಲ್ಲೇ ಇದ್ದರೂ ಇದನ್ನು ಯಾರೂ ಅಧ್ಯಯನ ಮಾಡಲು ಪ್ರಯತ್ನಸಿರಲಿಲ್ಲ. ನಿವೃತ್ತ ಇತಿಹಾಸ ಪ್ರಾಧ್ಯಾಪಕರೂ, ಶಾಸನ ತಜ್ಞರೂ ಆದ ಡಾ| […]

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಂಜಾನ್ ವೃತ ಆಚರಣೆ

Tuesday, May 14th, 2019
Ramzan

ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಂಜಾನ್ ಮೊದಲ ದಿನದ ಆಚಣೆಯನ್ನು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅಗಮಿಸಿದ ಉದ್ಯಮಿ ಅಬುಲಾಲ್ ಪುತ್ತಿಗೆ ಆಳ್ವಾಸ್ ಕಾಲೇಜಿನಲ್ಲಿ ಸರ್ವ ಧರ್ಮವನ್ನು ಗೌರವಿಸುವ ಸಂಸ್ಥೆ ಅದ್ದರಿಂದ ಇಲ್ಲಿನ ವಿದ್ಯಾರ್ಥಿಗಳು ಪುಣ್ಯವಂತರು. ನಾವೆಲ್ಲರು ಸಮಾಜದಲ್ಲಿ ಬೆರೆತು ಬಾಳುವುದರ ಜೊತೆಗೆ ಸಮಾಜದ ಉನ್ನತಿಗೆ ಶ್ರಮಿಸಬೇಕು. ಎಲ್ಲರನ್ನು ಗೌರವಿಸಿ, ಎಲ್ಲ ಧರ್ಮವನ್ನು ಗೌರವಿಸುವ ಪ್ರಜೆಗಳಾಬೇಕೆಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೆಜಿಂಗ್ ಟ್ರಸ್ಟೀ ವಿವೇಕ್ ಆಳ್ವ, ಉದ್ಯಮಿ ಮುಸ್ತಾಪ, ಇಂಜಿನಿಯರ್ ಮೊಹಮ್ಮದ್ ಶರೀಫ್, ಸಿ.ಎಚ್. […]

ಲಂಚ ಸ್ವೀಕರಿಸಿದ ಕೊಕ್ಕಡ ಗ್ರಾಪಂ ಅಧ್ಯಕ್ಷ ಅಮಾನತು

Monday, May 13th, 2019
sebastian

ಮಂಗಳೂರು : ಕೊಕ್ಕಡ ಗ್ರಾಪಂ ಅಧ್ಯಕ್ಷ ವಿ.ಜೆ.ಸೆಬಾಸ್ಟಿಯನ್ ಅವರ ಅಧ್ಯಕ್ಷ ಸ್ಥಾನ ಮತ್ತು ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧೀನ ಕಾರ್ಯದರ್ಶಿ ಹಾಗೂ ಉಪ ನಿರ್ದೇಶಕ ಮುಬಾರಕ್ ಅಹ್ಮದ್ ಆದೇಶ ಹೊರಡಿಸಿದ್ದಾರೆ. 2017-18ನೇ ಸಾಲಿನಲ್ಲಿ ನಡೆಸಿರುವ ವಿವಿಧ ಕಾಮಗಾರಿಗಳ ಹಣಕಾಸು ಮಂಜೂರು ಮಾಡಲು ಗುತ್ತಿಗೆದಾರ ಉಮರ್ ಅಲಿಯಾಸ್, ಇಬ್ರಾಹೀಂ ಎಂಬವರಿಗೆ 50 ಸಾವಿರ ರೂ. ಲಂಚ ನೀಡುವಂತೆ ವಿ.ಜೆ.ಸೆಬಾಸ್ಟಿಯನ್ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ 20 ಸಾವಿರ […]

ದೈವ ಪಾತ್ರಿಯ ಮೇಲೆ ಹಲ್ಲೆ ನಡೆಸಿದ ಯುವಕರು

Monday, May 13th, 2019
Patri

ಮಂಗಳೂರು : ದೈವ ಪಾತ್ರಿಯೊಬ್ಬರ ತಲೆ ಬೋಳಿಸಿ ಹಲ್ಲೆ ನಡೆಸಿದ ಘಟನೆ ಮಂಗಳೂರಿನ ನಗರದ ಬಿಕರ್ನಕಟ್ಟೆ ಎಂಬಲ್ಲಿ ನಡೆದಿದ್ದು, ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ದೈವಪಾತ್ರಿಯೊಬ್ಬರಿಗೆ ಮಹಿಳೆಯರೂ ಸಹಿತ ಕೂದಲನ್ನು ಬಲವಂತವಾಗಿ ಕತ್ತರಿಸಿ ಹಲ್ಲೆ ನಡೆಸಿರುವುದು ದಾಖಲಾಗಿದೆ. ಇಲ್ಲಿಯ ಸ್ಥಳೀಯ ದೈವ ಪಾತ್ರಿ ಲೋಕೇಶ್ ಪೂಜಾರಿ ಅವರ ಮೇಲೆ ಈ ಹಲ್ಲೆ ನಡೆಸಲಾಗಿದ್ದು, ದೈವದ ನರ್ತನ ಸೇವೆ ನಡೆದ ಬಳಿಕ ಕೆಲವರು ಸೇರಿ ಈ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಲೋಕೇಶ್ ಅವರಿಗೆ […]

ಕದ್ರಿ ಶ್ರೀ ಮಂಜುನಾಥ ದೇವರಿಗೆ ಸಂಭ್ರಮದ ಬ್ರಹ್ಮಕಲಶಾಭಿಷೇಕ

Saturday, May 11th, 2019
Kadri Manjunatha

ಮಹಾನಗರ: ಕದ್ರಿ ಮಠಾಧೀಶ ಶ್ರೀ ರಾಜಾ ನಿರ್ಮಲ ನಾಥ್‌ ಜೀ ಅವರ ಉಪಸ್ಥಿತಿ ಯಲ್ಲಿ ದೇರೆ ಬೈಲ್‌ ಬ್ರಹ್ಮಶ್ರೀ ವಿಟಲದಾಸ್‌ ತಂತ್ರಿಯವರ ನೇತೃತ್ವದಲ್ಲಿ ಕದ್ರಿ ಶ್ರೀ ಮಂಜುನಾಥ ದೇವರಿಗೆ  ಬೆಳಗ್ಗೆ 7 ಗಂಟೆಯಿಂದಲೇ ಕಲಶಾಭಿಷೇಕ ಪ್ರಾರಂಭವಾಗಿ, 9.35ರ ಮಿಥುನ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ ಗುರುವಾರ ನಡೆಯಿತು. ಬಳಿಕ ಪ್ರಾಚೀನ ಮೂರ್ತಿಗಳಿಗೆ ವಿಶೇಷ ಕಲಶಾಭಿಷೇಕ, ಅವಸ್ರುತ ಬಲಿ ಜರಗಿ ಶ್ರೀ ದೇವರಿಗೆ ಮಹಾ ಪೂಜೆ ನಡೆ ಯಿತು. ಸಹಸ್ರಾರು ಭಕ್ತರು ಬ್ರಹ್ಮಕಲ ಶಾಭಿಷೇಕವನ್ನು ಕಣ್ತುಂಬಿಕೊಂಡು ಶ್ರೀ ದೇವರ ದರ್ಶನ ಪಡೆದರು. […]