ನಕಲಿ ದಾಖಲೆ ಸೃಷ್ಟಿಸಿ ವಂಚನೆ ಹಿನ್ನಲೆಯಲ್ಲಿ ವಿದ್ಯಾರ್ಥಿ ಬಂಧನ

Saturday, May 11th, 2013
Fazil

ಕಾಸರಗೋಡು : ನಕಲಿ ದಾಖಲೆ ಸೃಷ್ಟಿಸಿ ವಂಚನೆ ನಡೆಸಿರುವ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಬಿಬಿಎಂ ಓದುತ್ತಿರುವ ತಿರುವನಂತಪುರ ಮೂಲದ ಫಾಸಿಲ್ ಎಂಬಾತನನ್ನು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮಂಜೇಶ್ವರ ಹೊಸಂಗಡಿಯ ಅಬ್ದುಲ್ ಸುನೈರ್ ಮುನೀರ್ ಎಂಬುವವರ ಡ್ರೈವಿಂಗ್ ಲೈಸನ್ಸನ್ನು ದುರುಪಯೋಗಪಡಿಸಿಕೊಂಡ ಆರೋಪಿ ಫಸೀಲ್, ಸುನೈರ್ ನ ಹೆಸರಲ್ಲಿ ಬ್ಯಾಂಕ್ ನಕಲಿ ದಾಖಲೆ ಸೃಷ್ಟಿಸಿ  ಖಾತೆ ತೆರೆದು ಬ್ಯಾಂಕ್ ನಿಂದ ಹಣ ಪಡೆದು ವಂಚನೆ ನಡೆಸಿದ್ದಾನೆ. ಆರೋಪಿ ಬ್ಯಾಂಕ್ ಗೆ ಸುಮಾರು ೩.೫೦ ಲಕ್ಷ ರೂಪಾಯಿ ವಂಚಿಸಿದ್ದಾಗಿ ತಿಳಿದು ಬಂದಿದೆ. […]

ಉಪ್ಪಿನಂಗಡಿ ಬಳಿಯ ಪೆರ್ನೆ ಅಗ್ನಿ ದುರಂತ ಮಡಿದವರಿಗೆ ತಲಾ 1ಲಕ್ಷ ರೂಪಾಯಿ ಪರಿಹಾರ ಘೋಷಣೆ

Wednesday, April 10th, 2013
DC Harsha Gupta

ಮಂಗಳೂರು : ಉಪ್ಪಿನಂಗಡಿ ಸಮೀಪದ ಪೆರ್ನೆ, ರಾಷ್ಟೀಯ ಹೆದ್ದಾರಿ 75ರಲ್ಲಿ ಮಂಗಳವಾರ ಸಂಭವಿಸಿದ ಭೀಕರ ಅನಿಲ ಟ್ಯಾಂಕರ್ ದುರಂತದಲ್ಲಿ ಮಡಿದವರಿಗೆ ತಲಾ 1ಲಕ್ಷ ರೂಪಾಯಿಗಳ ಪರಿಹಾರವನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶ್ರೀ ಹರ್ಷ ಗುಪ್ತ ಅವರು ಘೋಷಿಸಿದ್ದಾರೆ. ಶೇ.50 ಕ್ಕಿಂತಲೂ ಹೆಚ್ಚು ಸುಟ್ಟು ಗಾಯಗೊಂಡ ವ್ಯಕ್ತಿಗೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ಹಾಗೂ ಶೇ.50ಕ್ಕಿಂತಲೂ ಕಡಿಮೆ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ತಕ್ಷಣ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಮತ್ತು ಸಂಬಂಧಪಟ್ಟ ಅನಿಲ ಸರಬರಾಜು […]

ಮುಂಡ್ಕೂರಿನ ಬೆಳ್ಮಣ್ ಬಳಿ ಟಿಪ್ಪರ್ ಪಲ್ಟಿ, ಓರ್ವನ ಸಾವು

Tuesday, April 9th, 2013
Truck overturns at Karkala

ಕಾರ್ಕಳ : ಸೋಮವಾರ ಸಂಜೆ 4.30ರ ಸುಮಾರಿಗೆ ಕಾರ್ಕಳದಿಂದ ಮುಂಡ್ಕೂರಿಗೆ ಇಂಟರ್‌ಲಾಕ್‌ ತುಂಬಿಕೊಂಡು ಹೋಗುತ್ತಿದ್ದ ಟಿಪ್ಪರ್ ವೊಂದು ಬೆಳ್ಮಣ್ ಇಂದಾರು ತಿರುವು ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಓರ್ವ ಸ್ಥಳದಲ್ಲೆ ಮೃತಪಟ್ಟರೆ ಚಾಲಕನ ಸಹಿತ ೪ ಮಂದಿ ಗಾಯಗೊಂಡಿದ್ದು, ಇನ್ನೋರ್ವನ ಸ್ಥಿತಿ ಚಿಂತಾಜನಕವಾಗಿದೆ. ಮೃತಪಟ್ಟವರು ಯಾದಗಿರಿ ಮೂಲದವರಾಗಿದ್ದು, ಇತರರ ವಿವರ ತಿಳಿದು ಬಂದಿಲ್ಲ. ಅಪಘಾತ ನಡೆದ ಸ್ಥಳದಲ್ಲಿ ರಬ್ಬರ್‌ ಮೌಲ್ಡಿಂಗ್‌ ಚೆಲ್ಲಾ ಪಿಲ್ಲಿಯಾಗಿದ್ದು ಗಾಯಗೊಂಡವರ ಪೈಕಿ ಓರ್ವನ ಕಾಲು, ತಲೆಗಳಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಮಣಿಪಾಲ […]

ಸಿದ್ದರಾಮಯ್ಯ ರಾಜ್ಯದ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ

Tuesday, April 9th, 2013
Siddaramaiah CM candidate

ಉಡುಪಿ : ಬಿಜೆಪಿಯ ಭದ್ರ ಕೋಟೆಯಾಗಿದ್ದ ಉಡುಪಿಯಲ್ಲಿ ಸ್ಥಳೀಯ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಹಿನ್ನಲೆಯಲ್ಲೆ ರಾಜ್ಯದಲ್ಲೂ ಇದೀಗ ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಿಶ್ವಾಸ ಹೊಂದಿರುವ ಉಡುಪಿ ಕಾಂಗ್ರೆಸ್ ಕಾರ್ಯಕರ್ತರು ಆಸ್ಪತ್ರೆಯಲ್ಲಿ ಗುಣಮುಖರಾಗುತ್ತಿರುವ ಸಿದ್ದರಾಮಯ್ಯ ನವರೆ ರಾಜ್ಯದ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂಬುದಾಗಿ ಘೋಷಿಸಿದ್ದಾರೆ. ಸೋಮವಾರ ಉಡುಪಿ ತಾಲುಕಿನ ಪರ್ಕಳದಲ್ಲಿರುವ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಿದ್ದಾರಮಯ್ಯನವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಿದ ಕಾಂಗ್ರೆಸ್ ಕಾರ್ಯಕರ್ತರು ಸಿದ್ದರಾಮಯ್ಯನವರೆ ಮುಖ್ಯಮಂತ್ರಿಯಾಗಬೇಕೆಂದು ಪ್ರಾರ್ಥಿಸಿ ದೇವಾಲಯದಲ್ಲಿ  ವಿಶೇಷ ಪೂಜೆ ಸಲ್ಲಿಸಿದರು.

ಉಡುಪಿ : ಕಿಡಿಗೇಡಿಗಳಿಂದ ನೇಜಾರ್ ನಲ್ಲಿ ಮಸೀದಿ ಮೇಲೆ ಕಲ್ಲೆಸೆತ

Wednesday, April 3rd, 2013
Nejar mosque

ಉಡುಪಿ : ನೇಜಾರ್ ಗ್ರಾಮದಲ್ಲಿ ಕೆಲವು ದಿನಗಳಿಂದ ಕೋಮು ದ್ವೇಷ ಕೆರಳಿಸುವ ಸಣ್ಣ ಪುಟ್ಟ ಘಟನೆಗಳು ನಡೆಯುತ್ತಿದ್ದು, ನಿನ್ನೆ ಈ ಹಿನ್ನಲೆಯಲ್ಲಿ ಕೆಲವು ಕಿಡಿಗೇಡಿಗಳು ನೇಜಾರ್ ನಲ್ಲಿರುವ ಮಸೀದಿಗೆ ಕಲ್ಲೆಸೆದಿದ್ದಾರೆ. ಮಂಗಳವಾರ ರಾತ್ರಿ ನೆಜಾರ್ ನಲ್ಲಿರುವ ವ್ಯಕ್ತಿಯೊಬ್ಬರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗುಪೊಂದು ಅನ್ಯಕೋಮಿನ ವ್ಯಕ್ತಿಯ   ಮೇಲೆ ಹಲ್ಲೆ ನಡೆಸಿ ಬಳಿಕ ಅದೇ ಗುಂಪು ಇಲ್ಲಿರುವ ಮಸೀದಿಯ ಮೇಲೂ ಕಲ್ಲೆಸೆದಿದ್ದಾರೆ.  ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫ್ರೆಂಚ್‌ ಸೈನಿಕರ ಗುಂಡಿಗೆ ಬಲಿಯಾದ ಕೃಷ್ಣಯ್ಯ ಮೊಗವೀರರ ಅಂತ್ಯಸಂಸ್ಕಾರ

Tuesday, April 2nd, 2013
Krishnaiah Mogaveera

ಕುಂದಾಪುರ : ಮಧ್ಯ ಆಫ್ರಿಕಾದ ಬಾಂಗ್ವೆ ವಿಮಾನ ನಿಲ್ದಾಣದಲ್ಲಿ ಫ್ರೆಂಚ್‌ ಸೈನಿಕರ ಗುಂಡಿಗೆ ಬಲಿಯಾದ ಕುಂದಾಪುರ ಬಳ್ಕೂರಿನ ಕೃಷ್ಣಯ್ಯ ಮೊಗವೀರ ಅವರ ಪಾರ್ಥಿವ ಶರೀರ ಶರೀರವನ್ನು ಸೋಮವಾರ ಮಧ್ಯಾಹ್ನ ಹುಟ್ಟೂರಿಗೆ  ತರಲಾಯಿತು. ಫ್ರಾನ್ಸ್‌ ರಾಯಭಾರ ಕಚೇರಿಯ ಎರಿಕ್‌ ಲೆವೆರ್ಟೊ ಅವರು  ಫ್ರೆಂಚ್‌ ಸೈನಿಕರ ಗುಂಡಿಗೆ ಬಲಿಯಾದ ಕೃಷ್ಣಯ್ಯ ಮೊಗವೀರ ಅವರ ಪಾರ್ಥಿವ ಶರೀರ ಹುಟ್ಟೂರು ತಲುಪುವ ಮುನ್ನ  ಬಳ್ಕೂರಿನ ಮೃತರ ಮನೆಗೆ ಆಗಮಿನಿಸಿ ಫ್ರೆಂಚ್‌ ಸೈನಿಕರಿಂದ ಆದ ಈ ಕೃತ್ಯಕ್ಕೆ ವಿಷಾದ ವ್ಯಕ್ತಪಡಿಸಿದರು. ಊರಿನ ಸಾವಿರಾರು ಮಂದಿ ಕೃಷ್ಣಯ್ಯ ಅವರ […]

ಕುಲಶೇಖರದ ಬಳಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಬಸ್

Monday, April 1st, 2013
Bus overturns at Kulashekar

ಮಂಗಳೂರು : ಮಂಗಳಾದೇವಿಯಿಂದ ಶಕ್ತಿನಗರಕ್ಕೆ ತೆರಳುತ್ತಿದ್ದ ಬಸ್ಸೊಂದು ಕುಲಶೇಖರ ಕಲ್ಪನೆ ಸಮೀಪ  ಚಾಲಕನ ನಿಯಂತ್ರಣ ತಪ್ಪಿ ಉರು ಳಿ ಬಿದ್ದ ಘಟನೆ ಶನಿವಾರ ನಡೆದಿದೆ. ಶನಿವಾರ ಸಂಜೆ 7 ಗಂಟೆ ಸುಮಾರಿಗೆ 6-ಡಿ ನಂಬರ್‌ನ ಅಂಬಿಕಾ ಬಸ್ ಕಲ್ಪನೆ ಸಮೀಪ ತೆರಳುತ್ತಿದ್ದಂತೆ ಅದರ ಚಾಲಕ ರಸ್ತೆ ಯಾ ತೀರಾ ಎಡ ಬಲಕ್ಕೆ ಬಸ್ ಚಲಾಯಿಸಿದ ಸಂದರ್ಭ ರಸ್ತೆ ಚರಂಡಿ ದಾಟಿ ಸ್ವಲ್ಪ ಎತ್ತರದ ಜಾಗಕ್ಕೆ ಬಸ್ ಚಲಿಸಿತು ಇದರಿಂದಾಗಿ ಬಸ್  ಚಾಲಕನ ನಿಯಂತ್ರಣ ಕಳೆದುಕೊಂಡಿತು. ತಕ್ಷಣ ಬಸ್‌ನ್ನು […]

ಕುಂದಾಪುರ : ನಿಂತಿದ್ದ ಲಾರಿಗೆ ಜೀಪ್ ಡಿಕ್ಕಿ ಕ್ರೈಮ್ ವಿಭಾಗದ ಪಿ.ಎಸ್.ಐ. ರೇವತಿ ಗಂಬೀರ

Saturday, March 30th, 2013
kundapur jeep lory mishap

ಕುಂದಾಪುರ : ಕುಂದಾಪುರ ಕ್ರೈಮ್ ವಿಭಾಗದ ಪಿ.ಎಸ್.ಐ. ರೇವತಿ ಹಾಗೂ ಜೀಪ್ ಚಾಲಕ ರಾಮ ಗುರುವಾರ ರಾತ್ರಿ ಕುಂದಾಪುರ ತಾಲೂಕಿನ ವಡೇರಹೋಬಳಿ ಗ್ರಾಮದ ಶಾಸ್ತ್ರಿ ಪಾರ್ಕ್‌ ಹತ್ತಿರ ನಿಲ್ಲಿಸಿದ್ದ ಲಾರಿಗೆ ಡಿಕ್ಕಿ  ಹೊಡೆದ ಪರಿಣಾಮ ಕುಂದಾಪುರ ಕ್ರೈಮ್ ವಿಭಾಗದ ಪಿ.ಎಸ್.ಐ. ರೇವತಿ ಹಾಗೂ ಚಾಲಕ ರಾಮ ಗಂಬೀರವಾಗಿ ಗಾಯಗೊಂಡಿದ್ದಾರೆ. ಪಿ.ಎಸ್.ಐ. ರೇವತಿ ಹಾಗೂ ಚಾಲಕ ರಾಮ ಕುಂಭಾಶಿ ಕಡೇಯೀಂದ ಕುಂದಾಪುರದ ಕಡೆಗೆ ಹಿಂದಿರುಗುತ್ತಿದ್ದ ವೇಳೆ ರಸ್ತೆಯಲ್ಲಿ ಜೀಪಿಗೆ ಸಂಗಮ್ ಕಡೆಯಿಂದ ವಾಹನವೊಂದು ರಸ್ತೆಯ ಬಲಬದಿಗೆ ಬಂದ ಕಾರಣ ಅಪಘಾತವಾಗುವುದನ್ನು ತಪ್ಪಿಸಲು,  ರಸ್ತೆಯ ಎಡಬದಿಗೆ ಜೀಪನ್ನು ಚಲಾಯಿಸಿಲಾಯಿತು ಪರಿಣಾಮ ರಾಷ್ಟ್ರೀಯ ಹೆದ್ದಾರಿಯ ಎಡಬದಿಯಲ್ಲಿ […]

ಕಾಸರಗೋಡು : ಮೊಗ್ರಾಲ್ ಪುತ್ತೂರು ಪೇಟೆಯಲ್ಲಿ ಭೀಕರ ರಸ್ತೆ ಅಪಘಾತ ಬೈಕ್ ಸವಾರರಿಬ್ಬರ ಸಾವು

Saturday, March 30th, 2013
Mishap at Mogral Puttur

ಕಾಸರಗೋಡು : ರಾಷ್ಟ್ರೀಯ ಹೆದ್ದಾರಿಯ ಮೊಗ್ರಾಲ್ ಪುತ್ತೂರು ಪೇಟೆಯಲ್ಲಿ ಗುರುವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಮೃತರನ್ನು ಮೊಗ್ರಾಲ್ ಪುತ್ತೂರು ಕೆ.ಕೆ. ರಸ್ತೆಯ ಕುನ್ನಿಲ್‌ನ ಸಾದಿಕ್(19) ಮತ್ತು ಕುನ್ನಿಲ್ ಸಬೀನಾ ಮಂಝಿಲ್‌ನ ಸಮೀರ್ ಆಸಿಫ್ (20) ಎಂದು ಗುರುತಿಸಲಾಗಿದೆ. ಆಟೊ ಪ್ರಯಾಣಿಕರಾದ ಮುಹಮ್ಮದ್ ಎಂಬವರ ಪುತ್ರಿ ಡಾನಿಯಾ ಗಂಭೀರ ಗಾಯ ಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸ ಲಾಗಿದೆ. ಉಳಿದ ಪ್ರಯಾ ಣಿಕರಾದ ಅಬ್ದುಲ್ ಖಾದರ್ ಎಂಬವರ ಪತ್ನಿ ಮರಿಯಾ, […]

ದುಬೈಯಿಂದ ಮಂಗಳೂರಿಗೆ ಬಂದಿದ್ದ ವ್ಯಕ್ತಿ ನಾಪತ್ತೆ

Tuesday, March 26th, 2013
Mohammad Ashraf

ಮಂಗಳೂರು : ದುಬೈಯಿಂದ ಮಂಗಳೂರಿಗೆ ಬಂದಿದ್ದ ಕಾಸರಗೋಡು ತ್ರಿಕಾರಿಪುರ ನಿವಾಸಿ ಮಹಮ್ಮದ್ ಅಶ್ರಫ್ ಎಂಬಾತ ನಾಪತ್ತೆಯಾದ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಸರಗೋಡು ತ್ರಿಕ್ಕಾರಿಪುರದ ಮುಹಮ್ಮದ್ ಕುಂಞಿ ಎಂಬವರ ಪುತ್ರ ಮುಹಮ್ಮದ್‌ಅಶ್ರಫ್ (24) ಎಂಬವರು ಮಾರ್ಚ್ 21ರಂದು ದುಬೈಯಿಂದ ಮಂಗಳೂರಿಗೆ 12:30 ಗಂಟೆಗೆ ತಲುಪಿ ಮಂಗಳೂರು ಸ್ಟೇಟ್ ಬ್ಯಾಂಕ್ ಬಳಿಯ ಕಾಯಿನ್ ಬಾಕ್ಸ್‌ನಿಂದ ತನ್ನ ಮನೆಗೆ ದೂರವಾಣಿ ಕರೆ ಮಾಡಿ ತಾನು ದುಬೈಯಿಂದ ಬಂದಿದ್ದಾಗಿ ಮತ್ತು ಬೆಂಗಳೂರಿನಲ್ಲಿರುವ ಮುನೀಫ್ ಎಂಬವರ ಮನೆಗೆ ಹೋಗುವುದಾಗಿ ತಿಳಿಸಿದ್ದಾರೆ. […]