ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಟಿಪ್ಪರ್ – ಟಾಟಾ ಏಸ್ ನ ನಡುವೆ ಅಪಘಾತ, ಇಬ್ಬರು ಗಂಭೀರ

Saturday, March 16th, 2013
Accsident near Jalady

ಕುಂದಾಪುರ : ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸರಕು ತುಂಬಿದ ಟಿಪ್ಪರ್ ಹಾಗೂ ಟಾಟಾ ಏಸ್ ಪರಸ್ಪರ ಢಿಕ್ಕಿಯಾದ ಪರಿಣಾಮ ಟಾಟಾ ಏಸ್ ನ ವಾಹನ ಚಾಲಕ ಯಶವಂತಪುರ ಪೀಣ್ಯದ ಬಶೀರ್ ಹಾಗೂ  ಟಿ. ನರಸೀಪುರ ಮೂಲದ ಸಿದ್ಧ ಎಂಬುವರು ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ. ಬೆಂಗಳೂರಿನ ವೊಡಾಫೋನ್ ಕಂಪೆನಿಯ ಶ್ರೀ ವಿಘ್ನೇಶ್ವರ ಲಾಜಿಸ್ಟಿಕ್‌ಗೆ ಸೇರಿದ ಟಾಟಾ ಏಸ್ ವಾಹನವು ಬೆಂಗಳೂರಿನಿಂದ ವೊಢಾಫೋನ್ ಟವರ್‌ಗೆ ಸಂಬಂಧಿಸಿದ ಸಲಕರಣೆಗಳನ್ನು ಗೋಕರ್ಣದಲ್ಲಿ ಇಳಿಸಿ ವಾಪಾಸ್ಸಾಗುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ […]

ಡಾ|ಪಿ.ವಿ.ಭಂಡಾರಿಯವರಿಗೆ, ಡಾ| ಹೆಗ್ಗಡೆ ಯವರಿಂದ ‘ಸಂಯಮ’ ಪ್ರಶಸ್ತಿ ಪ್ರಧಾನ

Saturday, March 16th, 2013
Samyama award 2013

ಉಡುಪಿ : ಅಜ್ಜರಕಾಡು ಪುರಭವನದಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಉಡುಪಿಯ ಡಾ|ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ನಿರ್ದೇಶಕ ಡಾ|ಪಿ.ವಿ.ಭಂಡಾರಿಯವರಿಗೆ  ‘ಸಂಯಮ 2013’ ಪ್ರಶಸ್ತಿಯನ್ನು ಶುಕ್ರವಾರ ಡಾ|ಹೆಗ್ಗಡೆಯವರು ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ|ಪಿ.ವಿ.ಭಂಡಾರಿಯವರು  ಪ್ರಶಸ್ತಿ ಜೊತೆಗೆ ಬಂದ 1 ಲ.ರೂ. ಮೊತ್ತವನ್ನು ತಾನು ಕೆಲಸ ಮಾಡುತ್ತಿರುವ ಎ.ವಿ.ಬಾಳಿಗಾ ಚಾರಿಟೀಸ್‌ಗೆ ನೀಡುವುದಾಗಿ ಘೋಷಿಸಿದರು ಮತ್ತು  ಪ್ರಶಸ್ತಿಯು ಇನ್ನಷ್ಟು ಕೆಲಸ ಮಾಡಲು ಪ್ರೇರಣೆ ನೀಡಿದೆ ಎಂದರು. ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ಡಾ|ಡಿ.ವೀರೇಂದ್ರ ಹೆಗ್ಗಡೆ ಯವರು ಮದ್ಯ ಮಾರಾಟದ […]

ಬಂಟ್ವಾಳ-ಕಡೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ, ಬೈಕ್ ಸವಾರ ಗಂಭೀರ

Friday, March 15th, 2013
Bike Pickup accident at bantwal

ಬಂಟ್ವಾಳ : ಬಂಟ್ವಾಳ-ಕಡೂರು ರಾಷ್ಟ್ರೀಯ ಹೆದ್ದಾರಿಯ ನಾವೂರ ಗ್ರಾಮದ ಫರ್ಲಾದಲ್ಲಿ  ಪಿಕಪ್ ವಾಹನವೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಗುರುವಾರ ನಡೆದಿದೆ. ಬೈಕ್ ಸವಾರ ಮೂರ್ಜೆ ನಿವಾಸಿ ವೀರಪ್ಪ ಮೂಲ್ಯ(42) ಅವರು ಬಿಸಿ.ರೋಡ್ ನಿಂದ ಮೂರ್ಜೆ ಕಡೆ ಹೋಗುತ್ತಿರುವಾಗ ಹಿಂದಿನಿಂದ ಬಂದ ಪಿಕಪ್ ಡಿಕ್ಕಿ ಹೊಡೆದಿದೆ. ಘಟನೆಯಿಂದ ಬೈಕ್ ಸವಾರ ವೀರಪ್ಪ ಮೂಲ್ಯ ಬೈಕ್ ಸಹಿತ ರಸ್ತೆ ಬದಿಯ ಚರಂಡಿಗೆ ಎಸೆಯಲ್ಪಟ್ಟಿದ್ದರು. ಘಟನೆಯಿಂದ ತೀವ್ರ ಅಸ್ವಸ್ಥ ರಾದ ಅವರನ್ನು […]

ಇಟಲಿ ರಾಯಭಾರಿಗೆ ಸುಪ್ರೀಮ್ ಕೋರ್ಟ್ ನಿಂದ ತಡೆ

Thursday, March 14th, 2013
ಇಟಲಿ ರಾಯಭಾರಿಗೆ ಸುಪ್ರೀಮ್ ಕೋರ್ಟ್ ನಿಂದ ತಡೆ

ನವದೆಹಲಿ : ಭಾರತೀಯ ಮೀನುಗಾರರಿಬ್ಬರನ್ನು ಗುಂಡಿಕ್ಕಿ ಕೊಂದ ಆರೋಪ ಎದುರಿಸುತ್ತಿರುವ ಇಟಲಿ ನೌಕಾಪಡೆಯ ಸಿಬ್ಬಂದಿಯಿ ಬ್ಬರನ್ನು ಮರಳಿ ಒಪ್ಪಿಸುವಂತೆ ಸುಪ್ರೀಮ್ ಕೋರ್ಟ್ ಆದೇಶಿಸಿದೆ. ತಮ್ಮ ದೇಶದಲ್ಲಿನ ಮತದಾನದಲ್ಲಿ ಪಾಲ್ಗೊಳ್ಳಲು ಅನುಮತಿ ಕೋರಿ ಇಟಲಿಗೆ ತೆರಳಿದ ಇಬ್ಬರು ನೌಕಾ ಸಿಬ್ಬಂದಿಯನ್ನು ವಾಪಾಸು ಕಳುಹಿಸುವ ವಿಷಯಕ್ಕೆ ಸಂಬಂಧಪಟ್ಟಂತೆ ಮಾತು ತಪ್ಪಿರುವ ಇಟಲಿಯ ಧೋರಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಮ್ ಕೋರ್ಟ್ ದೆಹಲಿಯಲ್ಲಿರುವ ಇಟಲಿ ರಾಯಭಾರಿ ಭಾರತ ಬಿಟ್ಟು ತೆರಳುವುದಕ್ಕೆ ಗುರುವಾರ ತಡೆಯಾಜ್ಞೆ ನೀಡಿದೆಯಲ್ಲದೆ, ಈ ಕುರಿತು ಮಾರ್ಚ್ 18  ರೊಳಗೆ ಉತ್ತರಿಸುವಂತೆ […]

ಪೆಟ್ರೋಲ್ ಬೆಲೆ ೧ ರೂ. ಅಗ್ಗ, ಡೀಸೆಲ್ ೫೦ ಪೈಸೆ ಹೆಚ್ಚಳ

Thursday, March 14th, 2013
Petrol and deasel price

ನವ ದೆಹಲಿ : ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬೆಲೆಗಳು ಇಳಿಯುತ್ತಿರುವ ಪರಿಣಾಮ ಪೆಟ್ರೋಲ್ ಬೆಲೆಯೂ ಒಂದು ರೂಪಾಯಿಯಷ್ಟು ಇಳಿಯಲಿದೆ. ಪೆಟ್ರೋಲ್ ಬೆಲೆ ಒಂದು ರೂಪಾಯಿಯಷ್ಟು  ಇಳಿಕೆಯಾಗಲಿದ್ದರೆ, ಜನವರಿಯಲ್ಲಿ ಪ್ರತಿ ತಿಂಗಳು ಡೀಸೆಲ್ ಬೆಲೆಯನ್ನು ಹೆಚ್ಚಿಸುವ ನಿರ್ಧಾರ ಕೈಗೊಂಡಿರುವುದರಿಂದ, ಡೀಸೆಲ್ ಬೆಲೆ ೪೦ ರಿಂದ ೫೦ ಪೈಸೆ ಹೆಚ್ಚಳವಾಗುವ ಸಾಧ್ಯತೆ ಇದೆ. ಈ ಬೆಲೆಯು  ಮಾರ್ಚ್ ೧೫ ಶುಕ್ರವಾರ ಅಥವಾ ಮಾರ್ಚ್ ೧೬ ಶನಿವಾರದಿಂದು ಪ್ರಕಟಗೊಳ್ಳುವ  ಸಾಧ್ಯತೆಯಿದೆ.

ಮಾರ್ಚ್ 18 ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ವೈಮಾನಿಕ ಸರಕು ನಿರ್ವಹಣಾ ಸಂಕೀರ್ಣ ದ ಉದ್ಘಾಟನೆ

Thursday, March 14th, 2013
Mangalore International Airport

ಮಂಗಳೂರು : ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು  ವೈಮಾನಿಕ ಸರಕು ನಿರ್ವಹಣಾ ಸಂಕೀರ್ಣ ದ ಉದ್ಘಾಟನಾ ಸಮಾರಂಭವು ಮಾರ್ಚ್ 18 ರಂದು ನಡೆಯಲಿರಿರುವುದಾಗಿ ಅಧಿಕೃತ ಮೂಲಗಳಿಂದ ತಿಳಿದುಬಂದಿದೆ. ಉದ್ಘಾಟನೆಯನ್ನು ಕೇಂದ್ರ ವಿಮಾನ ಯಾನ ಸಚಿವ ಅಜಿತ್‌ ಸಿಂಗ್‌ ನೆರವೇರಿಸಲಿರುವರು. ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಕೇಂದ್ರ ಸಚಿವರಾದ ಎಂ. ವೀರಪ್ಪ ಮೊಲಿ ಮೊದಲಾದವರು ಆಗಮಿಸಲಿದ್ದಾರೆ.

ಕಾಪು : ಹಿಂದೂ ಯುವಕರ ಮೇಲೆ ಹಲ್ಲೆ , ಆರೋಪಿಗಳ ಬಂಧನಕ್ಕೆ ಹಿಂದೂ ಸಂಘಟನೆ ಆಗ್ರಹ

Thursday, March 14th, 2013
Kaup

ಉಡುಪಿ : ಮಣಿಪಾಲದಿಂದ ಎಕ್ಷ್ ಪ್ರೆಸ್ ಬಸ್ ವೊಂದರಲ್ಲಿ  ಮಂಗಳೂರಿಗೆ ವಾಪಾಸಾಗುತ್ತಿದ್ದ  ಮಂಗಳೂರು – ಕಾಟಿಪಳ್ಳದ ಯುವಕರ ಮೇಲೆ ಯುವಕರ ತಂಡವೊಂದು ಹಲ್ಲೆ ನಡೆಸಿದ ಘಟನೆ ಬುಧವಾರ ಸಂಜೆ ಕಾಪುವಿನಲ್ಲಿ ನಡೆದಿದೆ. ಮಣಿಪಾಲದಿಂದ ಮಂಗಳೂರಿಗೆ ತೆರಳುತ್ತಿದ್ದ ಮಂಗಳೂರು – ಕಾಟಿಪಳ್ಳದ ಯುವಕರಾದ ಶ್ರೀನಾಥ್‌ (23), ರಾಜೇಶ್‌ (24) ಹಲ್ಲೆಗೊಳಗಾದವರಾಗಿದ್ದಾರೆ. ಯುವಕರು ಅನ್ಯಕೋಮಿನ ವಿದ್ಯಾರ್ಥಿನಿಯರೊಂದಿಗೆ ಮಾತನಾಡುತ್ತಿರುವುದನ್ನು ಗಮನಿಸಿ ಬಸ್‌ ನಲ್ಲಿದ್ದ  ಅನ್ಯ ಮತೀಯ ಯುವಕನೋರ್ವ ಸ್ಥಳೀಯ ಮುಸ್ಲಿಂ ಸಂಘಟನೆಯ ಕಾರ್ಯಕರ್ತರಿಗೆ ತಿಳಿಸಿದ್ದು, ಈ ಮಾಹಿತಿಯಾನ್ನಾಧರಿಸಿ ಅನ್ಯ ಮತೀಯ ಸಂಘಟನೆಗೆ […]

ಭಟ್ಕಳ ಸಮೀಪದ ಮುಗ್ಳಿಹೊಂಡದಲ್ಲಿ ಭೀಕರ ಅಪಘಾತ ಬೈಕ್ ಸವಾರರಿಬ್ಬರ ಸಾವು

Wednesday, March 13th, 2013
Bhatkal bike accsident

ಕುಂದಾಪುರ : ಭಟ್ಕಳದ ಹೊಟೇಲ್ ವೊಂದರಲ್ಲಿ ಪಾರ್ಟಿ ಮುಗಿಸಿ ಶಿರೂರಿನ ತಮ್ಮ ಮನೆಗೆ ಬೈಕ್ ನಲ್ಲಿ ತೆರಳುತ್ತಿದ್ದ ಬೈಕ್ ಸವಾರರಿಬ್ಬರು ಭಟ್ಕಳ ಸಮೀಪದ ಮುಗ್ಳಿಹೊಂಡ ಎಂಬಲ್ಲಿ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ. ಬೈಂದೂರು ಸಮೀಪದ ಶಿರೂರಿನ ಮಾರ್ಕೆಟ್ ರಸ್ತೆ ನಿವಾಸಿಗಳಾದ ಹುರೈಸ್(೧೮) ಹಾಗೂ ತನೀರ್ ಅಧಮ್(೧೮) ಮೃತ ಬೈಕ್ ಸವಾರರಾಗಿದ್ದಾರೆ. ಹುರೈಸ್ ಹಾಗೂ ತನೀರ್ ಅಧಮ್ ಭಟ್ಕಳದ ಹೊಟೇಲ್ ವೊಂದರಲ್ಲಿ ಪಾರ್ಟಿ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಮುಗ್ಳಿಹೊಂಡ ಎಂಬಲ್ಲಿ ಎದುರಿನಿಂದ […]

ಸ್ಥಳೀಯ ಚುನಾವಣಾ ಫಲಿತಾಂಶ, ಕೆಜೆಪಿಯತ್ತ ಬಿಜೆಪಿ

Tuesday, March 12th, 2013
BJP & KJP

ಬೆಂಗಳೂರು : ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾರ ನೀಡಿರುವ ತೀರ್ಪಿನಿಂದಾಗಿ ಅತಂತ್ರ ಸ್ಥಿತಿಗೆ ತಲುಪಿರುವ, ಕಾಂಗ್ರೆಸ್ ನ್ನು ಬಲವಾಗಿ ವಿರೋದಿಸುವ ಬಿಜೆಪಿ ಇದೀಗ ಜೆಡಿಎಸ್ ನೊಂದಿಗೆ ಕೈ ಜೋಡಿಸಲು ಒಲವು ತೋರಿದೆ ಎಂಬ ಸುದ್ದಿಯೊಂದಿಗೆ,  ಪಕ್ಷದಿಂದ ಹೊರಹೋಗಿ  ತನ್ನದೇ ಆದ ಮತ್ತೊಂದು ಪಕ್ಷ ವನ್ನು ಸ್ಥಾಪಿಸಿ ಆ ಮೂಲಕ ಪಕ್ಷದಲ್ಲಿ ಬಿರುಕು ಮೂಡಿಸಿದ ಯಡಿಯೂರಪ್ಪರನ್ನು ವಾಪಸ್ ಕರೆತರುವ ನಿಟ್ಟಿನಲ್ಲಿ ಅವರತ್ತ ಸ್ನೇಹದ ಹಸ್ತ ಚಾಚಿದೆ ಎನ್ನಲಾಗಿದೆ. ಈಗಾಗಲೇ ನಿನ್ನೆ ಫಲಿತಾಂಶ ಪ್ರಕಟಗೊಂಡು ಸೋಲು ಖಚಿತ ಗೊಳ್ಳುತ್ತಿದ್ದಂತೆ […]

ಮತದಾನದಲ್ಲಿ ಚೇತರಿಕೆ ಸಂಜೆ 3 ಕ್ಕೆ ದ.ಕ : 61:46% ಉಡುಪಿ 63.42%

Thursday, March 7th, 2013
MCC election

ಮಂಗಳೂರು : ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ ಸಂಜೆಯ ವೇಳೆಗೆ ಚುರುಕುಗೊಂಡಿದ್ದು ಸಂಜೆ 3 ಗಂಟೆಗೆಯವರೆಗೆ ದ.ಕ ಜಿಲ್ಲೆಯಲ್ಲಿ 61.46 % ಮತ್ತು ಉಡುಪಿ ಜಿಲ್ಲೆಯಲ್ಲಿ 63.42% ಮತದಾನವಾಗಿದೆ. ಮಂಗಳೂರು ನಗರ 51% ಉಳ್ಳಾಳ ಪುರಸಭೆ 54.8%, ಮೂಡಬಿದ್ರೆ ಪುರಸಭೆ 63.3%, ಬಂಟ್ವಾಳ ಪುರಸಭೆ  65.6% ,ಪುತ್ತೂರು ಪುರಸಭೆ 60.4%, ಬೆಳ್ತಂಗಡಿ ಪಟ್ಟಣ ಪಂಚಾಯತ್ 63.6%, ಸುಲ್ಯ ಪಟ್ಟಣ ಪಂಚಾಯತ್ 71.7% ಮತದಾನವಾಗಿದೆ. ಉಡುಪಿ ಜಿಲ್ಲೆಯಲ್ಲಿ ಉಡುಪಿ ನಗರ ಸಭೆ 60.35%, ಸಾಲಿಗ್ರಾಮ 67.14%, ಕುಂದಾಪುರ 61.90%, […]