ಮಂದಗತಿಯಲ್ಲಿ ಸಾಗುತ್ತಿರುವ ಮತದಾನ ನಗರದಲ್ಲಿ ಕೇವಲ 24 ಶೇಕಡಾ ಮತದಾನ

Thursday, March 7th, 2013
MCC election

ಮಂಗಳೂರು : ನಗರ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ ಇಂದು ಬೆಳಗ್ಗೆ 7ಗಂಟೆಗೆ ಆರಂಭಗೊಂಡಿದ್ದು, ಮಂಗಳೂರು ಮಹಾನಗರ ಪಾಲಿಕೆಯ 380 ಮತಗಟ್ಟೆಗಳಲ್ಲಿ ಬೆಳಗ್ಗೆ 11 ಗಂಟೆಯ ಫಲಿತಾಂಶದಂತೆ ಕೇವಲ 24% ಮತ ಚಲಾವಣೆಯಾಗಿದ್ದು ಮಂದಗತಿಯಿಂದ ಸಾಗುತ್ತಿದೆ. ಬೆಳಗ್ಗೆ 11 ಗಂಟೆಯ ವೇಳೆಗೆ ಉಳ್ಳಾಲ  ಪುರಸಭೆ 34%, ಮೂಡಬಿದ್ರೆ ಪುರಸಭೆ 34.1%, ಬಂಟ್ವಾಳ ಪುರಸಭೆ36.7% ಮತ ಚಲಾವಣೆಯಾಗಿದೆ. ಬೆಳ್ತತಂಗಡಿ ಯಲ್ಲಿ42.7 ಹಾಗೂ ಸುಳ್ಯದಲ್ಲಿ 43% ಮತದಾನವಾಗಿದ್ದು ಮತದಾರರು ಉತ್ಸುಕರಾಗಿ ಮತಚಲಾಯಿಸುತ್ತಿದ್ದಾರೆ. ಮಂಗಳೂರು ನಗರ ಹಾಗೂ ಉಳ್ಳಾಲದಲ್ಲಿ ಮತದಾರ ರ ಸಂಖ್ಯೆ […]

ಬಂಟ್ವಾಳದಲ್ಲಿ ಕಪಾಟು ವಿತರಣೆ, ಪುರಸಭಾ ಮುಖ್ಯಾಧಿಕಾರಿಯವರ ವಿರುದ್ಧ ಪ್ರಕರಣ ದಾಖಲು

Thursday, March 7th, 2013
Bantwal, Godraje delivary

ಬಂಟ್ವಾಳ : ಬುಧವಾರ ಬಂಟ್ವಾಳದಲ್ಲಿ ಚುನಾವಣಾ ನೀತಿ ಸಂಹಿತೆ ಪಾಲಿಸಬೇಕಾದ ಪುರಸಭಾ ಅಧಿಕಾರಿಗಳೇ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಪುರಸಭಾ ವ್ಯಾಪ್ತಿಯ ಫಲಾನುಭವಿಗಳಿಗೆ ಕಪಾಟು ವಿತರಿಸಿದ ಘಟನೆ ಬೆಳಕಿಗೆ ಬಂದಿದೆ. ಬುಧವಾರ ಬೆಳಿಗ್ಗೆ ಚೆಂಡ್ತಿಮಾರು ದಲಿತಕಾಲೋನಿಗೆ ಪಿಕಪ್ ವಾಹನದಲ್ಲಿ ಕಪಾಟುಗಳನ್ನು ತರಲಾಗಿದ್ದು, ಮೂರು ಮನೆಗಳಿಗೆ ವಿತರಣೆ ಮಾಡಲಾಗಿದೆ. ಈ ಕುರಿತು ಮನೆಮಾಲಕರೊಬ್ಬರು ಪ್ರಶ್ನಿಸಿದರೂ  ಕೇಳದೆ ಕಪಾಟು ಇಳಿಸಿ ತೆರಳಿದ್ದಾರೆ. ಇದಕ್ಕೆ ಬಿಜೆಪಿಯ ಸೂಚನೆಯಂತೆ ಮುಖ್ಯಾಧಿಕಾರಿಗಳು ಕಪಾಟು ವಿತರಣೆ ಮಾಡಿದ್ದಾರೆ ಎಂದು ಕಾಂಗ್ರೇಸ್ ಕಾರ್ಯಕರ್ತರು ಆರೋಪಿಸಿದ್ದು ತನಿಖೆಗೆ ಒತ್ತಾಯಿಸಿದ್ದಾರೆ. […]

ರೈಲ್ವೇ ಹಳಿ ಸಮೀಪ ಉರುಳಿ ಬಿದ್ದ ಶಾಲಾ ಬಸ್‌

Wednesday, March 6th, 2013
School bus rolls into railway track

ಕಾಸರಗೋಡು : ತಳಂಗರೆ ರೈಲ್ವೇ ಹಳಿ ಸಮೀಪ ನಿಲ್ಲಿಸಿದ್ದ ಶಾಲಾ ಬಸ್‌ ರೈಲು ಹಳಿ ಬದಿಗೆ ಮಂಗಳವಾರ ಮಧ್ಯಾಹ್ನ ಉರುಳಿ ಬಿದ್ದ ಪರಿಣಾಮ ಮಂಗಳೂರು ಕಡೆಗೆ ಪ್ರಯಾಣಿಸುವ ರೈಲು ಸಾರಿಗೆಗೆ ಅಡಚಣೆ ಉಂಟಾಯಿತು. ತಳಂಗರೆಯ ದಖೀರತ್‌ ಇಂಗ್ಲೀಷ್‌ ಮೀಡಿಯಂ ಶಾಲೆಯ ಬಸ್‌ ನ್ನು ಶಾಲೆಯಿಂದ ಮಕ್ಕಳನ್ನು ಕರೆದುಕೊಂಡು ಹೋಗಲು ನಿಲ್ಲಿಸಲಾಗಿತ್ತು. ಆದರೆ ಬಸ್‌ ಚಕ್ರ ಇದ್ದಕ್ಕಿದ್ದಂತೆ ಚಲಿಸಿ ಬಸ್‌ ಕೆಳಗೆ ಉರುಳಿತು. ಮಾಹಿತಿ ಲಭಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳ ಬಸ್‌ನ್ನು ತೆರವುಗೊಳಿಸಿ ರೈಲು ಸಂಚಾರಕ್ಕೆ ಸುಗಮಗೊಳಿಸಲಾಯಿತು.

ಗಾಂಜಾ ಮಾರಾಟ ಯತ್ನ, ವ್ಯಕ್ತಿಯ ಬಂಧನ

Tuesday, March 5th, 2013
ಗಾಂಜಾ ಮಾರಾಟ ಯತ್ನ, ವ್ಯಕ್ತಿಯ ಬಂಧನ

ಮಂಗಳೂರು : ಸೋಮವಾರ ರಾತ್ರಿ ನಗರದ ಪಂಪ್ ವೆಲ್ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ, ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಮಾಡೂರು ನಜೀರ್  ಬಂಧಿತ ಆರೋಪಿ. ನಗರದಲ್ಲಿ ಗಾಂಜಾ ಹಾಗೂ ಇತರ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಈತ ಸೋಮವಾರ ರಾತ್ರಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರವೀಶ್ ನಾಯ್ಕ್ ಮತ್ತು ಎಸ್.ಐ ಸುಧಾಕರ್ ಕೈಗೆ ಸಿಕ್ಕಿ ಬಿದ್ದಿದಾನೆ. ಈತನಿಂದ 1.1 ಕೆ.ಜಿ. ಗಾಂಜಾ, 12000ರೂ ಹಾಗೂ ಆಲ್ಟೋ ಕಾರನ್ನು […]

ಯೆಯ್ಯಾಡಿ : ಬೈಕ್ ಗೆ ಬೊಲೆರೋ ಡಿಕ್ಕಿ, ಚಾಲಕ ಪರಾರಿ

Tuesday, March 5th, 2013
Yeyyadi bike accsident

ಮಂಗಳೂರು : ಯೆಯ್ಯಾಡಿ ಸಮೀಪದ ಶರ್ಬತ್ ಕಟ್ಟೆ ಬಳಿ ಬೊಲೆರೋ ವಾಹನ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ವಾಹನ  ಚಾಲಕ ಪರಾರಿಯಾದ ಘಟನೆ ನಿನ್ನೆ  ರಾತ್ರಿ ಸಂಭವಿಸಿದೆ. ಮೃತ ವ್ಯಕ್ತಿ ಸ್ಥಳೀಯ ದಂಡಕೇರಿ ನಿವಾಸಿ ರಿತೇಶ್ (30) ಎನ್ನಲಾಗಿದೆ. ಅಪಘಾತದಿಂದ ಬೈಕ್ ನುಜ್ಜುಗುಜ್ಜಾಗಿದ್ದು,  ಕದ್ರಿ ಟ್ರಾಫಿಕ್ ಪೊಲೀಸ್ ಇನ್ಸ್ ಪೆಕ್ಟರ್ ನಾಗಾರಾಜ್ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದರು. ಪರಾರಿಯಾದ ವಾಹನ ಚಾಲಕನನ್ನು ಹಾಗೂ ವಾಹನವನ್ನು ಕಂಡು ಹಿಡಿಯಲು […]

ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರ ವಿರುದ್ಧ ದ ಹೋರಾಟಕ್ಕೆ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಬೆಂಬಲ

Saturday, March 2nd, 2013
Sri Vishwesha Theertha Swamiji

ಉಡುಪಿ : ಮೂಡುಬಿದಿರೆ ಸಮೀಪದ ನಿಡ್ಡೋಡಿಯಲ್ಲಿ ಸರ್ಕಾರ ಸ್ಥಾಪಿಸಲುದ್ದೇಶಿಸಿರುವ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಗೆ ಸ್ಥಳೀಯರಿಂದ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿಯೇ ಶುಕ್ರವಾರ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ  ಸ್ಥಳೀಯ ಜನರ ಹೋರಾಟಕ್ಕೆ ತಾವು  ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು. ಶುಕ್ರವಾರ ಪೇಜಾವರ ಮಠದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿ ಸ್ಥಾಪನೆಯಾದ ವಿಶೇಷ ಆರ್ಥಿಕ ವಲಯದ ವಿರುದ್ಧ ಕೂಡ ನಾನು ದನಿಯೆತ್ತಿದ್ದೆ ಇದಕ್ಕೆ ಪ್ರತಿಯಾಗಿ ಕೆಲವು ರಾಜಕೀಯ ನಾಯಕರು ನನ್ನನ್ನು ಟೀಕಿಸಿದ್ದರು ಆದರೆ ನಾನು ಇವು ಯಾವುದರ […]

ಪೆಟ್ರೋಲು ಬೆಲೆ ಲೀಟರಿಗೆ 1.40 ರೂಪಾಯಿ ಏರಿಕೆ

Saturday, March 2nd, 2013
Petrol price hike

ಹೊಸದಿಲ್ಲಿ : ಪೆಟ್ರೋಲು ಬೆಲೆಯನ್ನು ಲೀಟರಿಗೆ 1.40 ರೂಪಾಯಿಯಂತೆ ಏರಿಸಲಾಗಿದ್ದು, ಇದು ಇತ್ತೀಚೆಗಿನ ಕೆಲವು ವಾರಗಳಲ್ಲಿ ಆಗಿರುವ ದೊಡ್ಡ ಮೊತ್ತದ ಹೆಚ್ಚಳ.ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆಯೇರಿಕೆ ಮತ್ತು ರೂಪಾಯಿ ಮೌಲ್ಯ ಕುಸಿತದಿಂದಾಗಿ ಶುಕ್ರವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಪೆಟ್ರೋಲು ಬೆಲೆಯನ್ನು ರೂ. 1.40ರಂತೆ ಏರಿಸುವುದು ಅನಿವಾರ್ಯ ಎಂದು ಭಾರತೀಯ ತೈಲ ನಿಗಮ ಹೇಳಿದೆ. ಈ ಏರಿಕೆಯಲ್ಲಿ ಸ್ಥಳೀಯ ತೆರಿಗೆಗಳು ಒಳಗೊಂಡಿಲ್ಲ. ವ್ಯಾಟ್‌ ಸೇರಿಸಿದ ಬಳಿಕ ಏರಿಕೆ ಇನ್ನೂ ತುಸು ಹೆಚ್ಚಾಗಲಿದೆ. ಫೆ. 16ರಂದು ವ್ಯಾಟ್‌ ಸೇರಿಸದೆ ರೂಪಾಯಿ 1.50 […]

ಅಕ್ರಮ ಗಾಂಜಾ ಸಾಗಾಟ ನಾಲ್ವರು ಆರೋಪಿಗಳ ಸೆರೆ

Saturday, March 2nd, 2013
ganja seized at Sullia

ಸುಳ್ಯ : ಶುಕ್ರವಾರ ಸಂಪಾಜೆ ಗ್ರಾಮದ ಕಲ್ಲುಗುಂಡಿ ಕೂಲಿ ಶೆಡ್ಡ್ ಬಳಿ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಜಾಲವನ್ನು ಜಿಲ್ಲಾ ಅಪರಾಧ ಪತ್ತೆ ದಳ ಮತ್ತು ಸುಳ್ಯ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಾಲ್ವರನ್ನು ಬಂಧಿಸಿ ಅವರ ಬಳಿಯಲ್ಲಿದ್ದ 1.100 ಕೆ.ಜಿ. ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಂಗಳೂರು ನಗರದ ಆಸುಪಾಸಿನ ಅವಿನಾಶ್‌(29), ಅರುಣ್‌ ಶೆಟ್ಟಿ(38), ನೆಲ್ಸನ್‌ ಡಿಸೋಜ(29) ಮತ್ತು ಪ್ರಥ್ವಿ ಆಳ್ವ(38) ಆರೋಪಿಗಳಾಗಿದ್ದಾರೆ. ಆರೋಪಿಗಳಿಂದ ರೂಪಾಯಿ  35049 ನಗದು, 6 ಮೊಬೈಲ್‌, 1 ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಂಗಳೂರಿನಲ್ಲಿ ನಡೆದ […]

12ನೇ ದಿನಕ್ಕೆ ಕಾಲಿಟ್ಟ ಎಂಡೋಸಲ್ಫಾನ್ ಸಂತ್ರಸ್ಥ ಜನಪರ ಒಕ್ಕೂಟದ ನಿರಾಹಾರ ಸತ್ಯಾಗ್ರಹ

Friday, March 1st, 2013
Endosulfan santrastha janapara okkuta

ಕಾಸರಗೋಡು : ಕಳೆದ ಹಲವು ದಿನಗಳಿಂದ ಎಂಡೋಸಲ್ಫಾನ್ ಸಂತ್ರಸ್ಥ ಜನಪರ ಒಕ್ಕೂಟದ ನೇತೃತ್ವದಲ್ಲಿ ಕಾಸರಗೋಡಿನ ಹೊಸ ಬಸ್ಸು ನಿಲ್ದಾಣ ಪರಿಸರದ ಸಹಿ ವೃಕ್ಷದಡಿ ನಡೆಸುತ್ತಿರುವ ನಿರಾಹಾರ ಸತ್ಯಾಗ್ರಹ 12ನೇ ದಿನಕ್ಕೆ ಕಾಲಿಟ್ಟಿದೆ. ಮುಷ್ಕರ ನಡೆಯುವ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎನ್.ಎ.ನೆಲ್ಲಿಕುನ್ನು ಎಂಡೋಸಲ್ಫಾನ್ ಸಂತ್ರಸ್ತರ ಸಾಲ ಮನ್ನಾ ಮಾಡುವ ಕುರಿತು ಸಮಿತಿಯೊಂದನ್ನು ನೇಮಿಸಿ, ಮಾನವ ಹಕ್ಕು ಆಯೋಗ ನೀಡಿದ ಸಲಹೆಯಂತೆ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿರುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು. ಆದರೆ ಶಾಶ್ವತ […]

ಅಂಬೇಡ್ಕರ್ ಪ್ರತಿಮೆ ಸ್ಥಳಾಂತರಕ್ಕೆ ಒಪ್ಪಿದ ಸರ್ಕಾರ

Wednesday, February 27th, 2013
Ambedkar statue shifted

ಬೆಂಗಳೂರು : ಇಲ್ಲಿನ ವಿಧಾನಸೌಧ ಮುಂಭಾಗದ ಅಂಬೇಡ್ಕರ್ ಪ್ರತಿಮೆಯನ್ನು ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲು ಸರ್ಕಾರ ಒಪ್ಪಿಕೊಂಡಿದ್ದು ಈ ಮೂಲಕ  ವಿವಾದದ ಸ್ವರೂಪ ಪಡೆದುಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಸ್ಥಳಾಂತರ ವಿವಾದಕ್ಕೆ ಹೈಕೋರ್ಟ್ ಸೋಮವಾರ ಮಂಗಳ ಹಾಡಿದೆ. ಅಮರನಾಥನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಹಿಂದಿನ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠ, `ಪ್ರತಿಮೆಯನ್ನು 15 ದಿನಗಳಲ್ಲಿ ತಾತ್ಕಾಲಿಕವಾಗಿ ಸ್ಥಳಾಂತರ ಮಾಡಬೇಕು’ ಎಂದು ಡಿಸೆಂಬರ್ 12ರಂದು ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಕೆಲವು ದಲಿತ ಸಂಘಟನೆಗಳು […]