Blog Archive

ಮೃತರ ಕುಟುಂಬಕ್ಕೆ ಸರ್ಕಾರದ ವತಿಯಿಂದ ಪರಿಹಾರ ಘೋಷಣೆ ಮಾಡಲಾಗಿದೆ: ಡಾ.ಜಿ. ಪರಮೇಶ್ವರ್

Tuesday, July 10th, 2018
g-parameshwar

ಬೆಂಗಳೂರು: ಬಿಬಿಎಂಪಿ ಪೌರಕಾರ್ಮಿಕ ಸುಬ್ರಮಣಿ ಸಾವು ಬೇಸರ ತರಿಸಿದೆ. ಈ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಮೃತರ ಕುಟುಂಬಕ್ಕೆ ಸರ್ಕಾರದ ವತಿಯಿಂದ ಪರಿಹಾರ ಘೋಷಣೆ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ. ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ಪರಿಹಾರದ ಭರವಸೆ ನೀಡಿದ್ದಾರೆ. ಪೌರಕಾರ್ಮಿಕರ ಸಂಬಳದ ಸಮಸ್ಯೆ ಬಗ್ಗೆ ಈಗಾಗಲೇ ಬಿಬಿಎಂಪಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಹೀಗಾಗಿ ಪ್ರತಿಭಟನಾ ನಿರತ ಕಾರ್ಮಿಕರು ಸಹಕರಿಸಬೇಕು ಎಂದಿದ್ದಾರೆ. ಸುಬ್ರಮಣಿ ಆರೋಗ್ಯದಲ್ಲಿ ಸಮಸ್ಯೆ ಇದ್ದ ಕಾರಣಕ್ಕೆ ಅವರು ಸಾವನ್ನಪ್ಪಿದ್ದಾರೆ ಎಂದು […]

ಕಾಂಗ್ರೆಸ್ ಶಾಸಕರು ಕೊಟ್ಟ ಸಹಕಾರದಿಂದ ಸಿಎಂ ಆಗಿದ್ದೇನೆ: ಹೆಚ್.ಡಿ. ಕುಮಾರಸ್ವಾಮಿ

Monday, July 9th, 2018
kumarswmy

ಬೆಂಗಳೂರು: ತಾವು ಮತ್ತು ಮಹಾಭಾರತದ ಕರ್ಣ ಇಬ್ಬರೂ ಸಾಂದರ್ಭಿಕ ಶಿಶುಗಳು, ಎಂಬ ಮಾತನ್ನು ಸದನದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳುವ ಮೂಲಕ ಕರ್ಣನಿಗೆ ತಮ್ಮನ್ನು ತಾವು ಹೋಲಿಸಿಕೊಂಡರು. ವಿಧಾನಸಭೆಯಲ್ಲಿ ಇಂದು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡುತ್ತಿದ್ದ ವೇಳೆ ಮಾತನಾಡಿದ ಸಿಎಂ, ಕರ್ಣ ಕೂಡ ಸಾಂದರ್ಭಿಕ ಶಿಶುವೇ ಎಂದಿದ್ದಾರೆ. ಪ್ರತಿಪಕ್ಷದ ನಾಯಕರು ಈ ಸರ್ಕಾರಕ್ಕೆ ಮತ್ತು ಸಿಎಂ ಆದ ತಮಗೆ ಅಪ್ಪ – ಅಮ್ಮ ಇಲ್ಲವೆಂದು ಹೀಗಳೆಯುತ್ತಿದ್ದಾರೆ. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರೇ […]

ಇದು ಮೂರ್ನಾಲ್ಕು ಜಿಲ್ಲೆಗಳಿಗೆ ಸೀಮಿತವಾದ ಬಜೆಟ್ ಅಲ್ಲ: ಹೆಚ್‌.ಡಿ.ಕುಮಾರಸ್ವಾಮಿ

Friday, July 6th, 2018
kumarswamy

ಬೆಂಗಳೂರು: ಸಮಗ್ರ ಕರ್ನಾಟಕವನ್ನು ದೃಷ್ಟಿಯಲ್ಲಿಟ್ಟುಕೊಂಡು ಮಂಡಿಸಿರೋ ಬಜೆಟ್ ಇದು. ಅರ್ಥವಾಗದೇ ಇರೋರಿಗೆ ಏನ್ ಹೇಳೋಣ. ಯಾವ ಜಿಲ್ಲೆ, ಸಮುದಾಯಕ್ಕೆ ಅನ್ಯಾಯವಾಗಿದೆ ಎಂಬುದನ್ನು ಚರ್ಚೆ ಮಾಡಲಿ ಎಂದು ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ. ಜಗಜೀವನ್‌ರಾಂ ಅವರ 32 ನೇ ಪುಣ್ಯಸ್ಮರಣೆ ಅಂಗವಾಗಿ ಇಂದು ವಿಧಾನಸೌಧದ ಕೆಂಗಲ್ ಗೇಟ್ ಬಳಿಯ ಬಾಬು ಜಗಜೀವನರಾಂ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕೇಂದ್ರ ಸರ್ಕಾರ ಡೀಸೆಲ್‌ ಬೆಲೆ ಏರಿಕೆ ಮಾಡಿದಾಗ ಇವರಿಗೆ ಕಣ್ಣು ಕಾಣಲಿಲ್ಲವೇ ಎಂದು ಪ್ರಶ್ನಿಸಿದರು. ಬಜೆಟ್ನಲ್ಲಿ […]

ರೈತರಿಗೆ ದ್ರೋಹ ಮಾಡಿದ ಬಜೆಟ್ ಇದಾಗಿದೆ..ಇದು ಅಣ್ಣ-ತಮ್ಮಂದಿರ ಬಜೆಟ್: ಬಿ.ಎಸ್.ಯಡಿಯೂರಪ್ಪ

Thursday, July 5th, 2018
yedyurappa

ಬೆಂಗಳೂರು: ಮಾತಿಗೆ ತಪ್ಪಿ, ರೈತರಿಗೆ ದ್ರೋಹ ಮಾಡಿದ ಬಜೆಟ್ ಇದಾಗಿದೆ. ಇದು ಅಣ್ಣ-ತಮ್ಮಂದಿರ ಬಜೆಟ್ ಆಗಿದೆ ಎಂದು ಪ್ರತಿಪಕ್ಷ ನಾಯಕ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. 34ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡುವ ಘೋಷಣೆ ಮಾಡಿದ್ದಾರೆ. ಆದರೆ, ಅದಕ್ಕಾಗಿ ಹಣಕಾಸು ವ್ಯವಸ್ಥೆ ಎಲ್ಲಿಂದ ಮಾಡಿದ್ದಾರೆ. ಅದರ ಬಗ್ಗೆ ಸಿಎಂ ಸ್ಪಷ್ಟೀಕರಣ ನೀಡಬೇಕು. ಸಿಎಂ ಕುಮಾರಸ್ವಾಮಿ ನಂಬಿಕೆ ದ್ರೋಹದ ಬಜೆಟ್ ನೀಡಿದ್ದಾರೆ ಎಂದು ಕಿಡಿಕಾರಿದರು. ಡೀಸೆಲ್, ಪೆಟ್ರೋಲ್, ವಿದ್ಯುತ್ ದರ ಹಚ್ಚಿಸುವ ಮೂಲಕ ಜನರ ಮೇಲೆ ಹೊರೆ ಹಾಕಿದ್ದಾರೆ. […]

ಕಾಂಗ್ರೆಸ್ ಪಕ್ಷದ ನಾಯಕರ ಸಭೆಯಲ್ಲಿ ಮಾಜಿ ಸಿಎಂ.. ಸಿಎಂ, ಡಿಸಿಎಂಗಿಂತ ಹೆಚ್ಚು ಹೈಲೈಟ್ !

Tuesday, July 3rd, 2018
siddaramaih

ಬೆಂಗಳೂರು: ಮಾಜಿ ಸಿಎಂ ಆದರೂ ಕೂಡ ಸಿದ್ದರಾಮಯ್ಯ ಅದೇ ಖದರ್ ಉಳಿಸಿಕೊಂಡಿದ್ದಾರೆ. ಇದು ಸೋಮವಾರ ಆರಂಭವಾದ ವಿಧಾನಸಭೆ ಅಧಿವೇಶನದಲ್ಲಿ ಸಾಬೀತಾಯಿತು. ಪ್ರಕೃತಿ ಚಿಕಿತ್ಸೆಗೆ ತೆರಳಿದ್ದಾಗ ಹಲವು ಶಾಸಕರು, ಸಚಿವರು, ಮಾಜಿ ಸಚಿವರು ಸಿದ್ದರಾಮಯ್ಯರನ್ನು ಭೇಟಿ ಮಾಡಿ ಬಂದಿದ್ದರು. ಅಲ್ಲದೇ ಬೆಂಗಳೂರಿಗೆ ವಾಪಸಾದ ಮೇಲೆ ಕೂಡ ಭೇಟಿ ಮಾಡಿ ಚರ್ಚಿಸಿದ್ದರು. ವಿವಿಧ ಸಭೆಗಳಲ್ಲಿ ಪಾಲ್ಗೊಂಡಿದ್ದಾಗಲೂ ಸಿದ್ದರಾಮಯ್ಯನವರೇ ಹೈಲೈಟ್ ಆಗಿದ್ದರು. ಸಮನ್ವಯ ಸಮಿತಿ ಸಭೆ, ಕಾಂಗ್ರೆಸ್ ಪಕ್ಷದ ನಾಯಕರ ಸಭೆಯಲ್ಲಿ ಇವರು ಸಿಎಂ, ಡಿಸಿಎಂಗಿಂತ ಹೆಚ್ಚು ಹೈಲೈಟ್ ಆಗಿದ್ದರು. ಸ್ವಂತ […]

ರಾಜ್ಯದ ನೂತನ ಮುಖ್ಯ ಕಾರ್ಯದರ್ಶಿಯಾಗಿ ವಿಜಯಭಾಸ್ಕರ್ ನೇಮಕ

Saturday, June 30th, 2018
vijay-bhaskar

ಬೆಂಗಳೂರು: ಸೇವಾ ಹಿರಿತನದಲ್ಲಿ 1983 ನೇ ಬ್ಯಾಚ್ನ ಟಿ.ಎಂ. ವಿಜಯಭಾಸ್ಕರ್ ಅವರನ್ನು ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ನೂತನ ಮುಖ್ಯಕಾರ್ಯದರ್ಶಿ ಆಯ್ಕೆ ಕುರಿತಂತೆ ಸುದೀರ್ಘ ಪರಾಮರ್ಶೆ ನಂತರ ರಾಜ್ಯದ ಹಿರಿಯ ಅಧಿಕಾರಿಯನ್ನು ನೇಮಕ ಮಾಡಲು ಹಲವು ಸಲಹೆಗಳು ಬಂದಿತ್ತು. ಬಳಿಕ ಸಚಿವ ಸಂಪುಟ, ಆಯ್ಕೆ ವಿಚಾರವನ್ನು ಮುಖ್ಯಮಂತ್ರಿಯವರಿಗೆ ಬಿಟ್ಟುಕೊಟ್ಟಿತ್ತು. ಇಂದು ಟಿ.ಎಂ. ವಿಜಯಭಾಸ್ಕರ್ ಅವರನ್ನು ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಮುಖ್ಯ […]

ಕಪ್ಪುಹಣ ಸಕ್ರಮ ಮಾಡಿಕೊಂಡ ಪ್ರಕರಣದಲ್ಲಿ ನನ್ನನ್ನು ಸಿಲುಕಿಸುವ ಷಡ್ಯಂತ್ರ ನಡೆಯುತ್ತಿದೆ: ಡಿ.ಕೆ.ಶಿವಕುಮಾರ್

Saturday, June 30th, 2018
d-k-shivkumar

ಬೆಂಗಳೂರು: ಕಪ್ಪುಹಣ ಸಕ್ರಮ ಮಾಡಿಕೊಂಡ ಪ್ರಕರಣದಲ್ಲಿ ನನ್ನನ್ನು ಸಿಲುಕಿಸುವ ಷಡ್ಯಂತ್ರ ನಡೆಯುತ್ತಿದ್ದು, ಇದರ ವಿರುದ್ಧ ಕಾನೂನು ರೀತಿಯಲ್ಲಿಯೇ ಹೋರಾಟ ನಡೆಸುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಪ್ಪು ಹಣ ಸಕ್ರಮ ಆರೋಪ ಪ್ರಕರಣ ಸಂಬಂಧ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸಿಬಿಐ ನ್ಯಾಯಾಲಯ ವಜಾ ಮಾಡಿದೆ. ನಮಗೂ ಅದಕ್ಕೂ ಸಂಬಂಧ ಇಲ್ಲ. ಆದರೂ ನಮ್ಮನ್ನು ಸೇರಿಸಬೇಕೆಂಬ ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಆದರೆ ನಾನು ಅರ್ಜಿಗಿರ್ಜಿ ಹಾಕುವ ಯೋಚನೆ […]

ಬಿಬಿಎಂಪಿ ವಿಭಜನೆ ಬಗ್ಗೆ ಶೀಘ್ರವೇ ನಿರ್ಧಾರ: ಎಚ್ ಡಿ ಕುಮಾರಸ್ವಾಮಿ

Friday, June 29th, 2018
kumarswamy

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಭಜನೆ ಹಾಗೂ ಆಡಳಿತ ವಿಕೇಂದ್ರಿಕರಣ ಕುರಿತಂತೆ ಬಿಬಿಎಂಪಿ ಪುನರ್ ವಿಂಗಡಣಾ ಸಮಿತಿಯು ತನ್ನ ಅಂತಿಮ‌ ವರದಿ ಸಲ್ಲಿಸಿದೆ. ಈ ವರದಿ ಪರಿಶೀಲಿಸಿ, ಅಧ್ಯಯನ ನಡೆಸಿದ ಬಳಿಕ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಬಿಬಿಎಂಪಿಯನ್ನು ಐದು ಕಾರ್ಪೋರೇಷನ್ಗಳಾಗಿ ವಿಭಜಿಸಬೇಕೆಂಬ ಕುರಿತು ಬಿ.ಎಸ್. ಪಾಟೀಲ್ ನೇತೃತ್ವದ ತಜ್ಞರ ಸಮಿತಿ ಶಿಫಾರಸು ಅಂತಿಮ ವರದಿ ಸಲ್ಲಿಸಿದೆ. ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್ ಪಾಟೀಲ್ […]

ಕಿಕ್‌ಬಾಕ್ಸಿಂಗ್ ಚಾಂಪಿಯನ್ ವಿದ್ಯಾರ್ಥಿಗಳಿಗೆ ಪರಮೇಶ್ವರ್ ಸನ್ಮಾನ

Thursday, June 28th, 2018
parameshwar

ಬೆಂಗಳೂರು: ಹಿಮಾಚಲ ಪ್ರದೇಶದ ಸೋಲನ್‌ನಲ್ಲಿ ನಡೆದಿದ್ದ ನ್ಯಾಷನಲ್ ಕಿಕ್‌ಬಾಕ್ಸಿಂಗ್ ಸ್ಪರ್ಧೆಯಲ್ಲಿ ಆರು ಚಿನ್ನ, ಐದು ಬೆಳ್ಳಿ ಹಾಗೂ ಎರಡು ಕಂಚಿನ ಪದಕ ಗೆದ್ದ ಕರ್ನಾಟಕ ಕಿಕ್‌ಬಾಕ್ಸಿಂಗ್ ತಂಡದ 12 ಮಕ್ಕಳನ್ನು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಕೆಪಿಸಿಸಿ ಕಚೇರಿಯಲ್ಲಿ ಅಭಿನಂದಿಸಿದರು. ಇಂದು ರಾಜ್ಯಕ್ಕೆ ಮರಳಿದ ಸಾಧಕರನ್ನು ಕೆಪಿಸಿಸಿ ಕಚೇರಿಗೆ ಕರೆಸಿಕೊಂಡು ಅಭಿನಂದಿಸಿದ ಪರಮೇಶ್ವರ್, ಇಂತಹ ಸಾಧನೆ ನಿಮ್ಮಿಂದ ಇನ್ನಷ್ಟು ಆಗಲಿ. ಸರ್ಕಾರದಿಂದ ನಿಮಗೆ ಸದಾ ಪ್ರೋತ್ಸಾಹ ಇರಲಿದೆ ಎಂದು ಭರವಸೆ ನೀಡಿದರು. ರಾಜ್ಯದ ಎಲ್ಲಾ ಭಾಗದ ಕ್ರೀಡಾಸಕ್ತರು, […]

ಬೆಂಗಳೂರು ನಗರದಲ್ಲಿ ನೀರು ಕೊಡುವ ನೂತನ ಎಟಿಎಂ ಉದ್ಘಾಟನೆ..!

Wednesday, June 27th, 2018
soumya-reddy

ಬೆಂಗಳೂರು: ನಗರದಲ್ಲಿ ನೀರು ಕೊಡುವ ನೂತನ ಎಟಿಎಂವೊಂದನ್ನು ಉದ್ಘಾಟನೆ ಮಾಡುವ ಮೂಲಕ ಹೊಸ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಲಾಯಿತು. ಜಯನಗರದ ಭೈರಸಂದ್ರದಲ್ಲಿ ಈ ನೀರು ಕೊಡುವ ಎಟಿಎಂ ಅನ್ನು ಶಾಸಕ ರಾಮಲಿಂಗಾರೆಡ್ಡಿ ಇಂದು ಸಾರ್ವಜನಿಕರಿಗಾಗಿ ಲೋಕಾರ್ಪಣೆಗೊಳಿಸಿದರು. ಎಟಿಎಂ ಕಾರ್ಡ್ ಇನ್ಸರ್ಟ್ ಮಾಡಿದ್ರೆ ಸಾಕು ನೀರು ಅಂತ ಬಂದವರಿಗೆ ದಾಹ ತೀರಿಸುತ್ತದೆ ಈ ‘ಭಗೀರಥ’ ಎಟಿಎಂ. ಸ್ವಯಂ ಚಾಲಿತ ಎಟಿಎಂ ಕಾರ್ಡ್ ಹಾಗೂ ಶುದ್ಧ ನೀರಿನ ಘಟಕ ಇದಾಗಿದ್ದು ಶಾಸಕಿ ಸೌಮ್ಯ ರೆಡ್ಡಿ ಹಾಗೂ ಕಾರ್ಪೊರೇಟರ್ ನಾಗರಾಜ್ ಸಹ […]